Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನೋಟು ಬಿಕ್ಕಟ್ಟಿನ ಹಿಂದಿರುವ ಮರ್ಮವೇನು?

ನೋಟು ಬಿಕ್ಕಟ್ಟಿನ ಹಿಂದಿರುವ ಮರ್ಮವೇನು?

ಯಶವಂತ್ ಸಿನ್ಹಾಯಶವಂತ್ ಸಿನ್ಹಾ22 April 2018 12:14 AM IST
share
ನೋಟು ಬಿಕ್ಕಟ್ಟಿನ ಹಿಂದಿರುವ ಮರ್ಮವೇನು?

ನೋಟುಗಳ ಅಭಾವದ ಬಗ್ಗೆ ಕೇಂದ್ರ ಸರಕಾರ ಹೆಚ್ಚಿನ ವಿವರಣೆ ನೀಡಬೇಕಾದ ಅಗತ್ಯವಿದೆ. ಭಾರತದ ಜನತೆ ತನ್ನನ್ನು ಚುನಾಯಿಸಿರುವುದು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಪಡಿಸುವುದಕ್ಕಾಗಿ ಹಾಗೂ ಆರ್ಥಿಕತೆಯನ್ನು ಭಗ್ನಗೊಳಿಸು ವುದಕ್ಕಾಗಲಿ ಅಲ್ಲವೆಂಬುದನ್ನು ಸರಕಾರ ನೆನಪಿಡಬೇಕಾಗಿದೆ.

ಭಾರತಕ್ಕೆ ಈಗ ಹಠಾತ್ತನೆ ಹೊಸ ಬಿಕ್ಕಟ್ಟೊಂದು ಧುತ್ತನೆ ಎದುರಾಗಿದೆ. ಖಾಲಿಯಾಗಿರುವ ಎಟಿಎಂಗಳೇ ಆ ಬಿಕ್ಕಟ್ಟಿನ ಕೇಂದ್ರಬಿಂದುವಾಗಿವೆ. 2 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ದುರುದ್ದೇಶಪೂರ್ವಕವಾಗಿ ಕೆಲವು ವ್ಯಕ್ತಿಗಳು ದಾಸ್ತಾನು ಮಾಡಿದ್ದು, ಇದೊಂದು ಕೇಂದ್ರ ಸರಕಾರದ ವಿರುದ್ಧ ನಡೆದಿರುವ ಸಂಚಾಗಿದೆಯೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಿಡಿಕಾರಿರುವುದನ್ನು ನಾವು ಕಂಡಿದ್ದೇವೆ. ಆದರೆ ಅವರಲ್ಲಿ ಆ ಬಗ್ಗೆ ಪುರಾವೆಯಿದೆಯೇ?. ಒಂದು ವೇಳೆ ಪುರಾವೆಗಳು ಇದ್ದುದೇ ಆದರೆ, ಅವರು ನೋಟುದಾಸ್ತಾನು ಮಾಡಿದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ?. ನೋಟುಗಳ ಅಭಾವದ ಬಗ್ಗೆ ಕೇಂದ್ರ ಹಣಕಾಸು ಸಚಿವರು ಹಾಗೂ ಅವರೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಕೆಲವು ವಿವರಣೆಗಳನ್ನು ನೀಡಿದ್ದಾರೆ. ನಗದು ಹಣದ ಅಭಾವವುಂಟಾಗಿಲ್ಲವೆಂದು ಜನತೆಗೆ ಭರವಸೆ ನೀಡಿದ್ದಾರೆ. ನಗದು ಹಣದಬೇಡಿಕೆಯಲ್ಲಿ ಅನಿರೀಕ್ಷಿತ ಏರಿಕೆಯಾಗಿರುವುದರಿಂದ, ದೇಶದ ಕೆಲವು ಭಾಗಗಳಲ್ಲಿ ಈ ಸಮಸ್ಯೆ ತಲೆದೋರಿದೆಯೆಂದು ಸಮಜಾಯಿಷಿ ನೀಡಿರುವ ಅವರು, ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯಲಿದೆಯೆಂದು ಆಶ್ವಾಸನೆ ನೀಡಿದ್ದಾರೆ.

  ಭಾರತೀಯ ರಿಸರ್ವ್ ಬ್ಯಾಂಕ್‌ನ ಕರೆನ್ಸಿ ನಿರ್ವಹಣಾ ವ್ಯವಸ್ಥೆಯ ಜಾಲವು 4,034 ಕರೆನ್ಸಿ ಚೆಸ್ಟ್‌ಗಳು (ಬೊಕ್ಕಸ) ಹಾಗೂ ದೇಶಾದ್ಯಂತ ಹರಡಿರುವ ವಾಣಿಜ್ಯ, ಸಹಕಾರಿ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಒಳಗೊಂಡಿದೆ. ಬ್ಯಾಂಕುಗಳಿಗೆ ನೋಟುಗಳ ವಿತರಣೆಗಾಗಿ ಆರ್‌ಬಿಐ ತಾಜಾ ನೋಟುಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ವಿಸ್ತೃತವಾದ ಕರೆನ್ಸಿ ಚೆಸ್ಟ್‌ಗಳಿಗೆ ರವಾನಿಸುತ್ತದೆ. ಆನಂತರ ಅಲ್ಲಿಂದ ನೋಟುಗಳನ್ನು ಆಸುಪಾಸಿನಲ್ಲಿರುವ ಸಣ್ಣಪುಟ್ಟ ಕರೆನ್ಸಿ ಚೆಸ್ಟ್‌ಗಳಿಗೆ ಕಳುಹಿಸಿಕೊಡಲಾಗುತ್ತದೆ.
 ಮುಂದಿನ ವರ್ಷಗಳಲ್ಲಿ ಕರೆನ್ಸಿಗಾಗಿನ ಬೇಡಿಕೆ ಸಾಧ್ಯತೆಯ ನ್ನು ಅಂದಾಜಿಸಲು ಆರ್‌ಬಿಐ ಇಕೊನೊಮೆಟ್ರಿಕ್ ಮಾದರಿ ಯನ್ನು ಅನುಸರಿಸುತ್ತದೆ. ನೈಜ ಒಟ್ಟು ಆಂತರಿಕ ಉತ್ಪನ್ನದ ನಿರೀಕ್ಷಿತ ಬೆಳವಣಿಗೆೆ, ಹಣದುಬ್ಬರದ ದರ ಹಾಗೂ ಮುಖಬೆಲೆಗ ನುಗುಣವಾಗಿ ವಿಸರ್ಜನೆಗೊಂಡ ಹರಕುನೋಟುಗಳನ್ನು ಆಧರಿಸಿ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಹಾಗಾದರೆ, ನೋಟು ವಿತರಣಾ ಕೇಂದ್ರಗಳು ಸಮರ್ಪಕ ವಾಗಿವೆಯೆಂದಾಯಿತು, ವಿತರಣೆಯ ಮಾದರಿಯೂ ಕೂಡಾ ಸುವ್ಯವಸ್ಥಿತವಾಗಿದೆ ಹಾಗೂ ಭವಿಷ್ಯದ ಆಗತ್ಯಗಳಿಗಾಗಿ ನೋ ಟುಗಳ ಪೂರೈಕೆಯ ಪ್ರಮಾಣವನ್ನು ಅಂದಾಜಿಸುವ ವಿಧಾನವೂ ಚಾಲ್ತಿಯಲ್ಲಿದೆ ಹಾಗಾದರೆ ಹಾಲಿ ಕರೆನ್ಸಿ ಬಿಕ್ಕಟ್ಟಿಗೆ ಕಾರಣವೇನು?.
ಎಟಿಎಂಗಳಲ್ಲಿ ನಗದಿನ ಕೊರತೆಯು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಅದು ವ್ಯಾಪಕವಾಗಿ ಹರಡಿದೆ. ಮಾಧ್ಯಮ ವರದಿಗಳ ಪ್ರಕಾರ ದಿಲ್ಲಿ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಚತ್ತೀಸ್‌ಗಢ, ಬಿಹಾರ,ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ ಹಾಗೂ ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕರೆನ್ಸಿ ಕೊರತೆ ವರದಿಯಾಗಿದೆ.
ಈ ಕೊರತೆ ಬಹುತೇಕ ಇಡೀ ದೇಶವನ್ನೇ ಆಮರಿಕೊಂಡುಬಿಟ್ಟಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನೋಟಿನ ಕೊರತೆಯು ಕೆಲವೊಮ್ಮೆ ನಿರ್ದಿಷ್ಟ ಪ್ರದೇಶಗಳಲ್ಲಿ ಎರಡು ವಾರಗಳಿಂದಲೂ ಮುಂದುವರಿದಿದೆ.
 ಹಣಕಾಸು ಇಲಾಖೆಯ ಅಧಿಕಾರಿಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ನಗದು ಹಣಕ್ಕಾಗಿ ಅಸಾಮಾನ್ಯವಾದ ಬೇಡಿಕೆಯುಂಟಾಗಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಆದರೆ ಈ ಅಸಾಮಾನ್ಯವಾದ ಬೇಡಿಕೆಯ ಸ್ವರೂಪ ಹಾಗೂ ಅದಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಲಾಗಿಲ್ಲ. ಒಂದು ವೇಳೆ ಅದು ಕಾಲಿಕವಾಗಿದ್ದಲ್ಲಿ, ಅದನ್ನು ಯಾಕೆ ಮೊದಲೇ ನಿರೀಕ್ಷಿಸಲಾಗಿರಲಿಲ್ಲ?. ಒಂದು ವೇಳೆ ಅದು ಕಾಲಿಕವಾಗಿರದಿದ್ದಲ್ಲಿ, ಆ ಬಗ್ಗೆ ತಕ್ಷಣವೇ ತನಿಖೆ ನಡೆಯಬೇಕಾದ ಅಗತ್ಯವಿದೆ.


2016ರ ನವೆಂಬರ್ 8ರಂದು ನಗದು ಅಮಾನ್ಯತೆಯ ಪರಿಣಾಮ ವಾಗಿ 1 ಸಾವಿರ ರೂ. ಮುಖಬೆಲೆ.ಯ ಕರೆನ್ಸಿ ನೋಟುಗಳನ್ನು ರದ್ದುಪಡಿಸಲಾಗಿತ್ತು. ಅಚ್ಚರಿಯೆಂದರೆ, ಅವುಗಳ ಜಾಗದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಬಂದವು. ಆದರೆ ಈ ಬದಲಿ ವ್ಯವಸ್ಥೆ ಜಾರಿಯ ಹಿಂದೆ ಯಾವುದೇ ವಿವೇಚನೆ ಇರುವಂತೆ ಕಾಣವುದಿಲ್ಲವೆಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ. ಒಂದು ವೇಳೆ 1 ಸಾವಿರ ರೂ. ಮುಖಬೆಲೆಯ ನೋಟುಗಳಿಂದಾಗಿ, ಕಪ್ಪುಹಣ ದಾಸ್ತಾನು ಮಾಡಲು ಸುಲಭವಾಗಿತ್ತೆಂದು ಸರಕಾರ ಭಾವಿಸಿದ್ದೇ ಆದರೆ ಅದು ಯಾಕೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತು?. ಈ ಪ್ರಶ್ನೆಗೆ ಕೇಂದ್ರ ಸರಕಾರದ ಬಳಿ ಯಾವುದೇ ಉತ್ತರವಿಲ್ಲ. ಆರ್‌ಬಿಐ ವರದಿಯ ಪ್ರಕಾರ, ಹೊಸತಾಗಿ ಬಿಡುಗಡೆಗೊಳಿಸಲಾದ 2 ಸಾವಿರ ರೂ. ವೌಲ್ಯದ ಬ್ಯಾಂಕು ನೋಟುಗಳ ಒಟ್ಟು ವೌಲ್ಯವು 2017ರ ಮಾರ್ಚ್ ವೇಳೆಗೆ ಚಲಾವಣೆಯಲ್ಲಿರುವ ನೋಟುಗಳ ಒಟ್ಟು ವೌಲ್ಯದ ಶೇ.50.2ರಷ್ಟಿತ್ತು. ಸಂಖ್ಯೆಗಳ ದೃಷ್ಟಿಯಲ್ಲಿ ಹೇಳುವು ದಾದರೆ, 3285 ದಶಲಕ್ಷ ನೋಟುಗಳಾಗಿವೆ. ಇನ್ನೊಂದು ವರದಿಯ ಪ್ರಕಾರ, ಕರೆನ್ಸಿ ಚೆಸ್ಟ್‌ಗಳಿಗೆ ಪೂರೈಕೆಯಾಗುವ 2 ಸಾವಿರ ರೂ. ಮುಖಬೆಲೆಯ ಬ್ಯಾಂಕುನೋಟುಗಳ ಪೂರೈಕೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಸುದ್ದಿಪತ್ರಿಕೆಯೊಂದರ ವರದಿ ಪ್ರಕಾರ, ಆರ್‌ಬಿಐ ಈ ನೋಟುಗಳನ್ನು ಕಳೆದ ವರ್ಷದ ಜುಲೈನಲ್ಲಿ ಪೂರೈಕೆ ಮಾಡುವುದನ್ನು ನಿಲ್ಲಿಸಿತ್ತು. ಅದೇ ರೀತಿ, ಕರೆನ್ಸಿ ಚೆಸ್ಟ್ ಗಳಲ್ಲಿ ಕರೆನ್ಸಿ ವೌಲ್ಯವು ಕೂಡಾ ಗಣನೀಯವಾಗಿ ಕುಸಿದಿದೆ.
   ಹಣಕಾಸು ಸಚಿವಾಲಯದ ಅಧಿಕಾರಿಗಳ ಪ್ರಕಾರ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವ ನಿರ್ಧಾರವನ್ನು ಕೆಲವು ತಿಂಗಳುಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಇತರ ಮುಖಬೆಲೆಯ ನೋಟುಗಳು ಈ ಕೊರತೆಯನ್ನು ನೀಗಿಸಲಿವೆಯೇ ಎಂಬುದನ್ನು ಕೂಡಾ ಅವರು ಸ್ಪಷ್ಟಪಡಿಸಿಲ್ಲ. ಹಾಗಾದರೆ ಸರಕಾರವು ಯಾಕೆ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ?. ನಮಗೆ ತಿಳಿದಿರದಂತಹ ದೊಡ್ಡ ಯೋಜನೆಯೊಂದರ ಭಾಗ ಇದಾಗಿದೆಯೇ?. ಈ ನೋಟುಗಳಲ್ಲಿ ಹೆಚ್ಚಿನವು ಕಪ್ಪುಹಣ ದಾಸ್ತಾನುದಾರರ ಬಳಿ ಸಂಗ್ರಹಗೊಂಡಿದ್ದರಿಂದ ಅದು ಚಲಾವಣೆಯಾಗುತಿಲ್ಲವೇ?. ತಿಕ್ಕಲುತನದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಹೆಸರಾಗಿರುವ ಈ ಸರಕಾರವು ಒಂದು ದಿನ ಹಠಾತ್ತನೆ ಈ ನೋಟುಗಳನ್ನು ಕೂಡಾ ಅಮಾನ್ಯಗೊಳಿಸಿದಲ್ಲಿ ನನಗೆ ಅಚ್ಚರಿಯಾಗಲಾರದು.


  ಸರಕಾರವು ಉತ್ತರನೀಡಬೇಕಾಗಿರುವ ಕೆಲವೊಂದು ಸಮಂಜಸ ಪ್ರಶ್ನೆಗಳು ಹೀಗಿವೆ.
1. ನಗದಿನ ಬೇಡಿಕೆಯಲ್ಲಿ ಹಠಾತ್ ಏರಿಕೆಗೆ ಕಾರಣವೇನು?
2. ಒಂದು ವೇಳೆ ಅದು ಕಾಲಿಕವಾಗಿದ್ದಲ್ಲಿ, ಅದನ್ನು ಯಾಕೆ ಮೊದಲೇ ನಿರೀಕ್ಷಿಸಿರಲಿಲ್ಲ?. ಒಂದು ವೇಳೆ ಅದು ಒಂದು ಸಮಯದ ಏರಿಕೆಯಾಗಿದ್ದಲ್ಲಿ, ಅದಕ್ಕೇನು ಕಾರಣ?.
3. 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ದಾಸ್ತಾನು ಮಾಡಲಾಗುತ್ತಿ ದೆಯೇ? ಒಂದು ವೇಳೆ ಹೌದಾದರೆ ಸರಕಾರ ಆ ಬಗ್ಗೆ ಏನು ಮಾಡುತ್ತಿದೆ?.
 4. 2 ಸಾವಿರ ರೂ.ಮುಖಬೆಲೆಯ ನೋಟುಗಳ ಮುದ್ರಣವನ್ನು ಸರಕಾರ ಯಾಕೆ ಹಾಗೂ ಯಾವಾಗದಿಂದ ನಿಲ್ಲಿಸಿದೆ?. ಅದನ್ನು ಚಲಾವಣೆಯಿಂದ ಹೊರಗಿಡುವ ಸಾಧ್ಯತೆಯಿದೆಯೆ?
5. ಬ್ಯಾಂಕ್ ನೋಟುಗಳ ಪ್ರಾದೇಶಿಕ ಆವಶ್ಯಕತೆಗಳನ್ನು ಆರ್‌ಬಿಐ ಯಾಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ಹಾಗೂ ಅದನ್ನು ಯಾಕೆ ಯೋಜನಾಬದ್ಧವಾಗಿ ರೂಪಿಸುತ್ತಿಲ್ಲ. ದೇಶದ ಕೆಲವು ಭಾಗಗಳಲ್ಲಿ ಕರೆನ್ಸಿ ನೋಟುಗಳ ಅತಿಯಾದ ಪೂರೈಕೆ ಹಾಗೂ ಇನ್ನು ಕೆಲವೆಡೆ ಕೊರತೆಯುಂಟಾಗಿರುವಂತಹ ಸನ್ನಿವೇಶಗಳು ಯಾಕೆ ಕಂಡುಬರುತ್ತಿವೆ?
 ನಗದು ಹಣಕ್ಕಾಗಿ ಬೇಡಿಕೆ ಸಲ್ಲಿಸಿದ ಹಲವಾರು ಗ್ರಾಹಕರನ್ನು ಬ್ಯಾಂಕ್‌ಶಾಖೆಗಳು ಇನ್ನೊಂದು ದಿನ ಬರುವಂತೆ ಹೇಳಿ ಮರಳಿ ಕಳುಹಿಸಿರುವ ಹಲವಾರು ಘಟನೆಗಳು ವರದಿಯಾಗಿವೆ. ಜನತೆ ಈಗ ದೇಶದ ಪ್ರಮುಖ ಬ್ಯಾಂಕುಗಳ ಆರ್ಥಿಕತೆ ಹದಗೆಟ್ಟಿರುವ ಬಗ್ಗೆ ಆತಂಕಗೊಂಡಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2.72 ಲಕ್ಷ ಕೋಟಿ ರೂ.ಸಾಲವನ್ನು ಮನ್ನಾ ಮಾಡಿವೆ. ಈ ಸಾಲಮನ್ನಾದ ಫಲಾನುಭವಿಗಳು ಯಾರೆಂದು ತಿಳಿದಿಲ್ಲ. ಬ್ಯಾಂಕುಗಳ ಕಾರ್ಯನಿರ್ವಹಿಸದ ಆಸ್ತಿ (ಎನ್‌ಪಿಎ)ಗಳ ಪ್ರಮಾಣವು ಕಳೆದ ನಾಲ್ಕು ವರ್ಷಗಳಲ್ಲಿ ವ್ಯಾಪಕವಾಗಿ ಏರಿಕೆಯಾಗಿದೆ ಹಾಗೂ ಇಂದು ಸುಮಾರು 9 ಲಕ್ಷ ಕೋಟಿ ರೂ.ಗಳಿಗೆ ಬಂದು ತಲುಪಿದೆ. ಒಂದು ವೇಳೆ ಆರ್‌ಬಿಐ ನೂತನ ನಿಯಮಗಳನ್ನು ಅನುಸರಿಸಿದಲ್ಲಿ, ಈ ಮೊತ್ತವು ಇನ್ನು ಕೆಲವು ಲಕ್ಷ ಕೋಟಿಗಳವರೆಗೆ ಏರಿಕೆಯಾಗಲೂ ಬಹುದು.
ನೋಟುಗಳ ಅಭಾವದ ಬಗ್ಗೆ ಕೇಂದ್ರ ಸರಕಾರ ಹೆಚ್ಚಿನ ವಿವರಣೆ ನೀಡಬೇಕಾದ ಅಗತ್ಯವಿದೆ. ಭಾರತದ ಜನತೆ ತನ್ನನ್ನು ಚುನಾಯಿಸಿರುವುದು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಪಡಿಸುವುದಕ್ಕಾಗಿ ಹಾಗೂ ಆರ್ಥಿಕತೆಯನ್ನು ಭಗ್ನಗೊಳಿಸು ವುದಕ್ಕಾಗಲಿ ಅಲ್ಲವೆಂಬುದನ್ನು ಸರಕಾರ ನೆನಪಿಡಬೇಕಾಗಿದೆ.
ಕೃಪೆ: ndtv

share
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ
Next Story
X