Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ದಿಗಂಬರ ಬಡ್ಗೆ ಹೇಳಿಕೆಗಳು...

ದಿಗಂಬರ ಬಡ್ಗೆ ಹೇಳಿಕೆಗಳು...

ಗಾಂಧಿ ಕಗ್ಗೊಲೆ: ಕಾರಣ – ಪರಿಣಾಮ

ಕೋ. ಚೆನ್ನಬಸಪ್ಪಕೋ. ಚೆನ್ನಬಸಪ್ಪ5 April 2019 6:35 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ದಿಗಂಬರ ಬಡ್ಗೆ ಹೇಳಿಕೆಗಳು...

ಭಾಗ-19

ಚಹಾ ಕುಡಿದು ಬರಲು ಮೆಟ್ಟಿಲು ಇಳಿದುಬರುತ್ತಿದ್ದಾಗ ಆಪ್ಟೆ ಮೇಲಕ್ಕೆ ಬರುವುದು ಕಾಣಿಸಿತು. ನನ್ನನ್ನು ಕಂಡೊಡನೆ ಆಪ್ಟೆ: ‘ಸರಿ. ನೀನು ಬಂದದ್ದು ಒಳ್ಳೆಯದಾಯ್ತು. ಮಾಲನ್ನು ಸುರಕ್ಷಿತವಾಗಿಡಲು ಒಂದು ಜಾಗ ಹುಡುಕಬೇಕು’ ಎಂದ. ನಾನು ಶಂಕರ ಕ್ರಿಸ್ಟಯ್ಯನ ಕೈಯಿಂದ ಚೀಲ ಇಸಿದುಕೊಂಡು ನೀನು ಇಲ್ಲಿಯೇ ಕಾದಿರು ಎಂದು ಹೇಳಿ ಆಪ್ಟೆಯನ್ನು ಸೇರಿಕೊಂಡೆ. ನಾಲ್ಕೈದು ಮೆಟ್ಟಿಲು ಇಳಿಯುವುದರಲ್ಲಿ ಗೋಡ್ಸೆ ಮೆಟ್ಟಿಲು ಹತ್ತಿ ಬಂದು ಎದುರಾದ.

ಈಗ ಗಾಂಧಿ ಹಂತಕರು ಹಿಂದೂ ಮಹಾಸಭೆಯ ದೃಷ್ಟಿಯಲ್ಲಿ ‘ದೇಶಭಕ್ತ’ರಾಗಿದ್ದರು. ಗಾಂಧಿ ಈ ದೇಶವನ್ನು ವಿಭಜಿಸಲು ಕಾರಣರಾದ ದುಷ್ಟಶಕ್ತಿ ! ಈ ದೇಶದಲ್ಲಿ ಮುಸ್ಲಿಮರ ಹಿತಸಾಧಕರಾಗಿದ್ದ ಔರಂಗಜೇಬನ ಅಪರಾವತಾರ! ಆರೆಸ್ಸೆಸ್ ಸದಸ್ಯರ ದೃಷ್ಟಿಯಲ್ಲಿ ಗಾಂಧಿ ಮೀರ್ ಸಾಧಕ. ಅವರನ್ನು ಮುಗಿಸಿದ್ದು ಈ ದೇಶಕ್ಕೆ ಕಲ್ಯಾಣ!! ಈ ದೃಷ್ಟಿಯಿಂದಲೇ ಅವರನ್ನು ಮುಗಿಸಿದ್ದು. ಅಂಥವರ ಬಗ್ಗೆ ಇವರಿಗೆ ಸಹಾನುಭೂತಿ. ಈ ಮಾತು ಸತ್ಯ ಎಂಬುದಕ್ಕೆ ಹಿಂದೂ ಮಹಾಸಭೆಯ ಸಂತತಿಯ ವರ್ತನೆಯೇ ಸಾಕ್ಷಿ. ಆ ಹಂತಕರನ್ನು ‘ಹುತಾತ್ಮ’ರೆಂದು ಹಾಡಿ ಹೊಗಳುವವರೆಲ್ಲ ಈಗ ಮಹಾ ದೇಶಭಕ್ತರಾಗಿ ವಿಜೃಂಭಿಸುತ್ತಿದ್ದಾರೆ. ‘ನಾನೇಕೆ ಗಾಂಧೀಜಿಯವರ ಹತ್ಯೆ ಮಾಡಿದೆ’ ಎಂಬ ಗ್ರಂಥಕರ್ತೃ ನಾಥೂರಾಮ್ ಗೋಡ್ಸೆಯನ್ನು ಕೀರ್ತಿಸುತ್ತಿದ್ದಾರೆ.
ಈ ಹಂತಕರ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯವನ್ನು ರಚಿಸಲಾಯಿತು. ವಿಚಾರಣೆ ಮಾಡಲು ಕಾನ್ಪುರದ ಸೆಷನ್ ಜಡ್ಜ್ ಶ್ರೀ ಎಚ್. ಆತ್ಮಚರಣ ಐ.ಸಿ.ಎಸ್., ಅವರನ್ನು ನೇಮಕ ಮಾಡಲಾಯಿತು. ವಿಚಾರಣೆ 24-6-1948ರಂದು ಪ್ರಾರಂಭವಾಯಿತು. ವಿಚಾರಣೆ ಆರೋಪಿಗಳಿಗೆ ತಿಳಿಯುವ ಭಾಷೆಯಲ್ಲಿಯೇ ನಡೆಯಬೇಕೆಂಬುದು ಶಾಸನ. ನ್ಯಾಯಾಲಯದ ಮುಂದಿದ್ದ 9 ಜನ ಆರೋಪಿಗಳಲ್ಲಿ ಮರಾಠಿ, ಪಂಜಾಬಿ, ತೆಲುಗು ಮಾತೃಭಾಷೆಯವರಿದ್ದರು. ಅವರಿಗೆ ಹಿಂದಿ ಬರುತ್ತಿರಲಿಲ್ಲ. ಕಲಾಪಗಳನ್ನು ಮಾರಾಠಿಗೆ ತರ್ಜುಮೆ ಮಾಡಲು ಎಂ.ಎ. ನಾವಲ್ಕರ್ ಎಂಬ ಮುಂಬೈ ರಾಜ್ಯದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನೌಕರರನ್ನು ನೇಮಿಸಿದರು. ತೆಲುಗು ಮಾತೃಭಾಷೆಯ ಶಂಕರ ಕ್ರಿಸ್ಟಯ್ಯನಿಗಾಗಿ ಬಳ್ಳಾರಿಯ ಶ್ರೀಮತಿ ಎಂ. ಕಮಲಮ್ಮನವರನ್ನು ನೇಮಿಸಲಾಯಿತು. ಪಂಜಾಬಿ ಮಾತೃಭಾಷೆಯ ಮದನ್‌ಲಾಲ್ ಪಹ್ವಾನ ಅನುಕೂಲತೆಗಾಗಿ ಒಬ್ಬ ತರ್ಜುಮೆಗಾರರನ್ನು ನೇಮಿಸಲಾಯಿತು.
ನ್ಯಾಯಾಧೀಶ ಆತ್ಮಚರಣರು ದೋಷಾರೋಪಗಳನ್ನು ಒಬ್ಬೊಬ್ಬ ಆರೋಪಿಗೂ ವಿವರಿಸಿ ಅವರು ಆ ಅಪರಾಧಗಳನ್ನು ಎಸಗಿದ್ದಾರೋ? ಎಂದು ಕೇಳಿದರು. ಒಂಬತ್ತು ಆರೋಪಿಗಳಲ್ಲಿ ಎಂಟು ಜನ ತಾವು ಯಾವ ಅಪರಾಧವೂ ಮಾಡಿಲ್ಲವೆಂದು ನಿರಾಕರಿಸಿದರು. ಶಂಕರ ಕ್ರಿಸ್ಟಯ್ಯ ‘‘ತಪ್ಪು ಮಾಡಿದ್ದು ನಿಜ’’ ಎಂದ. ಆರೋಪಗಳನ್ನು ತೆಲುಗಿನಲ್ಲಿ ವಿವರಿಸಿದಾಗ ‘‘ನನಗೆ ತಿಳಿದಿದ್ದನ್ನು ಹೇಳುತ್ತೇನೆ. ನಾವು ನಿರಪರಾಧಿ ಎಂಬುದನ್ನು ದಿಟಪಡಿಸಲು ವಿಚಾರಣೆ ಆಗಲಿ’’ ಎಂದ.
ಒಂಬತ್ತು ಆರೋಪಿಗಳನ್ನು ಒಂದರ ಹಿಂದೆ ಒಂದರಂತೆ ಹಾಕಿದ್ದ ಮೂರು ಬೆಂಚುಗಳು ಮೇಲೆ ಒಂದೊಂದರ ಮೇಲೆ ಮೂವರನ್ನು ಕೂರಿಸಿದರು. ಹಿಂದಿನ ಬೆಂಚಿನ ಮೇಲೆ ಸಾವರ್ಕರ್, ಪರಚುರೆ ಮತ್ತು ಶಂಕರ ಕ್ರಿಸ್ಟಯ್ಯ ಕುಳಿತಿದ್ದರು.
ಮುಂಬೈ ಹೈಕೋರ್ಟಿನ ಪ್ರಸಿದ್ಧ ನ್ಯಾಯವಾದಿಯಾಗಿದ್ದ ದಫ್ತರಿ ಅವರನ್ನು ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಲಾಗಿತ್ತು. ಅವರಿಗೆ ನೆರವಾಗಲು ಸಾಕಷ್ಟು ಜೂನಿಯರ್ ವಕೀಲರಿದ್ದರು.
ಈ ಹಿಂದೆ ಗಮನಿಸಿರುವಂತೆ ಬಡ್ಗೆ ‘ಮಾಫಿ’ ಸಾಕ್ಷಿಯಾಗಿದ್ದ. ಅವನಿಗೆ ಕ್ಷಮಾದಾನ ಮಾಡಲಾಗಿತ್ತು. ಅವನ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸಿದರೆ ಕೇಸಿನ ವಿದ್ಯಮಾನಗಳೆಲ್ಲ ಮನದಟ್ಟಾಗುತ್ತದೆ. ಇಲ್ಲಿದೆ ಅವನ ಹೇಳಿಕೆ:


‘‘ನಾನು ಪುಣೆಯಲ್ಲಿ ಆಯುಧಗಳು ಮತ್ತು ಸ್ಫೋಟಕ ಸಾಮಗ್ರಿ ವ್ಯಾಪಾರ ಮಾಡುತ್ತಿದ್ದೇನೆ. ನನ್ನ ಅಂಗಡಿಯ ಹೆಸರು ‘ಶಸ್ತ್ರ ಭಂಡಾರ’. 1940ರಲ್ಲಿ ಹಿಂದೂ ಮಹಾಸಭಾ ಕಚೇರಿಯೊಡನೆ ಸಂಪರ್ಕ ಬಂತು. ಆಗಿನಿಂದಲೂ ಹಿಂದೂ ಮಹಾಸಭೆಯ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದೇನೆ. 1944-45ರಿಂದಲೂ ವಿನಾಯಕ ದಾಮೋದರ ಸಾವರ್ಕರ್‌ರ ಭಾಷಣಗಳನ್ನು ಕೇಳಿದ್ದೇನೆ. ಸಾವರ್ಕರ್‌ರ ಅಂಗರಕ್ಷಕ ಅಪ್ಪಾ ಕಾನರ್ ನನಗೆ 1940-41ರಿಂದಲೂ ಗೊತ್ತು. ಕಳೆದ 2-3 ವರ್ಷಗಳಿಂದ ಕರ್ಕರೆ ಎಂಬಾತನ ಪರಿಚಯವಿದೆ.’’ ವಡಗಾಂವಕರ್ ಎಂಬ ಹೆಸರಿನ ಒಬ್ಬಾತನೂ ನನಗೆ ಗೊತ್ತು.
‘‘1944ರಲ್ಲಿ ಒಮ್ಮೆ ಪುಣೆಯಲ್ಲಿ ಹಿಂದೂ ರಾಷ್ಟ್ರಸೇನೆಯ ಸಭೆಯಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಸಾವರ್ಕರ್ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ಸಾವರ್ಕರ್‌ರು, ಕಾಂಗ್ರೆಸ್ ಧೋರಣೆಯು ಹಿಂದೂಗಳಿಗೆ ಅಪಾಯಕಾರಿಯಾಗಿದೆ ಎಂದು ಹೇಳಿದರು. ಹಿಂದೂಗಳು ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರ ಹಾಕಬೇಕೆಂದು ಪ್ರತಿಪಾದಿಸಿದರು. ಮುಸ್ಲಿಮರೇನಾದರೂ ವ್ಯಗ್ರರಾದರೆ ಪ್ರಬಲವಾಗಿ ಉಗ್ರವಾಗಿ ನಾವು ಪ್ರತೀಕಾರ ಮಾಡಬೇಕು, ಆಯುಧಗಳನ್ನು ಬಳಸುವುದರಲ್ಲಿ ನಿಷ್ಣಾತರಾಗಲು ಮತ್ತು ಹೊಡೆದಾಡುವ ಚಾತುರ್ಯವನ್ನು ಹೆಚ್ಚಿಸಿ ಕೊಳ್ಳಲು ಹಿಂದೂಗಳು ಅಧಿಕ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು ಎಂದು ಹೇಳಿದರು.’’
‘‘1947ರಲ್ಲಿ ಮುಂಬೈ ದಾದರ್‌ನಲ್ಲಿರುವ ಹಿಂದೂ ಮಹಾಸಭೆಯ ಕಚೇರಿಗೆ ವರ್ಷಕ್ಕೆ ಕನಿಷ್ಠ ಪಕ್ಷ ಎರಡು ಬಾರಿ ಹೋಗುತ್ತಿದ್ದೆ. ಮುಂಬೈಗೆ ಹೋದಾಗಲೆಲ್ಲ ಹಿಂದೂ ಮಹಾಸಭೆಯ ಕಚೇರಿಗೆ ಹೋಗುವ ಗುರಿಯಿಟ್ಟುಕೊಂಡಿದ್ದೆ. ಸಾವರ್ಕರ್‌ರ ಮನೆಯಲ್ಲಿ ಒಂದು ಸಭೆ ನಡೆದಿದ್ದು ನನಗೆ ನೆನಪಿದೆ. ನಾನಲ್ಲದೆ ಮತ್ತೆ ಅಂದಾಜು 20-25 ಜನರಿದ್ದರು. ಅಲ್ಲಿದ್ದವರೆಲ್ಲರ ಒಂದು ಭಾವಚಿತ್ರವನ್ನು ತೆಗೆದುಕೊಳ್ಳಲಾಗಿತ್ತು. ಆ ಸಾಮೂಹಿಕ ಛಾಯಾಚಿತ್ರದಲ್ಲಿ ನಾನೂ ಇದ್ದೆ.’’
ಪ್ರಶ್ನೆ: ‘‘ನೀನು ಎಂದಾದರೂ ಆಪ್ಟೆಗೆ ಆಯುಧಗಳನ್ನು ಕೊಟ್ಟಿದಿಯಾ?’’
ಉತ್ತರ: ‘‘ಹೌದು. ಅನೇಕ ಬಾರಿ ಆಪ್ಟೆಗೆ ಆಯುಧಗಳನ್ನು ಸರಬರಾಜು ಮಾಡಿದ್ದೆ.’’
ಬಡ್ಗೆ ಸಾಕ್ಷ ಮುಂದುವರಿಸಿ: ‘‘1947ನೇ ಜುಲೈ-ಆಗಸ್ಟ್ ತಿಂಗಳಲ್ಲಿ ಆಯುಧಗಳನ್ನು, ಸ್ಫೋಟಕ ಸಾಮಗ್ರಿಗಳನ್ನು ಕೊಳ್ಳಲು ಆಪ್ಟೆ ಮೊದಲ ಬಾರಿ ಬಂದಿದ್ದ. ಆ ಸಮಯದಲ್ಲಿ ಕರ್ಕರೆ ಆಪ್ಟೆಯೊಡನೆ ಇದ್ದ. ಯಾರೋ ಕೆಲವು ಪ್ರತಿಷ್ಠಿತ ಪ್ರಮುಖರು ಆಯುಧಗಳನ್ನು, ಮದ್ದುಗುಂಡುಗಳನ್ನು, ಸ್ಫೋಟಕ ಸಾಮಗ್ರಿಗಳನ್ನು ನನ್ನಿಂದ ಕೊಳ್ಳಲು ಬಯಸಿದ್ದಾರೆಂದು ಹೇಳಿದ. ‘ಆಗ ನನಗೂ ಒಂದು ಸ್ಪೆನ್‌ಗನ್ ತಂದುಕೊಡು’ ಎಂದು ಕೇಳಿದ. ಗುರುದಯಾಳ್ ಸಿಂಗ್ ಎಂಬಾತನಿಂದ ಆಪ್ಟೆ ಮತ್ತು ಕರ್ಕರೆಗೆ ಒದಗಿಸಿದೆ. ಯರವಾಡ ಸೆರೆಮನೆಯ ಹಿಂಭಾಗದಲ್ಲಿ ಸ್ಪೆನ್‌ಗನ್‌ಅನ್ನು ಆಪ್ಟೆಗೆ ಕೊಟ್ಟೆ. ಆಪ್ಟೆ ರೂ. 1,200ನ್ನು ಕೊಟ್ಟ. 1947ರ ಜುಲೈ, ಅಗಸ್ಟ್, ಸೆಪ್ಟಂಬರ್ ತಿಂಗಳುಗಳಲ್ಲಿ ಆಪ್ಟೆ ಮತ್ತು ಕರ್ಕರೆಗೆ ಸುಮಾರು 3,000 ರೂಪಾಯಿ ಬೆಲೆಬಾಳುವ ಆಯುಧಗಳನ್ನು, ಮದ್ದುಗುಂಡುಗಳನ್ನು, ಸ್ಫೋಟಕ ಸಮಾಗ್ರಿಯನ್ನು ಮಾರಿದ್ದೆ.’’
‘‘ಒಂದು ದಿನ ನಾನು ನಮ್ಮ ಕುಟುಂಬದವರೊಡನೆ ಭೋರ್ ರಾಜ್ಯಕ್ಕೆ ತೀರ್ಥಯಾತ್ರೆಗೆ ಹೊರಟಿದ್ದೆ. ಎರಡೆತ್ತಿನ ಗಾಡಿಯಲ್ಲಿ ಹೋಗುತ್ತಿದ್ದೆ. ಯರ್ವಾಂದನೆ ಎಂಬ ಹಳ್ಳಿಯ ಹತ್ತಿರ ಆಪ್ಟೆ ಮೋಟಾರ್ ಬೈಕ್ ಮೇಲೆ ಬರುತ್ತಿದ್ದುದನ್ನು ಕಂಡೆ. ಆಪ್ಟೆ ‘ನನಗೆ ಆ ಮಾಲು ಬೇಕು’ ಎಂದ. (ಆಯುಧ, ಮದ್ದುಗುಂಡು, ಸ್ಫೋಟಕ ವಸ್ತುಗಳು ಎಂಬುದಕ್ಕೆ ‘ಮಾಲು’ ಎಂಬ ಮಾತು ಬಳಸುತ್ತಿದ್ದರು.) ನಾನು ಹಿಂದಿರುಗಿ ಬಂದಮೇಲೆ ಖಂಡಿತ ಕೊಡುತ್ತೇನೆ ಎಂದು ಹೇಳಿದೆ. ಎಂಟು ಹತ್ತು ದಿನಗಳ ನಂತರ ಪುಣೆಗೆ ಹಿಂದಿರುಗಿದೆ. ಒಂದೆರಡು ದಿನಗಳಲ್ಲಿ ‘ಮಾಲು’ ಸಂಗ್ರಹಿಸಿದೆ. ಹಿಂದೂರಾಷ್ಟ್ರ ಸೇನೆಯ ಕಚೇರಿಗೆ ಹೋಗಿ ‘ಮಾಲು ಸಿದ್ಧವಿದೆ’ ಎಂದು ತಿಳಿಸಿದೆ... ಡಿಸೆಂಬರ್ ಕೊನೆಯ ವಾರ ಆಪ್ಟೆ ನಮ್ಮ ಅಂಗಡಿಗೆ ಬಂದು, ‘ಮಾಲು ಇನ್ನೂ ಇದೆಯೇ’ ಎಂದು ಕೇಳಿದ. ಇದೆ ಎಂದು ಹೇಳಿದೆ. ಹಾಗಾದರೆ ಮುಂಬೈಯಲ್ಲಿ ಅದನ್ನು ನನಗೆ ಕೊಡು ಎಂದ. ಮುಂಬೈಗೆ ಹೋಗಿ ಬರಲು ದಾರಿ ಖರ್ಚು ಕೊಡುವುದಾಗಿ ಹೇಳಿದ... ‘ಮಾಲ’ನ್ನು ಒಂದು ಖಾಕಿ ಬಟ್ಟೆಯ ಚೀಲದಲ್ಲಿಟ್ಟು ನಮ್ಮ ಸೇವಕ ಶಂಕರ ಕ್ರಿಸ್ಟಯ್ಯನಿಗೆ ಮುಂಬೈ ದಾದರಿನ ಹಿಂದೂ ಮಹಾಸಭಾ ಕಚೇರಿಗೆ ಹೋಗಿ ಆಪ್ಟೆ ಮತ್ತು ಗೋಡ್ಸೆಗೆ ತಲುಪಿಸು ಎಂದು ಹೇಳಿದೆ. ನಾನೂ ಜನವರಿ 14ರಂದು ನೇರವಾಗಿ ಮುಂಬೈಗೆ ಹೋಗಿ ಮಹಾಸಭಾ ಕಚೇರಿಯಲ್ಲಿ ವಿಚಾರಿಸಿದೆ. ಆಪ್ಟೆ ಮತ್ತು ಗೋಡ್ಸೆ ಇನ್ನೂ ಬಂದಿಲ್ಲವೆಂದು ತಿಳಿಸಿದರು. ಅವರಿಗಾಗಿ ಸ್ವಲ್ಪ ಹೊತ್ತು ಕಾದೆ. ಅರ್ಧಗಂಟೆ ಆದರೂ ಬರಲಿಲ್ಲ. ಆಗ ಚಹಾ ಕುಡಿದು ಬರಲು ಮೆಟ್ಟಿಲು ಇಳಿದುಬರುತ್ತಿದ್ದಾಗ ಆಪ್ಟೆ ಮೇಲಕ್ಕೆ ಬರುವುದು ಕಾಣಿಸಿತು. ನನ್ನನ್ನು ಕಂಡೊಡನೆ ಆಪ್ಟೆ: ‘ಸರಿ. ನೀನು ಬಂದದ್ದು ಒಳ್ಳೆಯದಾಯ್ತು. ಮಾಲನ್ನು ಸುರಕ್ಷಿತವಾಗಿಡಲು ಒಂದು ಜಾಗ ಹುಡುಕಬೇಕು’ ಎಂದ. ನಾನು ಶಂಕರ ಕ್ರಿಸ್ಟಯ್ಯನ ಕೈಯಿಂದ ಚೀಲ ಇಸಿದುಕೊಂಡು ನೀನು ಇಲ್ಲಿಯೇ ಕಾದಿರು ಎಂದು ಹೇಳಿ ಆಪ್ಟೆಯನ್ನು ಸೇರಿಕೊಂಡೆ. ನಾಲ್ಕೈದು ಮೆಟ್ಟಿಲು ಇಳಿಯುವುದರಲ್ಲಿ ಗೋಡ್ಸೆ ಮೆಟ್ಟಿಲು ಹತ್ತಿ ಬಂದು ಎದುರಾದ.

(ಬುಧವಾರದ ಸಂಚಿಕೆಗೆ ಮುಂದುವರಿಯುವುದು)

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕೋ. ಚೆನ್ನಬಸಪ್ಪ
ಕೋ. ಚೆನ್ನಬಸಪ್ಪ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X