Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. 50 ಪದಕಗಳು ಮತ್ತು ಇನ್ನೂ ಮುಂದುವರಿದಿರುವ...

50 ಪದಕಗಳು ಮತ್ತು ಇನ್ನೂ ಮುಂದುವರಿದಿರುವ ದಾಖಲೆಗಳು

ಥ್ರೋಬಾಲ್ ಸಾಧಕಿ ಸಬಿಯಾ

ಎಂ. ಎ. ಸಿರಾಜ್ಎಂ. ಎ. ಸಿರಾಜ್30 July 2018 6:31 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
50 ಪದಕಗಳು ಮತ್ತು ಇನ್ನೂ ಮುಂದುವರಿದಿರುವ ದಾಖಲೆಗಳು

ಸಬಿಯಾ ಈಗ ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನ ತೃತೀಯ ಬಿಕಾಂ ತರಗತಿಯ ವಿದ್ಯಾರ್ಥಿನಿ. ಎಚ್‌ಐಎಲ್ ಪ್ರದೇಶದ ಒಂದು ಮಧ್ಯಮವರ್ಗದ ಹಿನ್ನೆಲೆಯಿಂದ ಬಂದಿರುವ ಸಬಿಯಾ ಸ್ಥಳೀಯ ಸರಣಿ ಗೆಲುವುಗಳ ಮೂಲಕ ರಾಷ್ಟ್ರ ಮಟ್ಟಕ್ಕೆ ಏರಿದ ಆಟಗಾರ್ತಿ.

ಆಕೆಗೆ ಇನ್ನೂ ಇಪ್ಪತ್ತರ ಆಸುಪಾಸು. ಈಗಾಗಲೇ ಆಕೆ ಏಳು ಅಂತರ್‌ರಾಷ್ಟ್ರೀಯ ಮಹಿಳಾ ಥ್ರೋಬಾಲ್ ಚಾಂಪಿಯನ್ ಶಿಪ್ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಢಾಕಾದಿಂದ ಮರಳಿ ಬಂದಿರುವ ಸಬಿಯಾಳ ಅದೃಷ್ಟ ಕಳೆದ ಕೆಲವು ವರ್ಷಗಳಿಂದ ಖುಲಾಯಿಸುತ್ತಲೇ ಬಂದಿದೆ. ಕೊಲಂಬೋದಿಂದ ಕೌಲಾಲಂಪುರದವರೆಗೆ ಮತ್ತು ಅಹಮದಾಬಾದ್‌ನಿಂದ ಬ್ಯಾಂಕಾಕ್‌ವರೆಗೆ ಆಕೆಯ ಸಾಧನೆಗಳು ಸುದ್ದಿ ಮಾಡಿವೆ.

ಥ್ರೋಬಾಲ್ ಭಾರತೀಯ ಉಪಖಂಡದಲ್ಲಿ ತುಂಬಾ ಜನಪ್ರಿಯವಾದ ಆಟ. ಮೊದಲ ಬಾರಿಗೆ ಇದನ್ನು 1940ರ ದಶಕದಲ್ಲಿ ಮಹಿಳೆಯರ ಒಂದು ಆಟವಾಗಿ ಚೆನ್ನೈಯಲ್ಲಿ ಆಡಲಾಯಿತು. ಆಯತಾಕಾರದ ಒಂದು ಕೋರ್ಟ್ ನಲ್ಲಿ ಏಳು ಮಂದಿ ಆಟಗಾರರಿರುವ ಎರಡು ತಂಡಗಳ ನಡುವೆ ನಡೆಯುವ ಈ ಆಟದಲ್ಲಿ ಒಂದು ನಿರ್ದಿಷ್ಟ ಸ್ಪರ್ಧೆಯಲ್ಲಿ ಐದು ಪ್ಲೇಸ್‌ಮೆಂಟ್‌ಗಳಿಗೆ ಅವಕಾಶವಿರುವುದರಿಂದ ತಂಡಗಳಲ್ಲಿ ಹನ್ನೆರಡು ಮಂದಿ ಆಟಗಾರರಿರುತ್ತಾರೆ. ಜುಲೈ 13 ಮತ್ತು 14ರಂದು ಢಾಕಾದ ಸರಕಾರಿ ದೈಹಿಕ ಶಿಕ್ಷಣ ಕಾಲೇಜು ಮೈದಾನದಲ್ಲಿ ನಡೆದ ಏಳನೇ ಅಂತರ್‌ರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಭಾರತದ ಹನ್ನೆರಡು ಮಂದಿಯ ತಂಡದ ಓರ್ವ ಸದಸ್ಯೆಯಾಗಿ ಸಬಿಯಾ ಆಟವಾಡಿದ್ದರು. ಆ ಪಂದ್ಯದಲ್ಲಿ ಭಾರತ ತಂಡವು ತ್ರಿರಾಷ್ಟ್ರ ಟ್ರೋಫಿಯನ್ನು ಗೆದ್ದುಕೊಂಡಿತು ನೇಪಾಳದ ತಂಡ ತೃತೀಯ ಸ್ಥಾನ ಪಡೆಯಿತು.
ಸಬಿಯಾ ಈಗ ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನ ತೃತೀಯ ಬಿಕಾಂ ತರಗತಿಯ ವಿದ್ಯಾರ್ಥಿನಿ. ಎಚ್‌ಐಎಲ್ ಪ್ರದೇಶದ ಒಂದು ಮಧ್ಯಮವರ್ಗದ ಹಿನ್ನೆಲೆಯಿಂದ ಬಂದಿರುವ ಸಬಿಯಾ ಸ್ಥಳೀಯ ಸರಣಿ ಗೆಲುವುಗಳ ಮೂಲಕ ರಾಷ್ಟ್ರ ಮಟ್ಟಕ್ಕೆ ಏರಿದ ಆಟಗಾರ್ತಿ. 2013ರಲ್ಲಿ ಸ್ಥಳೀಯ ಶಾಲೆಯೊಂದರಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವಾಗಲೇ ಆಕೆ 7ನೇ ಅಂತರ್‌ರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆಕೆಯ ಪ್ರತಿಭೆಯನ್ನು ಆಗಲೇ ಗುರುತಿಸಲಾಗಿತ್ತು ಮತ್ತು ಆಕೆ ತಂಡದ ಅತ್ಯಂತ ಕಿರಿಯ ಆಟಗಾರ್ತಿ. ಅದೇ ವರ್ಷ ಅಕ್ಟೋಬರ್‌ನಲ್ಲಿ ಕೊಲೊಂಬೋದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚತುಷ್ಕೋನ ಮಹಿಳಾ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆಕೆ ಭಾರತದ ರಾಷ್ಟ್ರೀಯ ತಂಡದ ಭಾಗವಾಗಿದ್ದರು. ಆ ತಂಡ ಪಂದ್ಯದಲ್ಲಿ ಗೆದ್ದಿತ್ತು. ಭಾರತವಲ್ಲದೆ ಆ ಪಂದ್ಯದಲ್ಲಿ ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸಿದ್ದವು.

ಆ ಬಳಿಕ ಸಬಿಯಾ ಹಿಂದೆ ತಿರುಗಿ ನೋಡಿದ್ದಿಲ್ಲ. 2014ರಲ್ಲಿ ಆಕೆ ಮಾಲೆಯಲ್ಲಿ ನಡೆದ ಇಂಡೋ-ಮಾಲ್ಡೀವ್ಸ್ ಥ್ರೋಬಾಲ್ ಪಂದ್ಯ ಮತ್ತು ಕೌಲಾಲಂಪುರದಲ್ಲಿ ಜರುಗಿದ ಹತ್ತು ರಾಷ್ಟ್ರಗಳ ಐದನೇ ಏಶ್ಯನ್ ಥ್ರೋಬಾಲ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಭಾಗವಹಿಸಿದ್ದರು. ಮುಂದಿನ ವರ್ಷ ಮಲೇಶ್ಯಾದಲ್ಲಿ ನಡೆದ ಪ್ರಥಮ ಏಷ್ಯನ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆಕೆ ಭಾಗವಹಿಸಿ ಭಾರತಕ್ಕೆ ಚಾಂಪಿಯನ್‌ಶಿಪ್ ತಂದುಕೊಟ್ಟರು. 2017ರ ಜನವರಿಯಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಭಾರತ ಥಾಯ್ಲೆಂಡ್ ಅಂತರ್‌ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್ ಸಬಿಯಾ ಭಾಗವಹಿಸಿದ್ದ ಆರನೇ ಅಂತರ್‌ರಾಷ್ಟ್ರೀಯ ಪಂದ್ಯ. ಅದೇ ವೇಳೆ ಕರ್ನಾಟಕ ಸರಕಾರ ಆಕೆಗೆ 2016ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಇದಲ್ಲದೆ ಸಬಿಯಾ ಅನೇಕ ಮಹಿಳಾ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಎರಡು ಮಟ್ಟಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಅಂತರ್‌ಕಾಲೇಜು ಹಾಗೂ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳಲ್ಲಿ ತನ್ನ ಕಾಲೇಜನ್ನು ಪ್ರತಿನಿಧಿಸಿದ್ದಾರೆ.
ಸಬಿಯಾರ ತಂದೆ ಸಿಕಂದರ್ ಎಚ್‌ಎಎಲ್ ಸಮೀಪ ಟ್ಯುಟೋರಿಯಲ್ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆಕೆಯ ತಾಯಿ ಓರ್ವ ಗೃಹಿಣಿಯಾಗಿದ್ದಾರೆ. ಸಬಿಯಾರ ಎಲ್ಲಾ ಅಂತರ್‌ರಾಷ್ಟ್ರೀಯ ಪ್ರಯಾಣಗಳಿಗೆ ಹಣ ಹೊಂದಿಸುವುದು ತನಗೆ ತುಂಬಾ ಕಷ್ಟವಾಯಿತು ಎನ್ನುತ್ತಾರೆ ಸಿಕಂದರ್. ಎಲ್ಲ ಹಂತಗಳಲ್ಲಿ ಥ್ರೋಬಾಲ್ಗೆ ಮನ್ನಣೆ ಸಿಕ್ಕಿಲ್ಲ. ಕಾಲೇಜು ಮತ್ತು ಥ್ರೋಬಾಲ್ ಫೆಡರೇಷನ್ ಥ್ರೋಬಾಲ್ ಆಟಗಾರರಿಗೆ ನೀಡುವ ಆರ್ಥಿಕ ನೆರವು ಅತ್ಯಲ್ಪ. ಥ್ರೋಬಾಲ್ಗೆ ಒಂದು ಒಲಿಂಪಿಕ್ ಆಟದ ಸ್ಥಾನ ನೀಡಿಲ್ಲವೆಂದು ವಿಷಾದ ವ್ಯಕ್ತಪಡಿಸುವ ಸಬಿಯಾ ಅಂತಹ ಮನ್ನಣೆ ಏನಾದರೂ ದೊರಕಿದಲ್ಲಿ ತಾನು ಭಾರತವನ್ನು ಪ್ರತಿನಿಧಿಸುವುದಾಗಿ ಹೇಳುತ್ತಾರೆ. ಹರ್ಯಾಣ ಸರಕಾರ ಪಂದ್ಯದಲ್ಲಿ ಗೆಲ್ಲುವ ಪ್ರತಿ ಸದಸ್ಯರಿಗೂ ಐದು ಲಕ್ಷ ರೂಪಾಯಿ ನಗದು ಬಹುಮಾನ ನೀಡು ತ್ತದೆ. ಇಂತಹ ಪ್ರೋತ್ಸಾಹ ಕರ್ನಾಟಕ ಸರಕಾರದಿಂದಲೂ ಸಿಗಬೇಕಾಗಿದೆ.
ಕಾಲೇಜಿನಲ್ಲಿ ತರಗತಿಗಳಿಗೆ ಹಾಜರಾಗುತ್ತಾ ಇನ್ನೊಂದೆಡೆ ಭಾರತದ ವಿವಿಧ ನಗರಗಳಲ್ಲಿ ನಡೆಯುವ ಕೋಚಿಂಗ್ ಕ್ಯಾಂಪ್‌ಗಳಲ್ಲಿ ಭಾಗವಹಿಸುವ ಸಬಿಯಾರ ಸಾಧನೆಯ ಹಾದಿ ಸುಲಭವಲ್ಲ. ಥ್ರೋಬಾಲ್, ಮಹಿಳೆಯರ ಫುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಮತ್ತು ಇತರ ಕ್ರೀಡಾಕೂಟಗಳಲ್ಲಿ ಸುಮಾರು ಐವತ್ತು ಪದಕಗಳನ್ನು ಪಡೆದಿರುವ ಸಬಿಯಾ, ಕ್ರೀಡೆಗಳು ತನಗೆ ದೈಹಿಕವಾಗಿ ಫಿಟ್ ಆಗಿರಲು, ತನ್ನ ಸಮಯವನ್ನು ನಿಭಾಯಿಸಲು ಮತ್ತು ಶಿಸ್ತನ್ನು ಬೆಳೆಸಲು ೆರವು ನೀಡಿದೆ ಎನ್ನುತ್ತಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಎಂ. ಎ. ಸಿರಾಜ್
ಎಂ. ಎ. ಸಿರಾಜ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X