Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸೂಕ್ತ ಸಮಯಕ್ಕಾಗಿ ನಾನು ಕಾಯುತ್ತಿದ್ದೇನೆ...

ಸೂಕ್ತ ಸಮಯಕ್ಕಾಗಿ ನಾನು ಕಾಯುತ್ತಿದ್ದೇನೆ -ರೋಹಿಣಿ ಸಾಲ್ಯಾನ್

ಸುಕನ್ಯಾ ಶಾಂತಾಸುಕನ್ಯಾ ಶಾಂತಾ3 May 2018 12:06 AM IST
share
ಸೂಕ್ತ ಸಮಯಕ್ಕಾಗಿ ನಾನು ಕಾಯುತ್ತಿದ್ದೇನೆ -ರೋಹಿಣಿ ಸಾಲ್ಯಾನ್

ಭಾಗ-2

ವಿಚಾರಣೆಗಳನ್ನು, ವಿಶೇಷವಾಗಿ 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಮೊಕದ್ದಮೆಯ ವಿಚಾರಣೆಗಳನ್ನು ನಡೆಸಿದ ರೀತಿಯಲ್ಲೇ ಸ್ಪಷ್ಟವಾದ ವ್ಯತ್ಯಾಸಗಳಿದ್ದವು ಎನ್ನುತ್ತಾರೆ ಸಾಲಾನ್. ಇವುಗಳನ್ನು ಮೂರು ವಿಭಾಗ ಗಳಾಗಿ ವಿಂಗಡಿಸಬಹುದು- 2011ರ ಮೊದಲು, 2011-14 ಮತ್ತು 2014ರ ನಂತರ. ಪ್ರಾರಂಭಿಕ ವಿಚಾರಣೆಗಳಲ್ಲಿ ಮೊದಲ ಬಾರಿಗೆ, ದೇಶದ ಸಾರ್ವಭೌಮತೆಯನ್ನು ಬುಡ ಮೇಲು ಮಾಡುವ ಒಂದು ಸಂಘಟಿತ ಅಪರಾಧ ಗುಂಪಿನ (ಸಿಂಡಿಕೇಟ್) ಭಾಗವಾಗಿ ಆಪಾದಿತರಾದವರಲ್ಲಿ ಹಿಂದೂ ಹೆಸರುಗಳಿದ್ದವು. ಪ್ರಮುಖ ಆಪಾದಿತರಲ್ಲೊಬ್ಬನಾದ ದಯಾನಂದ ಪಾಂಡೆಯ ಬಂಧನ ಮತ್ತು ತರುವಾಯ ನಡೆದ ವಿಚಾರಣೆಯ ವೇಳೆ ಆತ ಇತರ ಆಪಾದಿತರ ವಿರುದ್ಧ ಪ್ರಮುಖ ಸಾಕ್ಷಿ ನೀಡಿದ್ದ. ಆತನಿಂದ ವಶಪಡಿಸಿ ಕೊಂಡ ಲ್ಯಾಪ್‌ಟಾಪ್‌ನಲ್ಲಿ ಹೆಚ್ಚಿನ ಒಳಸಂಚು ಭೇಟಿಗಳು, ರಹಸ್ಯ ಸಭೆಗಳು, ಆ ಸಭೆಗಳ ದಾಖಲೆ (ಮಿನಿಟ್ಸ್)ಗಳ ಮತ್ತು ಕೆಲವು ಪ್ರಮುಖ ವ್ಯಕ್ತಿಗಳ ವೀಡಿಯೊ ಟೇಪ್ ಮಾಡಲಾದ ಪುರಾವೆ ಇತ್ತು.

ಎನ್‌ಐಎ ಆ ಎಲ್ಲ ಪುರಾವೆಗಳನ್ನು ಬದಿಗೆ ತಳ್ಳಲು ಪ್ರಯತ್ನಿಸಿತು ಮತ್ತು ಇದರಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಕಠಿಣ ಎಂಸಿಒಸಿಎ ಕಾನೂನಿನಿಂದ ಆಪಾದಿತರು ಬಿಡುಗಡೆಗೊಳ್ಳು ವಂತಾ ಯಿತು. ‘‘ಆಪಾದಿತರು ಸರಕಾರವನ್ನು ಉರುಳಿಸಿ ಇಸ್ರೇಲ್‌ನಲ್ಲಿ ಒಂದು ದೇಶಭ್ರಷ್ಟ ಸರಕಾರವನ್ನು ರಚಿಸಲು ಒಳಸಂಚು ನಡೆಸುವುದನ್ನು ತೋರಿಸುವ ವೀಡಿಯೊ ಟೇಪ್‌ಗಿಂತ ಹೆಚ್ಚಿನ ಬಲವಾದ ಬೇರೆ ಪುರಾವೆ ಬೇಕೇ?’’ ಎಂದು ಸಾಲ್ಯಾನ್ ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ನಡೆದ ಮೊಡಸ್ಸಾ ಘಟನೆಗೂ, ಮಾಲೆಗಾಂವ್ ಸ್ಫೋಟಕ್ಕೂ ಭಾರೀ ಸಾಮ್ಯ ಇದೆ. ಬಾಂಬ್‌ಗಳನ್ನು ಅಸೆಂಬಲ್ ಮಾಡಿ ತಯಾರಿಸಿದ ರೀತಿಯಲ್ಲೂ ಸಾಮ್ಯ ಇದೆ.
‘‘ಆಪಾದಿತರ ಬಗ್ಗೆ ಮೃದು ಧೋರಣೆ ತಳೆಯುವಂತೆ, ವಿಚಾರಣೆಯನ್ನು ನಿಧಾನಗತಿಯಲ್ಲಿ ನಡೆಸುವಂತೆ ಹೇಳಿದ ಮೇಲೆ ತಾನು ತುಂಬ ನೊಂದುಕೊಂಡೆ. ತುಂಬ ಡಿಸ್ಟರ್ಬ್ ಆದೆ’’ ಎನ್ನುತ್ತಾರೆ ಸಾಲ್ಯಾನ್. ‘‘ಅದು ಸುಲಭದ ಕೆಲಸವಾ ಗಿರಲಿಲ್ಲ 2008ರಲ್ಲಿ ಎಟಿಎಸ್ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಆ ಚಾರ್ಜ್‌ಶೀಟ್ ಸಿದ್ಧಪಡಿಸಲು ತುಂಬಾ ಪರಿಶ್ರಮ ಪಟ್ಟಿದ್ದೆ. ಆ ಪುಟಗಳನ್ನು ಓದುವ ಯಾರಿಗೂ ಆದರೂ ನಮ್ಮ ಮೊಕದ್ದಮೆಯ ಹಿರಿಮೆ ಏನೆಂದು ತಿಳಿಯುತ್ತದೆ. ಆದರೆ ನಾವು ಆ ಆಪಾದನಾ ಪಟ್ಟಿಯಲ್ಲಿ ಬರೆದಿದ್ದ 4,000ಕ್ಕೂ ಹೆಚ್ಚು ಪುಟಗಳಲ್ಲಿ ಒಂದೇ ಒಂದು ಪುಟಕ್ಕೂ ಕಾಸಿನ ಕಿಮ್ಮತ್ತು ನೀಡಲಿಲ್ಲ. ಆ ಎಲ್ಲ ಪುಟಗಳನ್ನೂ ಕಡೆಗಣಿಸಲಾಯಿತು. 2016ರಲ್ಲಿ ಎನ್‌ಐಎ ತನ್ನ ಆಪಾದನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲೇ ಇಲ್ಲ.’’
ಮಾಲೆಗಾಂವ್ ಸ್ಫೋಟದ ವೇಳೆ ಸಂಗ್ರಹಿಸಲಾದ ಪುರಾವೆಗಳು ಕೇವಲ ಆ ಒಂದು ಪ್ರಕರಣಕ್ಕೆ ಸಂಬಂಧಿಸಿದ ಸೀಮಿತ ಪುರಾವೆಗಳಲ್ಲ; ಇತರ ಪ್ರಕರಣಗಳಿಗೆ ಪ್ರಮುಖ ಸುಳಿವುಗಳನ್ನು ನೀಡುವ ಹಲವು ಅಂಶಗಳು ಕೂಡ ಅಲ್ಲಿ ಇದ್ದವು. ‘‘ಹಿಂದೂ ತೀವ್ರಗಾಮಿಗಳು ಒಳಗೊಂಡಿದ್ದ ಮೊಡಸ್ಸಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ವಿಚಾರ ಗಳನ್ನೇ ಕೊನೆಗೊಳಿಸಿತು. ಆದರೆ ನಿಜ ಸಂಗತಿ ಏನೆಂದರೆ, ಮೊಡಸ್ಸಾ ಪ್ರಕರಣ ಮತ್ತು ಮಾಲೆಗಾಂವ್ ಸ್ಫೋಟದ ನಡುವೆ ಸ್ಪಷ್ಟವಾಗಿ ಕಾಣುವ ಸಾಮ್ಯತೆ ಇತ್ತು. ಇದು ಎಷ್ಟರ ಮಟ್ಟಿಗೆ ಎಂದರೆ ಬಾಂಬ್‌ಗಳನ್ನು ತಯಾರಿಸಲಾದ ರೀತಿ ಕೂಡ ಎರಡು ಸ್ಫೋಟಗಳಲ್ಲಿ ಒಂದೇ ತೆರನಾಗಿತ್ತು.
ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಮಂಡಿಸಲಾದ 16 ಪುಟಗಳ ಅಂತಿಮ ವರದಿಯಲ್ಲಿ, ಎನ್‌ಐಎ ಅಧಿಕಾರಿಗಳು, ವಿಚಾರಣೆಗಳಲ್ಲಿ ವಿಳಂಬ ಮಾಡಿರುವುದಕ್ಕೆ ಹಾಗೂ ‘ಪುರಾವೆ ನಾಶಕ್ಕೆ’ ಸಬರ್‌ಕಂತಾ ಜಿಲ್ಲೆಯ ಪೊಲೀಸರನ್ನು ದೂರಿದರು. ಮೊಕದ್ದಮೆಯಲ್ಲಿ ಆಪಾದನಾ ಪಟ್ಟಿ ಸಲ್ಲಿಸಲು ತಮಗೆ ಯಾವುದೇ ಪುರಾವೆ ದೊರಕಲಿಲ್ಲವೆಂದು ಸ್ಥಳೀಯ ಪೊಲೀಸರು ಕೂಡ ಹೇಳಿದರು. ಮೊಡಸ್ಸಾ ಸ್ಫೋಟ ಮತ್ತು ಆ ಸ್ಫೋಟ ಸಂಭವಿಸುವ ಒಂದು ದಿನದ ಮೊದಲು 2008ರ ಸೆಪ್ಟಂಬರ್ 29ರಂದು ನಡೆದ ಮಾಲೆಗಾಂವ್ ಬಾಂಬ್ ಸ್ಫೋಟದ ನಡುವೆ ಭಾರೀ ಸಾಮ್ಯತೆಗಳಿದ್ದವು. ಎರಡೂ ಸ್ಫೋಟಗಳು ಸುಮಾರಾಗಿ ಒಂದೇ ವೇಳೆ, ರಾತ್ರಿ 9:30ಕ್ಕೆ ನಡೆದಿದ್ದವು; ಮತ್ತು ಎರಡೂ ಪ್ರಕರಣಗಳಲ್ಲಿ ಸ್ಫೋಟಕಗಳನ್ನು ಮೋಟಾರ್ ಬೈಕ್‌ವೊಂದರ ಒಳಗೆ ಅಡಗಿಸಿ ಇಡಲಾಗಿತ್ತು.
 ಹಿಂದಿರುಗಿ ನೋಡಿದಾಗ, 2011ರಲ್ಲಿ ಎನ್‌ಐಎ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿರಲಿಲ್ಲ ಎನ್ನುತ್ತಾರೆ ಸಾಲ್ಯಾನ್: ‘‘ಪ್ರತಿಯೊಬ್ಬರನ್ನೂ ನಂಬುವುದು ಕಷ್ಟವಿತ್ತು ಮತ್ತು ಪ್ರತಿಯೊಬ್ಬರೂ ಪರಸ್ಪರ ಸಹಕರಿಸುತ್ತಿದ್ದ ಒಂದು ವಿಚಾರಣಾ ತಂಡದೊಂದಿಗೆ ನಾನೂ ಕೆಲಸ ಮಾಡಿದ್ದೆ. ಆದರೂ ಹೊಸದಾಗಿ ರಚಿತವಾದ ತಂಡದಲ್ಲಿದ್ದ ಪ್ರತಿಯೊಬ್ಬರೂ ಪ್ರಬಲವಾದ ಒಂದು ಮೊಕದ್ದಮೆಯನ್ನು ಕಟ್ಟಲು ಒಲವು ತೋರುತ್ತಿಲ್ಲ; ಎನ್‌ಐಎ ಒಳಗೆ, ಮೊಕದ್ದಮೆಯನ್ನು ದುರ್ಬಲಗೊಳಿಸುವ ಮಂದಿಯನ್ನು ನುಸುಳಿಬಿಡಲಾಗಿದೆ ಎಂಬ ಭಾವನೆ ನನಗಿತ್ತು. ಆದರೂ ಕೂಡ ಕೆಲವು ಮಂದಿ ನುರಿತ, ಸಮರ್ಥ ಅಧಿಕಾರಿಗಳು ನಮ್ಮ ತಂಡದಲ್ಲಿದ್ದರು. ಅವರು ನನ್ನ ಪರವಾಗಿ ನಿಂತು, ತುಂಬ ಜತನದಿಂದ ಪ್ರಕರಣದ ವಿಚಾರಣೆ ನಡೆಸಿದರು. ಆದರೆ ಅವರನ್ನು ಕೂಡ ಹೊರ ಕಳುಹಿಸಲಾಯಿತು. ಪ್ರಕರಣವನ್ನು ನನ್ನ ಕೈಯಿಂದ ಕಿತ್ತುಕೊಂಡಾಗ, 2014ರ ಜೂನ್‌ನಲ್ಲಿ ಅವರೂ ಹೊರ ನಡೆಯಬೇಕಾಯಿತು.
2011ರಿಂದ 2014ರ ನಡುವಣ ನಾಲ್ಕು ವರ್ಷಗಳಲ್ಲಿ, ಮೂವರು ಹಿರಿಯ ಎನ್‌ಐಎ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದರು. ಆದರೆ ಅವರು ವಿಚಾರಣೆಯಲ್ಲಿ ಏನೇನನ್ನು ಪತ್ತೆ ಹಚ್ಚಿದರೆಂಬುದನ್ನು ಎಲ್ಲಿಯೂ ದಾಖಲಿಸಲಾಗಿಲ್ಲ.
‘‘ವಿಚಾರಣಾ ತಂಡವು ತಾವು ಪತ್ತೆ ಹಚ್ಚಿದ ವಿವರಗಳನ್ನು ಅಂತಿಮಗೊಳಿಸಿ 2014ರಲ್ಲಿ ಒಂದು ಪೂರಕ ಅಪಾದನಾ ಪಟ್ಟಿಯನ್ನು ಸಲ್ಲಿಸಲು ಸಿದ್ಧವಾಗುವಷ್ಟರಲ್ಲಿ ಅವರನ್ನು ಅವರ ಕೆಲಸದಲ್ಲಿ ಮುಂದುವರಿಯದಂತೆ ತಡೆಯಲಾಯಿತು ಮತ್ತು ಸ್ವಲ್ಪವೇ ಸಮಯದಲ್ಲಿ ಅವರನ್ನು ಪ್ರಕರಣದಿಂದ ಹೊರಕಳುಹಿಸ ಲಾಯಿತು.’’ ಎಂದಿದ್ದಾರೆ ಸಾಲ್ಯಾನ್.
2015ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ 2008ರ ಮಾಲೆಗಾಂವ್ ಸ್ಫೋಟದ ಆಪಾದಿತರ ಬಗ್ಗೆ ಮೃದು ಧೋರಣೆ ತಳೆಯುವಂತೆ ತನಗೆ ಹೇಳಿದ್ದು ಎನ್‌ಐಎಯ ಓರ್ವ ಪೊಲೀಸ್ ಸುಪರಿಂಟೆಂಡೆಂಟ್ ಸುಹಾಸ್ ವಾರ್ಕೆ ಎಂದು ಸಾಲ್ಯಾನ್ ಬಹಿರಂಗ ಪಡಿಸಿದರು.
ಆಕೆಯ ಸಂದರ್ಶನ ಪ್ರಕಟವಾದ ಬಳಿಕ ವಾರ್ಕೆಯನ್ನು ಎನ್‌ಐಎಯಿಂದ ಬೇರೆಡೆಗೆ ಕಳುಹಿಸಲಾಗಿತ್ತು. ಆದರೆ ಈಗ ಆತ ಎಟಿಎಸ್‌ಗೆ ಮರಳಿ ಬಂದಿದ್ದಾರೆ ಮತ್ತು ವ್ಯಂಗ್ಯವೆಂದರೆ ಆತ ಪುನಃ ಎಟಿಎಸ್‌ನ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಆದ್ದರಿಂದ ಪ್ರಕರಣವು ಬುಡಸಹಿತ ನಾಶವಾಗುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ.
ಸಾಲ್ಯಾನ್‌ರವರು ಓರ್ವ ಅಧಿಕಾರಿಯ ಹೆಸರನ್ನು ಮುಕ್ತವಾಗಿಯೇ ಹೇಳಿದರಾದರೂ ಬಳಿಕ ಮುಂಬೈ ಹೈಕೋರ್ಟ್ ಸೀಲ್ ಮಾಡಲಾದ ಲಕೋಟೆಯೊಂದರಲ್ಲಿ ಒಂದು ಅಫಿದಾವಿತ್ ಸಲ್ಲಿಸಿದರು. ಇದನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಯಿತು. ಆದರೂ ಕೂಡ ಎನ್‌ಐಎ ಉಲ್ಲೇಖಿತ ಅಧಿಕಾರಿಗಳ ವಿರುದ್ಧ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ. ನಿಜ ಹೇಳಬೇಕೆಂದರೆ ಇನ್ನೂ ಕೂಡ ಸಾಲ್ಯಾನ್‌ರನ್ನು ಎನ್‌ಐಎ ಡಿನೋಟಿಫೈ ಮಾಡಿಲ್ಲ. ‘‘ಅವರು ನನ್ನನ್ನು ಮುಟ್ಟಿದ ಕ್ಷಣ ತಾವು ರಹಸ್ಯ ಪೆಟ್ಟಿಗೆಯೊಂದನ್ನು (ಪಂಡೋರಾಸ್‌ಬಾಕ್ಸ್) ತೆಗೆದಂತಾಗುತ್ತದೆಂದು ಅವರಿಗೆ ಗೊತ್ತಿದೆ. ಆದರೆ ನಾನು ಹಿಂದೇಟು ನೀಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ. ಸ್ವಲ್ಪ ಬೇಗವೋ ಅಥವಾ ತಡವಾಗಿಯೋ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ.’’
ಕೃಪೆ: thewire

share
ಸುಕನ್ಯಾ ಶಾಂತಾ
ಸುಕನ್ಯಾ ಶಾಂತಾ
Next Story
X