ಕಿರೀಟವಲ್ಲ, ಹೆಡ್‌ಫೋನ್!
ಪ್ರಪಂಚೋದ್ಯ

ನೀವು ಈತನಕ ವಿವಿಧ ರೀತಿಯ ಹೆಡ್‌ಫೋನ್‌ಗಳನ್ನು ಕಂಡಿರಬಹುದು. ಆದರೆ, ರಾಜಮಹಾರಾಜರ ಕಿರೀಟಗಳಿಗೆ ಸರಿಸಾಟಿಯಾಗುವಂತಹ ಹೆಡ್‌ಫೋನ್‌ಗಳನ್ನು ಬಹುಶಃ ಕಂಡಿರಲಾರಿರಿ. ಅಮೆರಿಕದ ದಕ್ಷಿಣ ಫ್ಲೋರಿಡಾ ಪ್ರಾಂತದ ಖ್ಯಾತ ಕಲಾವಿದೆ ಲಿಸಾ ಕೆಂಪ್‌ಬೆಲ್ ವಿನ್ಯಾಸಗೊಳಿಸಿರುವ ಈ ಹೆಡ್‌ಪೋನ್ ಧರಿಸಿದಲ್ಲಿ ಯಾರಿಗಾದರೂ ಅದು ಥೇಟ್ ಕಿರೀಟದಂತೆಯೇ ಕಾಣಿಸುತ್ತದೆ.
ಲಿಸಾ, ಗ್ರಾಹಕರ ಆಸಕ್ತಿಗನುಗುಣವಾಗಿ ಹೆಡ್‌ಫೋನ್‌ಗಳನ್ನು ಸಿದ್ಧಪಡಿಸುತ್ತಾರಂತೆ. ಸಂಗೀತ ಹಾಗೂ ಫ್ಯಾಶನ್‌ಗಳೆರಡರ ಬಗ್ಗೆ ಉತ್ಕಟವಾದ ಆಸಕ್ತಿ ಹೊಂದಿರುವವರಿಗೆ ಖಂಡಿತವಾಗಿಯೂ, ಇಂತಹ ಹೆಡ್‌ಪೋನ್ ಸೂಕ್ತವಾದ ಆಯ್ಕೆ ಎಂದು ಲಿಸಾ ಹೇಳುತ್ತಾರೆ. ಆದರೆ ಈ ಕಿರೀಟ ಹೆಡ್‌ಫೋನ್ ತುಂಬಾ ದುಬಾರಿ. ಅದರ ಬೆಲೆ 19 ಸಾವಿರ ಡಾಲರ್ (ಸುಮಾರು 12,08,158 ರೂ.)ಗಳಿಂದ ಹಿಡಿದು 33 ಸಾವಿರ ಡಾಲರ್‌ವರೆಗೂ (20,98,913 ರೂ.)ವರೆಗಿದೆ.
ಹತ್ತು ಮಂದಿಯ ನಡುವೆ ಭಿನ್ನವಾಗಿ ಎದ್ದುಕಾಣುವ ಈ ಹೆಡ್‌ಫೋನನ್ನು ಫ್ಯಾಶನ್‌ಪ್ರಿಯರು ತುಂಬಾನೆ ಮೆಚ್ಚಿಕೊಂಡಿದ್ದಾರೆ. ಆದಾಗ್ಯೂ ಗ್ರಾಹಕರು ಬೇಕೆನಿಸಿದಲ್ಲಿ ವಿನ್ಯಾಸವನ್ನು ಬದಲಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಹೆಡ್‌ಫೋನನ್ನು ಸಿದ್ಧಪಡಿಸಲಾಗಿದೆಯೆಂದು ಲಿಸಾ ತಿಳಿಸಿದ್ದಾರೆ.