Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಇನ್ನೆರಡು ವರ್ಷಗಳಲ್ಲಿ ಭಾರತದ...

ಇನ್ನೆರಡು ವರ್ಷಗಳಲ್ಲಿ ಭಾರತದ ರಾಜಧಾನಿಯಲ್ಲಿ ಮುಸ್ಲಿಮರಿಗೆ ದಫನ ಮಾಡಲು ಜಾಗವಿಲ್ಲ!

ಅಫ್ತಾಬ್ ಹುಸೇನ್ ಕೋಲಾಅಫ್ತಾಬ್ ಹುಸೇನ್ ಕೋಲಾ4 Jan 2019 12:14 AM IST
share
ಇನ್ನೆರಡು ವರ್ಷಗಳಲ್ಲಿ ಭಾರತದ ರಾಜಧಾನಿಯಲ್ಲಿ ಮುಸ್ಲಿಮರಿಗೆ ದಫನ ಮಾಡಲು ಜಾಗವಿಲ್ಲ!

ಹೊಸದಿಲ್ಲಿಯಲ್ಲಿ ತಮ್ಮವರ ಸಾವಿಗೆ ರೋದಿಸುವ ಜೊತೆಗೆ ಮೃತದೇಹವನ್ನು ದಫನ ಮಾಡಲು ಜಾಗಕ್ಕಾಗಿ ಹುಡುಕಾಡುವ ಸಂಕಷ್ಟಕ್ಕೂ ಸಂಬಂಧಿಕರು ಒಳಗಾಗಬೇಕಾಗುತ್ತದೆ.
ಸದ್ಯ ಪರಿಸ್ಥಿತಿ ಹದಗೆಟ್ಟುತ್ತಿರುವುದರಿಂದ ಹೊಸದಿಲ್ಲಿಯ 113 ಖಬರ್‌ಸ್ಥಾನಗಳಲ್ಲಿ ಜಾಗದ ಕೊರತೆ ಮುಸ್ಲಿಮರನ್ನು ಬಹಳವಾಗಿ ಕಾಡುತ್ತಿದೆ.

ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಮನವಿಯಂತೆ ಸರಕಾರೇತರ ಸಂಸ್ಥೆಗಳಾದ ಮಾನವ ಅಭಿವೃದ್ಧಿ ಸಮಾಜ ಮತ್ತು ಉಲ್ಹಾಸ ನಡೆಸಿದ ಅಧ್ಯಯನದ ಪ್ರಕಾರ, ದಿಲ್ಲಿಯ ಜನಸಂಖ್ಯೆಯ ಶೇ.13ರಷ್ಟಿರುವ ಮುಸ್ಲಿಮರಿಗೆ ಮುಂದಿನ ಎರಡು ವರ್ಷಗಳಲ್ಲಿ ದಫನ ಮಾಡಲು ಜಾಗವೇ ಇಲ್ಲದಂತಾಗಲಿದೆ. ಅಲ್ ಅರಬಿಯ ಇಂಗ್ಲಿಷ್ ಜೊತೆ ಮಾತನಾಡಿದ ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಝಫರುಲ್ ಇಸ್ಲಾಂ ಖಾನ್ ಹೀಗೆನ್ನುತ್ತಾರೆ: ‘‘ಖಬರ್‌ಸ್ಥಾನಗಳಲ್ಲಿ ಜಾಗದ ಕೊರತೆ, ಅತಿಕ್ರಮಣ ಮತ್ತು ಅಕ್ರಮ ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಆಗಾಗ ದೂರುಗಳು ಬರುತ್ತಲೇ ಇವೆ.’’
ಈ ಸಮಸ್ಯೆಗಳು ಎಷ್ಟು ನಿಜವಾಗಿವೆ ಎಂಬುದನ್ನು ತಿಳಿಯುವ ಉದ್ದೇಶದಿಂದ ನಡೆಸಲಾದ ಅಧ್ಯಯನದ ವರದಿ ಸಾಮಾನ್ಯ ತಿಳುವಳಿಕೆಗಿಂತ ಹೆಚ್ಚಿನ ಆಘಾತಕಾರಿ ಅಂಶಗಳನ್ನು ತೆರೆದಿಟ್ಟಿದೆ. ಸ್ಥಳಕ್ಕೆ ತೆರಳಿ ನಡೆಸಲಾದ ಅಧ್ಯಯನದಲ್ಲಿ ತಿಳಿಸಿರುವಂತೆ, ದಿಲ್ಲಿಯ ಬಹುತೇಕ ಖಬರ್‌ಸ್ಥಾನಗಳು ಅಕ್ರಮ ಸ್ವಾಧೀನಪಡಿಸಿಕೊಳ್ಳುವಿಕೆಯ ಕಾರಣ ಮಾಯವಾಗುತ್ತಿವೆ.
ಅಲ್ ಅರಬಿಯಕ್ಕೆ ಸಿಕ್ಕಿರುವ ಅಧ್ಯಯನದ ಪ್ರತಿಯಲ್ಲಿ ಉಲ್ಲೇಖಿಸಿರುವಂತೆ, ನಗರದ ಮುಸ್ಲಿಂ ಜನಸಂಖ್ಯೆ ವೃದ್ಧಿಸಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕೆಲವೇ ಖಬರ್‌ಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಕೇವಲ ಐದು ಖಬರ್‌ಸ್ಥಾನಗಳು ಮಾತ್ರ ಹತ್ತು ವರ್ಷಗಳಿಗಿಂತ ಕಡಿಮೆ ವಯಸ್ಸಿನದ್ದಾಗಿವೆ. ನಗರದಲ್ಲಿ ಖಬರ್‌ಸ್ಥಾನಗಳ ಅತಿಕ್ರಮಣ ಒಂದು ಸವಾಲಿನ ವಿಷಯವಾಗಿದ್ದು ದಿಲ್ಲಿ ವಕ್ಫ್ ಮಂಡಳಿ ತನ್ನ ಜಾಲತಾಣದಲ್ಲಿ ಪಟ್ಟಿ ಮಾಡಿರುವ 624 ಖಬರ್‌ಸ್ಥಾನಗಳಲ್ಲಿ ಬಹುತೇಕವು ಕಣ್ಮರೆಯಾಗಿವೆ.
ವರ್ಷದಲ್ಲಿ ಮುಸ್ಲಿಂ ಸಮುದಾಯದಲ್ಲಿ ಸರಾಸರಿ ಮರಣಗಳ ಸಂಖ್ಯೆ 13,000 ಎಂದು ಅಂದಾಜಿಸಿ ಸದ್ಯ ಖಬರ್‌ಸ್ಥಾನಗಳಲ್ಲಿ ದಫನ ಮಾಡಲು ಲಭ್ಯವಿರುವ ಜಾಗ (29,370 ಮೃತದೇಹಗಳು)ದ ಜೊತೆ ಲೆಕ್ಕ ಹಾಕಿದರೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಖಬರ್‌ಸ್ಥಾನಗಳಲ್ಲಿ ಹೆಣ ಹೂಳಲು ಜಾಗವೇ ಇಲ್ಲವಾಗುತ್ತದೆ.
ಪತ್ರಕರ್ತರೂ ಆಗಿರುವ ಝಫರುಲ್ ಇಸ್ಲಾಂ ಖಾನ್ ಹೇಳುವಂತೆ, ‘‘ಅಧ್ಯಯನದ ಪ್ರಕಾರ ದಿಲ್ಲಿಯ 704 ಖಬರ್‌ಸ್ಥಾನಗಳ ಪೈಕಿ ಇಂದು ಕೇವಲ 131 ಮಾತ್ರ ಉಳಿದಿದ್ದು ಅದರಲ್ಲೂ 16 ವ್ಯಾಜ್ಯದಲ್ಲಿದೆ. ಹಾಗಾಗಿ ಈ 16 ಖಬರ್‌ಸ್ಥಾನಗಳಲ್ಲಿ ಮೃತದೇಹಗಳನ್ನು ದಫನ ಮಾಡಲಾಗುತ್ತಿಲ್ಲ. ಹಲವು ವರ್ಷಗಳಿಂದ ಅನೇಕ ಮಂದಿ ಮತ್ತು ಸರಕಾರಿ ಇಲಾಖೆಗಳು ಖಬರ್‌ಸ್ಥಾನದ ಜಾಗವನ್ನು ಅತಿಕ್ರಮಿಸಿಕೊಂಡಿವೆ. ಹೀಗೆ ಅತಿಕ್ರಮಣ ಮಾಡಿರುವವರಲ್ಲಿ ಮುಸ್ಲಿಂ ವ್ಯಕ್ತಿಗಳು ಮತ್ತು ಸಂಸ್ಥೆಗಳೇ ಹೆಚ್ಚಾಗಿವೆ.’’
ಈ ಸಮಸ್ಯೆಯನ್ನು ಬಗೆಹರಿಸಲು ದಿಲ್ಲಿ ಅಲ್ಪಸಂಖ್ಯಾತ ಆಯೋಗ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದಾಗ, ‘‘ಡಿಎಂಸಿ ಈ ವಿಷಯವನ್ನು ಸಾರ್ವಜನಿಕರ ಅವಗಾಹನೆಗೆ ತಂದಿದೆ. ಖಬರ್‌ಸ್ಥಾನದ ಜಾಗದಿಂದ ಅತ್ರಿಮಣಕಾರರು ಮತ್ತು ಸ್ವಾಧೀನಪಡಿಸಿಕೊಂಡವರನ್ನು ತೆರವುಗೊಳಿಸುವಂತೆ ಮತ್ತು ಅದು ಸಾಧ್ಯವಾಗದಿದ್ದಲ್ಲಿ ಹೊಸ ಖಬರ್‌ಸ್ಥಾನವನ್ನು ನಿರ್ಮಿಸಲು ಹಣ ಅಥವಾ ಜಾಗದ ರೂಪದಲ್ಲಿ ಪರಿಹಾರ ನೀಡುವಂತೆ ಆಯೋಗವು ಸರಕಾರಿ ಇಲಾಖೆಗಳ ಜೊತೆ ಮಾತುಕತೆ ನಡೆಸುತ್ತಿದೆ’’ ಎಂದು ಖಾನ್ ತಿಳಿಸಿದ್ದಾರೆ.
ನಮ್ಮ ಬೇಡಿಕೆಗೆ ಸರಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಆದರೆ ನಾವು ನಮ್ಮ ಹೋರಾಟವನ್ನು ಮುಂದುವರಿಸಿದ್ದೇವೆ. ದಿಲ್ಲಿಯ ಮುಸ್ಲಿಮರು, ದಫನ ಮಾಡಿದ ಕೆಲವರ್ಷಗಳ ನಂತರ ಪುನಃ ಅದೇ ಜಾಗದಲ್ಲಿ ದಫನ ಮಾಡಲು ಸಾಧ್ಯವಿರುವ ಸಾಮಾನ್ಯ ಅಥವಾ ಸಿಮೆಂಟ್‌ರಹಿತ ಖಬರ್‌ಸ್ಥಾನಗಳನ್ನು ಬಳಸುವಂತೆಯೂ ಅಧ್ಯಯನ ವರದಿ ಸಲಹೆ ನೀಡುತ್ತದೆ.
ಅಧ್ಯಯನ ಈ ಸಲಹೆಗಳನ್ನು ನೀಡಿದೆ: ಲ್ಯಾಂಡ್ ಫಿಲ್ಲಿಂಗ್, ಅತಿಕ್ರಮಣಗಳ ತೆರವು ಮತ್ತು ವ್ಯಾಜ್ಯಗಳ ನಿಭಾವಣೆಗೆ ಪ್ರಾಮುಖ್ಯತೆ ನೀಡುವ ಮೂಲಕ ಸದ್ಯ ಇರುವ ಖಬರ್‌ಸ್ಥಾನಗಳ ಸಾಮರ್ಥ್ಯದ ಹೆಚ್ಚಳ, ಹೊಸ ಖಬರ್‌ಸ್ಥಾನಗಳ ನಿರ್ಮಾಣ, ಕಳೆದುಕೊಂಡಿರುವ ಖಬರ್‌ಸ್ಥಾನಗಳ ಮರುಪಡೆಯುವಿಕೆ ಮತ್ತು ಕೆಲವರ್ಷಗಳ ನಂತರ ಸಮಾಧಿಗಳ ಮರುಬಳಕೆ.
ಇತರ ಸಲಹೆಗಳು: ಖಬರ್‌ಸ್ಥಾನಗಳಲ್ಲಿ ಸದ್ಯ ಲಭ್ಯವಿರುವ ಸೌಲಭ್ಯಗಳ ಸುಧಾರಣೆಯ ಸಲಹೆಯ ಅನುಷ್ಠಾನ. ಮುಖ್ಯವಾಗಿ, ಆವರಣ ಗೋಡೆಯ ನಿರ್ಮಾಣ, ಬೀದಿದೀಪಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ, ನೀರಿನ ಟಾಂಕಿಯ ನಿರ್ಮಾಣ, ಅಂತ್ಯಕ್ರಿಯೆಯ ವೇಳೆಯ ಪ್ರಾರ್ಥನೆಗೆ ಜಾಗ, ಭದ್ರತಾ ಸಿಬ್ಬಂದಿಗೆ ತಂಗಲು ಕೋಣೆ ಮತ್ತು ಫುಟ್‌ಪಾತ್ ಮತ್ತು ಪ್ರವೇಶ ದ್ವಾರದ ನಿರ್ಮಾಣ ಇತ್ಯಾದಿ.
ಕೃಪೆ: english.alarabiya.net

share
ಅಫ್ತಾಬ್ ಹುಸೇನ್ ಕೋಲಾ
ಅಫ್ತಾಬ್ ಹುಸೇನ್ ಕೋಲಾ
Next Story
X