Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ರೈತರ ಆತ್ಮಹತ್ಯೆ ಕುರಿತ...

ರೈತರ ಆತ್ಮಹತ್ಯೆ ಕುರಿತ ದತ್ತಾಂಶಗಳೆಲ್ಲಿ?

ಭಾರತ ಕಳೆದ ಎರಡು ವರ್ಷಗಳಿಂದ ರೈತರ ಆತ್ಮಹತ್ಯೆ ಕುರಿತಂತೆ ದತ್ತಾಂಶಗಳನ್ನು ಪ್ರಕಟಿಸಿಲ್ಲ.

ಅಭಿಷೇಕ್ ಡೇಅಭಿಷೇಕ್ ಡೇ12 Jun 2018 11:47 PM IST
share
ರೈತರ ಆತ್ಮಹತ್ಯೆ ಕುರಿತ ದತ್ತಾಂಶಗಳೆಲ್ಲಿ?

ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ 2015ರಲ್ಲಿ 8,007 ರೈತರು ಮತ್ತು 4,595 ಮಂದಿ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು. ಅದರ ಹಿಂದಿನ ವರ್ಷ 5,150 ರೈತರು ಮತ್ತು 6,710 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆ ಬಳಿಕ ಕಳೆದ ರೈತರ ಆತ್ಮಹತ್ಯೆಗಳ ಕುರಿತು ಸರಕಾರದ ವರದಿ ಲಭ್ಯವಿಲ್ಲ. ಅಂದರೆ 2016 ಮತ್ತು 2017ರಿಂದ ನಡೆದ ರೈತರ ಆತ್ಮಹತ್ಯೆಗಳು ಮತ್ತು ಈ ಎರಡು ವರ್ಷಗಳಲ್ಲಿ ದೇಶದಲ್ಲಿ ನಡೆದ ಪ್ರಮುಖ ರೈತ ಚಳವಳಿಗಳು, ಆ ಚಳವಳಿಗಳಲ್ಲಿ ಮೃತರಾದ ರೈತರ ಕುರಿತಾದ ದಾಖಲೆಗಳು ಪ್ರಕಟಿತ ಸಕಾರಿ ದತ್ತಾಂಶದಲ್ಲಿ ಸ್ಥಾನ ಪಡೆದಿಲ್ಲ

ಕಳೆದ ತಿಂಗಳು ಭಾರತದಲ್ಲಿ ನಡೆದ ಅನೇಕ ರೈತರ ಆತ್ಮಹತ್ಯೆ ಹಲವು ವರ್ಷಗಳಿಂದ ದೇಶವನ್ನು ಕಾಡುತ್ತಿರುವ ಸಮಸ್ಯೆಯೊಂದರ ಮೇಲೆ ಎಲ್ಲರ ಗಮನವನ್ನು ಕೇಂದ್ರೀಕರಿಸಿದೆ. ಕಳೆದ ಮೇ ತಿಂಗಳಲ್ಲಿ ಸಾಲಬಾಧೆ ಮತ್ತು ಕೃಷ್ಯುತ್ಪನ್ನಗಳ ಬೆಲೆಯಲ್ಲಿ ಆದ ದಿಢೀರ್ ಕುಸಿತದಿಂದಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕನಿಷ್ಠ ಆರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು. ರಾಜಕೀಯ ಪಕ್ಷಗಳು ಈ ದುರಂತಗಳನ್ನು ತಮ್ಮ ಪ್ರತಿಸ್ಪರ್ಧಿಗಳ, ವಿರೋಧಿಗಳ ವಿರುದ್ಧ ದಾಳಿ ನಡೆಸಲು ಬಳಸಿಕೊಂಡವು.

ಭಾರತ ಸರಕಾರ 2016 ಮತ್ತು 2017ರಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳ ಕುರಿತಂತೆ ಇನ್ನೂ ದತ್ತಾಂಶಗಳನ್ನು ಪ್ರಕಟಿಸಿಲ್ಲ. 2015ರವರೆಗಿನ ದತ್ತಾಂಶಗಳು ಮಾತ್ರ ಈಗ ಲಭ್ಯವಿವೆೆ. ಕೆಲ ರಾಜ್ಯಗಳು ಕೇಂದ್ರ ಸರಕಾರಕ್ಕೆ ಕಳುಹಿಸಿರುವ ದತ್ತಾಂಶದಲ್ಲಿ ಸಮಸ್ಯೆಗಳಿಂದಾಗಿ 2016-17ರ ದತ್ತಾಂಶಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಸರಕಾರಿ ಅಧಿಕಾರಿಗಳು ಹೇಳುತ್ತಾರೆ.
ದೇಶಾದ್ಯಂತ ಸಂಭವಿಸುವ ರೈತರ ಆತ್ಮಹತ್ಯೆಗಳ ದತ್ತಾಂಶಗಳನ್ನು ಸಂಗ್ರಹಿಸುವ ಹಾಗೂ ಸಂರಕ್ಷಿಸುವ ಕೆಲಸವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ)ಗೆ ವಹಿಸಲಾಗಿದೆ. ‘ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು’ ಎಂಬ ಶೀರ್ಷಿಕೆಯಲ್ಲಿ ಈ ಸಂಸ್ಥೆ ವಾರ್ಷಿಕ ವರದಿಯೊಂದರಲ್ಲಿ ಈ ದತ್ತಾಂಶಗಳನ್ನು ಪ್ರಕಟಿಸುತ್ತದೆ. 2015ರ ವರದಿಯಿಂದಾರಂಭಿಸಿ ಸಂಸ್ಥೆಯು ರೈತರ ಆತ್ಮಹತ್ಯೆ ಕುರಿತ ದತ್ತಾಂಶಗಳನ್ನು ಒಂದು ಪ್ರತ್ಯೇಕ ವಿಭಾಗವಾಗಿ ಪ್ರಕಟಿಸಿ ತೊಡಗಿತು.

ವಿವಾದಾಸ್ಪದ ವಿಷಯ
ಭಾರತದಲ್ಲಿ ರೈತರ ಆತ್ಮಹತ್ಯೆಗಳು ಒಂದು ವಿವಾದಾಸ್ಪದ ವಿಷಯ. ರೈತರು ಮಾಡಿಕೊಳ್ಳುವ ಪ್ರತಿಯೊಂದು ಆತ್ಮಹತ್ಯೆಯನ್ನು ಪ್ರತ್ಯಕ್ಷವಾಗಿ ಹಾಗೂ ಅಥವಾ ಪರೋಕ್ಷವಾಗಿ ಬೆಳೆ ನಾಶ ಪಾವತಿಸಲಾಗದ ಸಾಲ ಕೃಷ್ಯುತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಬೆಲೆಯಲ್ಲಿ ಆಗುವ ಕುಸಿತದಂತಹ ಕೃಷಿ ಸಂಬಂಧಿ ಕಾರಣಗಳೊಂದಿಗೆ ತಳಕುಹಾಕಬಹುದೇ ಎಂಬ ಬಗ್ಗೆ ಅಧಿಕಾರಿಗಳು ಹಲವಾರು ವರ್ಷಗಳಿಂದ ತಕರಾರು ಮಾಡುತ್ತಿದ್ದಾರೆ. ರೈತನೊಬ್ಬನ ಆತ್ಮಹತ್ಯೆಯನ್ನು ಕೃಷಿಗೆ ತಳಕು ಹಾಕಲು ಸಾಧ್ಯವಿಲ್ಲವೆಂದಾದಲ್ಲಿ ಅದನ್ನು ರೈತನ ಆತ್ಮಹತ್ಯೆ ಎಂದು ಪರಿಗಣಿಸಲೇ ಬಾರದೆಂದು ಅಧಿಕಾರಿಗಳು ವಾದಿಸುತ್ತಾರೆ. 2016ರ ತನ್ನ ವರದಿಯಲ್ಲಿ ಸಂಸ್ಥೆಯು 2015ರಿಂದ ರೈತರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಅಧ್ಯಾಯಗಳನ್ನು ಪ್ರಕಟಿಸಿತು. ಒಟ್ಟು ಆತ್ಮಹತ್ಯೆಗಳ ಶೇ.19.5 ಆತ್ಮಹತ್ಯೆಗಳಿಗೆ ಕೃಷಿ ಸಂಬಂಧಿ ಕಾರಣಗಳಾದರೆ, ಶೇ. 38 ಆತ್ಮಹತ್ಯೆಗಳಿಗೆ ದಿವಾಳಿತನ ಅಥವಾ ಋಣಬಾಧೆ ಕಾರಣವೆಂದು ತಿಳಿದು ಬಂತು. ಬಡತನ, ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ ಮತ್ತು ವಿವಾಹ ಸಂಬಂಧಿ ಕಾರಣಗಳು ಕೂಡ ರೈತರ ಆತ್ಮಹತ್ಯೆಗೆ ಕಾರಣಗಳಾಗಿವೆ.


2016 ಮತ್ತು 2017ಕ್ಕೆ ದತ್ತಾಂಶಗಳಿಲ್ಲ
ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ 2015ರಲ್ಲಿ 8,007 ರೈತರು ಮತ್ತು 4,595 ಮಂದಿ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು. ಅದರ ಹಿಂದಿನ ವರ್ಷ 5,150 ರೈತರು ಮತ್ತು 6,710 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆ ಬಳಿಕ ಕಳೆದ ರೈತರ ಆತ್ಮಹತ್ಯೆಗಳ ಕುರಿತು ಸರಕಾರದ ವರದಿ ಲಭ್ಯವಿಲ್ಲ. ಅಂದರೆ 2016 ಮತ್ತು 2017ರಿಂದ ನಡೆದ ರೈತರ ಆತ್ಮಹತ್ಯೆಗಳು ಮತ್ತು ಈ ಎರಡು ವರ್ಷಗಳಲ್ಲಿ ದೇಶದಲ್ಲಿ ನಡೆದ ಪ್ರಮುಖ ರೈತ ಚಳವಳಿಗಳು, ಆ ಚಳವಳಿಗಳಲ್ಲಿ ಮೃತರಾದ ರೈತರ ಕುರಿತಾದ ದಾಖಲೆಗಳು ಪ್ರಕಟಿತ ಸರಕಾರಿ ದತ್ತಾಂಶದಲ್ಲಿ ಸ್ಥಾನ ಪಡೆದಿಲ್ಲ ಅದೇನಿದ್ದರೂ 2016ರಲ್ಲಿ ದೇಶದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಈ ವರ್ಷದ ಆದಿಯಲ್ಲಿ ಸಂಸತ್ತಿನಲ್ಲಿ ಉಲ್ಲೇಖಿಸಲಾಯಿತು. ಬಜೆಟ್ ಅಧಿವೇಶನದ ವೇಳೆ 2016ರಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳ ಕುರಿತಂತೆ ಒಂದು ಪ್ರಾಥಮಿಕ ವರದಿಯನ್ನು ಸಂಸತ್ತಿನಲ್ಲಿ ಗೃಹ ಸಚಿವಾಲಯವು ಮಂಡಿಸಿತು. ಆ ವರದಿಯ ಪ್ರಕಾರ 2016ರಲ್ಲಿ ದೇಶದಲ್ಲಿ 6,351 ಮಂದಿ ರೈತರು ಮತ್ತು 5,019 ಮಂದಿ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಆ ವರದಿಯಲ್ಲಿ ಆ ಆತ್ಮಹತ್ಯೆಗೆ ಕಾರಣಗಳೇನೆಂಬ ಕುರಿತು ಇರಬೇಕಾಗಿದ್ದ ಒಂದು ಅಧ್ಯಾಯ ಇರಲಿಲ್ಲ. ರೈತರ ಆತ್ಮಹತ್ಯೆ ಸಂಖ್ಯೆಗಳನ್ನು ಇರುವುದಕ್ಕಿಂತ ಕಡಿಮೆ ಎಂದು ವರದಿ ಮಾಡಿದ್ದಕ್ಕಾಗಿ ಈ ಹಿಂದೆ ಎನ್‌ಸಿಆರ್‌ಬಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು

ರಾಜ್ಯಗಳ ಸಮಸ್ಯೆ
ಎನ್‌ಸಿಆರ್‌ಬಿಯ ಹೆಸರು ಬಹಿರಂಗಪಡಿಸಲಿಚ್ಛಿಸದ ಓರ್ವ ಹಿರಿಯ ಅಧಿಕಾರಿಯವರ ಪ್ರಕಾರ ಕೆಲವು ರಾಜ್ಯಗಳು ಸಲ್ಲಿಸಿರುವ ರೈತರ ಆತ್ಮಹತ್ಯೆ ಕುರಿತ ದತ್ತಾಂಶಗಳಿಗೆ ಸಂಬಂಧಿಸಿ ಕೆಲವು ಸಮಸ್ಯೆಗಳಿವೆ. ಆದ್ದರಿಂದ ಎನ್‌ಸಿಆರ್‌ಬಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದ ದತ್ತಾಂಶಗಳನ್ನು ಪ್ರಕಟಿಸುವಲ್ಲಿ ವಿಳಂಬವಾಗಿದೆ. ಆ ಸಮಸ್ಯೆಗಳನ್ನು, ದೋಷಗಳನ್ನು ಸರಿಪಡಿಸಲು ಅದೀಗ ಪ್ರಯತ್ನಿಸುತ್ತಿದೆ. 2016ರಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರ ದಂತಹ ಕೆಲವು ರಾಜ್ಯಗಳು ತಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ‘ಸೊನ್ನೆ’ ಎಂದರೆ, ಇನ್ನು ಕೆಲವು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಗಳು ವಿಪರೀತ ಹೆಚ್ಚು ಅಥವಾ ತೀರಾ ಕಡಿಮೆ. ಎನ್‌ಸಿಆರ್‌ಬಿ ಈಗ ಆ ಸಂಖ್ಯೆಗಳನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ರಾಜ್ಯಳಿಗೆ ನೋಟಿಸ್‌ಗಳನ್ನು ಕಳುಹಿಸಿದೆ.
ದತ್ತಾಂಶಗಳನ್ನು ಪ್ರಕಟಿಸುವಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣಗಳೇನು? ಎಂಬ ಪ್ರಶ್ನೆಗೆ ಎನ್‌ಸಿಆರ್‌ಬಿ ನಿರ್ದೇಶಕ ಈಶ ಕುಮಾರ್ ಸ್ಪಷ್ಟವಾದ ಉತ್ತರ ನೀಡಿಲ್ಲ. ದತ್ತಾಂಶಗಳನ್ನು ಈಗಲೇ ಪರೀಕ್ಷಿಸಲಾಗುತ್ತಿದೆ ಮತ್ತು 2016ರ ವರದಿಯನ್ನು ಜೂನ್ ತಿಂಗಳ ಅಂತ್ಯದಲ್ಲಿ ಪ್ರಕಟಿಸಲಾಗುವುದೆಂದು ಅವರು ಹೇಳಿದ್ದಾರೆ.
ಕೃಪೆ: scroll.in

share
ಅಭಿಷೇಕ್ ಡೇ
ಅಭಿಷೇಕ್ ಡೇ
Next Story
X