Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ‘‘ಸರಕಾರ ಮತ್ತು ಪೊಲೀಸರು ನಮ್ಮ...

‘‘ಸರಕಾರ ಮತ್ತು ಪೊಲೀಸರು ನಮ್ಮ ಜೊತೆಗಿದ್ದಾರೆ’’

ಎನ್‌ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಗೋರಕ್ಷಕರ ಕ್ರೌರ್ಯದ ಭಯಾನಕ ಸತ್ಯ ಬಯಲು

ವಾರ್ತಾಭಾರತಿವಾರ್ತಾಭಾರತಿ9 Aug 2018 12:01 AM IST
share
‘‘ಸರಕಾರ ಮತ್ತು ಪೊಲೀಸರು ನಮ್ಮ ಜೊತೆಗಿದ್ದಾರೆ’’

ಆರೆಸ್ಸೆಸ್ ಹಾಗೂ ಇತರ ಸಂಘಪರಿವಾರ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವವರು ಎಂದು ಹೇಳಿಕೊಂಡು ಎನ್‌ಡಿಟಿವಿಯ ತಂಡ ಎರಡು ರಾಜ್ಯಗಳಲ್ಲಿ ನಡೆದ ಎರಡು ಗೋರಕ್ಷಣೆಯ ಹೆಸರಿನ ಹತ್ಯೆ ಪ್ರಕರಣಗಳ ಆರೋಪಿಗಳೊಂದಿಗೆ ಮಾತನಾಡಿದೆ. ಈ ಮಾತುಕತೆಯ ವೀಡಿಯೊವನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ.

ಕೃಪೆ: ndtv.com

ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಕೊಲೆಗೈದವರೊಂದಿಗೆ ಎನ್‌ಡಿಟಿವಿ ನಡೆಸಿರುವ ರಹಸ್ಯ ಕಾರ್ಯಾಚರಣೆ ಭಯಾನಕ ಸತ್ಯಗಳನ್ನು ಹೊರಗೆಡವಿದೆ.
ಆರೆಸ್ಸೆಸ್ ಹಾಗೂ ಇತರ ಸಂಘಪರಿವಾರ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವವರು ಎಂದು ಹೇಳಿಕೊಂಡು ಎನ್‌ಡಿಟಿವಿಯ ತಂಡ ಎರಡು ರಾಜ್ಯಗಳಲ್ಲಿ ನಡೆದ ಎರಡು ಗೋರಕ್ಷಣೆಯ ಹೆಸರಿನ ಹತ್ಯೆ ಪ್ರಕರಣಗಳ ಆರೋಪಿಗಳೊಂದಿಗೆ ಮಾತನಾಡಿದೆ. ಈ ಮಾತುಕತೆಯ ವೀಡಿಯೊವನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ.
ಜೂನ್ 18ರಂದು 45 ವರ್ಷದ ವರ್ತಕ ಕಾಸಿಂ ಖುರೇಷಿಯವರನ್ನು ಗೋರಕ್ಷಕರ ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಈ ಪ್ರಕರಣ ನಡೆದ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಗೆ ತಂಡವು ಮೊದಲು ಭೇಟಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದು, 4 ಮಂದಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಹಾಪುರ್ ಹತ್ಯೆ ಪ್ರಕರಣದ ಆರೋಪಿ ರಾಕೇಶ್ ಸಿಸೋಡಿಯಾನನ್ನು ಭೇಟಿಯಾಗಲು ಎನ್‌ಡಿಟಿವಿ ಆರಂಭದಲ್ಲಿ ಬಜೇಧಾ ಖುರ್ದ್ ಗ್ರಾಮಕ್ಕೆ ತೆರಳಿತ್ತು. ಈತ ಇದೀಗ ಜಾಮೀನಿನಲ್ಲಿದ್ದಾನೆ.
ಈ ಪ್ರಕರಣದಲ್ಲಿ ತನ್ನದೇನೂ ಪಾತ್ರವಿಲ್ಲ ಹಾಗೂ ತಾನು ಸ್ಥಳದಲ್ಲಿರಲಿಲ್ಲ ಎಂದು ಸಿಸೋಡಿಯಾ ಕೋರ್ಟ್‌ಗೆ ಲಿಖಿತ ರೂಪದಲ್ಲಿ ತಿಳಿಸಿದ್ದ. ಆದರೆ ರಹಸ್ಯ ಕ್ಯಾಮರಾದಲ್ಲಿ ಆತ ತನ್ನ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ, ಕ್ರೌರ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೈಲು ಅಧಿಕಾರಿಗಳ ಮುಂದೆಯೇ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದೆ ಎಂದೂ ಆತ ಹೇಳಿದ್ದಾನೆ.
‘‘ಅವರು (ಸಂತ್ರಸ್ತರು) ಗೋಹತ್ಯೆ ಮಾಡುತ್ತಿದ್ದರು. ಆದ್ದರಿಂದ ನಾನು ಅವರ ಹತ್ಯೆ ಮಾಡಿದೆ ಎಂದು ನಾನು ಜೈಲರ್ ಮುಂದೆ ಹೇಳಿದ್ದೇನೆ. ನಾನು ಜೈಲಿಗೆ ಹೋಗಲು ಹೆದರಿಲ್ಲ. ಯಾವ ಪ್ರಕರಣ ಎಂದು ಕೇಳಿದ್ದ ಜೈಲರ್‌ಗೆ ನಾನು, ಸೆಕ್ಷನ್ 302 , 307 (ಕೊಲೆ, ಕೊಲೆಯತ್ನ) ಎಂದು ಹೇಳಿದ್ದೆ’’ ಎಂದು ಸಿಸೋಡಿಯಾ ಹೇಳಿರುವುದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜುಲೈಯ ಕೊನೆಯ ವಾರದಲ್ಲಿ ತನಗೆ ಜಾಮೀನು ಲಭಿಸಿದಾಗ ಯಾವ ರೀತಿಯ ಸ್ವಾಗತ ಲಭಿಸಿತ್ತು ಎಂದೂ ಆತ ವಿವರಿಸಿದ್ದಾನೆ. ‘‘ಜೈಲಿನಿಂದ ನನ್ನನ್ನು ಕರೆದೊಯ್ಯಲು 3-4 ವಾಹನಗಳು ಬಂದಿದ್ದವು. ನನ್ನ ಹೆಸರಿನಲ್ಲಿ ಜನರು ಘೋಷಣೆಗಳನ್ನು ಕೂಗುತ್ತಿದ್ದರು. ನನಗೆ ತುಂಬಾ ಹೆಮ್ಮೆ ಎನಿಸಿತು’’ ಎಂದು ಆತ ಹೇಳಿದ್ದಾನೆ.
‘‘ನನ್ನ ಸೈನ್ಯ ತಯಾರಾಗಿದೆ. ಯಾರಾದರೂ ಗೋಹತ್ಯೆ ಮಾಡಿದರೆ, ನಾವು ಅವರನ್ನು ಕೊಂದು ಸಾವಿರ ಸಲ ಜೈಲಿಗೆ ಹೋಗುತ್ತೇವೆ. ಸರಕಾರದಿಂದಾಗಿ ಪೊಲೀಸರು ನಮ್ಮ ಜೊತೆಗಿದ್ದಾರೆ. ಅಝಂ ಖಾನ್ ಅಧಿಕಾರದಲ್ಲಿದ್ದಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ’’ ಎಂದು ಸಿಸೋಡಿಯಾ ಗೋರಕ್ಷಕರಿಗೆ ಪೊಲೀಸರ ಸಹಕಾರದ ಬಗ್ಗೆಯೂ ಒಪ್ಪಿಕೊಂಡಿದ್ದಾನೆ.
ಗೋರಕ್ಷಕರಿಂದ ಗಂಭೀರ ಹಲ್ಲೆಗೊಳಗಾಗಿದ್ದ ಕಾಸಿಂ ನೀರು ಕೇಳುತ್ತಿರುವುದು ಈ ಹಿಂದೆ ವೈರಲ್ ಆದ ವೀಡಿಯೊದಲ್ಲಿತ್ತು. ಈ ಘಟನೆಯನ್ನೂ ಸಿಸೋಡಿಯಾ ವಿವರಿಸುತ್ತಾನೆ. ‘‘ನಿನಗೆ ನೀರು ಕುಡಿಯುವ ಹಕ್ಕಿಲ್ಲ ಎಂದು ನಾನು ಹೇಳಿದೆ. ಅವನು ಗೋಹತ್ಯೆಗೈದಿದ್ದ. ಪ್ರತಿ ನಿಮಿಷವೂ ನಿನ್ನನ್ನು ಕೊಲ್ಲಲಾಗುವುದು ಎಂದು ನಾನು ಆತನಿಗೆ ಹೇಳಿದೆ’’ ಎಂದು ಕ್ರೌರ್ಯವನ್ನು ಹೆಮ್ಮೆಯಿಂದ ವಿವರಿಸುತ್ತಾನೆ ಸಿಸೋಡಿಯಾ.
ಇನ್ನೊಂದು ರಹಸ್ಯ ಕಾರ್ಯಾಚರಣೆಯಲ್ಲಿ ಎನ್‌ಡಿಟಿವಿ ಜೈಪುರ ಸಮೀಪದ ಆಲ್ವಾರ್‌ನ ಬೆಹ್ರೋರ್‌ಗೆ ತೆರಳಿತ್ತು. 2017ರ ಎಪ್ರಿಲ್ನಲ್ಲಿ ಪೆಹ್ಲೂಖಾನ್‌ರನ್ನು ಇಲ್ಲೇ ಗೋರಕ್ಷಕರು ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದರು. ಆದರೆ ಇವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಒಬ್ಬಾತನಾದ ವಿಪಿನ್ ಯಾದವ್, ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಇತರ ಆರೋಪಿಗಳಂತೆಯೇ ಹೇಳಿಕೆ ನೀಡಿದ್ದ.
ತಾನೂ ಹತ್ಯೆಯಲ್ಲಿ ಶಾಮೀಲಾಗಿದ್ದೆ ಎಂದು ಈತ ಹೇಳಿರುವುದು ಕೂಡ ಎನ್‌ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ‘‘ಸುಮಾರು ಒಂದೂವರೆ ಗಂಟೆಗಳ ಕಾಲ ನಾವು ಹಲ್ಲೆ ನಡೆಸಿದೆವು. ಮೊದಲು ನಾವು ಹತ್ತು ಜನರಿದ್ದೆವು. ನಂತರ ಜನರ ಸಂಖ್ಯೆ ಹೆಚ್ಚಿತು’’ ಎಂದು ಯಾದವ್ ಹೇಳಿದ್ದಾನೆ.
‘‘ಅವರು ಟ್ರಕ್ ನಿಲ್ಲಿಸಲಿಲ್ಲ. ಆದ್ದರಿಂದ ನಾನು ಓವರ್‌ಟೇಕ್ ಮಾಡಿ ಬಲವಂತದಿಂದ ಕೀ ಕಸಿದುಕೊಂಡು ಅವರನ್ನು ಹೊರಗೆಳೆದೆ. ಆತ (ಪೆಹ್ಲೂ ಖಾನ್) ಗಂಭೀರವಾಗಿ ಗಾಯಗೊಂಡಿದ್ದ. ಈ ಗಲಾಟೆಯ ನಡುವೆ ಆತನ ಟ್ರಕ್ ಕೀ ನನ್ನ ಜೇಬಿನಲ್ಲಿದೆ ಎನ್ನುವುದನ್ನು ನಾನು ಮರೆತಿದ್ದೆ’’ ಎಂದು ಯಾದವ್ ಹೇಳಿರುವುದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X