Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕಾರ್ಗಿಲ್ ಸಂಘರ್ಷದ ನೆನಪಿನಲ್ಲಿ...

ಕಾರ್ಗಿಲ್ ಸಂಘರ್ಷದ ನೆನಪಿನಲ್ಲಿ...

ಇಂದು ಕಾರ್ಗಿಲ್ ವಿಜಯೋತ್ಸವ ದಿನ

ಜಗದೀಶ ವಡ್ಡಿನ, ಬಾಡ, ಕಾರವಾರಜಗದೀಶ ವಡ್ಡಿನ, ಬಾಡ, ಕಾರವಾರ25 July 2018 11:57 PM IST
share
ಕಾರ್ಗಿಲ್ ಸಂಘರ್ಷದ ನೆನಪಿನಲ್ಲಿ...

ಕಾರ್ಗಿಲ್ ಸಂಘರ್ಷವೆಂದೇ ಹೆಸರಾದ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಉಭಯ ರಾಷ್ಟ್ರಗಳ ನಡುವಿನ ಡಿಫೆಕ್ಟರ್ ಗಡಿಯಾಗಿರುವ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ)ರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ನುಸುಳಿದ್ದೇ ಯುದ್ಧಕ್ಕೆ ಕಾರಣ. ಯುದ್ಧದ ಆರಂಭದ ಹಂತಗಳಲ್ಲಿ ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು. ಆದರೆ ಯುದ್ಧಾನಂತರ ಸಾವು ನೋವುಗಳ ದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು. ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು ಎಲ್‌ಒಸಿಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತರ್‌ರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು ಎಲ್‌ಒಸಿಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು. ಅತೀ ಎತ್ತರದ ಪರ್ವತ ಪ್ರದೇಶದಲ್ಲಿ ಕಾದಾಟ ಮಾಡಿದಕ್ಕೆ ಈ ಯುದ್ಧ ಇತ್ತೀಚಿನ ಉದಾಹರಣೆಯಾಗಿದ್ದು ಉಭಯ ದೇಶಗಳೂ ಗಣನೀಯವಾಗಿ ಸೈನ್ಯ ವ್ಯವಸ್ಥಾಪನಾ ತಂತ್ರದ ಸಮಸ್ಯೆಗಳನ್ನು ಎದುರಿಸಬೇಕಾಯಿತು.

1947ರಲ್ಲಿ ಭಾರತದ ವಿಭಜನೆಗೆ ಮೊದಲು ವಿಶ್ವದ ಕೆಲವು ಉನ್ನತ ಶಿಖರಗಳಿಂದ ಬೇರ್ಪಟ್ಟ ಪ್ರತ್ಯೇಕ ಕಣಿವೆಗಳಲ್ಲಿ ವಾಸಿಸುವ ವೈವಿಧ್ಯಮಯ ಭಾಷಿಕ, ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳೊಂದಿಗೆ ವಿರಳ ಜನಸಂಖ್ಯೆ ಹೊಂದಿದ ಪ್ರದೇಶ ಕಾರ್ಗಿಲ್ ಲಡಾಕ್ ಜಿಲ್ಲೆಯ ಬಾಲ್ಟಿಸ್ತಾನ್ ಭಾಗವಾಗಿತ್ತು. ಭಾರತದ ರಾಜ್ಯ ಜಮ್ಮು ಕಾಶ್ಮೀರದ ಲಡಾಕ್ ಉಪವಿಭಾಗದ ಕಾರ್ಗಿಲ್ ಪಟ್ಟಣ ಮತ್ತು ಜಿಲ್ಲೆ ಭಾರತದ ಬದಿಯಲ್ಲೇ ಉಳಿದುಕೊಳ್ಳುವುದರ ಜತೆಗೆ ಬಾಲ್ಟಿಸ್ತಾನ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್‌ಒಸಿ)ಯನ್ನು ಇಬ್ಭಾಗಿಸುವುದರೊಂದಿಗೆ ಪ್ರಥಮ ಕಾಶ್ಮೀರ ಕದನ (1947-48) ಮುಕ್ತವಾಗಿತ್ತು. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೋಲನುಭವಿಸಿದ ಬಳಿಕ ಗಡಿಗೆ ಸಂಬಂಧಿಸಿದಂತೆ ಸಶಸ್ತ್ರ ಸಂಘರ್ಷ ನಡೆಸದಿರುವ ಭರವಸೆಯೊಂದಿಗೆ ಸಿಮ್ಲಾ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.
ಕಾರ್ಗಿಲ್ ಯುದ್ಧಕ್ಕೆ ಮೂರು ಪ್ರಮುಖ ಹಂತಗಳಿದ್ದವು. ಮೊದಲಿಗೆ ಭಾರತ ನಿಯಂತ್ರಿತ ಕಾಶ್ಮೀರ ಭಾಗಕ್ಕೆ ಪಾಕಿಸ್ತಾನ ತನ್ನ ಪಡೆಗಳನ್ನು ನುಸುಳಿಸಿತು ಮತ್ತು ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು ತನ್ನ ಫಿರಂಗಿ ದಾಳಿಯ ವ್ಯಾಪ್ತಿಯೊಳಗೆ ರಾಷ್ಟ್ರೀಯ ಹೆದ್ದಾರಿ 1 ತರಲು ಅನುಕೂಲ ಮಾಡಿಕೊಂಡಿತು. ಎರಡನೇ ಹಂತದಲ್ಲಿ ಪಾಕಿಸ್ತಾನದ ಅತಿಕ್ರಮಣವನ್ನು ಪತ್ತೆಹಚ್ಚಿದ ಭಾರತ, ಅದಕ್ಕೆ ಪ್ರತಿಕ್ರಿಯಿಸಲು ತನ್ನ ಪಡೆಗಳನ್ನು ಸಜ್ಜುಗೊಳಿಸಿತು. ಅಂತಿಮ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಮುಖ ಯುದ್ಧ ನಡೆದು ಪಾಕಿಸ್ತಾನಿ ಪಡೆಗಳು ಅತಿಕ್ರಮಿಸಿಕೊಂಡ ಕೆಲವು ಪ್ರದೆಶಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತ ಫಲಶ್ರುತಿ ಕಂಡಿತು ಮತ್ತು ತರುವಾಯ ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ನಿಯಂತ್ರಣ ರೇಖೆಯಾಚೆಗೆ ತನ್ನ ಪಡೆಗಳನ್ನು ಹಿಂದೆಗೆದು ಕೊಂಡಿತು.
 ಕಾಶ್ಮೀರ ಭೂಪ್ರದೇಶ ಪರ್ವತಮಯವಾಗಿದ್ದು ಅತೀ ಎತ್ತರದಲ್ಲಿದೆ. ಲೆಹ್‌ನಿಂದ ಶ್ರೀನಗರದವರೆಗಿನ ರಾಷ್ಟ್ರೀಯ ಹೆದ್ದಾರಿ 1ಡಿ ಮುಂತಾದ ಅತ್ಯುತ್ತಮ ರಸ್ತೆಗಳಿಗೆ ಎರಡು ಪಥಗಳು ಮಾತ್ರ ಇವೆ. ಕಡಿದಾದ ಭೂಪ್ರದೇಶ ಮತ್ತು ಇಕ್ಕಟ್ಟಾದ ರಸ್ತೆಗಳು ಸೇನಾಪಡೆಯ ಸಂಚಾರವನ್ನು ನಿಧಾನಗೊಳಿಸಿತು ಮತ್ತು ಎತ್ತರ ಪ್ರದೇಶಗಳು ವಿಮಾನದಲ್ಲಿ ಸರಕುಗಳನ್ನು ಸಾಗಿಸುವ ಸಾಮರ್ಥ್ಯಕ್ಕೆ ಅಡ್ಡಿಯಾದ್ದರಿಂದ ರಾಷ್ಟ್ರೀಯ ಹೆದ್ದಾರಿ 1ಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಭಾರತದ ಆದ್ಯತೆಯಾಗಿತ್ತು. ತಮ್ಮ ವೀಕ್ಷಣಾ ನೆಲೆಗಳಿಂದ ಪರೋಕ್ಷವಾಗಿ ರಾಷ್ಟ್ರೀಯ ಹೆದ್ದಾರಿ 1ಡಿಯ ಮೇಲೆ ಫಿರಂಗಿ ಗುಂಡಿನ ದಾಳಿ ನಡೆಸಿ ಭಾರತೀಯ ಪಡೆಗಳಲ್ಲಿ ಅಪಾರ ಸಾವು ನೋವು ಉಂಟು ಮಾಡುವುದಕ್ಕಾಗಿ ಪಾಕಿಸ್ತಾನದ ಪಡೆಗಳು ಸ್ಪಷ್ಟವಾಗಿ ನೋಡಬಹುದಾದ ಮಾರ್ಗವಿತ್ತು. ಭಾರತದ ಸೇನೆಗೆ ಸೈನ್ಯ ಜಮಾವಣೆ ಮತ್ತು ಸರಬರಾಜಿಗೆ ಹೆದ್ದಾರಿಯೇ ಪ್ರಮುಖ ಮಾರ್ಗವಾದ್ದರಿಂದ ಗಂಭೀರ ಸಮಸ್ಯೆ ತಲೆದೋರಿತು. ಮುಖ್ಯ ಮಾರ್ಗದ ಮೇಲೆ ಪಾಕಿಸ್ತಾನ ಶೆಲ್ ದಾಳಿ ನಡೆಸುವುದರಿಂದ ಲೇಹ್ ಪ್ರತ್ಯೇಕವಾಗುವ ಆತಂಕವಿತ್ತು. ಆದರೂ ಹಿಮಾಚಲ ಪ್ರದೇಶದ ಮೂಲಕ ಲೇಹ್ ಪರ್ಯಾಯ ರಸ್ತೆಯೊಂದು ಅಸ್ತಿತ್ವದಲ್ಲಿತ್ತು.
ಭಾರತದ ಸೇನೆಯು ಆಕ್ರಮಿತ ಸೇನೆಯನ್ನು ನಿಯಂತ್ರಣ ರೇಖೆಯ ಆಚೆಗೆ ಹಿಂದಕ್ಕೆ ದೂಡಲು ಕಾರ್ಯಾಚರಣೆ ಆರಂಭಿಸಿತು. ಇತರ ಪ್ರಹಾರಗಳೊಂದಿಗೆ, ಟೋಲೊಲಿಂಗ್ ಯುದ್ಧದ ನಂತರದ ಹೋರಾಟ ನಿಧಾನವಾಗಿ ಭಾರತದ ಪರವಾಗಿ ವಾಲಿತು. ಯುದ್ಧಾಂತ್ಯದಲ್ಲಿ ಕೈವಶವಾದ ಟೈಗರ್ ಹಿಲ್(ಪಾಯಿಂಟ್ 5140) ಸೇರಿದಂತೆ ಅತಿಕ್ರಮಣಕಾರರ ಕೆಲವು ಶಿಬಿರಗಳು ತೀವ್ರ ಪ್ರತಿರೋಧ ಒಡ್ಡಿದವು. ಟೈಗರ್ ಹಿಲ್‌ನಲ್ಲಿ ಭಾರತದ ಪಡೆಗಳು ಭದ್ರವಾಗಿ ಬೇರೂರಿದ ಪಾಕಿಸ್ತಾನದ ಪಡೆಗಳನ್ನು ಕಂಡವು ಮತ್ತು ಇಲ್ಲಿ ನಡೆದ ಹೋರಾಟದಲ್ಲಿ ಎರಡೂ ಪಡೆಗಳು ಸಾಕಷ್ಟು ಸಾವುನೋವು ಅನುಭವಿಸಿತು. ಟೈಗರ್ ಹಿಲ್ ಮೇಲೆ ನಡೆದ ಅಂತಿಮ ಪ್ರಹಾರದಲ್ಲಿ 10 ಪಾಕಿಸ್ತಾನ ಸೈನಿಕರು ಹತರಾಗಿ ಟೈಗರ್ ಹಿಲ್ ಭಾರತದ ಕೈವಶವಾಯಿತು.
ಕಾರ್ಯಾಚರಣೆ ಪೂರ್ಣಸ್ವರೂಪ ಪಡೆಯುತ್ತಿದ್ದಂತೆ ಕಾಣುವಂತಿದ್ದ ಶಿಬಿರಗಳಲ್ಲಿನ ಅತಿಕ್ರಮಣಕಾರರನ್ನು ತೆರವುಗೊಳಿಸಲು ಸುಮಾರು 250 ಫಿರಂಗಿ ಬಂದೂಕುಗಳನ್ನು ತರಲಾ ಯಿತು. ಇಂತಹ ಭೂಪ್ರದೇಶದಲ್ಲಿ ದಾಳಿ ನಡೆಸಲು ಸಹಕಾರಿಯಾಗುವ ಬೋಫೋರ್ಸ್ ಫೀಲ್ಡ್ ಹೋವಿಟ್ಟರ್ ಬಂದೂಕು (ಬೋಫೋರ್ಸ್ ಹಗರಣದ ಮೂಲಕ ಭಾರತದಲ್ಲಿ ಕುಖ್ಯಾತ)ಗಳನ್ನು ಭಾರತದ ಸೈನಿಕರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರು, ಈ ಬಂದೂಕುಗಳು ಕಾರ್ಗಿಲ್ ಕಾರ್ಯಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದವು. ಆದರೆ ಬೋಫೋರ್ಸ್ ಬಂದೂಕುಗಳ ನಿಯೋಜನೆಗೆ ಬೇಕಾದ ಸ್ಥಳ ಮತ್ತು ಆಳ ಪ್ರದೇಶದ ಕೊರತೆಯಿಂದ ಬೇರೆ ಕಡೆಗಳಲ್ಲಿ ಅದರ ಯಶಸ್ಸು ಸೀಮಿತಗೊಂಡಿತು. ದಾಳಿಗಳ ಸಂದರ್ಭದಲ್ಲಿ ಪಾಕಿಸ್ತಾನ ಪಡೆಗಳು ಭದ್ರವಾಗಿ ಬೇರೂರಿದ ನೆಲೆಗಳ ನಾಶಕ್ಕಾಗಿ ಲೇಸರ್ ನಿರ್ದೇಶಿತ ಬಾಂಬಗಳನ್ನು ಐಎಎಫ್ ಬಳಸಿತು.
ಅನೇಕ ಪ್ರಮುಖ ಸ್ಥಳಗಳಲ್ಲಿ ಕಣ್ಣಿಗೆ ನಿಲುಕದಂತಿದ್ದ ಪಾಕಿಸ್ತಾನದ ಸೈನಿಕರ ನೆಲೆಗಳನ್ನು ಫಿರಂಗಿಗಳಿಂದ ಅಥವಾ ವೈಮಾನಿಕ ಬಲದಿಂದ ನಾಶಪಡಿಸುವುದು ಸುಲಭದ ಮಾತಾಗಿರಲಿಲ್ಲ. 18,000 ಅಡಿಯಷ್ಟು ಎತ್ತರ ಕಡಿದಾದ ಶಿಖರಗಳನ್ನು ಏರುವುದಕ್ಕಾಗಿ ದಾರಿ ಸುಗಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ಸೇವೆಯ ನೇರ ನೆಲದಾಳಿಗಳನ್ನು ನಿಧಾನವಾಗಿ ಕೈಗೊಂಡಿದ್ದರಿಂದ ಭಾರೀ ಸಾವು ನೋವಿಗೆ ಗುರಿಯಾಯಿತು. ಭಾರತದ ಸೇನಾ ಪಡೆಗಳು ಎಲ್‌ಒಸಿಯನ್ನು ದಾಟುವುದಲ್ಲದೆ, ಪಾಕಿಸ್ತಾನದ ನೆಲದ ಮೇಲೆ ವೈಮಾನಿಕ ದಾಳಿಗಳನ್ನು ಆರಂಭಿಸುವುದನ್ನು ಕೂಡ ಒಳಗೊಳ್ಳಬೇಕಿತ್ತು. ಆದರೆ ಯುದ್ಧದ ಕಾಲಾವಧಿ ವಿಸ್ತರಣೆಯಾಗುವ ಸಾಧ್ಯತೆ ಮತ್ತು ತನ್ನ ಹೋರಾಟಕ್ಕೆ ಅಂತರ್‌ರಾಷ್ಟ್ರೀಯ ಮಾನ್ಯತೆ ಸಿಗದು ಎಂಬ ಭಯದಿಂದ ಈ ವ್ಯೆಹ ಕಾರ್ಯಗತಗೊಳಿಸಲು ಭಾರತ ಇಚ್ಛಿಸಲಿಲ್ಲ.
ಸಂಘರ್ಷದ ಎರಡು ತಿಂಗಳ ಬಳಿಕ, ಅತಿಕ್ರಮಣಕಾರರು ಆಕ್ರಮಿಸಿಕೊಂಡ ಅನೇಕ ಶಿಖರಗಳನ್ನು ಭಾರತದ ಪಡೆಗಳು ನಿಧಾನವಾಗಿ ಮರುವಶಕ್ಕೆ ತೆಗೆದುಕೊಂಡವು. ಅಧಿಕೃತ ಎಣಿಕೆಯ ಅಂಕಿ ಅಂಶಗಳ ಪ್ರಕಾರ, ಆಕ್ರಮಿತ ಪ್ರದೇಶದ ಅಂದಾಜು ಶೇ. 75ರಿಂದ ಶೇ. 80 ಮತ್ತು ಬಹುತೇಕ ಎಲ್ಲ ಎತ್ತರದ ಪ್ರದೇಶಗಳು ಮತ್ತೆ ಭಾರತದ ಸ್ವಾಧೀನವಾದವು.
ಜುಲೈ ಕೊನೆಯ ವಾರದಲ್ಲಿ ಭಾರತದ ಸೇನೆ ಅಂತಿಮ ದಾಳಿಗಳನ್ನು ಆರಂಭಿಸಿತು. ಡ್ರಾಸ್ ಉಪವಲಯವನ್ನು ಪಾಕಿಸ್ತಾನಿ ಪಡೆಗಳು ತೆರವು ಮಾಡಿದ ಕೂಡಲೇ ಜುಲೈ 26ರಂದು ಹೋರಾಟ ಸ್ಥಗಿತಗೊಂಡಿತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಆ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಭಾರತದಲ್ಲಿ ಗುರುತಿಸಲಾಗಿದೆ. ಯುದ್ಧದ ಅಂತ್ಯದಲ್ಲಿ ಜುಲೈ 1972 ರಚನೆಯಾದ ಸಿಮ್ಲಾ ಒಪ್ಪಂದದ ಅನ್ವಯ ನಿಯಂತ್ರಣ ರೇಖೆಯ ದಕ್ಷಿಣ ಮತ್ತು ಪೂರ್ವಕ್ಕಿರುವ ಎಲ್ಲ ಪ್ರದೇಶಗಳ ಮೇಲೆ ಭಾರತ ತನ್ನ ನಿಯಂತ್ರಣ ಸಾಧಿಸಿತು.
ಕಾರ್ಗಿಲ್ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ತಾಯ್ನೆಲಕ್ಕಾಗಿ ಹೋರಾಡಿದ ಯೋಧರಿಗೊಂದು ನಮನ ಸಲ್ಲಿಸೋಣ.

ಕಾರ್ಗಿಲ್ ಹೋರಾಟದಲ್ಲಿ ತೋರಿದ ಶೌರ್ಯ ಪರಾಕ್ರಮಗಳಿಗಾಗಿ
ಶೌರ್ಯ ಪ್ರಶಸ್ತಿಗಳನ್ನು ಪಡೆದ ಕೆಲವು ಯೋಧರು

♦ 18 ಗ್ರೇನೆಡಿಯರ್ಸ್‌ಗೆ ಸೇರಿದ ಯೋಗೇಂದ್ರ ಸಿಂಗ್ ಯಾದವ್ ಪರಮವೀರ ಚಕ್ರವನ್ನು ಮರಣೋತ್ತರವಾಗಿ.
♦  ಲೆಪ್ಟಿನೆಂಟ್ ಮನೋಜ್ ಕುಮಾರ್ ಪಾಡೆ, ಗೂರ್ಖಾ ರೈಫಲ್ಸ್ ಪರಮವೀರ ಚಕ್ರ ಮರಣೋತ್ತರ.
♦  ಕ್ಯಾಪ್ಟನ್ ವಿಕ್ರಮ ಬಾತ್ರಾ 13 ಜ್ಯಾಕ್ ರೈಫಲ್ಸ್ ಪರಮವೀರ ಚಕ್ರ ಮರಣೋತ್ತರ.
♦  ರೈಫಲ್‌ಮನ್ ಸಂಜಯಕುಮಾರ 13 ಜ್ಯಾಕ್ ರೈಫಲ್ಸ್ ಪರಮವೀರ ಚಕ್ರ

share
ಜಗದೀಶ ವಡ್ಡಿನ, ಬಾಡ, ಕಾರವಾರ
ಜಗದೀಶ ವಡ್ಡಿನ, ಬಾಡ, ಕಾರವಾರ
Next Story
X