Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನಿಮಗೆ ತಿಳಿದಿರಲೇಬೇಕಾದ ತಾಜ್ ಕಥಾನಕಗಳು

ನಿಮಗೆ ತಿಳಿದಿರಲೇಬೇಕಾದ ತಾಜ್ ಕಥಾನಕಗಳು

ಶಶಾಂಕ್ ಶೇಖರ್ ಸಿನ್ಹಾಶಶಾಂಕ್ ಶೇಖರ್ ಸಿನ್ಹಾ2 Nov 2017 11:54 PM IST
share
ನಿಮಗೆ ತಿಳಿದಿರಲೇಬೇಕಾದ ತಾಜ್ ಕಥಾನಕಗಳು

ಭಾಗ-1

‘ಪ್ರೇಮದ ಅತ್ಯಂತ ಸುಂದರವಾದ, ವೈಭವೋಪೇತ ಸ್ಮಾರಕ’ ಮತ್ತು ‘ಅನಂತತೆಯ ಮುಖದಲ್ಲೊಂದು ತೊಟ್ಟು ಕಣ್ಣೀರು’ ಎಂದು ವಿಧವಿಧವಾಗಿ ವರ್ಣಿಸಲ್ಪಟ್ಟಿರುವ ತಾಜ್‌ಮಹಲ್ ನಿಸ್ಸಂಶಯವಾಗಿ ಭಾರತದ ಅತ್ಯಂತ ಸಾಂಕೇತಿಕವಾದ ಮತ್ತು ದೃಶ್ಯಾತ್ಮಕವಾದ ಒಂದು ಮಹಾನ್ ಸ್ಮರಣಿಕೆಯಾಗಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಅತ್ಯುತ್ತಮವಾದ ಒಂದು ಮಾದರಿ ಎಂದು ಪರಿಗಣಿಸಲ್ಪಟ್ಟಿರುವ ಈ ವಿಶ್ವಪಾರಂಪರಿಕ ತಾಣವು ನಮ್ಮ ದೇಶದಲ್ಲಿ ಪ್ರವಾಸಿಗಳು ಭೇಟಿ ನೀಡುವ ತಾಣಗಳಲ್ಲೇ ಅತ್ಯಂತ ನೆಚ್ಚಿನ ಒಂದು ತಾಣವಾಗಿದೆ.

ಕಳೆದ ಕೆಲವು ದಶಕಗಳಲ್ಲಿ, ಈ ಸ್ಮಾರಕವು ರಾಜಕೀಯ ಪೈಪೋಟಿ ಮತ್ತು ಚರ್ಚೆಯ ಒಂದು ವಿವಾದಾಸ್ಪದ ನಿವೇಶನವಾಗಿದೆ. ನಿರ್ದಿಷ್ಟವಾಗಿ, ಕಳೆದ ಕೆಲವು ತಿಂಗಳುಗಳಲ್ಲಿ, ಉತ್ತರ ಪ್ರದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷದ ಪ್ರತಿನಿಧಿಯೊಬ್ಬರು ‘‘ತಾಜ್‌ಮಹಲ್ ಭಾರತೀಯ ಸಂಸ್ಕೃತಿಯ ಮೇಲೆ ಒಂದು ಕಪ್ಪು ಚುಕ್ಕೆ ಎಂದು ಹೇಳುವುದರೊಂದಿಗೆ, ಅದು ವಿಭಾಜಕ ರಾಜಕಾರಣದ ಒಂದು ಯುದ್ಧ ಭೂಮಿಯಾಗಿ ಬಿಟ್ಟಿದೆ. ತಾಜ್‌ಮಹಲ್ ಇತಿಹಾಸದ ಹಲವಾರು ಏಳು ಬೀಳುಗಳನ್ನು ಕಂಡ 350 ವರ್ಷಗಳಿಗೂ ಹೆಚ್ಚಿನ ತನ್ನ ಇತಿಹಾಸದಲ್ಲಿ ಅದನ್ನೊಂದು ಕಪ್ಪು ಚುಕ್ಕೆ ಎಂದು ಕರೆದಿರುವುದು ಇದೇ ಮೊದಲು.

(1630-1648ರ ನಡುವೆ ಕಟ್ಟಲ್ಪಟ್ಟ) ತಾಜ್‌ಮಹಲ್ ಅದರ ನಿರ್ಮಾಣ ಕಾಲದಿಂದ ಇಂದಿನವರೆಗೆ, ಆ ಕಟ್ಟಡದ ಸೌಂದರ್ಯ ಮತ್ತು ವಾಸ್ತುವಿನ ವೈಶಿಷ್ಟಗಳ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ ಯಾದರೂ, ಮೊತ್ತ ಮೊದಲ ಬಾರಿಗೆ ಅದರ ಸೌಂದರ್ಯವನ್ನು ಅಲ್ಲಗಳೆದು ಅದನ್ನೊಂದು ಕಳಂಕ ಎಂದು ತೆಗಳುವ ಪ್ರಯತ್ನಗಳನ್ನು ನಾವಿಂದು ನೋಡುತ್ತಿದ್ದೇವೆ.

ಷಹಜಹಾನ್, ತಾಜ್ ಮತ್ತು ಪಶ್ಚಿಮ ಜಗತ್ತು

ಇಂತಹ ಪ್ರಯತ್ನಗಳಿಗೆ ವ್ಯತಿರಿಕ್ತವಾಗಿ ಮೊಗಲ್ ಯುಗದ ಇತಿಹಾಸಕಾರರು ತಾಜ್ ಸಂಕೀರ್ಣದ ಅದ್ಭುತ ವಿನ್ಯಾಸವನ್ನು ವಿನ್ಯಾಸಗೊಳಿಸಿದವ ಮೊಗಲ್ ಚಕ್ರವರ್ತಿ ಷಹಜಹಾನ್ ಎಂದು ಆತನನ್ನೂ ಹೊಗಳಿದ್ದಾರೆ.

ಜಗತ್ತಿನ ಎದುರು ತಾಜ್‌ಮಹಲ್ ಎದ್ದುನಿಂತಂದಿನಿಂದ ಅದರ ನಿರ್ಮಾಣದ ಹಿರಿಮೆ ತಮ್ಮದು ಎಂದು ಹೇಳುವ ಹಲವು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಮೊತ್ತ ಮೊದಲ ಬಾಣ ಬಂದದ್ದು ಪಶ್ಚಿಮದಿಂದ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ತಾಜ್‌ನಷ್ಟು ಅದ್ಭುತವಾದ, ಅನನ್ಯವಾದ ಒಂದು ವಾಸ್ತುರಚನೆಯನ್ನು ಒಬ್ಬ ಪಾಶ್ಚಾತ್ಯ/ವಿದೇಶಿ ವಾಸ್ತುಶಿಲ್ಪಿಯ ನೆರವಿಲ್ಲದೆ, ಕೈ ಚಳಕವಿಲ್ಲದೆ ನಿರ್ಮಿಸಲು ಸಾಧ್ಯವಿಲ್ಲ ಎಂದರು. 1640-1641ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಸೆಬಾಸ್ಟಿಯನ್ ಮಾಂಡ್ರಿಕ್ ಇಟಲಿಯ ಆಭರಣ ತಯಾರಕ ಮತ್ತು ವಿನ್ಯಾಸಕ ಜೆರೊನಿಮೊ ವೆರೊನಿಯೋಗೆ ತಾಜ್‌ನ ವಿನ್ಯಾಸಕಾರನ ಪಟ್ಟ ಕಟ್ಟಿದರೆ, 1810ರಲ್ಲಿ ಭಾರತಕ್ಕೆ ಬಂದ ವಿಲಿಯಂ ಸ್ಲೀಮನ್ ಫ್ರಾನ್ಸ್‌ನ ಆಸ್ಟಿನ್ ಬೋರ್ಡೊಕ್ಸ್ ತಾಜ್‌ನ ವಿನ್ಯಾಸಕಾರನಿರಬಹುದು ಎಂದು ಆತನ ಬಗ್ಗೆ ಹೆಚ್ಚು ಪಕ್ಷಪಾತ ತೋರಿದ.

ಈ ಪ್ರವೃತ್ತಿ 19ನೆ ಶತಮಾನ ಹಾಗೂ ಆಧುನಿಕ ಕಾಲದವರೆಗೂ ಮುಂದುವರಿಯಿತು. 19ನೆ ಶತಮಾನದ ಹಸ್ತಪ್ರತಿ ‘ತಾರೀಕೆ ತಾಜ್‌ಮಹಲ್’ ಟರ್ಕಿಯ ಇಸಾ ಮುಹಮ್ಮದ್ ಎಫೆಂಡಿಯನ್ನು ತಾಜ್‌ನ ವಾಸ್ತುಶಿಲ್ಪಿಯೆಂದು ಪರಿಗಣಿಸುತ್ತದೆಂದು ಡಬ್ಲು.ಇ.ಬೆಗ್ಲೇ ಮತ್ತು ಝಡ್.ಎ.ದೇಸಾಯಿಯವರಂತಹ ವಿದ್ವಾಂಸರು ಹೇಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಈ ‘ಯುರೋಪಿಯನ್ ಭಾಗವಹಿಸುವಿಕೆ’ಯ ಸಿದ್ಧಾಂತವನ್ನು ಕೆಲವು ಆಧುನಿಕ ಇತಿಹಾಸಕಾರರು ಕೂಡ ಅನುಮೋದಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಮೊಗಲರ ಕಾಲದ ಇತಿಹಾಸಕಾರರು ತಾಜ್ ಸಂಕೀರ್ಣದ ವಿನ್ಯಾಸ ರಚಿಸಿದಾತ ಷಹಜಹಾನ್ ಎನ್ನುತ್ತಾರೆ. ಆ ವಿಶ್ವಾಸವನ್ನು ಅಹ್ಮದ್ ಲಾಹೋರಿ, ಮಿರ್ ಅಬ್ದುಲ್ ಕರೀಂ, ಉಸ್ತಾದ್ ಹಮೀದ್ ಮತ್ತು ಶಿರಾಜ್‌ನ ವೌಲಾನಾ ಮುರ್ಷಿದ್ ಸೇರಿದಂತೆ ವಾಸ್ತುಶಿಲ್ಪದ ಒಂದು ತಂಡ ಚಾಚೂ ತಪ್ಪದೆ ಅನುಷ್ಠಾನಗೊಳಿಸಿತು.

ಷಹಜಹಾನ್ ತನ್ನ ಪತ್ನಿಯ ನೆನಪಿಗಾಗಿಯೇ ತಾಜ್‌ಮಹಲನ್ನು ಕಟ್ಟಿಸಿದ್ದಲ್ಲ; ಬದಲಾಗಿ ತನ್ನ ಅಧಿಕಾರ ಮತ್ತು ವೈಭವದ ಒಂದು ಪ್ರತಿಫಲವಾಗಿ ಅದನ್ನು ನಿರ್ಮಿಸಿದ ಎನ್ನುವ ಮೂಲಕ ಕೆಲವು ಆಧುನಿಕ ವಿದ್ವಾಂಸರು, ಆ ಸ್ಮಾರಕದ ಇತಿಹಾಸಕ್ಕೆ ಸಂಕೀರ್ಣತೆಯ ಒಂದು ಹೊರ ಪದರವನ್ನು ಸೇರಿಸಿದ್ದಾರೆ.

ಬ್ರಿಟಿಷ್ ಆಡಳಿತ, ಲಾರ್ಡ್ ಕರ್ಜನ್ ಮತ್ತು ತಾಜ್‌ಮಹಲ್‌ನ ರಾಜಕೀಕರಣ

ಷಹಜಹಾನ್ ಮರಣದ ಬಳಿಕ ತಾಜ್‌ಮಹಲ್, ಕ್ರಮೇಣ, ನಿಧಾನವಾಗಿ, ಮೊಗಲ್ ಇತಿಹಾಸ ದಿಂದ ಮಸುಕಾಯಿತು. ಮೊಗಲ್ ಚಕ್ರವರ್ತಿ ಔರಂಗಜೇಬ್‌ನ ಆಳ್ವಿಕೆಯಲ್ಲಿ ಕೆಲವು ರಿಪೇರಿ ಕೆಲಸಗಳು ನಡೆದವು ಮತ್ತು ಅದರ ಮೇಲೆ ಹಲವರು ದಾಳಿ ನಡೆಸಿದರು ಎಂದು ಅಲ್ಲಿಲ್ಲಿ ಚದುರಿ ಹೋಗಿರುವ ಪುರಾವೆಗಳು ಹೇಳುತ್ತವೆ. 1719ರಲ್ಲಿ ಸೈಯಿದ್ ಸಹೋದರರು, 1761ರಲ್ಲಿ ಜಾಟರು ಮತ್ತು 1857ರ ಕ್ರಾಂತಿಯ/ಸ್ವಾತಂತ್ರ ಹೋರಾಟದ ದಂಗೆಯ ಅವಧಿಯಲ್ಲಿ ಬ್ರಿಟಿಷರು ದಾಳಿ ನಡೆಸಿದ ಉಲ್ಲೇಖಗಳಿವೆ. ಸೈಯಿದ್ ಸಹೋದರರು ರಾಜನ ಆಸ್ಥಾನದ ಸಂಪತ್ತುಗಳನ್ನು ಹಾಗೂ ಜಾಟರು ಬಾಗಿಲುಗಳನ್ನು ಒಯ್ದರು ಎನ್ನಲಾಗಿದೆ. 1857ರ ದಂಗೆಯ ಮೊದಲು ಮತ್ತು ಬಳಿಕ, ಒಂದೊಮ್ಮೆ ತಾಜ್‌ನ ಮೇಲ್‌ಮೈಯಲ್ಲಿದ್ದ ಅಮೂಲ್ಯವಾದ ಹಾಗೂ ಅರೆ ಅಮೂಲ್ಯವಾದ ಹಲವಾರು ಬೆಲೆ ಬಾಳುವ ಕಲ್ಲುಗಳನ್ನು ಒಯ್ಯಲಾಯಿತು.

ವಸಾಹತುಶಾಹಿ ಅವಧಿಯಲ್ಲಿ ತಾಜ್ ಸ್ಮಾರಕವು ತನ್ನ ಮಹತ್ವವನ್ನು ಮರಳಿ ಪಡೆಯಿತು. 18ನೆ ಶತಮಾನದ ಕೊನೆಯ ಕಾಲು ಭಾಗದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಉತ್ತರ ಭಾರತದ ಮೇಲೆ ನಿಯಂತ್ರಣ ಪಡೆಯಿತು. ದ್ವಿತೀಯ ಮರಾಠ ಯುದ್ಧದ ಬಳಿಕ ಲಾರ್ಡ್ ಲೇಕ್ ಆಗ್ರಾವನ್ನು ತನ್ನ ವಶಕ್ಕೆ ಪಡೆದ. ಬ್ರಿಟಿಷರು ರಾಜಕೀಯವಾಗಿ ಪ್ರಬಲರಾಗುತ್ತಿದ್ದಂತೆಯೇ, ಪಾಶ್ಚಿಮಾತ್ಯ ಪ್ರವಾಸಿಗಳು, ಕಲಾವಿದರು ಮತ್ತು ಅಧಿಕಾರಿಗಳು ತಾಜ್‌ಗೆ ಭೇಟಿ ಕೊಡಲಾರಂಭಿಸಿದರು. ಒಮ್ಮಿಮ್ಮೆ ತಾಜ್‌ಮಹಲ್ ಸಂದರ್ಶಕರಿಗೆ ಅತಿಥಿಗೃಹವಾಗಿ ಬಳಕೆಯಾಗುತ್ತಿತ್ತು ಅಥವಾ ‘ಬ್ರಿಟಿಷ್ ಲೇಡಿಸ್ ಮತ್ತು ಜಂಟಲ್‌ಮೆನ್’ಗಳಿಗೆ ಮನರಂಜನೆಗಾಗಿ ಉಪಯೋಗವಾಗುತ್ತಿತ್ತು. ಕ್ರಮೇಣ ತಾಜ್‌ಮಹಲ್ ‘ಕಂಪೆನಿ ಡ್ರಾಯಿಂಗ್’ಗಳಲ್ಲಿ ಅಥವಾ ‘ಕಂಪೆನಿ ಪೈಂಟಿಂಗ್’ಗಳಲ್ಲಿ ಮತ್ತು ಭಾರತದ ಪೌರ್ವಾತ್ಯ ಚಿತ್ರಣಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು.

ಬ್ರಿಟಿಷರೊಂದಿಗೆ ದುರಸ್ತಿ, ನವೀಕರಣ ಮತ್ತು ಸಂರಕ್ಷಣೆಯ ವಿಚಾರಗಳೂ, ಪರಿಕಲ್ಪನೆಗಳೂ ಬಂದವು. 1860-61ರಲ್ಲಿ ‘ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ’ದ ಸ್ಥಾಪನೆಯೊಂದಿಗೆ ಈ ಪರಿಕಲ್ಪನೆಗಳು, ಪ್ರಯತ್ನಗಳು ಇನ್ನಷ್ಟು ವ್ಯವಸ್ಥಿತವಾದವು. ಅದೇನಿದ್ದರೂ, ತಾಜ್‌ಮಹಲ್‌ನ ಅಧಿಕೃತ ಸ್ಮಾರಕೀಕರಣ (ಮಾನ್ಯುಮೆಂಟಲೈಝೇಶನ್) 20ನೆ ಶತಮಾನದ ಆರಂಭದಲ್ಲಿ, ನಿರ್ದಿಷ್ಟವಾಗಿ ಲಾರ್ಡ್ ಕರ್ಜನ್‌ರ ಅಧಿಕಾರಾವಧಿಯಲ್ಲಿ ಆರಂಭವಾಯಿತು ಎಂದಿದ್ದಾರೆ. ಸ್ಮಾರಕಗಳ ರಾಜಕಾರಣದ ಬಗ್ಗೆ ಅಧ್ಯಯನ ನಡೆಸಿರುವ ಓರ್ವ ವಿದ್ವಾಂಸ ಹಿಲಾಲ್ ಅಹ್ಮದ್.

ಹಿಲಾಲ್ ಅಹ್ಮದ್ ದಾಖಲಿಸಿರುವ ಪ್ರಕಾರ ತಾಜ್‌ಮಹಲ್‌ನ ಬೃಹತ್ತಾದ, ಭಾರೀ ನವೀಕರಣದ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.

share
ಶಶಾಂಕ್ ಶೇಖರ್ ಸಿನ್ಹಾ
ಶಶಾಂಕ್ ಶೇಖರ್ ಸಿನ್ಹಾ
Next Story
X