Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ತಂಬಾಕಿನ ವ್ಯಾಮೋಹದಿಂದ ಮುಕ್ತರಾಗೋಣ

ತಂಬಾಕಿನ ವ್ಯಾಮೋಹದಿಂದ ಮುಕ್ತರಾಗೋಣ

ಇಂದು ವಿಶ್ವ ತಂಬಾಕು ರಹಿತ ದಿನ

ಡಾ.ಮುರಲೀ ಮೋಹನ್, ಚೂಂತಾರುಡಾ.ಮುರಲೀ ಮೋಹನ್, ಚೂಂತಾರು31 May 2018 12:19 AM IST
share
ತಂಬಾಕಿನ ವ್ಯಾಮೋಹದಿಂದ ಮುಕ್ತರಾಗೋಣ

ಇಂದಿನ ವ್ಯಾಪಾರಿ ಮನೋಭಾವದ ಮತ್ತು ಜಾಗತೀಕರಣಗೊಂಡ ಜಗತ್ತಿನಲ್ಲಿ ಸಿಗರೆಟ್, ತಂಬಾಕು ಸೇವನೆ ಎಂಬುದು ಪ್ರತಿಷ್ಠೆ ಮತ್ತು ಫ್ಯಾಷನ್ ಆಗಿಬಿಟ್ಟಿದೆ. ದೃಶ್ಯಮಾಧ್ಯಮಗಳ ಮೂಲಕ ಜಾಹೀರಾತು ವೈಭವೀಕರಣದಿಂದ ಇಂದಿನ ಯುವ ಜನತೆ ದಾರಿ ತಪ್ಪಿತಂಬಾಕು ಉತ್ಪನ್ನಗಳ ದಾಸರಾಗುತ್ತಿದ್ದಾರೆ. ಮೋಜಿನ ಜೂಜಿಗೆ ಬಲಿಯಾಗಿ ಲಕ್ಷಾಂತರ ಜನರು ಸಾವಿಗೆ ಪ್ರತಿದಿನ ಆಹ್ವಾನ ನೀಡುತ್ತಿದ್ದಾರೆ. ದಾರಿ ತಪ್ಪುತ್ತಿರುವ ಯುವಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸಲು, ‘ತಂಬಾಕು ರಹಿತ’ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದಲೇ ಮೇ 31ನ್ನು ‘ವಿಶ್ವ ತಂಬಾಕು ರಹಿತ ದಿನ’ ಎಂದು ಅರ್ಥಪೂರ್ಣವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವದ ಮಾನವ ಸಂಪತ್ತಿನ ರಕ್ಷಣೆ ಮಾಡುವುದಕ್ಕಾಗಿಯೇ 1987ನೇ ವರ್ಷದಿಂದ, ಈ ದಿನವನ್ನು ಆರ್ಥಗರ್ಭಿತವಾಗಿ ಆಚರಿಸುತ್ತಾ ಬಂದಿದೆ. ತಂಬಾಕು ವಿಷ ಯಾಕೆ?

ತಂಬಾಕು ಮತ್ತು ತಂಬಾಕಿನ ವಿವಿಧ ಉತ್ಪನ್ನಗಳಾದ ಬೀಡಿ, ಸಿಗರೆಟ್, ಗುಟ್ಕಾ, ಪಾನ್‌ಪರಾಗ್, ಖೈನಿ, ಬೀಡ, ಜರ್ದಾ ಇವೆಲ್ಲವೂ ಮನುಷ್ಯ ಕುಲದ ಬಹುದೊಡ್ಡ ವೈರಿಗಳು ಎಂದರೂ ತಪ್ಪಲ್ಲ. ಜಗತ್ತಿನಲ್ಲಿ ಹೃದಯದ ಕಾಯಿಲೆಯ ಬಳಿಕ ಮಾರಣಾಂತಿಕವಾದ ಎರಡನೇ ದೊಡ್ಡ ಕಾಯಿಲೆ ಎಂದರೆ ಕ್ಯಾನ್ಸರ್ (ಅರ್ಬುದ ರೋಗ) ವಿಪರ್ಯಾಸವೆಂದರೆ ತಡೆಯಬಹುದಾದ ಎಲ್ಲ ಕ್ಯಾನ್ಸರ್‌ಗಳಿಗೆ ಪ್ರಮುಖ ಕಾರಣ ತಂಬಾಕು ಮತ್ತು ಅದರ ಉತ್ಪನ್ನಗಳು. ಮನುಷ್ಯ ಜಾಗತಿಕವಾಗಿ ಬೆಳೆದಂತೆಲ್ಲಾ ಹೊಸಹೊಸ ಆವಿಷ್ಕಾರಗಳು ಹುಟ್ಟಿಕೊಂಡು, ತಂತ್ರಜ್ಞಾನದಲ್ಲಿ ಅದ್ಭುತ ಯಶಸ್ಸು ಸಾಧಿಸಿದರೂ, ಧೂಮಪಾನ, ತಂಬಾಕು ಮುಂತಾದ ಆಧುನಿಕ ಜೀವನ ಶೈಲಿಯ ಸಂಗಾತಿಗಳು ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಬೆಳೆದು ನಿಂತಿದೆ. ತಂಬಾಕನ್ನು ಯಾವುದೇ ರೀತಿಯಲ್ಲಿ, ರೂಪದಲ್ಲಿ ಸೇವಿಸಿದರೂ ನಮ್ಮ ದೇಹದ ಯಾವುದೇ ಅಂಗದಲ್ಲಿ ಅರ್ಬುದ ರೋಗ ಉಂಟು ಮಾಡಬಲ್ಲದು. ಇವುಗಳಲ್ಲಿ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಎದೆ ಗೂಡು /ಶ್ವಾಸಕೋಶ ಕ್ಯಾನ್ಸರ್ ಮುಂತಾದವು ಪ್ರಮುಖವಾಗಿ ಸೇರಿದೆ. ತಂಬಾಕು ಸೇವನೆ ಮತ್ತು ಧೂಮಪಾನ ಹೃದಯ, ಶ್ವಾಸಕೋಶ ಮತ್ತು ಮೆದುಳಿನ ರೋಗಗಳಿಗೆ ನಾಂದಿ ಹಾಡುತ್ತದೆ. ಒಂದು ಸಿಗರೆಟ್‌ನಲ್ಲಿ ಮತ್ತು ತರುವ ನಿಕೋಟಿನ್‌ನ ಜೊತೆಗೆ ಸಾವಿರಾರು ರಾಸಾಯನಿಕಗಳು ಮತ್ತು ಕ್ಯಾನ್ಸರ್‌ಕಾರಕ ಅನಿಲಗಳು ಸೇರಿವೆ. ನಿಕೋಟಿನ್ ಧೂಮಪಾನ ವ್ಯಸನಿಗಳಿಗಷ್ಟೇ ಕ್ಯಾನ್ಸರ್ ರೋಗವನ್ನು ಉಂಟು ಮಾಡುವುದಿಲ್ಲ. ಧೂಮಪಾನದ ಹೊಗೆಯನ್ನು ಸೇವಿಸುವ, ಧೂಮಪಾನ ಮಾಡದವರಿಗೂ ಕೂಡಾ ಹೃದಯದ ರಕ್ತನಾಳಗಳು ಪೆಡಸುಗೊಂಡು ಹೃದಯಾಘಾತವಾಗುವ ಸಂಭವವಿರುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕೂಡಾ ಬರುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿ ಸುಮಾರು 12 ರಿಂದ 13 ಕೋಟಿ ತಂಬಾಕು ಬಳಕೆದಾರರು ಇದ್ದು, ಕ್ಯಾನ್ಸರ್ ಸೇರಿದಂತೆ, ತಂಬಾಕು ಸಂಬಂಧಿ ರೋಗಗಳಿಂದಾಗಿ ವರ್ಷಕ್ಕೆ ಒಂದು ಕೋಟಿ ಜನರು ಮೃತರಾಗುತ್ತಾರೆ. ಆತಂಕಕಾರಿ ವಿಷಯವೆಂದರೆ ಈ ರೋಗಗಳು 30ರಿಂದ 50 ವರ್ಷದವರಲ್ಲಿ ಕಂಡು ಬರುತ್ತದೆ. ಇವು ಜೀವನದ ಅತ್ಯಂತ ಉತ್ಪಾದಕ ವರ್ಷಗಳಾಗಿದ್ದು, ಇದರಿಂದಾಗಿ ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ. ತಂಬಾಕಿನ ಬಳಕೆ ಈಗ ಬದಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ಮಕ್ಕಳು, ಯುವಕರು ಮತ್ತು ಮಹಿಳೆಯರು ತಂಬಾಕು ಬಳಕೆ ಮಾಡುತ್ತಿರುವುದು ಕ್ಯಾನ್ಸರ್ ಪ್ರಕರಣಗಳ ಬದಲಾವಣೆಯನ್ನು ಗಮನಿಸಿದಾಗ ಕಂಡುಬರುತ್ತದೆ. ಹಿಂದೆಲ್ಲಾ ಕ್ಯಾನ್ಸರ್ ಹಿರಿಯ ನಾಗರಿಕರಿಗೆ (60 ವರ್ಷದ ನಂತರ) ಬರುತ್ತಿತ್ತು. ಆದರೆ ಈಗೀಗ 20-30ರ ಹರೆಯದ ಯುವಕರಲ್ಲೂ ಕಂಡು ಬರುವುದು ಬಹಳ ಆತಂಕಕಾರಿ ಬೆಳವಣಿಗೆ. ಅದರಲ್ಲೂ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಟಲು ಕ್ಯಾನ್ಸರ್ ಯುವ ಜನತೆಯಲ್ಲಿ ಹೆಚ್ಚು ಹೆಚ್ಚಾಗಿ ಬರತೊಡಗಿದೆ.

ಧೂಮಪಾನ-ವಿಷಪಾನ ನಮ್ಮ ದೇಹದ ಅರ್ಬುದ ರೋಗಕ್ಕೆ ಅತಿ ಪ್ರಾಮುಖ್ಯವಾದ ಕಾರಣ ಎಂದರೆ ಧೂಮಪಾನ. ಒಂದು ಸಿಗರೆಟ್‌ನಲ್ಲಿ ಸರಿಸುಮಾರು 7ರಿಂದ 8 ಮಿಲಿ ಗ್ರಾಂನಷ್ಟು ‘ಟಾರ್’ನ ಪ್ರಮಾಣವನ್ನು ಕಂಡುಹಿಡಿಯಲಾಗಿದೆ. ಅರ್ಬುದ ರೋಗಕ್ಕೆ ರಹದಾರಿ ನೀಡುವ ‘ಎನ್-ನೈಟ್ರೋಸೋಮಿಕೋಟಿನ್’ ಎಂಬ ಬಹಳ ಅಪಾಯಕಾರಿ ವಸ್ತು ಸಿಗರೆಟ್‌ನಲ್ಲಿದೆ. ಏನಿಲ್ಲವೆಂದರೂ ಸುಮಾರು 4,500 ಅಪಾಯಕಾರಿ ರಾಸಾಯನಿಕ ವಸ್ತುಗಳು ಸಿಗರೆಟ್‌ನಲ್ಲಿ ಕಂಡುಬರುತ್ತದೆ. ಸಿಗರೆಟ್‌ನ ಟಾರಿನಲ್ಲಿ ಬೆಂಜೋಪೈರಿನ್, ಪಾಲಿನ್ಯೂಕ್ಲಿಯರ್ ಆ್ಯಸಿಡ್, ಆರೋಮ್ಯಾಟಿಕ್ ಹೈಡ್ರೊಕಾರ್ಬನ್, ನೈಟ್ರೋಸೊಮಿನ್ ಇತ್ಯಾದಿ 200ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಚೋದನಾ ರಾಸಾಯನಿಕಗಳು ಇವೆ ಎಂದು ಸಂಶೋಧನೆಗಳಿಂದ ಕಂಡುಹಿಡಿಯಲಾಗಿದೆ. ಸಿಗರೆಟ್‌ನ ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನೋಕ್ಸೈಡ್ ಮತ್ತು ಹೈಡ್ರೋಜನ್ ಅನಿಲಗಳು ದೇಹದ ಆಮ್ಲಜನಕದ ಪೂರೈಕೆಗೆ ಅಡ್ಡಿ ಉಂಟುಮಾಡುತ್ತವೆ. ಧೂಮಪಾನದ ಹೊಗೆಯಲ್ಲಿರುವ ಹೈಡ್ರೋಜನ್ ಸಯನೈಡ್, ಅಮೋನಿಯ, ಅಸಿಟೋನ್, ಫೀನಾಲ್, ಹೈಡ್ರಾಜನ್, ಕ್ರೆರಿಡಿನ್ ಮುಂತಾದ ಅಪಾಯಕಾರಿ ಅನಿಲಗಳು, ರಾಸಾಯನಿಕಗಳು ನಮ್ಮ ಶ್ವಾಸಕೋಶಕ್ಕೆ ಮಾರಕವಾದ ಪರಿಣಾಮ ಬೀರಿ ಶ್ವಾಸಕೋಶದ ಅರ್ಬುದರೋಗಕ್ಕೆ ನಾಂದಿ ಹಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಪೊಲೋನಿಯಂ-210 ಎಂಬ ರೇಡಿಯೋ ಆ್ಯಕ್ಟಿವ್ ವಿಕಿರಣ ವಸ್ತು ಕೂಡಾ ಸಿಗರೆಟ್‌ನ ಹೊಗೆಯಲ್ಲಿದೆ ಎಂದು ಸಂಶೋಧನೆಗಳಿಂದ ಖಚಿತಪಟ್ಟಿದೆ. ಸರಿ ಸುಮಾರು 600 ರಿಂದ 700 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ದಹಿಸುವ ಸಿಗರೇಟ್ ಒಳಗಿನ ತಂಬಾಕು ನೂರಾರು ರಾಸಾಯನಿಕ ವಿಷಾನಿಲಗಳನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ ಎನ್ನಬಹುದು. ಒಟ್ಟಿನಲ್ಲಿ ಸಿಗರೆಟ್ ಎಂಬುದು ಅಪಾಯಕಾರಿ ರಾಸಾಯನಿಕಗಳ ಅಗ್ನಿಜ್ವಾಲೆ ಎಂದರೂ ತಪ್ಪಲ್ಲ. ಯಾಕೆ ಧೂಮಪಾನ ತ್ಯಜಿಸ ಬೇಕು?

ನಮ್ಮ ದೇಹದೊಳಗಿನ ಎಲ್ಲಾ ವಿಷಕಾರಿ ಅನಿಲಗಳನ್ನು ದೇಹದಿಂದ ಹೊರಹಾಕುವ ಕಾರ್ಯ ನಿರ್ವಹಿಸುವ ಅಂಗ ಯಕೃತ್ತು. ಧೂಮಪಾನದ ಮೂಲಕ ನಮ್ಮ ಶರೀರ ಪ್ರವೇಶಿಸುವ ವಿಷಾನಿಲಗಳು ನಮ್ಮ ಶ್ವಾಸಕೋಶದ ಒಳಗೆ ಪ್ರವೇಶಿಸಿ ಬಳಿಕ ರಕ್ತದ ಮೂಲಕ ಯಕೃತ್ತನ್ನು ತಲುಪುತ್ತವೆ. ಕಾಲಕ್ರಮೇಣ ಧೂಮಪಾನದಿಂದ ಯಕೃತ್ತು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡು ನಿಷ್ಕ್ರಿಯಗೊಳ್ಳುತ್ತದೆ. ಹೀಗೆ ಧೂಮಪಾನ ಶರೀರದ ಎಲ್ಲಾ ಅಂಗಗಳಾದ ಶ್ವಾಸಕೋಶ, ಯಕೃತ್, ರಕ್ತನಾಳ, ಮೆದುಳು ಮುಂತಾದ ಅಂಗಗಳನ್ನು ಒಂದೊಂದಾಗಿ ಆಪೋಶನ ತೆಗೆದುಕೊಂಡು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕುಂದಿಸಿ ಧೂಮಪಾನಿ ಶರೀರವನ್ನು ರೋಗಗಳ ಹಂದರವಾಗಿ ಮಾರ್ಪಾಡುಮಾಡುತ್ತದೆ.
ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಗಿಂತ 8 ವರ್ಷಗಳ ಮೊದಲು ಸಾಯುತ್ತಾನೆ.
ತಂಬಾಕಿನ ಸೇವನೆಯಿಂದ ಈ ಕೆಳಗಿನ ಕಾಯಿಲೆಗಳಿಗೆ ತೀವ್ರತೆ ಉಂಟಾಗುತ್ತದೆ.
► ಬಾಯಿ ಕ್ಯಾನ್ಸರ್
► ಅಧಿಕ ರಕ್ತದ ಒತ್ತಡ
► ರಕ್ತದಲ್ಲಿ ಹೆಚ್ಚಿನ ಕೊಬ್ಬಿನ (ಕೊಲೆಸ್ಟಾರಾಲ್) ಅಂಶ
► ಎದೆಗೂಡಿನ ಕ್ಯಾನ್ಸರ್
► ಗಂಟಲು ಮತ್ತು ಶಬ್ದ ಚೀಲದ ಕ್ಯಾನ್ಸರ್
► ಶ್ವಾಸಕೋಶ ಸಂಬಂಧಿ ಕಾಯಿಲೆಗಳು
► ಹೃದಯಾಘಾತ
► ಅಂಧತ್ವ ಮತ್ತು ದೃಷ್ಟಿಮಾಂದ್ಯತೆ
► ಮೂಳೆಯ ಸಾಂದ್ರತೆ ಕಡಿಮೆಯಾಗಿ ಮೂಳೆಸವೆತ

ಹೆಂಗಸರಲ್ಲಿ ಮೇಲೆ ತಿಳಿಸಿದ ದುಷ್ಪರಿಣಾಮಗಳ ಜೊತೆಗೆ
► ಮುಟ್ಟಿನ ತೊಂದರೆ
► ಗರ್ಭಾಶಯದ ಕ್ಯಾನ್ಸರ್
► ಲೈಂಗಿಕ ನಿರಾಸಕ್ತಿ ಮತ್ತು ಬಂಜೆತನ
► ಎದೆಯ ಕ್ಯಾನ್ಸರ್
► ಅಕಾಲಿಕ ಗರ್ಭಪಾತ

ಈ ಎಲ್ಲಾ ಕಾರಣಕ್ಕಾಗಿಯೇ ತಂಬಾಕು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ನಾವೆಲ್ಲರೂ ಸೇರಿ ಬಹಿಷ್ಕರಿಸಿ ಹೊಸ ಜೀವನ ಆರಂಭಿಸೋಣ.

ತಡೆಗಟ್ಟುವುದು ಹೇಗೆ?
♦ ತಂಬಾಕು ಮತ್ತು ಅದರ ಉತ್ಪನ್ನಗಳ ಜಾಹೀರಾತುಗಳನ್ನು ನಿರ್ಬಂಧಿಸುವುದು.
♦ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದು.
♦ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು.
♦ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ, ಬೀದಿನಾಟಕ ಮತ್ತು ತಂಬಾಕು ವರ್ಜನಾ ಶಿಬಿರಗಳನ್ನು ನಡೆಸುವುದು.
♦ ದೃಶ್ಯ ಮಾಧ್ಯಮಗಳಲ್ಲಿ ಧೂಮಪಾನವನ್ನು ವೈಭವೀಕರಿಸುವ ದೃಶ್ಯಗಳಿಗೆ ಕತ್ತರಿ ಹಾಕುವುದು.
♦ ಕೊಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.

share
ಡಾ.ಮುರಲೀ ಮೋಹನ್, ಚೂಂತಾರು
ಡಾ.ಮುರಲೀ ಮೋಹನ್, ಚೂಂತಾರು
Next Story
X