Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಹೊಸ ರಾಜಕಾರಣದ ಸಂದೇಶವಾಹಕ ಜಿಗ್ನೇಶ್...

ಹೊಸ ರಾಜಕಾರಣದ ಸಂದೇಶವಾಹಕ ಜಿಗ್ನೇಶ್ ಮೇವಾನಿ

ಆದಿತ್ಯ ನಿಗಮ್ಆದಿತ್ಯ ನಿಗಮ್22 Dec 2017 6:30 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹೊಸ ರಾಜಕಾರಣದ ಸಂದೇಶವಾಹಕ ಜಿಗ್ನೇಶ್ ಮೇವಾನಿ

ಗುಜರಾತ್ ಅಸೆಂಬ್ಲಿಯನ್ನು ಪ್ರವೇಶಿಸುವ ವಿಶೇಷ ಅವಕಾಶ ಪಡೆದಿರುವ ಜಿಗ್ನೇಶ್, ಈ ಅವಕಾಶದಿಂದಾಗಿ ಎದುರಿಸಬೇಕಾಗಿ ಬರುವ ಸವಾಲು, ಸಮಸ್ಯೆಗಳೇನೇ ಇರಲಿ, ಇದು ದಲಿತ- ಬಹುಜನ ಪ್ರೇರಿತ ಎಡಪಂಥೀಯ ರಾಜಕಾರಣದ ಅಭಿವ್ಯಕ್ತಿಗೆ ಸಂಪೂರ್ಣ ಸಾಧ್ಯತೆಗಳಿರುವ ಒಂದು ಕ್ಷಣ, ಒಂದು ಕಾಲ ಘಟ್ಟ ಎಂಬ ಬಗ್ಗೆ ಅನುಮಾನವಿಲ್ಲ. ಗುಜರಾತ್‌ನಲ್ಲಷ್ಟೆ ಅಲ್ಲ, ದೇಶದ ಇತರೆಡೆಗಳಲ್ಲಿ ಕೂಡ ಈ ಅಭಿವ್ಯಕ್ತಿಗೆ ದೊರೆತಿರುವ ಅವಕಾಶ ಇದು ಮತ್ತು ಹಲವು ವಿಭಿನ್ನ ಪ್ರವಾಹಗಳ ಸಂಗಮಸ್ಥಳದಲ್ಲಿ ಈಗ ನಿಂತಿರುವ ಜಿಗ್ನೇಶ್, ಆ ಹೊಸ ರಾಜಕಾರಣದ ಸಂದೇಶ ವಾಹಕರಾಗಿದ್ದಾರೆ.

ಕಾಂಗ್ರೆಸ್ ಪಕ್ಷವು ಒಂದು ರೀತಿಯ ಅಸ್ತವ್ಯಸ್ತತೆಯಿಂದ ಎದ್ದು ಭವಿಷ್ಯದಲ್ಲಿ ಒಂದು ಸಂಭಾವ್ಯ ರಾಜಕೀಯ ಮರು ಹೊಂದಾಣಿಕೆಗೆ ಸಿದ್ಧವಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಜಿಗ್ನೇಶ್ ಮೇವಾನಿಯ ಉದಯ ಒಂದು ಮೈಲುಗಲ್ಲು ಒಂದು ಐತಿಹಾಸಿಕ ಘಟನೆ.

ಗುಜರಾತಿನಲ್ಲಿ ಬಹಳ ಸಮಯದಿಂದ ಬಿಜೆಪಿಯ ಸಾಮಾಜಿಕ ನೆಲೆ ಎಂದು ಪರಿಗಣಿಸಲ್ಪಟ್ಟಿದ್ದ ಬಲಿಷ್ಠವಾದ ಪಾಟಿದಾರ್ ಸಮುದಾಯದ ಒಂದು ಭಾಗ ಬಿಜೆಪಿಯಿಂದ ದೂರ ಸರಿದಾಗಲೇ ಈ ಘಟನೆಯ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ಇದರ ಜೊತೆಗೆ ಯುವ ನಾಯಕರಾದ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿಯವರ ಉದಯವು ಒಟ್ಟಾಗಿ ಗುಜರಾತ್‌ನ ನವ ಯುವ ಮುಖವನ್ನು ನಿರ್ಮಿಸಿತು. ಪರಿಣಾಮವಾಗಿ ದಿಗಂತದಲ್ಲಿ ಒಂದು ಹೊಸ ವಿಪಕ್ಷ ರಚನೆಯ ಲಕ್ಷಣ ಗೋಚರಿಸುತ್ತಿದೆ. ಕಾಂಗ್ರೆಸ್‌ನ ಪಾಲಿಗೆ ಈ ಹೊಸ ಬೆಳವಣಿಗೆಯು ಈ ಯುವ ನಾಯಕರ ನಾಯಕತ್ವದ ಹೊರತಾಗಿ ಸಾಧ್ಯವಾಗುತ್ತಿರಲಿಲ್ಲ.

ಬನಸ್ಕಾಂತ ಜಿಲ್ಲೆಯ ವಡ್‌ಗಾವ್ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿಯವರ ಅದ್ಭುತ ವಿಜಯ, ಅವರು ಅವರ ಪ್ರತಿಸ್ಪರ್ಧಿ ಬಿಜೆಪಿಯ ವಿಜಯ್ ಚಕ್ರವರ್ತಿಯವರ ವಿರುದ್ಧ 18,000 ಮತಗಳ ಅಂತರದಿಂದ ಸಾಧಿಸಿದ ಗೆಲುವು ಗುಜರಾತ್ ರಾಜ್ಯದ ಇತಿಹಾಸದಲ್ಲೊಂದು ಪ್ರಮುಖ ಘಟನೆ.

ಒಂದು ಗೋವನ್ನು ಹತ್ಯಗೈದರೆಂದು ಆಪಾದಿಸಲಾದ ನಾಲ್ವರು ದಲಿತ ಯುವಕರನ್ನು ಉನಾದಲ್ಲಿ ಥಳಿಸಿದ ಘಟನೆಯ ಹಿನ್ನೆಲೆಯಲ್ಲಿ ಮೇವಾನಿಯವರ ರಾಜಕೀಯ ಉದಯವಾಯಿತು. 2016ರ ಜುಲೈನಲ್ಲಿ ಗೋರಕ್ಷಕರು ನಡೆಸಿದ ಆ ಹಲ್ಲೆಯು ರಾಜ್ಯದ ದಲಿತ ಸಮುದಾಯದ ಅಭೂತಪೂರ್ವ ಬೃಹತ್ ಪ್ರತಿಭಟನೆಗೆ, ಚಳವಳಿಗೆ ಕಾರಣವಾಯಿತು. ಆ ಚಳವಳಿಯ ನೇತೃತ್ವ ವಹಿಸಿದ್ದವರು, ‘‘ನೀವು ಹಸುವಿನ ಬಾಲ ಇಟ್ಟುಕೊಳ್ಳಿ, ನಮಗೆ ನಮ್ಮ ಜಮೀನು ಕೊಡಿ’’ ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ 36ರ ಹರೆಯದ ನ್ಯಾಯವಾದಿ ಜಿಗ್ನೇಶ್ ಮೇವಾನಿ ಚಳವಳಿಯು ‘‘ಆಝಾದ್ ಕೂಚ್’’ ಅವರ ಅಥವಾ ‘‘ಸ್ವಾತಂತ್ರಕ್ಕಾಗಿ ನಡಿಗೆ’’ಯ ರೂಪ ಪಡೆಯಿತು.

ಆ ನಡಿಗೆಯಲ್ಲಿ ದಲಿತರು ತಾವು ಇನ್ನು ಮುಂದೆ ಸತ್ತ ಹಸುಗಳ ಶವಗಳನ್ನು ಎತ್ತಿ ಸಾಗಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಆ ಹೋರಾಟದಲ್ಲಿ ಮೇವಾನಿಯವರ ಮಧ್ಯಪ್ರವೇಶ ಎರಡು ಮುಖ್ಯ ವಿಷಯಗಳನ್ನೆತ್ತಿತು. ಮೊದಲನೆಯದಾಗಿ ಅದು ದಲಿತರಿಗಾಗಿ ಕಾದಿರಿಸಲಾಗಿದ್ದ, ಆದರೆ ಅವರಿಗೆ ಎಂದೂ ವರ್ಗಾವಣೆಯಾಗದ ಜಮೀನಿನ ಪ್ರಶ್ನೆಯನ್ನು ಎತ್ತಿತು. ಸಮಕಾಲೀನ ದಲಿತ ರಾಜಕಾರಣದಲ್ಲಿ ಜಮೀನಿನ ಬಗ್ಗೆ ಮೇವಾನಿ ತೋರಿದ ಆಸಕ್ತಿ ತುಂಬ ವಿಶಿಷ್ಟವಾದದ್ದು. ಅವರ ಆಸಕ್ತಿ ಕೇವಲ ಮಧ್ಯಮವರ್ಗದಿಂದ ಪ್ರೇರಿತವಾದ ಒಂದು ದಲಿತ ವಾಗ್ವಾದವಲ್ಲ. ಯಾಕೆಂದರೆ ದೇಶದಾದ್ಯಂತ ದಲಿತ ಸಮುದಾಯಗಳಿಗೆ ವರ್ಗ ಮತ್ತು ಆರ್ಥಿಕ ಸ್ವಾತಂತ್ರದ ಪ್ರಶ್ನೆಗಳು ಅತೀ ಮುಖ್ಯ ಎಂಬುದನ್ನು ಅವರು ಆರಂಭಿಸಿದ ವಾಗ್ವಾದ ಸ್ಪಷ್ಟಪಡಿಸಿತು.

ಎರಡನೆಯದಾಗಿ, ಆ ಚಳವಳಿಗೆ ಮೇವಾನಿ ನೀಡಿದ ‘ಆಝಾದಿ ಕೂಚ್’ ಎಂಬ ಹೆಸರಿನ ಆಯ್ಕೆಯೇ ವಿಶಿಷ್ಟವಾದದ್ದು. ಆ ಹೆಸರು ಆ ಮೊದಲು ದಿಲ್ಲಿಯ ಜೆಎನ್‌ಯುವಿನಲ್ಲಿ ನಡೆದ ಮತ್ತು ಆಳುವ ಪಕ್ಷ ಹಾಗೂ ಆರೆಸ್ಸೆಸ್ ‘ರಾಷ್ಟ್ರವಿರೋಧಿ’ ಎಂದು ಹಣೆಪಟ್ಟಿ ಅಂಟಿಸಿದ, ಆಝಾದಿ ಘೋಷಣೆಗಳನ್ನು ನೆನಪಿಸಿತು. ಮೇವಾನಿ ಜೆಎನ್‌ಯುನ ಕನ್ಹಯ್ಯಿಕುಮಾರ್, ಶೆಹ್ಲಾರಶೀದ್, ಉಮರ್ ಖಾಲಿದ್ ಮತ್ತು ದಿವಂಗತ ಗೌರಿ ಲಂಕೇಶ್‌ರಂತಹ ಇತರ ಹಲವು ನಾಯಕರೊಂದಿಗೆ ನೇರ ಸಂಪರ್ಕ ಸ್ಥಾಪಿಸಿದರು.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ನರಮೇಧದ ಸಂತ್ರಸ್ತರ ಪರವಾಗಿ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿದ್ದ ಪ್ರಭಾವಿ ನ್ಯಾಯವಾದಿ ಮುಕುಲ್ ಸಿನ್ಹಾರೊಂದಿಗೆ ಜಿಗ್ನೇಶ್ ಮೇವಾನಿಯವರು ಭಿನ್ನ ರೀತಿಯ ಒಂದು ರಾಜಕಾರಣಗಳಲ್ಲಿ ತರಬೇತಿ ಪಡೆದಿದ್ದರು. ತರುವಾಯ ಮೇವಾನಿ ಜನಸಾಗರದ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದಂತೆ ಅವರು ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಜತೆ ಸೇರಿಕೊಂಡರು. ಎಎಪಿ ಜತೆಗಿನ ಅವರ ಸಂಪರ್ಕವನ್ನು ‘ರಾಜಕೀಯ ಪ್ರೇರಿತ’ವೆಂದು ಹೇಳಿ, ಬಿಜೆಪಿ ಉನಾ ಚಳವಳಿಯನ್ನು ಟೀಕಿಸತೊಡಗಿದಾಗ ಅವರು ಆಪ್‌ನಿಂದ ಹೊರ ನಡೆದರು.

ಅದೇನಿದ್ದರೂ, ದಲಿತ ಹೋರಾಟಗಳಿಗೆ ಮೇವಾನಿ ತೋರುತ್ತಿರುವ ನಿಷ್ಠೆಯ ಜತೆಗೆ ಅವರು ಇಂದು ಭಾರತವನ್ನು ಕಾಡುವ ಇತರ ರಾಜಕೀಯ ಪ್ರಶ್ನೆಗಳ ಬಗ್ಗೆ ಕೂಡ ಕಾಳಜಿಯುಳ್ಳ ಓರ್ವ ದಲಿತ ನಾಯಕರಾಗಿದ್ದಾರೆ.

ತನ್ನ ಚುನಾವಣಾ ಪ್ರಚಾರದುದ್ದಕ್ಕೂ, ಮೇವಾನಿಯವರು ‘ಫ್ಯಾಶಿಸ್ಟ್ ಬೆದರಿಕೆ’ಯನ್ನು ಎದುರಿಸುವುದು ಅತ್ಯಂತ ಮುಖ್ಯವೆಂದು, ಹಿಂದುತ್ವ ಶಕ್ತಿಗಳನ್ನು ಸೋಲಿಸದೆ ದಲಿತರಿಗೆ ಬಂಧಮುಕ್ತಿ, ಬಿಡುಗಡೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಜಹೇಳಬೇಕೆಂದರೆ, ಅವರ ದೃಢವಾದ ಈ ನಿಲುವು ಅವರೊಬ್ಬ ನಾಯಕನಾಗಿ ಮೂಡಿಬರಲು ಕಾರಣವಾಗಿದೆ. ಅವರ ಚುನಾವಣಾ ಪ್ರಚಾರದಲ್ಲಿ ಕೂಡ ಅವರ ವಿಶಿಷ್ಟತೆ ಎದ್ದುಕಾಣುತ್ತಿತ್ತು. ಅವರ ಚುನಾವಣಾ ವಂತಿಗೆಯನ್ನು ಜನರಿಂದಲೇ ಎತ್ತಲಾಯಿತು ಮತ್ತು ವಿವಿಧ ರೀತಿಯ ಜನರು ಅವರ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿದರು. ಅದಕ್ಕೂ ಮಿಗಿಲಾಗಿ ಅವರ ಪ್ರಚಾರಕ್ಕೆ ನೆರವಾಗಲು ಭಾರತದ ಎಲ್ಲ ಭಾಗಗಳಿಂದ ಸ್ವಯಂಸೇವಕರು ಬಂದು ವಡಗಾವ್‌ನಲ್ಲಿ ಸೇರಿಕೊಂಡರು. ಇವರಿಗೆ ಸ್ಥಳೀಯರು ಊಟ ವಸತಿ ನೀಡಿ ಅತಿಥಿ ಸತ್ಕಾರ ಮಾಡಿದರು.

ಗುಜರಾತ್ ಅಸೆಂಬ್ಲಿಯನ್ನು ಪ್ರವೇಶಿಸುವ ವಿಶೇಷ ಅವಕಾಶ ಪಡೆದಿರುವ ಜಿಗ್ನೇಶ್, ಈ ಅವಕಾಶದಿಂದಾಗಿ ಎದುರಿಸಬೇಕಾಗಿ ಬರುವ ಸವಾಲು, ಸಮಸ್ಯೆಗಳೇನೇ ಇರಲಿ, ಇದು ದಲಿತ- ಬಹುಜನ ಪ್ರೇರಿತ ಎಡಪಂಥೀಯ ರಾಜಕಾರಣದ ಅಭಿವ್ಯಕ್ತಿಗೆ ಸಂಪೂರ್ಣ ಸಾಧ್ಯತೆಗಳಿರುವ ಒಂದು ಕ್ಷಣ, ಒಂದು ಕಾಲ ಘಟ್ಟ ಎಂಬ ಬಗ್ಗೆ ಅನುಮಾನವಿಲ್ಲ. ಗುಜರಾತ್‌ನಲ್ಲಷ್ಟೆ ಅಲ್ಲ, ದೇಶದ ಇತರೆಡೆಗಳಲ್ಲಿ ಕೂಡ ಈ ಅಭಿವ್ಯಕ್ತಿಗೆ ದೊರೆತಿರುವ ಅವಕಾಶ ಇದು ಮತ್ತು ಹಲವು ವಿಭಿನ್ನ ಪ್ರವಾಹಗಳ ಸಂಗಮಸ್ಥಳದಲ್ಲಿ ಈಗ ನಿಂತಿರುವ ಜಿಗ್ನೇಶ್, ಆ ಹೊಸ ರಾಜಕಾರಣದ ಸಂದೇಶವಾಹಕರಾಗಿದ್ದಾರೆ.

ಕೃಪೆ: thewire.in

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಆದಿತ್ಯ ನಿಗಮ್
ಆದಿತ್ಯ ನಿಗಮ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X