Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಪ್ರಾಮಾಣಿಕರ ಪಂಕ್ತಿಯಲ್ಲಿ ನಿಜಲಿಂಗಪ್ಪ

ಪ್ರಾಮಾಣಿಕರ ಪಂಕ್ತಿಯಲ್ಲಿ ನಿಜಲಿಂಗಪ್ಪ

ಇಂದು ಎಸ್.ನಿಜಲಿಂಗಪ್ಪನವರ ಹುಟ್ಟಿದ ದಿನ

ಕೆ.ಎಸ್. ನಾಗರಾಜ್ಕೆ.ಎಸ್. ನಾಗರಾಜ್10 Dec 2018 12:02 AM IST
share
ಪ್ರಾಮಾಣಿಕರ ಪಂಕ್ತಿಯಲ್ಲಿ ನಿಜಲಿಂಗಪ್ಪ

ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಪ್ರಮುಖ ಹುದ್ದೆಗಳಲ್ಲಿದ್ದರೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ದೂರ ಇದ್ದು, ಪ್ರಾಮಾಣಿಕವಾದ ಮತ್ತು ಪಾರದರ್ಶಕವಾದ ಸಾರ್ವಜನಿಕ ಬದುಕನ್ನು ಸಾಗಿಸಿಕೊಂಡು ಮಾದರಿಯಾದಂತಹ ನಾಯಕತ್ವ ನೀಡುವುದು ಸುಲಭದ ವಿಚಾರವಲ್ಲ. ಇಂತಹ ಬದುಕು ನಿಜಲಿಂಗಪ್ಪನವರಂತಹ ವ್ಯಕ್ತಿಗಳಿಂದ ಮಾತ್ರ ಸಾಧ್ಯ.

 ಕರ್ನಾಟಕ ರಾಜ್ಯದ ಏಕೀಕರಣದ ದಿನಗಳನ್ನು ನೆನಪು ಮಾಡಿಕೊಂಡಾಗ ಕೆಲವರ ಹೆಸರು ಮೊದಲು ನೆನಪಾಗುತ್ತದೆ. 1956 ನವೆಂಬರ್ 1ರ ಹಿಂದೆ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆಯ ಪ್ರದೇಶಗಳನ್ನೆಲ್ಲಾ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರಲು ಇದರ ಹಿಂದೆ ಅನೇಕ ಮಹನೀಯರ ಅಪಾರವಾದ ಸೇವೆ ಮತ್ತು ಶ್ರಮ ಇದೆ. ಇದರಲ್ಲಿ ಪ್ರಮುಖವಾಗಿ ರಾಷ್ಟ್ರಕವಿ ಕುವೆಂಪು ಮತ್ತು ನಿಜಲಿಂಗಪ್ಪನವರನ್ನು ಮೊದಲು ನಾವು ಸ್ಮರಿಸಬೇಕಾಗುತ್ತದೆ.
   ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದಂತಹ ಎಸ್.ನಿಜಲಿಂಗಪ್ಪನವರು ರಾಷ್ಟ್ರದ ರಾಜಕಾರಣದಲ್ಲಿಯೂ ಚರಿತ್ರಾರ್ಹವಾದ ಘಟನೆಗಳಿಂದಾಗಿ ಹೆಸರಿಸಬಹುದಾದ ಪ್ರಮುಖ ಹೆಸರಾಗಿದೆ. 1902ರಲ್ಲಿ ಜನಿಸಿದ ನಿಜಲಿಂಗಪ್ಪನವರು ಅತಿ ಹೆಚ್ಚಿನ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯವನ್ನು ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 1956ರಲ್ಲಿ ಒಮ್ಮೆ ಮುಖ್ಯಮಂತ್ರಿಯಾಗಿ ಮತ್ತೆ 1962ರಲ್ಲಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಜನರ ಬದುಕನ್ನು ಕಟ್ಟಿದಂತಹ ಮಹಾಪುರುಷ. ರಾಜ್ಯದ ಆರ್ಥಿಕ, ಸಾಮಾಜಿಕ ಪ್ರಗತಿ ಅಡಗಿರುವುದು ಕೃಷಿ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಗಳ ಅಭಿವೃದ್ಧಿಯಿಂದ ಎಂಬುದನ್ನು ಅರಿತಿದ್ದ ಅವರು ಕೃಷ್ಣಾ ಮೇಲ್ದಂಡೆಯ ಯೋಜನೆ, ಶರಾವತಿ ವಿದ್ಯುತ್ ಸ್ಥಾವರದ ಅನುಷ್ಠಾನ, ರಾಜ್ಯದ ಅನೇಕ ಕೃಷಿ ಆಧಾರಿತ ಚಟುವಟಿಕೆಗಳ ಸ್ಥಾಪನೆ, ಪ್ರಮುಖ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಂತಹ ಮುಂದಾಲೋಚನೆಯ ಅತ್ಯಂತ ಪ್ರಮುಖ ನಾಯಕ. ರಾಷ್ಟ್ರದ ಹಿರಿಯ ರಾಜಕಾರಣಿಯಾಗಿ ತಮ್ಮ ವ್ಯಕ್ತಿತ್ವವನ್ನು ತಮ್ಮ ನಡವಳಿಕೆಯ ಮೂಲಕವೇ ಹಿರಿದಾಗಿಸಿ ಕೊಂಡಿದ್ದರು. ಒಬ್ಬ ತಾಯಿಯಲ್ಲಿ ಕಾಣಬಹುದಾಗಿದ್ದಂತಹ ಮಮತೆ ಮತ್ತು ಪ್ರೀತಿಯನ್ನು ತನ್ನ ಅನುಯಾಯಿಗಳಿಗೆ ತೋರಿಸಿದವರು. ಪರಿಚಿತರು ಯಾರೇ ಸಿಕ್ಕಿದರೂ ಮೊದಲು ವಿಚಾರಿಸುತ್ತಿದ್ದುದು ಕುಟುಂಬದ ಯೋಗಕ್ಷೇಮ. ಹೀಗೆ ಒಬ್ಬ ದೊಡ್ಡ ರಾಜಕಾರಣಿಯಾದರೂ ಒಬ್ಬ ಮನುಷ್ಯನಿಗೆ ಇರಬೇಕಾದ ಮಾನವೀಯ ವೌಲ್ಯಗಳನ್ನು, ಸಂಬಂಧಗಳನ್ನು ಸಾರಿದಂತಹ ಮಾದರಿ ನಡವಳಿಕೆ ಇವರದಾಗಿತ್ತು.
 1936ರಲ್ಲಿ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿ, ಜೀವನ ನಿರ್ವಹಣೆಗೆ ವಕೀಲಿ ವೃತ್ತಿಯನ್ನು ಅವಲಂಬಿಸಿ, ಮಹಾತ್ಮಾ ಗಾಂಧೀಜಿಯವರ ವಿಚಾರ ಧಾರೆಗಳಿಗೆ ಮನಸೋತು ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆ ವಾಸವನ್ನು ಅನುಭವಿಸಿದ್ದರು. ಈ ನಡುವೆ ರಾಷ್ಟ್ರದ ಅನೇಕ ನಾಯಕರ ಸಂಪರ್ಕಗಳನ್ನು ಸಾಧಿಸಿದರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಹತ್ತು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು. 1952ರಲ್ಲಿ ಲೋಕಸಭಾ ಸದಸ್ಯರಾಗಿ ಅನೇಕ ಸಂದರ್ಭಗಳಲ್ಲಿ ಕನ್ನಡಿಗರ ಪರವಾಗಿ ಲೊಕಸಭೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಹಿರಿಯರಿಗೆ ಸರಿ ಎನಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆಯಾಗಬೇಕೆಂಬ ವಿಚಾರದಲ್ಲಿ ಅಂದಿನ ದಿನಗಳಲ್ಲಿ ಅನೇಕ ಚಚೆರ್ರ್ಗಳಾದವು. ಭಾಷಾವಾರು ಪ್ರಾಂತದ ರಚನೆಗೆ ವಿಶೇಷವಾಗಿ ದಕ್ಷಿಣ ಭಾರತದಿಂದ ಹೆಚ್ಚಿನ ಒತ್ತಡವಿತ್ತು. ಈ ಒತ್ತಡವನ್ನು ಅಂದಿನ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರೂರವರಿಗೆ ತಿಳಿಸಿ ಅವರೊಂದಿಗೆ ಅನೇಕ ಬಾರಿ ಚರ್ಚಿಸಿ ಇದಕ್ಕಾಗಿ ರಚಿಸಲ್ಪಟ್ಟಿದ್ದ ಸಮಿತಿಯ ಸದಸ್ಯರಾಗಿ ಅಲ್ಲಿಯೂ ರಾಜ್ಯದ ಪರವಾಗಿ ತಮ್ಮ ವಾದವನ್ನು ಮಂಡಿಸಿದರು. ಕೊನೆಗೆ 1956ರಲ್ಲಿ ಅನೇಕ ಪ್ರಾಂತಗಳನ್ನು ಒಳಗೊಂಡ ಅಖಂಡ ಕರ್ನಾಟಕ ಉದಯಕ್ಕೆ ನಾಂದಿಯಾಯಿತು. ಇವರು ನಾಡಿಗಾಗಿ ಶ್ರಮಿಸಿದ ಪರಿಣಾಮವಾಗಿ 1956ರ ನವೆಂಬರ್ 1ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸುವಂತಹ ಐತಿಹಾಸಿಕ ಸಂದರ್ಭ ಇವರ ಪಾಲಿಗೆ ಒದಗಿ ಬಂತು.
  ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಪ್ರಮುಖ ಹುದ್ದೆಗಳಲ್ಲಿದ್ದರೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ದೂರ ಇದ್ದು, ಪ್ರಾಮಾಣಿಕವಾದ ಮತ್ತು ಪಾರದರ್ಶಕವಾದ ಸಾರ್ವಜನಿಕ ಬದುಕನ್ನು ಸಾಗಿಸಿಕೊಂಡು ಮಾದರಿಯಾದಂತಹ ನಾಯಕತ್ವ ನೀಡುವುದು ಸುಲಭದ ವಿಚಾರವಲ್ಲ. ಇಂತಹ ಬದುಕು ನಿಜಲಿಂಗಪ್ಪನವರಂತಹ ವ್ಯಕ್ತಿಗಳಿಂದ ಮಾತ್ರ ಸಾಧ್ಯ. 1968ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಷ್ಟ್ರ ರಾಜಕಾರಣದಲ್ಲಿ ನಿಷ್ಠುರ ಮತ್ತು ನೇರವಾದ ನಡವಳಿಕೆಗಳಿಂದ ಗುರುತಿಸಿಕೊಂಡರು.
1968ರ ವೇಳೆಗೆ ಇಂದಿರಾಗಾಂಧಿಯವರ ಅನೇಕ ರಾಜಕೀಯ ನಿಲುವುಗಳು ನಿಜಲಿಂಗಪ್ಪನವರಿಗೆ ಹಿಡಿಸಲಿಲ್ಲ. ಕೊನೆಗೆ ಅಂದಿನ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವರೆಡ್ಡಿಯವರು ಸೋತು ಅನಧಿಕೃತ ಅಭ್ಯರ್ಥಿ ವಿ.ವಿ.ಗಿರಿಯವರು ರಾಷ್ಟ್ರಪತಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಯಿತು. ನಿಜಲಿಂಗಪ್ಪನವರು ಇಂದಿರಾಗಾಂಧಿಯವರ ನಡವಳಿಕೆಗೆ ರಾಜಕೀಯ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿದ ಕಾರಣ ರಾಷ್ಟ್ರದ ರಾಜಕಾರಣದಲ್ಲಿ ಅರಾಜಕತೆ ಸೃಷ್ಟಿಯಾಯಿತು. ಸಂಸ್ಥಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನಿಜಲಿಂಗಪ್ಪನವರು ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸಿ ನಂತರದ ದಿನಗಳಲ್ಲಿ ಅದಕ್ಕೂ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಆದರೆ 1975ರ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಲು ಮರೆಯಲಿಲ್ಲ. 1977ರಲ್ಲಿ ಜನತಾ ಪಕ್ಷ ರಾಷ್ಟ್ರ ಮಟ್ಟದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆಯಿಂದ ಚುನಾವಣಾ ಪ್ರಚಾರವನ್ನು ಕೈಗೊಂಡರು. ಜನತಾ ಪಕ್ಷದ ಬೆಳವಣಿಗೆಗಳಿಂದ ಮನನೊಂದು ಸಕ್ರಿಯ ರಾಜಕಾರಣದಿಂದ ಮತ್ತಷ್ಟು ಹಿಂದೆ ಸರಿದರು.
ನಿಜಲಿಂಗಪ್ಪನವರು ತಮ್ಮ ಅನೇಕ ಉತ್ತಮ ರಾಜಕೀಯ ಅನುಯಾಯಿಗಳನ್ನು ಈ ರಾಜ್ಯ ಮತ್ತು ರಾಷ್ಟ್ರಕ್ಕೆ ಕೊಡುಗೆಯನ್ನಾಗಿ ನೀಡಿದರು. ತನ್ನ ಎರಡು ಕಣ್ಣುಗಳೆಂದು ಸದಾ ಕರೆಯುತ್ತಿದ್ದ ಲವ ಕುಶ ಎಂಬ ಖ್ಯಾತಿಯ ವೀರೇಂದ್ರ ಪಾಟೀಲ್ ಹಾಗೂ ರಾಷ್ಟ್ರ ನಾಯಕರಾಗಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಯಾದಾಗ ಅತಿ ಹೆಚ್ಚಿನ ಸಂತಸವನ್ನು ವ್ಯಕ್ತಪಡಿಸಿದರು. ನಿಜಲಿಂಗಪ್ಪನವರನ್ನು ಅವರ ಜೀವಿತದ ಅವಧಿಯಲ್ಲಿ ಅವರ ಸಲಹೆ, ಮಾರ್ಗದರ್ಶನಕ್ಕಾಗಿ ರಾಷ್ಟ್ರ ಮತ್ತು ರಾಜ್ಯದ ಅನೇಕ ರಾಜಕೀಯ ನಾಯಕರು ಭೇಟಿ ಮಾಡುತ್ತಲೇ ಇದ್ದದ್ದು ಅವರ ಅನುಭವಕ್ಕೆ ಸಾಕ್ಷಿಯಾಗಿತ್ತು. ಇವರ ಬದುಕು ದಿನಪತ್ರಿಕೆಯನ್ನು ಓದದೆ ಅಥವಾ ಓದಿಸಿ ತಿಳಿದುಕೊಳ್ಳದೆ ಆರಂಭವಾಗುತ್ತಿರಲಿಲ್ಲವಂತೆ. ರಾಜ್ಯದ ಪ್ರಗತಿಗೆ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದ ತತ್ವ ಬದ್ಧ, ಶುದ್ಧವಾದ ರಾಜಕಾರಣದ ಪಾಠವನ್ನು ತಿಳಿಸಿಕೊಟ್ಟ ನಿಜಲಿಂಗಪ್ಪ ಇಂದು ಒಂದು ನೆನಪಾಗಿದ್ದಾರೆ. ಯಾವ ವ್ಯಕ್ತಿ ಅಖಂಡ ಕರ್ನಾಟಕದ ಸ್ಥಾಪನೆಗೆ ಕಾರಣೀಪುರುಷರಾದರೋ ಅಂತಹ ವ್ಯಕ್ತಿಗಳ ಆತ್ಮಕ್ಕೆ ದ್ರೋಹ ಬಗೆಯುವ ರೀತಿಯಲ್ಲಿ ಕರ್ನಾಟಕದ ವಿಭಜನೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿರುವುದು ವಿಷಾದನೀಯ. ಕರ್ನಾಟಕ ರಾಜ್ಯದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನರ ಬದುಕನ್ನು ಹಸನುಗೊಳಿಸುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಯೋಜನೆಗಳ ಮೂಲಕ ಜಾರಿಗೊಳಿಸಿದರೆ ಅದುವೇ ನಾವು ನಿಜಲಿಂಗಪ್ಪನವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗುತ್ತದೆ. ಕೇವಲ ಕ್ಷಣಿಕ ಪ್ರಚಾರಕ್ಕಾಗಿ ಸರಕಾರದ ಬೊಕ್ಕಸವನ್ನು ಪೋಲು ಮಾಡಿ ಅಗ್ಗದ ಕಾರ್ಯಕ್ರಮಗಳನ್ನು ರೂಪಿಸಿ, ಜನಪ್ರಿಯತೆ ಪಡೆಯುವುದಕ್ಕಿಂತ ಶಾಶ್ವತವಾದ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪೂರ್ಣಗೊಳಿಸಿದರೆ ಅದರಿಂದ ರಾಜ್ಯದ ಜನರ ಬದುಕಿಗೆ ಅನುಕೂಲವಾಗುತ್ತದೆ ಎಂಬುದು ನಿಜಲಿಂಗಪ್ಪನವರಿಂದ ಕಲಿಯಬೇಕಾದ ಮತ್ತೊಂದು ಪಾಠ.
1956ರಲ್ಲಿ ಕರ್ನಾಟಕ ಏಕೀಕರಣವಾದಾಗ ಸ್ಪಷ್ಟವಾದ ಯೋಜನೆಗಳನ್ನು ರೂಪಿಸಲು ಚಿಂತಿಸಲಿಲ್ಲ. 1972ರಲ್ಲಿ ಕರ್ನಾಟಕವೆಂದು ನಾಮಕರಣವಾದಾಗ ಸಂಭ್ರಮಿಸಿದ್ದು ಬಿಟ್ಟರೆ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳು ನಡೆಯಲಿಲ್ಲ. ಈಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಾದರೂ ಆಡಳಿತದಲ್ಲಿ, ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಕನ್ನಡವನ್ನು ಜಾರಿಗೊಳಿಸಬೇಕಾಗಿದೆ. ಅಲ್ಪಕಾಲಿಕ ಮತ್ತು ದೀರ್ಘ ಕಾಲದ ಪರಿಹಾರೋಪಾಯದ ಯೋಜನೆಗಳನ್ನು ರೂಪಿಸಿ, ಸಮಗ್ರ ಕನ್ನಡ ಅನುಷ್ಠಾನದ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯತ್ನಗಳು ನಡೆದಾಗ ಏಕೀಕರಣವಾದದ್ದು, ಕರ್ನಾಟಕವೆಂದು ನಾಮಕರಣವಾದದ್ದು, ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ಸಂಭ್ರಮಿಸಬಹುದಾದ ಸುಂದರ ಕ್ಷಣಗಳಾಗಿ ಮಾರ್ಪಾಟಾಗುತ್ತದೆ. ಇದು ಹೀಗೇ ಮುಂದುವರಿದರೆ ಕೇವಲ ಸಂಭ್ರಮಗಳು ಉಳಿದುಕೊಂಡು ಸಮಸ್ಯೆಗಳು ನಿಂತಲ್ಲಿಯೇ ನಿಂತು ಮತ್ತಷ್ಟು ಜಟಿಲಗೊಳ್ಳುತ್ತಾ ಹೋಗುತ್ತವೆ.

share
ಕೆ.ಎಸ್. ನಾಗರಾಜ್
ಕೆ.ಎಸ್. ನಾಗರಾಜ್
Next Story
X