Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ರೈತರಿಗೆ ಬೇಕಾಗಿದೆ ಕೃಷಿ ಮಾರುಕಟ್ಟೆ

ರೈತರಿಗೆ ಬೇಕಾಗಿದೆ ಕೃಷಿ ಮಾರುಕಟ್ಟೆ

ರಿಚರ್ಡ್ ಮಹಾಪಾತ್ರರಿಚರ್ಡ್ ಮಹಾಪಾತ್ರ24 Jan 2018 11:54 PM IST
share
ರೈತರಿಗೆ ಬೇಕಾಗಿದೆ ಕೃಷಿ ಮಾರುಕಟ್ಟೆ

ತಮ್ಮ ಉತ್ಪನ್ನಗಳಿಗೆ ಸರಿಯಾದ, ಲಾಭಕರವಾದ ಬೆಲೆಗಳು ದೊರಕದೆ ಕಳೆದ ಎರಡು ವರ್ಷಗಳಲ್ಲಿ ರೈತರು ಪಡಬಾರದ ಪಾಡು ಪಟ್ಟಿದ್ದಾರೆ. ಒಂದೋ ಅವರು ತಾವು ಬೆಳೆದ ಉತ್ಪನ್ನಗಳನ್ನು ಎಸೆಯುತ್ತಿದ್ದಾರೆ, ಕೊಳೆಯುವವರೆಗೆ ರಾಶಿ ಹಾಕುತ್ತಾರೆ, ಅಥವಾ ಬೇಸಾಯದ ವೆಚ್ಚ ಭರಿಸುವಷ್ಟು ಬೆಲೆ ಕೂಡ ಅವರ ಆಹಾರ ಧಾನ್ಯಗಳಿಗೆ ದೊರಕುತ್ತಿಲ್ಲ. ಇನ್ನೊಂದೆಡೆ ರೈತರು ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಕಟಾವ್ ಮಾಡುತ್ತಿದ್ದಾರೆ. ಅಂದರೆ, ಅವರಿಗೆ ದೊರಕಬೇಕಾದ ಪ್ರತಿಫಲ ದೊರಕದೆ ಅವರ ಸ್ಥಿತಿ ಹೀಗೆಯೇ ಮುಂದುವರಿಯುತ್ತಿದೆಯೇ?

ರೈತರ ಸಂಕಷ್ಟಗಳಿಗೆ ಇತರ ಕಾರಣಗಳು ಇರಬಹುದಾದರೂ, ಬೆಳೆದ ಉತ್ಪನ್ನಗಳನ್ನು ಮಾರುವುದು ಅಥವಾ ಸರಿಯಾದ ಸಮಯದಲ್ಲಿ ಮಾರುಕಟ್ಟೆಯ ಸೌಲಭ್ಯ ಲಭಿಸುವುದು ಒಂದು ಮುಖ್ಯ ವಿಷಯವಾಗಿಯೇ ಉಳಿದಿದೆ. ಈಗ ಭಾರತದ ಬಹುಸಂಖ್ಯೆಯ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ಮಾರಲು ಸ್ಥಳೀಯ ಮಾರುಕಟ್ಟೆಗಳ ಜಾಲದ ಒಂದು ಗಂಭೀರ ಕೊರತೆಯಿದೆ.

ದೇಶದ ಒಟ್ಟು ಭೂ ಹಿಡುವಳಿಗಳ ಶೇ. 85 ಚಿಕ್ಕ ಮತ್ತು ಮಧ್ಯಮ ಪ್ರಮಾಣದ ರೈತರು ಮತ್ತು ಮಾರಬಹುದಾದ ಆರ್ಥಿಕ ಇಳುವರಿಗಳಲ್ಲಿ ಇವರ ಪಾಲು ಸುಮಾರು ಶೇ. 40ದಷ್ಟು ಇದೆ.

ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಅಥವಾ ಮಾರ್ಕೆಟ್ ಇಂಟರ್‌ವೆನ್ಶನ್ ಸ್ಕೀಮ್‌ನಂತಹ ಸರಕಾರದ ಸಂಸ್ಥೆಗಳ ಮೂಲಕ ಗೋಧಿ ಹಾಗೂ ಅಕ್ಕಿಯಂತಹ ಆಹಾರ ಧಾನ್ಯಗಳನ್ನು ಕೊಂಡುಕೊಳ್ಳುವ ಸರಕಾರದ ಯೋಜನೆಗಳು, ಭಾಗಶಃ ದೊಡ್ಡ ರೈತರಿಗೆ ನೆರವಾಗಿವೆ. ಇಂತಹ ಕ್ರಮಗಳಿಂದ ಚಿಕ್ಕ ಹಾಗೂ ಮಧ್ಯಮ ಪ್ರಮಾಣದ ರೈತರಿಗೆ ಹೆಚ್ಚು ಉಪಯೋಗವಾಗಿಲ್ಲ. 2000ನೇ ಇಸವಿಯ ವೇಳೆಗೆ ಈ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ಅನುಕೂಲವಾಗುವಂತೆ 30,000 ಅಸೆಂಬ್ಲಿ ಮಾರುಕಟ್ಟೆಗಳನ್ನು ಸೃಷ್ಟಿಸಬೇಕೆಂದು ರಾಷ್ಟ್ರೀಯ ಕೃಷಿ ಕೃಷಿ ಆಯೋಗವು 1970ರಲ್ಲೇ ಶಿಫಾರಸು ಮಾಡಿತ್ತು. ಅಂದಿನ ಸಾರಿಗೆ ಹಾಗೂ ಸಂಪರ್ಕ ವಿಧಾನಗಳನ್ನು ಗಮನಿಸಿ, ಒಂದು ಹಳ್ಳಿಯ 5ಕಿ.ಮೀ ತ್ರಿಜ್ಯದೊಳಗೆ ಮಾರುಕಟ್ಟೆಗಳಿರಬೇಕೆಂದು ಅದು ಹೇಳಿತ್ತು. 34 ವರ್ಷಗಳ ಬಳಿಕ ಈಗ ಪುನಃ ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತ ಆಯೋಗ ಇದೇ ಶಿಫಾರಸನ್ನು ಒತ್ತಿ ಹೇಳಿದೆ.

ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತದಲ್ಲಿ ಹಲವಾರು ಸರಕಾರಿ ಏಜೆನ್ಸಿಗಳಿಂದ ನಿಯಂತ್ರಿಸಲ್ಪಡುವ ಕೇವಲ 8,900 ಮಾರುಕಟ್ಟೆಗಳಿವೆ ಮತ್ತು ಪ್ರತಿಯೊಂದು ಹಳ್ಳಿ, ಸರಾಸರಿ 12 ಕಿ.ಮೀ ತ್ರಿಜ್ಯದೊಳಗೆ ಒಂದು ಮಾರುಕಟ್ಟೆ ಹೊಂದಿದೆ. ಆದರೆ ಎಲ್ಲ ರಾಜ್ಯಗಳಲ್ಲಿ ಮಾರುಕಟ್ಟೆಗಳ ಸಾಂದ್ರತೆ ಒಂದೇ ಪ್ರಮಾಣದಲ್ಲಿಲ್ಲ. ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ 146 ಹಳ್ಳಿಗಳಿಗೆ ಒಂದು ಮಾರುಕಟ್ಟೆ ಇದೆ; ಉತ್ತರ ಪ್ರದೇಶದಲ್ಲಿ 17 ಹಳ್ಳಿಗಳಿಗೆ ಒಂದು ಮಾರುಕಟ್ಟೆ ಇದೆ. ತರಕಾರಿಗಳಂತಹ ಕೊಳೆತು ಹೋಗುವ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಬಹಳ ಬೇಗನೆ ಮಾರುಕಟ್ಟೆ ಸೌಲಭ್ಯ ದೊರಕುವುದು ಅತ್ಯಂತ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಅವರ ಉತ್ಪನ್ನಗಳಿಗೆ ಗಿರಾಕಿ ದೊರಕದೆ ಅವರು ನಷ್ಟ ಅನುಭವಿಸಬೇಕಾಗುತ್ತದೆ.

ರೈತರ ಮಾರುಕಟ್ಟೆ ಸಮಸ್ಯೆಯ ವಿವರವಾದ ಅಧ್ಯಯನ ನಡೆಸಿ ನೀಡಲಾಗಿರುವ ದಳವಾಯಿ ಸಮಿತಿ ವರದಿಯು, ಸಗಟು ಮತ್ತು ಚಿಲ್ಲರೆ ಮಾರಾಟದ ವ್ಯವಸ್ಥೆ ಇರುವ 30,000 ಮಾರುಕಟ್ಟೆಗಳ ಆವಶ್ಯಕತೆ ಇದೆ ಎಂದು ಅಂದಾಜಿಸಿದೆ.

ವರದಿಯ ಪ್ರಕಾರ, ದೇಶಾದ್ಯಂತ ವ್ಯವಹರಿಸಲು 10,130 ಸಗಟು ಮಾರುಕಟ್ಟೆಗಳು ಬೇಕಾಗಿವೆ. ಈಗ ಇರುವ 6,676 ಪ್ರಮುಖ ಮಾರ್ಕೆಟ್ ಯಾರ್ಡ್‌ಗಳನ್ನು ಬಲಪಡಿಸುವುದಲ್ಲದೆ ಹೆಚ್ಚುವರಿಯಾಗಿ 3,568 ಸಗಟು ಮಾರುಕಟ್ಟೆಗಳು ನಿರ್ಮಾಣಗೊಂಡಲ್ಲಿ ರೈತರ ಸಮಸ್ಯೆ ಹಗುರಾಗುತ್ತದೆ. ಸಮಿತಿಯ ಒಟ್ಟು ಅಂದಾಜಿನಲ್ಲಿ ಸಾಪ್ತಾಹಿಕ ಹಾಗೂ ನಿಗದಿತ ಸಮಯದಲ್ಲಿ ನಡೆಯುವ ಸ್ಥಳೀಯ ಮಾರುಕಟ್ಟೆಗಳು ಅಥವಾ ಹಾತ್‌ಗಳು (ಸಂತೆಗಳೂ) ಸೇರಿವೆ.

ಮೊದಲ ಬಾರಿಗೆ ಸರಕಾರ ಇಂತಹ ಸಂತೆಗಳ ಬಗ್ಗೆ ಗಮನ ಹರಿಸಿದೆ. ಭಾರತದಲ್ಲಿ ಇಂತಹ 22,932 ಹಾತ್‌ಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತೀ ಹಾತ್ ಕೂಡ 146 ಚದರ ಕಿ.ಮೀ ಅಥವಾ 7.ಕಿ.ಮೀ. ತ್ರಿಜ್ಯದ ಪ್ರದೇಶವನ್ನು ಒಳಗೊಳ್ಳುತ್ತದೆ. ವರದಿಯು ಸರಕಾರ ಈ ಹಾತ್‌ಗಳು ಸಂತೆಗಳ ಒಂದು ಜಾಲ (ಹಬ್)ವಾಗಿ ಅಭಿವೃದ್ಧಿ ಪಡಿಸಬಹುದೆಂದು ಸೂಚಿಸಿದೆ.

 ಹಾತ್‌ಗಳು ಕಾರ್ಯನಿರ್ವಹಿಸುವ ರೀತಿಗಳು ಅವುಗಳನ್ನು ಅತ್ಯಂತ ಹೆಚ್ಚು ಪ್ರಜಾಸತ್ತಾತ್ಮಕ ಮಾರುಕಟ್ಟೆಯಾಗಿ ಮಾಡುತ್ತದೆ. ಭಾರತದ 60,0000 ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಉತ್ಪಾದಕರು ಒಂದು ವರ್ಷದಲ್ಲಿ 2.5 ಮಿಲಿಯ ಬಾರಿ ತಮ್ಮ ಅಂಗಡಿಗಳನ್ನು ಸ್ಥಾಪಿಸುತ್ತಾರೆ. ಈ ಹಳ್ಳಿಗಳಲ್ಲಿ ಶೇ. 62 ಹಳ್ಳಿಗಳು 1,000ಕ್ಕಿಂತಲೂ ಕಡಿಮೆ ಜನರಿರುವ ನಿವಾಸ ಸ್ಥಳಗಳು ಮತ್ತು ಇವರಲ್ಲಿ ಗಣನೀಯ ಸಂಖ್ಯೆಯ ಮಂದಿಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಚಿಲ್ಲರೆ ಅಂಗಡಿಗಳಿಲ್ಲ. ಹೀಗಾಗಿ, ಹಾತ್‌ಗಳು ಮಾರಾಟ ಮತ್ತು ಕೊಳ್ಳುವಿಕೆಗೆ ಇರುವ ಏಕೈಕ ಸ್ಥಳಗಳು.ಸ್ಥಳೀಯ ಪರಿಸರವನ್ನವಲಂಬಿಸಿರುವ ಹಾತ್‌ಗಳು ಋತುಮಾನದ (ಸೀಸನಲ್) ಉತ್ಪನ್ನಗಳನ್ನು ಪೂರೈಸುತ್ತವೆೆ. ಅತ್ಯಂತ ಚಿಕ್ಕ ಉತ್ಪಾದಕರುಗಳಿಗೆ ಕೂಡ ಅಲ್ಲಿ ಸ್ಥಳ ಇದೆ. ಈಗ ನಿರ್ದಿಷ್ಟ ಸ್ಥಳಗಳಲ್ಲಿರುವ ಪಡಿತರ ಅಂಗಡಿಗಳಿಗೆ ಜನರು ಜೋತು ಬೀಳುತ್ತಿದ್ದಾರೆ. ಆದರೆ ವಿವಿಧೋದ್ದೇಶ ಶಾಪಿಂಗ್ ಅನುಭವಗಳನ್ನು ನೀಡುವ ಹಾತ್‌ಗಳು ಈ ಬೆದರಿಕೆಯನ್ನು ಯಶಸ್ವಿಯಾಗಿ ಎದುರಿಸಿವೆ. ಆದ್ದರಿಂದ, ರಿಟೈಲ್ ಪ್ರಜಾಪ್ರಭುತ್ವವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಮೊದಲ ಯಶಸ್ಸಾಗಿದೆ. ದುರದೃಷ್ಟವಶಾತ್, ಹಾತ್‌ಗಳಿಗೆ ದೊರಕ ಬೇಕಾಗುವಷ್ಟು ದೊರಕಿಲ್ಲ. ನಮ್ಮ ಸಾಂಪ್ರದಾಯಿಕ ಮಾರುಕಟ್ಟೆಗಳು ಮಧ್ಯಮ ಪ್ರಮಾಣದಿಂದ ಬೃಹತ್ ಪ್ರಮಾಣದ ವರೆಗಿನ ರೈತರ ಅಗತ್ಯತೆಗಳನ್ನು ಪೂರೈಸುತ್ತವೆಯೇ ಹೊರತು ಚಿಕ್ಕ ರೈತರ ಅಗತ್ಯತೆಗಳನ್ನಲ್ಲ. ಈ ಹಿಂದಿನ ಯೋಜನಾ ಆಯೋಗದ ಒಂದು ಅಂದಾಜಿನ ಪ್ರಕಾರ 21,000 ಹಾತ್‌ಗಳಿಗೆ ಪಂಚಾಯತ್ ಹಾಗೂ ಮಾರುಕಟ್ಟೆ ಸಮಿತಿಯಂತಹ ಸಂಸ್ಥೆಗಳಿಂದ ಯಾವ ಬೆಂಬಲವೂ ದೊರಕುತ್ತಿಲ್ಲ. ಆದ್ದರಿಂದ ಹಾತ್‌ಗಳು ಈ ರೈತರ ಪಾಲಿಗೆ ವರದಾನವಾಗಬಲ್ಲವು.

ಕೃಪೆ: downtoearth.org.in

share
ರಿಚರ್ಡ್ ಮಹಾಪಾತ್ರ
ರಿಚರ್ಡ್ ಮಹಾಪಾತ್ರ
Next Story
X