Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ರಿಸರ್ವ್ ಬ್ಯಾಂಕ್ ಮತ್ತು ಭಾಜಪ ಸರಕಾರದ...

ರಿಸರ್ವ್ ಬ್ಯಾಂಕ್ ಮತ್ತು ಭಾಜಪ ಸರಕಾರದ ಮಧ್ಯೆ ವಿರಸ!

ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಗಳಿಗೆ ವಿಪತ್ತು

ನ. ಸುಂದರಮೂರ್ತಿನ. ಸುಂದರಮೂರ್ತಿ7 Jan 2019 6:33 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ರಿಸರ್ವ್ ಬ್ಯಾಂಕ್ ಮತ್ತು ಭಾಜಪ ಸರಕಾರದ ಮಧ್ಯೆ ವಿರಸ!

ಭಾಗ-2

ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಲಾಭ ಗಳಿಸುತ್ತದೆ. ಅದಕ್ಕೆ ಲಾಭ ಹೇಗೆ ಉಂಟಾಗುತ್ತದೆ? ರಿಸರ್ವ್ ಬ್ಯಾಂಕ್ ಕೇಂದ್ರ ಸರಕಾರದ್ದೇ ಬ್ಯಾಂಕ್, ಅಲ್ಲದೆ ಬ್ಯಾಂಕರ್ಸ್‌ ಬ್ಯಾಂಕ್. ಸರಕಾರದ ಸೆಕ್ಯುರಿಟಿಗಳನ್ನು ಕೊಳ್ಳುವುದು ಮತ್ತು ಮಾರುವುದರಿಂದ, ಸೆಕ್ಯುರಿಟಿ ಬಾಂಡುಗಳ ಮೇಲೆ ಸಂಪಾದಿಸುವ ಬಡ್ಡಿ, ಸದಸ್ಯ ಬ್ಯಾಂಕುಗಳಿಂದ ಗಳಿಸುವ ಸಾಲಗಳ ಮೇಲಿನ ಬಡ್ಡಿ ಮುಂತಾದವುಗಳ ಮೂಲಕ ಲಾಭ ಗಳಿಸುವುದು ಸಾಧ್ಯವಾಗುತ್ತದೆ. ಇನ್ನೂ ಒಂದು ಅಂಶವನ್ನು ಗಮನಿಸಬಹುದು. ರಿಸರ್ವ್ ಬ್ಯಾಂಕ್ ಬಳಿ ಇರುವ ವಿದೇಶಿ ವಿನಿಮಯ (Foreign ExchangeSurplus Fund) ಅಮೆರಿಕದ ಡಾಲರ್ ರೂಪದಲ್ಲಿದೆ. ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ ಕುಸಿದು ಡಾಲರ್ ಬೆಲೆ ಹೆಚ್ಚಿದಾಗ ರಿಸರ್ವ್ ಬ್ಯಾಂಕ್‌ಗೆ ಲಾಭ ಸಂಪಾದನೆ ಆಗುತ್ತದೆ. ಅದರೆ ಆಸ್ತಿಯ ವೌಲ್ಯವೂ ಹೆಚ್ಚುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆ್ಯಕ್ಟ್, ಅಧ್ಯಾಯ 4, ಸೆಕ್ಷನ್ 47ರ ಅಡಿ, ರಿಸರ್ವ್ ಬ್ಯಾಂಕ್‌ನಲ್ಲಿ ಶೇಖರಣೆಯಾಗುವ ಮಿಗುತಾಯ ಹಣ (ಅಥವಾ ) ಕೇಂದ್ರ ಸರಕಾರಕ್ಕೆ ವರ್ಗಾವಣೆಯಾಗಬೇಕು. ಸೆಕ್ಷನ್ 47ರ ಅನುಸಾರ ಪ್ರತಿ ವರ್ಷ ಲಾಭವನ್ನು ಗಣಿಸಿದ ನಂತರ, ಲಾಭದ ಹೆಚ್ಚಿನ ಭಾಗವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಲಾಗುತ್ತದೆ. ಈ ಕೆಳಗಿನ ಮಾಹಿತಿಯನ್ನು ಗಮನಿಸಬಹುದು.

ರಿಸರ್ವ್ ಬ್ಯಾಂಕ್‌ನಿಂದ ಕೇಂದ್ರ ಸರಕಾರಕ್ಕೆ ನಿರಂತರವಾಗಿ ಆದಾಯ ವರ್ಗಾವಣೆಯಾಗುತ್ತಿರುವುದು ಸಾಬೀತಾಗುತ್ತದೆ.
ರಿಸರ್ವ್ ಬ್ಯಾಂಕ್ ಚಿನ್ನದ ಮೊಟ್ಟೆ ಕೊಡುವಂತಹ ಬಾತುಕೋಳಿ. ವರ್ಷಕ್ಕೆ ಒಂದು ಚಿನ್ನದ ಮೊಟ್ಟೆ ಬದಲು ಅದರ ಹೊಟ್ಟೆಯನ್ನು ಸೀಳಿದರೆ ಅನೇಕ ಚಿನ್ನದ ಮೊಟ್ಟೆಗಳು ಒಮ್ಮೆಲೇ ಸಿಗುವುದು ಎಂಬ ದುರಾಲೋಚನೆ ಕೇಂದ್ರ ಸರಕಾರಕ್ಕೆ ಇರಬಹುದು! ರಿಸರ್ವ್ ಬ್ಯಾಂಕ್‌ನ ಕ್ಯಾಪಿಟಲ್ ರಿಸರ್ವ್ ಮೇಲೆ ಇದೇ ಕಾರಣಕ್ಕೆ ಸರಕಾರದ ಕಣ್ಣು ಬಿದ್ದಿರಬಹುದು.
contingency fund ಕ್ಯಾಪಿಟಲ್ ರಿಸರ್ವ್ ಅನ್ನುವುದು ಯಾವುದೇ ಸಂಸ್ಥೆಯ ಸಾದಿಲ್ವಾರು ನಿಧಿ ಅಂದರೆ ಕೂಡ ಆಗಿರುತ್ತದೆ. ಒಂದು ಅನಿಶ್ಚಯ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಶೇಖರಿಸಿಟ್ಟಿರುವ ಆಪತ್ ನಿಧಿ. ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಮೂರ್ಖತನವಾಗುತ್ತದೆ. ರಿಸರ್ವ್ ಬ್ಯಾಂಕ್ ಕ್ಯಾಪಿಟಲ್ ರಿಸರ್ವ್ ನಿಧಿಗೂ ಇದೇ ಅನ್ವಯವಾಗುತ್ತದೆ.
ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಬಿಮಲ್ ಜಲಾನ್‌ರವರ ಅಧ್ಯಕ್ಷತೆಯಲ್ಲಿ ಜಂಟಿ ಸಮಿತಿಯೊಂದನ್ನು ರಚಿಸಿವೆ. ಜಂಟಿ ಸಮಿತಿಯ ಮುಂದೆ ಇಟ್ಟಿರುವ ವಿಷಯವೇನೆಂದರೆ - ರಿಸರ್ವ್ ಬ್ಯಾಂಕ್‌ನ ಕ್ಯಾಪಿಟಲ್ ರಿಸರ್ವ್‌ನಿಂದ ಎಷ್ಟು ಹಣವನ್ನು ಕೇಂದ್ರ ಸರಕಾರದೊಂದಿಗೆ ಹಂಚಿಕೊಳ್ಳಬಹುದು ಅಥವಾ ಎಷ್ಟು ಪಾಲು ಹಣವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಬೇಕು ಎಂಬುದು. ಜಂಟೀ ಸಮಿತಿಯು ಮೂರು ತಿಂಗಳಲ್ಲಿ ತನ್ನ ವರದಿಯನ್ನು ನೀಡುವ ನಿರೀಕ್ಷೆಯಿದೆ.
ಈಗ ಚೀಲದಿಂದ ಬೆಕ್ಕು ಹೊರಬಂದಿದೆ. ಕ್ಯಾಪಿಟಲ್ ರಿಸರ್ವ್ ನಿಧಿಯನ್ನು ಹಂಚಿಕೊಳ್ಳುವುದರ ಬಗ್ಗೆ ಕೇಂದ್ರ ಸರಕಾರಕ್ಕೂ ರಿಸರ್ವ್ ಬ್ಯಾಂಕಿಗೂ ಸಹಮತ ಏರ್ಪಟ್ಟಿದೆಯಂದು ನಾವು ಊಹಿಸಬಹುದೆ?! ಜಂಟಿ ಸಮಿತಿಯ ಮುಂದೆ ಇರುವ ವಿಚಾರ, ರಿಸರ್ವ್ ನಿಧಿಯನ್ನು ಯಾವ ಲೆಕ್ಕಾಚಾರದಲ್ಲಿ ಹಂಚಿಕೊಳ್ಳಬೇಕು ಎಂದು ತೀರ್ಮಾನಿಸಿ ವರದಿಯಲ್ಲಿ ಶಿಪಾರಸು ಮಾಡುವುದಷ್ಟೇ! ಶಕ್ತಿಕಾಂತ ದಾಸ್‌ರವರು ತಮ್ಮ ಋಣ ತೀರಿಸುತ್ತಿದ್ದಾರೆ.
ಕೇಂದ್ರ ಸರಕಾರ ತನ್ನ ಆದೇಶಗಳನ್ನು ರಿಸರ್ವ್ ಬ್ಯಾಂಕ್ ಶಿರಸಾ ವಹಿಸಿ ಪಾಲಿಸಬೇಕು. ತಪ್ಪಿದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆ್ಯಕ್ಟ್, 1934, ಸೆಕ್ಷನ್ 7ರ ಅಡಿ ಆಜ್ಞೆ ಹೊರಡಿಸುವುದಾಗಿ ಸೂಚಿಸಿದೆ. ರಿಸರ್ವ್ ಬ್ಯಾಂಕ್ ಇತಿಹಾಸದಲ್ಲಿ ಈ 83 ವರ್ಷಗಳಲ್ಲಿ ಇಲ್ಲಿಯವರೆಗೂ ಯಾವ ಸರಕಾರವೂ ಈ ರೀತಿಯ ಬೆದರಿಕೆಯನ್ನು ವ್ಯಕ್ತಪಡಿಸಿರಲಿಲ್ಲ. ಎರಡನೆಯ ವಿಚಾರ, ರಿಸರ್ವ್ ಬ್ಯಾಂಕ್ ಅದರ ಬೋರ್ಡ್ ಆಫ್ ಡೈರೆಕ್ಟರ್ಸ್‌ನ ತೀರ್ಮಾನಗಳಂತೆ ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಸರಕಾರ ಉಪದೇಶ ನೀಡಿದೆ. ಬೋರ್ಡ್‌ನಲ್ಲಿ ಹೆಚ್ಚಿನ ಡೈರೆಕ್ಟರ್‌ಗಳು ಕೇಂದ್ರ ಸರಕಾರದ ವಿತ್ತ ಮಂತ್ರಾಲಯದ ಅಧಿಕಾರಿಗಳು ಮತ್ತು ಸರಕಾರದಿಂದ ನೇಮಕಗೊಂಡ ಇತರ ಅಧಿಕಾರಿಗಳೇ ಆಗಿರುತ್ತಾರೆ. ಸರಕಾರ ಬೋರ್ಡ್ ಮೂಲಕ ರಿಸರ್ವ್ ಬ್ಯಾಂಕ್‌ನಲ್ಲಿ ಗೊಂಬೆಯಾಟ ಆಡುವ ಯೋಚನೆ ಇಟ್ಟುಕೊಂಡಿದೆ.
ಕೇಂದ್ರ ಸರಕಾರ ಹೆಚ್ಚು ಹೆಚ್ಚು ಹಣವನ್ನು ರಿಸರ್ವ್ ಬ್ಯಾಂಕ್‌ನಿಂದ ಅಪೇಕ್ಷಿಸಿದಾಗ, ಅದರ ಸೀನಿಯರ್ ಡೆಪ್ಯುಟಿ ಗವರ್ನರ್ ಎನ್.ಎಸ್. ವಿಶ್ವನಾಥನ್ ನೀಡಿದ ಹೇಳಿಕೆ ಇದು:
‘‘ಬ್ಯಾಂಕುಗಳಲ್ಲಿ ಅಂಕಲ್ ಸ್ಕ್ರ್ರೂಜ್ (uncle scrooge) ಬಳಿ ಇರುವಂತೆ ಬಹು ದೊಡ್ಡ ಹಣದ ಭಂಡಾರವಿದೆ ಅಂದು ತಿಳಿಯಬಾರದು. ಬ್ಯಾಂಕುಗಳಲ್ಲಿ ಇರುವ ಹಣ ಸಾಮಾನ್ಯ ಪ್ರಜೆಗಳ ಠೇವಣಿ. ಅದು ಜನರಿಗೇ ಸೇರುವಂತಹದ್ದು. ಅದರಿಂದಲೇ ಸಾಲಗಳನ್ನು ನೀಡುವುದು.’’
(ಅಂಕಲ್ ಸ್ಕ್ರೂಜ್ ವಾಲ್ಟ್ ಡಿಸ್ನಿಯ ಡೊನಾಲ್ಡ್ ಡಕ್ ಕಾರ್ಟೂನ್‌ನಲ್ಲಿ ಬರುವಂತಹ ಒಂದು ಪಾತ್ರ. ಅದು ಆಗರ್ಭ ಶ್ರೀಮಂತ.)


ಈ ಹೇಳಿಕೆಯಲ್ಲಿ ‘‘ಜನ ಸಾಮಾನ್ಯರ ಹಣ ಜನಸಾಮಾನ್ಯರ ಕಲ್ಯಾಣಕ್ಕೆ’’ ಎಂಬುದು ವೇದ್ಯವಾಗುತ್ತದೆ.
ಇನ್ನೊಬ್ಬ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯರವರು ಇನ್ನೂ ತೀಕ್ಷ್ಣ್ಣವಾಗಿ ಪ್ರತಿಕ್ರಿಯಿಸಿದ್ದರು. ‘‘ಯಾವ ಸರಕಾರ ರಿಸರ್ವ್ ಬ್ಯಾಂಕ್‌ನ ಸ್ವಯಮಾಧಿಪತ್ಯವನ್ನು ಗೌರವಿಸು ವುದಿಲ್ಲವೋ, ಆ ಸರಕಾರ ಮಾಡುವ ಕೆಲಸ, ಶೀಘ್ರವಾಗಿ ದೇಶದ ಹಣಕಾಸಿನ ಪರಿಸ್ಥಿತಿಗೆ ಬೆಂಕಿ ಸ್ಪರ್ಶ ಮಾಡುವ ಕೆಲಸಕ್ಕೆ ಸಮ! ಅದರ ಪರಿಣಾಮ ಅತ್ಯಂತ ಭೀಕರವಾಗಿದ್ದು, ಒಂದು ಅತಿ ಮುಖ್ಯವಾದ ಸ್ವಾಯತ್ತ ನಿಯಂತ್ರಕ ಸಂಸ್ಥೆಯನ್ನು ದಳ್ಳುರಿಗೆ ನೂಕಿದ, ಆ ಸಂಸ್ಥೆಯನ್ನು ಕಡೆಗಾಣಿಸಿದ ದಿನದ ಬಗ್ಗೆ ಪಶ್ಚಾತ್ತಾಪವನ್ನು ಅನುಭವಿಸಬೇಕಾಗುತ್ತದೆ.’’ ಇದು ವಿರಲ್ ಆಚಾರ್ಯರವರು ಹೇಳಿದ ಮಾತುಗಳು. ಆದರೆ, ಕೇಂದ್ರ ಸರಕಾರ ಎಡಬಿಡದ ತಿವಿಕ್ರಮನ ಹಾಗೆ ರಿಸರ್ವ್ ಬ್ಯಾಂಕ್‌ನ ಮೇಲೆ ತನ್ನ ದೌರ್ಜನ್ಯವನ್ನು ಮುಂದುವರಿಸಿತು. ಪರಿಣಾಮ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ತನ್ನ ಪದವಿಗೆ ಡಿಸೆಂಬರ್ 10ರಂದು ತ್ಯಾಗಪತ್ರ ನೀಡಿದರು. ಡ್ರಾಮಾ ಒಂದು ಸಂದಿಗ್ಧ ಪರಿಸ್ಥಿತಿ ತಲುಪಿತು. ಐಎಮ್‌ಎಫ್‌ನ ಚೀಫ್ ಎಕಾನಿಮಿಸ್ಟ್ ಆದ ಮಾರಿಸ್ ಒಬ್ಸೆಪಿಲ್ಡ್‌ರವರು ಈ ಸಂದರ್ಭದಲ್ಲಿ ‘‘ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸೆಂಟ್ರಲ್ ಬ್ಯಾಂಕ್‌ನಲ್ಲಿ ಕೈಚಳಕ ಮಾಡುವುದನ್ನು ಒಪ್ಪಲಾಗುವುದಿಲ್ಲ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಊರ್ಜಿತ್ ಪಟೇಲರ ರಾಜೀನಾಮೆ ಹಣಕಾಸಿನ ವಲಯದಲ್ಲಿ, ದೇಶದ ರಾಜಕೀಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿದೆ. ಊರ್ಜಿತ್ ಪಟೇಲರ ವೌನವೇ ಪುಟಗಟ್ಟಲೇ ಮಾತನಾಡುತ್ತವೆ. ಅವರ ರಾಜೀನಾಮೆಯಲ್ಲಿ ಏನೂ ಸ್ವಯಂ ಕಾರಣವಿಲ್ಲ. ಭಾಜಪದ ಅಧಿಕಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಯಾವ ಗತಿಗೆ, ಯಾವ ದುಸ್ಥಿತಿಗೆ ಒಳಗಾಗಿದೆ ಎಂಬುದರ ಸರ್ಟಿಫಿಕೇಟ್ ಊರ್ಜಿತ್ ಪಟೇಲರ ರಾಜೀನಾಮೆ ಪತ್ರ.
ಪೀಡೆ ತೊಲಗಿತು ಅನ್ನುವ ರೀತಿ, ಭಾಜಪ ಸರಕಾರ ತಕ್ಷಣ ಮೋದಿಯವರ ಆಪ್ತರಾದ ಶಕ್ತಿಕಾಂತ ದಾಸ್‌ರವರನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಿಸಿದೆ. ದೇಶದ ಆರ್ಥಿಕ ಪರಿಸ್ಥಿತಿ ಈಗಾಗಲೇ ಅಧೋಗತಿಯಲ್ಲಿದೆ. ಇನ್ನೇನು ವಿಪತ್ತುಗಳು ಕಾದಿದೆಯೋ ಏನೋ, ಕಾದು ನೋಡಬೇಕು. ಸಾರ್ವಜನಿಕ ಕ್ಷೇತ್ರದ ಹಣಕಾಸಿನ ವಲಯದ ಮೇಲಿನ ಈ ಪ್ರಹಾರ ದೇಶದ ಆರ್ಥಿಕ ಸ್ವಾವಲಂಬನೆಗೆ ಕೊಡಲಿ ಪೆಟ್ಟು. ಗಂಭೀರ ಚಿಂತನೆ ಅಗತ್ಯ.
ಊರ್ಜಿತ್ ಪಟೇಲ್‌ರವರ ಅಧಿಕಾರದಲ್ಲಿ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಕಡೆಯ ಆರ್ಥಿಕ ಸಮೀಕ್ಷೆಯ ವರದಿ:
‘‘2019ರಲ್ಲಿ ದೇಶದ ಪರಿಸ್ಥಿತಿ ಕರಾಳವಾಗಿರುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರ, ವಾಸ್ತವ್ಯ ಮತ್ತು ಸೇವೆಗಳ ಬೆಲೆಗಳು ಗಗನ ಮುಟ್ಟುವವು. ಯುವ ಜನತೆಗೆ ಉದ್ಯೋಗಗಳು ದುರ್ಲಭವಾಗುವುದು.’’ ರಿಸರ್ವ್ ಬ್ಯಾಂಕ್‌ನ ಈ ವರದಿ ದೇಶದ ಾರ್ಲಿಮೆಂಟ್ ಚುನಾವಣೆಯ ಕೇವಲ ಐದು ತಿಂಗಳ ಹಿಂದೆ ಪ್ರಕಟಿತ. ಕೇಂದ್ರ ಸರಕಾರದ್ದೆ ಆದ ನೀತಿ ಆಯೋಗದ ಇತ್ತೀಚಿನ ಕೆಲವು ಹೇಳಿಕೆಗಳೂ ಸಹ ಆತಂಕವನ್ನೇ ಉಂಟು ಮಾಡುತ್ತವೆ. ಇದಿ ಅಮೀನ್‌ನ ಒಂದು ಮಾತು ಜ್ಞಾಪಕಕ್ಕೆ ಬರುತ್ತದೆ.
‘‘ವಾಕ್ ಸ್ವಾತಂತ್ರವಿದೆ. ಆದರೆ ಮುಕ್ತವಾಗಿ ಮಾತನಾಡಿದ ಬಳಿಕ ನಿಮಗೆ ಸ್ವಾತಂತ್ರವಿದೆ ಎಂದು ನಾನು ಗ್ಯಾರಂಟಿ ನೀಡುವುದಿಲ್ಲ !’’
ಈ ಮಾತುಗಳು ಇಂದಿನ ದಿಲ್ಲಿಯ ಸರ್ವಾಧಿಕಾರಿಗೆ ಅನ್ವಯವಾಗುತ್ತವೆ.

 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ನ. ಸುಂದರಮೂರ್ತಿ
ನ. ಸುಂದರಮೂರ್ತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X