Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಟೆಕ್ಕಿಗಳಿಗೀಗ ಕಾಲವಲ್ಲ!

ಟೆಕ್ಕಿಗಳಿಗೀಗ ಕಾಲವಲ್ಲ!

ಭಾರತದ ಟೆಕ್ಕಿಗಳಿಗೆ 2017 ಒಂದು ಭಯಾನಕ ವರ್ಷವಾಗಿತ್ತು; ಪರಿಸ್ಥಿತಿ ಈ ವರ್ಷ ಇನ್ನಷ್ಟು ಹದಗೆಡಬಹುದು.

ಅನನ್ಯಾ ಭಟ್ಟಾಚಾರ್ಯಅನನ್ಯಾ ಭಟ್ಟಾಚಾರ್ಯ3 Jan 2018 6:46 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಟೆಕ್ಕಿಗಳಿಗೀಗ ಕಾಲವಲ್ಲ!

ನೌಕರಿ ಕಡಿತಗಳು ಮತ್ತು ನಂಬಬಹುದಾದ ನೌಕರಿಯ ಅವಕಾಶಗಳ ಕೊರತೆಯು ಉದ್ಯೋಗಿಗಳ ಪಾಲಿಗೆ ಮಾನಸಿಕ ಹಾಗೂ ಭಾವನಾತ್ಮಕ ಗಂಡಾಂತರ ತಂದಿದೆ. ಕೈಯಲ್ಲಿ ಕಾಸಿಲ್ಲದ ಸ್ಥಿತಿ, ಆತಂಕ, ಖಿನ್ನತೆ ಆತ್ಮವಿಶ್ವಾಸದ ಕುಸಿತ ಮತ್ತು ಮೋಟಿವೇಶನ್‌ನ ಕೊರತೆಯ ವಿರುದ್ಧ ಹೋರಾಡುತ್ತ ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಆಘಾತಕ್ಕೊಳಗಾಗುತ್ತಿದ್ದಾರೆ.

ಕೆಲವು ವರ್ಷಗಳ ಹಿಂದಿನ ವರೆಗೆ ವಿಶ್ವದಲ್ಲೇ ಅತ್ಯಂತ ಹೆಚ್ಚು ನೌಕರಿಗಳನು ಸೃಷ್ಟಿಸಿರುವ ಉದ್ಯಮಗಳಲ್ಲಿ ಒಂದು ಉದ್ಯಮವಾಗಿದ್ದ ಭಾರತದ 160 ಬಿಲಿಯನ್ ಡಾಲರ್ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವು 2017ರಲ್ಲಿ 56,000ಕ್ಕಿಂತಲೂ ಹೆಚ್ಚು ನೌಕರರನ್ನು ಮನೆಗೆ ಕಳುಹಿಸಿತು. ಕೆಲವು ವಿಶ್ಲೇಷಕರ ಪ್ರಕಾರ ಇಷ್ಟೊಂದು ಸಂಖ್ಯೆಯಲ್ಲಿ ನೌಕರರು ನೌಕರಿ ಕಳೆದುಕೊಂಡದ್ದು 2008ರ ಆರ್ಥಿಕ ಹಣಕಾಸು ಬಿಕ್ಕಟ್ಟಿನ ವರ್ಷಕ್ಕಿಂತಲೂ ಹೆಚ್ಚು ನಿರಾಶಾದಾಯಕವಾಗಿದೆ. ಅದೇ ವೇಳೆ, ತಜ್ಞರ ಪ್ರಕಾರ, 2017ರಲ್ಲಿ ಪ್ರವೇಶ-ಮಟ್ಟದ ನೌಕರಿ ಅವಕಾಶಗಳು ಶೇ.50ಕ್ಕಿಂತಲೂ ಹೆಚ್ಚು ನಶಿಸಿ ಹೋಗಿ, ಕಂಪೆನಿಗಳು ನೌಕರಿಗೆ ನೇಮಿಸಿಕೊಳ್ಳುವವರ ಸಂಖ್ಯೆ ತೀರ ಕುಸಿಯಿತು.

ಭಾರತದ ಐಟಿ ಕಂಪೆನಿಗಳಲ್ಲೇ ಅತ್ಯಂತ ಬೃಹತ್ತಾದ ಎರಡು ಕಂಪೆನಿಗಳಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಇನ್ಫೋಸಿಸ್ ಮೊತ್ತ ಮೊದಲ ಬಾರಿಗೆ ತಮ್ಮ ನೌಕರರ ಸಂಖ್ಯೆಯನ್ನು ಇಳಿಸಿದವು. ಒಂದು ಕಾಲದಲ್ಲಿ ಇವು ನೌಕರಿ ಸೃಷ್ಟಿಯಲ್ಲಿ ನಾಯಕ ಕಂಪೆನಿಗಳಾಗಿದ್ದವು.

ಒಂದು ಐಟಿ ಸೇವಾ ಆಡಳಿತ ಕಂಪೆನಿಯಾಗಿರುವ ಇನ್‌ಸಿಡೊದ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾಗಿರುವ ಅರುಣ್ ಪೌಲ್ ಹೇಳುವಂತೆ ‘‘ಡಿಜಿಟಲೀಕರಣ ಮತ್ತು ಆಟೊಮೇಶನ್ ಸಾಂಪ್ರದಾಯಿಕ ಪಾತ್ರಗಳನ್ನು ಅಸ್ತವ್ಯಸ್ತಗೊಳಿಸಿದವು, ಪರಿಣಾಮವಾಗಿ ಬಹುಪಾಲು ಐಟಿ ಕಂಪೆನಿಗಳು ತಾವು ಮಾರುಕಟ್ಟೆಗೆ ಪ್ರಸ್ತುತವಾಗಿ ಇರಲಿಕ್ಕಾಗಿ ತಮ್ಮ ಉದ್ಯೋಗಿಗಳ ಸಾಮರ್ಥ್ಯವನ್ನು ಮರುವೌಲ್ಯಮಾಪನ ಮಾಡಬೇಕಾಯಿತು’’

ಈ ಹಿಂದಿನ ವರ್ಷಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ (ನಾನ್ ಪರ್‌ಫಾರ್ಮಿಂಗ್) ಉದ್ಯೋಗಿಗಳಿಗೆ ಕಂಪೆನಿ ತೊರೆದುಹೋಗುವಂತೆ ಹೇಳುವಾಗ, ಅಂಥವರ ಸಂಖ್ಯೆ ವಾರ್ಷಿಕ ಶೇ. 1 ಇರುತ್ತಿತ್ತು. ಐಟಿ ಕಂಪೆನಿಗಳಲ್ಲಿ ಇದು 2017ರಲ್ಲಿ, ಒಟ್ಟು ಉದ್ಯೋಗಿಗಳ ಶೇ. 2ರಿಂದ 6ಕ್ಕೆ ಏರಿತು.

2017ರ ಜನವರಿ ತಿಂಗಳಲ್ಲಿ ಇನ್ಫೋಸಿಸ್ 9,000 ಉದ್ಯೋಗಗಳನ್ನು ಕಡಿತಗೊಳಿಸಿತು. ‘‘ಒಂದು ಪ್ರಾಜೆಕ್ಟ್‌ನಲ್ಲಿ 10 ಮಂದಿ ಕೆಲಸ ಮಾಡುವ ಬದಲು, ನಾವು ಮೂರು ಮಂದಿಯನ್ನು ನೇಮಿಸಬೇಕಾದಾಗ ಏನು ಮಾಡುವುದು? ನಾವು ಕಾಲಕ್ಕೆ ತಕ್ಕ ಸಾಫ್ಟ್‌ವೇರ್ ಹೊಂದಿಲ್ಲವಾದರೆ, ನಮ್ಮ ಅವಕಾಶವನ್ನು ಬೇರೆಯವರು ಕಿತ್ತುಕೊಳ್ಳುತ್ತಾರೆ.’’ ಎಂದಿದ್ದಾರೆ ಕಂಪೆನಿಯ ಮಾಜಿ ಸಿಇಒ ವಿಶಾಲ್ ಸಿಕ್ಕಾ.

ಅದೇ ಅವಧಿಯಲ್ಲಿ, ಕಾಗ್ನಿಝಂಟ್ ಕಂಪೆನಿಯ 6,000ಕ್ಕಿಂತಲೂ ಹೆಚ್ಚು ಭಾರತೀಯ ಉದ್ಯೋಗಿಗಳು ಆಟೊಮೇಶನ್‌ನಿಂದಾಗಿ ತಮ್ಮ ನೌಕರಿಗಳನ್ನು ಕಳೆದುಕೊಂಡರು. ಮುಂಬೈಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಟೆಕ್ ಮಹೀಂದ್ರ ಕಂಪೆನಿಯು ಆಟೋಮೇಶನನ್ನು ಹೆಚ್ಚಿಸಿ ಮಾನವ ಶಕ್ತಿಯನ್ನು ಕಡಿತಗೊಳಿಸುವ ತನ್ನ ಯೋಜನೆಯ ಅಂಗವಾಗಿ, ಓರ್ವ ಎಚ್‌ಆರ್ ಸಿಬ್ಬಂದಿ ನೌಕರನೊಬ್ಬನಿಗೆ ಮರುದಿನ ಬೆಳಗ್ಗೆ 10 ಗಂಟೆಯೊಳಗಾಗಿ ನೌಕರಿ ತೊರೆಯಬೇಕು, ಇಲ್ಲವಾದಲ್ಲಿ ಆ ನೌಕರನನ್ನು ಕೆಲಸದಿಂದ ವಜಾ ಮಾಡಲಾಗುವುದೆಂದು ಬಲಾತ್ಕರಿಸುವ, ಬೆದರಿಕೆ ಹಾಕುವ ಸ್ಥಿತಿ ಬಂತು. ಆತ ಹೀಗೆ ಬೆದರಿಕೆ ಹಾಕುತ್ತಿದ್ದ ಒಂದು ವಿವಾದಾಸ್ಪದ ಆಡಿಯೋ ಕ್ಲಿಪ್ ಬಹಿರಂಗವಾಗಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಐಟಿ ಪಿರಮಿಡ್‌ನ ತಳಮಟ್ಟದ ಉದ್ಯೋಗಿಗಳಷ್ಟೇ ನೌಕರಿ ಕಳೆದುಕೊಂಡದ್ದಲ್ಲ; ಇಂದಿಗೆ ಪ್ರಸ್ತುತವಲ್ಲದ ಕೌಶಲ್ಯಗಳನ್ನು ಹೊಂದಿದ್ದ ಹಿರಿಯ ಉದ್ಯೋಗಿಗಳಿಗೆ ಕೂಡ ಪಿಂಕ್ ಸ್ಲಿಪ್‌ಗಳನ್ನು ನೀಡಲಾಯಿತು.

ನೇಮಕಾತಿಗೆ ಬ್ರೇಕ್

ಉದ್ಯೋಗಿಗಳನ್ನು ನೇಮಕಮಾಡಿಕೊಳ್ಳುವ ಕ್ಯಾಂಪಸ್ ಆಯ್ಕೆಯಲ್ಲಿ ಕೂಡ ಕಡಿತವಾಯಿತು. ಐಟಿ ಕಂಪೆನಿಗಳು ಕಾಲೇಜುಗಳ ಕ್ಯಾಂಪಸ್‌ಗಳಿಗೆ ಹೋಗಿ ಮಾಡುವ ‘ಕ್ಯಾಂಪಸ್ ಹಯರಿಂಗ್’ನಲ್ಲಿ ಶೇ. 50-70ರಷ್ಟು ಇಳಿಕೆಯಾಯಿತು. ಇದಕ್ಕೆ ಮುಖ್ಯ ಕಾರಣ: ಈ ಹಿಂದೆ ಕಂಪೆನಿಗಳು ಭಾವೀ ಕಾಂಟ್ರಾಕ್ಟ್‌ಗಳ ನಿರೀಕ್ಷೆಯಲ್ಲಿ ಆಗ ತಾನೇ ಪದವಿ ಪಡೆದ / ಪಡೆಯಲಿರುವ ‘ಫ್ರೆಶರ್ಸ್‌’ನ್ನು ಮುಂಗಡವಾಗಿಯೇ ನೌಕರಿಗೆ ನೇಮಿಸಿಕೊಳ್ಳುತ್ತಿದ್ದವು: ಆದರೆ ಈಗ, ಬೇಕಾದಾಗ ಮಾತ್ರ ತೆಗೆದುಕೊಳ್ಳುವ, ಕಾಂಟ್ರಾಕ್ಟ್ ಖಚಿತವಾದ ಮೇಲೆಯೇ ನೌಕರಿಗೆ ನೇಮಿಸಿಕೊಳ್ಳುವ ತಂತ್ರವನ್ನು ಅನುಸರಿಸಲಾಗುತ್ತಿದೆ.

ಈಗ ಹಲವು ವರ್ಷಗಳಿಂದ ಐಟಿ ಕಂಪೆನಿಗಳು ಹೆಚ್ಚು ನೌಕರರನ್ನು ನೇಮಿಸಿಕೊಳ್ಳಬೇಕಾಗುವ ‘ಲೇಬರ್ ಇಂಟೆನ್ಸಿವ್’ ಪ್ರಾಜೆಕ್ಟ್‌ಗಳಿಂದ ದೂರ ಸರಿದು ವೀಡಿಯೊ ಕಾನ್ಫರೆನ್ಸಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ಹೆಚ್ಚು ರಿಮೋಟ್ ಆದ, ತಂತ್ರಜ್ಞಾನ ಆಧಾರಿತ ಪರಿಹಾರಗಳ ಕಡೆಗೆ ವಾಲುತ್ತಿದೆ. ಇದರಿಂದಾಗಿ ಡಾಟಾ ಎಂಟ್ರಿ ಮತ್ತು ಸರ್ವರ್ ಮೈಂಟನನ್ಸ್‌ನಂತಹ ನೂರಾರು ಪ್ರವೇಶ ಮಟ್ಟದ ನೌಕರಿಯ ಪಾತ್ರಗಳು (ಕೆಲಸಗಳು) ತೀರಾ ಹಳತಾಗಿ ಹೋಗಿವೆ. ಈ ಮಟ್ಟದ ನೌಕರಿಗಳಿಗೆ ಮನುಷ್ಯರೇ ಬೇಡವಾಗಿ ಎಲ್ಲವನ್ನು ಯಂತ್ರಗಳೇ ನಿರ್ವಹಿಸುವಂತಾಗಿದೆ.

 ಹಾಗಾಗಿ, ಐಟಿ ಉದ್ಯೋಗ ಮಾರುಕಟ್ಟೆ ಹಿಂದೊಮ್ಮೆ ಇದ್ದಷ್ಟು ಆಕರ್ಷಕವಾಗಿ ಈಗ ಉಳಿದಿಲ್ಲ. ಮುಂದಿನ ಕೆಲವು ವರ್ಷಗಳವರೆಗೆ ಈ ಕನಸಿನ ನಾಗಾಲೋಟ ಸ್ಥಗಿತಗೊಂಡಿದೆ, ಎನ್ನುತ್ತಾರೆ ಓರ್ವ ಸಂಶೋಧನಾ ನಿರ್ದೇಶಕ ಡಿ.ಡಿ ಮಿಶ್ರಾ. ದೀರ್ಘಕಾಲಿಕವಾಗಿ ಹೊಸ ಹೊಸ ಕೌಶಲ್ಯ ಹೊಂದಿರುವ ನೌಕರಿಗೆ ಆಟೊಮೇಶನ್ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಬಹುದು; ಆದರೆ ಕೆಳ ಮಟ್ಟದ ನೌಕರರು ನೌಕರಿ ಕಳೆದುಕೊಳ್ಳುತ್ತಲೇ ಇರುತ್ತಾರೆ. 2022ರ ವೇಳೆಗೆ, ಭಾರತದ ಐಟಿ ರಂಗದಲ್ಲಿ ಕೆಳಮಟ್ಟದ ಕೌಶಲ್ಯ ಹೊಂದಿರುವ ಒಟ್ಟು ನೌಕರರ ಸುಮಾರು ಮೂರನೇ ಒಂದರಷ್ಟು, ಅಂದರೆ 7,00,000 ನೌಕರರು ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ, ಎನ್ನುತ್ತದೆ ಮಾರುಕಟ್ಟೆ ವಿಶ್ಲೇಷಣೆಯ ಎಚ್‌ಎಫ್‌ಎಸ್ ರಿಸರ್ಚ್ ಎಂಬ ಸಂಸ್ಥೆಯ ಒಂದು ವರದಿ. ಭಾರತದ ಟೆಕ್ಕಿಗಳಲ್ಲಿ ಶೇ. 5ಮಂದಿ ಟೆಕ್ಕಿಗಳು ಕೂಡ ತರಬೇತಿ ಪಡೆದ ಮೇಲುಮಟ್ಟದ ಕೌಶಲ್ಯ ಬೇಡುವ (ಹೈ-ಸ್ಕಿಲ್ಡ್) ನೌಕರಿಗಳನ್ನು ಮಾಡಲು ಸಮರ್ಥರಿಲ್ಲ.

ತರಬೇತಿ ಪಡೆದ ಪ್ರತಿಭೆಯ ಕೊರತೆ ವಿಶೇಷವಾಗಿ ಆತಂಕ ಉಂಟುಮಾಡುತ್ತದೆ. ಯಾಕೆಂದರೆ ಮುಂದಿನ ಕೆಲವು ವರ್ಷಗಳೊಳಗಾಗಿ ಕಡಿಮೆ ಕೌಶಲ್ಯವಿರುವ ಟೆಕ್ ಉದ್ಯೋಗಗಳ ಸುಮಾರು ಶೇ. 40 ಭಾಗವನ್ನು ಡಾಟಾ ವಿಜ್ಞಾನಿ ಮತು ಡಾಟಾ ಅನಲಿಸ್ಟ್‌ರಂತಹ ಹೆಚ್ಚು-ವೇತನ (ಹೈ-ಪೇಯಿಂಗ್)ಪಡೆಯುವ ಉದ್ಯೋಗಿಗಳು ಆಕ್ರಮಿಸಿಕೊಳ್ಳುತ್ತಾರೆ, ಎನ್ನುವುದು ನೇಮಕಾತಿ ಮಾಡಿಕೊಳ್ಳುವ ಕಂಪೆನಿಯಾಗಿರುವ ‘ಹೆಡ್ ಹಂಟರ್ಸ್‌ ಇಂಡಿಯಾ’ದ ಸ್ಥಾಪಕ ಕ್ರಿಸ್ ಲಕ್ಷ್ಮೀಕಾಂತ್‌ರವರ ಅಭಿಪ್ರಾಯ. ಇದೇ ವೇಳೆ ನೌಕರಿ ಕಡಿತಗಳು ಮತ್ತು ನಂಬಬಹುದಾದ ನೌಕರಿಯ ಅವಕಾಶಗಳ ಕೊರತೆಯು ಉದ್ಯೋಗಿಗಳ ಪಾಲಿಗೆ ಮಾನಸಿಕ ಹಾಗೂ ಭಾವನಾತ್ಮಕ ಗಂಡಾಂತರ ತಂದಿದೆ. ಕೈಯಲ್ಲಿ ಕಾಸಿಲ್ಲದ ಸ್ಥಿತಿ, ಆತಂಕ, ಖಿನ್ನತೆ ಆತ್ಮವಿಶ್ವಾಸದ ಕುಸಿತ ಮತ್ತು ಮೋಟಿವೇಶನ್‌ನ ಕೊರತೆಯ ವಿರುದ್ಧ ಹೋರಾಡುತ್ತ ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಆಘಾತಕ್ಕೊಳಗಾಗುತ್ತಿದ್ದಾರೆ.

‘ಅಮೆರಿಕ ಫಸ್ಟ್’ ಎಂಬುದರ ಅಡ್ಡಪರಿಣಾಮಗಳು 2017ರ ಆದಿಯಲ್ಲಿ ಶ್ವೇತಭವನಕ್ಕೆ ಡೊನಾಲ್ಡ್ ಟ್ರಂಪ್‌ರವರ ಆಗಮನವಾಯಿತಾದರೂ ಅದರಿಂದ ಐಟಿ ರಂಗಕ್ಕೆ ಏನೂ ಸಹಾಯವಾಗಿಲ್ಲ.

ಭಾರತದ ಐಟಿ ಕಂಪೆನಿಗಳು ಉದ್ಯೋಗಿಗಳ ನೇಮಕಾತಿಗಾಗಿ ಅವಲಂಬಿಸುವ, ಆರು ವರ್ಷಗಳ ತಾತ್ಕಾಲಿಕ ನೌಕರಿ ವೀಸಾ ಆಗಿರುವ ಎಚ್-1ಬಿ ವೀಸಾದ ಗತಿ ಇನ್ನೂ ತೂಗುಯ್ಯಾಲೆಯಲ್ಲಿ ಇದೆ. ಐಟಿ ಉದ್ಯೋಗಿಗಳ, ಉದ್ಯೋಗ ರಂಗದ ಆತಂಕ, ಅಭದ್ರತೆ ಬೇಗನೆ ಅಂತ್ಯಗೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ. ವಿಶ್ಲೇಷಕರ ಪ್ರಕಾರ, ಮುಂದಿನ ದಿನಗಳಲ್ಲಿ ಆಟೊಮೇಶನ್ ಭಾರತದ ಐಟಿ ನೌಕರಿ ರಂಗದಲ್ಲಿ ಸುಮಾರು ಶೇ. 70 ನೌಕರರ ಭವಿಷ್ಯವನ್ನು ಅಪಾಯಕ್ಕೆ ತಳ್ಳಲಿದೆ. 2020ರ ಬಳಿಕವಷ್ಟೇ ನೌಕರಿಯ ಹೊಸ ಅವಕಾಶಗಳು ಸೃಷ್ಟಿಯಾಗಬಹುದು ಎನ್ನಲಾಗಿದೆ.

ಕೃಪೆ: QZ.COM

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಅನನ್ಯಾ ಭಟ್ಟಾಚಾರ್ಯ
ಅನನ್ಯಾ ಭಟ್ಟಾಚಾರ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X