Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ‘ನೋಟಾ’ದ ಮೌಲ್ಯವೆಷ್ಟು?

‘ನೋಟಾ’ದ ಮೌಲ್ಯವೆಷ್ಟು?

ನೋಟಾ ಆಯ್ಕೆಯು ಒಂದು ಕ್ರಿಯಾಶೂನ್ಯ ರಾಜಕೀಯ ಸಾಧನವಾಗಿದ್ದು ತಮ್ಮೆದುರಿನ ರಾಜಕೀಯ ವಾಸ್ತವದೊಂದಿಗೆ ಸಕ್ರಿಯವಾಗಿ ತೊಡಗಬೇಕಾದ ಜವಾಬ್ದಾರಿಯಿಂದ ವ್ಯಕ್ತಿಗಳನ್ನು ವಿಮುಖಗೊಳಿಸುತ್ತದೆ.

ಕೃಪೆ: Economic and Political Weeklyಕೃಪೆ: Economic and Political Weekly9 May 2019 6:30 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
‘ನೋಟಾ’ದ ಮೌಲ್ಯವೆಷ್ಟು?

ನೋಟಾ ವ್ಯವಸ್ಥೆಯು ಸಾಪೇಕ್ಷವಾಗಿ ಉತ್ತಮವಾಗಿರುವ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುತ್ತಾ ಇತರ ಅಭ್ಯರ್ಥಿಗಳನ್ನು ತಿರಸ್ಕರಿಸುವ ಐತಿಹಾಸಿಕತೆಯನ್ನು ಆಧರಿಸಿಲ್ಲ. ಬದಲಿಗೆ ಅದು ಮತದಾರರ ವ್ಯಕ್ತಿಗತ ಆಯ್ಕೆಯ ಪರಿಪೂರ್ಣತೆಯನ್ನು ಆಧರಿಸಿದೆ. ಹೀಗಾಗಿ ಅದು ಒಂದು ಅಚಾರಿತ್ರಿಕ ವ್ಯವಸ್ಥೆಯೂ ಆಗಿದೆ. ಆದರೆ ಚುನಾವಣಾ ಪ್ರಕ್ರಿಯೆಯು ಸಾಪೇಕ್ಷವಾಗಿ ಕೆಟ್ಟ ಅಭ್ಯರ್ಥಿಗಿಂತ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಮೂಹಿಕ ಜವಾಬ್ದಾರಿಯ ಪ್ರಜ್ಞಾಶೀಲ ಕ್ರಿಯೆಯಾಗಿದೆ.

ಒಂದು ಚುನಾವಣಾ ಪ್ರಜಾತಂತ್ರದಲ್ಲಿ ವೋಟಿನ ಹಕ್ಕು ಎಷ್ಟು ಮಹತ್ವಪೂರ್ಣವಾದದ್ದೆಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಚಲಾಯಿಸಲ್ಪಟ್ಟ ಪ್ರತಿಯೊಂದು ವೋಟುಗಳು ಸ್ಪರ್ಧಾಕಣದಲ್ಲಿರುವ ಉಮೇದುವಾರರ ತತ್‌ಕ್ಷಣದ ಗೆಲುವಿನ ಭವಿಷ್ಯವನ್ನು ಮಾತ್ರವಲ್ಲದೆ ಪ್ರಜಾತಂತ್ರದ ಭವಿಷ್ಯದ ಮೇಲೆಯೇ ನಿರ್ಣಯಾತ್ಮಕ ಪ್ರಭಾವವನ್ನು ಬೀರುತ್ತವೆ. ಹೀಗಾಗಿ ಅಂತಹ ಪ್ರಜಾತಂತ್ರಗಳಲ್ಲಿ ಪ್ರತಿಯೊಂದು ವೋಟಿಗೂ ಗಹನವಾದ ಮೌಲ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೋಟಿನ ಹಕ್ಕಿನ ಸುತ್ತ ಆಸಕ್ತಿಕರ ಚರ್ಚೆಗಳಾಗುತ್ತಿವೆ. ಕೆಲವು ಅಭ್ಯರ್ಥಿಗಳು ಮತ್ತು ಕೆಲವು ಪ್ರಮುಖ ಚುನಾವಣಾ ಪಕ್ಷಗಳು ವೋಟಿನ ಹಕ್ಕನ್ನು ಮೌಲಿಕ ಆಸ್ತಿಯೆಂದು ಪರಿಗಣಿಸಿರುವುದರಿಂದ ಮತ್ತು ಅಂತಹ ಆಸ್ತಿಯನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವುದರಿಂದ ಮತದಾರರನ್ನು ಬೆದರಿಸಿಯಾದರೂ ಅವರ ಬಳಿ ಇರುವ ವೋಟನ್ನು ಕಿತ್ತುಕೊಳ್ಳುವ ಕ್ರಮಗಳಿಗೆ ಮುಂದಾಗುತ್ತಿದ್ದಾರೆ.

ಮತ್ತೊಂದು ಕಡೆ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ನಲ್ಲಿ ಸಲ್ಲಿಸಲಾದ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಗಳ ಪರವಾಗಿ ಚಲಾಯಿಸಲಾದ ವೋಟಿಗಿಂತ, ಯಾರ ಪರವಾಗಿಯೂ ಚಲಾಯಿಸದ ಮತಗಳಲ್ಲಿ ಹೆಚ್ಚಿನ ಮೌಲ್ಯವನ್ನು ಕಾಣುವ ಸಲಹೆಯನ್ನು ಕೆಲವು ಪ್ರಜ್ಞಾವಂತ ರಾಜಕೀಯ ನಾಯಕರು ಮುಂದಿಟ್ಟಿದ್ದಾರೆ. ಹೀಗಾಗಿ ‘ನೋಟಾ’ (ನನ್ ಆಫ್ ದಿ ಎಬೋವ್- ಮೇಲಿನ ಯಾರೂ ಬೇಡ) ಮತಗಳು ಅಭ್ಯರ್ಥಿಯನ್ನು ಅಳೆಯುವಲ್ಲಿ ಇತರ ಮತಗಳಿಗಿಂತ ಹೆಚ್ಚಿನ ನೈತಿಕ ಮಾನದಂಡಗಳನ್ನು ಹೊಂದಿರುವ ವ್ಯವಸ್ಥೆಯಾಗಿ ಉಗಮಗೊಂಡಿದೆ. ಸಾರಾಂಶದಲ್ಲಿ ನೋಟಾ ವ್ಯವಸ್ಥೆಯು ತಮ್ಮ ಸಾಂವಿಧಾನಿಕ ಕರ್ತವ್ಯಕ್ಕಿಂತ ಮಿಗಿಲಾಗಿ ತಮ್ಮ ವ್ಯಕ್ತಿಗತ ನೈತಿಕ ಅಧಿಕಾರವನ್ನು ಚಲಾಯಿಸುವ ಆಯ್ಕೆಯನ್ನು ಮಾಡಿಕೊಳ್ಳುವ ನೈತಿಕ ತೀರ್ಮಾನವನ್ನು ಮತದಾರರಿಗೆ ಕೊಡುತ್ತದೆ. ಮೇಲಾಗಿ ನೋಟಾವನ್ನು ಒಂದು ನೈತಿಕ ಪ್ರತಿರೋಧವೆಂದು ಪರಿಗಣಿಸಲಾಗಿದೆಯಾದ್ದರಿಂದ ಅದರ ಬೇರುಗಳು ನಕಾರಾತ್ಮಕ ಜವಾಬ್ದಾರಿಯಲ್ಲಿವೆೆ. ನನ್ನೆದುರಿಗಿರುವ ಅಭ್ಯರ್ಥಿಗಳ ಗುಣಮಟ್ಟ ಕಡಿಮೆ ಇರುವುದರಿಂದಲೇ ನಾನು ನೋಟ ಚಲಾಯಿಸುತ್ತಿದ್ದು ಅದಕ್ಕೆ ಹೊಣೆಗಾರರು ಅಭ್ಯರ್ಥಿಗಳೇ ಹೊರತು ನಾನಲ್ಲ ಎಂದು ಅದರ ಅರ್ಥ.
ಆದರೆ ಈ ವಾದಕ್ಕೆ ಒಂದು ಪ್ರತಿವಾದವೂ ಇದೆ. ನೋಟಾ ಚಲಾಯಿಸುವ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಒಬ್ಬ ವ್ಯಕ್ತಿಯು ತಾನು ‘‘ಯಾರನ್ನೂ ಆಯ್ಕೆ ಮಾಡುವುದಿಲ್ಲ’’ ಎಂದು ತೀರ್ಮಾನ ಮಾಡುವ ಮೂಲಕ ತನ್ನ ತೀರ್ಮಾನಕ್ಕೆ ಒಂದು ಮೌಲಿಕ ಮತ್ತು ನೈತಿಕ ಅಧಿಕಾರವನ್ನು ಆರೋಪಿಸುತ್ತಿರುತ್ತಾರೆ. ಆದರೆ ನೋಟಾ ಚಲಾವಣೆ ಮಾಡಿದ ವ್ಯಕ್ತಿಯು ತನ್ನ ತೀರ್ಮಾನದ ಪರಿಣಾಮಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಯಾವಾಗಲೂ ಹೊಂದಿರುವುದು ಸಾಧ್ಯವೇ? ನೋಟಾ ಚಲಾಯಿಸಲು ಎದುರಿಗಿರುವ ಅಭ್ಯರ್ಥಿಗಳ ಕಡಿಮೆ ನೈತಿಕ ಗುಣಮಟ್ಟವೊಂದೇ ಸದಾ ಮಾನದಂಡವಾಗುತ್ತಿದೆಯೇ? ಒಂದು ತಾರ್ಕಿಕ ರಾಜಕೀಯ ತೀರ್ಮಾನ ಮಾಡಲು ಅಗತ್ಯವಾಗಿ ಬೇಕಾದ ಗ್ರಹಿಕೆಗಳ ಮೇಲೆ ನೋಟಾವನ್ನು ಆಯ್ದುಕೊಳ್ಳುವುದು ಯಾವ ಬಗೆಯ ಪರಿಣಾಮವನ್ನುಂಟು ಮಾಡುತ್ತದೆ?


ವೋಟಿನ ಮೌಲಿಕ ತೂಕವನ್ನು ನಿರ್ಧರಿಸುವುದು ಅಭ್ಯರ್ಥಿಯೇ ವಿನಃ ಮತದಾರರಲ್ಲ. ಲೈಂಗಿಕ ಕಾರ್ಯಕರ್ತರ, ಆದಿವಾಸಿಗಳ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅನುಭವಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಆ ಸಮುದಾಯಗಳ ವೋಟುಗಳನ್ನು ಕೇಳಲೂ ಸಹ ಹೋಗುವುದಿಲ್ಲ. ಅವರ ಮತಗಳನ್ನು ಪಡೆದುಕೊಳ್ಳಲು ತಗಲುವ ರಾಜಕೀಯ ವೆಚ್ಚಕ್ಕೆ ಹೋಲಿಸಿದಲ್ಲಿ ಅವರ ವೋಟುಗಳನ್ನು ಕೇಳದೇ ಇರುವುದರಿಂದ ದಕ್ಕುವ ಅಪಾರ ನೈತಿಕ ಬೆಂಬಲವು ಹೆಚ್ಚೆಂದು ಅಭ್ಯರ್ಥಿಗಳು ಲೆಕ್ಕ ಹಾಕುವಂತೆ ಕಾಣಿಸುತ್ತದೆ. ವೋಟನ್ನು ಕೇಳಲು ಬರದೆ ನಿರ್ಲಕ್ಷ ಮಾಡುವುದರಿಂದ ಅವಮಾನಕ್ಕೆ ಗುರಿಯಾಗುತ್ತಿರುವ ಮತದಾರರ ನೈತಿಕ ಭಾವನೆಗಳ ಅಭಿವ್ಯಕ್ತಿಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಮತದಾರರ ಬಳಿ ಖಾಲಿ ವೋಟಿನ ಹಕ್ಕಿದೆಯೇ ವಿನಃ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲಾ ಮತದಾರರನ್ನು ಸಮಾನ ನೆಲೆಯಲ್ಲಿ ವೋಟು ಕೇಳಬೇಕೆಂಬ ಹಕ್ಕಿಲ್ಲ. ತಮಗೆ ವೋಟು ಹಾಕಬೇಕೆಂಬ ಬಯಕೆ ಇದ್ದರೂ, ಅಭ್ಯರ್ಥಿಗಳು ತಮ್ಮ ಮತವನ್ನು ಯಾಚಿಸದೆ ಇತರ ಮತದಾರರನ್ನು ಪದೇಪದೇ ಸಂಪರ್ಕಿಸಿ ವೋಟು ಕೇಳುವ ಮೂಲಕ ತಮ್ಮ ಮತಗಳು ಬೇರೆ ಮತಗಳಿಗಿಂತ ಕಡಿಮೆ ಮೌಲ್ಯದ್ದೆಂಬ ಭಾವನೆಯನ್ನು ಹುಟ್ಟುಹಾಕುತ್ತಿದೆ ಎಂದು ಅವರು ಭಾವಿಸುತ್ತಾರೆ. ಲಿಂಗ ಅಥವಾ ಸಾಮಾಜಿಕ ಹಿನ್ನೆಲೆಯ ಭೇದಭಾವವಿಲ್ಲದೆ ಎಲ್ಲರ ಬಳಿಯೂ ಅಭ್ಯರ್ಥಿಗಳು ಮತವನ್ನು ಯಾಚಿಸಿದಾಗ ಇವರ ಮತಗಳಿಗೂ ಸಮಾನ ಮೌಲ್ಯವನ್ನು ನೀಡಿದಂತಾಗುತ್ತದೆ.
 ಒಂದು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯಲ್ಲಿ ‘ವಯಸ್ಕ’ತೆಯು ವೋಟು ಮಾಡಲು ಬೇಕಾದ ಜೈವಿಕ ಅರ್ಹತೆಯನ್ನು ನಿಗದಿ ಮಾಡುತ್ತಿದ್ದರೂ ಮತದಾನದ ಹಕ್ಕು ಜೈವಿಕ ಮಟ್ಟದ ಅರ್ಹತೆಯನ್ನು ಮಾತ್ರ ವ್ಯಕ್ತಪಡಿಸುವುದಿಲ್ಲ. ಬದಲಿಗೆ ಅದು ಜಾತಿ, ಲಿಂಗ-ಧರ್ಮಗಳ ವ್ಯತ್ಯಾಸವಿಲ್ಲದೆ ಎಲ್ಲಾ ವೋಟುಗಳಿಗೂ ಸಮಾನ ಮೌಲ್ಯವನ್ನು ನಿಗದಿ ಮಾಡುವ ಒಂದು ನೈತಿಕ ಸ್ಥಿತಿಯನ್ನು ನಿರ್ದೇಶಿಸುತ್ತದೆ. ಸಾರ್ವತ್ರಿಕ ಮತದಾನದ ಹಕ್ಕಿನಲ್ಲಿರುವ ‘ಸಾರ್ವತ್ರಿಕ’ ಎಂಬುದರ ನೈತಿಕ ಸಾರ ಇದೇ ಆಗಿದೆ.
 ನೋಟಾ ಆಯ್ಕೆ ಮಾಡುವಾಗ ಅಭ್ಯರ್ಥಿಗಳ ಸಾಮರ್ಥ್ಯವನ್ನು ಅಳೆಯುವಲ್ಲಿ ಯಾವಾಗಲೂ ಸಾರ್ವತ್ರಿಕ ನೈತಿಕ ಮಾನದಂಡಗಳನ್ನೇ ಅನ್ವಯಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ನೋಟಾ ಚಲಾಯಿಸಲು ಇತರ ಸಾಮಾಜಿಕ ಕಾರಣಗಳೂ ಎದುರಾಗಬಹುದು. ಮೀಸಲು ಕ್ಷೇತ್ರಗಳಲ್ಲೇ ಹೆಚ್ಚಿನ ಸಂಖ್ಯೆಯ ನೋಟಾ ಮತಗಳು ಚಲಾವಣೆಯಾಗುವುದನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು? ಹೀಗಾಗಿ ಆ ಕ್ಷೇತ್ರಗಳ ನಿರ್ದಿಷ್ಟ ಸಾಮಾಜಿಕ ಲಕ್ಷಣಗಳಿಂದಾಗಿಯೇ ಮತದಾರರು ನೋಟಾ ಆಯ್ಕೆ ಮಾಡಿಕೊಂಡಿರಬಹುದು ಎಂದೂ ಕೂಡಾ ಹೇಳಬಹುದು. ಮೀಸಲು ಕ್ಷೇತ್ರಗಳ ಚುನಾವಣಾ ರಾಜಕೀಯವು ಸಾಪೇಕ್ಷವಾಗಿ ಕಡಿಮೆ ಸ್ಪರ್ಧಾತ್ಮಕವಾಗಿರುತ್ತದೆ. ಈ ಪರಿಸ್ಥಿತಿಯು ಅಲ್ಲಿನ ಮತದಾರರಿಗೆ ನೋಟಾ ಆಯ್ಕೆಯನ್ನು ಮಾಡದಿರಲು ಬೇಕಾಗುವಷ್ಟು ಹೆಚ್ಚಿನ ಉತ್ತೇಜನವನ್ನೇನೂ ನೀಡುವುದಿಲ್ಲ. ನೋಟಾ ವ್ಯವಸ್ಥೆಯಲ್ಲಿ ಮತದಾರರು ಬೇರೆ ಯಾವುದೇ ವಿಷಯಗಳನ್ನು ಪರಿಗಣಿಸದೆ ಕೇವಲ ಸಾರ್ವಜನಿಕ ಪ್ರತಿನಿಧಿಗಳ ಗುಣಮಟ್ಟವು ಕುಸಿಯುತ್ತಿರುವ ಬಗ್ಗೆ ತನ್ನ ವ್ಯಕ್ತಿನಿಷ್ಠ ಅಭಿಪ್ರಾಯಗಳನ್ನು ಮಾತ್ರ ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ವಾದಿಸಬಹುದು. ಆದರೆ ಮತದಾರರು ಈ ತೀರ್ಮಾನಗಳನ್ನು ಅಭ್ಯರ್ಥಿಗಳ ಜೊತೆ ನಡೆಸಿದ ಒಡನಾಟದ ನಂತರದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳೇನೂ ಆಗಿರುವುದಿಲ್ಲ. ಮತದಾರರ ಮಧ್ಯಪ್ರವೇಶದ ಸಾಮರ್ಥ್ಯವು ಇಂತಹ ಅಭ್ಯರ್ಥಿಗಳನ್ನು ಹುಟ್ಟುಹಾಕುವ ನಿಗೂಢ ರಾಜಕೀಯ ಕಸರತ್ತಿನಲ್ಲಿ ವ್ಯರ್ಥವಾಗುತ್ತದೆ. ಹೀಗಾಗಿ ಒಂದು ಅರ್ಥಪೂರ್ಣ ಪ್ರಕ್ರಿಯೆಯಲ್ಲಿ ಮತಗಳ ಮಧ್ಯಪ್ರವೇಶದ ಶಕ್ತಿಯು ಪರಿಶೀಲನೆಯಾದ ನಂತರದಲ್ಲಿ ಅದರ ಆಧಾರದ ಮೇಲೆ ಮತದಾರರು ನೋಟಾ ಚಲಾಯಿಸುವ ಪ್ರಜ್ಞಾಪೂರ್ವಕ ತೀರ್ಮಾನಕ್ಕೆ ಬರುತ್ತಿಲ್ಲ. ಹೀಗಾಗಿ ನೋಟಾ ವ್ಯವಸ್ಥೆಯು ವ್ಯಕ್ತಿಯನ್ನು ಅವರಿಗಿರುವ ಸಾಮೂಹಿಕ ಜವಾಬ್ದಾರಿಯ ತತ್ವದಿಂದ ಪ್ರತ್ಯೇಕಗೊಳಿಸುತ್ತದೆ. ಏಕೆಂದರೆ ಅದು ಇಂತಹ ಕೆಟ್ಟ ರಾಜಕೀಯದ ಹುಟ್ಟಿಗೆ ತಾನೂ ಪರೋಕ್ಷವಾಗಿ ಕಾರಣವಾಗಿರುವ ಜವಾಬ್ದಾರಿಯನ್ನು ಹೊರದಂತೆ ಮಾಡುತ್ತದೆ.
ಐತಿಹಾಸಿಕವಾಗಿ ಸಂವೇದನಾಶೀಲವಾದ ಧೋರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ನೋಟಾದ ಒಗಟನ್ನು ಬಿಡಿಸಬಹುದು. ನೋಟಾ ವ್ಯವಸ್ಥೆಯು ಸಾಪೇಕ್ಷವಾಗಿ ಉತ್ತಮವಾಗಿರುವ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುತ್ತಾ ಇತರ ಅಭ್ಯರ್ಥಿಗಳನ್ನು ತಿರಸ್ಕರಿಸುವ ಐತಿಹಾಸಿಕತೆಯನ್ನು ಆಧರಿಸಿಲ್ಲ. ಬದಲಿಗೆ ಅದು ಮತದಾರರ ವ್ಯಕ್ತಿಗತ ಆಯ್ಕೆಯ ಪರಿಪೂರ್ಣತೆಯನ್ನು ಆಧರಿಸಿದೆ. ಹೀಗಾಗಿ ಅದು ಒಂದು ಅಚಾರಿತ್ರಿಕ ವ್ಯವಸ್ಥೆಯೂ ಆಗಿದೆ. ಆದರೆ ಚುನಾವಣಾ ಪ್ರಕ್ರಿಯೆಯು ಸಾಪೇಕ್ಷವಾಗಿ ಕೆಟ್ಟ ಅಭ್ಯರ್ಥಿಗಿಂತ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಮೂಹಿಕ ಜವಾಬ್ದಾರಿಯ ಪ್ರಜ್ಞಾಶೀಲ ಕ್ರಿಯೆಯಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕೃಪೆ: Economic and Political Weekly
ಕೃಪೆ: Economic and Political Weekly
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X