‘‘ಹಿಂದುತ್ವಕ್ಕೆ ತೀರಾ ವಿರುದ್ಧವಾದ ಒಂದು ಹಿಂದೂ ಧರ್ಮ’’
‘ರಾಮ್ ಕೆ ನಾಮ್’ ಸಿನೆಮಾ ನಿರ್ಮಾಣದ ಕುರಿತು ಆನಂದ್ ಪಟವರ್ಧನ್
ಭಾಗ-1
16ನೇ ಶತಮಾನದ ಅಯೋಧ್ಯೆಯಲ್ಲಿ ಮೊಗಲ್ ಚಕ್ರವರ್ತಿ ಬಾಬರ್ ನಿರ್ಮಿಸಿದ್ದ ಮಸೀದಿಯೊಂದನ್ನು ಧ್ವಂಸಗೊಳಿಸಲು ಸ್ವಯಂ ಸೇವಕರನ್ನು ಅಥವಾ ‘ಕರ ಸೇವಕರನ್ನು’ ಒಟ್ಟು ಸೇರಿಸುವುದೇ ಆ ರಥಯಾತ್ರೆಯ ಉದ್ದೇಶವಾಗಿತ್ತು. ಭಾರತದ ಹಿಂದೂಗಳ ಮೇಲೆ ಮುಸ್ಲಿಂ ದಾಳಿಕೋರರು ಹಾಗೂ ದೊರೆಗಳು ನಡೆಸಿದ್ದ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಮಸೀದಿ ಕೆಡವಿ ಮಂದಿರ ನಿರ್ಮಿಸುವುದು ಒಂದು ಐತಿಹಾಸಿಕ ಪರಿಹಾರವೆಂದು ಇದನ್ನು ಸಮರ್ಥಿಸಿದ್ದಾಯಿತು. ಈ ವಿಷಯ, ಕಥಾನಕ ಪ್ರಜ್ವಲಿಸುವ ಒಂದು ಕೊಳ್ಳಿಯಂತೆ ಎಲ್ಲ ಹಿಂದುತ್ವ ವಿಚಾರಧಾರೆಯಲ್ಲಿ ಇಂದಿಗೂ ಮುಂದುವರಿದಿದೆ.
1984ರಲ್ಲಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರು ಹತ್ಯೆಗೈದ ಬಳಿಕ, ನಡೆದ ಪ್ರತೀಕಾರದ ನರಮೇಧ ದಿಲ್ಲಿಯ ಬೀದಿಗಳಲ್ಲಿ 3,000ಕ್ಕೂ ಹೆಚ್ಚು ಸಿಖ್ಖರ ಪ್ರಾಣಗಳನ್ನು ಬಲಿಪಡೆಯಿತು. ಹತ್ಯೆ ನಡೆಸಿದ ಹಲವು ಗುಂಪುಗಳ ನೇತೃತ್ವವನ್ನು ಕಾಂಗ್ರೆಸ್ ಪಕ್ಷದ ಸದಸ್ಯರು ವಹಿಸಿದ್ದರು. ಆದರೆ ಹತ್ಯೆ ನಡೆಸಿದ ಕೆಲವು ಗುಂಪುಗಳ ನೇತೃತ್ವವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ಕೂಡ ವಹಿಸಿತ್ತು. ಇದು ಇತಿಹಾಸ ಮರೆತಿರುವ, ಆದರೆ ಅಂದಿನ ವರ್ತಮಾನ ಪತ್ರಿಕೆಗಳ ಮುಖಪುಟ ಸುದ್ದಿಗಳಲ್ಲಿ ದಾಖಲಾಗಿರುವ ಸತ್ಯ ಸಂಗತಿ. ನಾನು ಕ್ಯಾಮರಾ ಹಿಡಿದುಕೊಂಡು ಕೋಮುವಾದದ ವಿರುದ್ಧ ಬೀದಿಗಿಳಿದು ನಿಜ ಘಟನೆಗಳನ್ನು ದಾಖಲಿಸುವಂತೆ ಮಾಡಿದ್ದು ಈ ನರಮೇಧ. ಮುಂದಿನ ಹತ್ತು ವರ್ಷಗಳ ಕಾಲ ಧಾರ್ಮಿಕ ಬಲಪಂಥ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ ಹಲವು ಉದಾಹರಣೆಗಳನ್ನು ನಾನು ದಾಖಲಿಸಿದೆ. ಪಂಜಾಬಿನಲ್ಲಿ ಖಲಿಸ್ತಾನ್ ತೀವ್ರವಾದದಿಂದ ಹಿಡಿದು ರಾಜಸ್ಥಾನದಲ್ಲಿ ಸತಿಸಹಗಮನ ಪದ್ಧತಿಯ ವೈಭವೀಕರಣ ಮತ್ತು ಅಯೋಧ್ಯೆಯ ಬಾಬರಿ ಮಸೀದಿಯ ಜಾಗದಲ್ಲಿ ರಾಮದೇವಾಲಯ ನಿರ್ಮಿಸುವ ಚಳವಳಿಯವರೆಗೆ-ಎಲ್ಲವನ್ನೂ ನಾನು ದಾಖಲಿಸಿಕೊಂಡೆ. 1984 ಮತ್ತು 1994ರ ನಡುವೆ ನಾನು ಚಿತ್ರೀಕರಿಸಿದ ದಾಖಲೆಗಳಿಂದ ಅಂತಿಮವಾಗಿ ಮೂರು ಸಿನೆಮಾಗಳು ಮೂಡಿಬಂದವು. ಈ ಮೂರು ಕೂಡ ದೇಶದಲ್ಲಿ ಧಾರ್ಮಿಕ ಮೂಲಭೂತವಾದ ತೀವ್ರಗೊಂಡದ್ದನ್ನು ಹಾಗೂ ಜಾತ್ಯತೀತ ಶಕ್ತಿಗಳು ಒಡ್ಡಿದ ಪ್ರತಿರೋಧವನ್ನು ಅಭಿವ್ಯಕ್ತಗೊಳಿಸುವ ಸಿನೆಮಾಗಳು.
ಮೊದಲು ಪೂರ್ಣಗೊಂಡ ಸಿನೆಮಾ ‘ಉನಾ ಮಿತ್ರನ್ ದಿ ಯಾದ್ ಪ್ಯಾರಿ’ (ಗೆಳೆಯರ ಸ್ಮರಣಾರ್ಥವಾಗಿ) 1980ರ ದಶಕದಲ್ಲಿ ಪಂಜಾಬ್‌ನಲ್ಲಿದ್ದ ಸ್ಥಿತಿಯನ್ನು ಚಿತ್ರಿಸುತ್ತದೆ. ಆಗ ಅಲ್ಲಿ ಖಲಿಸ್ತಾನಿಗಳು ಮತ್ತು ಭಾರತ ಸರಕಾರ- ಇಬ್ಬರೂ ಕೂಡ ಭಗತ್ ಸಿಂಗ್‌ನೇ ತಮ್ಮ ಹೀರೋ ಎಂದು ವಾದಿಸುತ್ತಿದ್ದರು. ಆದರೆ ತನ್ನ ಮರಣದ ಸೆರೆಮನೆಯಿಂದ ‘‘ವೈ ಐ ಆ್ಯಮ್ ಆ್ಯನ್ ಆರ್ಥಿಸ್ಟ್’ (ನಾನೇಕೆ ನಾಸ್ತಿಕನಾಗಿದ್ದೇನೆ.) ಎಂಬ ಪುಸ್ತಕಯನ್ನು ಬರೆದಿದ್ದ ಭಗತ್ ಸಿಂಗ್‌ನನ್ನು ಎಡಪಂಥೀಯರು ಮಾತ್ರ ನೆನಪಿನಲ್ಲಿಟ್ಟುಕೊಂಡಿದ್ದರು.
ಎರಡನೇ ಸಿನೆಮಾ ‘ರಾಮ್ ಕೆ ನಾಮ್’ (ರಾಮನ ಹೆಸರಿನಲ್ಲಿ). ಅದು ಅಯೋಧ್ಯೆಯಲ್ಲಿ ಮಂದಿರ ಮಸೀದಿ ವಿವಾದದ ಮೂಲಕ ಉದ್ಭವಿಸಿ ತೀವ್ರಗೊಂಡ ಹಿಂದೂ ಮೂಲಭೂತವಾದದ ಕುರಿತಾದ ಸಿನೆಮಾ. ಮೂರನೆಯ ಸಿನೆಮಾ, ‘ಪಿತೃ, ಪುತ್ರ ಔರ್ ಧರ್ಮಯುದ್ಧ.’ ಧಾರ್ಮಿಕ ಹಿಂಸೆ ಮತ್ತು ಗಂಡಸರ ಮನಸ್ಥಿತಿ ಇದರ ಕಥಾವಸ್ತು. ಎಲ್ಲ ಮೂರು ಸಿನೆಮಾಗಳು ಕೂಡ ಕೋಮುವಾದವನ್ನು ಎದುರಿಸುವ ಪ್ರಯತ್ನಗಳಾಗಿದ್ದವು.
ದೀರ್ಘವಾದ ಯಾತ್ರೆ ಈ ಲೇಖನದಲ್ಲಿ ನಾನು ನನ್ನ ಬರವಣಿಗೆಯನ್ನು ರಾಮ್ ಕೆ ನಾಮ್’ ಮೇಲೆ ಕೇಂದ್ರೀಕರಿಸುತ್ತೇನೆ. ಸಿನೆಮಾ 1990ರಿಂದ ಆರಂಭಿಸಿ ಎರಡು ವರ್ಷಗಳ ಅವಧಿಯ ಘಟನೆಗಳನ್ನು ವಿವರಿಸುತ್ತದಾದರೂ ಕತೆಯ ಹಿಂದಿನ ವಿವರಗಳು 1980ರ ದಶಕದ ಮಧ್ಯಭಾಗದಿಂದ ಆರಂಭವಾಗುತ್ತದೆ. ಆಗ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದುತ್ವ ಪರಿವಾರದ ಸಹೋದರ ಸಂಘಟನೆಗಳು ಈ ದೇಶದ ವೋಟ್ ಬ್ಯಾಂಕ್‌ನ ಶೇ. 83ರಷ್ಟು ಇರುವ ಮತ್ತು ಹೀಗಾಗಿ ದೇಶದ ವೋಟ್ ಬ್ಯಾಂಕ್ ಆಗಿರುವ ಹಿಂದೂಗಳ ಕಲ್ಪನೆಯನ್ನು ವಶಪಡಿಸಿಕೊಳ್ಳುವ ಒಂದು ದಾರಿಗಾಗಿ ಹುಡುಕಾಟ ನಡೆಸುತ್ತಿದ್ದವು. ಇಂದಿರಾ ಗಾಂಧಿಯವರ ಹತ್ಯೆ ನಡೆದ ಮತ್ತು ಅನುಕಂಪದ ಅಲೆಯ ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವರ್ಷವಾದ 1984ರಲ್ಲಿ ನಡೆದ ಒಂದು ಧರ್ಮ ಸಂಸತ್ (ಧಾರ್ಮಿಕ ನೇತಾರರ ಒಂದು ಸಂಸತ್) ಹಿಂದೂಗಳ ಭಾವನೆಯನ್ನು ಕೆರಳಿಸಿ ಅವರನ್ನು ಒಗ್ಗೂಡಿಸಿತು. ರಾಷ್ಟ್ರವನ್ನು(ಹಿಂದೂ -ಮುಸ್ಲಿಂ ಎಂಬ) ಇಬ್ಬಣಗಳಾಗಿ ಧ್ರುವೀಕರಿಸ ಬಲ್ಲ, ಹಿಂದೂಗಳು ಮತ್ತು ಮುಸ್ಲಿಮರ ಸಂಘರ್ಷಕ್ಕೆ ಕಾರಣವಾಗಬಹುದಾದ 3,000 ಧಾರ್ಮಿಕ ನಿವೇಶನಗಳನ್ನು ಗುರುತಿಸಿತು. ಅವುಗಳಲ್ಲಿ ಆಯ್ಕೆ ಮಾಡಲಾದ ‘ಟಾಪ್ ತ್ರೀ’ ನಿವೇಶನಗಳೆಂದರೆ ಅಯೋಧ್ಯಾ, ಕಾಶಿ ಮತ್ತು ಮಥುರಾ. ಧರ್ಮ ಸಂಸತ್ ಅಯೋಧ್ಯೆಯ ರಾಮ ಮಂದಿರ/ಬಾಬರಿ ಮಸೀದಿಯನ್ನು ಮೊದಲು ಕೈಗೆತ್ತಿಕೊಳ್ಳಲು ನಿರ್ಧರಿಸಿತು.
ಸ್ವಲ್ಪವೇ ಸಮಯದಲ್ಲಿ ಬಾಬರಿ ಮಸೀದಿಯ ಜಾಗದಲ್ಲಿ ರಾಮ ಮಂದಿರ ನಿರ್ಮಿಸಲು ಹಳ್ಳಿ-ಹಳ್ಳಿಗಳಿಂದ ಇಟ್ಟಿಗೆ ಗಳನ್ನು ಹಾಗೂ ಹಣವನ್ನು ಸಂಗ್ರಹಿಸುವ ಒಂದು ರಾಷ್ಟ್ರವ್ಯಾಪಿ ಅಭಿಯಾನ ಆರಂಭಗೊಂಡಿತು. ದೂರದ ದೇಶಗಳಿಂದ ಅನಿವಾಸಿ ಭಾರತೀಯರು ಸೇರಿಕೊಂಡದ್ದರಿಂದ ಅಭಿಯಾನ ಅಂತರ್ ರಾಷ್ಟ್ರೀಯ ಆಯಾಮ ಪಡೆದುಕೊಂಡಿತು. ಉದ್ದೇಶಪೂರ್ವಕವಾಗಿಯೋ ಅಥವಾ ಭಾರೀ ಆಕಸ್ಮಿಕವಾಗಿಯೋ, ದೂರದರ್ಶನ ಟಿವಿಯಲ್ಲಿ ಅಂತ್ಯವೇ ಇಲ್ಲದಂತಿದ್ದ ರಾಮಾಯಣ ಧಾರಾವಾಹಿಯನ್ನಾರಂಭಿಸಿತು. ಆ ದಿನಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಟಿವಿ ಚಾನೆಲ್‌ಗಳಿದ್ದವು. ಹಾಗಾಗಿ ಇಡೀ ರಾಷ್ಟ್ರವೇ ರಾಮಾಯಣ ಧಾರವಾಹಿಗೆ ಪ್ರೇಕ್ಷಕನಾಯಿತು. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ತನ್ನ ಅಗ್ನಿ ರಥಯಾತ್ರೆಯನ್ನು ಆರಂಭಿಸಿದಾಗ ದೇಶದಲ್ಲಿ ಇದ್ದ ಪರಿಸ್ಥಿತಿ ಇದು. ‘ರಾಮ್ ಕೆ ನಾಮ್’ ಅಡ್ವಾಣಿಯವರ ರಥಯಾತ್ರೆಯ ಹಿಂದೆ ಸಾಗುತ್ತದೆ. ಅವರು 1990ರಲ್ಲಿ, ಬಾಲಿವುಡ್‌ನ ಸೆಟ್ ವಿನ್ಯಾಸಕಾರನೊಬ್ಬ ಪುರಾಣ ಕಾಲದ ಸಮರ ರಥದಂತೆ ಕಾಣುವಂತೆ ವಿನ್ಯಾಸಗೊಳಿಸಿದ ಹವಾನಿಯಂತ್ರಿತ ‘ಟೊಯೊಟೊ’ ವಾಹನವೊಂದರಲ್ಲಿ ದೇಶದ ಉದ್ದಗಲಕ್ಕೂ ಪ್ರಯಾಣ ಕೈಗೊಂಡರು. 16 ನೇ ಶತಮಾನದ ಅಯೋಧ್ಯೆಯಲ್ಲಿ ಮೊಗಲ್ ಚಕ್ರವರ್ತಿ ಬಾಬರ್ ನಿರ್ಮಿಸಿದ್ದ ಮಸೀದಿಯೊಂದನ್ನು ಧ್ವಂಸಗೊಳಿಸಲು ಸ್ವಯಂ ಸೇವಕರನ್ನು ಅಥವಾ ‘ಕರ ಸೇವಕರನ್ನು’ ಒಟ್ಟು ಸೇರಿಸುವುದೇ ಆ ರಥಯಾತ್ರೆಯ ಉದ್ದೇಶವಾಗಿತ್ತು. ಭಾರತದ ಹಿಂದೂಗಳ ಮೇಲೆ ಮುಸ್ಲಿಂ ದಾಳಿಕೋರರು ಹಾಗೂ ದೊರೆಗಳು ನಡೆಸಿದ್ದ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಮಸೀದಿ ಕೆಡವಿ ಮಂದಿರ ನಿರ್ಮಿಸುವುದು ಒಂದು ಐತಿಹಾಸಿಕ ಪರಿಹಾರವೆಂದು ಇದನ್ನು ಸಮರ್ಥಿಸಿದ್ದಾಯಿತು. ಈ ವಿಷಯ, ಕಥಾನಕ ಪ್ರಜ್ವಲಿಸುವ ಒಂದು ಕೊಳ್ಳಿಯಂತೆ ಎಲ್ಲ ಹಿಂದುತ್ವ ವಿಚಾರಧಾರೆಯಲ್ಲಿ ಇಂದಿಗೂ ಮುಂದುವರಿದಿದೆ.
1990ರಲ್ಲಿ ರಥಯಾತ್ರೆ ಮುಂಬೈ ತಲುಪಿದಾಗ, ನಾನು ಸಹಜವಾಗಿಯೇ, ‘ರಾಮ್ ಕೆ ನಾಮ್’ ಸಿನೆಮಾ ಮಾಡಲು ಆರಂಭಿಸಿದೆ. ರಥಯಾತ್ರೆಯ ಹಲವು ಮುಖಗಳನ್ನು, ಅಂಶಗಳನ್ನು ದಾಖಲಿಸಿಕೊಳ್ಳುತ್ತಾ ಹೋದೆ. ರಥಯಾತ್ರೆ ಸಾಗಿದ ಹಲವು ಸ್ಥಳಗಳಲ್ಲಿ ಅದು ರಕ್ತ ಹರಿಸಿತ್ತು. ಸರಿಯಾದ ಗೌರವ ತೋರಿಸಲಿಲ್ಲವೆಂಬ ಕಾರಣಕ್ಕಾಗಿ ಅಥವಾ ಕೇವಲ ತಮ್ಮ ಬಲಪ್ರದರ್ಶನಕ್ಕಾಗಿ ನಡೆಸಿದ್ದರಿಂದ ಈ ರಕ್ತ ಹರಿಯಿತು, ಹಿಂಸೆ ಸ್ಫೋಟಿಸಿತು. ರಥಯಾತ್ರೆ ಕೊನೆಗೊಳ್ಳುವಷ್ಟರಲ್ಲಿ 60ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟದ್ದರು ಮತ್ತು ರಥಯಾತ್ರೆ ಸಾಗಿದ ಹಾದಿಯ ಉದ್ದಗಲಕ್ಕೂ ಹಲವಾರು ಮಂದಿ ಗಾಯಗೊಂಡಿದ್ದರು. ನಮ್ಮ ತಂಡದಲ್ಲಿದ್ದ ಫರ್ವೇಝ್ ಮೆರ್ವಾಂಜಿ ತಯಾರಿಸಿದ್ದ ಪ್ರಥಮ ಫೀಚರ್ ಚಿತ್ರ ‘ಪರ್ಸಿ’ಗೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ ದೊರಕಿತು. ಅದೇ ಅವರು ತಯಾರಿಸಿದ ಕೊನೆಯ ಚಿತ್ರವಾಯಿತು. ಪ್ರಾಯಶಃ ನಮ್ಮ ಚಿತ್ರೀಕರಣದ ವೇಳೆ ಫರ್ವೇಝ್‌ಗೆ ಕಾಮಾಲೆ ಕಾಯಿಲೆ ತಗಲಿ, ನಮ್ಮ ಚಿತ್ರದ ಅಂತಿಮ ಭಾಗ ನೋಡುವ ಮೊದಲೇ ಅವರು ತೀರಿಕೊಂಡರು.
ಒಂದೂವರೆ ವರ್ಷಕಾಲ ನಮ್ಮ ಸಿನೆಮಾ ತಯಾರಿಕೆ ಕುಂಟುತ್ತ ನಡೆಯುತ್ತ ಸಾಗಿತು. ಈ ಅವಧಿಯಲ್ಲಿ ನಾವು ಸಿನೆಮಾ ಶೂಟಿಂಗ್ ಜೊತೆಗೆ ಸಂಶೋಧನೆ ನಡೆಸಲೂ ಸಮರ್ಥರಾದೆವು. ಹಿಂದುತ್ವದ ಅನುಯಾಯಿಗಳು ವಾದಿಸುತ್ತಿದ್ದಂತೆ ಮಸೀದಿಯ ಅಡಿಯಲ್ಲಿ ಒಂದು ದೇವಾಲಯ ಇತ್ತು ಎನ್ನುವ ವಾದಕ್ಕೆ ವಿರುದ್ಧವಾಗಿ, ವ್ಯತಿರಿಕ್ತವಾಗಿ, ಅಲ್ಲಿ ಸುತ್ತಮುತ್ತ ಪ್ರಾಕ್ತನಶಾಸ್ತ್ರಜ್ಞರು ನಡೆಸಿದ ಉತ್ಖನನಗಳಲ್ಲಿ ದೊರಕಿದ ವಸ್ತುಗಳಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂದು ನಮಗೆ ಗೊತ್ತಾಯಿತು. ಇತಿಹಾಸಕಾರರ ಪ್ರಕಾರ, ಈಗ ಅಯೋಧ್ಯೆ ಇರುವ ಜಾಗದಲ್ಲಿ 7ನೇ ಶತಮಾನದಲ್ಲಿ ಪ್ರಾಯಶಃ ಬೌದ್ಧರ ನಗರವಾದ ಸಾಕೇತ ಇತ್ತು. ಅಯೋಧ್ಯೆಯಲ್ಲಿ ಹರಡಿಕೊಂಡಿರುವ ಅಖಾಡಾ(ದೇವಾಲಯಗಳಿಗೆ ಸೇರಿದ ಮಿಲಿಟರಿ ವಿಂಗ್‌ಗಳು) ಗಳಿಗೂ ರಾಮಜನ್ಮಭೂಮಿ ವಿಮೋಚನೆಗೂ ಯಾವುದೇ ಸಂಬಂಧವಿಲ್ಲವೆಂದೂ ನಮಗೆ ತಿಳಿಯಿತು. ಹಿಂದುತ್ವ ಸಿದ್ಧಾಂತಿಗಳು ಸಂಬಂಧಿಸಿದೆ ಎಂದು ವಾದಿಸುತ್ತಾರೆ. ಮಧ್ಯಯುಗದಲ್ಲಿ ಶೈವರ ಮತ್ತು ವೈಷ್ಣವರ ನಡುವೆ ಇದ್ದ, ಈಗಲೂ ಇರುವ ಪೈಪೋಟಿಯೇ, ಆ ಅಖಾಡಾಗಳ ಮೂಲ ಎಂದು ನಮಗೆ ತಿಳಿದು ಬಂತು.
ಎಲ್ಲಕ್ಕಿಂತ ಮುಖ್ಯವಾಗಿ, 16ನೇ ಶತಮಾನದಲ್ಲಿ ಕವಿ ತುಳಿಸೀದಾಸ ತನ್ನ ಪ್ರಸಿದ್ಧ ಕೃತಿ ರಾಮಚರಿತ ಮಾನಸವನ್ನು ಬರೆಯುವ ಸಮಯದಲ್ಲಿ ಹಲವು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಎಂದು ನಮಗೆ ಗೊತ್ತಾಯಿತು. ರಾಮಜನ್ಮಭೂಮಿಯಲ್ಲಿ ಆಗಷ್ಟೇ ಬಾಬರ್‌ನಿಂದ ಒಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತೆಂದು ತುಳಿಸೀದಾಸರು ಎಂದೂ, ಎಲ್ಲಿಯೂ ಉಲ್ಲೇಖಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ ಇನ್ನೂ ಒಂದು ಮುಖ್ಯವಾದ ವಿಷಯವಿದೆ. ಏನೆಂದರೆ, 16ನೇ ಶತಮಾನದ ವರೆಗೆ ರಾಮನ ದಂತಕಥೆ ಸಂಸ್ಕೃತ ತಿಳಿದಿದ್ದ ಕೆಲವೇ ಮಂದಿ ಬ್ರಾಹ್ಮಣರಿಗಷ್ಟೇ ಸೀಮಿತವಾಗಿ ತಿಳಿದಿತ್ತು. ಹಿಂದಿಯ ಒಂದು ರೂಪವಾದ ಖಡಿ ಬೋಲಿಯಲ್ಲಿ ತುಳಸೀದಾಸರು ರಾಮಚರಿತಮಾನಸವನ್ನು ಬರೆದ ಬಳಿಕವಷ್ಟೇ, ಅದರ ಹಿಂದಿ ರೂಪಾಂತರ ಹರಡಿದ ನಂತರವಷ್ಟೇ ಜನಸಮೂಹಗಳಿಗೆ ರಾಮ ಓರ್ವ ಜನಪ್ರಿಯ ದೇವರಾದ ಮತ್ತು ದೇಶದ ನಾನಾ ಭಾಗಗಳಲ್ಲಿ ರಾಮ ದೇವಾಲಯಗಳು ಹುಟ್ಟಿಕೊಂಡವು. ಬೇರೆ ಮಾತುಗಳಲ್ಲಿ ಹೇಳುವುದಾದರೆ, 16ನೇ ಶತಮಾನದ ಮಧ್ಯಭಾಗದಲ್ಲಿ ಬಾಬರಿ ಮಸೀದಿ ನಿರ್ಮಾಣಗೊಂಡಾಗ, ಅಲ್ಲಿ ಯಾವುದೇ ರಾಮದೇವಾಲಯಗಳಿದ್ದವೆಂಬುದು ತೀರಾ ಅಸಂಭವನೀಯ, ತೀರಾ ಅಸಾಧ್ಯ. ಇಂದು ಅಯೋಧ್ಯೆಯ ತುಂಬ ರಾಮದೇವಾಲಯಗಳಿವೆ ಮತ್ತು ಅವುಗಳಲ್ಲಿ ಕನಿಷ್ಠ ಇಪ್ಪತ್ತು ದೇವಾಲಯಗಳು ರಾಮನ ಜನ್ಮಸ್ಥಳದಲ್ಲಿ ನಿರ್ಮಿಸಲ್ಪಟ್ಟವುಗಳೆಂದು ಆ ದೇವಾಲಯಗಳ ಅರ್ಚಕರು, ಆಡಳಿತನಡೆಸುವವರು ವಾದಿಸುತ್ತಾರೆ. ಇದಕ್ಕೆ ಕಾರಣ ಸ್ಪಷ್ಟವಿದೆ: ರಾಮನ ಜನ್ಮಭೂಮಿ ಇದೆ ಎಂದು ಹೇಳುವ, ಭಕ್ತರನ್ನು ನಂಬಿಸಬಲ್ಲ ಯಾವುದೇ ದೇವಾಲಯಕ್ಕೆ ಅದರ ಭಕ್ತರಿಂದ ದೊಡ್ಡ ಮೊತ್ತದ ದೇಣಿಗೆ ಹರಿದುಬರುತ್ತದೆ.
ಈ ಸಂಶೋಧನೆಯ ಕೆಲವು ಭಾಗಗಳು ‘ರಾಮ್ ಕೆ ನಾಮ್’ ಸಿನೆಮಾದಲ್ಲಿ ಪರೋಕ್ಷವಾಗಿ ಸೂಚಿಸಲ್ಪಟ್ಟಿವೆ.
ವಿವಾದಿತ ರಾಮಜನ್ಮಭೂಮಿ/ ಬಾಬರಿ ಮಸೀದಿ ನಿವೇಶನದಲ್ಲಿ ಬಂದು ನೆರೆಯಲು ಕರಸೇವಕರಿಗೆ 1990ರ ಅಕ್ಟೋಬರ್ 30ನೇ ದಿನಾಂಕವನ್ನು ‘ಟಾರ್ಗೆಟ್ ಡೇಟ್’ ಎಂದು ಅಡ್ವಾಣಿಯವರು ಅದಾಗಲೇ ಘೋಷಿಸಿದ್ದರು. ನಾನು ಮತ್ತು ಫರ್ವೇಝ್ ಉತ್ತರ ಪ್ರದೇಶಕ್ಕೆ ಹೊರಟೆವು. ರಥಯಾತ್ರೆಯ ನಿಗದಿತ ಸ್ಟಾಪ್‌ಗಳಲ್ಲಿ ಕೆಲವನ್ನು ದಾಖಲಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೆವು. ಟ್ರೈನ್‌ಗಳು ಅದಾಗಲೇ ಕರಸೇವಕರಿಂದ ಕಿಕ್ಕಿರಿದು ತುಂಬಿದ್ದವು. ನಾವು ತೃತೀಯ ದರ್ಜೆಯ ಬೋಗಿಯೊಂದರೊಳಗೆ ನುಗ್ಗಿ ನಮ್ಮ ಲಗೇಜ್‌ನ ಮೇಲೆ ಅದು ಹೇಗೋ ಕಷ್ಟಪಟ್ಟು ಕುಳಿತೆವು.
ಕೃಪೆ: sabrangindia.in