Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಶಿಕ್ಷಕನಿಂದ ನವ ಭಾರತದ ವಿದ್ಯಾರ್ಥಿಗಳ...

ಶಿಕ್ಷಕನಿಂದ ನವ ಭಾರತದ ವಿದ್ಯಾರ್ಥಿಗಳ ಹೆತ್ತವರಿಗೊಂದು ಪತ್ರ

ರೋಹಿತ್ ಕುಮಾರ್ರೋಹಿತ್ ಕುಮಾರ್6 Jun 2019 6:35 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಶಿಕ್ಷಕನಿಂದ ನವ ಭಾರತದ ವಿದ್ಯಾರ್ಥಿಗಳ ಹೆತ್ತವರಿಗೊಂದು ಪತ್ರ

ಪ್ರಿಯ ಹೆತ್ತವರೇ,
ನಿಮಗೆ ತಿಳಿದಿರುವಂತೆ ಕಳೆದ ಕೆಲವು ವರ್ಷಗಳಿಂದ ನಿಮ್ಮ ಮಕ್ಕಳಿಗೆ ಬೋಧನೆ ಮಾಡುವ ಸಂತೋಷ ಮತ್ತು ಗೌರವ ನನ್ನದಾಗಿದೆ. ಮಕ್ಕಳ ಜೊತೆ ನಾನು ಅವರು ತಾರುಣ್ಯಕ್ಕೆ ಬರುವುದಕ್ಕಿಂತ ಸ್ವಲ್ಪ ಮೊದಲಿನಿಂದ ಬೆರೆಯಲು ಆರಂಭಿಸಿ ಅವರು ಮತದಾನದ ಹಕ್ಕು ಗಳಿಸುವ ಪ್ರಾಯಕ್ಕೆ ಬರುವ ವರೆಗೂ ಅವರ ಜೊತೆಗಿರುತ್ತೇನೆ.
ಬಾಲ್ಯ ಸಂಪೂರ್ಣವಾಗಿ ಹೋಗದ ಮತ್ತು ಪ್ರೌಢಾವಸ್ಥೆ ಸಂಪೂರ್ಣವಾಗಿ ಬೆಳೆಯದ ಹಂತವಾಗಿರುವ ಈ ತರುಣಾವಸ್ಥೆ ಎನ್ನುವುದು ಮಕ್ಕಳ ಪಾಲಿಗೆ ತುಂಬ ವಿಚಿತ್ರವಾಗಿರುತ್ತದೆ. ಅವರ ಜೀವನದ ಈ ಸೀಮಿತ ಅವಧಿಯು ದಾರಿ ತಪ್ಪಿಸುವಂತಹದ್ದಾಗಿರುತ್ತದೆ.
ಬಾಲ್ಯದಿಂದ ಪ್ರೌಢಾವಸ್ಥೆಯೆಡೆಗಿನ ಈ ಪರಿವರ್ತನೆಯ ಮಧ್ಯೆ ಗೊಂದಲ ಮತ್ತು ಅಸ್ಪಷ್ಟತೆ ಮಕ್ಕಳನ್ನು ಬಹಳವಾಗಿ ಕಾಡುತ್ತದೆ. ಸದ್ಯ ನಮ್ಮ ದೇಶದಲ್ಲಿ ನಡೆಯುತ್ತಿರುವುದೂ ಅದೇ.
2019ರ ಲೋಕಸಭಾ ಚುನಾವಣೆಯ ನಂತರ ಹಳೆ ಭಾರತ ಬದಿಗೆ ಸರಿಯುವ ಹಂತದಲ್ಲಿದ್ದರೆ ನವ ಭಾರತ ಇನ್ನೂ ಸಂಪೂರ್ಣವಾಗಿ ಆಗಮಿಸಿಲ್ಲ.
ನಿಮ್ಮಲ್ಲಿ ಕೆಲವರು ಬಿಜೆಪಿಗೆ ಮತ ಹಾಕಿದ್ದೀರಿ ಮತ್ತು ಕೆಲವರು ಹಾಕಿಲ್ಲ. ನಿಮ್ಮಲ್ಲಿ ಕೆಲವರಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿರುವುದು ಖುಷಿ ನೀಡಿದ್ದರೆ ಕೆಲವರಿಗೆ ನೀಡಿಲ್ಲ. ಈ ಪತ್ರವನ್ನು ನಾನು ನಿಮ್ಮ ರಾಜಕೀಯ ಆದ್ಯತೆಗಳನ್ನು ಪರಿಗಣಿಸದೆ ಬರೆಯುತ್ತಿದ್ದೇನೆ. ಯಾಕೆಂದರೆ ನೀವು ಹೆತ್ತವರು.
ಇತ್ತೀಚೆಗಷ್ಟೇ ಪ್ರಮುಖ ಚುನಾವಣೆಯನ್ನು ಎದುರಿಸಿರುವು ದರಿಂದ ದೇಶದಲ್ಲಿ ರಾಜಕೀಯ ವಾತಾವರಣ ಬಿಸಿಯಾಗಿದೆ ಮತ್ತು ಈಗಲೂ ಎಡ ಮತ್ತು ಬಲಗಳ ನಡುವಿನ ಸೈದ್ಧಾಂತಿಕ ಹೋರಾಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಆದರೆ ಒಂದು ಹೆಜ್ಜೆ ಹಿಂದಿಟ್ಟು ನೋಡಿದಾಗ, ಭಾರತದಲ್ಲಿ ಹುಟ್ಟಿಕೊಂಡಿರುವ ಈ ಹೋರಾಟ ರಾಜಕೀಯ ಎಡ ಮತ್ತು ರಾಜಕೀಯ ಬಲದ ಮಧ್ಯೆಯಲ್ಲ ಬದಲಿಗೆ ಅದು ಯಾವುದು ನೈತಿಕವಾಗಿ ಸರಿ ಮತ್ತು ನೈತಿಕವಾಗಿ ತಪ್ಪು ಎನ್ನುವುದರ ಮಧ್ಯೆ ನಡೆಯುತ್ತಿರುವ ಯುದ್ಧ ಎನ್ನುವುದು ತಿಳಿಯುತ್ತದೆ.
ನೀವು ಯಾರಿಗೆ ಮತ ಹಾಕಿದ್ದರೂ ನನ್ನ ಈ ಮಾತುಗಳನ್ನು ಒಪ್ಪುತ್ತೀರಿ ಎಂದು ಭಾವಿಸುತ್ತೇನೆ: ದ್ವೇಷಿಸುವುದು ತಪ್ಪು, ಜಾತಿ ಮತ್ತು ಕೋಮು ಆಧಾರಿತ ಬೈಗುಳ ತಪ್ಪು, ತಾರತಮ್ಯ ತಪ್ಪು, ಇತರರನ್ನು ಕೆಟ್ಟವರನ್ನಾಗಿ ಬಿಂಬಿಸುವುದು ತಪ್ಪು, ಅವಮಾನಿಸುವುದು ತಪ್ಪು ಮತ್ತು ಹಿಂಸೆ ತಪ್ಪು.
ಮೇಲೆ ತಿಳಿಸಿದ ವಿಷಯಗಳನ್ನು ವೌನವಾಗಿ ಅಥವಾ ಇತರ ಯಾವುದೇ ರೀತಿಯಲ್ಲಿ ಬೆಂಬಲಿಸುವುದು ತಪ್ಪು. ಯಾರು ಎಷ್ಟು ವಿರೋಧಿಸಿದರೂ ಸರಿ ಯಾವತ್ತೂ ಸರಿಯೇ ಮತ್ತು ತಪ್ಪು ಯಾವತ್ತಿದ್ದರೂ ತಪ್ಪೇ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಶಿಕ್ಷಕನಾಗಿ ನನಗೆ ಎರಡು ಗುರಿಗಳಿವೆ. ನಾನು ಕಲಿಸುವ ವಿಷಯ ನಿಮ್ಮ ಮಕ್ಕಳಿಗೆ ಅರ್ಥವಾಗುವಂತೆ ನೋಡಿಕೊಳ್ಳುವುದು ಮತ್ತು ಅದರಲ್ಲಿ ಉತ್ತಮ ನಿರ್ವಹಣೆ ತೋರುವುದು. ಅದರ ಜೊತೆಗೆ ಅವರು ಉತ್ತಮ ಮಾನವರಾಗಿ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನನ್ನದಾಗಿದೆ.
ಓರ್ವ ಉತ್ತಮ ನಾಗರಿಕನ ಮುಖ್ಯ ಗುಣವೆಂದರೆ ನೈತಿಕೆಯನ್ನು ಯಾವಾಗಲೂ ಬೆಂಬಲಿಸುವುದು ಮತ್ತು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ತಿಳಿಸಲು ಸಮರ್ಥವಾಗಿರುವುದು.
ಈ ಕಾರ್ಯ ಬಹಳ ದೀರ್ಘಾವಧಿಯದ್ದು ಅದು ರಾತ್ರಿ ಬೆಳಗಾಗುವುದರೊಳಗೆ ಆಗುವಂಥದ್ದಲ್ಲ ಎನ್ನುವುದು ನನಗೆ ತಿಳಿದಿದೆ. ಆದರೆ ಇತರ ಶಿಕ್ಷಕರಂತೆ ನಾನೂ ನಿಮ್ಮ ಮಗ ಮತ್ತು ಮಗಳು, ಪರಸ್ಪರರು ಗೌರವಕ್ಕೆ ಅರ್ಹ ಮನುಷ್ಯರೆಂದು ಭಾವಿಸುವ, ಇತರರನ್ನು ಸಹಾನುಭೂತಿ ಮತ್ತು ದಯೆಯಿಂದ ಕಾಣುವ, ತಾರತಮ್ಯ ಮತ್ತು ಕೆಟ್ಟವರನ್ನಾಗಿಸುವ ಅಪಾಯದ ಅರಿವು, ಸಂಘರ್ಷಗಳನ್ನು ಶಾಂತಿಯುತವಾಗಿ ಬಗೆಹರಿಸುವುದು, ತಮ್ಮ ಋಣಾತ್ಮಕ ಒತ್ತಡಕ್ಕೆ ಮಣಿಯದಿರುವುದು, ತಪ್ಪು ನಡೆದಾಗ ಕ್ಷಮೆ ಕೇಳುವ ವಿನಯತೆ, ತಪ್ಪಿನಿಂದ ಕಲಿಯುವ ಮೂಲಕ ಉತ್ತರ ಮತ್ತು ಜಾಣ ವ್ಯಕ್ತಿಯಾಗುವುದು ಇತ್ಯಾದಿ ಗುಣಗಳನ್ನು ಬೆಳೆಸಲು ನೆರವಾಗುತ್ತೇನೆ.
ನೀವೂ ನಿಮ್ಮ ಮಕ್ಕಳು ಈ ಮೇಲಿನ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಬಯಸುತ್ತೀರಿ ಎಂದು ನಾನು ಭಾವಿಸುತ್ತೇನೆ.
ನಾಗರಿಕತೆ ಎನ್ನುವುದು ಸದಾ ನಾಗರಿಕತ್ವ ಮತ್ತು ಅನಾಗರಿಕತೆಯ ನಡುವಿನ ಹೋರಾಟವಾಗಿದೆ. ಸದ್ಯ ಅನಾಗರಿಕತೆ ಮೇಲುಗೈ ಸಾಧಿಸಿದೆ. ಚುನಾವಣೆ ಮುಗಿದ ಐದು ದಿನಗಳಲ್ಲಿ ಕೋಮು ದ್ವೇಷದ ಐದು ಪ್ರತ್ಯೇಕ ಘಟನೆಗಳು ನಡೆದಿವೆ. ಇವುಗಳ ಪೈಕಿ, ಗುರುಗ್ರಾಮದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಯುವಕನಿಗೆ ಥಳಿಸಿರುವ ಘಟನೆ ತೀರಾ ಇತ್ತೀಚಿನದ್ದು.
ಈ ಭಾರತವನ್ನು ನೀವು ನಿಮ್ಮ ಮಕ್ಕಳಿಗೆ ಬಯಸುವಿರಾ? ನಾನಂತೂ ನನ್ನ ವಿದ್ಯಾರ್ಥಿಗಳಿಗೆ ಈ ಭಾರತ ಬಯಸುವುದಿಲ್ಲ.
ಒಂದು ಮಗುವನ್ನು ಬೆಳೆಸಲು ಒಂದು ಗ್ರಾಮ ಬೇಕಾಗುತ್ತದೆ ಎಂಬ ಮಾತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮವನ್ನು ಅದರ ಅತ್ಯಂತ ದುರ್ಬಲ ಮತ್ತು ಸೂಕ್ಷ್ಮ ನಿವಾಸಿಗಳನ್ನು ಕೆಟ್ಟವರನ್ನಾಗಿಸಲು ಬದ್ಧವಾಗಿರುವ ಗುಂಪು ನಿಯಂತ್ರಿಸುತ್ತಿದೆ. ನಮ್ಮ ಮಕ್ಕಳನ್ನು ದ್ವೇಷ ಸುತ್ತುವರಿದಿದೆ. ಅವರು ಹಿಂಸೆಯನ್ನು ಟಿವಿ, ಸಾಮಾಜಿಕ ಮಾಧ್ಯಮ, ತಮ್ಮ ನಾಯಕರ ಭಾಷಣ ಮತ್ತು ಅಂತಿಮವಾಗಿ ತಮ್ಮ ಶಾಲೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೂ ನೋಡುತ್ತಿದ್ದಾರೆ.
ಈ ದ್ವೇಷ ಮತ್ತು ಹಿಂಸೆಯನ್ನು ಯಾವುದೇ ಅಳುಕಿಲ್ಲದೆ ತಿರಸ್ಕರಿಸುತ್ತೇವೆ ಎಂದಷ್ಟೇ ಕನಿಷ್ಠ ನಾವು ಹೆತ್ತವರು ಮತ್ತು ಶಿಕ್ಷಕರು ಮಕ್ಕಳಿಗೆ ಹೇಳಬಹುದಷ್ಟೇ. ನಾವು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಬಗ್ಗೆ ಅವಮಾನಕರ ಮಾತುಗಳನ್ನಾಡುವುದನ್ನು ನಿಲ್ಲಿಸಬಹುದು. ನಾವು ಮನೆಯಲ್ಲಿ ಮಾತನಾಡುವ ವೇಳೆ ಜನಾಂಗೀಯ ಮತ್ತು ಪೂರ್ವಾಗ್ರಹಪೀಡಿತ ಹೇಳಿಕೆಗಳನ್ನು ನೀಡುವುದನ್ನು ತಡೆಯಬಹುದಾಗಿದೆ.
ನಾನು ಕಾಣುವಂತೆ, ಪೂರ್ವಾಗ್ರಹ ಮತ್ತು ಮತಾಂಧತೆಯ ಏರುತ್ತಿರುವ ಈ ಅಲೆಯ ಪರಿಣಾಮದಿಂದ ನಮ್ಮ್ಮ ಮಕ್ಕಳನ್ನು ರಕ್ಷಿಸಲು ನಾವು ಪ್ರಜ್ಞಾಪೂರ್ವಕವಾಗಿ ಸಭ್ಯತೆ ಮತ್ತು ನಾಗರಿಕತೆಯ ವೌಲ್ಯದೊಂದಿಗೆ ಜೀವಿಸಬೇಕು ಮತ್ತು ನಮ್ಮ ಸುತ್ತಮುತ್ತಲ ಜನರು ಏನೇ ಮಾಡಿದರೂ ಸರಿಯಾದುದನ್ನೇ ಮಾಡಬೇಕು.
ನಮ್ಮ ಮಕ್ಕಳು ತಮ್ಮ ಉಳಿದ ಜೀವನದಲ್ಲಿ ಏನಾಗಲಿದ್ದಾರೋ ಅದು ಅವರು ಈಗಲೇ ಆಗುತ್ತಿದ್ದಾರೆ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅವರು ನಮ್ಮ ವೈಯಕ್ತಿಕ ಉದಾಹರಣೆಯನ್ನು ನಾವು ಯೋಚಿಸುವುದಕ್ಕಿಂತಲೂ ಬಹಳ ಸಮೀಪದಿಂದ ಗಮನಿಸುತ್ತಿರುತ್ತಾರೆ. ಅವರು ದೊಡ್ಡವರಾಗಿ ಏನಾಗಬೇಕೆಂದು ನಾವು ಬಯಸುತ್ತೇವೆಯೋ ಆ ರೀತಿಯಲ್ಲೇ ನಾವು ವರ್ತಿಸಬೇಕು.
ನಮ್ಮ ಮಕ್ಕಳು ಮಕ್ಕಳಾಗಿ ಉಳಿಯದ ಕಾಲವೊಂದು ಬರುತ್ತದೆ. ನಿಮ್ಮ ವಿಷಯದಲ್ಲಿ ಆ ಹಂತ ಸದ್ಯದಲ್ಲೇ ಬರಲಿದೆ. ನಾನು ನಿಮ್ಮಲ್ಲಿ ಕೇಳುವ ಪ್ರಶ್ನೆಯೆಂದರೆ, ನೀವು ನಿಮ್ಮ ಮಕ್ಕಳು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ಬಯಸುತ್ತೀರಿ?
ಕೃಪೆ: ದಿ ವೈರ್

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ರೋಹಿತ್ ಕುಮಾರ್
ರೋಹಿತ್ ಕುಮಾರ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X