Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಜನಪ್ರತಿನಿಧಿಗಳಿಗೆ ಜನರೇ...

ಜನಪ್ರತಿನಿಧಿಗಳಿಗೆ ಜನರೇ ಹೆದರುವಂತಾದರೆ...?

ಕ್ರಿಮಿನಲ್ ಆಪಾದನೆಗಳನ್ನು ಹೊತ್ತಿರುವ ರಾಜ್ಯದ ಶಾಸಕರು

ಡಾ. ಬಿ. ಭಾಸ್ಕರ್ ರಾವ್ಡಾ. ಬಿ. ಭಾಸ್ಕರ್ ರಾವ್19 May 2018 11:54 PM IST
share
ಜನಪ್ರತಿನಿಧಿಗಳಿಗೆ ಜನರೇ ಹೆದರುವಂತಾದರೆ...?

ಸುಳ್ಳುಗಳು ವದಂತಿಗಳು ಮತ್ತು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ನಾಡಿನಲ್ಲಿ ಹಿಂಸೆಯನ್ನು ಹುಟ್ಟುಹಾಕುವ ಎಲ್ಲ ಶಾಸಕರನ್ನು ಹದ್ದು ಬಸ್ತಿನಲ್ಲಿಡುವ ಜವಾಬ್ದಾರಿ ಅಂತಹ ಕ್ರಿಮಿನಲ್ ಮೊಕದ್ದಮೆ ಹೊಂದಿರುವವರನ್ನು ಚುನಾಯಿಸಿದ ಮತದಾರರ ಮೇಲಿದೆ. ನಾವು ಚುನಾಯಿಸಿದ ಶಾಸಕರಿಗೇ ನಾವು ಹೆದರುವಂತಾಗಬಾರದು; ಅವರು ನಮಗೆ ಹೆದರುವಂತಾಗಬೇಕು ಆಗ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇರುವುದಿಲ್ಲ.

 ‘‘ಜನರು ತಮ್ಮ ಸರಕಾರಕ್ಕೆ ಹೆದರಕೂಡದು ಸರಕಾರಗಳು ತಮ್ಮ ಜನರಿಗೆ ಹೆದರಬೇಕು.’’  -ಅಲಿನ್ ಮೂರ್ (ಇಂಗ್ಲಿಷ್ ಲೇಖಕ)

ಪ್ರಜಾಪ್ರಭುತ್ವದ ಕರಾಳ ನರ್ತನ ಕೊನೆಗೊಂಡಿದೆ. ಚುನಾವಣೆಗಳು ಮುಗಿದಿವೆ; ಜನರ ಆತಂಕ, ಭಯ, ಸಂಕಟಗಳು ಮುಗಿದಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ವಿದ್ಯಮಾನಗಳನ್ನು ಗಮನಿಸುವಾಗ ಈ ರಾಜ್ಯಕ್ಕೆ ಭವಿಷ್ಯದಲ್ಲಿ ಏನು ಗಂಡಾಂತರ ಕಾದಿದೆಯೋ ಎಂಬ ದಿಗಿಲು ಕಾಡುತ್ತದೆ.
‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್’ ಹೊರಗೆಡ ಹಿರುವ ಮಾಹಿತಿಯನ್ನಾಧರಿಸಿ ಆಂಗ್ಲಪತ್ರಿಕೆಯೊಂದು ನಮ್ಮ 221 ಚುನಾಯಿತ ಜನಪ್ರತಿನಿಧಿಗಳ ಹಿನ್ನೆಲೆಯ ಬಗ್ಗೆ ಪ್ರಕಟಿಸಿರುವ ವಿವರಗಳು ಗಾಬರಿಹುಟ್ಟಿಸುತ್ತವೆ.
221 ಮಂದಿ ಶಾಸಕರಲ್ಲಿ 77 ಮಂದಿ, ಅಂದರೆ ಒಟ್ಟು ಚುನಾಯಿತ ಜನಪ್ರತಿನಿಧಿಗಳ ಶೇ. 35 ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಇವರಲ್ಲಿ 54 ಮಂದಿ ಅಥವಾ ಒಟ್ಟು ಶಾಸಕರ ಶೇ. 24 ಪ್ರಜಾಪ್ರತಿನಿಧಿಗಳು ಗಂಭೀರ ಸ್ವರೂಪದ ಕ್ರಿಮಿನಲ್ ದಾಖಲೆ ಹೊಂದಿರುವವರು. ಇಂತಹ ಕ್ರಿಮಿನಲ್ ಮೊಕದ್ದಮೆಗಳನ್ನೆದುರಿಸುತ್ತಿರುವ ಶಾಸಕರು ‘ಪಕ್ಷಾತೀತ’ರು. ಈ ಕ್ರಿಮಿನಲ್ ‘ನಿಷ್ಠೆ’ ಯಾವುದೇ ಒಂದು ರಾಜಕೀಯ ಪಕ್ಷಕ್ಕಷ್ಟೇ ಸೀಮಿತವಾಗಿರದೆ ಎಲ್ಲ ಪ್ರಮುಖ ಮೂರು ಪಕ್ಷಗಳಲ್ಲೂ ಕಂಡು ಬರುತ್ತದೆ!
ಘೋಷಿತ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಬಿಜೆಪಿ ಶಾಸಕರ ಸಂಖ್ಯೆ 42 ಅಥವಾ ಪಕ್ಷದ ಒಟ್ಟು ಶಾಸಕರ ಶೇ. 41. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಮಹಾನುಭಾವರ ಸಂಖ್ಯೆ 23, ಅಂದರೆ ಒಟ್ಟು ಶಾಸಕರ ಶೇ. 30. ಜೆಡಿ(ಎಸ್)ನ ಶಾಸಕರಲ್ಲಿ 11 ಮಂದಿ ಅಥವಾ ಶೇ.30 ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನೆದುರಿಸುತ್ತಿದ್ದಾರೆ.
ಇನ್ನು, ಘೋಷಿತ ಗಂಭೀರ ಸ್ವರೂಪದ ಕ್ರಿಮಿನಲ್ ಆಪಾದನೆಗಳನ್ನು ಹೊತ್ತಿರುವ ಶಾಸಕರು ಬಿಜೆಪಿಯಲ್ಲಿ 29 ಮಂದಿ (ಪಕ್ಷದ ಒಟ್ಟು ಶಾಸಕರ ಶೇ. 28), ಕಾಂಗ್ರೆಸ್‌ನಲ್ಲಿ 17ಮಂದಿ (ಪಕ್ಷದ ಒಟ್ಟು ಶಾಸಕರ ಶೇ.30), ಮತ್ತು ಜೆಡಿಎಸ್‌ನಲ್ಲಿ 8 ಮಂದಿ (ಪಕ್ಷದ ಒಟ್ಟು ಶಾಸಕರ ಶೇ.30) ಇದ್ದಾರೆ.
ಇಷ್ಟೇ ಅಲ್ಲ, ರಾಜ್ಯದ ಜನತೆಯ ನಿದ್ದೆಗೆಡಿಸಬಹು ದಾದ, ನಿದ್ದೆಗೆಡಿಸ ಬೇಕಾದ ಇನ್ನೂ ಒಂದು ಮುಖ್ಯ ಅಂಶವನ್ನು ಇಲ್ಲಿ ಗಮನಿಸಬೇಕಾಗಿದೆ: ಕಳೆದ ಹತ್ತು ವರ್ಷಗಳಲ್ಲಿ ಇಂತಹ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ನಮ್ಮ ಸಂಭಾವಿತ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ‘ಅಭಿವೃದ್ಧಿ’ಯಾಗಿದೆ.
2008ರಲ್ಲಿ, ರಾಜ್ಯದ ಒಟ್ಟು ಜನಪ್ರತಿನಿಧಿಗಳಲ್ಲಿ 42 ಶಾಸಕರು(ಶೇ.20) ಕ್ರಿಮಿನಲ್ ಹಿನ್ನೆಲೆಯವರಾದರೆ, ಮುಂದಿನ ಐದು ವರ್ಷಗಳು ಕಳೆಯುವಷ್ಟರಲ್ಲಿ, ರಾಜ್ಯದ ಪ್ರಗತಿಗೆ ಅನುಗುಣವಾಗಿ, 2013ರಲ್ಲಿ ಇವರ ಸಂಖ್ಯೆ 74ಕ್ಕೆ(ಶೇ.34) ‘ಪ್ರಗತಿ’ ಹೊಂದಿತು. ಮತ್ತೊಂದು ಚುನಾವಣೆ ಕಳೆದು ರಾಜ್ಯ ಇನ್ನಷ್ಟು ಪ್ರಗತಿ ಸಾಧಿಸುವ ವೇಳೆಗೆ, ಕ್ರಿಮಿನಲ್ ಮೊಕದ್ದಮೆಗಳ ಮಹಾರಥರ, ಅತಿರಥರ ಸಂಖ್ಯೆ ಇದೀಗ 77ಕ್ಕೆ(ಶೇ.35) ಏರಿದೆ. ಹಾಗೆಯೇ ಗಂಭೀರವಾದ ಕ್ರಿಮಿನಲ್ ಮೊಕದ್ದಮೆಗಳನ್ನೆದುರಿಸುತ್ತಿರುವ ಶಾಸಕರ ಸಂಖ್ಯೆ ಕೂಡ 2008ರಲ್ಲಿ 17 ಅಥವಾ ಶೇ.8 ಇದ್ದದ್ದು 2013ರ ವೇಳೆಗೆ 39 (ಶೇ.17) ಅಥವಾ ದುಪ್ಪಟ್ಟು ಆಗಿದ್ದು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಯ ದ್ಯೋತಕವಾಗಿದೆ. ಮುಂದಿನ ಐದು ವರ್ಷಗಳಲ್ಲಿ (2018ರಲ್ಲಿ) ಇಂತಹ ಶಾಸಕರ ಸಂಖ್ಯೆ 54ಕ್ಕೆ(ಶೇ.24) ಏರಿಕೆಯಾಗಿ, ಕನ್ನಡ ನಾಡಿನ ಜನರಷ್ಟೇ ಅಲ್ಲ, ಜನಪ್ರತಿನಿಧಿಗಳೂ ಹಿಂಸಾರಂಗದಲ್ಲಿ ಹಿಂದೆಬಿದ್ದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.


ಇದೆಲ್ಲ ಏನನ್ನು ಹೇಳುತ್ತದೆ? ಈ ಹಿಂಸಾರಂಗದ ಅಭೂತಪೂರ್ವ ‘ಬೆಳವಣಿಗೆ’ ನಮ್ಮ ನಾಡಿನ, ನಮ್ಮ ದೇಶದ ಧಾರ್ಮಿಕ- ಸಾಮಾಜಿಕ- ಸಾಂಸ್ಕೃತಿಕ ಹಾಗೂ ರಾಜಕೀಯ ರಂಗಗಳಲ್ಲಾಗುತ್ತಿರುವ ಯಾವ ರೀತಿಯ ಧ್ರುವೀಕರಣಗಳನ್ನು ಸೂಚಿಸುತ್ತದೆ.?
 ನಾವು ನಮ್ಮ ದೇಶ ಹಾಗೂ ರಾಜಕೀಯ ಪಕ್ಷಗಳು ಜಾತ್ಯತೀತ ವಾಗಬೇಕು; ಅವು ಜನತೆಯ ಜಾತಿ ಧರ್ಮ ಮತಪಂಥಗಳನ್ನು ಮೀರಿ ದೇಶದ ಒಟ್ಟು ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಬ್ಬೊಬ್ಬೆಹೊಡೆಯುತ್ತಿರುವಾಗ ಹಿಂಸೆಯೇ ‘ಜಾತ್ಯತೀತ’ವಾಗುತ್ತದೆ; ಎಲ್ಲ ಪಕ್ಷಗಳ ಸಿದ್ಧಾಂತಗಳನ್ನೂ ಮೀರಿ ಹಿಂಸೆ ವಿಜೃಂಭಿಸುತ್ತದೆ. ಇದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾದ ಬೆಳವಣಿಗೆಯಲ್ಲ ಎನ್ನು ವುದನ್ನೂ ನಾವು ಗಮನಿಸಬೇಕು.
ಇತ್ತೀಚೆಗೆ ಪ್ರಕಟವಾದ ವರದಿಯೊಂದರ ಪ್ರಕಾರ 2018ರ ಮೊದಲ 45 ದಿನಗಳಲ್ಲಿ, ಕಳೆದ ವರ್ಷ ಇದೇ ಅವಧಿಯಲ್ಲಿ ನಡೆದ ಅಪರಾಧಗಳಿಗಿಂತ, ದೇಶದಲ್ಲಿ ಸಂಭವಿಸಿದ ಅಪರಾಧಗಳಲ್ಲಿ ‘ಮಾರ್ಜಿನಲ್ ಹೆಚ್ಚಳ’ವಾಗಿದೆ. ಕೊಲೆ, ಅಪಹರಣ, ಅತ್ಯಾಚಾರ, ವರದಕ್ಷಿಣೆ ಸಾವು ಇತ್ಯಾದಿಗಳಲ್ಲಿ ಏರಿಕೆಯಾಗಿದೆ. ದೇಶದ ರಾಜಧಾನಿಯಲ್ಲೇ ಅಪರಾಧಗಳ ಹೆಚ್ಚಳವನ್ನು ತಡೆಯುವುದು ಸರಕಾರಕ್ಕೆ ಸಾಧ್ಯವಾಗಿಲ್ಲ. ದೇಶದಲ್ಲಿ ನಡೆಯುವ ಅಪರಾಧಗಳ ಸಂಖ್ಯೆ ಯಾಕೆ ಆತಂಕಕಾರಿಯೆಂದರೆ, ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಪ್ರಕಟಿಸುವ ದತ್ತಾಂಶಗಳ ಪ್ರಕಾರ, 2016ರಲ್ಲಿ ದೇಶದಲ್ಲಿ 2.97 ಮಿಲಿಯ ಅಪರಾಧಗಳು ನಡೆದಿದ್ದವು. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 379 ಅಪರಾಧಗಳು ನಡೆದಿದ್ದವು.

ಗ್ಲೋಬಲ್ ಪೀಸ್ ಇಂಡೆಕ್ಸ್‌ನ 2017ರ ವರದಿಯ ಪ್ರಕಾರ, ಭಾರತವು ಮಹಿಳಾ ಪ್ರಯಾಣಿಕರಿಗೆ ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿಯಾದ ನಾಲ್ಕನೆಯ ದೇಶ. ಅಪರಾಧದಲ್ಲಿ ಅತ್ಯಾಚಾರ, ಲೈಂಗಿಕ ದಾಳಿ, ಅಪಹರಣ, ಮಾನವ ಕಳ್ಳಸಾಗಣೆ ದಲಿತರ ಮೇಲೆ ನಡೆಯುವ ದೌರ್ಜನ್ಯ, ಓಟ್‌ಬ್ಯಾಂಕ್‌ಗಾಗಿ ನಡೆಯುವ ಕೋಮು ಹಿಂಸೆ ಇತ್ಯಾದಿ ಹಲವಾರು ಅಪರಾಧಗಳು ಒಳಗೊಳ್ಳುತ್ತವೆ. ಆದರೆ, ಗಾಂಧೀಜಿ ಹೇಳಿದಂತೆ ಕೋಮು ಹಿಂಸೆಯಲ್ಲಿ, ಸಂಘರ್ಷಗಳಲ್ಲಿ ಸಾಯುವ, ಅನಾಥರಾಗುವ ಮತ್ತು ಮನೆಮಾರುಗಳನ್ನು ಕಳೆದುಕೊಳ್ಳುವ ಅಮಾಯಕರ ಪಾಲಿಗೆ, ಹುಚ್ಚು ವಿನಾಶ ಸರ್ವಾಧಿಕಾರದ ಹೆಸರಿನಲ್ಲಿ ನಡೆದಿರಲಿ ಅಥವಾ ಸ್ವಾತಂತ್ರ್ಯ ಅಥವಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದಿರಲಿ, ಅದರಿಂದ ಆ ಅಮಾಯಕ ಮಂದಿಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ.
 ಕರ್ನಾಟಕದಲ್ಲಿ ಒಂದು ಪ್ರಜಾಸತ್ತಾತ್ಮಕ ಸರಕಾರದ ಸ್ಥಾಪನೆಗಾಗಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಸೆಣಸಾಡಿವೆ. ಆದರೆ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವವರು ಈ ಮೂರೂ ಪಕ್ಷಗಳಲ್ಲಿದ್ದಾರೆ ಮತ್ತು ಇದೀಗ ಚುನಾಯಿತರಾಗಿರುವ ಒಟ್ಟು ಶಾಸಕರಲ್ಲಿ ಇವರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂಬುದು ಪ್ರಜ್ಞಾವಂತ, ಶಾಂತಿಪ್ರಿಯ ನಾಗರಿಕರು ಹೆಮ್ಮೆ ಪಡುವ ಸಂಗತಿಯಂತೂ ಅಲ್ಲವೇ ಅಲ್ಲ. ಕರ್ನಾಟಕದ ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಹಾಳುಗೆಡಹುವ ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ಶಾಸಕರ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಸುಳ್ಳುಗಳು ವದಂತಿಗಳು ಮತ್ತು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ನಾಡಿನಲ್ಲಿ ಹಿಂಸೆಯನ್ನು ಹುಟ್ಟುಹಾಕುವ ಎಲ್ಲ ಶಾಸಕರನ್ನು ಹದ್ದು ಬಸ್ತಿನಲ್ಲಿಡುವ ಜವಾಬ್ದಾರಿ ಅಂತಹ ಕ್ರಿಮಿನಲ್ ಮೊಕದ್ದಮೆ ಹೊಂದಿರುವವರನ್ನು ಚುನಾಯಿಸಿದ ಮತದಾರರ ಮೇಲಿದೆ. ನಾವು ಚುನಾಯಿಸಿದ ಶಾಸಕರಿಗೇ ನಾವು ಹೆದರುವಂತಾಗಬಾರದು; ಅವರು ನಮಗೆ ಹೆದರುವಂತಾಗಬೇಕು ಆಗ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇರುವುದಿಲ್ಲ.

share
ಡಾ. ಬಿ. ಭಾಸ್ಕರ್ ರಾವ್
ಡಾ. ಬಿ. ಭಾಸ್ಕರ್ ರಾವ್
Next Story
X