ಮಿಡಿದ ಗೆರೆಗಳು

ಜಮ್ಮುವಿನ ಕಥುವಾದಲ್ಲಿ ಆಸಿಫಾ ಎನ್ನುವ ಮಗುವನ್ನು ದೇವಸ್ಥಾನವೊಂದರಲ್ಲಿ ನಾಲ್ಕು ದಿನ ಬರ್ಬರವಾಗಿ ಸಾಮೂಹಿಕ ಅತ್ಯಾಚಾರಗೈದು ಕೊಂದು ಹಾಕಿದ ಪ್ರಕರಣ ಇದೀಗ ವಿಶ್ವಾದ್ಯಂತ ಚರ್ಚೆಯ ವಸ್ತುವಾಗಿದೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನ ನೇತೃತ್ವದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವು ಪ್ರಧಾನಿಯ ‘ಬೇಟಿ ಬಚಾವೋ’ ಘೋಷಣೆಯನ್ನು ಅಣಕಿಸುತ್ತಿದೆ. ಭಾರತೀಯ ಸಂಸ್ಕೃತಿಯನ್ನೇ ಅಪಮಾನಿಸುತ್ತಿರುವ ಈ ಘಟನೆಗಳಿಗೆ ದೇಶಾದ್ಯಂತ ಬೇರೆ ಬೇರೆ ವ್ಯಂಗ್ಯ ಚಿತ್ರಕಾರರು ವಿವಿಧ ಪತ್ರಿಕೆಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ತಮ್ಮ ಗೆರೆಗಳ ಮೂಲಕ ಸರಕಾರವನ್ನು ಬೆಂಡೆತ್ತಿದ್ದಾರೆ. ಆಯ್ದ ವ್ಯಂಗ್ಯ ಚಿತ್ರಗಳನ್ನು ಒಂದೆಡೆ ಸೇರಿಸಲಾಗಿದೆ.
Next Story