Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ‘ಉಪದ್ರವಿ ಹಾಗೂ ನಿರುಪದ್ರವಿ...

‘ಉಪದ್ರವಿ ಹಾಗೂ ನಿರುಪದ್ರವಿ ಸಾಹಿತಿಗಳು’...

ಕು.ವೀರಭದ್ರಪ್ಪಕು.ವೀರಭದ್ರಪ್ಪ10 Dec 2017 12:02 AM IST
share
‘ಉಪದ್ರವಿ ಹಾಗೂ ನಿರುಪದ್ರವಿ ಸಾಹಿತಿಗಳು’...

ಎಡ ಬಲ ಪಂಥಗಳಿರದಿದ್ದಲ್ಲಿ ಭಾಷೆಯಾಗಲೀ ಸಾಹಿತ್ಯ ವಾಗಲೀ ಇರುತ್ತಿರಲಿಲ್ಲ. ಈ ಎರಡು ಲೇಬಲ್ಲುಗಳು ಇತ್ತೀಚೆಗೆೆ ಚಾಲ್ತಿಯಲ್ಲಿದ್ದು ಚರ್ಚೆಗೊಳಪಡುತ್ತಿವೆ, ಪರಸ್ಪರ ದಿಕ್ಕುಗಳಾಗಿವೆ. ಪರಸ್ಪರ ದ್ವೇಷಿಸಿಕೊಳ್ಳುವಷ್ಟರ ಮಟ್ಟಿಗೆ ಇವೆರಡೂ ಬೆನ್ನು ಮಾಡಿವೆ.

ಆದ್ದರಿಂದ ಸದ್ಯದ ಸಾಹಿತ್ಯದಲ್ಲಿ ಉಪದ್ರವಿ ಹಾಗೂ ನಿರುಪದ್ರವಿ ಸಾಹಿತಿಗಳು ಎಂದರೆ ತಕರಾರಿರಲಾರದು. ಉಪದ್ರವಿ ಸಾಹಿತಿಗಳ ಸಂಖ್ಯೆ ಹೆಚ್ಚಿರುವುದು.

1974ರ ಎಪ್ರಿಲ್ 20, 21ರಂದು ಅದೇ ಮೈಸೂರ ಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಸಂಘಟಿಸಿದವರಲ್ಲಿ ಇದೇ ಚಂದ್ರ ಶೇಖರ ಪಾಟೀಲರು ಪ್ರಮುಖರು. ರಾಷ್ಟ್ರಕವಿಕುವೆಂಪು ತಮ್ಮ ಇಳಿವಯಸ್ಸಿನಲ್ಲಿ ಕ್ರಾಂತಿಕಾರಿ ಎನ್ನಿಸು ವಂಥ ಉಪನ್ಯಾಸ ನೀಡಿದರು, ಅವರ ಸುದೀರ್ಘ ಉಪನ್ಯಾಸ ಕನ್ನಡ ಸಾಹಿತ್ಯಕ್ಕೆ ಹೊಸದಿಕ್ಕನ್ನೇ ತೋರಿಸಿತು.

ಆ ಬ್ರಾಹ್ಮಣಶಾಹಿ ವಿರುದ್ಧ ನಡೆದ ಸಂಘಟನೆ ತದನಂತರ ದಲಿತ ಬಂಡಾಯ ಸಾಹಿತ್ಯ ಸಂಘಟನೆಗಳ ಗರ್ಭದಿಂದ ಹಲವು ಸಮಾಜಮುಖಿ ಚಳವಳಿಗಳು ಅವಿರ್ಭವಿಸಿದವು.

ಲೇಖಕರಲ್ಲಿ ವ್ಯವಸ್ಥೆಯ ಪರವಾಗಿರುವವರ ಒಂದು ಗುಂಪು ಅಕಾಡಮಿಕ್ ವಲಯದ ಅಂದರೆ ನಿರುಪದ್ರವಿ ಸಾಹಿತಿಗಳು ವ್ಯವಸ್ಥೆಯ ಪರವಾಗಿರುವವರ ಗುಂಪಿನಲ್ಲಿ ಗುರುತಿಸಿಕೊಂಡರೆ ನಾನ್ ಅಕಾಡಮಿಕ್ ವಲಯದ ಅಂದರೆ ಉಪದ್ರವಿ ಲೇಖಕರು ವ್ಯವಸ್ಥೆಯನ್ನು ವಿರೋಧಿಸುವವರ ಗುಂಪಿನಲ್ಲಿ ಗುರುತಿಸಿಕೊಂಡರು.

ಆಳುವ ಪ್ರಭುತ್ವಗಳನ್ನು ಬುಡಮೇಲು ಮಾಡಿದ್ದು ನವ್ಯೋತ್ತರ ಕಾಲಘಟ್ಟದಲ್ಲಿ ನಾಡಿನುದ್ದಗಲಕ್ಕೂ ಸಂಭವಿಸಿದ, ಜನಮುಖೀ ಚಳವಳಿಗಳು ಅವುಗಳಿಗೆ ಸಂಬಂಧಿಸಿದ ನಿಯತಕಾಲಿಕಗಳು. ಇಂಥ ಚಳವಳಿಗಳನ್ನು ಅಪೋಶನ ತೆಗೆದುಕೊಂಡ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ರಾಜಕಾರಣದ ಈ ಅಗಸ್ತ್ಯ ಚಳವಳಿಗಳ ಕೆಲವು ನೇತಾರರನ್ನು ಶಾಸಕರ ಭವನದ ಕೊಠಡಿಗಳಲ್ಲಿ ಬಂದಿಗಳನ್ನಾಗಿರಿಸಿದರು. ಆ ಆಸೆ ಆಮಿಷದ ಬಲೆಗೆ ಚಳವಳಿಗಳು ಬಲಿಯಾಗದಿದ್ದಲ್ಲಿ ಮನುವ್ಯಾಧಿ ತೀವ್ರಗೊಳ್ಳುತ್ತಿರಲಿಲ್ಲವೇನೊ!

ಅದೇನೇ ಇದ್ದರೂ ಉಪದ್ರವಿ ಲೇಖಕರ ಸಂಖ್ಯೆ ಕಾಲಾನುಕಾಲಕ್ಕೆ ಹೆಚ್ಚುತ್ತಲೇ ಇದೆ. ಅಸಂಘಟಿತ ಉಪದ್ರವಿ ಲೇಖಕರ ಅನಭಿಷಕ್ತ ನಾಯಕರು ನಮ್ಮ ಚಂದ್ರಶೇಖರ ಪಾಟೀಲರು.

ನಮ್ಮ ನೇತಾರ ಚಂಪಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಬೇಕೆಂಬುದು ನಮ್ಮೆಲ್ಲರ ನಿರೀಕ್ಷೆಯಾಗಿತ್ತು, ಗೌರವಾನ್ವಿತ ಅಧ್ಯಕ್ಷ ರಾದ ಡಾ. ಮನು ಬಳಿಗಾರ್ ಹಾಗೂ ಕಸಾಪದ ಉಳಿದೆಲ್ಲ ಪದಾಧಿಕಾ ರಿಗಳ ದೂರದರ್ಶಿತ್ವ ಶ್ಲಾಘನೀಯ. ಉಪದ್ರವಿ ಲೇಖಕ ಸಮುದಾ ಯದ ನಾಡಿಬಡಿತವನ್ನು ಸೂಕ್ಷ್ಮವಾಗಿ ಗ್ರಹಿಸಿದ್ದೂ ಅಲ್ಲದೆ ಚಂಪಾ ಅವರನ್ನು ಆಯ್ಕೆ ಮಾಡಿದ್ದು ಅಭಿನಂದನೀಯ ಸಂಗತಿ.

ಈ ಆಯ್ಕೆಯನ್ನು ನಿರುಪದ್ರವಿ ಲೇಖಕರು ಹಾಗೂ ಬಲಪಂಥೀಯ ರಾಜಕಾರಣಿಗಳು ತಮ್ಮ ಮುಖಗಳನ್ನು ಸೊಟ್ಟು ಮಾಡಿಕೊಂಡರು. ಹಾಗೂ ನವ್ಯಸಾಹಿತ್ಯವೆಂಬ ವಠಾರದ ಮಾಲಕರು, ಮನುವಾದದ ರಾಯಭಾರಿಗಳು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾದಾಗ ಅಲ್ಪ ಸಂಖ್ಯಾತ ನಿರುಪದ್ರವಿ ಲೇಖಕರು ಸಂಭ್ರಮಿಸಿದರು, ನಾಡಿನ ಹಲವು ಮಠಾಧೀಶರು ಅವರನ್ನು ಆಶೀರ್ವದಿಸಿದರು. ಹಾಗೆಯೇ ನಮ್ಮ ಚಂಪಾ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾಡಿನುದ್ದಗಲಕ್ಕ್ಕೂ ಇರುವ ಬಹುಸಂಖ್ಯಾತ ಗ್ರಾಮೀಣ ಉಪದ್ರವಿ ಲೇಖಕರು ಸಂಭ್ರಮಿಸಿದರು. ಇದು ಸಮಕಾಲೀನ ಸಂದರ್ಭದ ಆಯ್ಕೆಯೂ ಆಗಿತ್ತು. ನನ್ನಂಥ ಉಪದ್ರವಿ ಲೇಖಕರ ಸಂತಸಕ್ಕೆ ಕಾರಣ..

ಕಳೆದ ಮೂರ್ನಾಲ್ಕು ದಶಕಗಳಿಂದ ಚಂಪಾ ಅವರ ವೈಚಾರಿಕತೆಯೊಂದಿಗೆ ನಾವೆಲ್ಲ ಒಡನಾಡಿದ್ದೇವೆ, ಮಾತ್ರ ವಲ್ಲದೆ ಅದರಿಂದ ಪ್ರಭಾವಿತರಾಗಿದ್ದೇವೆ. ಈ ಕಾರಣ ದಿಂದ ಹೇಳುವುದಾದರೆ ಅಡಿಗರು ನವ್ಯರ ಒಂದು ಕಣ್ಣು ತೆರೆಸಿದ ಕವಿಯಾದರೆ ಚಂಪಾ ನವ್ಯೋತ್ತರದ ಎಲ್ಲಾ ತಲೆಮಾರುಗಳ ಎರಡೂ ಕಣ್ಣುಗಳನ್ನು ತೆರೆಸಿದ ಪ್ರಖರ ಚಿಂತಕರು.ಯಾವುದೇ ಪಕ್ಷಗಳ ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ನಿಲುವನ್ನು ಖಂಡಿಸುವ ಹಾಗೂ ಆರಂಭದಿಂದ ಸದಾ ತಮ್ಮ ಒಂದು ಕಾಲನ್ನು ಬೀದಿಯಲ್ಲಿರಿಸಿರುವ ಗ್ರಾಮೀಣ ಹಿರಿಕಿರಿಯ ಲೇಖಕರನ್ನು ಸದಾ ಹುರಿದುಂಬಿಸುತ್ತಿರುವ ಚಂಪಾ ತಮ್ಮ ವಾರಿಗೆ ಲೇಖಕರಿಗಿಂತ ಭಿನ್ನ. ವ್ಯಂಗ್ಯ ವಿಡಂಬನೆ ಭಾಷೆಯನ್ನು ಮುರಿದು ಕಟ್ಟುವ ವೈಖರಿ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗ.

ಇದುವರೆಗೆ ಗಮನಿಸಿರುವಂತೆ ಅವರು ಅಪ್ಪಟ ನಾಸ್ತಿಕ ಮನೋ ಭಾವದವರು, ಕುವೆಂಪುರವರಂತೆ ಚಂಪಾ ಸ್ವಾತಂತ್ರ್ಯೋತ್ತರವಾಗಿ ರಾಜಸತ್ತೆಯ ವಿರೋಧಿಗಳು. ನಿಮ್ಮ ಪಾದದ ಧೂಳು ನಮ್ಮ ಕಣ್ಣಿಗೆ ಬೀಳದಿರಲಿ ಎಂದು ಯಜಮಾನಿಕೆ ಪ್ರವೃತ್ತಿಯನ್ನು ಧಿಕ್ಕರಿಸುತ್ತಲೇ ತಮ್ಮ ಕಾವ್ಯೋದ್ಯೋಗದ ಪ್ರಣಾಳಿಕೆ ರಚಿಸಿಕೊಂಡವರು ನಮ್ಮ ಚಂಪಾ. ಜೊತೆಯಲ್ಲಿದ್ದು ಗಮನಿಸಿದಂತೆ ಅವರು ಭುವನೇಶ್ವರಿಗೆ ನಮಿಸುವುದು ಮೈಸೂರು ಪೇಟ ಧರಿಸುವುದು ಕನಸಿನ ಮಾತು!

ಒಮ್ಮೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಾಗೂ ಸಕ್ಕರೆ ಕಾಯಿಲೆಯಿಂದ ನರಳುತ್ತಿರುವ ಎಂಬತ್ತರ ಹರೆಯದ ಚಂಪಾ ದಂಪತಿ ಸಮ್ಮೇಳನದ ಮುಖ್ಯ ವೇದಿಕೆ ತಲುಪಲು ಸಾರೋಟನ್ನು ಬಳಸುವುದು ಅನಿವಾರ್ಯವಾಗಿತ್ತು.

ಇನ್ನು ಅವರ ಸಮ್ಮೇಳನದ ಸರ್ವಾಧ್ಯಕ್ಷತೆಯ ಭಾಷಣ!

ನಮ್ಮ ಚಂಪಾ ಹೇಗೆ ಮಾತಾಡಬೇಕಿತ್ತೋ ಹಾಗೆ ಮಾತಾಡಿದ್ದಾರೆ. ರಾಷ್ಟ್ರದ ಉದ್ದಗಲಕ್ಕೂ ಇರುವ ಎಡಪಂಥೀಯ ಲೇಖಕರು ಹೋರಾ ಟಗಾರರು ಹೇಗೆ ಮಾತಾಡುತ್ತಿರುವರೋ ಚಂಪಾ ಸಹ ಹಾಗೇ ಮಾತಾಡಿ ದ್ದಾರೆ. ಯಾವ ರಾಜಕೀಯ ಪಕ್ಷದ ಪ್ರಜಾಪ್ರಭುತ್ವ ಹಾಗೂ ಸಂವಿಧಾ ನದ ಪರವಾಗಿದೆಯೋ ಆ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಎಂದು ತಮ್ಮ ವೈಚಾರಿಕ ನಿಲುವಿಗನುಗುಣವಾಗಿ ಕರೆ ನೀಡಿ ಎಂದು ಹೇಳಿದ್ದರಲ್ಲಿ ತಪ್ಪೇನಿದೆ?

ಒಂದೇ ರಾಷ್ಟ್ರ ಒಂದೇ ಧರ್ಮ ಒಂದೇ ಭಾಷೆ! ಇದು ಇವತ್ತು ಕೇಂದ್ರದ ಆಡಳಿತಾರೂಢ ಪಕ್ಷದ ಏಕಗವಾಕ್ಷಿ ಯೋಜನೆಯಲ್ಲವೆ! ಇದನ್ನು ಜಾರಿ ಗೊಳಿಸಲು ಭಾಜಪ ಸರಕಾರ ತ್ರಿಕರಣಪೂರ್ವಕವಾಗಿ ಅಹರ್ನಿಶಿ ಶ್ರಮಿಸುತ್ತಿರುವುದು ದೇಶದ ಅಬಾಲವೃದ್ಧರೆಲ್ಲರಿಗೂ ತಿಳಿದ ಸಂಗತಿ.

ಇದನ್ನು ಜಾರಿಗೊಳಿಸಿದಲ್ಲಿ ಈ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾ ಗುವುದಿಲ್ಲವೆ! ರಾಜ್ಯಗಳು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳು, ಸಂಸ್ಕೃತಿ ಹಾಗೂ ವೈವಿಧ್ಯತೆ ನಾಶವಾಗುವುದಿಲ್ಲವೆ! ಚಂಪಾ ಸರ್ವಾ ಧ್ಯಕ್ಷರಾಗಿರುವ ಏಕೈಕ ಕಾರಣದಿಂದ ಸನಾತನಿಗಳು ಚಡಪಡಿಕೆಯಿಂದ ಉಡುಪಿಯಲ್ಲಿ ಧರ್ಮ ಸಂಸದ್ ನಡೆಸಿದ್ದು ಮತ್ತು ಅದರಲ್ಲಿ ಭಾಗವಹಿಸಿದ ಪರಾವಲಂಬಿ ಸನ್ಯಾಸಿಗಳು ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಾಂವಿಧಾನಿಕ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿದ್ದು ಪ್ರಶ್ನಾರ್ಹವಲ್ಲವೆ!

ಆ ವೈದಿಕ ಪರಂಪರೆಯ ಅಸಂಖ್ಯಾತರಿಗೇನೋ ಬುದ್ಧ್ದಿ ಸರಿ ಇರಲಿಲ್ಲವೆಂದಿಟ್ಟುಕೊಳ್ಳೋಣ, ಆದರೆ ಆ ನಾನ್ಸೆನ್ಸಿಗೆಲ್ಲ ಅಸನ ವಸನ ಕಲ್ಪಿಸಿದ್ದ ನಮ್ಮ ಪೇಜಾವರ ಸ್ವಾಮೀಜಿ ಸಂವಿಧಾನ ಹಾಗೂ ಅದರ ಪ್ರಶ್ನಾತೀತ ಕರ್ತೃ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಖಂಡನಾರ್ಹವಲ್ಲವೆ! ಇಂಥ ಅಶ್ಲೀಲಾತಿ ಅಶ್ಲೀಲ ಪ್ರಚೋದನಕಾರಿ ಹೇಳಿಕೆಗಳು ಭಾರತಾದ್ಯಂತ ಪ್ರಕಟವಾಗುತ್ತಲೇ ಇವೆ.

ಆರೋಗ್ಯವಂತ ಸಮಾಜ ಸಾಹಿತ್ಯಕ್ಕೆ ರಾಜಕಾರಣಕ್ಕೆ ಸದಾ ಸ್ಪಂದಿಸುತ್ತಲೇ ಇರುತ್ತದೆ. ಮಾರ್ಕ್ವೆಜ್, ನೆರುಡಾರಂಥ ಲೇಖಕರು ತಮ್ಮ ದೇಶಗಳ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ನಮ್ಮ ದೇಶದ ಹಲವು ರಾಜ್ಯಗಳ ರಾಜಕಾರಣಿಗಳು ಸ್ವತಃ ಲೇಖಕರಾಗಿ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ಸಾಹಿತ್ಯದ ಮಾಂತ್ರಿಕ ಸ್ಪರ್ಶವಿಲ್ಲದ ರಾಜಕಾರಣಿಗಳು ಸೃಜನ ಶೀಲ ಲೇಖಕರ ರೂಪಕಾತ್ಮಕ ಭಾಷೆಯನ್ನು ಸಕಾರಾತ್ಮಕವಾಗಿ ಗ್ರಹಿಸಲಾರರು, ಇದಕ್ಕೆ ಸಮ್ಮೇಳನಾಧ್ಯಕ್ಷರ ಉಪನ್ಯಾಸವನ್ನು ಅಪಾರ್ಥ ಮಾಡಿಕೊಂಡಿದ್ದೇ ಸಾಕ್ಷಿ. ಮೌಲಿಕ ಕೃತಿಗಳನ್ನು ಓದುತ್ತಿರುವವರು ಎನ್ನಲಾದ ಕೇಂದ್ರ ಸಚಿವರು, ಅಂಕಣಕಾರರೆಂದು ಹೆಸರು ಮಾಡಿರುವ ಸಂಸದರು ವ್ಯವ ಧಾನ ಕಳೆದುಕೊಳ್ಳದೆ ಸಮ್ಮೇಳನದ ಮಾತುಗಳನ್ನು ಹಸನ್ಮುಖತೆಯಿಂದ ಆಸ್ವಾದಿಸಬಹುದಿತ್ತು. ಸಜ್ಜನಿಕೆ ಭಾಷೆಯಲ್ಲಿ ಪ್ರತಿಕ್ರಿಯಿಸಿ ಕನ್ನಡಾಭಿಮಾನಿಗಳಿಗೆ ಮನವರಿಕೆ ಮಾಡಿಕೊಡಬಹುದಿತ್ತು.

ತಮ್ಮ ತಮ್ಮ ಪಕ್ಷಗಳ ಹೈಕಮಾಂಡಿಗರನ್ನು ಮೆಚ್ಚಿಸಲೆಂದು ತಮ್ಮ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತಾಡುವವರ ನಡುವೆ ಅನಾರೋಗ್ಯಕರ ಪೈಪೋಟಿ ಹೆಚ್ಚಿದೆ. ಇದರಿಂದ ಪ್ರಭಾವಿತರಾಗಿ ಆಯಾ ಪಕ್ಷಗಳ ಅಂಧಾಭಿಮಾನಿಗಳು ಹಿರಿಕಿರಿಯ ಲೇಖಕರನ್ನು ಚಿಂತಕರನ್ನು ನಿಂದಿಸಲೆಂದೇ ಸಾಮಾಜಿಕ ಜಾಲತಾಣಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಹಿತ್ಯಿಕ ಭಾಷೆಯ ಸೌಂದರ್ಯಕ್ಕೆ ಧಕ್ಕೆಯೊದಗುವುದಿಲ್ಲವೆ!

ಇದನ್ನೇ ಪ್ರೊ ಚಂದ್ರಶೇಖರ ಪಾಟೀಲರು ಕೆಲವು ಕಡೆ ಸೂಕ್ಷ್ಮವಾಗಿ ಕೆಲವು ಕಡೆ ಒರಟಾಗಿ ಪ್ರಸ್ತಾಪಿಸಿದ್ದು, ಆದರೆ ಅವರು ಪ್ರೀತಿಯಿಲ್ಲದೆ ಏನನ್ನೂ ಮಾಡುವವರಲ್ಲ, ಮಾತಾಡುವವರಂತೂ ಅಲ್ಲವೇ ಅಲ್ಲ.

share
ಕು.ವೀರಭದ್ರಪ್ಪ
ಕು.ವೀರಭದ್ರಪ್ಪ
Next Story
X