ಕೇಂದ್ರೀಯ ವಿದ್ಯಾಲಯಗಳಲ್ಲಿ ನಡೆಯುವ ಸಂಸ್ಕೃತ ಪ್ರಾರ್ಥನೆಗಳು
ಯಾಕೆ ಜಬಲ್‌ಪುರದ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡುವಂತೆ ಮಾಡಿದೆ?

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ ಈ ಶ್ಲೋಕಗಳು ‘ಹಿಂದೂ ಧರ್ಮವನ್ನು ಆಧರಿಸಿರುವ’ ಶ್ಲೋಕಗಳು; ಅವುಗಳ ಕಡ್ಡಾಯ ಪಠಣವು ‘ಧಾರ್ಮಿಕ ಶಿಕ್ಷಣ’ಕ್ಕೆ ಸಮನಾಗುತ್ತದೆ; ಮತ್ತು ಇದು ಸಂವಿಧಾನದ 28ನೇ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತದೆ.
ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕರೊಬ್ಬರು, ಪ್ರತಿದಿನ ಬೆಳಗ್ಗೆ ಶಾಲೆಯ ಅಸೆಂಬ್ಲಿಯಲ್ಲಿ ಕಡ್ಡಾಯವಾಗಿ ಮಕ್ಕಳಿಂದ ಹಾಡಿಸುವ ಅಸತೋಮಾ ಸದ್ಗಮಯ ಎಂಬ ಸಂಸ್ಕೃತ ಪ್ರಾರ್ಥನೆಯು ವೈಜ್ಞಾನಿಕ ಮನೋಭಾವದ ಕತ್ತು ಹಿಸುಕುತ್ತದೆ ಹಾಗೂ ಶಾಲಾ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಕುಂಠಿತಗೊಳಿಸುತ್ತದೆಂದು ತನಗನ್ನಿಸುತ್ತದೆ ಎನ್ನುತ್ತಾರೆ.
ಕೇಂದ್ರ ಸರಕಾರ ನಡೆಸುವ ಹಲವಾರು ಶಾಲೆಗಳ ಕಾರ್ಯವಿಧಾನವನ್ನು ಪರಿಶೀಲಿಸುವ, ಈ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುವ ಒಂದು ಸಂಘಟನೆಯಾಗಿರುವ ‘ಕೇಂದ್ರೀಯ ವಿದ್ಯಾಲಯ ಸಂಘಟನ್’ನ ಓರ್ವ ಉದ್ಯೋಗಿಯಾಗಿ, ಆ ಶಿಕ್ಷಕರಿಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಲು ಅನುಮತಿ ನಿರಾಕರಿಸಲಾಯಿತು. ಆದ್ದರಿಂದ ಅವರ ಓರ್ವ ಗೆಳೆಯ ಮತ್ತು ಸಹ ನಾಸ್ತಿಕ, ಜಬಲ್‌ಪುರದ ಓರ್ವ ವಕೀಲ ವಿನಾಯಕ್ ಶಾ ಆ ಸಂಘಟನೆಯ ವಿರುದ್ಧ ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಆ ಶಿಕ್ಷಕರು ತನ್ನ ಗುರುತನ್ನು ಬಹಿರಂಗಪಡಿಸದಂತೆ ವಿನಂತಿಸಿಕೊಂಡಿದ್ದಾರೆ. ಕೇಂದ್ರೀಯ ವಿದ್ಯಾಲಯ ಸಂಘಟನೆಯು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿಯಂತ್ರಣಕ್ಕೊಳಪಟ್ಟಿದ್ದು ಭಾರತದಾದ್ಯಂತ 1,000ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ.
ವಿನಾಯಕ್ ಶಾ, ಒಂದು ಅಂಬೇಡ್ಕರ್‌ವಾದಿ ತಂಡವಾಗಿರುವ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ನೌಕರರ ಫೆಡರೇಶನ್‌ನ ಓರ್ವ ಸದಸ್ಯರಾಗಿದ್ದಾರೆ. ಎಲ್ಲ ಕೇಂದ್ರೀಯ ಸಂಘಟನ್ ಶಾಲೆಗಳಿಗೆ ತರಲಾಗಿರುವ ಪರಿಷ್ಕೃತ ‘ಶಿಕ್ಷಣ ಸಂಹಿತೆ’ಯನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. 2012ರಲ್ಲಿ ಸಿದ್ಧಪಡಿಸಿ, 2013ರಿಂದ ಅನುಷ್ಠಾನಗೊಳಿಸಲಾಗಿರುವ ಈ ಸಂಹಿತೆಯ ನಿಯಮಾವಳಿಗಳ ಪ್ರಕಾರ ಶಾಲೆಗಳಲ್ಲಿ ಬೆಳಗ್ಗೆ ನಡೆಯುವ ಶಾಲಾ ಅಸೆಂಬ್ಲಿಗಳು ಒಂದು ‘ಸಮಾನ ಪ್ರಾರ್ಥನೆ’ಯಾಗಿ ಸಂಸ್ಕೃತ ಶ್ಲೋಕಗಳಿಂದ ಆರಂಭವಾಗಿ ‘ಓಮ್ ಸಹಾನಾವವತು’ ಅಥವಾ ‘ದೇವರು ನಮ್ಮಿಬ್ಬರನ್ನೂ ರಕ್ಷಿಸಲಿ’ ಎಂಬ ಪ್ರಾರ್ಥನೆಯೊಂದಿಗೆ ಕೊನೆಗೊಳ್ಳಬೇಕು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಶ್ಲೋಕಗಳ ಪ್ರಾರ್ಥನೆ ದಶಕಗಳಿಂದ ನಡೆದು ಬಂದಿದೆ. ರಾಜ್ಯದ ಹಲವಾರು ಸರಕಾರಿ ಶಾಲೆಗಳಲ್ಲೂ ಈ ಪ್ರಾರ್ಥನೆ ನಡೆಯುತ್ತ ಬಂದಿದೆ. ಹಾಗೆಯೇ ಅಸತೋ ಮಾ ಸದ್ಗಮಯದ ಬಳಿಕ ನಡೆಯುವ ಒಂದು ಹಿಂದಿ ಪ್ರಾರ್ಥನೆ ಕೂಡಾ ಬಹಳ ಸಮಯದಿಂದ ಕೇಂದ್ರೀಯ ವಿದ್ಯಾಲಯದ ಒಂದು ಪರಂಪರೆಯಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ ಈ ಶ್ಲೋಕಗಳು ‘ಹಿಂದೂ ಧರ್ಮವನ್ನು ಆಧರಿಸಿರುವ’ ಶ್ಲೋಕಗಳು; ಅವುಗಳ ಕಡ್ಡಾಯ ಪಠಣವು ‘ಧಾರ್ಮಿಕ ಶಿಕ್ಷಣ’ಕ್ಕೆ ಸಮನಾಗುತ್ತದೆ; ಮತ್ತು ಇದು ಸಂವಿಧಾನದ 28ನೇ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತದೆ. ಈ ನಿಯಮ ಹೀಗೆ ಹೇಳುತ್ತದೆ: ‘‘ಸರಕಾರದ ಧನಸಹಾಯದಿಂದ ನಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಯಾವುದೇ ರೀತಿಯ ಧಾರ್ಮಿಕ ಶಿಕ್ಷಣ ನೀಡಕೂಡದು.’’ ಡಿಸೆಂಬರ್ ತಿಂಗಳಲ್ಲಿ ಸಲ್ಲಿಸಲಾದ ಅರ್ಜಿಯು, ಈ ರೀತಿಯ ಪ್ರಾರ್ಥನಾ ಕ್ರಮವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಬಹಳ ಅಡೆ ತಡೆಗಳನ್ನುಂಟುವಾಡುತ್ತದೆ.’’ ಎಂದೂ ಹೇಳುತ್ತದೆ.
ಜನವರಿ 10ರಂದು ಸುಪ್ರೀಂ ಕೋರ್ಟ್, ಅರ್ಜಿಗೆ ಉತ್ತರಿಸುವಂತೆ ಹೇಳಿ ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್‌ಗಳನ್ನು ನೀಡಿತು. ‘‘ಸಾಂವಿಧಾನಿಕವಾಗಿ ಅನುಮತಿ ನೀಡುವಂತಿಲ್ಲ.’’
ಅರ್ಜಿಯಲ್ಲಿ ಮಾಡಲಾಗಿರುವ ಮೊದಲ ಆಕ್ಷೇಪಣೆ ಅಂದರೆ, ತಮ್ಮ ಧರ್ಮ ಯಾವುದೇ ಇರಲಿ; ಎಲ್ಲ ವಿದ್ಯಾರ್ಥಿಗಳೂ ‘‘ಅವರ ಕಣ್ಣುಗಳನ್ನು ಮುಚ್ಚಿ ಹಾಗೂ ಕೈಗಳನ್ನು ಜೋಡಿಸಿ’’ ಬಂದು ಗೌರವಾನ್ವಿತ ರೀತಿಯಲ್ಲಿ ಪ್ರಾರ್ಥನೆ ಮಾಡಲೇಬೇಕು. ಅರ್ಜಿಯಲ್ಲಿ ಮೊದಲ ಪ್ರಾರ್ಥನೆಯನ್ನು ಅನುವಾದಿಸಿ, ಅಸತೋ ಮಾ ಸದ್ಗಮಯ ಎಂಬುದನ್ನು ಹೀಗೆ ನೀಡಲಾಗಿದೆ: ಓ ದೇವರೇ ನನ್ನನ್ನು ಅಸತ್ಯದಲ್ಲಿಡಬೇಡ; ಬದಲಾಗಿ ಸತ್ಯದ ವಾಸ್ತವದ ಕಡೆಗೆ ನನ್ನನ್ನು ನಡೆಸು. ನನ್ನನ್ನು ಸಾವಿನ ಭಯದಲ್ಲಿ ಇರಿಸಬೇಡ, ಅಮರತ್ವದೆಡೆಗೆ ನಡೆಸು. ‘‘ಓಂ ಶಾಂತಿಃ ಶಾಂತಿಃ ಶಾಂತಿಃ’’

‘‘ಪೋಷಕರು ಮತ್ತು ಅಲ್ಪಸಂಖ್ಯಾತ ಸಮುದಾಯದವರ ಮಕ್ಕಳು ಹಾಗೂ ನಾಸ್ತಿಕರು, ಈ ಪ್ರಾರ್ಥನಾ ವ್ಯವಸ್ಥೆಯನ್ನು ಒಪ್ಪದ ಅನುಮಾನವಾದಿಗಳು ಹಾಗೂ ವೈಚಾರಿಕರು (ಸ್ಕೆಪ್ಟಿಕ್ಸ್), ವಿಚಾರವಾದಿಗಳು ಹಾಗೂ ಇತರರು, ಈ ಪ್ರಾರ್ಥನೆಯನ್ನು ಅವರ ಮೇಲೆ ಹೇರುವುದನ್ನು ಸಾಂವಿಧಾನಿಕವಾಗಿ ಅನುಮತಿಸಲಾಗದ್ದು ಎಂದು ಪರಿಗಣಿಸುತ್ತಾರೆ’’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಅಲ್ಲದೆ ಈ ಪ್ರಾರ್ಥನಾ ಕ್ರಮವು ವ್ಯಕ್ತಿಯ ‘‘ಧರ್ಮವನ್ನು ಹೊಂದುವ, ಆಚರಿಸುವ ಮತ್ತು ಪ್ರಸಾರ ಮಾಡುವ’’ ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಘಿಸುತ್ತದೆ ಎಂಬ ನೆಲೆಯಲ್ಲೂ ಪ್ರಾರ್ಥನೆಯನ್ನು ಶಾ ಪ್ರಶ್ನಿಸಿದ್ದಾರೆ.
‘‘ನಾನೋರ್ವ ನಾಸ್ತಿಕ’’ ‘‘ನೀವು ಹೇಗೆ ಈ ಮೊಕದ್ದಮೆಯಲ್ಲಿ ತೊಡಗಿಸಿದ್ದೀರಿ’’ ಎಂಬ ಪ್ರಶ್ನೆಗೆ, ಶಾ ಉತ್ತರಿಸಿದ್ದು ಹೀಗೆ: ‘‘ಮೂಲತಃ, ನಾನೊಬ್ಬ ನಾಸ್ತಿಕ.’’ ಸುಮಾರು 2012ರ ವರೆಗೆ ಅವರು ತುಂಬಾ ಧಾರ್ಮಿಕ’’ರಾಗಿದ್ದರು. 1990ರ ದಶಕದಲ್ಲಿ ಅವರ ವಿದ್ಯಾರ್ಥಿ ದಿನಗಳಲ್ಲಿ ಅವರು ಹಲವಾರು ಎಡಪಂಥೀಯ ಸಂಘಟನೆಗಳೊಂದಿಗೆ ಹೊಂದಿದ್ದ ದೀರ್ಘ ಕಾಲದ ನಂಟಿನ ಹೊರತಾಗಿಯೂ ಅವರು ಧಾರ್ಮಿಕನಾಗಿಯೇ ಇದ್ದರು.
2011-12ರ ಸುಮಾರಿಗೆ, ಇಬ್ಬರು ವಕೀಲರು ಅವರನ್ನು ಅಂಬೇಡ್ಕರ್‌ವಾದಿಗಳು ನಡೆಸುತ್ತಿದ್ದ ಹಲವು ಸಾಮಾಜಿಕ ಮಾಧ್ಯಮ ಗುಂಪುಗಳಿಗೆ ಪರಿಚಯಿಸಿದರು. ಆ ಗುಂಪು/ತಂಡಗಳೊಂದಿಗೆ ನಡೆಸಿದ ಚರ್ಚೆಗಳು, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಶಾರವರನ್ನು ಯೋಚಿಸುವಂತೆ ಮಾಡಿದವು. ‘‘ಯಾವುದೇ ದೇವರು ದಲಿತರ ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಕೆಲಸ ಮಾಡಿದ್ದಾರೆಯೇ? ನಾವು ಸಾಯುವವರೆಗೆ ಕಾಯಬೇಕು ಎಂದು ಯಾಕೆ ದೇವರುಗಳು ಹೇಳುತ್ತಾರೆ? ಈಗ ಇರುವ ನಮ್ಮ ಯಾತನೆಯ ಬಗ್ಗೆ ಯಾಕೆ ಯಾವ ದೇವರೂ ಏನನ್ನೂ ಮಾಡುವುದಿಲ್ಲ? ಎಂದು ನನ್ನನ್ನು ಪ್ರಶ್ನಿಸಲಾಯಿತು’’ ಎನ್ನುತ್ತಾರೆ ಶಾ.
2012ರ ವೇಳೆಗೆ ಶಾ, ದೇವರು ಮತ್ತು ಧರ್ಮಕ್ಕೆ ವಿದಾಯ ಹೇಳಿದರು.
ಇಬ್ಬರು ಶಿಕ್ಷಕರು :
2015ರಲ್ಲಿ ಅಲ್ಲಿಯವರೆಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ಶಾಅವರ ಗೆಳೆಯರೊಬ್ಬರು, ಸಾಗರದ ಕೇಂದ್ರೀಯ ಶಾಲೆಯೊಂದರಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ನೇಮಕವಾಗುವ ಮೊದಲು ಅವರು ಕಡ್ಡಾಯವಾಗಿ ಪಡೆಯಲೇ ಬೇಕಾಗಿದ್ದ ತರಬೇತಿಯು ಅವರನ್ನು ಜಬಲ್‌ಪುರಕ್ಕೆ ಕರೆತಂದಿತು; ಓರ್ವ ನಾಸ್ತಿಕ ಹಾಗೂ ವಿಚಾರವಾದಿಯಾಗಿದ್ದ ಅವರನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಶಿಕ್ಷಣ ಸಂಹಿತೆಗೆ ಪರಿಚಯಿಸಿತು. ಮತ್ತು ಶಾರೊಂದಿಗೆ ಅವರನ್ನು ಪುನಃ ಒಂದಾಗಿಸಿತು.
ಆ ಶಿಕ್ಷಕರು ಬಹುಪಾಲು ಕೂಡಲೇ ಶಿಕ್ಷಣ ಸಂಹಿತೆಯ ವಿರುದ್ಧ ಬಂಡಾಯ ಹೂಡಿದರು. ಮೊದಲು, ತರಬೇತಿ ಕೇಂದ್ರಕ್ಕೆ ಹಿರಿಯ ಶಿಕ್ಷಕರು ಮತ್ತು ತರಬೇತುದಾರರು ಪ್ರವೇಶಿಸಿದಾಗ ಎದ್ದು ನಿಲ್ಲಲು ನಿರಾಕರಿಸುವ ಮೂಲಕ, ಮತ್ತು ಬಳಿಕ ಅದರ ಜತೆ ಪ್ರಾರ್ಥನೆ ಮಾಡಲು ನಿರಾಕರಿಸುವ ಮೂಲಕ ಅವರು ಪ್ರತಿಭಟಿಸಿದರು. ಬಳಿಕ, ಅವರದೇ ಶಾಲೆಯಲ್ಲಿ ಸಾಗರ್‌ನಲ್ಲಿ ಅವರು ಮಕ್ಕಳಿಗೆ, ಅವರಿಗೆ ಬೋಧಿಸಲಾಗುವ ಎಲ್ಲವನ್ನೂ, ಪ್ರಶ್ನಿಸುವಂತೆ ಹೇಳಲಾರಂಭಿಸಿದರು. ಪ್ರಾರ್ಥನೆಯ ನಿಯಮವನ್ನು ಮಕ್ಕಳ ಮೇಲೆ ಹೇರಲು ನಿರಾಕರಿಸಿದರು. ಅವರ ಪ್ರಕಾರ ‘‘ಪ್ರಾರ್ಥನೆಗಳು ಸಮಯವನ್ನು ಹಾಳುಮಾಡುವುದಕ್ಕೆ ಸಮಾನ (ವೇಸ್ಟ್ ಆಫ್ ಟೈಮ್)’’.
ಫೆಬ್ರವರಿ ತಿಂಗಳಲ್ಲಿ ಶಾಲೆಯಲ್ಲಿ ನಡೆದ ಸರಸ್ವತಿ ಪೂಜೆಯನ್ನು ತಡೆಯಲು ಅವರು ನಡೆಸಿದ ಪ್ರಯತ್ನಗಳಿಗಾಗಿ ಅವರಿಗೆ ಶೋ ಕಾಸ್ ನೋಟಿಸ್ ನೀಡಲಾಯಿತು. ಅದಕ್ಕೆ ಅವರು ಉತ್ತರಿಸಿದರು. ‘‘ಅವರು ಮೇಜಿನ ಮೇಲಿನಿಂದ ಸರಸ್ವತಿಯ ಪ್ರತಿಮೆಯನ್ನು ತೆಗೆದು ಆಚೆಗೆ ಇಟ್ಟಿದ್ದರು’’ ಎಂದಿದ್ದಾರೆ. ಶಾ.
2017ರ ಅಂತ್ಯದಲ್ಲಿ ಅವರು ಮತ್ತು ಶಾ, ಮಾಹಿತಿ ಹಕ್ಕು ಕಾಯ್ದೆ ಪ್ರಕಾರ, ಸಂಘಟನ್ ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು. ‘‘ ಯಾರ ಆಜ್ಞೆಯ ಪ್ರಕಾರ ದೇವತೆಯ ಮೂರ್ತಿಗಳನ್ನು ಹಾಗೂ ಫೋಟೊಗಳನ್ನು ಇಡಲಾಗುತ್ತಿದೆ? ಅವುಗಳು ಆಜ್ಞೆಗಳಲ್ಲ ಎಂದು ಸಂಘಟನ್ ಹೇಳಿತು’’ ಎಂದಿದ್ದಾರೆ ಶಾ. ಅಕ್ಟೋಬರ್ ವೇಳೆಗೆ ಶಾ ಮತ್ತು ಆ ಶಿಕ್ಷಕರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದರು.
(ಕೃಪೆ: Scroll.in)







