Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ...

ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ

ಮಾನವ-ಭಕ್ಷಕ ಕಾಡುಪ್ರಾಣಿಗಳನ್ನು ನಿವಾರಿಸಿಕೊಳ್ಳುವ ಕ್ರಮಗಳು ನಿರ್ದಿಷ್ಟವಾಗಿರಬೇಕು ಮತ್ತು ಕಾನೂನುಬದ್ಧವಾಗಿರಬೇಕೇ ವಿನಃ ಅಬ್ಬರ ಹಾಗೂ ಸೇಡಿನಿಂದ ಕೂಡಿರಬಾರದು.

ಕೃಪೆ: Economic and Political Weeklyಕೃಪೆ: Economic and Political Weekly5 Oct 2018 6:33 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ

ಕಳೆದ ಕೆಲವು ವಾರಗಳಿಂದ ಮಹಾರಾಷ್ಟ್ರದಲ್ಲಿ ವನ್ಯಜೀವಿ ಕಾರ್ಯಕರ್ತರು, ರಾಜ್ಯ ಸರಕಾರ ಮತ್ತು ರಾಲೆಗಾಂವ್ ಗ್ರಾಮಸ್ಥರ ನಡುವೆ ಒಂದು ಸಂಘರ್ಷ ನಡೆಯುತ್ತಿದೆ. ಅದಕ್ಕೆ ಕಾರಣ ರಾಲೆಗಾಂವ್ ಗ್ರಾಮದ ಮೇಲೆ ಮಾನವ ಭಕ್ಷಕ ಹೆಣ್ಣುಹುಲಿಯೊಂದು ದಾಳಿ ನಡೆೆಸಿರುವುದು. ಆ ಹುಲಿಯು ಎರಡು ಮರಿಗಳ ತಾಯಿಯೂ ಆಗಿದ್ದು, ಜನರನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆಯು ಆ ಹುಲಿಯನ್ನು ಗುಂಡುಹೊಡೆದು ಕೊಲ್ಲುವ ತೀರ್ಮಾನ ಮಾಡಿತ್ತು. ಹೀಗಾಗಿ ವನ್ಯಜೀವಿ ಕಾರ್ಯಕರ್ತರು ಆ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ಆದರೆ ಸುಪ್ರೀಂ ಕೋರ್ಟು ಹುಲಿಯನ್ನು ಕೊಲ್ಲುವ ತೀರ್ಮಾನಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದ್ದರಿಂದ ಆ ಹುಲಿಯನ್ನು ಬಂಧಿಸುವ ಪ್ರಯತ್ನ ಗಳು ಕೈಗೂಡದಿದ್ದರೆ ಅರಣ್ಯ ಇಲಾಖೆಯು ಅದನ್ನು ಈಗ ಕೊಂದು ಹಾಕಬಹುದು.

ಮಾನವ ಕುಲಕ್ಕೆ ಸೇರದ ಜೀವಿಗಳು ಮನುಷ್ಯರನ್ನು ಕೊಲ್ಲುವ ವಿದ್ಯಮಾನದ ಪ್ರತಿಕ್ರಿಯೆಗಳು ಸದಾ ಅಪನಂಬಿಕೆ ಮತ್ತು ದಿಗ್ಭ್ರಾಂತಿಗಳಿಂದ ಕೂಡಿರುತ್ತವೆ. ಅದರಲ್ಲೂ ಸಾವು ಅಥವಾ ಹಾನಿಗಳಿಗೆ ಹುಲಿಯಂಥ ಪ್ರಾಣಿಗಳು ಕಾರಣವಾಗಿದ್ದರಂತೂ ಪ್ರತಿಕ್ರಿಯೆಗಳು ಇನ್ನಷ್ಟು ದೊಡ್ಡಧ್ವನಿಯನ್ನು ಪಡೆದುಕೊಳ್ಳುತ್ತವೆ. ಪ್ರಾಣಿಗಳು ಮನುಷ್ಯರನ್ನು ತಿನ್ನುವುದು ತುಂಬಾ ಅಪರೂಪದ ವಿದ್ಯಮಾನವಾಗಿರುವುದರಿಂದ ಪ್ರಾಣಿಗಳೇ ಮನುಷ್ಯರನ್ನು ಕೊಂದಿದೆ ಎಂದು ಖಚಿತವಾಗಿ ಹೇಳುವುದಾಗಲೀ ಅಥವಾ ಇಂತಹ ಪ್ರಾಣಿಯೇ ಮನುಷ್ಯರನ್ನು ಕೊಂದಿರುವುದೆಂದು ನಿಖರವಾಗಿ ಪತ್ತೆಹಚ್ಚುವುದಾಗಲೀ ಕಷ್ಟ ಸಾಧ್ಯವೆಂದು ವನ್ಯಜೀವಿ ಕಾರ್ಯಕರ್ತರು ಪ್ರತಿಪಾದಿಸುತ್ತಾರೆ. ಮತ್ತೊಂದು ತುದಿಯಲ್ಲಿ ಇಂತಹ ಅಪಾಯಕಾರಿ ಪ್ರಾಣಿಗಳ ಸುತ್ತಾಟದ ಸರಹದ್ದಿನಲ್ಲೇ ವಾಸಿಸುವ ಗ್ರಾಮಸ್ಥರು ಸದಾ ಜೀವಭಯದಲ್ಲೇ ಬದುಕುತ್ತಿರುವ ವಾಸ್ತವವೂ ಇದೆ.
ಹೀಗಾಗಿ ಇಂತಹ ಸಂದರ್ಭಕ್ಕೆ ಯಾರು ಕಾರಣ ಎಂಬಷ್ಟೆ ಮುಖ್ಯವಾದ ಪ್ರಶ್ನೆ ಏನು ಕಾರಣ ಎಂಬುದಾಗಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದ ವನ್ಯಜೀವಿಗಳ ಪರವಾದ ಧ್ವನಿಯಾಗ ಬಯಸುವ ಕಾರ್ಯಕರ್ತರ ಪ್ರಕಾರ ಈ ಸನ್ನಿವೇಶಕ್ಕೆ ವನ್ಯಪರಿಸರದಲ್ಲಿ ಮನುಷ್ಯ ಚಟುವಟಿಕೆಗಳ ಹೆಚ್ಚಳ ಮತ್ತು ಅದರಿಂದ ವನ್ಯ ಬದುಕಿಗೆ ಆಗುತ್ತಿರುವ ಅಡಚಣೆಗಳು ಕಾರಣವೇ ಹೊರತು ಪ್ರಾಣಿಗಳಲ್ಲ. ರಣಥಾಂಬೋರ್ ವನ್ಯಪ್ರದೇಶದಲ್ಲಿ ಮಾನವ ಭಕ್ಷಕ ಎಂಬ ಆರೋಪ ಹೊತ್ತಿದ್ದ ‘ಉಸ್ತಾದ್’ ಎಂಬ ಹುಲಿಯ ವಿಷಯದಲ್ಲೂ ಇದೇ ಬಗೆಯ ದಾವೆಯೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಹೂಡಲಾಗಿತ್ತು. ನಂತರ ಉಸ್ತಾದ್ ಅನ್ನು ಮೃಗಾಲಯಕ್ಕೆ ಸೀಮಿತಗೊಳಿಸಿಡಲಾಯಿತು. ಮನುಷ್ಯರ ಹತ್ಯೆಗೆ ನಿಜಕ್ಕೂ ಹುಲಿಯೇ ಕಾರಣವೇ ಎಂಬುದರ ಬಗ್ಗೆ ಸುಪ್ರೀಂಕೋರ್ಟು ಸಹ ಯಾವುದೇ ತೀರ್ಮಾನಕ್ಕೆ ಬರುವುದು ಅಸಾಧ್ಯವಾದ್ದರಿಂದ ಈ ವಿಷಯದಲ್ಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟಿನ ತೀರ್ಮಾನ ಸಮಂಜಸವಾಗಿಯೇ ಇದೆ. ಅಂತಹ ತೀರ್ಮಾನವನ್ನು ಅರಣ್ಯ ಇಲಾಖೆಯ ನೇತೃತ್ವದ ಒಂದು ಕ್ಷೇತ್ರಾಧಾರಿತ, ಸ್ವತಂತ್ರ ಮತ್ತು ಅಧಿಕೃತವಾದ ಪ್ರಕ್ರಿಯೆಗಳಿಗೆ ಬಿಟ್ಟುಕೊಡುವುದು ಉಚಿತ.
ಒಂದು ಕಾಡಿನಲ್ಲಿ ವಾಸ ಮಾಡುತ್ತಿರುವ ಹುಲಿ ಮತ್ತು ಚಿರತೆಗಳಲ್ಲಿ ಯಾವ ನಿರ್ದಿಷ್ಟ ಹುಲಿ ಅಥವಾ ಚಿರತೆ ಮನುಷ್ಯರ ಹತ್ಯೆಗೆ ಕಾರಣ ಎಂದು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಎಂದೂ ಸರಿಯಾಗಿ ನಿಭಾಯಿಸಲಾಗಿಲ್ಲ. ಮಾನವ ಭಕ್ಷಕ ಎಂಬ ಆರೋಪದ ಮೇಲೆ ಈ ಹಿಂದೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೆಲವು ಚಿರತೆಗಳನ್ನು ಕೊಂದುಹಾಕಲಾಗಿದೆ. ಆದರೆ ಅವುಗಳನ್ನು ಕೊಲ್ಲುವ ಮುನ್ನ ಮನುಷ್ಯರ ಹತ್ಯೆಗೆ ಆ ನಿರ್ದಿಷ್ಟ ಚಿರತೆಗಳೇ ಕಾರಣವೆಂಬ ಯಾವ ಖಚಿತ ಪುರಾವೆಯನ್ನೂ ಒದಗಿಸದೆ ಅವುಗಳನ್ನು ಕೊಲ್ಲಲಾಗಿತ್ತು. ಪ್ರತಿಯೊಂದು ಹುಲಿ ಅಥವಾ ಚಿರತೆಯ ಚರ್ಮದ ಮೇಲೆ ಆಯಾ ಹುಲಿ ಅಥವಾ ಚಿರತೆಗಳಿಗೆ ನಿರ್ದಿಷ್ಟವಾದ ಪಟ್ಟೆ ಅಥವಾ ಚುಕ್ಕೆಗಳಿರುತ್ತವೆ; ಒಂದು ನಿರ್ದಿಷ್ಟ ಹುಲಿ ಅಥವಾ ಚಿರತೆಯು ಮಾನವ ಭಕ್ಷಕ ಪ್ರವೃತ್ತಿಯನ್ನು ಹೊಂದಿದೆಯೇ ಎಂಬುದನ್ನು ಪ್ರತ್ಯಕ್ಷವಾಗಿ ಗಮನಿಸುವ ಮೂಲಕ ಅಥವಾ ಅವುಗಳ ಚಿತ್ರವನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಮೂಲಕ ಪತ್ತೆಹಚ್ಚಬಹುದು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನಿಗದಿ ಪಡಿಸಿರುವ ಮಾನದಂಡಗಳ ಪ್ರಕಾರ ಒಂದು ಹುಲಿಯನ್ನು ಮಾನವ ಭಕ್ಷಕ ಎಂದು ಘೋಷಿಸುವ ಮುನ್ನ ಅದು ಮನುಷ್ಯ ಹಂತಕವೋ ಅಥವಾ ಮನುಷ್ಯ ಭಕ್ಷಕವೋ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ಮನುಷ್ಯ ಹಂತಕ ಮಾತ್ರವೇ ಆಗಿದ್ದರೆ ಅದು ಅಕಸ್ಮಿಕವಾಗಿರುತ್ತದೆಯೇ ವಿನಃ ಭಕ್ಷಕ ಪ್ರವೃತ್ತಿಯದ್ದಾಗಿರುವುದಿಲ್ಲ.
ಅಷ್ಟುಮಾತ್ರವಲ್ಲದೆ, ಮಾನವ ಭಕ್ಷಕ ಹುಲಿಗಳ ಜೊತೆ ಎಷ್ಟೆಲ್ಲಾ ಕಾನೂನು ಮತ್ತು ತತ್ವಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ವಿಷಯಗಳೂ ಬೆಳಕಿಗೆ ಬರುತ್ತಿವೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾವುದಾದರೂ ವನ್ಯಜೀವಿಯು ಮಾನವ ಜೀವಕ್ಕೆ ಗಂಡಾಂತರಕಾರಿ ಎಂದು ಸಾಬೀತಾದಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಅವರ ಅಧಿಕೃತ ಪರವಾನಿಗೆಯೊಂದಿಗೆ ಮಾತ್ರ ಅದನ್ನು ಕೊಲ್ಲಬಹುದು. ಮಾನವ ಭಕ್ಷಕ ಪ್ರವೃತ್ತಿಯುಳ್ಳ ಯಾವುದಾದರೂ ವನ್ಯಜೀವಿಯನ್ನು ಕಾನೂನುಬದ್ಧವಾಗಿ ಅಲ್ಲಿಂದ ಹೊರಗಟ್ಟಬೇಕೆಂದರೂ ಅಥವಾ ಕೊಂದುಹಾಕಬೇಕೆಂದರೂ ಅದಕ್ಕೊಂದು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ ಮತ್ತು ಆ ಪ್ರಕ್ರಿಯೆಯು ನಿರ್ದಿಷ್ಟವಾಗಿರಬೇಕು, ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಹಾನಿ ಮಾಡದಷ್ಟು ನಿಖರವಾಗಿರಬೇಕು ಮತ್ತು ಅದನ್ನು ಸರಕಾರವೇ ನಡೆಸಬೇಕಿರುತ್ತದೆಯೇ ವಿನಃ ಆಬ್ಬರದೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ನಡೆಸಬಾರದು. ಅಂತಹ ತಂಟೆಕೋರ ಪ್ರಾಣಿಗಳನ್ನು ಕೊಂದುಹಾಕಿದ ನಂತರ ಕೊಂದವರ ಹೆಗಲಿನ ಮೇಲೆ ಕೊಲ್ಲಲ್ಪಟ್ಟ ಪ್ರಾಣಿಯ ಹೆಣವು ತೂಗಾಡುತ್ತಿರುವ ಅಥವಾ ಕೊಂದ ಪ್ರಾಣಿಯನ್ನು ತಮ್ಮ ಕಾಲಬುಡದಲ್ಲಿ ಕೆಡವಿಕೊಂಡು ಅದರ ಮೇಲೆ ಬಂದೂಕಿನ ಮೊನೆ ತಾಗಿಸುತ್ತಾ ಫೋಸು ಕೊಟ್ಟ ಫೋಟೊಗಳು ವಿಸ್ತೃತವಾಗಿ ಚಲಾವಣೆಯಾಗುತ್ತವೆ. ಇಂತಹ ಫೋಟೊಗಳು ಬೇಟೆಯಾಡಿದ್ದಕ್ಕೆ ಬಹುಮಾನಿತರಾದ ಅಥವಾ ಪ್ರತೀಕಾರ ತೀರಿಸಿಕೊಂಡ ಮೌಲ್ಯಗಳನ್ನು ಬಿತ್ತುತ್ತವೆಯೇ ವಿನಃ ದೀರ್ಘಕಾಲೀನ ಪರಿಹಾರಗಳನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದ ಕಾನೂನುಬದ್ಧ ಸಂರಕ್ಷಣಾ ತತ್ವಗಳನ್ನು ಆಧರಿಸಿದ ಆಧುನಿಕ ಪ್ರಭುತ್ವವೊಂದರ ಮೌಲ್ಯಗಳನ್ನಲ್ಲ. ಈ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಉತ್ತರಾಖಂಡ್‌ನ ಹೈಕೋರ್ಟು ತನ್ನ 2016ರ ಡಿಸೆಂಬರಿನ ಆದೇಶವೊಂದರಲ್ಲಿ ಸತ್ತ ವನ್ಯಜೀವಿಗಳ ಮೃತದೇಹಗಳ ಚಿತ್ರವನ್ನು ಮುದ್ರಣ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಮಾನವ ಭಕ್ಷಕ ವನ್ಯಜೀವಿಗಳ ಸುತ್ತ ನಡೆಯುತ್ತಿರುವ ಚಿಂತನ ಮಂಥನಗಳು ಪ್ರಧಾನವಾಗಿ ವನ್ಯಜೀವಿ ಸಂರಕ್ಷಣೆಯ ಸುತ್ತ ಕೇಂದ್ರೀಕೃತವಾಗಿರಬೇಕೇ ವಿನಃ ಪ್ರಾಣಿಗಳ ಹಕ್ಕುಗಳ ಮೇಲಲ್ಲ. ಸಂರಕ್ಷಣಾ ತತ್ವಗಳು ಜೀವಕುಲದ ಸಂರಕ್ಷಣೆಯ ಉದ್ದೇಶಹೊಂದಿರುತ್ತವೆ; ಅದನ್ನು ಜನರ ಸಹಕಾರವಿಲ್ಲದೆ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಸಂರಕ್ಷಣಾ ಪದ್ಧತಿಗಳು ಮಾನವಸಹಭಾಗಿತ್ವದ ಮೂಲಕ ಸಾಧಿತವಾಗಿದೆಯೇ ವಿನಃ ಅದರ ಹೊರಗಲ್ಲ. ಆದರೆ ಪ್ರಾಣಿಹಕ್ಕು ಪ್ರತಿಪಾದನೆಗಳು ನಿರ್ದಿಷ್ಟ ಪ್ರಾಣಿಯ ಯೋಗಕ್ಷೇಮಗಳ ಬಗ್ಗೆ ಮಾತ್ರ ಕಾಳಜಿ ಹೊಂದಿರುತ್ತವೆ. ಹೀಗಾಗಿ ಒಂದು ನಿರ್ದಿಷ್ಟ ಮಾನವ ಭಕ್ಷಕ ವನ್ಯಜೀವಿಯನ್ನು ಜೀವಂತವಾಗುಳಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮಾನ್ಯ ಮಾಡಲಾಗುವುದಿಲ್ಲ. ಮಾನವ ಮತ್ತು ವನ್ಯಜೀವಿಗಳ ಸಹಜೀವನವನ್ನು ಮನುಷ್ಯ ಕೇಂದ್ರಿತ ಅತಿರೇಕಗಳಿಂದಾಗಲೀ ಅಥವಾ ಪ್ರಾಣಿಹಕ್ಕು ಕೇಂದ್ರಿತ ಅತಿರೇಕಗಳಿಂದಾಗಲೀ ಸಾಧಿಸಲು ಸಾಧ್ಯವಾಗುವುದಿಲ್ಲ. ಸಂಘರ್ಷಕ್ಕೆ ಏನು ಕಾರಣ ಎಂಬುದನ್ನು ಗ್ರಹಿಸಬೇಕೆಂದರೆ ಇಂತಹ ಸಂಘರ್ಷದ ಮುಂದುವರಿಕೆಗೆ ಕಾರಣವಾಗಿರುವ ಸಂಗತಿಗಳನ್ನು ಮತ್ತು ಜನರ ತಾಳ್ಮೆಗಳು ಕಟ್ಟೆಯೊಡೆಯುತ್ತಿರುವುದಕ್ಕೆ ಕಾರಣಗಳೇನೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಸರಕಾರಗಳ ಸಹಕಾರವಿಲ್ಲದೆ ಬಡವರೇ ಸಂರಕ್ಷಣೆಯ ಖರ್ಚನ್ನು ಹೊರಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಹಾಗೆಯೇ ಮಾನವ-ವನ್ಯಜೀವಿ ಸಂಘರ್ಷವು ಇತರ ಉದ್ವಿಗ್ನತೆಗಳನ್ನು, ಒತ್ತಡಗಳನ್ನು ನಿವಾರಿಸಿಕೊಳ್ಳುವ ಮಾರ್ಗವೂ ಆಗಬಾರದು. ಜನರ ಅನುದಿನದ ಹತಾಶೆಗಳ ನಿವಾರಣೆಗೆ ಪ್ರಾಣಿಗಳು ಬಲಿಯಾಗಬಾರದು.
ಇದಕ್ಕೆಲ್ಲಾ ಇರುವ ಏಕೈಕ ಉತ್ತರವೆಂದರೆ ತಳಮಟ್ಟದಲ್ಲಿ ಕ್ಷೇತ್ರಕಾರ್ಯವನ್ನು ಹೆಚ್ಚಿಸುತ್ತಾ ಅತ್ಯಧಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು. ಬೆಳೆ ಮತ್ತು ಸಾಕುಪ್ರಾಣಿ ವಿಮೆಗಳು ಇನ್ನಷ್ಟು ಜನಸ್ನೇಹಿಯಾಗಿಯೂ ಬೇಕೆಂದಾಗ ಕೈಗೆಟಕುವಂತೆಯೂ ಆಗಬೇಕು. ವನ್ಯಜೀವಿಗಳು ಬರದಂತೆ ತಡೆಗಟ್ಟುವ ಅಭ್ಯಾಸಗಳನ್ನು ವಿಸ್ತೃತವಾಗಿ ಪ್ರಚಾರ ಮಾಡಬೇಕು. ಇಂತಹ ಸಂಘರ್ಷದ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆಯು ಯೋಗ್ಯವಾಗಿ, ತ್ವರಿತವಾಗಿ ಮತ್ತು ಒಂದೇ ಬಗೆಯಲ್ಲಿ ಸ್ಪಂದಿಸಬೇಕು. ಯಾವುದೇ ಬಗೆಯ ಪ್ರದರ್ಶನಗಳನ್ನು ತಡೆಗಟ್ಟಬೇಕು. ಇದರ ಜೊತೆಗೆ ಒಂದು ನಿರ್ದಿಷ್ಟ ವಸತಿ ಪ್ರದೇಶದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವಲ್ಲಿ ಜನರು ಎದುರಿಸುತ್ತಿರುವಂತಹ ಕಷ್ಟಗಳನ್ನೂ ಒಳಗೊಂಡಂತೆ ಜನರ ಇತರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿಗಳೂ ಇರಬೇಕು. ವನ್ಯಪ್ರದೇಶಗಳ ಮೇಲೆ ಮಾನವವಸತಿಯ ಒತ್ತಡಗಳು ಹೆಚ್ಚುತ್ತಾಹೋದಂತೆ ನಿರ್ದಿಷ್ಟವಾದ ಮತ್ತು ಆಯಾ ಪ್ರದೇಶಗಳಿಗೆ ತಕ್ಕನಾದ ಪರಿಹಾರಗಳನ್ನು ಹುಡುಕುವುದು ಈಗ ಕೇವಲ ಆಯ್ಕೆಯಾುಳಿಯದೇ ತುರ್ತು ಅನಿವಾರ್ಯವಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕೃಪೆ: Economic and Political Weekly
ಕೃಪೆ: Economic and Political Weekly
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X