ಅಂಬೇಡ್ಕರ್ ಬರೆದ ಒಂದು ಪತ್ರ
ಹಸ್ಸಾನಾ ಎಂಬ 14 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಎಸಗಿದ ಅತ್ಯಾಚಾರ ಮತ್ತು ಅದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ನ್ಯಾಯಾಲಯವು ನೀಡಿದ ಶಿಕ್ಷೆ ಹಾಗೂ ಮಧ್ಯಪ್ರದೇಶ ಸರಕಾರದ ಗೃಹಮಂತ್ರಿಗಳು ಆ ಶಿಕ್ಷೆಯನ್ನು ಕಡಿತಗೊಳಿಸಿದ ವಿಚಾರವಾಗಿ ಈ ಪತ್ರ ಬರೆಯುತ್ತಿರುವೆ.
14 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಕಾರಣಕ್ಕೆ ಆರೋಪಿಯೋರ್ವನಿಗೆ ಮಧ್ಯಪ್ರದೇಶ ನ್ಯಾಯಾಲಯವು 3 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿತು. ಮಧ್ಯಪ್ರದೇಶ ಸರಕಾರದ ಗೃಹಮಂತ್ರಿಗಳು ತಮ್ಮ ಅಧಿಕಾರ ಹಾಗೂ ಪ್ರಭಾವಗಳನ್ನು ಬಳಸಿಕೊಂಡು ಈ ಶಿಕ್ಷೆಯ ಅವಧಿಯಲ್ಲಿ ಒಂದು ವರ್ಷ ಕಡಿತಗೊಳಿಸಿ ಅಂತಿಮವಾಗಿ ಎರಡು ವರ್ಷಕ್ಕೆ ಇಳಿಯುವಂತೆ ಮಾಡಿದ್ದಾರೆ.
ಮಧ್ಯಪ್ರದೇಶದ ಗೃಹಮಂತ್ರಿಗಳ ಈ ನಿರ್ಣಯ ಅತ್ಯಂತ ನಾಚಿಕೆಗೇಡಿನದು. ಇದಕ್ಕಿಂತಲೂ ಹೇಯ ಅನ್ನಿಸುವ ಇನ್ನೊಂದು ಸಂಗತಿ ನನಗೆ ಕಾಣಿಸುತ್ತಿಲ್ಲ. ಕುರುಡಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವ ಹಿಂದೂಗಳು ಗೃಹಮಂತ್ರಿಗಳ ಈ ನಿರ್ಣಯದ ಕುರಿತು ಏನು ಹೇಳುವರು?
ಶೋಷಿತರಾಗಿರುವುದು, ಅಲ್ಪಸಂಖ್ಯಾತರಾಗಿರುವುದು ಕೆಲವರ ವಿಧಿಬರಹ ಎಂದು ಈ ದೇಶ ತಿಳಿದಂತಿದೆ. ಇಂಥದ್ದೇ ಕೃತ್ಯ ಹಿಂದೂ ಧರ್ಮದ ಮೇಲ್ಜಾತಿ ಬಾಲಕಿಯೊಬ್ಬಳ ಮೇಲೆ ನಡೆದಿದ್ದರೆ ಆಗಲೂ ಕೂಡ ತೀರ್ಪು ಈ ರೀತಿಯೇ ಇರುತ್ತಿತ್ತೇ?
ಇಂಥದ್ದೊಂದು ಘಟನೆ ಬೇರೆ ಯಾವುದೇ ದೇಶದಲ್ಲಿ ಘಟಿಸಿದ್ದರೂ ಸಂಬಂಧಪಟ್ಟ ಮಂತ್ರಿಯನ್ನು ವಜಾಮಾಡಲಾಗುತ್ತಿತ್ತು.
ಆದರೆ, ಇದು ಭಾರತ. ಅಂಥ ಸಾಧ್ಯತೆಗಳನ್ನು ಇಲ್ಲಿ ಕಾಣಲು ಆಗುವುದಿಲ್ಲ.
-ಬಿ. ಆರ್.ಅಂಬೇಡ್ಕರ್ ಮುಂಬೈ
(19 ಮಾರ್ಚ್ 1938ರಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಗೊಂಡ ಪತ್ರ)