Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಗತ್‌ಸಿಂಗ್-ನೆಹರೂ ಭೇಟಿ ಇಂದು...

ಭಗತ್‌ಸಿಂಗ್-ನೆಹರೂ ಭೇಟಿ ಇಂದು ರಾಜಕೀಯವಾಗಿ ಪ್ರಸ್ತುತವೇ?

ರಾಮ್ ಪುನಿಯಾನಿರಾಮ್ ಪುನಿಯಾನಿ25 May 2018 12:01 AM IST
share
ಭಗತ್‌ಸಿಂಗ್-ನೆಹರೂ ಭೇಟಿ ಇಂದು ರಾಜಕೀಯವಾಗಿ ಪ್ರಸ್ತುತವೇ?

ಇದು ಇವತ್ತು ಒಂದು ಚುನಾವಣಾ ಪ್ರಶ್ನೆಯಾಗಲು ಹೇಗೆ ಸಾಧ್ಯ? ಎಂದು ಯಾರಿಗಾದರೂ ಆಶ್ಚರ್ಯವಾಗದಿರದು. ಜನರ ಅವಶ್ಯಕತೆಗಳನ್ನು ಬದಿಗೆ ತಳ್ಳಿ, ವಿಷಯಾಂತರ ಮಾಡಿ, ಭಾವನಾತ್ಮಕ ವಿಷಯಗಳ ಕಡೆಗೆ ಗಮನ ಸೆಳೆಯುವುದು ಬಿಜೆಪಿ ಮತ್ತು ಕೋಮು ಸಂಘಟನೆಗಳ ತಂತ್ರ. ಇಂತಹ ತಂತ್ರ ಹೆಣೆಯುವುದಕ್ಕಾಗಿ ಮೋದಿಯವರು ತುಂಬ ವಿಶ್ವಾಸದಿಂದ ಸುಳ್ಳುಗಳನ್ನು ಹೇಳುವ ಮಟ್ಟಕ್ಕೂ ಹೋಗಬಲ್ಲರು.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಚುನಾವಣೆಗಳ ಸಮಯದಲ್ಲಿ ನರೇಂದ್ರ ಮೋದಿಯವರು ಸತ್ಯವಲ್ಲದ ಹೇಳಿಕೆಗಳನ್ನು ನೀಡಿದರು ಮತ್ತು ಆ ಹೇಳಿಕೆಗಳನ್ನು ತನ್ನ ವಿರೋಧಿಗಳ ವಿರುದ್ಧ ಭಾವನಾತ್ಮಕ ಧನಿಯನ್ನು ಏರಿಸುವುದಕ್ಕಾಗಿ ನೀಡಲಾಗಿತ್ತು. ಬೀದರ್‌ನಲ್ಲಿ ನಡೆದ ಒಂದು ಚುನಾವಣಾ ರ್ಯಾಲಿಯಲ್ಲಿ ಒಂದು ಹಸಿ ಹಸಿ ಸುಳ್ಳು ಹೇಳುತ್ತಾ ಅವರು ಕೇಳಿದರು: ‘‘ಶಹೀದ್ ಭಗತ್‌ಸಿಂಗ್, ಬಟುಕೇಶ್ವರ್ ದತ್ತ್, ವೀರ ಸಾವರ್ಕರ್‌ರಂತಹ ಮಹಾನ್ ವ್ಯಕ್ತಿಗಳು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಜೈಲು ಸೇರಿದಾಗ, ಯಾರಾದರೂ ಕಾಂಗ್ರೆಸ್ ನಾಯಕರು ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರೇ?’’ ಇದು ಇವತ್ತು ಒಂದು ಚುನಾವಣಾ ಪ್ರಶ್ನೆಯಾಗಲು ಹೇಗೆ ಸಾಧ್ಯ? ಎಂದು ಯಾರಿಗಾದರೂ ಆಶ್ಚರ್ಯವಾಗದಿರದು. ಜನರ ಅವಶ್ಯಕತೆಗಳನ್ನು ಬದಿಗೆ ತಳ್ಳಿ, ವಿಷಯಾಂತರ ಮಾಡಿ, ಭಾವನಾತ್ಮಕ ವಿಷಯಗಳ ಕಡೆಗೆ ಗಮನ ಸೆಳೆಯುವುದು ಬಿಜೆಪಿ ಮತ್ತು ಕೋಮು ಸಂಘಟನೆಗಳ ತಂತ್ರ. ಇಂತಹ ತಂತ್ರ ಹೆಣೆಯುವುದಕ್ಕಾಗಿ ಮೋದಿಯವರು ತುಂಬ ವಿಶ್ವಾಸದಿಂದ ಸುಳ್ಳುಗಳನ್ನು ಹೇಳುವ ಮಟ್ಟಕ್ಕೂ ಹೋಗಬಲ್ಲರು.

  ಅವರು ಬೀದರ್‌ನಲ್ಲಿ ಕೇಳಿರುವ ಪ್ರಶ್ನೆಯಲ್ಲಿ ಒಂದೆಡೆ ಅವರು ಒಂದು ಸುಳ್ಳು ಹೇಳುತ್ತಿದ್ದಾರೆ ಮತ್ತು ಇನ್ನೊಂಡೆದೆ ತನ್ನ ಐಕಾನ್ ಆಗಿರುವ ಸಾವರ್ಕರ್‌ರವರನ್ನು ವೈಭವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಸತ್ಯ ಸಂಗತಿ ಏನೆಂದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಿಗೆ ಭಗತ್ ಸಿಂಗ್‌ರಂತಹ ಕ್ರಾಂತಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿದ್ದವಾದರೂ, ಅವರು ಆ ಯುವಕರ ಅಪಾರವಾದ ಬದ್ಧತೆ ಮತ್ತು ನಿಷ್ಠೆಯನ್ನು ಗೌರವಿಸುತ್ತಿದ್ದರು. ‘ಟ್ರಿಬ್ಯೂನ್’ ಪತ್ರಿಕೆಯಲ್ಲಿ ಭಗತ್‌ಸಿಂಗ್ ಮತ್ತು ಅವರ ಕಾಮ್ರೇಡ್‌ಗಳನ್ನು ಭೇಟಿಯಾಗಲು ನೆಹರೂರವರು ಜೈಲಿಗೆ ಹೋಗಿದ್ದ ಕುರಿತು ವರದಿಗಳಿವೆ. 1929ರ ಆಗಸ್ಟ್ 9 ಮತ್ತು 10ರಂದು ಟ್ರಿಬ್ಯೂನ್‌ಲ್ಲಿ ಪ್ರಕಟವಾದ ವರದಿಗಳು ನೆಹರೂರವರು ಜೈಲಿನಲ್ಲಿದ್ದ ಕ್ರಾಂತಿಕಾರಿಗಳನ್ನು ಭೇಟಿಯಾಗಿ, ಕ್ಷೇಮ ಸಮಾಚಾರ ವಿಚಾರಿಸಿದ್ದ ಬಗ್ಗೆ ಹೇಳುತ್ತವೆ. ಆಮರಣಾಂತ ಉಪವಾಸ ಕೈಗೊಂಡಿದ್ದ ಆ ಕ್ರಾಂತಿಕಾರಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕೆಂಬ ಬೇಡಿಕೆ ಸಲ್ಲಿಸಲು ಮೋತಿಲಾಲ್ ನೆಹರೂ ಅವರು ಒಂದು ಸಮಿತಿಯನ್ನು ಕೂಡಾ ರಚಿಸಿದ್ದರು. ತನ್ನ ಆತ್ಮಕತೆ (ಟವರ್ಡ್ಸ್ ಫ್ರೀಡಂ) ಯಲ್ಲಿ ಜವಾಹರಲಾಲ್ ನೆಹರೂ ತಾನು ಭಗತ್‌ಸಿಂಗ್, ಜತಿನ್ ದಾಸ್ ಮತ್ತು ಇತರ ಯುವಕರನ್ನು ಜೈಲಿನಲ್ಲಿ ಭೇಟಿಯಾದ ಒಂದು ಹೃದಯಸ್ಪರ್ಶಿ ವಿವರ ನೀಡುತ್ತಾರೆ. ಉಪವಾಸ ಮುಷ್ಕರಕ್ಕೆ ಅದಾಗಲೇ ಒಂದು ತಿಂಗಳಾಗಿದ್ದಾಗ ನಾನು ಲಾಹೋರ್‌ನಲ್ಲಿದ್ದೆ. ಜೈಲಿನಲ್ಲಿದ್ದ ಕೆಲವು ಮಂದಿಯನ್ನು ಸಂದರ್ಶಿಸಲು ನನಗೆ ಅನುಮತಿ ನೀಡಲಾಗಿತ್ತು. ಜೈಲಿನಲ್ಲಿ ನಾನು ಮೊದಲ ಬಾರಿಗೆ ಭಗತ್‌ಸಿಂಗ್‌ರನ್ನು ನೋಡಿದೆ. ಜತೀಂದ್ರನಾಥ್ ದಾಸ್ ಮತ್ತು ಇತರ ಕೆಲವರನ್ನೂ ನೋಡಿದೆ. ಅವರೆಲ್ಲರು ತುಂಬಾ ದುರ್ಬಲರಾಗಿದ್ದರು, ಹಾಸಿಗೆ ಹಿಡಿದಿದ್ದರು. ಅವರೊಡನೆ ಹೆಚ್ಚು ಮಾತನಾಡಲು ಸಾಧ್ಯವಿರಲಿಲ್ಲ. ಭಗತ್‌ಸಿಂಗ್‌ರವರ ಮುಖ ಆಕರ್ಷಕವಾಗಿತ್ತು. ಧೀಮಂತ ಮುಖ ಅದು. ಅಸಾಮಾನ್ಯವಾದ ಶಾಂತಿ, ಸಮಾಧಾನ ಆ ಮುಖದಲ್ಲಿ ಕಾಣಿಸುತ್ತಿತ್ತು. ಅಲ್ಲಿ ಸಿಟ್ಟು ಇದ್ದಂತೆ ಕಾಣಿಸಲಿಲ್ಲ. ಅವರು ತುಂಬು ಸೌಮ್ಯವಾಗಿ ಕಂಡರು, ಸೌಮ್ಯವಾಗಿ ಮಾತನಾಡಿದರು. ಜತಿನ್‌ದಾಸ್ ಮತ್ತಷ್ಟೂ ಸೌಮ್ಯ, ಮೃದು ಮತ್ತು ಸಮಾಧಾನಿ. ಒಬ್ಬಳು ಚಿಕ್ಕ ಹುಡುಗಿಯ ಹಾಗೆ. ನಾನು ಕಂಡಾಗ ಆತ ತುಂಬ ನೋವು ಅನುಭವಿಸುತ್ತಿದ್ದ. ಬಳಿಕ ಉಪವಾಸದ ಪರಿಣಾಮವಾಗಿ, ಉಪವಾಸ ಮುಷ್ಕರದ 61ನೇ ದಿನ ಆತ ಮೃತಪಟ್ಟರು.


ಮೋದಿಯವರ ಹೇಳಿಕೆಯ ಇನ್ನೊಂದು ಅಂಶವೆಂದರೆ, ಭಗತ್‌ಸಿಂಗ್‌ರಂತಹ ಯುವಕ್ರಾಂತಿಕಾರಿಗಳೊಂದಿಗೆ ಸಾವರ್ಕರ್‌ರವರನ್ನು ಸಮೀಕರಿಸುವುದು. ಸಾವರ್ಕರ್ ಯಾವ ಮಟ್ಟಕ್ಕೆ ಏರಲು ಸಾಧ್ಯವಿಲ್ಲವೋ ಆ ಮಟ್ಟಕ್ಕೆ ಅವರನ್ನು ಏರಿಸುವುದು ಈ ಸಮೀಕರಣದ ಹಿಂದಿರುವ ಜಾಣತನದ ಒಂದು ಸಂಚು. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ಭಗತ್‌ಸಿಂಗ್ ಜೈಲಿನಲ್ಲಿದ್ದಾಗ ಆತ ದಯಾಭಿಕ್ಷೆಗೆ ಅರ್ಜಿಸಲ್ಲಿಸುವಂತೆ ಆತನ ಕುಟುಂಬದ ಸದಸ್ಯರು ಆತನನ್ನು ವಿನಂತಿಸಿದರು. ಭಗತ್ ಇದಕ್ಕೆ ಒಪ್ಪಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸಾವರ್ಕರ್ ಜೈಲಿನಲ್ಲಿ ತನ್ನ ನಿಲುವನ್ನು ಸಂಪೂರ್ಣ ಬದಲಿಸಿದರು. ಬ್ರಿಟಿಷ್ ಅಧಿಕಾರಿಯೊಬ್ಬನ ಹತ್ಯೆಯ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಾವರ್ಕರ್ ತನ್ನ ಬ್ರಿಟಿಷ್ ವಿರೋಧಿ ನಿಲುವನ್ನು ಬದಲಿಸಿ, ಬ್ರಿಟಿಷ್ ಸರಕಾರದ ಬಳಿ ಕ್ಷಮೆಯನ್ನು ಯಾಚಿಸುವ ಹಲವಾರು ಕ್ಷಮಾಯಾಚನೆ ಪತ್ರಗಳನ್ನು ಬರೆದು, ಬ್ರಿಟಿಷ್‌ರಿಗೆ ಶರಣಗತರಾಗಿ ಭವಿಷ್ಯದಲ್ಲಿ ತಾನು ಅವರಿಗೆ ನೆರವಾಗುವುದಾಗಿ ಆಶ್ವಾಸನೆ ನೀಡಿದರು! ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಬ್ರಿಟಿಷರಿಗೆ ನಿಷ್ಠರಾಗಿಯೇ ಉಳಿದರು. ಅವರು ಬರೆದ ಪತ್ರಗಳನ್ನು ಪರಿಗಣಿಸಿ ಬ್ರಿಟಿಷ್ ಸರಕಾರ ಅವರಿಗೆ ಕ್ಷಮಾದಾನ ನೀಡಿತು.
ಹೀಗೆ ಸಾವರ್ಕರ್ ಬ್ರಿಟಿಷರಿಂದ ಕ್ಷಮೆ ಕೇಳಿದ್ದು ಸ್ವಾತಂತ್ರ ಚಳವಳಿಗೆ ಅವರು ಬಗೆದ ದ್ರೋಹ. ಆದರೆ ಅವರ ಅನುಯಾಯಿ ಗಳು ಸಾವರ್ಕರ್ ಹೀಗೆ ಮಾಡಿದ್ದು ಒಂದು ತಂತ್ರ, ಜೈಲಿನಿಂದ ಬಿಡುಗಡೆ ಹೊಂದಲು ಹೂಡಿದ ತಂತ್ರ; ಮತ್ತು ಆ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡುವುದು ಅವರ ಉದ್ದೇಶವಾಗಿತ್ತು ಎಂದು ಈ ಇಡೀ ಕ್ಷಮಾಯಾಚನೆಯನ್ನು ಸಮರ್ಥಿಸುತ್ತಾರೆ. ನಿಜವಾಗಿ, ಜೈಲಿನಿಂದ ಬಿಡುಗಡೆಗೊಂಡ ಬಳಿಕ, ಸಾವರ್ಕರ್ ಹಿಂದೂ ರಾಷ್ಟ್ರೀಯವಾದದ ಪರಿಕಲ್ಪನೆಯನ್ನು ಮಂಡಿಸಿ, ಹಿಂದುತ್ವ (ಸಂಪೂರ್ಣ ಹಿಂದೂತನ) ಎಂಬ ಪದವನ್ನು ಮುನ್ನೆಲೆಗೆ ತಂದು, ದೇಶದಲ್ಲಿ ಎರಡು ರಾಷ್ಟ್ರಗಳಿವೆ ಎಂದು ವಾದಿಸಿದರು. ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರ! ಇದು ಮುಸ್ಲಿಮ್ ಲೀಗ್ ಮುನ್ನೆಲೆಗೆ ತರುತ್ತಿದ್ದ, ಮುಸ್ಲಿಮ್ ರಾಷ್ಟ್ರೀಯತೆಯ ರಾಜಕಾರಣಕ್ಕೆ ಸಮಾನ ಹಾಗೂ ವಿರುದ್ಧವಾದದ್ದಾಗಿತ್ತು. ದೇಶದ ವಿಭಜನೆಯ ದುರಂತಕ್ಕೆ ಇದು ಕೂಡ ತನ್ನ ಕಾಣಿಕೆ ನೀಡಿತ್ತು.
ಆದ್ದರಿಂದ, ಸ್ವಾತಂತ್ರಕ್ಕಾಗಿ ಹೋರಾಡಿದವರನ್ನು ಕಾಂಗ್ರೆಸ್ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಬಗ್ಗೆ ಮೋದಿಯವರು ಒಂದೆಡೆ ಸುಳ್ಳು ಹೇಳುತ್ತಾರೆ. ಇನ್ನೊಂದೆಡೆ, ಅವರು ಸಾವರ್ಕರ್‌ರವರನ್ನು ಭಗತ್ ಸಿಂಗ್‌ರವರಿಗೆ ಸಮಾನ ಎಂದು ಪರಿಗಣಿಸುತ್ತಾರೆ. ಕಾಂಗ್ರೆಸ್, ಸಾವರ್ಕರ್‌ರವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿತ್ತು. ಭಗತ್ ಸಿಂಗ್ ತನ್ನ ಸಿದ್ಧಾಂತ ಮತ್ತು ಬ್ರಿಟಿಷ್ ಸರಕಾರದ ವಿರುದ್ಧದ ಪ್ರತಿಭಟನೆಯ ಹಾದಿಯಲ್ಲಿ ದೃಢವಾಗಿ ನಿಂತರು. ತನ್ನ ತತ್ವ, ಸಿದ್ಧಾಂತಗಳಿಗಾಗಿ ಅವರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಇದಕ್ಕೆ ವ್ಯತಿರಿಕ್ತವಾಗಿ ಸಾವರ್ಕರ್ ಜೈಲಿನ ಪರಿಸ್ಥಿತಿಗಳನ್ನು ಎದುರಿಸ ಲಾಗದೆ ಬ್ರಿಟಿಷರಿಗೆ ಶರಣಾಗತರಾದರು. ಜರ್ಮನಿಯ ಗೊಬೆಲ್ಸ್ ವಿಧಾನಗಳಂತಹ ವಿಧಾನಗಳನ್ನು ಮೋದಿಯವರು ಬಳಸುವುದನ್ನು ವಿರೋಧಿಸಬೇಕಾಗಿದೆ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X