Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನಾಸಿರುದ್ದೀನ್ ಶಾ ಸಿಟ್ಟಿಗೆ ಕಾರಣವೇನು?

ನಾಸಿರುದ್ದೀನ್ ಶಾ ಸಿಟ್ಟಿಗೆ ಕಾರಣವೇನು?

ರಾಮ್ ಪುನಿಯಾನಿರಾಮ್ ಪುನಿಯಾನಿ6 Jan 2019 12:00 AM IST
share
ನಾಸಿರುದ್ದೀನ್ ಶಾ  ಸಿಟ್ಟಿಗೆ ಕಾರಣವೇನು?

ನಾಸಿರುದ್ದೀನ್‌ಶಾರವರ ಸಿಟ್ಟು ನಮ್ಮ ಸಮಾಜದ ಪ್ರಜಾಸತ್ತಾತ್ಮಕ ಚೈತನ್ಯವನ್ನು ಉಳಿಸಿಕೊಳ್ಳಲು ಅವರು ನೀಡಿರುವ ಒಂದು ಕರೆಗಂಟೆಯಾಗಬೇಕು. ಈಗ ಬಾಟಲಿಯಿಂದ ಹೊರ ಬಂದಿರುವ ಕೋಮುದ್ವೇಷದ ದೆವ್ವವನ್ನು ಮರಳಿ ಬಾಟಲಿಯೊಳಗೆ ಇಡುವ ಪ್ರಯತ್ನಕ್ಕೆ ಅದು ನಾಂದಿಯಾಗಬೇಕು.

ಅಲ್ಪಸಂಖ್ಯಾತರು ಅನುಭವಿಸುವ ಭದ್ರತೆಯ ಭಾವನೆಯನ್ನು ಅವಲಂಬಿಸಿ ಪ್ರಜಾಸತ್ತಾತ್ಮಕ ಸಮಾಜದ ಆರೋಗ್ಯ ಸೂಚ್ಯಂಕವನ್ನು ಅಳೆಯಲಾಗುತ್ತದೆ. ಹಾಗೆಯೇ ಸಮಾಜದಲ್ಲಿ ಎಷ್ಟರ ಮಟ್ಟಿಗೆ ‘ಅಭಿವ್ಯಕ್ತಿ ಸ್ವಾತಂತ್ರ’ ಇದೆ ಎಂಬುದನ್ನವಲಂಬಿಸಿ ಒಂದು ಸಮಾಜದಲ್ಲಿ ಯಾವ ರೀತಿಯ ಪ್ರಜಾಪ್ರಭುತ್ವ ಎಷ್ಟರ ಮಟ್ಟಿಗೆ ಇದೆ ಎಂದು ಹೇಳಬಹುದಾಗಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಈ ಎರಡೂ ಸೂಚ್ಯಂಕಗಳು ಕೆಳಕ್ಕೆ ಇಳಿಯುತ್ತಲೇ ಇವೆ. ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣಲಾಗುತ್ತಿದೆ ಎಂಬ ಭಾವನೆಗಳು ತೀವ್ರಗೊಳ್ಳುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ, ನಿರ್ದಿಷ್ಟವಾಗಿ ಹೇಳಬೇಕೆಂದರೆ, ಒಂದೆಡೆ ಮುಸ್ಲಿಮರು, ಇನ್ನೊಂದೆಡೆ ಕ್ರಿಶ್ಚಿಯನ್‌ರು ಹೆಚ್ಚು ಹೆಚ್ಚು ಅಭದ್ರತೆಯ ಭಾವನೆಯಿಂದ ಬಳಲುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದ ‘‘ಧಾರ್ಮಿಕ ಅಲ್ಪಸಂಖ್ಯಾತರ ಭದ್ರತೆ’’ ಮತ್ತು ‘‘ಅಭಿವ್ಯಕ್ತಿ ಸ್ವಾತಂತ್ರ’’ ಎರಡಕ್ಕೂ ಕೂಡ ಸತತವಾಗಿ ಧಕ್ಕೆ ಉಂಟಾಗಿದೆ.
ಭಾರತೀಯ ಸಿನೆಮಾದ ದಂತಕತೆಗಳಲ್ಲೊಬ್ಬರಾಗಿರುವ ನಾಸಿರುದ್ದೀನ್ ಶಾ ಯುಪಿಯ ಬುಲಂದ್‌ಶಹರ್‌ನಲ್ಲಿ ಗೋರಕ್ಷಕರಿಂದ ನಡೆದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಹತ್ಯೆಯ ಕುರಿತು ತನ್ನ ಹೃದಯದಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ಈ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂತು.
ಶಾ ಅವರು ‘ಕಾರ್ವಾನೆ ಮೊಹಬ್ಬತ್’ ಎಂಬ ಸಂಘಟನೆಯೊಂದರ ಸದಸ್ಯರೊಡನೆ ಮಾತಾಡುತ್ತಾ ಹೀಗೆ ಹೇಳಿದ್ದರು:
 ‘‘ಹಲವು ಪ್ರದೇಶಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಸಾವಿಗಿಂತ ಒಂದು ಹಸುವಿನ ಸಾವಿಗೆ ಹೆಚ್ಚು ಮಹತ್ವವಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ನನ್ನ ಮಕ್ಕಳ ಬಗ್ಗೆ ಯೋಚಿಸುವಾಗ ನನಗೆ ಆತಂಕವಾಗುತ್ತದೆ. ಯಾಕೆಂದರೆ ಅವರಿಗೆ ಒಂದು ಧರ್ಮ ಇಲ್ಲ. ನಾಳೆ ಗುಂಪೊಂದು ಅವರನ್ನು ಸುತ್ತುವರಿದು ‘‘ನೀನು ಹಿಂದೂವೇ ಅಥವಾ ಮುಸ್ಲಿಮನೇ?’’ ಎಂದು ಕೇಳಿದರೆ ಅವರ ಬಳಿ ಉತ್ತರ ಇರುವುದಿಲ್ಲ. ಪರಿಸ್ಥಿತಿ ಸದ್ಯೋಭವಿಷ್ಯದಲ್ಲಿ ಸುಧಾರಿಸುವ ಹಾಗೆ ಕಾಣುವುದಿಲ್ಲವಾದ್ದರಿಂದ ನನಗೆ ಚಿಂತೆಯಾಗುತ್ತಿದೆ. ಈ ವಿಷಯಗಳಿಂದ ನಾನು ಹೆದರುವುದಿಲ್ಲ. ಇವುಗಳಿಂದ ನನಗೆ ಕೋಪ ಬರುತ್ತದೆ’’
‘‘ಜನರಿಗೆ ಶಸ್ತ್ರಗಳನ್ನು ಕೈಗೆ ತೆಗೆದುಕೊಂಡು ಹಿಂಸಾಚಾರ ನಡೆಸುವ ಧೈರ್ಯ ಬಂದಿದೆ. ಯಾಕೆಂದರೆ ತಾವು ಹಿಂಸೆ ನಡೆಸಿ ಕಾನೂನಿನ ಕುಣಿಕೆಗೆ ಸಿಗದೆ ಪಾರಾಗಬಹುದೆಂದು ಅವರಿಗೆ ತಿಳಿದಿದೆ.’’

ಪ್ರೀತಿ, ಮಮತೆ, ಸಾಮರಸ್ಯ ಸಾಮಾನ್ಯವಾಗಿರುವ ಯಾವುದೇ ಒಂದು ಸಮಾಜ ಇಂತಹ ಹೇಳಿಕೆಯಿಂದ ಆತಂಕಿತವಾಗಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿತ್ತು. ಪುರೋಗಾಮಿ ಲೇಖಕರ ಸಂಘದಂತಹ ನಮ್ಮ ಕೆಲವು ಸಂಘಟನೆಗಳು ಶಾ ಅವರ ಬೆಂಬಲಕ್ಕೆ ನಿಂತವು. ನಿಜ ಅಶುತೋಷ್ ರಾಣಾರಂತಹ ಕೆಲವು ಲೇಖಕರು ಶಾರನ್ನು ಬೆಂಬಲಿಸಿದರು. ಆದರೆ ಸಮಾಜದ ದೊಡ್ಡ ಭಾಗ ಶಾರನ್ನು ಖಂಡಿಸಿತು. ಹಲವು ಸಿನೆಮಾಗಳಲ್ಲಿ ಅವರ ಜೊತೆ ನಟಿಸಿದ್ದ ಅನುಪಮ್ ಖೇರ್, ‘‘ಸೇನೆಯ ಮೇಲೆ ಕಲ್ಲೆಸೆಯಲು, ಉನ್ನತ ಮಿಲಿಟರಿ ಅಧಿಕಾರಿಗಳನ್ನು ಟೀಕಿಸಲು ಸ್ವಾತಂತ್ರ ಇದೆ, ಹಾಗಾದರೆ ಶಾಗೆ ಇನ್ನೆಷ್ಟು ಸ್ವಾತಂತ್ರ ಬೇಕು?’’ ಎಂದು ಗೇಲಿ ಮಾಡಿದರು. ‘‘ಶಾರಂತಹ ಜನರು ವಿಭಜನಾತ್ಮಕ ರಾಜಕೀಯದ ಒಳಸಂಚಿನ ಭಾಗ’’ವೆಂದು ಮೋದಿ ಸರಕಾರ ಕ್ಯಾಬಿನೆಟ್ ಸಚಿವೆ ಉಮಾಭಾರತಿ ಹೇಳಿದರು. ಸನ್ಯಾಸಿ ಹಾಗೂ ವಾಣಿಜ್ಯೋದ್ಯಮಿ ರಾಮ್‌ದೇವ್ ಶಾರವರನ್ನು ರಾಷ್ಟ್ರವಿರೋಧಿ ಎಂದು ಕರೆದರು. ಎಲ್ಲಿ ಸುರಕ್ಷಿತ ಅಂತ ಅನ್ನಿಸುತ್ತದೋ ಶಾ ಅಲ್ಲಿಗೆ ಹೋಗಿ ನೆಲೆಸಬಹುದೆಂದು ಇನ್ನು ಕೆಲವರು ಹೇಳಿದರು. ಯುಪಿಯ ಬಿಜೆಪಿ ಮುಖ್ಯಸ್ಥ ‘‘ಶಾ ಓರ್ವ ಪಾಕಿಸ್ತಾನಿ ಏಜೆಂಟ್’’ ಎಂದರು. ಅಂತಿಮವಾಗಿ ಅಜ್ಮೀರ್ ಸಾಹಿತ್ಯೋತ್ಸವದಲ್ಲಿ ಶಾ ವಿರುದ್ಧ ಘೋಷಣೆಗಳನ್ನು ಕೂಗಿ, ಅವರು ಅಲ್ಲಿ ಭಾಷಣ ಮಾಡದಂತೆ ತಡೆಯಲಾಯಿತು.
ಹೀಗೆ ಇಷ್ಟೊಂದು ಕೆಟ್ಟದಾಗಿ ಓರ್ವ ಮುಸ್ಲಿಂ ನಟನನ್ನು ನಡೆಸಿಕೊಂಡದ್ದು ಇದೇ ಮೊದಲ ಬಾರಿಯಲ್ಲ. 2015ರಲ್ಲಿ ಶಾರುಕ್ ಖಾನ್ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆಯ ಬಗ್ಗೆ ಮಾತಾಡಿದಾಗ, ಪ್ರತಿಕ್ರಿಯಿಸಿದಾಗ ಅವರನ್ನು ಪಾಕಿಸ್ತಾನದ ಹಾಫೀಝ್ ಸಯೀದ್‌ಗೆ ಹೋಲಿಸಲಾಗಿತ್ತು. ಅದರ ಮುಂದಿನ ವರ್ಷ ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯನ್ನು ವಿರೋಧಿಸಿ ಹಲವಾರು ಮಂದಿ ಗಣ್ಯರು ತಾವು ಪಡೆದಿದ್ದ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವಾಗ, ತಮ್ಮ ಮಗುವಿನ ಬಗ್ಗೆ ಆಮಿರ್‌ಖಾನ್‌ರವರ ಪತ್ನಿ ಕಿರಣ್ ರಾವ್ ತಮ್ಮ ಭಯವನ್ನು ವ್ಯಕ್ತಪಡಿಸಿದಾಗ, ಅವರನ್ನು ಕೂಡ ಅದೇ ರೀತಿಯಾಗಿ ಟೀಕಿಸಲಾಯಿತು.
ಕಳೆದ ಕೆಲವು ವರ್ಷಗಳಲ್ಲಿ ಏನಾಗುತ್ತಿದೆ? ಗೋಧ್ರಾ ಘಟನೆಯ ಬಳಿಕ ಗುಜರಾತ್‌ನಲ್ಲಿ ಸಂಭವಿಸಿದ ಅಥವಾ 2008ರ ಕಂದಮಾಲ್‌ನಂತಹ ಅಥವಾ 2013ರ ಮುಝಫ್ಫರ್‌ನಗರದಂತಹ ಮಟ್ಟದ ಹಿಂಸೆ ನಡೆದಿಲ್ಲವೆಂಬುದು ನಿಜ. ಆದರೆ ಹಿಂಸೆ ಸಾಂಕ್ರಾಮಿಕವಾಗುತ್ತಿದೆ. ಕೆಲವು ಭಯಾನಕ ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ಘಟನೆಗಳು ಮುಸ್ಲಿಂ ಸಮುದಾಯವನ್ನು ಬೆದರಿಸುತ್ತವೆ. ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆಗಳ ಮೇಲೆ ನಡೆಯುವ ದಾಳಿಗಳು ಅವರನ್ನು ಹಿಂದಿಗಿಂತಲೂ ಹೆಚ್ಚು ಅಭದ್ರರನ್ನಾಗಿಸುತ್ತಿವೆ. ಮುಹಮ್ಮದ್ ಅಖ್ಲಾಕ್‌ರಿಂದ ಹಿಡಿದು ಜುನೈದ್ ಮತ್ತು ಅಕ್ಬರ್‌ಖಾನ್‌ವರೆಗೆ ನಡೆದಿರುವ ಗೋವಿನ ಪ್ರಕರಣಕ್ಕೆ ಸಂಬಂಧಿಸಿದ ಹಿಂಸೆಯು ಕೋಮು ರಾಜಕಾರಣದ ಕಾಲಾಳುಗಳು ಈ ದೇಶದಲ್ಲಿ ಜನರ ಆಚಾರಾಭ್ಯಾಸಗಳನ್ನು ನಿರ್ಧರಿಸುತ್ತಾರೆಂಬ ಸೂಚನೆಗಳನ್ನು ನೀಡಿದೆ. ಇದಕ್ಕೆಲ್ಲ ಕಲಶವಿಟ್ಟಂತೆ ಈ ಹಿಂಸಾಕೃತ್ಯಗಳಲ್ಲಿ ಹತ್ಯೆಗಳಲ್ಲಿ ಆಪಾದಿತರಾದವರಿಗೆ ಮಹೇಶ್ ಶರ್ಮಾ ಮತ್ತು ಜಯಂತ್ ಸಿನ್ಹಾರಂತಹ ಕೇಂದ್ರ ಸಚಿವರುಗಳೇ ಮನ್ನಣೆ ನೀಡಿದ್ದಾರೆ. ಅಖ್ಲಾಕ್ ಪ್ರಕರಣದಲ್ಲಿ ಆಪಾದಿತನಾದವನಿಗೆ ಮಹೇಶ್ ಶರ್ಮಾ ತ್ರಿವರ್ಣದ ಶಾಲು ಹೊದಿಸಿದರೆ, ಗುಂಪು ಥಳಿತ ಪ್ರಕರಣದ ಆಪಾದಿತನನ್ನು ಜಯಂತ್ ಸಿನ್ಹಾ ಸನ್ಮಾನಿಸಿದ್ದಾರೆ.
ರಾಜಸ್ಥಾನದಲ್ಲಿ ಅಫ್ರಝುಲ್‌ನ ‘ಲವ್‌ಜಿಹಾದ್’ ಹಿಂಸೆಯಲ್ಲಿ ಶಂಭುಲಾಲ್ ರೆಗರ್ ತೋರಿದ ಪೈಶಾಚಿಕತೆ ಮನುಷ್ಯ ಯಾವ ಮಟ್ಟಕ್ಕೆ ಇಳಿಯ ಬಲ್ಲನೆಂಬುದನ್ನು ಸಾಬೀತು ಪಡಿಸಿದೆ. ಅಫ್ರಝುಲ್‌ನನ್ನು ರೆಗರ್ ಭಯಾನಕ ರೀತಿಯಲ್ಲಿ ಹತ್ಯೆಮಾಡಿದ್ದಲ್ಲದೆ ತನ್ನ ಅಳಿಯನಿಂದ ಆ ರಾಕ್ಷಸೀ ಕೃತ್ಯದ ವೀಡಿಯೊ ಕೂಡ ಮಾಡಿಸಿದ್ದ. ಅಂತಹ ಬರ್ಬರ ಕೊಲೆ ಮಾಡಿದ ರೆಗರ್‌ನನ್ನು ಸನ್ಮಾನಿಸಲು ಒಂದು ಸಮಿತಿಯನ್ನೂ ರಚಿಸಲಾಯಿತು.
 ಉಮಾಭಾರತಿಯಂಥವರು ನಾಸಿರುದ್ದೀನ್‌ಶಾ ವಿಭಜಕ ರಾಜಕೀಯ ಮಾಡುತ್ತಿದ್ದಾರೆಂದು ಆಪಾದಿಸಿರುವ ಆ ವಿಭಜಕ ರಾಜಕೀಯ ಯಾವುದು? ಯಾವುದು ವಿಭಜಕ? ಯಾವುದು ವಿಭಜನವಾದಿ? ರಾಮ ಮಂದಿರ, ಪವಿತ್ರ ಹಸುವಿನಂತಹ ಕೋಮುವಾದಿ ವಿಷಯಗಳನ್ನೆತ್ತುವುದೇ? ಅಥವಾ ಮಾನವ ಹಕ್ಕಗಳ ಭಾರೀ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ತನ್ನ ಭಯಗಳನ್ನು ವ್ಯಕ್ತಪಡಿಸುವುದೇ?
ನಾಸಿರುದ್ದೀನ್‌ಶಾ ಅವರ ಸಿಟ್ಟು ನಮ್ಮ ಸಮಾಜದ ಪ್ರಜಾಸತ್ತಾತ್ಮಕ ಚೈತನ್ಯವನ್ನು ಉಳಿಸಿಕೊಳ್ಳಲು ಅವರು ನೀಡಿರುವ ಒಂದು ಕರೆಗಂಟೆಯಾಗಬೇಕು. ಈಗ ಬಾಟಲಿಯಿಂದ ಹೊರ ಬಂದಿರುವ ಕೋಮುದ್ವೇಷದ ದೆವ್ವವನ್ನು ಮರಳಿ ಬಾಟಲಿಯೊಳಗೆ ಇಡುವ ಪ್ರಯತ್ನಕ್ಕೆ ಅದು ನಾಂದಿಯಾಗಬೇಕು.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X