Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ದತ್ತಾಂಶಗಳಿಗೇ ಕುತ್ತೊದಗಿದೆಯೇ?

ದತ್ತಾಂಶಗಳಿಗೇ ಕುತ್ತೊದಗಿದೆಯೇ?

ಅಧಿಕೃತ ದತ್ತಾಂಶಗಳ ವಿಶ್ವಾಸಾರ್ಹತೆಯನ್ನು ಖಾತರಿ ಮಾಡಲು ಅಂಕಿಅಂಶ ಸಂಸ್ಥೆಗಳು ಸ್ವಾಯತ್ತವಾಗಿರಬೇಕಾದ್ದು ಅನಿವಾರ್ಯ.

ಅನು: ಶಿವಸುಂದರ್ಅನು: ಶಿವಸುಂದರ್13 Feb 2019 6:32 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ದತ್ತಾಂಶಗಳಿಗೇ ಕುತ್ತೊದಗಿದೆಯೇ?

ನ್ಯಾಷನಲ್ ಸ್ಟಾಟಿಸ್ಟಿಕಲ್ ಕಮಿಷನ್ (ಎನ್‌ಎಸ್‌ಸಿ)-ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಇಬ್ಬರು ಸ್ವತಂತ್ರ ಸದಸ್ಯರು ಎನ್‌ಎಸ್‌ಸಿಗೆ ನೀಡಿರುವ ರಾಜೀನಾಮೆಯು ಭಾರತದಲ್ಲಿ ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತೆಯ ಪ್ರಶ್ನೆಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ವಿಶ್ವಾಸಾರ್ಹ ಅಧಿಕೃತ ಅಂಕಿಅಂಶಗಳನ್ನು ತಯಾರು ಮಾಡುವುದರ ಜೊತೆಗೆ ಅವನ್ನು ಸಾರ್ವಜನಿಕರಿಗೂ ಎಟಕುವಂತೆ ಮಾಡುವ ಉದ್ದೇಶದಿಂದಲೇ ಈ ಎನ್‌ಎಸ್‌ಸಿಯನ್ನು 2006ರಲ್ಲಿ ರಚಿಸಲಾಯಿತು. ಆದರೆ ತಮ್ಮ ಪದವಿಗಳಿಗೆ ರಾಜೀನಾಮೆ ಕೊಟ್ಟ ಸದಸ್ಯರ ಪ್ರಕಾರ ಆ ಮೂಲಭೂತ ಉದ್ದೇಶವನ್ನು ಆಯೋಗವು ಪೂರೈಸುತ್ತಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್‌ಎಸ್‌ಎಸ್‌ಒ-ರಾಷ್ಟ್ರೀಯ ಮಾದರಿ ಮೂಲಗಳ ಸರ್ವೇ ಕಚೇರಿ)ಯು 2017-18ರ ಸಾಲಿನಲ್ಲಿ ನಡೆಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ(ಪಿಎಲ್‌ಎಫ್‌ಎಸ್)- ನಿಯಮಿತ ಕಾಲಾಂತರದಲ್ಲಿ ನಡೆಸುವ ಶ್ರಮಶಕ್ತಿ ಸರ್ವೇಯ ವರದಿಗೆ ಎನ್‌ಎಸ್‌ಸಿಯು 2018ರ ಡಿಸೆಂಬರ್‌ನಲ್ಲೇ ಅನುಮತಿ ನೀಡಿದ್ದರೂ ಸರಕಾರವು (ನೀತಿ ಆಯೋಗವು) ಅದನ್ನು ಬಿಡುಗಡೆ ಮಾಡಲಿಲ್ಲ. ನೀತಿ ಆಯೋಗವು ತಮ್ಮ ಸಂಸ್ಥೆಯ ಜೊತೆ ಯಾವುದೇ ಸಮಾಲೋಚನೆಯನ್ನೂ ಮಾಡದೆ ಇಂತಹ ಮಹತ್ವದ ಸಂಸ್ಥೆಯನ್ನೇ ಮೂಲೆಗುಂಪು ಮಾಡಿರುವ ಬಗ್ಗೆಯೂ ರಾಜೀನಾಮೆ ನೀಡಿದ ಸದಸ್ಯರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ನೀತಿ ಆಯೋಗವು ಎನ್‌ಎಸ್‌ಸಿಯ ಸಾಮರ್ಥ್ಯ ಮತ್ತು ಸ್ವಾಯತ್ತೆಯನ್ನು ಕಡೆಗಣಿಸುತ್ತಿರುವುದು ಇದೇ ಮೊದಲಲ್ಲ. ನೀತಿ ಆಯೋಗ ಮತ್ತು ಕೇಂದ್ರೀಯ ಅಂಕಿಅಂಶ ಕಚೇರಿಯು, 2018ರಲ್ಲಿ, ಹಿಂದಿನ ವರ್ಷಗಳ ರಾಷ್ಟ್ರಿಯ ಅಭಿವೃದ್ಧಿ ದರವನ್ನು (ಜಿಡಿಪಿ) 2011-12ನ್ನು ಮೂಲಾಧಾರವಾಗಿಟ್ಟುಕೊಂಡು ಪರಿಷ್ಕರಿಸಿದ ಸಂದರ್ಭದಲ್ಲೂ, ಅಂಕಿಅಂಶ ಆಯೋಗವನ್ನು ಪಕ್ಕಕ್ಕೆ ಸರಿಸಿ ಹೊಸ ದರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದವು. ನೀತಿ ಆಯೋಗವು ತನ್ನದೇ ಉಪಸಮಿತಿ ನೀಡಿದ ವರದಿಗಳನ್ನೇ ತಲೆಕೆಳಗು ಮಾಡಿ ಹಾಲಿ ಸರಕಾರದ ಸಾಧನೆ ಹಿಂದಿನ ಸರಕಾರಗಳಿಗಿಂತ ಉತ್ತಮವಾಗಿತ್ತು ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಅದರಲ್ಲಿ ನೀಡಲಾಗಿದ್ದ ಅಂಕಿಅಂಶಗಳು ಎನ್‌ಎಸ್‌ಸಿ ನೀಡಿದ್ದ ವರದಿಗಿಂತ ಸಾಕಷ್ಟು ಭಿನ್ನವಾಗಿತ್ತು. ಹೀಗೆ ಅಧಿಕೃತ ಅಂಕಿಅಂಶಗಳನ್ನು ತಿದ್ದಲು ಪ್ರಯತ್ನಿಸುತ್ತಿರುವ ನೀತಿ ಆಯೋಗ ಮತ್ತು ಸಿಎಸ್‌ಒಗಳ ನಡೆಗಳು ಪರಿಣಿತರಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿತ್ತು.
ಎನ್‌ಎಸ್‌ಎಸ್‌ಒದ ಹಾಲಿ ವರದಿಯ ವಿಷಯಕ್ಕೆ ಬರುವುದಾದರೆ, ಅದು ನೋಟು ರದ್ದತಿ ಮತ್ತು ಜಿಎಸ್‌ಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ದೇಶದ ಔದ್ಯೋಗಿಕ ಪರಸರದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಒದಗಿಸುತ್ತಿತ್ತು. ಆದ್ದರಿಂದಲೇ ಆ ವರದಿಯ ಬಿಡುಗಡೆಯು ಬಹುಮಹತ್ವದ ವಿಷಯವಾಗಿತ್ತು. ಆ ವರದಿಯು ಬಹುನಿರೀಕ್ಷಿತವಾದ ಮನೆಮಾರು ಸರ್ವೇಯನ್ನಾಧರಿಸಿದ್ದರೂ ಸರಕಾರ ಅದರ ಬಿಡುಗಡೆಯನ್ನು ಏಕೆ ತಡೆಹಿಡಿಯಿತು? ಆ ವರದಿಯು ದೇಶದ ಔದ್ಯೋಗಿಕ ವಾತಾವರಣದ ಬಗ್ಗೆ ಸರಕಾರದ ಹೆಗ್ಗಳಿಕೆಗೆ ತದ್ವಿರುದ್ಧವಾಗಿ ಅತ್ಯಂತ ನಿರಾಶಾದಾಯಕ ಚಿತ್ರಣವನ್ನು ನೀಡುತ್ತಿದ್ದರಿಂದಲೇ ಆ ವರದಿಯ ಬಿಡುಗಡೆಯನ್ನು ತಡೆಹಿಡಿಯಲಾಯಿತೆಂದು ವ್ಯಾಪಕವಾಗಿ ಭಾವಿಸಲಾಗಿದೆ.
ಆದರೆ ನಂತರದಲ್ಲಿ ಎನ್‌ಎಸ್‌ಎಸ್‌ಒನ ವರದಿಯ ಅಂಶಗಳು ಮಾಧ್ಯಮದಲ್ಲಿ ಸೋರಿಕೆಯಾಗಿದ್ದು ದೇಶವು ಎದುರಿಸುತ್ತಿರುವ ಉದ್ಯೋಗ ಬಿಕ್ಕಟ್ಟು ಎಷ್ಟು ತೀವ್ರವಾಗಿದೆಯೆಂಬುದನ್ನು ಸೂಚಿಸುತ್ತಿದೆ. ಸೋರಿಕೆಯಾದ ವರದಿ ಪ್ರಕಾರ 2017-18ರಲ್ಲಿ ನಿರುದ್ಯೋಗ ದರವು ಸಾಧಾರಣ ಕಾಲಾವಧಿಯಲ್ಲಿ ಶೇ.6.1ರಷ್ಟಿದ್ದರೆ ಹಾಲಿ ವಾರವಾರು ಸ್ಥಿತಿಗತಿ (ಕರೆಂಟ್ ವೀಕ್ಲಿ ಸ್ಟೇಟಸ್-ಸಿಡಬ್ಲೂಎಸ್)ಯ ಲೆಕ್ಕಾಚಾರದಲ್ಲಿ ನಿರುದ್ಯೋಗದ ಪ್ರಮಾಣ ಶೇ. 8.9ರಷ್ಟು ಪ್ರಮಾಣದಲ್ಲಿದ್ದು ಗಾಬರಿ ಹುಟ್ಟಿಸುವಂತಿದೆ. ನಗರ ಪ್ರದೇಶದಲ್ಲಿ ಈ ಎರಡು ಬಗೆಯ ನಿರುದ್ಯೋಗ ದರಗಳು ಅನುಕ್ರಮವಾಗಿ ಶೇ.7.8 ಮತ್ತು ಶೇ.9.6ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.5.3 ಮತ್ತು ಶೇ.8.5ರಷ್ಟಿತ್ತು. ಅಷ್ಟು ಮಾತ್ರವಲ್ಲ 15-29ರ ವಯೋಗುಂಪಿನ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಇನ್ನೂ ಹೆಚ್ಚಿತ್ತು. ಆದರೆ ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ರೇಟ್ (ಎಲ್‌ಎಫ್‌ಪಿಆರ್)- ಶ್ರಮಶಕ್ತಿ ಭಾಗೀದಾರಿಕೆಯ ದರ ಶೇ.36.9ಕ್ಕಿಳಿದಿದ್ದು ಹೆಚ್ಚೆಚ್ಚು ಶ್ರಮಿಕರು ಅದರಲ್ಲೂ ಮಹಿಳೆಯರು ಶ್ರಮಿಕ ಪಡೆಯಿಂದ ಹಿಂದೆ ಸರಿಯುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಅಭಿವೃದ್ಧಿಶೀಲ ದೇಶವಾಗಿರುವುದರ ಜೊತೆಗೆ ಅಧಿಕ ಯುವಜನಸಂಖ್ಯಾ ಲಾಭವನ್ನು ಹೊಂದಿರುವ ದೇಶವಾಗಿರುವ ಭಾರತದಲ್ಲಿ ಹೆಚ್ಚು ನಿರುದ್ಯೋಗ ದರ ಮತ್ತು ಅದರ ಜೊತೆಗೆ ಕಡಿಮೆ ಎಲ್‌ಎಫ್‌ಪಿಆರ್ ದರಗಳಿರುವುದು ಒಳ್ಳೆಯ ಲಕ್ಷಣವಲ್ಲ.

ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಾರೂಢ ಎನ್‌ಡಿಎ ಸರಕಾರವು ಸದರಿ ವರದಿಯು ಕೇವಲ ಒಂದು ಕರಡು ಸ್ವರೂಪದ್ದೆಂದು ಪ್ರತಿಪಾದಿಸುವ ಮೂಲಕ ರಾಜೀನಾಮೆ ನೀಡಿದ ಸದಸ್ಯರ ಕಾಳಜಿಗಳನ್ನು ತಳ್ಳಿಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಎನ್‌ಎಸ್‌ಎಸ್‌ಒ ನೀಡಿರುವ ವರದಿ ಕರಡು ಸ್ವರೂಪದ್ದೇ ಆಗಿರಬಹುದು; ಆದರೆ ಒಂದೊಮ್ಮೆ ಆ ವರದಿಯು ಪ್ರಕಟವಾದರೆ ದೇಶದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಬಿಕ್ಕಟ್ಟಿನ ಚಿತ್ರಣವನ್ನು ಕೊಡುವುದಂತೂ ಸತ್ಯ. ಅದು ಉದ್ಯೋಗ ಸೃಷ್ಟಿಯು ಹೆಚ್ಚಾಗಿದೆಯೆಂಬ ಬಗ್ಗೆ ಎನ್‌ಡಿಎ ಸರಕಾರವು ಸದನದಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾಡುತ್ತಿರುವ ಪ್ರತಿಪಾದನೆಗಳನ್ನು ಸುಳ್ಳೆಂದು ಸಮರ್ಥವಾಗಿ ಸಾಬೀತು ಮಾಡಲು ವಿರೋಧಪಕ್ಷಗಳಿಗೆ ಬಲವನ್ನು ತುಂಬುತ್ತದೆ. ಹಾಗೆಯೇ 2014ರ ಚುನಾವಣೆಯ ಸಂದರ್ಭದಲ್ಲಿ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವ ಬಗ್ಗೆ ಎನ್‌ಡಿಎ ಕೊಟ್ಟಿದ್ದ ಭರವಸೆಯನ್ನು ಮರೆಯದಿರೋಣ. ಇದರ ಜೊತೆಗೆ ಈ ವರದಿಯು ಪ್ರಕಟಗೊಂಡರೆ ದೇಶದ ಹಾಲಿ ನಿರುದ್ಯೋಗ ಪರಿಸ್ಥಿತಿ ಕಳೆದ 45 ವರ್ಷಗಳಲ್ಲೇ ಅತ್ಯಂತ ಹೀನಾಯವಾಗಿದೆಯೆಂಬುದನ್ನು ಸಹ ಸಾಬೀತುಪಡಿಸುತ್ತದೆ. ಹೀಗಾಗಿ ಈ ವರದಿಯನ್ನು ಬಿಡುಗಡೆ ಮಾಡಿದರೆ ತನ್ನ ಗೋರಿಯನ್ನು ತಾನೇ ತೋಡಿಕೊಂಡಂತೆ ಎನ್ನುವುದು ದಿಲ್ಲಿಯಲ್ಲಿರುವ ಸರಕಾರಕ್ಕೆ ತಿಳಿದಿದೆ. ಅದರಲ್ಲೂ ಚುನಾವಣೆ ಸನಿಹದಲ್ಲಿರುವಾಗ ಇಂತಹ ಒಂದು ವರದಿಯು ಬಿಡುಗಡೆಯಾಗುವುದು ವಿನಾಶಕಾರಿ ಎಂಬುದೂ ಅದಕ್ಕೆ ಗೊತ್ತಿದೆ. ನಿರುದ್ಯೋಗದ ಬಗೆಗಿನ ಈ ವರದಿ ಮತ್ತು ಅಂಕಿಅಂಶಗಳು ಬಿಡುಗಡೆಯಾಗುವುದು ಮೌಲಿಕ ರಾಜಕೀಯ ಮತ್ತು ಸದೃಢ ಆರ್ಥಿಕ ವಿಶ್ಲೇಷಣೆಯ ಮೌಲಿಕ ಮೌಲ್ಯಮಾಪನಗಳ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಅಂತಹ ಮಾಹಿತಿಪೂರ್ಣ ಅಂಕಿಅಂಶಗಳು ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾದ ನೀತಿಗಳನ್ನು ರೂಪಿಸಲು ಸಹಕರಿಸುತ್ತವೆ. ಅಷ್ಟು ಮಾತ್ರವಲ್ಲದೆ ಅದು ಹೂಡಿಕೆದಾರರು ಮತ್ತು ವ್ಯವಹಾರೋದ್ಯಮಿಗಳು ತಮ್ಮ ವ್ಯಾವಹಾರಿಕ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಹಾಯ ಮಾಡುತ್ತದೆ. ಅದೇನೇ ಇದ್ದರೂ ನಡೆದುಕೊಂಡು ಬಂದ ರೀತಿರಿವಾಜುಗಳನ್ನು ಬದಿಗೆ ಸರಿಸುವ ಮೂಲಕ ಮತ್ತು ಎನ್‌ಎಸ್‌ಸಿಯನ್ನು ಮೂಲೆಗುಂಪು ಮಾಡುವ ಮೂಲಕ ನೀತಿ ಆಯೋಗವು ಅಂಕಿಅಂಶ ಸಂಸ್ಥೆಯ ಸ್ವಾಯತ್ತೆಯನ್ನು ಆಲಕ್ಷಿಸಿದೆ ಮತ್ತು ಆ ಮೂಲಕ ಅಧಿಕೃತ ಅಂಕಿಅಂಶಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ಕೃಪೆ: Economic and Political Weekly 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಅನು: ಶಿವಸುಂದರ್
ಅನು: ಶಿವಸುಂದರ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X