Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾರತದಲ್ಲಿ ಪವಿತ್ರ ಹಸುಗಳು ಮತ್ತು...

ಭಾರತದಲ್ಲಿ ಪವಿತ್ರ ಹಸುಗಳು ಮತ್ತು ಎಸೆಯಬಹುದಾದ ಮನುಷ್ಯರು

ಸುಭಾಷ್ ಗಟಡೆಸುಭಾಷ್ ಗಟಡೆ18 Dec 2018 3:41 PM IST
share
ಭಾರತದಲ್ಲಿ ಪವಿತ್ರ ಹಸುಗಳು ಮತ್ತು ಎಸೆಯಬಹುದಾದ ಮನುಷ್ಯರು

ಓರ್ವ ಸನ್ಯಾಸಿಯಾಗಿ ಒಬ್ಬ ಮನುಷ್ಯನ ಜೀವ ಮತ್ತು ಒಂದು ಹಸುವಿನ ಜೀವದ ನಡುವೆ ಯಾವುದಕ್ಕೇ ಆದರೂ ಆದ್ಯತೆ ನೀಡಲು ಅಥವಾ ತನ್ನ ಧರ್ಮ ಹೇಳಿದ್ದನ್ನು ಆಚರಿಸಲು ಆದಿತ್ಯನಾಥ್ ಸ್ವತಂತ್ರರು. ಆದರೆ ಓರ್ವ ಮುಖ್ಯಮಂತ್ರಿಯಾಗಿ ಅವರು ಸಾಂವಿಧಾನಿಕ ವಿಧಿ ವಿಧಾನವನ್ನು ಅನುಸರಿಸಬೇಕು. ಅವರು ತನ್ನ ಮೂಲ ಸಾಂವಿಧಾನಿಕ ತತ್ವವನ್ನು ಮರೆತರೇ? ಅಥವಾ ಅದು ಬೇಕೆಂದೇ ಮರೆತ ಒಂದು ಪ್ರಕರಣವೇ?

ಅವರು ವಿಚಿತ್ರವಾದ ಒಂದು ಜನಸಮುದಾಯ. ಅವರಿಗೆ ಮನುಷ್ಯನ ಜೀವ ಹೊರತುಪಡಿಸಿ ಎಲ್ಲ ಜೀವಗಳು ಪವಿತ್ರ ಅನ್ನಿಸುತ್ತದೆ.
ಭಾರತೀಯರ ಕುರಿತು ಮಾರ್ಕ್ ಟ್ವೈನ್

ಕೇವಲ ಒಂದು ಮಾತು ಒಮ್ಮಮ್ಮೆ ಓರ್ವ ನಾಯಕನ ಏಕೈಕ ನೆನಪಾಗಿ ಉಳಿಯುತ್ತದೆ. ಈ ಮಾತಿಗೆ ವಿಎಚ್‌ಪಿ ನಾಯಕ ಗಿರಿರಾಜ್ ಸಿಂಗ್ ಕಿಶೋರ್ ಅವರು ಒಂದು ಕ್ಲಾಸಿಕ್ ಉದಾಹರಣೆ ಎನ್ನಬಹುದು. ಅವರು ಒಮ್ಮೆ ಹೇಳಿದ್ದ (ಕು)ಪ್ರಸಿದ್ಧ ಮಾತು: ‘‘ಪುರಾಣಗಳಲ್ಲಿ ಮನುಷ್ಯರಿಗಿಂತ ಹಸುವನ್ನು ಹೆಚ್ಚು ಪವಿತ್ರ ಎಂದು ಪರಿಗಣಿಸಲಾಗಿದೆ.’’ ಅವರು ಈ ಮಾತನ್ನು ಹೇಳಿದ್ದು ಸತ್ತ ಹಸುಗಳನ್ನು ಒಯ್ಯುತ್ತಿದ್ದ ಐವರು ದಲಿತರು ಪೊಲೀಸ್ ಠಾಣೆಯೊಂದರ ಮುಂದೆ ಸ್ವಘೋಷಿತ ಗೋರಕ್ಷಕ ಗುಂಪೊಂದರಿಂದ ಥಳಿಸಿ ಕೊಲ್ಲಲ್ಪಟ್ಟಾಗ. (ಧುರೀನಾ, ಜಜರ್ ಅಕ್ಟೋಬರ್ 2002)
ದಲಿತರ ಆ ಹತ್ಯೆಗೆ ಹಲವು ಹಿರಿಯ ಸರಕಾರಿ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು. ಆ ಹತ್ಯೆಯ ಬಳಿಕ ಇನ್ನೊಂದು ಅಪಾಯಕಾರಿಯಾದ ನಾಟಕ ನಡೆಯಿತು: ನಿಷ್ಕ್ರಿಯರಾಗಿ ನಿಂತು ಆ ಅಪರಾಧದಲ್ಲಿ ಭಾಗಿಯಾದ ಪೊಲೀಸರು ಸತ್ತ ಹಸುಗಳನ್ನು ಶವ ಪರೀಕ್ಷೆಗೆ ಕಳಿಸಿ ಮೃತ ದಲಿತರ ವಿರುದ್ಧವೇ ಗೋಹತ್ಯೆಯ ಮೊಕದ್ದಮೆ ಹೂಡಿದರು.
ಗಿರಿರಾಜ್ ಕಿಶೋರ್ ಕೆಲ ವರ್ಷಗಳ ಹಿಂದೆ ತೀರಿಕೊಂಡರು. ಆದರೆ ಮನುಷ್ಯ ಜೀವದ ಬಗ್ಗೆ ಸಂಪೂರ್ಣ ಅಸಡ್ಡೆ ಮತ್ತು ನಿರಾಸಕ್ತಿ ತೋರುವ ಮತ್ತು ನಾಲ್ಕು ಕಾಲಿನ ಪ್ರಾಣಿಯೊಂದನ್ನು ಮಾನವ ಜೀವಕ್ಕಿಂತ ಮೇಲೆಂದು ಪರಿಗಣಿಸಿ ಪೀಠದ ಮೇಲೆ ಕುಳ್ಳಿರಿಸುವ ಅವರ ಆಕ್ಷೇಪಾರ್ಹ ಮನೋಧರ್ಮ ಹೆಚ್ಚು ಹೆಚ್ಚು ವ್ಯಾಪಕವಾಗುತ್ತಲೇ ಇದೆ.
ಉದ್ದೇಶ ಪೂರ್ವಕವಾಗಿಯೋ ಅಥವಾ ಅಲ್ಲವೋ ಯುಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾನು ಈ ಮನೋಧರ್ಮದ ಸಾಕಾರ ಮೂರ್ತಿ ಎಂದು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ನೀಡಿದ ಎರಡು ಹೇಳಿಕೆಗಳು ಗಮನಾರ್ಹ. ಬುಲಂದ್‌ಶಹರ್‌ನಲ್ಲಿ ಧೈರ್ಯಶಾಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಕೇಸರಿ ಮತಾಂಧರು, ಪ್ರಚೋದಿತ ಎನ್ನಲಾದ ಹಿಂಸೆಯಲ್ಲಿ ಗುಂಪು ಥಳಿತದಿಂದ ಹತ್ಯೆಗೈದಾಗ, ಅಲ್ಲಿ ಗದ್ದೆಯಲ್ಲಿ ಬಿದ್ದಿದ್ದ ಹಸುಗಳ ಶವದ ಬಗ್ಗೆ ಅವರು ತೋರಿದ ಅಪಾರ ಕಾಳಜಿ ಇದನ್ನು ಸ್ಪಷ್ಟಪಡಿಸಿದೆ. ಅಪರಾಧಿಗಳನ್ನು ಬಂಧಿಸುವಂತೆ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು. ಇದು ಅವರ ಮೊದಲ ಹೇಳಿಕೆ.
ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಪೊಂದು ಥಳಿಸಿ ಕೊಂದಾಗ ಅವರು ವಹಿಸಿದ ಮೌನಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದಾಗ ಅವರ ಕಚೇರಿ ಎರಡನೆಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಸಾವನ್ನು ಪ್ರಸ್ತಾಪಿಸಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಆಶ್ವಾಸನೆಯನ್ನು ನೀಡಿತು.
ದೃಢೀಕರಿಸಲ್ಪಡದ ಮೂಲಗಳ ಪ್ರಕಾರ ಆ ಎರಡು ಹೇಳಿಕೆಗಳ ನಡುವೆ ಕೆಲವು ಗಂಟೆಗಳ ಅಂತರವಿತ್ತು. ಗುಂಪು ಹಿಂಸೆಯನ್ನು ಮತ್ತು ಕರ್ತವ್ಯ ನಿರತ ಓರ್ವ ಪೊಲೀಸ್ ಅಧಿಕಾರಿ ಹತ್ಯೆಯನ್ನು ಖಂಡಿಸಲು ಯಾಕಾಗಿ ಅವರಿಗೆ ಅಷ್ಟೊಂದು ಸಮಯ ಬೇಕಾಯಿತು?
 ಓರ್ವ ಸನ್ಯಾಸಿಯಾಗಿ ಒಂದು ಮನುಷ್ಯನ ಜೀವ ಮತ್ತು ಒಂದು ಹಸುವಿನ ಜೀವದ ನಡುವೆ ಯಾವುದಕ್ಕೇ ಆದರೂ ಆದ್ಯತೆ ನೀಡಲು ಅಥವಾ ತನ್ನ ಧರ್ಮ ಹೇಳಿದ್ದನ್ನು ಆಚರಿಸಲು ಅವರು ಸ್ವತಂತ್ರರು. ಆದರೆ ಓರ್ವ ಮುಖ್ಯಮಂತ್ರಿಯಾಗಿ ಅವರು ಸಾಂವಿಧಾನಿಕ ವಿಧಿ ವಿಧಾನವನ್ನು ಅನುಸರಿಸಬೇಕು. ಅವರು ತನ್ನ ಮೂಲ ಸಾಂವಿಧಾನಿಕ ತತ್ವವನ್ನು ಮರೆತರೇ? ಅಥವಾ ಅದು ಬೇಕೆಂದೇ ಮರೆತ ಒಂದು ಪ್ರಕರಣವೇ? ಅಥವಾ ಆ ವಿಳಂಬ ಈಗ ಹತ್ಯೆಯಾಗಿರುವ ಸುಬೋಧ್ ಕುಮಾರ್ ಸಿಂಗ್, ಅಖ್ಲಾಕ್‌ರನ್ನು (ಅಕ್ಟೋಬರ್ 2015) ಥಳಿಸಿ ಕೊಂದ ಪ್ರಕರಣದ ವಿಚಾರಣೆ ನಡೆಸಿ, ವಿಪರೀತ ರಾಜಕೀಯ ಒತ್ತಡವನ್ನು ಎದುರಿಸಿಯೂ ಹಲವು ಮಂದಿ ಹಿಂದುತ್ವ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹೂಡಿದ್ದರೆಂಬ ಕಾರಣಕ್ಕಾಗಿಯೇ?
ವ್ಯಂಗ್ಯಚಿತ್ರಗಾರ ಅರವಿಂದ್ ತೆಗ್ಗಿನ ಮಠ್ ಅವರು ಉತ್ತರ ಪ್ರದೇಶದಲ್ಲಿ ಈಗಿರುವ ಪರಿಸ್ಥಿತಿಯ ಬಗ್ಗೆ ಒಂದು ವ್ಯಂಗ್ಯ ಚಿತ್ರ ರಚಿಸಿದ್ದಾರೆ ‘ರಿಪಬ್ಲಿಕ್ ಆಫ್ ಯುಪಿ’ ‘ಉತ್ತರಪ್ರದೇಶ ಗಣರಾಜ್ಯ’ ಎಂಬ ಶೀರ್ಷಿಕೆ ಇರುವ ಆ ವ್ಯಂಗ್ಯಚಿತ್ರವೂ ಉತ್ತರ ಪ್ರದೇಶ ಹೇಗೆ ಗೋರಕ್ಷಕರ ಗೋರಕ್ಷಕರಿಂದ ಮತ್ತು ಗೋರಕ್ಷಕರಿಗೆ ಇರುವ ಒಂದು ಗಣರಾಜ್ಯವಾಗಿದೆ ಎಂಬುದನ್ನು ಹೇಳುತ್ತದೆ. ಆ ವ್ಯಂಗ್ಯ ಚಿತ್ರವು ತುಂಬಾ ಸುಂದರವಾಗಿ ಆ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಚಿತ್ರಿಸುತ್ತದೆ.
ಗೋಹತ್ಯಾ ನಿಷೇಧದ ಕುರಿತು ಚರ್ಚೆ ನಡೆಯುತ್ತಿದ್ದಾಗ ಮತ್ತು ಅದು ಅನುಷ್ಠಾನಗೊಂಡಾಗ ಎರಡು ಮುಖ್ಯ ಪ್ರಶ್ನೆಗಳನ್ನು ಎತ್ತಲಾಗಿತ್ತು. (ಕೇಂದ್ರದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೋಹತ್ಯೆ ನಿಷೇಧದ ವಿಷಯ ಕಾವು ಪಡೆದುಕೊಂಡಿತು.)
ಒಂದು: ಗೋಹತ್ಯೆ ನಿಷೇಧದಿಂದ ಅಗ್ಗದ ಪೌಷ್ಟಿಕಾಂಶಗಳನ್ನು ಪಡೆಯುತ್ತಿದ್ದ ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಮತ್ತಿತರ ಸಮುದಾಯದ ಮೇಲಾಗುವ ನೇತ್ಯಾತ್ಮಕ ಪರಿಣಾಮ. ಈ ಸಮುದಾಯಕ್ಕೆ ಗೋಮಾಂಸವು ಅತ್ಯಂತ ಕಡಿಮೆ ಬೆಲೆಗೆ ಸಿಗುವ ಪೌಷ್ಟಿಕ ಆಹಾರವಾಗಿದೆ. ಇತರ ಮಾಂಸದ (ಮಟನ್) ಮೂರನೇ ಒಂದರಷ್ಟು ಬೆಲೆೆಗೆ ಗೋಮಾಂಸ ದೊರಕುತ್ತದೆ.
ಎರಡು: ರೈತರಿಗೆ ಉಪಯೋಗವಿಲ್ಲದ ಅಂದರೆ ಮುದಿಯಾದ ಜಾನುವಾರುಗಳನ್ನು ಹತ್ಯೆ ಮಾಡದೆ ಸಾಕುವುದು ತುಂಬಾ ದುಬಾರಿ. ಇದರಿಂದಾಗಿ ರೈತ ಇನ್ನಷ್ಟು ಸಂತ್ರಸ್ತನಾಗುತ್ತಾನೆ ಕಳೆದ ಎರಡು ಮೂರು ವರ್ಷಗಳಿಂದ ಪರಿತ್ಯಕ್ತವಾದ ಹಸು, ಎತ್ತುಗಳ ಸಂಖ್ಯೆ ದಿಢೀರ್ ಏರಿಕೆಯಾಗಿರುವುದಕ್ಕೂ ಗೋಹತ್ಯೆ ನಿಷೇಧಕ್ಕೂ ನೇರ ಸಂಬಂಧವಿದೆ. ಈ ನಿಷೇಧ ಜಾರಿಗೆ ಬರುವ ಮೊದಲು ರೈತ ತನ್ನ ಅನುತ್ಪಾದಕ ಜಾನುವಾರನ್ನು ಕಸಾಯಿಖಾನೆಗೆ ಮಾರಿ ರೂ. 5,000ದಿಂದ 10,000ದವರೆಗೆ ಗಳಿಸುತ್ತಿದ್ದ. ಇವತ್ತು ಅದು ಅಸಾಧ್ಯವಾಗಿದೆ.


ಇಷ್ಟೇ ಅಲ್ಲದೆ ಹಾದಿ ಬೀದಿಗಳಲ್ಲಿ ಅಲೆದಾಡುವ ಪರಿತ್ಯಕ್ತ ಜಾನುವಾರುಗಳು ರಸ್ತೆ ಅಪಘಾತಕ್ಕೆ ಗುರಿಯಾಗಿ ಸಾಯುವುದು ಕೂಡ ಈಗ ಸಾಮಾನ್ಯವಾಗಿದೆ. ಈ ಸಮಸ್ಯೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉಲ್ಬಣಗೊಳ್ಳಲಿದೆ.
ರಸ್ತೆ ಅಪಘಾತಗಳಲ್ಲಿ ಜಾನುವಾರುಗಳಷ್ಟೇ ಸಾಯುತ್ತಿರು ವುದಲ್ಲ. ಅವುಗಳು ಅಲೆಯುತ್ತ ರಸ್ತೆಗಳಿಗೆ ಬಂದಾಗ ಸಂಭವಿಸುವ ಅಪಘಾತಗಳಿಂದಾಗಿ ಮಾನವ ಜೀವಗಳೂ ನಷ್ಟವಾಗುತ್ತಿವೆ. ಕಳೆದ ಮೂವತ್ತು ತಿಂಗಳುಗಳಲ್ಲಿ ಜಾನುವಾರುಗಳಿಂದಾಗಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮುನ್ನೂರು ಮಂದಿ ಮೃತಪಟ್ಟಿದ್ದಾರೆ ಎಂದು ಎಪ್ರಿಲ್ 17ರಂದು ಪಂಜಾಬ್‌ನ ಅಧಿಕಾರಿಗಳು ಹೇಳಿದ್ದಾರೆ. ಇದು ಕೇವಲ ಒಂದು ರಾಜ್ಯದಲ್ಲಿ ಜಾನುವಾರುಗಳಿಂದಾಗಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ. ಹಲವು ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿದ ಬಳಿಕ ತುಂಬಾ ಮಹತ್ವ ಪಡೆದಿರುವ ಒಂದು ವಿಷಯವೆಂದರೆ ಗೋಸಂಬಂಧಿ ಹಿಂಸಾ ಘಟನೆಗಳಲ್ಲಾಗಿರುವ ದಿಢೀರ್ ಹೆಚ್ಚಳ ಮತ್ತು ಅಲ್ಲಲ್ಲಿ ಗೋರಕ್ಷಕ ಗುಂಪುಗಳ ಉದಯ. ಬುಲಂದ್‌ಶಹರ್‌ನಲ್ಲಿ ಓರ್ವ ಪೊಲೀಸ್ ಅಧಿಕಾರಿಯನ್ನು ಗುಂಪು ಥಳಿಸಿ ಹತ್ಯೆಗೈದಿದ್ದು ಈ ಹಿಂಸಾ ಸರಣಿಯಲ್ಲಿ ತೀರಾ ಇತ್ತೀಚಿನ ಘಟನೆ.
ಕೇಂದ್ರದಲ್ಲಿ ಕೇಸರಿ ಶಕ್ತಿಗಳು ಅಧಿಕಾರಕ್ಕೆ ಬಂದಂದಿನಿಂದ ನಡೆದಿರುವ ಗೋಸಂಬಂಧಿ ಹಿಂಸೆ ಮತ್ತು ಅಂತಹ ಗೋ ಸಂಬಂಧ ಹಿಂಸೆಯಲ್ಲಿ ಸಂಬಂಧಿಸಿದ ಸಾವುಗಳ ಸಂಖ್ಯೆಯಲ್ಲಿ ಆಗಿರುವ ಭಾರೀ ಹೆಚ್ಚಳದ ಕುರಿತು ‘ಇಂಡಿಯಾ ಸ್ಪೆಂಡ್’ ಒಂದು ಅಧ್ಯಯನ ನಡೆಸಿತ್ತು. 2012, 13 ಮತ್ತು 14ರಲ್ಲಿ ಸಂಭವಿಸಿದ ಇಂತಹ ಸಾವುಗಳ ಸಂಖ್ಯೆ ಶೂನ್ಯ. 2015ರಿಂದ ವರ್ಷ ಒಂದರಲ್ಲಿ ಇಂತಹ ಸುಮಾರು ಹತ್ತು ಸಾವುಗಳು ಸಂಭವಿಸಿವೆ.
  ಗೋಹತ್ಯೆ ನಿಷೇಧಿಸಲು ಕಾನೂನಿನ ಮಾರ್ಗವನ್ನು ಅನುಸರಿಸಿ ಗೋಹತ್ಯೆ ನಿಷೇಧ ಕಾನೂನನ್ನು ಬಳಸಲು ಸರಕಾರದ ಅಧಿಕಾರವನ್ನು ಬಳಸುವ ಚರ್ಚೆ ನಡೆದಾಗ, ಅದಕ್ಕಾಗಿ ಗೋರಕ್ಷಕ ಗುಂಪುಗಳ ಚಟುವಟಿಕೆಗಳನ್ನು ಕೂಡ ಬಳಸಿಕೊಳ್ಳಲಾಗುವುದೆಂದು ಸರಕಾರ ಹೇಳಿತ್ತು. ಉದಾಹರಣೆಗೆ ‘ಭಾರತೀಯ ಗೋರಕ್ಷಕದಳ’ವೆಂಬ 2012ರಲ್ಲಿ ನೋಂದಾಯಿಸಲ್ಪಟ್ಟ ಒಂದು ಗೋರಕ್ಷಣಾ ಜಾಲದ ಪ್ರತಿನಿಧಿಯೊಬ್ಬರು, ತಮ್ಮ ಜಾಲಕ್ಕೆ ಸೇರಿರುವ ಸುಮಾರು ಐವತ್ತು ಗುಂಪುಗಳು ದೇಶದ ವಿವಿಧ ಭಾಗಗಳಲ್ಲಿ ಮತ್ತು ಸುಮಾರಾಗಿ ಪ್ರತಿ ರಾಜ್ಯದಲ್ಲಿ ತಮ್ಮ ಸಂಘಟನೆಯ ಹತ್ತು ಸಾವಿರ ಮಂದಿ ಸ್ವಯಂ ಸೇವಕರಿದ್ದಾರೆಂದು ‘ಹ್ಯೂಮನ್ ರೆಟ್ಸ್ ವಾಚ್’ ಎಂಬ ಸಂಸ್ಥೆಗೆ ಹೇಳಿದ್ದಾರೆ.
ಅವರ ಹೇಳಿಕೆ ಏನೇ ಇರಲಿ ದೇಶದಲ್ಲಿ ನಿಜವಾದ ಪರಿಸ್ಥಿತಿ ಏನಿದೆ?
ಅವರಿಗೆ ನಿಜವಾಗಿಯೂ ಗೋವುಗಳ ಕಲ್ಯಾಣದ ಬಗ್ಗೆ ಕಾಳಜಿ ಇದೆಯೇ? ಅಥವಾ ಅವರು ಆಡಳಿತ ನಡೆಸುವ ಸರಕಾರದಿಂದ ಅಧಿಕೃತತೆ ಪಡೆದು ಒಂದು ರೀತಿಯಲ್ಲಿ ಹಿಂಸೆಯ ಹೊರಗುತ್ತಿಗೆಯನ್ನು ಪಡೆದ ಸಮಾಜ ವಿರೋಧಿ ಶಕ್ತಿಗಳೇ?
‘ಇಂಡಿಯಾ ಟುಡೇ’ ಪತ್ರಿಕೆ ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಕಾರ್ಯಾಚರಿಸುತ್ತಿರುವ ಎರಡು ಬೃಹತ್ ಸಂಘಟಿತ ಗೋರಕ್ಷಕ ಗುಂಪುಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕುಟುಕು ಕಾರ್ಯಾಚರಣೆ ನಡೆಸಿತು. ಆಗ ಗೋರಕ್ಷಕರು ಕಾರ್ಯನಿರ್ವಹಿಸುವ ವಿಧಾನ ಮತ್ತು ಅವರು ಪೊಲೀಸರೊಂದಿಗೆ ಶಾಮೀಲಾಗಿರುವುದು ತಿಳಿದುಬಂತು. ಅವರ ನಾಯಕ ತಮ್ಮ ‘ದಾಳಿ’ ಹೇಗೆ ನಡೆಯುತ್ತದೆಂದು ವಿವರಿಸಿದ: ಅವರು ಮೊದಲಾಗಿ ರಸ್ತೆಯನ್ನು ಮುಚ್ಚುತ್ತಾರೆ. ಗೋಸಾಗಾಟ ಮಾಡುವ ವಾಹನಗಳನ್ನು ತಡೆದು ಅವುಗಳಿಂದ ಜಾನುವಾರುಗಳನ್ನು ವಶ ಪಡಿಸಿಕೊಳ್ಳಲು ಬೆದರಿಕೆ ಹಾಗೂ ಹಿಂಸೆಯನ್ನು ಬಳಸುತ್ತಾರೆ. ಆ ಜಾನುವಾರುಗಳನ್ನು ತಮ್ಮ ತಮ್ಮಾಳಗೆ ಆಗಲೇ ಮತ್ತು ಅಲ್ಲಿಯೇ ಹಂಚಿಕೊಳ್ಳುತ್ತಾರೆ. ತಮ್ಮ ಮುಖ್ಯ ಗುರಿಗಳ ಮೇಲೆ ಬಹುಪಾಲು ಮಾರಣಾಂತಿಕವೆನ್ನಬಹುದಾದ ದಾಳಿಗಳನ್ನು ನಡೆಸಲು ಗೋ ರಕ್ಷಕರಿಗೆ ತರಬೇತಿ ನೀಡಬೇಕಾಗಿದ್ದರಿಂದ ಅವರಿಗೆ ಸ್ವಲ್ಪಮಟ್ಟಿನ ಸಿದ್ಧತೆ ಬೇಕಾಗುತ್ತದೆ. ಅವರು ಆಂತರಿಕ ಗಾಯವಾಗುವಂತೆ ತಮ್ಮ ಎದುರಾಳಿಗಳ ಮೂಳೆ, ಸ್ನಾಯು ಹಾಗೂ ಕಾಲುಗಳನ್ನು ಮುರಿಯುತ್ತಾರೆ; ಆದರೆ ತಲೆಗೆ ಹೊಡೆಯುವುದಿಲ್ಲ. ಏಕೆಂದರೆ ಅವರ ಬಂಧನವಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಆರು ರಾಜ್ಯಗಳಲ್ಲಿ ದಾಳಿ ನಡೆಸಿದ್ದರೂ ಅವರ ತಂಡದ ಒಬ್ಬನೇ ಒಬ್ಬನ ವಿರುದ್ಧ ಕೂಡ ಪೊಲೀಸ್ ಮೊಕದ್ದಮೆ ದಾಖಲಾಗಿಲ್ಲ.! ಅವರು ಗೋರಕ್ಷಕರೆಂದು ಹೇಳಿಕೊಳ್ಳಬಹುದು, ಪ್ರಚಾರ ಮಾಡಿಕೊಳ್ಳಬಹುದು. ಆದರೆ ಇಂಡಿಯಾ ಟುಡೇಯ ಟೇಪ್‌ನಲ್ಲಿ ಆತ ತನ್ನ ಗ್ಯಾಂಗ್‌ಗಳು ಪವಿತ್ರ ಹಸುಗಳ ಹೆದ್ದಾರಿ ದರೋಡೆ ಕೋರರೆಂದು ಒಪ್ಪಿಕೊಂಡ.
ಎರಡೂವರೆ ವರ್ಷಗಳ ಹಿಂದೆ ಉನಾ ಚಳವಳಿ ತೀವ್ರವಾಗಿದ್ದಾಗ ಗುಜರಾತ್ ರಾಜ್ಯದ ಮುಖ್ಯ ಕಾರ್ಯದರ್ಶಿ ಜಿ.ಆರ್ ಗ್ಲೋರಿಯಾ ಒಂದು ರಾಷ್ಟ್ರೀಯ ದಿನಪತ್ರಿಕೆಗೆ ಹೀಗೆ ಹೇಳಿದ್ದರು: ‘‘ಈ ಗೋರಕ್ಷಕರು ಸ್ವಘೋಷಿತ ಗೋರಕ್ಷಕರು. ಆದರೆ ನಿಜವಾಗಿ ಅವರು ಗೂಂಡಾಗಳು’’ ಗ್ಲೋರಿಯಾ ಅವರು ಹೇಳುವಂತೆ ‘‘ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಒಂದು ಸಮಸ್ಯೆಯಾಗಿರುವ ಸುಮಾರು ಇನ್ನೂರು ಗೋರಕ್ಷಕ ಗೂಂಡಾ ಗುಂಪುಗಳಿವೆ. ಈ ಗುಂಪುಗಳ ಸದಸ್ಯರ ದಾಳಿಕೋರತನ ಮತ್ತು ಅವರು ಕಾನೂನನ್ನು ತಮ್ಮ ಕೈಗೆ ಎತ್ತಿಕೊಳ್ಳುವ ರೀತಿಯಿಂದಾಗಿ ಅವರು ಒಂದು ಸಮಸ್ಯೆಯಾಗಿದ್ದಾರೆ. ಸರಕಾರವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಕೆಳಹಂತದ ಪೊಲೀಸ್ ಸಿಬ್ಬಂದಿ ಈ ಗೋರಕ್ಷಕ ಗುಂಪುಗಳ ಜೊತೆ ಶಾಮೀಲಾಗಿದ್ದಾರೆ’’ ಎಂದು ಕೂಡ ಮುಖ್ಯ ಕಾರ್ಯದರ್ಶಿ ಅವರು ಸ್ಪಷ್ಟವಾಗಿ ಹೇಳಿದ್ದರು.
 ಈ ಹಿಂಸೆ ಈ ಗುಂಪುಗಳಿಗೆ ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ ಈ ಹಿಂದಿನ ತೆಲಂಗಾಣ ಅಸೆಂಬ್ಲಿಯ ಬಿಜೆಪಿ ಶಾಸಕ ರಾಜಾ ಸಿಂಗ್ ಉನಾ ಘಟನೆಯ ಬಳಿಕ (ಜುಲೈ 2016) ಹೆಮ್ಮೆಯಿಂದ ಹೀಗೆ ಘೋಷಿಸಿದ್ದರು: ‘‘ಹಸುವನ್ನು, ಗೋವಿನ ಮಾಂಸವನ್ನು ಯಾವ ದಲಿತರು ಒಯ್ಯುತ್ತಿದ್ದರೋ, ಯಾವ ದಲಿತರನ್ನು ಥಳಿಸಲಾಯಿತೋ ಹಾಗೆ ಮಾಡಿದ್ದು ಒಳ್ಳೆಯದೇ ಆಯಿತು.’’ ಫೇಸ್‌ಬುಕ್ ಗೆ ಅಪ್ಲೋಡ್ ಮಾಡಲಾದ ಒಂದು ವೀಡಿಯೊದಲ್ಲಿ ಸಿಂಗ್ ಹೀಗೆ ಹೇಳಿದ್ದರು. ಅವರು ದಲಿತರಿಗೆ ಸಾರ್ವಜನಿಕವಾಗಿಯೇ ಹಾಕಿದ ಬೆದರಿಕೆಗಳ ಬಗ್ಗೆ ತುಂಬಾ ಆಕ್ರೋಶ, ಟೀಕೆ ವ್ಯಕ್ತವಾಯಿತಾದರೂ ರಾಜ್ಯದ ಬಿಜೆಪಿ ನಾಯಕತ್ವವಾಗಲಿ ಅಥವಾ ಅದರ ಕೇಂದ್ರ ನಾಯಕತ್ವವಾಗಲಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
 ಅದೇ ಸಮಯದಲ್ಲಿ ಕೇಸರಿ ಪಾರಮ್ಯವನ್ನು ಪ್ರತಿಪಾದಿಸುವ ಮುಖವಾಣಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನವು, ದಿವಂಗತ ಗಿರಿರಾಜ್ ಕಿಶೋರ್ ಅವರು ಬಳಸಿದಂತೆ ವಾದ ಸರಣಿಯನ್ನು ಬಳಸಿ ದಲಿತರ ಮೇಲಿನ ಥಳಿತವನ್ನು ಸಮರ್ಥಿಸಿಕೊಂಡಿತ್ತು. ಆ ಮೂಲಕ ಗಿರಿರಾಜ್ ಕಿಶೋರ್ ಮೃತಪಟ್ಟ ಮೇಲೆ ಕೂಡ ಅವರ ದೃಷ್ಟಿಕೋನ ಬದುಕಿಯೇ ಇದೆ ಎಂಬುದನ್ನು ಆ ಲೇಖನವು ರುಜುವಾತು ಪಡಿಸಿತು.
ಕೃಪೆ: caravandaily.com

share
ಸುಭಾಷ್ ಗಟಡೆ
ಸುಭಾಷ್ ಗಟಡೆ
Next Story
X