ಕತ್ತರಿಸಿದ 54 ಹಸ್ತಗಳು ಪತ್ತೆ
ಪ್ರಪಂಚೋದ್ಯ

ಚೀನಾ ಗಡಿಗೆ ಸಮೀಪವಿರುವ ಸೈಬೀರಿಯಾದಿಂದ ಸ್ಪಲ್ಪ ಪೂರ್ವಕ್ಕಿರುವ ಖಬರೋವಸ್ಕಿಯ ನಗರವೊಂದರಲ್ಲಿ ಮಾನವನ ಕತ್ತರಿಸಲಾದ 27 ಜೆಡಿ ಹಸ್ತಗಳಿದ್ದ ಚೀಲ ಪತ್ತೆಯಾಗಿದೆ.
ಒಟ್ಟು 54 ಹಸ್ತಗಳಿದ್ದು, ಇದರಲ್ಲಿ ಒಂದು ಹಸ್ತ ಮಾತ್ರ ಚೀಲದಿಂದ ದೂರ ಪ್ರದೇಶದಲ್ಲಿ ಪತ್ತೆಯಾಗಿದೆ. ಚೀನಾದೊಂದಿಗಿನ ರಶ್ಯಾ ಮುಂಚೂಣಿ ಪ್ರದೇಶದಿಂದ ಸುಮಾರು 18 ಮೈಲು ಕೆಳಮುಖವಾಗಿ ಹರಿಯುವ ಅಮುರ್ ನದಿಯ ಮಧ್ಯಭಾಗದಲ್ಲಿರುವ ಮಂಜಿನಿಂದ ತುಂಬಿದ ದ್ಪೀಪದಲ್ಲಿ ಒಂದು ಹಸ್ತವ್ನು ಸ್ಥಳೀಯರು ಪತ್ತೆಹಚ್ಚಿದ್ದರು.
54 ಹಸ್ತಗಳು ಪತ್ತೆಯಾದ ಪ್ರದೇಶ ಜನಪ್ರಿಯ ಮೀನು ಹಿಡಿಯುವ ಕೇಂದ್ರ. ಹಸ್ತಗಳು ಪತ್ತೆಯಾದ ಬಗ್ಗೆ ಸ್ಥಳೀಯರು, ಇಲ್ಲಿ ಯಾವುದೇ ಸಂದೇಹಾಸ್ಪದ ಘಟನೆಗಳು ನಡೆದಿಲ್ಲ ಎಂದಿದ್ದಾರೆ. ಈ ಹಸ್ತಗಳು ಯಾರದ್ದು? ಯಾವಾಗ ಕತ್ತರಿಸಲಾಯಿತು? ಯಾಕೆ ಕತ್ತರಿಸಲಾಯಿತು? ಎಂಬುದು ನಿಗೂಢವಾಗಿಯೇ ಉಳಿದಿದೆ ಎಂದು ‘ದಿ ಸೈಬೀರಿಯನ್ ಟೈಮ್ಸ್’ ವರದಿ ಮಾಡಿದೆ.
ಕಳ್ಳತನಕ್ಕೆ ಶಿಕ್ಷೆಯಾಗಿ ಈ ಹಸ್ತಗಳನ್ನು ಕೊಡಲಿಯಿಂದ ಕತ್ತರಿಸಿರುವ ಸಾಧ್ಯತೆ ಇದೆ ಅಥವಾ ಆಸ್ಪತ್ರೆಯಲ್ಲಿ ಮೃತದೇಹಗಳಿಂದ ಹಸ್ತಗಳನ್ನು ಬೇರ್ಪಡಿಸಿರುವ ಸಂದೇಹ ಇದೆ. ಆದರೆ, ಅದಕ್ಕೆ ಕಾರಣಗಳು ಅಸ್ಪಷ್ಟವಾಗಿವೆ. ಅಂಗಾಂಗಗಳನ್ನು ಕದಿಯಲು ಮೃತದೇಹಗಳನ್ನು ಅಪಹರಿಸಿರಬಹುದು. ಅದು ಬಹಿರಂಗವಾಗದಿರಲು ಹಸ್ತಗಳನ್ನು ಕತ್ತರಿಸಿ ದೂರ ಎಸೆದಿರಬಹುದು. ಈ ಹಸ್ತಗಳ ಚೀಲವಿದ್ದ ಸಮೀಪ ಬ್ಯಾಂಡೇಜ್ ಹಾಗೂ ಆಸ್ಪತ್ರೆ ಮಾದರಿಯ ಪ್ಲಾಸ್ಟಿಕ್ ಶೂ ಕವರ್‌ಗಳು ಪತ್ತೆಯಾಗಿವೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.