Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಲೋಯಾ ನಿಗೂಢ ಸಾವಿನ ಪ್ರಕರಣ

ಲೋಯಾ ನಿಗೂಢ ಸಾವಿನ ಪ್ರಕರಣ

ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಗಳು ವಿಚಾರಣೆಯ ದಾರಿ ತಪ್ಪಿಸುವ ತಂತ್ರವೇ?

ಅತುಲ್ ದೇವ್ಅತುಲ್ ದೇವ್22 Jan 2018 11:55 PM IST
share
ಲೋಯಾ ನಿಗೂಢ ಸಾವಿನ ಪ್ರಕರಣ

ಲೋಯಾ ಸಾವಿನ ಪ್ರಕರಣದ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ತೆಹ್ಸೀನ್ ಪೂನಾವಾಲಾ ಹಾಗೂ ಬಂಧುರಾಜ್ ಸಂಭಾಜಿ ಲೋನೆ ಅವರ ಹಿನ್ನೆಲೆಗಳು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತವೆ. ಲೋಯಾ ಪ್ರಕರಣದ ವಿಚಾರಣೆಯನ್ನು ಹಾದಿತಪ್ಪಿಸುವುದೇ ಈ ಅರ್ಜಿದಾರರ ಉದ್ದೇಶವಾಗಿದೆಯೆಂಬ ಸಂದೆೀಹಗಳು ಹಲವರನ್ನು ಕಾಡುತ್ತಿದೆ.

ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಕೋರಿ ಸಲ್ಲಿಸಲಾದ ಎರಡು ಅರ್ಜಿಗಳ ಆಲಿಕೆಯನ್ನು ಸುಪ್ರೀಂಕೋರ್ಟ್ ಪ್ರಸ್ತುತ ನಡೆಸುತ್ತಿದೆ. ನಿಧನರಾದ ಸಮಯದಲ್ಲಿ ಲೋಯಾ ಅವರು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಖ್ಯ ಆರೋಪಿಯಾಗಿದ್ದರು. ತೆಹ್ಸೀನ್ ಪೂನಾವಾಲಾ ಹಾಗೂ ಬಂಧುರಾಜ್ ಸಂಭಾಜಿ ಲೋನೆ ಈ ಅರ್ಜಿಗಳನ್ನು ಸಲ್ಲಿಸಿದ್ದರು.

ತೆಹ್ಸೀನ್ ಪೂನಾವಾಲಾ ಅವರನ್ನು ಮಾಧ್ಯಮಗಳು ಕಾಂಗ್ರೆಸ್ ನಾಯಕನೆಂದು ಗುರುತಿಸಿದ್ದರೆ, ಲೋನೆ ಮಾಜಿ ಪತ್ರಕರ್ತರಾಗಿದ್ದಾರೆ. ಆದಾಗ್ಯೂ, ಪೂನಾವಾಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ರುವುದಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಲೋನೆ ಈ ಮೊದಲು ಪತ್ರಕರ್ತರಾಗಿದ್ದರೂ, ಈಗ ಅವರು ಕಾರ್ಯನಿರ್ವಹಿಸುತ್ತಿಲ್ಲವೆನ್ನಲಾಗಿದೆ. ಪ್ರಸ್ತುತ ಆತ ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಅಶೀಶ್ ಶೆಲಾರ್ ಅವರ ಕಾರ್ಯಾಲಯದ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ರಾಜಕಾರಣಿಗಳ ಖಾಸಗಿ ಸಿಬ್ಬಂದಿಯಾಗಿ ಕೆಲಸ ಮಾಡುವ ಪತ್ರಕರ್ತರ ಸಾಲಿಗೆ ಆತ ಸೇರಿದ್ದಾರೆಂದು, ಹೆಸರು ಬಹಿರಂಗಪಡಿಸಲಿಚ್ಛಿಸದ ಮಾಜಿ ಪತ್ರಿಕಾ ಸಂಪಾದಕರೊಬ್ಬರು ಹೇಳುತ್ತಾರೆ. ಈ ಸಂಬಂಧ ಲೋನೆ ಅವರನ್ನು ಸಂಪರ್ಕಿಸಿದಾಗ ಆತ ಅದಕ್ಕೆ ಉತ್ತರಿಸಲು ನಿರಾಕರಿಸಿದ್ದರು.

ಲೋನೆ ಸುಮಾರು ಒಂದು ದಶಕದಿಂದ ಮಹಾನಗರ ಮರಾಠಿ ದಿನಪತ್ರಿಕೆ ‘ಮಹಾನಗರ್’ನ ವರದಿಗಾರರಾಗಿದ್ದರು. ಆನಂತರ ಅವರು ಲೋಕಸತ್ತಾ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಆದರೆ ಅವರೊಂದಿಗೆ ಕೆಲಸ ಮಾಡಿದ್ದ ಮಾಜಿ ಸಂಪಾದಕರು ಹಾಗೂ ಸಹದ್ಯೋಗಿಗಳು ಹೇಳುವ ಪ್ರಕಾರ, 2010ರ ವೇಳೆಗೆ ಲೋನೆ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿದ್ದರು. ಆನಂತರ ಒಂದೆರಡು ವರ್ಷದವರೆಗೆ ಅವರು ಮುಂಬೈನಲ್ಲೇ ಇದ್ದಿರಲಿಲ್ಲ. ಲೋನೆಗೆ ಬಿಜೆಪಿ ನಾಯಕರ ಜೊತೆ ನಂಟಿರುವುದನ್ನು ದೃಢಪಡಿಸುವ ಘಟನೆಯೊಂದನ್ನು ಅವರ ಮಾಜಿ ಸಹದ್ಯೋಗಿಯೊಬ್ಬರು ಸ್ಮರಿಸಿಕೊಳ್ಳುತ್ತಾರೆ. ‘‘ಲೋನೆ ಅವರು ಮುಂಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಮೀಪವಿರುವ ತ್ರಿಸ್ಟಾರ್ ಹೊಟೇಲೊಂದರ ಲಾಬಿಯಲ್ಲಿ ಕುಳಿತು ಕೊಂಡಿದ್ದರು. ನಾನವರ ಬಳಿಗೆ ಬಂದು, ತಾವಿಲ್ಲಿ ಏನು ಮಾಡುತ್ತಿದ್ದೇರೆಂದು ಕೇಳಿದರೆ, ತಾನು ಯಾರೊ ಒಬ್ಬರಿಗೆ ಕಾಯುತ್ತಿರುವುದಾಗಿ ಆತ ಉತ್ತರಿಸಿದರು. ನಾವಿಬ್ಬರೂ ಮಾತನಾಡುತ್ತಾ ಕುಳಿತಿದ್ದಾಗ, ಅಲ್ಲಿಗೆ ಬಿಜೆಪಿ ನಾಯಕ, ಹಾಲಿ ಶಾಸಕ ಪರಾಗ್ ಅಲ್ವಾನಿ ಆಗಮಿಸಿದ್ದರು. ಆಗ ನಾನು ಲೋನೆ ಜೊತೆಗೆ ತಾವು ಪರಾಗ್ ಅಲ್ವಾನಿಯವರಿಗಾಗಿ ಕಾಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಲೋನೆ ಹೌದೆಂದಿದ್ದರು’’ ಎಂದವರು ನೆನಪಿಸಿಕೊಳ್ಳುತ್ತಾರೆ.

ತನಗೆ ಬಿಜೆಪಿ ಜೊತೆ ಸಂಪರ್ಕವಿದೆಯೆಂದು ಹೇಳಿಕೊಳ್ಳುವುದಕ್ಕೆ ಲೋನೆಗೆ ಯಾವುದೇ ಮುಜುಗರವಿಲ್ಲವೆಂದು ‘ಲೋಕ್‌ಸತ್ತಾ’ದ ಸಂಪಾದಕರಾಗಿದ್ದ ಕುಮಾರ್ ಕೇತ್ಕರ್ ಹೇಳುತ್ತಾರೆ. ಸ್ವತಃ ಆಶೀಶ್ ಅವರು ತಾನು ಶೆಲಾರ್ ಅವರ ನಿಕಟವರ್ತಿಯೆಂದು ಹೇಳಿಕೊಳ್ಳುತ್ತಾರೆ ಎಂದವರು ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಸೂರಜ್ ಲೊಲಗೆ ಅವರು ಲೋಯಾ ಸಾವು ಹಾಗೂ 2015ರ ನವೆಂಬರ್‌ನಲ್ಲಿ ಎರಡು ದಿನಗಳ ಕಾಲ ನಾಪತ್ತೆಯಾದ ಬಳಿಕ ನಾಗ್ಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶವವಾಗಿ ಪತ್ತೆಯಾದ ನ್ಯಾಯವಾದಿ ಶ್ರೀಕಾಂತ್ ಖಾಂಡಲ್ಕರ್ ಅವರ ನಿಗೂಢ ಸಾವಿನ ಪ್ರಕರಣಗಳ ತನಿಖೆಗೆ ಆಗ್ರಹಿಸಿ, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಎರಡೂ ಪ್ರಕರಣಗಳ ತನಿಖೆಯು ಬಿಜೆಪಿಯಾಗಲಿ ಅಥವಾ ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ನಡೆಯಬೇಕೆಂದು ಸೂರಜ್ ಲೊಲಗೆ ಆಗ್ರಹಿಸಿದ್ದರು.

 ಈ ಅರ್ಜಿಯು ಸಲ್ಲಿಕೆಯಾದ ದಿನವೇ, ಲೋಯಾ ಸಾವಿನ ಪ್ರಕರಣದ ತನಿಖೆಗೆ ಕೋರಿ ಲೋನೆ ಸಲ್ಲಿಸಿದ ಅರ್ಜಿಯು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಮಾರನೆಯ ದಿನವೇ ಅರ್ಜಿಯ ವಿಚಾರಣೆ ನಡೆಸಲು ಮಿಶ್ರಾ ಒಪ್ಪಿದ್ದರು. ತ್ವರಿತ ವಿಚಾರಣೆ ಕೋರಿ ಸಲ್ಲಿಕೆಯಾದ ಅರ್ಜಿಗಳು ಪ್ರತಿವಾರವೂ ತಿರಸ್ಕೃತಗೊಳ್ಳುತ್ತಿರುವಾಗ, ಲೋನೆಯ ಅರ್ಜಿಯನ್ನು, ಇಷ್ಟೊಂದು ವೇಗದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಬಗ್ಗೆ ಹಿರಿಯ ನ್ಯಾಯವಾದಿ ದುಶ್ಯಂತ್ ದಾವೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆನಂತರ ಸಿಜೆಐ ಅವರು ಲೋಯಾ ಸಾವಿನ ಪ್ರಕರಣದ ತನಿಖೆಯನ್ನು ಹಿರಿಯ ನ್ಯಾಯಾಧೀಶರ ಪೀಠಗಳಿಗೆ ಒಪ್ಪಿಸುವ ಬದಲು ಕೋರ್ಟ್ ಸಂಖ್ಯೆ 10ರ ಹಾಲಿ ನ್ಯಾಯಾಧೀಶ ಅರುಣ್ ಮಿಶ್ರಾ ಅವರಿಗೆ ಒಪ್ಪಿಸಿದ್ದರು.

 ಜನವರಿ 12ರಂದು ಲೋಯಾ ಸಾವಿನ ಪ್ರಕರಣದ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಜನವರಿ 22ಕ್ಕೆ ನಿಗದಿ ಪಡಿಸಿದೆ. ಜನವರಿ 12ರಂದೇ ಸುಪ್ರೀಂಕೋರ್ಟ್, ಇದೇ ಪ್ರಕರಣಕ್ಕೆ ಸಂಬಂಧಿಸಿ ಪೂನಾವಾಲಾ ಸಲ್ಲಿಸಿದ ಅರ್ಜಿಯನ್ನು ಒಟ್ಟುಗೂಡಿಸಿ, ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆ ದಿನವೇ ಸುಪ್ರೀಂಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ, ಲೋಯಾ ಪ್ರಕರಣ ಸೇರಿದಂತೆ ನಿರ್ದಿಷ್ಟ ಪ್ರಕರಣಗಳ ವಿಚಾರಣೆಯನ್ನು ಕೆಲವು ನಿರ್ದಿಷ್ಟ ನ್ಯಾಯಪೀಠಗಳಿಗೆ ಮಾತ್ರವೇ ವಹಿಸಲಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು, ‘‘ಪೂನಾವಾಲಾ ಅವರಿಗೆ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠದಿಂದ ಪ್ರಕರಣವನ್ನು ಹಿಂಪಡೆಯಬೇಕೆಂದು ಸಲಹೆ ನೀಡಿದ್ದೆ. ಅದರೆ ಪೂನಾವಾಲಾ ಈ ಸಲಹೆಯನ್ನು ತಿರಸ್ಕರಿಸಿದ್ದರು’’ ಎಂದು ಬಹಿರಂಗಪಡಿಸಿದ್ದಾರೆ.

ಇದಕ್ಕೆ ಬದಲಾಗಿ ಪೂನಾವಾಲಾ ತನ್ನ ವಿರುದ್ಧವೇ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆಂದು ದವೆ ಹೇಳಿದ್ದಾರೆ. ‘‘ಅರುಣ್ ಮಿಶ್ರಾ ಅವರು ದೀಪಕ್ ಮಿಶ್ರಾ ಅವರ ಹಿಂಬಾಲಕರಾಗಿದ್ದು, ಅವರನ್ನು ನಂಬಲಾಗದು. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಹಿಂಪಡೆಯುವಂತೆ ನಾನು ಅವರ ಮೇಲೆ ಒತ್ತಡ ಹೇರಿದ್ದೇನೆಂದು ಪೂನಾವಾಲಾ ಆರೋಪಿಸಿದ್ದರು’’ ಎಂದು ದುಷ್ಯಂತ್ ದವೆ ಹೇಳಿದ್ದಾರೆ.

 ಲೋಯಾ ಸಾವಿನ ಪ್ರಕರಣದ ಆಲಿಕೆ ನಡೆದ ಸಂದರ್ಭದಲ್ಲಿ ಕೋರ್ಟ್ ಸಂ.10ರ ಒಳಗೆ ಹಾಗೂ ಹೊರಗಡೆ ಬಿಜೆಪಿ ಆಡಳಿತದ ವಿವಿಧ ರಾಜ್ಯ ಸರಕಾರಗಳನ್ನು ಪ್ರತಿನಿಧಿಸುವ ನ್ಯಾಯವಾದಿಗಳು ಹಾಗೂ ಅಮಿತ್ ಶಾ ಅವರ ನಿಕಟವರ್ತಿಯೆನ್ನಲಾದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಉಪಸ್ಥಿತರಿದ್ದರೆಂದು, ದುಷ್ಯಂತ್ ದಾವೆ ಆನ್‌ಲೈನ್ ಪತ್ರಿಕೆ ಬಾರ್ ಆ್ಯಂಡ್ ಬೆಂಚ್‌ನಲ್ಲಿ ಜನವರಿ 19ರಂದು ಪ್ರಕಟಿಸಿದ ಲೇಖನವೊಂದರಲ್ಲಿ ತಿಳಿಸಿದ್ದಾರೆ.

 ಅರ್ಜಿದಾರರಾದ ಲೋನೆ ಹಾಗೂ ಪೂನಾವಾಲಾ ಇಬ್ಬರೂ ಮುಂಬೈನವರಾದರೂ, ಅವರು ತಮ್ಮ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದು ಅಚ್ಚರಿಕರವಾಗಿದೆ. ಲೋಯಾ ಸಾವಿನ ಪ್ರಕರಣದ ತನಿಖೆ ಕೋರಿ ಬಾಂಬೆ ನ್ಯಾಯವಾದಿಗಳ ಸಂಘ ಸಲ್ಲಿಸಿದ ಅರ್ಜಿಯು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿರುವಾಗಲೇ, ಇವರಿಬ್ಬರು ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೆಟ್ಟ್ಟಿಲೇರಿರುವುದು ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಡುತ್ತದೆ.
ಪೂನಾವಾಲಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೇವಲ ಒಂದು ವಾರ ಮೊದಲು, ಅವರ ಸಹೋದರ, ಕಾಂಗ್ರೆಸ್ ನಾಯಕ ಶೆಹಝಾದ್ ಅವರು ಪಕ್ಷದೊಳಗೆ ಬಂಡಾಯದ ಧ್ವನಿಯೆತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಯು ರಾಹುಲ್ ಗಾಂಧಿ ಪರವಾಗಿಯೇ ಇರುವಂತೆ ಅಕ್ರಮ ನಡೆಸಲಾಗಿದೆಯೆಂದು ಶೆಹಝಾದ್ ಆಪಾದಿಸಿದ್ದರು. ಆಗ ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ಮೋದಿ, ಈ ‘ದಿಟ್ಟ’ ಹೇಳಿಕೆಗಾಗಿ ಶೆಹಝಾದ್ ಅವರನ್ನು ಪ್ರಶಂಸಿಸಿದ್ದರು. ಆನಂತರ ತೆಹ್ಸೀನ್ ಪೂನಾವಾಲಾ ಹೇಳಿಕೆಯೊಂದನ್ನು ನೀಡಿ, ತನಗೆ ಹಾಗೂ ತನ್ನ ಕುಟುಂಬಕ್ಕೆ ಈಗ ಶೆಹಝಾದ್ ಜೊತೆ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ನಡೆದ ಅರ್ಜಿಗಳ ಎರಡನೆ ಆಲಿಕೆಯ ಸಂದರ್ಭದಲ್ಲಿ ಹರೀಶ್ ಸಾಳ್ವೆ ಮಹಾರಾಷ್ಟ್ರ ಸರಕಾರದ ಪರವಾಗಿ, ವಕೀಲ ಪಲ್ಲವ್ ಸಿಸೋಡಿಯಾ ಅವರು ಲೋನೆ ಪರ ಹಾಗೂ ವಾರಿಂದರ್ ಕುಮಾರ್ ಶರ್ಮಾ ಅವರು ಪೂನಾವಾಲಾ ಪರವಾಗಿ ಹಾಜರಾಗಿದ್ದರು.

ಜನವರಿ 19ರಂದು ನಡೆದ ಆಲಿಕೆಯ ವೇಳೆ, ಲೋಯಾ ಸಾವಿನ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಯವರ ನ್ಯಾಯಪೀಠವು ಆಲಿಕೆಗೆ ಕೈಗೆತ್ತಿಕೊಂಡಿದೆ. ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಜನವರಿ 22ರಂದು ಪ್ರಕರಣದ ಆಲಿಕೆ ನಡೆಸಿದ್ದು, ಎರಡೂ ಅರ್ಜಿಗಳ ವಿಚಾರಣೆಯನ್ನು ಬಾಂಬೆ ಹೈಕೋರ್ಟಿಗೆ ವರ್ಗಾಯಿಸಿದೆ. ತನ್ನ ಮುಂದಿನ ಎರಡು ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೈಗೊಳ್ಳುವ ನಿರ್ಧಾರವು, ನಾಗ್ಪುರ ಹಾಗೂ ಮುಂಬೈನ ನ್ಯಾಯಾಲಯಗಳಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಮೇಲೂ ಪರಿಣಾಮ ಬೀರಲಿದೆ.

ಕೃಪೆ: www.caravanmagazine.in 

ಅರ್ಜಿದಾರ ಸಂಭಾಜಿ ಲೋನೆ ಅವರು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶೀಶ್ ಶೆಲಾರ್ ಅವರ ಕಾರ್ಯಾಲಯದಲ್ಲಿ ಸಾರ್ವಜನಿಕ ವಿಭಾಗದ ಜೊತೆ ಸಂಪರ್ಕ ಹೊಂದಿದ್ದಾರೆ. ಇನ್ನೋರ್ವ ಅರ್ಜಿದಾರ ತೆಹ್ಸೀನ್ ಪೂನಾವಾಲಾ ಅವರು ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ವೇಳೆ ರಾಹುಲ್ ವಿರುದ್ಧ ಭಿನ್ನಮತದ ಧ್ವನಿಯೆತ್ತಿದ್ದ ಶೆಹಝಾದ್ ಪೂನಾವಾಲಾ ಅವರ ಸೋದರ. 

share
ಅತುಲ್ ದೇವ್
ಅತುಲ್ ದೇವ್
Next Story
X