Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಆರೆಸ್ಸೆಸ್‌ನ ತುಷ್ಟೀಕರಣಕ್ಕಾಗಿ...

ಆರೆಸ್ಸೆಸ್‌ನ ತುಷ್ಟೀಕರಣಕ್ಕಾಗಿ ಆದಿತ್ಯನಾಥರ ಹಿಂದೂ ಯುವವಾಹಿನಿಯನ್ನು ವಿಸರ್ಜಿಸಲಾಗುತ್ತಿದೆಯೇ?

ಧೀರೇಂದ್ರ ಕೆ. ಝಾಧೀರೇಂದ್ರ ಕೆ. ಝಾ13 March 2018 12:06 AM IST
share
ಆರೆಸ್ಸೆಸ್‌ನ ತುಷ್ಟೀಕರಣಕ್ಕಾಗಿ ಆದಿತ್ಯನಾಥರ ಹಿಂದೂ ಯುವವಾಹಿನಿಯನ್ನು ವಿಸರ್ಜಿಸಲಾಗುತ್ತಿದೆಯೇ?

ಬೆಳೆಯಲು ಬಿಟ್ಟರೆ ಹಿಂದೂ ಯುವ ವಾಹಿನಿಯು, ಮಹಾರಾಷ್ಟ್ರದಲ್ಲಿ ತನಗೆ ಸಮಾನಾಂತರವಾದ ಒಂದು ಹಿಂದೂ ಸಂಘಟನೆಯಾಗಿ ಬೆಳೆದಿರುವ ಶಿವಸೇನೆಯ ಹಾಗೆಯೇ, ಉತ್ತರಪ್ರದೇಶದಲ್ಲೂ ಬೆಳೆದು ಮತಗಳಿಗಾಗಿ ತಾನು ಅದರ ಜೊತೆ ಸ್ಪರ್ಧಿಸಬೇಕಾಗಬಹುದು, ಪೈಪೋಟಿ ನಡೆಸಬೇಕಾಗಬಹುದು ಎಂಬುದೇ ಆರೆಸ್ಸೆಸ್‌ಗೆ ದೊಡ್ಡ ಭಯವಾಗಿದೆ.

ಉತ್ತರಪ್ರದೇಶದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೋಮು ರಾಜಕಾರಣದ ವಿಷಪೂರಿತ ಅಭಿಯಾನ ನಡೆಸಿದ ಬಳಿಕ ಮುಖ್ಯಮಂತ್ರಿ ಆದಿತ್ಯನಾಥರ ಖಾಸಗಿ ಮಿಲಿಶಿಯಾ ಪಡೆಯಾಗಿರುವ ಹಿಂದೂ ಯುವ ವಾಹಿನಿಯೂ ರಾಜ್ಯದ ಅನೇಕ ಭಾಗಗಳಲ್ಲಿ ಸದ್ದಿಲ್ಲದೆ ತನ್ನ ಶಾಖೆಗಳನ್ನು ಮುಚ್ಚುತ್ತಿದೆ.

ರಾಜ್ಯದ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಯುವವಾಹಿನಿಯನ್ನು ತ್ಯಜಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಳಿಕ ಯುವವಾಹಿನಿ ದಿಢೀರನೆ ತನ್ನ ಶಕ್ತಿ ವರ್ಧಿಸಿಕೊಂಡಿತ್ತು. ಪೂರ್ವ ಉತ್ತರಪ್ರದೇಶದ ಕನಿಷ್ಠ ಮೂರು ಜಿಲ್ಲೆಗಳಲ್ಲಿ (ಬಲರಾಮ್‌ಪುರ್, ವೌ ಮತ್ತು ಅಜಂಗರ್) ಸಂಘಟನೆಯನ್ನು ತೊರೆದು ಎಷ್ಟೊಂದು ಕಾರ್ಯಕರ್ತರು ದೂರ ಸರಿದಿದ್ದಾರೆಂದರೆ ಅಲ್ಲಿ ವಾಹಿನಿ ಅಕ್ಷರಶಃ ಅಸ್ತಿತ್ವ ಕಳೆದುಕೊಂಡಿದೆ.

 ಬಲರಾಮ್‌ಪುರ್ ಇಷ್ಟರತನಕ ಹಿಂದೂ ಯುವ ವಾಹಿನಿಯ ಒಂದು ಪ್ರಮುಖ ಭದ್ರಕೋಟೆಯಾಗಿತ್ತು. ಆದರೆ, ಫೆಬ್ರವರಿ 1ರಂದು, ವಾಹಿನಿಯ ಜಿಲ್ಲಾಧ್ಯಕ್ಷ ರಂಜಿತ್ ಅಜಾದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಯುವವಾಹಿನಿಗೆ ರಾಜೀನಾಮೆ ನೀಡಿದರು. ಜಿಲ್ಲೆಯ ಒಂಬತ್ತು ಬ್ಲಾಕ್‌ಗಳಲ್ಲಿ ನಾಲ್ಕರಲ್ಲಿ ವಾಹಿನಿಗೆ ಪ್ರಬಲವಾದ ಅಸ್ತಿತ್ವವಿತ್ತು. ‘‘ಈ ಬ್ಲಾಕ್‌ಗಳಲ್ಲಿ ನಮ್ಮ ಹೆಚ್ಚಿನ ಕಾರ್ಯಕರ್ತರು ಸಂಘಟನೆಯನ್ನು ತೊರೆದಿದ್ದಾರೆ. ಯಾಕೆಂದರೆ ರಾಜ್ಯ ನಾಯಕತ್ವವು ನಮಗೆ ಕಾರ್ಯವೆಸಗಲು ಬಿಡುತ್ತಿರಲಿಲ್ಲ’’ ಎಂದಿದ್ದಾರೆ ಅಜಾದ್. ಸುಮಾರು ಅದೇ ವೇಳೆಗೆ, ವೌ ಜಿಲ್ಲಾ ಘಟಕ ಕೂಡ ತಟಸ್ಥಗೊಂಡಿತು. ಫೆಬ್ರವರಿ 3ರಂದು ಜಿಲ್ಲಾ ಸಮಿತಿಯನ್ನು ರಾಜ್ಯ ನಾಯಕತ್ವವು ವಿಸರ್ಜಿಸಿತು. ಅಂದಿನಿಂದ ನೂರಾರು ಕಾರ್ಯಕರ್ತರು ಸಂಘಟನೆಯನ್ನು ತೊರೆದಿದ್ದಾರೆ. ಕೆಲವರು ನಿಷ್ಕ್ರಿಯರಾದರು. ಇನ್ನು ಕೆಲವರು ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ.

2002ರಲ್ಲಿ ಸ್ಥಾಪಿಸಲ್ಪಟ್ಟ ಹಿಂದೂ ಯುವವಾಹಿನಿಯನ್ನು ಆದಿತ್ಯನಾಥರ ಚುನಾವಣಾ ಆಕಾಂಕ್ಷೆಗಳು ಈಡೇರುವಂತೆ ವಿನ್ಯಾಸಗೊಳಿಸಲಾಗಿತ್ತು. ಅದು ಸೃಷ್ಟಿಸಿದ ಕೋಮು ಧ್ರುವೀಕರಣ ಆದಿತ್ಯನಾಥರಿಗೆ ಭಾರೀ ರಾಜಕೀಯ ಲಾಭ ತಂದಿತು. ಗೋರಖ್‌ಪುರದಲ್ಲಿ 1999ರ ಲೋಕ ಸಭಾ ಚುನಾವಣೆಗಳಲ್ಲಿ ಸುಮಾರು 7,000 ಮತಗಳ ಅಂತರದಿಂದ ಅವರು ಗೆದ್ದಿದ್ದರು. ಈ ಅಂತರ 2004ರಲ್ಲಿ 1.42 ಲಕ್ಷ ಹಾಗೂ 2009 ಮತ್ತು 2014ರ ಚುನಾವಣೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಗೆ ಏರಿತು.

ವಿಸರ್ಜನೆ

ತನ್ನ ಸಾಂಪ್ರದಾಯಿಕ ಭದ್ರಕೋಟೆಯ ಹೊರಗೆ, ಹಿಂದೂ ಯುವವಾಹಿನಿ ಮೊದಲು ಕುಸಿಯಲು ಆರಂಭವಾದದ್ದು ರಾಜ್ಯದ ರಾಜಧಾನಿ ಲಕ್ನೋದಲ್ಲಿ. ಇದರ ಬೆನ್ನಿಗೆ ಪಶ್ಚಿಮ ಯುಪಿಯಲ್ಲಿ ಸಂಘಟನೆ ತ್ಯಜಿಸುವ ಹಾಗೂ ವಾಹಿನಿಯ ಘಟಕಗಳನ್ನು ವಿಸರ್ಜಿಸುವ ಪ್ರಕ್ರಿಯೆಗಳ ಸರಮಾಲೆ ಆರಂಭವಾಯಿತು.
‘‘ಹಿಂದೂ ಯುವವಾಹಿನಿಯ ರಾಜ್ಯ ಮಹಾ ಕಾರ್ಯದರ್ಶಿ ಪಿ.ಕೆ. ಮಾಲ್ ಲಕ್ನೋ ಘಟಕದ ವಿಸರ್ಜನೆಯನ್ನು ಘೋಷಿಸಿದಾಗ ವಾಹಿನಿಯ ಅಂತ್ಯ ಆರಂಭವಾಯಿತು’’ ಎಂದಿದ್ದಾರೆ ಆ ಘಟಕದ ಮುಖ್ಯಸ್ಥ ಅನುಭವ್ ಶುಕ್ಲಾ ‘‘ಇದು ಸಂಘಟನೆಯಲ್ಲಿ ಭಾರೀ, ಬೃಹತ್ತಾದ ಅಸಮಾಧಾನವನ್ನು, ಅಶಾಂತಿಯನ್ನು ಸೃಷ್ಟಿಸಿತು. ಲಕ್ನೋ ಘಟಕದ ವಿಸರ್ಜನೆ ಘೋಷಣೆಯಾದ ಡಿಸೆಂಬರ್ 8ರಂದು, ಆ ಘೋಷಣೆಯಾಗಿ ಕೇವಲ ಎಂಟು ಗಂಟೆಗಳೊಳಗಾಗಿ, 2,500 ಮಂದಿ ಸಕ್ರಿಯ ಸದಸ್ಯರು ಹಿಂದೂ ಯುವವಾಹಿನಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದರು.


‘‘ಸಂಘಟನೆಯ ಬಗ್ಗೆ ರಾಜ್ಯಮಟ್ಟದ ನಾಯಕರು ತೋರಿದ ನಿರ್ಲಕ್ಷದಿಂದಾಗಿ ನಾವು ವಾಹಿನಿಯಿಂದ ಹೊರನಡೆಯಲೇ ಬೇಕಾಗಿ ಬಂತು’’ ಎಂದಿದ್ದಾರೆ, ಯುಪಿಯ ಶಾಮ್ಲಿ ಜಿಲ್ಲಾ ಘಟಕದ ನಾಯಕ ಕುಲದೀಪ್ ಗೌಸ್.
ಮಾಧ್ಯಮದ ಉಸ್ತುವಾರಿ ಹೊತ್ತಿರುವ ಸಂಘಟನೆಯ ರವೀಂದ್ರ ಪ್ರತಾಪ್, ಕಾರ್ಯಕರ್ತರು ಸಂಘಟನೆ ತ್ಯಜಿಸಿರು ವುದು ದೊಡ್ಡ ಸಂಗತಿ ಏನೂ ಅಲ್ಲ ಎನ್ನುವಂತೆ ಹೇಳಿಕೆ ನೀಡಿದರು. ‘‘ನಮ್ಮದು ಒಂದು ಸಾಂಸ್ಕೃತಿಕ ಸಂಘಟನೆ. ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಂಡವರು ಮಾತ್ರ ವಾಹಿನಿಯನ್ನು ತೊರೆದುಹೋಗಿದ್ದಾರೆ. ಮಹಾರಾಜ್(ಆದಿತ್ಯನಾಥ್) ಮುಖ್ಯಮಂತ್ರಿಯಾದ ಮೇಲೆ ಪರಿಸ್ಥಿತಿಯನ್ನು ನಿಭಾಯಿಸಲಾಗದ ಘಟಕಗಳನ್ನು ಮಾತ್ರ ವಿಸರ್ಜಿಸಲಾಗಿದೆ.

ಆರೆಸ್ಸೆಸ್ ಭಯ

ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸ್ವಲ್ಪವೇ ಸಮಯದಲ್ಲಿ ಆರೆಸ್ಸೆಸ್, ಹಿಂದೂ ಯುವ ವಾಹಿನಿಯನ್ನು ವಿಸರ್ಜಿಸಬೇಕೆಂದು ಅವರೊಡನೆ ಕೇಳಿಕೊಂಡಿತ್ತು. ಸಂಘಪರಿವಾರದ ಹೊರಗೆ ಇರುವ, ಅದರ ನಿಯಂತ್ರಣದಲ್ಲಿ ಇಲ್ಲದ ಹಿಂದೂ ಯುವ ವಾಹಿನಿಯು, ಆದಿತ್ಯನಾಥ್ ಮುಖ್ಯ ಮಂತ್ರಿಯಾಗಿರುವಾಗ, ಅವರ ಪ್ರಭಾವ ಬಳಸಿ ಒಂದು ಸಮಾನಂತರ ಹಿಂದುತ್ವ ಸಂಘಟನೆಯಾಗಿ ಬೆಳೆಯಬಹುದು ಎಂಬ ಭಯ ಆರೆಸ್ಸೆಸ್‌ಗೆ ಇದೆ. ತನ್ನದೇ ಅದ ಸ್ವತಂತ್ರವಾದ ರಾಜಕೀಯ ಮಹತ್ವಾಕಾಂಕ್ಷೆಗಳಿರುವ ವಾಹಿನಿಯು ಭವಿಷ್ಯದಲ್ಲಿ ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಸವಾಲೊಡ್ಡಬಹುದು. ಬೆಳೆಯಲು ಬಿಟ್ಟರೆ ಹಿಂದೂ ಯುವ ವಾಹಿನಿಯು, ಮಹಾರಾಷ್ಟ್ರದಲ್ಲಿ ತನಗೆ ಸಮಾನಾಂತರವಾದ ಒಂದು ಹಿಂದೂ ಸಂಘಟನೆಯಾಗಿ ಬೆಳೆದಿರುವ ಶಿವಸೇನೆಯ ಹಾಗೆಯೇ, ಉತ್ತರಪ್ರದೇಶದಲ್ಲೂ ಬೆಳೆದು ಮತಗಳಿಗಾಗಿ ತಾನು ಅದರ ಜೊತೆ ಸ್ಪರ್ಧಿಸಬೇಕಾಗಬಹುದು, ಪೈಪೋಟಿ ನಡೆಸಬೇಕಾಗಬಹುದು ಎಂಬುದೇ ಆರೆಸ್ಸೆಸ್‌ಗೆ ದೊಡ್ಡ ಭಯವಾಗಿದೆ.

‘‘ಮುಂದಿನ 6 ತಿಂಗಳ ಅಥವಾ ಬೇಕಿದ್ದರೆ ಒಂದು ವರ್ಷದ ವರೆಗೆ ವಾಹಿನಿಗೆ ಸದಸ್ಯರನ್ನು ನೋಂದಾಯಿಸಿ ಕೊಳ್ಳಲಾಗುವುದಿಲ್ಲ’’ ಎಂದು ಮೇ 2ರಂದು ಆದಿತ್ಯನಾಥ್ ಪರವಾಗಿ ಎ.ಕೆ. ಮಾಲ್ ಘೋಷಿಸಿದರು.
ಆದರೆ ಮಾಲ್‌ರ ಈ ಘೋಷಣೆಯಿಂದ ಆರೆಸ್ಸೆಸ್‌ಗೆ ಸಮಾಧಾನವಾಗಿಲ್ಲ, ತೃಪ್ತಿಯಾಗಿಲ್ಲ; ಅದು ಹಿಂದೂ ಯುವ ವಾಹಿನಿಯ ಸಂಪೂರ್ಣ ವಿಸರ್ಜನೆಯನ್ನು ಬಯಸುತ್ತದೆ ಎಂದು ಆದಿತ್ಯನಾಥ್‌ರ ನಿಕಟವರ್ತಿಯೊಬ್ಬರು ಹೇಳಿದ್ದಾರೆ.

ಕೃಪೆ: scroll.in

share
ಧೀರೇಂದ್ರ ಕೆ. ಝಾ
ಧೀರೇಂದ್ರ ಕೆ. ಝಾ
Next Story
X