Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಹಂತಕರನ್ನು ರಕ್ಷಿಸಲು ಹಿಂದೂ ಮಹಾಸಭಾ...

ಹಂತಕರನ್ನು ರಕ್ಷಿಸಲು ಹಿಂದೂ ಮಹಾಸಭಾ ಮುತುವರ್ಜಿ

ಗಾಂಧಿ ಕಗ್ಗೊಲೆ: ಕಾರಣ-ಪರಿಣಾಮ

ಕೋ. ಚೆನ್ನಬಸಪ್ಪಕೋ. ಚೆನ್ನಬಸಪ್ಪ2 April 2019 6:32 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹಂತಕರನ್ನು ರಕ್ಷಿಸಲು ಹಿಂದೂ ಮಹಾಸಭಾ ಮುತುವರ್ಜಿ

ಭಾಗ-18

ಗಾಂಧಿ ಹಂತಕರನ್ನು ನ್ಯಾಯಾಲಯದಲ್ಲಿ ರಕ್ಷಿಸಲು ಹಿಂದೂ ಮಹಾಸಭೆ (ಈಗಿನ ಬಿಜೆಪಿಯ ಜನಕ ಸಂಸ್ಥೆ) ಇಷ್ಟೇಕೆ ಮುತುವರ್ಜಿ ವಹಿಸಿತು? ಹಂತಕರ ಬಗ್ಗೆ ಇವರಿಗೇಕೆ ಈ ಆಸಕ್ತಿ? ಹೆತ್ತವರು ಮಕ್ಕಳನ್ನು, ಮಕ್ಕಳು ಹೆತ್ತ ತಾಯ್ತಂದೆಯರನ್ನು, ಬಂಧು ಬಳಗದವರು ತಮ್ಮ ತಮ್ಮ ಬಂಧುಗಳನ್ನು ರಕ್ಷಿಸುವುದಕ್ಕೆ ನೈಸರ್ಗಿಕ ಕಾರಣವಿದೆ. ಬಂಧನದಲ್ಲಿರುವವರು ರಕ್ತಸಂಬಂಧಿಗಳ, ಇಲ್ಲವೆ ಇನ್ನಿತರರ ಸಂಬಂಧ ಇದ್ದೇ ಇರುತ್ತದೆ. ಆದರೆ ಯಾವುದೇ ರಕ್ತಸಂಬಂಧ, ಬಾಂಧವ್ಯ ಇಲ್ಲದಿದ್ದರೂ ತುರಂಗವಾಸಿಗಳನ್ನು ರಕ್ಷಿಸಬೇಕಾದರೆ ಅಷ್ಟೇ ಪ್ರಬಲವಾದ ಕಾರಣ ಇರಲೇಬೇಕು.

ಗಾಂಧೀಜಿ ಎದೆಗೆ ಗುಂಡಿಟ್ಟು ಕೊಂದವನು ನಾಥೂರಾಮ್ ಗೋಡ್ಸೆ ಒಬ್ಬನೆ. ಆದರೂ ಆತನೊಡನೆ ಇನ್ನೂ ಹನ್ನೊಂದು ಆರೋಪಿಗಳನ್ನು ಸೇರಿಸಿ ದೋಷಾರೋಪಣೆ ಪಟ್ಟಿ ನೀಡಿದ್ದೇಕೆ? ಆ ಇತರರು ಮಾಡಿದ ಅಪರಾಧವೇನು? ಗೋಡ್ಸೆ ಬಲಗೈ ಗುಂಡುಹಾರಿಸಿ ಗಾಂಧಿಯನ್ನು ಕೊಂದರೂ ಆ ಕೈಹಿಂದೆ, ಹತ್ತಾರು ಕೈಗಳಿದ್ದವು. ತಾನೊಬ್ಬನೆ ಈ ಕೃತ್ಯವನ್ನೆಸಗಿದೆನು, ಇತರರು ಯಾರೂ ಇದರಲ್ಲಿ ಭಾಗಿಗಳಲ್ಲ ಎಂದು ಸಾಧಿಸಿದರೂ ಅದು ಅವನೊಬ್ಬನಿಂದಲೇ ಆದ ಕೆಲಸವಲ್ಲ; ಈ ಕೃತ್ಯವೆಸಗಲು ಒಂದು ವ್ಯವಸ್ಥಿತ ಪಿತೂರಿ ಸಂಚು ಇತ್ತು ಹಾಗೂ ಕೃತ್ಯವನ್ನೆಸಗಲು ಆ 12 ಜನ ಆರೋಪಿಗಳೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ವಿವಿಧ ರೀತಿಯಿಂದ ಪ್ರಚೋದನೆ, ಪ್ರೋತ್ಸಾಹ, ಸಹಾಯ, ಕುಮ್ಮಕ್ಕು ಕೊಟ್ಟಿದ್ದರೆಂಬುದು ಪ್ರಭುತ್ವದ ನಿಲುವು. ಗೋಡ್ಸೆ ಕೈಯಲ್ಲಿ ಆ ಸ್ವಯಂಚಾಲಿತ ಕೈಬಂದೂಕು ಇಲ್ಲದಿದ್ದರೆ ಕೃತ್ಯವೆಸಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆ ಆಯುಧವನ್ನು ಒದಗಿಸಿಕೊಟ್ಟ ಡಾ. ಪರಚುರೆ ಮತ್ತು ದಂಡವತೆ ಸಹಾಯ ಮಾಡಿದಂತೆಯೇ. ಆ ಆಯುಧವನ್ನು ಈ ಕೃತ್ಯವೆಸಗಲೆಂದೇ ಕೊಲೆಗಾರನಿಗೆ ಬೆಲೆಗಾಗಲಿ, ಪುಕ್ಕಟೆ ಆಗಲಿ ಒದಗಿಸಿದ್ದರೆ ಅವರೂ ಈ ಕೃತ್ಯದಲ್ಲಿ ಭಾಗಿಯಾದಂತೆಯೇ. ಕೃತ್ಯವೆಸಗಲು ಸಂಚುಹೂಡಿದವರೆಲ್ಲರೂ ಕೊಲೆಗಾರನಿಗೆ ಒಂದಲ್ಲ ಒಂದು ರೂಪದಲ್ಲಿ ನೆರವಾದವರು, ಪ್ರಚೋದನೆ ಮಾಡಿದವರೆಲ್ಲರೂ ಕೊಲೆಯಲ್ಲಿ ಭಾಗಿಯಾದವರೆಂದೇ ಇಂಡಿಯನ್ ಪೀನಲ್ ಕೋಡ್ ನಿರ್ಧರಿಸುತ್ತದೆ. ಅಂಥವರು ಕೃತ್ಯವೆಸಗುವಾಗ ಪ್ರತ್ಯಕ್ಷವಾಗಿ ಹಾಜರಿದ್ದರೆ ಐ.ಪಿ.ಸಿ. 114ನೇ ಸೆಕ್ಷನ್ ಪ್ರಕಾರ ಅಪರಾಧಿಗಳೇ. ಸಾವರ್ಕರ್‌ರಂತೆ ದಿಲ್ಲಿಗೆ ಬಾರದೆ ಮುಂಬೈಯಲ್ಲಿ ಸಾವರ್ಕರ್ ಸದನದಲ್ಲಿ ಬಚ್ಚಿಟ್ಟುಕೊಂಡಿದ್ದರೂ, ಕೊಲೆಮಾಡಬೇಕೆಂಬ ಸಂಚು ರೂಪಿಸಿದ ಕಾರಣಕ್ಕಾಗಿ ಅವರು ಐ.ಪಿ.ಸಿ. 109ನೇ ಸೆಕ್ಷನ್ ಪ್ರಕಾರ ಅಪರಾಧಿಗಳೆಂದು ಭಾವಿಸತಕ್ಕದ್ದು, ಶಸ್ತ್ರ ಭಂಡಾರದ ಮೂಲಕ ಬಡ್ಗೆ ಹತ್ಯೆ ಮಾಡಲು ಬಳಸಿದ ಆಯುಧವನ್ನು ಗೋಡ್ಸೆಗೆ ಮಾರದಿದ್ದರೂ ಮೊದಲಿನಿಂದಲೂ ಹತ್ಯೆ ಮಾಡಲು ಸಂಚು ಮಾಡುವುದರಲ್ಲಿ ಪಾತ್ರವಹಿಸಿದವನು ಆಪ್ಟೆ. ಕರ್ಕರೆ, ಗೋಪಾಲ ಗೋಡ್ಸೆ, ಸಾವರ್ಕರ್ ಸಹಿತ ಐ.ಪಿ.ಸಿ. 120ಬಿ ಸೆಕ್ಷನ್ ಪ್ರಕಾರ ಅಪರಾಧವೆಸಗಿದಂತೆಯೇ- ಹತ್ಯೆಗೆ ಕಾರಣರು ಇವರೆಲ್ಲ. ನಾಥೂರಾಮ್ ಇವರ ಕರಣವಷ್ಟೆ. ಮೆದುಳು ಅವರದು; ಕೈ ಇವನದು. ಗಾಂಧೀಜಿಗೆ ಗುಂಡಿಕ್ಕು ಎಂದು ಪ್ರಚೋದಿಸಿದ ಮೆದಳು ಸಂಚುಹೂಡಿದವರದು. ಆ ಮೆದುಳಿನ ಆಜ್ಞಾಪಾಲಕ ಗೋಡ್ಸೆ. ಗುಂಡು ಹಾರಿಸಿದ ಅವನ ಬಲಗೈ ಮಾತ್ರವೇ ಅಪರಾಧಿಯಲ್ಲ. ಶಾಸನದ ನ್ಯಾಯದೃಷ್ಟಿ ಇದು. ಆದ್ದರಿಂದ ನಾಥೂರಾಮ್ ಗೋಡ್ಸೆ, ನಾರಾಯಣ ಆಪ್ಟೆ, ವಿಷ್ಣು ಕರ್ಕರೆ, ಮದನಲಾಲ್ ಪಹ್ವಾ, ಗೋಪಾಲ ಗೋಡ್ಸೆ, ವಿನಾಯಕ ಸಾವರ್ಕರ್, ದತ್ತಾತ್ರೇಯ ಪರಚುರೆ, ಶಂಕರ ಕ್ರಿಸ್ಟಯ್ಯ ಇವರೆಲ್ಲ ಪಿತೂರಿ ಮಾಡಿದ್ದರಿಂದ ಐ.ಪಿ.ಸಿ 120ಬಿ ಮತ್ತು ಐ.ಪಿ.ಸಿ. 207ರ ಪ್ರಕಾರ ಪ್ರಕರಣ ದಾಖಲಿಸಲಾಯಿತು.
ಉಳಿದವರಲ್ಲಿ ಕೆಲವರು ಪ್ರತ್ಯಕ್ಷವಾಗಿ ಪ್ರಚೋದನೆ/ಪ್ರೋತ್ಸಾಹ ಕೊಟ್ಟರೆಂದು ಐ.ಪಿ.ಸಿ. ಸೆಕ್ಷನ್ 109 ಮತ್ತು 114ರ ಪ್ರಕಾರ ಅಪರಾಧವೆಸಗಿದ್ದರೆಂದು ವಿಚಾರಣೆಗೆ ಗುರಿಪಡಿಸಲಾಯಿತು. ಇತರರು ಮಾರಕಾಸ್ತ್ರಗಳನ್ನು, ಸ್ಪೋಟಕ ಮದ್ದುಗುಂಡುಗಳನ್ನು ಇಟ್ಟುಕೊಂಡಿದ್ದರೆಂಬ ಆಯುಧಗಳ ಕಾಯ್ದೆ (Arms Act)ಮತ್ತು ಸ್ಫೋಟಕ ಹೊಂದಿದ್ದರೆಂದೂ (Explosives Substance Act) ಆರೋಪಿಸಲಾಯಿತು. ಆರೋಪಿಗಳ ವಿಚಾರಣೆಗೆ ರಂಗಸಜ್ಜಿಕೆ ಸಿದ್ಧವಾಯಿತು.
ಗಾಂಧಿ ಹತ್ಯೆಯ ಈ ಕೇಸು ಇಡೀ ಜಗತ್ತಿನ ಗಮನವನ್ನೇ ಸೆಳೆದಿತ್ತು. ಗಾಂಧೀಜಿಯನ್ನು ಹತ್ಯೆ ಮಾಡಲು ಹಿಂದೆ ದಕ್ಷಿಣ ಆಫ್ರಿಕಾದಲ್ಲಿಯೂ ಭಾರತದಲ್ಲಿಯೂ ನಾಲ್ಕೈದು ಬಾರಿ ಪ್ರಯತ್ನಗಳು ನಡೆದಿದ್ದವು. ಆಫ್ರಿಕದ ಬಿಳಿಯ ಸ್ಮಟ್ಸ್ ಆಡಳಿತ ಗಾಂಧಿ ಕೊಲೆಯಾಗುವುದನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಿಂದಲೇ ಹತರಾದ ದುರಂತ ಜಗತ್ತನ್ನೇ ತಲ್ಲಣಿಸಿತ್ತು. ಬ್ರಿಟಿಷ್ ಸಾಮ್ರಾಜ್ಯದ ಕಡುನಿಷ್ಠೆಯ ರಕ್ಷಕ, ಭಾರತ ಸ್ವಾತಂತ್ರದ ಕಡುವಿರೋಧಿ ವಿನ್‌ಸ್ಟನ್ ಚರ್ಚಿಲ್: ‘‘ನಾವು ಗಾಂಧಿಯ ಪ್ರಾಣವನ್ನು ಮೂವತ್ತು ವರ್ಷಗಳು ರಕ್ಷಿಸಿದೆವು. ಸ್ವತಂತ್ರ ಭಾರತ ಒಂದು ವರ್ಷ ಕೂಡಾ ಅವರನ್ನು ರಕ್ಷಿಸಲಿಲ್ಲ’’ ಎಂದು ವಿಷಾದ ವ್ಯಕ್ತಪಡಿಸಿದರು. ಜಗತ್ತಿನ ಇತರ ದೇಶಗಳಲ್ಲಿ ರಾಜಕೀಯ ನಾಯಕರ ಹತ್ಯೆ ನಡೆದಿದ್ದವು. ಭಾರತದಲ್ಲಿ ಅಂಥ ದುಷ್ಕೃತ್ಯ ನಡೆದಿರಲಿಲ್ಲ. ಆದ್ದರಿಂದ ಈ ವಿಚಾರಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು.


ಸಹಜವಾಗಿ ಇಡೀ ದೇಶ ಭಾವಾವೇಶಕ್ಕೆ ಒಳಗಾಗಿತ್ತು. ಉದ್ವಿಗ್ನತೆ ಅಗ್ನಿಜ್ವಾಲೆಯಂತೆ ಕೆನ್ನಾಲೆಗೆ ಚಾಚುತ್ತಿತ್ತು. ಗಾಂಧೀಜಿಯನ್ನು ದ್ವೇಷಿಸುತ್ತಿದ್ದವರು, ಕೊಲೆಯ ಪಿತೂರಿಗಾರರು ಮತ್ತು ಅವರ ಪರಿವಾರದ ಹೊರತಾಗಿ ಇಡೀ ಪ್ರಜಾಕೋಟಿ ಸಂಕಟದಿಂದ ಪರಿತಪಿಸುತ್ತಿದ್ದಂತೆ ಆಕ್ರೋಶದಿಂದ ಕುದಿಯುತ್ತಿತ್ತು! ಆರೋಪಿಗಳು ಕೈಗೆ ಸಿಕ್ಕರೆ ಏನಾದರೂ ಮಾಡಲು ಸಿದ್ಧರಿದ್ದರು. ಅಹಿಂಸೆಯನ್ನೇ ನಂಬಿ, ಬೋಧಿಸಿ, ಅದೇ ಕಾರಣಕ್ಕೆ ಪ್ರಾಣಾರ್ಪಣೆ ಮಾಡಿದ ಗಾಂಧೀಜಿಯ ‘ಉಗ್ರ ಶಿಷ್ಯರು’ ಕೊಲೆಗಾರರ ಮೇಲೆ ಸೇಡುತೀರಿಸಿಕೊಳ್ಳುವ ಅಪಾಯವೂ ಇತ್ತು. ಅದು, ಕೊಲೆಯಾದೊಡನೆಯೇ ಭುಗಿಲೆದ್ದ ಆಕ್ರೋಶಕ್ಕೆ ಕೆಲವರ ಜೀವಹಾನಿಯಾಗಿದ್ದಾಗ ವ್ಯಕ್ತವಾಗಿತ್ತು. ಆದ್ದರಿಂದ ಸರ್ದಾರ್ ವಲ್ಲಭಭಾಯಿ ಪಟೇಲರು: ‘‘ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಸೇಡು ತೀರಿಸಿಕೊಳ್ಳುವ ಅಕೃತ್ಯದಲ್ಲಿ ತೊಡಗಿದರೆ ಅದು ಗಾಂಧೀಜಿಗೆ ಮಾಡುವ ಘೋರ ಅಪಚಾರ. ಹಾಗೆಂದಿಗೂ ಮಾಡಕೂಡದು. ಕಾನೂನಿನ ಕ್ರಮ ಕೈಗೊಳ್ಳಲಾಗುವುದು’’ಎಂದು ವಿನಂತಿ ಮಾಡಿದರು. ಆರೋಪಿಗಳ ಪ್ರಾಣಕ್ಕೆ ಅಪಾಯ ಬಾರದಿರಲೆಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲದ, ಹಾನಿಮಾಡಲು ಅವಕಾಶವಿಲ್ಲದ ಭದ್ರಕೋಟೆ-ಕೆಂಪುಕೋಟೆಯೊಳಗೆ ವಿಚಾರಣೆ ನಡೆಸಲು ನ್ಯಾಯಾಲಯವನ್ನು ರಚಿಸಲಾಯಿತು. ರಾಜಕೀಯ ಮೊಕದ್ದಮೆಗಳ ವಿಚಾರಣೆಗಳಲ್ಲಿ ಕೆಂಪುಕೋಟೆ ನ್ಯಾಯಾಂಗಣವಾದದ್ದು ಇದು ಮೂರನೆಯ ಸಲ. ಮೊದಲನೆಯದು 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕರೆಂದು ಪರಿಗಣಿಸಿದ್ದ ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಷಹ ವಿಚಾರಣೆ 1945ರಲ್ಲಿ ಆಝಾದ್ ಹಿಂದ್ ಫೌಜ್‌ನ ಸೇನಾಧಿಪತಿಗಳಾಗಿದ್ದ ಕ್ಯಾಪ್ಟನ್ ಷಹನವಾಜ್ ಖಾನ್, ಗುರುಭಕ್ಷ್ ಧಿಲನ್ ಮತ್ತು ಪ್ರೇಮ್ ಸೆಹಗಲ್ ಅವರ ವಿಚಾರಣೆ ಎರಡನೆಯದು ಹಾಗೂ ಗಾಂಧಿ ಹತ್ಯೆಯ ಈ ವಿಚಾರಣೆ ಮೂರನೆಯದು. ಕೆಂಪುಕೋಟೆಯೊಳಗೆ ನ್ಯಾಯಾಂಗಣವನ್ನು ರಚಿಸಿದ್ದು ಅರೋಪಿಗಳ ಪ್ರಾಣರಕ್ಷಣೆ ಒದಗಿಸುವುದಲ್ಲದೆ ವಿಚಾರಣೆ ಪ್ರಶಾಂತ, ನಿರುದ್ವಿಗ್ನ ಸನ್ನಿವೇಶದಲ್ಲಿ ನಡೆಯಬೇಕೆಂಬುದು ಇನ್ನೊಂದು ಕಾರಣ. ಇದಕ್ಕಿಂತಲೂ ಮುಖ್ಯವಾದ ಕಾರಣ ಸಾಕ್ಷಿಗಳು ನಿರ್ಭಯವಾಗಿ ಸಾಕ್ಷಿ ನುಡಿಯುವ ಮುಕ್ತ ಸನ್ನಿವೇಶ. ಸಾಧಾರಣ ನ್ಯಾಯಾಲಯಗಳಿಗೆ ಯಾರಾದರೂ ಬಂದು ವೀಕ್ಷಿಸಲು ಮುಕ್ತ ದ್ವಾರವಿರುತ್ತದೆ. ನೂರಾರು ಜನರು ಸಾವಿರಾರು ಕುತೂಹಲ ಇಲ್ಲವೆ ಕ್ರೋಧಭರಿತ ಕೆಂಗಣ್ಣುಗಳು ತೀಕ್ಷ್ಣದೃಷ್ಟಿಯ ಜನಜಂಗುಳಿಯ ಮಧ್ಯೆ ಸಾಕ್ಷಿಗಳು ಸತ್ಯವನ್ನು ಮುಚ್ಚುಮರೆಯಿಲ್ಲದೆ ನಿರ್ಭಯವಾಗಿ ನುಡಿಯುವುದು ಕಷ್ಟ. ಆದ್ದರಿಂದ ಆರೋಪಿಗಳಿಗೆ ಬಾಧಕವಾಗಬಹುದು. ಅವರನ್ನು ರಕ್ಷಣೆ ಮಾಡುವ ವಕೀಲರಿಗೂ ತೊಂದರೆ ಆಗಬಹುದು.
ಹೀಗೆ ಆರೋಪಿಗಳಿಗೆ ದೈಹಿಕ ಮತ್ತು ಮಾನಸಿಕ ರಕ್ಷಣೆಯನ್ನು ಒದಗಿಸುವುದಲ್ಲದೆ ಆರೋಪಿಗಳನ್ನು ನ್ಯಾಯಾಲಯದಲ್ಲಿ ರಕ್ಷಿಸಲು ತಮಗೆ ಬೇಕಾದ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿಗೆ ಯಾವ ಅಡ್ಡಿ ಆತಂಕಗಳೂ ಇಲ್ಲದಂತೆ ನೋಡಿಕೊಳ್ಳಲಾಯಿತು. (ಇಂದಿರಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿದವರನ್ನು ನಿಂದಿಸಿದರು. ಅಡ್ಡಿಪಡಿಸಲೂ ಸಿದ್ಧರಾಗಿದುದನ್ನು ಇಲ್ಲಿ ಸ್ಮರಿಸಬಹುದು.) ಆರೋಪಿಗಳು ತಮಗಿಷ್ಟ ಬಂದ ಸಮರ್ಥ ನಂಬಿಕೆಯ ಆಪ್ತ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು ಕಾಯ್ದೆಯಲ್ಲೇ ಉಲ್ಲೇಖವಾಗಿದೆ. ಈ ಹಕ್ಕಿಗೂ ಭಂಗಬಾರದಂತೆ ಸರಕಾರ ವರ್ತಿಸಿತು.
‘ವೀರ’ ಸಾವರ್ಕರ್‌ರು ಈ ಹಕ್ಕನ್ನು ಚಲಾಯಿಸಿ ಮುಂಬೈ ರಾಜ್ಯದಲ್ಲಿಯೇ ಅತೀ ಪ್ರಖ್ಯಾತ ಕ್ರಿಮಿನಲ್ ಕೇಸುಗಳಲ್ಲಿ ಸಮರ್ಥರಾಗಿದ್ದ ಅವರ ಆಪ್ತಮಿತ್ರ ಸೀನಿಯರ್ ನ್ಯಾಯವಾದಿ ಶ್ರೀ ಎಲ್.ಬಿ. ಭೋಪಟ್‌ಕರ್ ಅವರನ್ನು ತಮ್ಮ ರಕ್ಷಣೆಗಾಗಿ ನೇಮಿಸಿಕೊಂಡರು. ಮಹಾರಾಷ್ಟ್ರ ಪ್ರಾಂತ ಹಿಂದೂ ಮಹಾಸಭೆಯ ಕಾರ್ಯಕಾರಿ ಸಮಿತಿಯು ಕಾನೂನು ಸಹಾಯಕ ಸಮಿತಿ (Legal Aid Committee) ಅನ್ನು ರಚಿಸಿತು.ಆರೋಪಿಗಳ ರಕ್ಷಣೆಗಾಗಿ ಧನಸಹಾಯ ಸಮಿತಿಯನ್ನು ರಚಿಸಿತು. ರಕ್ಷಣಾ ಸಮಿತಿಯ ಮುಖ್ಯಸ್ಥರಾಗಿ ಭೋಪಟ್‌ಕರ್ ಕಾರ್ಯ ನಿರ್ವಹಿಸಿದರು. ಜೆ.ಟಿ. ಕೇತ್ಕರ್ ಕೋಶಾಧಿಕಾರಿ, ರಾಮಭಾವು ಮಾಂಡಲಿಕ್ ಸಂಚಾಲಕರು. ಈ ಸಮಿತಿ 6-6-1948ರಂದು ಪುಣೆಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಕರೆದು, ಅಖಿಲ ಭಾರತ ರಕ್ಷಣಾ ಸಮಿತಿ(All India Defence Committee) ಅನ್ನು ರಚಿಸಿತು. ಸಮಿತಿಯ ಅಧ್ಯಕ್ಷತೆಯನ್ನು ವಹಿಸಲು ಆ ಕಾಲದ ಮಹಾಮೇಧಾವಿ ಅದ್ವಿತೀಯ ನ್ಯಾಯವಾದಿ ಡಾ. ಎಂ. ಆರ್. ಜಯಕರ್ ಅವರನ್ನು ವಿನಂತಿಸಲಾಯಿತು. ಆದರೆ ಅವರು ಆ ವಿನಂತಿಯನ್ನು ತಿರಸ್ಕರಿಸಿದರು. ಇದೇ ಸಮಿತಿ ಕರ್ಕರೆಯ ರಕ್ಷಣೆಗಾಗಿ ಆಗ ಸೆರೆಮನೆಯಲ್ಲಿದ್ದ ವಾಸುದೇವ ಬಲವಂತ ಗೋಗಟೆ ಎಂಬ ವಕೀಲರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕೆಂದು ಆರೋಪಿ ಕರ್ಕರೆ ಪರವಾಗಿ ಮುಂಬೈ ಸರಕಾರಕ್ಕೆ ಮನವಿ ಮಾಡಿತು. ಆದರೆ ಸರಕಾರ ಈ ಮನವಿಯನ್ನು ತಿರಸ್ಕರಿಸಿತು. ಸಮಿತಿಯು ಎರಡು ಉಪಸಮಿತಿಯನ್ನು ರಚಿಸಿತು. ಒಂದು ಉಪಸಮಿತಿ ಆರೋಪಿಗಳ ರಕ್ಷಣೆ ಮಾಡುವ ವಕೀಲವೃಂದದ ಪ್ರವಾಸ, ವಸತಿ, ಮತ್ತಿತರ ಕಾರ್ಯನಿರ್ವಹಣೆ ಮಾಡತಕ್ಕದ್ದು. ಇನ್ನೊಂದು ಆರೋಪಿಗಳ ಸಂರಕ್ಷಣೆಯ ವಕೀಲರನ್ನು ಒಳಗೊಂಡು ಇತರರ ಸಮಸ್ತ ಅನುಕೂಲತೆ ನೆರವೇರಿಸತಕ್ಕದ್ದು. ಅವರಲ್ಲಿ ಬಾಲಗಂಗಾಧರ ತಿಲಕ ಮೊಮ್ಮಗ ಜಿ.ಪಿ. ಕೇತ್ಕರ್ ಕೋಶಾಧಿಕಾರಿಗಳು, ಬಾಬಾ ನಾರಾಯಣ ದತ್ತು ಮುಂತಾದ ಹನ್ನೊಂದು ಸದಸ್ಯರಿದ್ದರು.
ಗಾಂಧಿ ಹಂತಕರನ್ನು ನ್ಯಾಯಾಲಯದಲ್ಲಿ ರಕ್ಷಿಸಲು ಹಿಂದೂ ಮಹಾಸಭೆ (ಈಗಿನ ಬಿಜೆಪಿಯ ಜನಕ ಸಂಸ್ಥೆ) ಇಷ್ಟೇಕೆ ಮುತುವರ್ಜಿ ವಹಿಸಿತು? ಹಂತಕರ ಬಗ್ಗೆ ಇವರಿಗೇಕೆ ಈ ಆಸಕ್ತಿ? ಹೆತ್ತವರು ಮಕ್ಕಳನ್ನು, ಮಕ್ಕಳು ಹೆತ್ತ ತಾಯ್ತಂದೆಯರನ್ನು, ಬಂಧು ಬಳಗದವರು ತಮ್ಮ ತಮ್ಮ ಬಂಧುಗಳನ್ನು ರಕ್ಷಿಸುವುದಕ್ಕೆ ನೈಸರ್ಗಿಕ ಕಾರಣವಿದೆ. ಬಂಧನದಲ್ಲಿರುವವರು ರಕ್ತಸಂಬಂಧಿಗಳ, ಇಲ್ಲವೆ ಇನ್ನಿತರರ ಸಂಬಂಧ ಇದ್ದೇ ಇರುತ್ತದೆ. ಆದರೆ ಯಾವುದೇ ರಕ್ತಸಂಬಂಧ, ಬಾಂಧವ್ಯ ಇಲ್ಲದಿದ್ದರೂ ತುರಂಗವಾಸಿಗಳನ್ನು ರಕ್ಷಿಸಬೇಕಾದರೆ ಅಷ್ಟೇ ಪ್ರಬಲವಾದ ಕಾರಣ ಇರಲೇಬೇಕು. ಅದು ಈ ವಿಚಾರದಲ್ಲಿ ರಾಜಕೀಯ ಬಾಂಧವ್ಯ, ಇದರಲ್ಲಿ ಅಸಹಜವಾದದ್ದು ಏನೂ ಇಲ್ಲ. 1945ರಲ್ಲಿ ಆಝಾದ್ ಹಿಂದ್ ಫೌಜ್(ಐ.ಎನ್.ಎ.) ನಾಯಕರನ್ನು ಬ್ರಿಟಿಷ್ ಸರಕಾರ ಬ್ರಿಟಿಷ್ ಸಾರ್ವಭೌಮ ಚಕ್ರವರ್ತಿಯ ಮೇಲೆ ಯುದ್ಧ ಹೂಡಿದಾಗ ರಾಜದ್ರೋಹಕ್ಕಾಗಿ ವಿಚಾರಣೆಗೆ ಗುರಿಪಡಿಸಿದಾಗ ಕಾಂಗ್ರೆಸ್ ಪಕ್ಷ ಅವರ ರಕ್ಷಣೆಗಾಗಿ ಒಂದು ಅಖಿಲ ಭಾರತ ರಕ್ಷಣಾ ಸಮಿತಿಯನ್ನು ರಚಿಸಿತ್ತು. ಜವಾಹರಲಾಲ್ ನೆಹರೂ, ಕೈಲಾಸನಾಥ ಕಾಟ್ಜು, ಸರ್ ರವಿತೇಜ ಬಹದ್ದೂರ್ ಸಪ್ರು, ಭುಲಾಭಾಯಿ ದೇಸಾಯಿ, ಅಸಫ್ ಅಲಿ, ಸರ್ ದಿಲೀಪ್ ಸಿಂಗ್ (ಲಾಹೋರಿನ ವಕೀಲರು) ಮುಂತಾದ ಜಗದ್ವಿಖ್ಯಾತ ಶಾಸನ ತಜ್ಞರು, ನ್ಯಾಯವಾದಿಗಳು ಐ.ಎನ್.ಎ. ಆರೋಪಿಗಳ ರಕ್ಷಣೆಗಾಗಿ ಕಂಕಣ ಕಟ್ಟಿದ್ದರು! ಯಾಕೆ? ಐ.ಎನ್.ಎ. ಯೋಧರು ಸುಭಾಷ್‌ಚಂದ್ರ ಬೋಸರ ಸ್ವತಂತ್ರ ಭಾರತ ಸರಕಾರದ ಸೈನಿಕರಾಗಿದ್ದರು. ಬ್ರಿಟಿಷರ ದಾಸ್ಯದಿಂದ ಈ ದೇಶವನ್ನು ವಿಮುಕ್ತಿಗೊಳಿಸಲು ಶಸ್ತ್ರಧಾರಿಗಳಾಗಿ ಹೋರಾಡಿದ ದೇಶಪ್ರೇಮಿಗಳು. ಅವರು ರಾಜದ್ರೋಹ ಮಾಡಿದ ಆರೋಪ ಋಜುವಾತಾಗಿ ಶಿಕ್ಷೆ ವಿಧಿಸಿದ್ದರೆ ಪಾಶೀ ಶಿಕ್ಷೆಯನ್ನೊ, ಜೀವಾವಧಿ ಶಿಕ್ಷೆಯನ್ನೊ ಅನುಭವಿಸಬೇಕಾಗುತ್ತಿತ್ತು. ಅವರನ್ನು ರಕ್ಷಿಸುವುದು ಈ ದೇಶದ, ತತ್ರಾಪಿ ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿತ್ತು. ಆ ಕರ್ತವ್ಯ ನಿರ್ವಹಣೆಗಾಗಿಯೇ ರಕ್ಷಣಾ ಸಮಿತಿಯನ್ನು ರಚಿಸಲಾಗಿತ್ತು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕೋ. ಚೆನ್ನಬಸಪ್ಪ
ಕೋ. ಚೆನ್ನಬಸಪ್ಪ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X