Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಒಂದು ಭಿನ್ನ ಕ್ರಿಶ್ಚಿಯನ್ ಧ್ವನಿ ಪ್ರೊ....

ಒಂದು ಭಿನ್ನ ಕ್ರಿಶ್ಚಿಯನ್ ಧ್ವನಿ ಪ್ರೊ. ಮ್ಯಾಥ್ಯೂ ಸಿ. ನೈನನ್

ಡಾ. ಬಿ. ಭಾಸ್ಕರ ರಾವ್ಡಾ. ಬಿ. ಭಾಸ್ಕರ ರಾವ್16 Feb 2019 6:45 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಒಂದು ಭಿನ್ನ ಕ್ರಿಶ್ಚಿಯನ್ ಧ್ವನಿ ಪ್ರೊ. ಮ್ಯಾಥ್ಯೂ ಸಿ. ನೈನನ್

ಓರ್ವ ಪ್ರಾಮಾಣಿಕ, ಆಸ್ತಿಕ ಕ್ರಿಶ್ಚಿಯನ್ ಆಗಿ ಪ್ರೊ. ನೈನನ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ, ಸಾವಿರಾರು ವಿದ್ಯಾರ್ಥಿಗಳ ಹಾಗೂ ಪೋಷಕರ ಓರ್ವ ಸಮಾಲೋಚಕನಂತೆ ಅವರು ಚರ್ಚ್ ಕುರಿತು ಮಾಡಿರುವ ಧನಾತ್ಮಕ ವಿಮರ್ಶೆಗೆ ಆಸ್ತಿಕ ಹಾಗೂ ಪ್ರಗತಿಪರ ಕ್ರಿಶ್ಚಿಯನ್ ಸಮುದಾಯ ಕಿವಿಕೊಡಬೇಕಾಗಿದೆ. ಯಾಕೆಂದರೆ ಇದು ಆ ಸಮುದಾಯದ ಸಾರ್ವಜನಿಕ ಬದುಕಿನಲ್ಲಿ, ಶೈಕ್ಷಣಿಕ ರಂಗದಲ್ಲಿ, ಸಾಮಾಜಿಕ ರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಓರ್ವ ಭಿನ್ನಮತೀಯ ಕ್ರಿಶ್ಚಿಯನ್ ಅಭಿವ್ಯಕ್ತಿಸಿರುವ ವೌಲಿಕವಾದ ವಿಮರ್ಶೆಯಾಗಿದೆ.

ವಿವಾದಾಸ್ಪದವಾಗಬಹುದಾದ ಯಾವುದೇ ವಿಷಯದ ಬಗ್ಗೆ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯವೊಂದರ ಧರ್ಮದ ಬಗ್ಗೆ, ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಜ್ಞಾವಂತರು, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿರುವವರು ಹಿಂಜರಿಯುವ ಅಥವಾ ಹೆದರುವ ವಾತಾವರಣವಿರುವಾಗ ಒಮ್ಮಾಮ್ಮೆ ಅನಿರೀಕ್ಷಿತ ದಿಕ್ಕುಗಳಿಂದ ಅರ್ಥಪೂರ್ಣವಾದ, ಜಾತ್ಯತೀತವಾದ ಭಿನ್ನಧ್ವನಿಗಳು ಕೇಳಿಬರುತ್ತವೆ. ಅಂತಹ ಒಂದು ಧ್ವನಿ ಕೇಳಿಬಂದಾಗ ಅನಿರೀಕ್ಷಿತವಾಗಿ ಹಳೆಯ ಗೆಳೆಯನೊಬ್ಬನನ್ನು ಭೇಟಿಯಾದ ಖುಶಿಯಾಗುತ್ತದೆ.

ಕರಾವಳಿ ಕರ್ನಾಟಕದಲ್ಲಿ ಮನೆಮಾತಾಗಿರುವ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ. ನೈನನ್ ಇತ್ತೀಚೆಗೆ ಹೀಗೆ ಕೇಳಿಬಂದ ಪುರೋಗಾಮಿ, ಹಾಗೂ ನೇರನುಡಿಯ ಒಂದು ಭಿನ್ನ ಕ್ರಿಶ್ಚಿಯನ್ ಧ್ವನಿ. ಈ ಧ್ವನಿ ಯಾಕೆ ಮುಖ್ಯವಾಗುತ್ತದೆಂದರೆ ಪ್ರೊ. ನೈನನ್ ಮೂವತ್ತು ಎಕರೆ ವಿಸ್ತಾರದ ಹಾಗೂ 3,500 ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಒಂದು ಬೃಹತ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು.
ಓರ್ವ ಶಿಕ್ಷಣತಜ್ಞ ಸಮಕಾಲೀನ ಕ್ರಿಶ್ಚಿಯನ್ ಇಂತಹ ಧರ್ಮವನ್ನು ಕಾಡುತ್ತಿರುವ ಹಾಗೂ ವಿಶ್ವಾದ್ಯಂತ ಕ್ರಿಶ್ಚಿಯನ್ನರಿಗೆ ಮುಜುಗರ ಉಂಟುಮಾಡುವ ಒಂದು ವಿಷಯದ ಬಗ್ಗೆ ಬಿಚ್ಚುನುಡಿಯ ಮಾತುಗಳನ್ನು ಆಡುವುದಕ್ಕೆ ತುಂಬ ಮಹತ್ವವಿದೆ.
ವರ್ತಮಾನ ಪತ್ರಿಕೆಗಳ ಮೇಲೆ ಕಣ್ಣಾಡಿಸುವವರಿಗೆ ಇತ್ತೀಚಿನ ವರ್ಷಗಳಲ್ಲಿ ಕೆಥೊಲಿಕ್ ಚರ್ಚ್‌ಗೆ ಎದುರಾಗಿರುವ ಲೈಂಗಿಕ ಕಿರುಕುಳ, ಮಕ್ಕಳ ಲೈಂಗಿಕ ಶೋಷಣೆ, ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಸಮಸ್ಯೆಯ ಅರಿವು ಇರಬಹುದು. ವ್ಯಾಟಿಕನ್‌ನ ಮಹಿಳೆಯರ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ ಕ್ರೈಸ್ತ ಸನ್ಯಾಸಿನಿಯರ(ನನ್‌ಗಳ) ಲೈಂಗಿಕ ಶೋಷಣೆಯ ಕಡೆಗೆ ಓದುಗರ ಗಮನ ಸಳೆಯಿತು. ಈ ಶೋಷಣೆಯ ಪರಿಣಾಮವಾಗಿ ನನ್‌ಗಳು ಅನಿವಾರ್ಯವಾಗಿ ಒಂದೋ ಗರ್ಭಪಾತಗಳಿಗೆ ಶರಣಾಗಬೇಕಾಗುತ್ತದೆ ಅಥವಾ ತಮಗೆ ಬೇಡವಾದ ಆ ಮಕ್ಕಳನ್ನು ಲಾಲಿಸಿ ಪಾಲಿಸಿ ಬೆಳೆಸಬೇಕಾಗುತ್ತದೆ. ದಶಕಗಳ ಕಾಲದಿಂದ ತಮ್ಮ ಮೇಲೆ ನಡೆಯುವ ಈ ಲೈಂಗಿಕ ದೌರ್ಜನ್ಯಗಳ ಕುರಿತು ನನ್‌ಗಳು ವೌನವಾಗಿಯೇ ಇದ್ದಾರೆ.
ಆದರೆ ಚರ್ಚ್ ಆಡಳಿತವು ಈ ಸಮಸ್ಯೆಯ ಬಗ್ಗೆ ಕಣ್ಣು ಮುಚ್ಚಿಕುಳಿತುಕೊಂಡೇ ಇದ್ದರೆ ಚರ್ಚ್‌ನಲ್ಲಿ ಮಹಿಳೆಯರನ್ನು ದಮನಿಸುವ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ.
ಆ ಲೇಖನ ಪ್ರಕಟವಾದ ಬೆನ್ನಿಗೇ ಪ್ರತಿಕ್ರಿಯಿಸಿದ ಕ್ರಿಶ್ಚಿಯನ್ ಧರ್ಮದ ಜಗದ್ಗುರು ಪೋಪ್ ಫ್ರಾನ್ಸಿಸ್, ಚರ್ಚ್ ವ್ಯವಸ್ಥೆಯಲ್ಲಿ ಬಿಷಪರು ಹಾಗೂ ಪಾದ್ರಿಗಳಿಂದ ಕ್ರೈಸ್ತ ಸನ್ಯಾಸಿನಿಯರ ಲೈಂಗಿಕ ಶೋಷಣೆ ನಡೆಯುತ್ತಿರುವುದು ಸತ್ಯ; ಈ ನಿಟ್ಟಿನಲ್ಲಿ ಚರ್ಚ್ ತುರ್ತಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಒಪ್ಪಿಕೊಂಡರು. ಅಲ್ಲದೆ, ‘‘ಮಹಿಳೆಯರನ್ನು ದ್ವಿತೀಯ ದರ್ಜೆಯವರನ್ನಾಗಿ ನಡೆಸಿಕೊಳ್ಳುತ್ತಿರುವುದರಲ್ಲೇ’’ ಸಮಸ್ಯೆಯ ಮೂಲವಿದೆ ಎಂದೂ ಅವರು ಹೇಳಿದ್ದಾರೆ. ಕಳೆದ ವರ್ಷ ಕೇರಳದ ಕ್ರೈಸ್ತ ಸನ್ಯಾಸಿನಿಯೊಬ್ಬರು ಜಲಂಧರ್‌ನ ಬಿಷಪ್ ಫ್ರಾಂಕೊ ಮುಲಕ್ಕಲ್ ತನ್ನ ಮೇಲೆ ಸತತವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ ಪ್ರಕರಣ ಭಾರತದಲ್ಲೂ ಈ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂಬುದನ್ನು ಜಾಹೀರುಪಡಿಸಿತು. ಅಷ್ಟೇ ಅಲ್ಲ, ಆ ಸನ್ಯಾಸಿನಿಯನ್ನು ಬೆಂಬಲಿಸಿದ ನನ್‌ಗಳನ್ನು, ಪ್ರತೀಕಾರರೂಪವಾಗಿ ವಿವಿಧೆಡೆಗಳಿಗೆ ವರ್ಗಾವಣೆ ಮಾಡುವ ಆಜ್ಞೆಗಳನ್ನು ಹೊರಡಿಸಲಾಯಿತು.
ಈ ಎಲ್ಲ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುತ್ತ ಪ್ರೊ.ನೈನನ್ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ‘ಪೋಪ್ ಹ್ಯಾಸ್ ಸ್ಪೋಕನ್, ವಿಲ್ ಚರ್ಚ್ ಲಿಸನ್?’ (ಪೋಪ್ ಮಾತಾಡಿದ್ದಾರೆ, ಆದರೆ ಚರ್ಚ್ (ಅವರ ಮಾತುಗಳನ್ನು) ಕೇಳಿಸಿಕೊಳ್ಳುತ್ತದೆಯೇ?) ಎಂಬ ಒಂದು ಲೇಖನ ಬರೆದಿದ್ದಾರೆ. ಅವರ ಲೇಖನದ ಮುಖ್ಯಾಂಶಗಳು ಹೀಗಿವೆ.
♦ ರೋಮನ್ ಕೆಥೊಲಿಕ್ ಚರ್ಚ್‌ಗಳಲ್ಲಿ ಪಾದ್ರಿಗಳಿಂದ ಮತ್ತು ಬಿಷಪ್‌ರಿಂದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಿರುವುದು ಚರ್ಚ್‌ನ ಇತಿಹಾಸದಲ್ಲಿ ಅದರ ಮೇಲೆ ಹಿಂದೆಂದೂ ಯಾರೂ ಹಾಕಿರದ ಒಂದು ಬಾಂಬ್ (ಬಾಂಬ್ ಶೆಲ್)
♦ ಪೋಪ್‌ರ ಈ ಸಾರ್ವಜನಿಕ ಹೇಳಿಕೆಯನ್ನು ಚರ್ಚ್‌ನ ಉನ್ನತ ಸ್ಥಾನಗಳಲ್ಲಿ ಕುಳಿತಿರುವವರು ಮೆಚ್ಚುವುದಿಲ್ಲ ಎಂಬುದೂ ಪೋಪ್‌ರವರಿಗೆ ಗೊತ್ತಿದೆ. ಯಾಕೆಂದರೆ ಈ ಜನರಿಗೆ ಇದೊಂದು ಮುಜುಗರದ ವಿಷಯವಷ್ಟೇ ಅಲ್ಲ, ಅಧ್ಯಾತ್ಮದ ಮುಖವಾಡ ಧರಿಸಿ ಅವರು ಮಾಡುವ ಕೃತ್ಯಗಳಿಗೆ ಇದೊಂದು ತಡೆಗೋಡೆ ಕೂಡ.
♦ ಚರ್ಚ್ ವ್ಯವಸ್ಥೆಯನ್ನು ಶುದ್ಧೀಕರಿಸುವುದೇ ಪೋಪ್‌ರವರ ಉದ್ದೇಶ. ಅವರು ಈ ಉದ್ದೇಶದಲ್ಲಿ ಯಶಸ್ವಿಯಾದಾರೇ? ಕಾಲವೇ ಹೇಳಬೇಕು!
♦ ಕ್ರಿಶ್ಚಿಯನ್ ನಾಯಕತ್ವ ಜಗತ್ತಿಗೆ ಸುಸ್ತಾಗಿ ಹೋಗಿದೆ. ‘‘ಜಗತ್ತು’’ ಎಂದರೆ ಅದರಲ್ಲಿ ಐಹಿಕವಾದದಿಂದ ಅಪರಾಧ ಲೋಕದವರೆಗೆ ಎಲ್ಲವೂ ಸೇರುತ್ತದೆ.
♦ ಇಂದು ಚರ್ಚ್ ಪ್ರಾಪಂಚಿಕತೆಯಲ್ಲಿ ಮುಳುಗಿ ಹೋಗಿದೆ. ಎಷ್ಟರ ವರೆಗೆ ಅಂದರೆ, ಅದರ ಅಧ್ಯಾತ್ಮಿಕ ವೌಲ್ಯ/ಮುಖ (ಸ್ಪಿರಿಚುವಲ್ ಕ್ವೋಶಂಟ್) ನಿಜವಾದ ಕ್ರಿಶ್ಚಿಯನ್ ನಂಬಿಕೆಯುಳ್ಳವರಿಗೆ ಕಾಣಿಸುತ್ತಲೇ ಇಲ್ಲ

♦ ಚರ್ಚ್‌ನ ಅತ್ಯಂತ ಕೆಟ್ಟ ಮುಖಗಳಲ್ಲಿ ಒಂದು, ಅದರ ಅತಿಯಾದ ಹೆಮ್ಮೆ ಮತ್ತು ಆತ್ಮವಿಶ್ವಾಸ. ಇದೇ ಅದರ ದೊಡ್ಡ ದೋಷ (ಹ್ಯೂಬ್ರಿಸ್  hubris).

ರೋಮನ್ ಕ್ಯಾಥೊಲಿಕ್ ಚರ್ಚ್ ಟೀಕೆ, ವಿಮರ್ಶೆಯನ್ನು ಸಹಿಸುವುದಿಲ್ಲ. ಚರ್ಚ್‌ನ ಅಧಿಕಾರ ಹಿಡಿದಿರುವ ಅವರು ಯಾವುದೇ ಭಿನ್ನಮತ ಅಥವಾ ಭಿನ್ನ ಧ್ವನಿಯನ್ನು, ಅಪ್ರಿಯ ಸ್ವರವನ್ನು ಹತ್ತಿಕ್ಕಲು ತಮ್ಮ ಎಲ್ಲ ಚರ್ಚ್ ಅಧಿಕಾರವನ್ನು ಬಳಸುತ್ತಾರೆ. ಯಾವುದೇ ಮೂಲೆಯಿಂದ ಯಾವುದೇ ಅಹಿತಕರವಾದ ಧ್ವನಿ ಕೇಳಿ ಬಂದಲ್ಲಿ ಅದರ ಹುಟ್ಟಡಗಿಸಲು ಚರ್ಚ್ ಬಹಿಷ್ಕಾರ (ಎಕ್ಸ್ ಕಮ್ಯೂನಿಕೇಶನನ್) ಅವರ ಬಲಿ ಇರುವ ಸುಲಭದ ಒಂದು ಸಲಕರಣೆ.
♦ ಭಾರೀ ಸಂಪತ್ತು ಮತ್ತು ಅದು ತರುವ ತಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ; ತಾವು ಅಭೇಧ್ಯರು ಎಂಬ ಭಾವನೆ ಅಪರಿಮಿತವಾದ ಉದ್ಧಟತನಕ್ಕೆ ಕಾರಣವಾಗುತ್ತದೆ. ಉದ್ಧಟತನದ ಮುಂದಿನ ಹಂತ ಸರ್ವಾಧಿಕಾರ ಮತ್ತು ಅನ್ಯಾಯ. ಇವೆಲ್ಲವೂ ಇಂದು ಸ್ಥಾಪಿತ ಚರ್ಚಿನ ಅಂಗಗಳಾಗಿವೆ. ಹಣದ ದುರುಪಯೋಗ ಮತ್ತು ಹಲವಾರು ರೀತಿಯ ಲಪಟಾಯಿಸುವಿಕೆಗಳು - ಈಗ ವಿವಾದದ ಸಂಗಾತಿಗಳಾಗಿವೆ; ನಮ್ಮ ನ್ಯಾಯಾಲಯಗಳಲ್ಲಿ ವರ್ಷಗಳ ಅಥವಾ ದಶಕಗಳ ಕಾಲ ತೀರ್ಮಾನವಾಗದೆ ಉಳಿಯುವ ವಿವಾದಗಳಾಗಿವೆ. ಸಾರ್ವಜನಿಕರ ದೃಷ್ಟಿಯಲ್ಲಿ ಚರ್ಚ್ ಒಂದು ಹಾಸ್ಯಾಸ್ಪದ ಸಂಸ್ಥೆಯಾಗಿಬಿಟ್ಟಿದೆ. ಬಹಿರಂಗವಾಗಿ ಅಥವಾ ಚರ್ಚ್‌ನ ಒಳಗಡೆಯೇ ಪರಸ್ಪರ ಕದನಗಳು ನಡೆಯುತ್ತಿರುತ್ತವೆ.
♦ ತನ್ನ ಕಾಲದ ಫಾರಿಸೀಸ್‌ಗಳ ಉದ್ಧಟತನ ಮನೋಭಾವದ, ತಾವು ಮಾತ್ರ ನೈತಿಕವಾಗಿ ಸರಿ ಎಂಬ ಸಂಕುಚಿತ ಮನೋಭಾವದ ವಿರುದ್ಧ ಯೇಸು ಕ್ರಿಸ್ತ ಹಲವು ಬಾರಿ ಮಾತಾಡಿದ್ದ. ಅಂದಿನ ಕಾಲದ ಮಹಾ ಪಾದ್ರಿಗಳು, ಯೇಸುಕ್ರಿಸ್ತ ತಮ್ಮ ಸೋಗಲಾಡಿತನವನ್ನು (ಹಿಪಾಕ್ರಿಸಿಯನ್ನು) ಬಯಲುಗೊಳಿಸಿದನೆಂಬ ಕಾರಣಕ್ಕಾಗಿ, ಆತನ ಪರಮ ಶತ್ರುಗಳಾಗಿದ್ದರು. ಇವೊತ್ತು ಪೋಪ್ ಅದೇ ಕೆಲಸವನ್ನು ಮಾಡಿದ್ದಾರೆ: ಚರ್ಚ್ ನ ಸೋಗಲಾಡಿತನವನ್ನು ಬಹಿರಂಗಗೊಳಿಸಿದ್ದಾರೆ. ಆದ್ದರಿಂದ ಅವರೀಗ ಯೇಸುಕ್ರಿಸ್ತನ ಹಾದಿಯಲ್ಲೇ ಹೆಜ್ಜೆಹಾಕುತ್ತಿದ್ದಾರೆ. ಅವರ ಮಾತುಗಳ ಹಿನ್ನೆಲೆಯಲ್ಲಿ ಚರ್ಚ್ ಬ್ರಹ್ಮಚರ್ಯ ದೀಕ್ಷೆಯ ಕುರಿತು ಹೊಸರೀತಿಯಲ್ಲಿ ಯೋಚಿಸಲೇಬೇಕಾಗಿದೆ.
ಜಾಗೃತಿಕ ಚರ್ಚ್ ವ್ಯವಸ್ಥೆಯ ಬಗ್ಗೆ ಆಸ್ಟ್ರಿಯನ್ ತತ್ವಜ್ಞಾನಿ ಹಾಗೂ ರೋಮನ್ ಕೆಥೊಲಿಕ್ ಪಾದ್ರಿ ಇವಾನ್ ಇಲಿಚ್ ಕಟುವಾದ ವಿಮರ್ಶೆಯ, ಟೀಕೆಯ ಮಾತುಗಳನ್ನು ಬರೆದಿದ್ದಾನೆ. ಭಾರತದ ಸಂದರ್ಭದಲ್ಲಿ ಪ್ರೊ. ನೈನನ್ ‘‘ಸಾರ್ವಜನಿಕ ದೃಷ್ಟಿಯಲ್ಲಿ ಚರ್ಚ್ ಒಂದು ಹಾಸ್ಯಾಸ್ಪದ ಸಂಸ್ಥೆಯಾಗಿದೆ’’ ಎಂದು ಹೇಳುವ ಧೈರ್ಯತೋರಿದ್ದಾರೆ. ಭಾರತದ ಕೆಥೊಲಿಕ್ ಚರ್ಚ್ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತನ್ನು ಸಂಬಂಧಿಸಿದ ಎಲ್ಲರಿಗೂ ಜ್ಞಾಪಿಸಿದ್ದಾರೆ. ಓರ್ವ ಪ್ರಾಮಾಣಿಕ, ಆಸ್ತಿಕ ಕ್ರಿಶ್ಚಿಯನ್ ಆಗಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ, ಸಾವಿರಾರು ವಿದ್ಯಾರ್ಥಿಗಳ ಹಾಗೂ ಪೋಷಕರ ಓರ್ವ ಸಮಾಲೋಚಕನಂತೆ ಅವರು ಚರ್ಚ್ ಕುರಿತು ಮಾಡಿರುವ ಧನಾತ್ಮಕ ವಿಮರ್ಶೆಗೆ ಆಸ್ತಿಕ ಹಾಗೂ ಪ್ರಗತಿಪರ ಕ್ರಿಶ್ಚಿಯನ್ ಸಮುದಾಯ ಕಿವಿಕೊಡಬೇಕಾಗಿದೆ. ಯಾಕೆಂದರೆ ಇದು ಆ ಸಮುದಾಯದ ಸಾರ್ವಜನಿಕ ಬದುಕಿನಲ್ಲಿ, ಶೈಕ್ಷಣಿಕ ರಂಗದಲ್ಲಿ, ಸಾಮಾಜಿಕ ರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಓರ್ವ ಭಿನ್ನಮತೀಯ ಕ್ರಿಶ್ಚಿಯನ್ ಅಭಿವ್ಯಕ್ತಿಸಿರುವ ವೌಲಿಕವಾದ ವಿಮರ್ಶೆಯಾಗಿದೆ.
(bhaskarrao599@gmail.com)

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಡಾ. ಬಿ. ಭಾಸ್ಕರ ರಾವ್
ಡಾ. ಬಿ. ಭಾಸ್ಕರ ರಾವ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X