Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಹೊಸ...

ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಹೊಸ ಮುಖವಾಡ

ಗಾಂಧಿ ಕಗ್ಗೊಲೆ: ಕಾರಣ - ಪರಿಣಾಮ

ಕೋ. ಚೆನ್ನಬಸಪ್ಪಕೋ. ಚೆನ್ನಬಸಪ್ಪ8 Jun 2019 12:01 AM IST
share
ರಾಜಕೀಯ ಉದ್ದೇಶ  ಈಡೇರಿಸಿಕೊಳ್ಳಲು ಹೊಸ ಮುಖವಾಡ

ಭಾಗ-37

ಬೆಳಗ್ಗೆ ಮೈದಾನದಲ್ಲಿ ದಂಡಧಾರಿಗಳಾಗಿ ಕವಾಯತು ಮಾಡಿ, ಭಗವಾ ಝಂಡಾದ ಮುಂದೆ ‘ನಮಸ್ತೇ ಸದಾ ವತ್ಸಲೆ ಮಾತೃಭೂಮಿ’ ಎಂದು ಧ್ವಜ ವಂದನೆ ಮಾಡುವ ಕಪ್ಪು ಟೋಪಿ ಚಡ್ಡಿ ಧರಿಸಿದವರೇ ಚುನಾವಣೆ ಕಾಲದಲ್ಲಿ ಕಮಲದ ಚಿಹ್ನೆಯ ಬಾವುಟ ಬೀಸುತ್ತ ಮತ ಯಾಚನೆ ಮಾಡುವುದನ್ನು ಕಣ್ಣಾರೆ ಕಾಣುವ ಜನರಿಗೆ ಸಂಘ ಮತ್ತು ಬಿಜೆಪಿ ಒಂದೇ ಎಂದು ಅನ್ನಿಸುವುದರಲ್ಲಿ ಸಂದೇಹವಿಲ್ಲ.

ಗುರೂಜಿ (ಗೋಳ್ವಾಲ್ಕರ್) ಆಜ್ಞೆಗಳನ್ನು ಶಿಷ್ಯರು ಶಿರವಹಿಸಿ ಪಾಲಿಸಬೇಕು. ಗುರು-ಶಿಷ್ಯರಿಗೆ ಕೊಡುವ ಆದೇಶ (ಮಂತ್ರ) ಯಾವಾಗಲೂ ಗುಟ್ಟಾಗಿಯೇ ಇರಬೇಕು. ಆದ್ದರಿಂದಲೇ ಸಂಘಪರಿವಾರದ ಕಾರ್ಯಕ್ರಮ ಸೂಚಿಗಳೆಲ್ಲ ಗುಟ್ಟು, ಗುಟ್ಟೇ ಸಂಘಪರಿವಾರದ ಬೆಳವಣಿಗೆ, ಶಕ್ತಿಯ ಗುಟ್ಟು. ನಮಗೆ ಪರಿಚಯವಿರುವ ಸಮಾಜದಲ್ಲಿ ವ್ಯಕ್ತಿಯ ಸ್ವಾರ್ಥವೇ ಎದ್ದು ಕಾಣುತ್ತದೆ. ಆದ್ದರಿಂದ ಗೋಳ್ವಾಲ್ಕರ್ ಸಂಘ ಈ ಸಾಧಾರಣ ಸಮಾಜದಂತೆ ಅಲ್ಲ. ನಿಃಸ್ವಾರ್ಥ ಸರ್ವಸಮರ್ಪಣ ಭಾವದ ಪರಿಶುದ್ಧಾತ್ಮರಾದ ರಾಷ್ಟ್ರಭಕ್ತ ಸಂಘದ ಸದಸ್ಯರಿಂದಲೇ ದೇಶೋದ್ಧಾರ. ಅವರು ಹೇಳುತ್ತಾರೆ- ಈ ದೇಶೋದ್ಧಾರ ರಾಷ್ಟ್ರ ಪುನರ್ನಿರ್ಮಾಣ ಸಂಘದ ಸದಸ್ಯರಿಂದ ಮಾತ್ರ ಸಾಧ್ಯ. ರಾಜಕಾರಣ (ರಾಜನೀತಿ)ದಿಂದ ಅಲ್ಲ ಎಂಬುದು ಅವರ ನಿಶ್ಚಿತ ನಿಲುಮೆ. ರಾಜಕಾರಣ (ರಾಜನೀತಿ=politics) ಎಂಬುದು ವೇಶ್ಯಾವೃತ್ತಿಯಂತೆ ಬಂದವರನ್ನು ತೃಪ್ತಿಪಡಿಸಲು ಬಹುರೂಪ ಧರಿಸುತ್ತದೆ-(‘ರಾಜನೀತಿ ವರಾಂಗನೈವ ಅನೇಕ ರೂಪಾ’) ಎಂದು ಬಣ್ಣಿಸಿದ್ದಾರೆ. ಆದ್ದರಿಂದ ರಾಜಕೀಯ ಕ್ಷೇತ್ರದ ವಾರಾಂಗನೆ (ವೇಶ್ಯೆ)ಯಾಗದ ಪರಿಶುದ್ಧ ಕನ್ನೆಯರೊ, ಪತಿವ್ರತೆಯರೊ ಆದ ಸಂಘದ ರಾಷ್ಟ್ರಭಕ್ತ ಸ್ವಯಂ ಸೇವಕರೇ ಹಿಂದೂ ರಾಷ್ಟ್ರ ನಿರ್ಮಾಪಕರೆಂದು ಗುರೂಜಿ ಭಾವಿಸಿದ್ದರು. ಆದ್ದರಿಂದ ಸಂಘ ರಾಜಕಾರಣದಲ್ಲಿ (ಪ್ರವೇಶಿಸ)ಕಾಲಿಡಬಾರದು. ಕೈ ಹಾಕಬಾರದು. ರಾಜಕೀಯ ಪ್ರವೇಶ ಮಾಡುವವರು ಸಂಘ ಬಿಟ್ಟು ತೊಲಗಬೇಕು.

ಗೋಳ್ವಾಲ್ಕರ್‌ರ ಈ ತರ್ಕ ವಿಚಿತ್ರವಾಗಿ ಕಾಣುತ್ತದೆ. ಒಂದು ಕಡೆ ಹಿಂದುತ್ವದ ಆಧಾರದ ಮೇಲೆಯೇ ಅಖಂಡ ಭಾರತದ ಪುನರುತ್ಥಾನವಾಗಬೇಕು ಎಂಬ ಆದರ್ಶವನ್ನು ಮುಂದಿಟ್ಟಿದ್ದಾರೆ.ಅದೇ ಕಾಲಕ್ಕೆ ರಾಜಕಾರಣದಲ್ಲಿ ಪ್ರವೇಶಿಸಬಾರದು ಎಂಬ ನಿಷೇಧಾಜ್ಞೆಯನ್ನೂ ವಿಧಿಸುತ್ತಾರೆ. ಹಾಗಾದರೆ ಅವರ ಆದರ್ಶ ಅಖಂಡ ಭಾರತ ಸಿದ್ಧಿ ಹೇಗೆ ಸಾಧ್ಯ? ಈ ದ್ವಂದ್ವಗಳಲ್ಲಿ ಸಾಮರಸ್ಯ ತರಲಾಗದೆ ಅವರ ಜೀವಿತಕಾಲದಲ್ಲೇ ಸಂಘಪರಿವಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ಆಗ ರಾಜಕೀಯ ನಾಯಕರು ಒಂದು ದಾರಿಯನ್ನು ಕಂಡುಕೊಂಡರು. ಸಂಘಪರಿವಾರದ ರಾಜಕೀಯ ಉದ್ದೇಶವನ್ನು ಕಾರ್ಯಗತಗೊಳಿಸಲು ‘ಹಿಂದೂ ಮಹಾಸಭೆ’ ಎಂಬ ರಾಜಕೀಯ ಪಕ್ಷವನ್ನೇ ಕಟ್ಟಿದರು. ಪಕ್ಷ ಕಟ್ಟಿದವರೆಲ್ಲ ಸಂಘದ ಗರಡಿಯಲ್ಲಿ ಪಳಗಿದವರು. ಅಂದರೆ ಹಿಂದೂ ಮಹಾಸಭೆ ಆರೆಸ್ಸೆಸ್ ಸಂಘದ ರಾಜಕೀಯ ಆಯುಧ. ರಾಜಕೀಯ ಪಕ್ಷಕ್ಕೆ ಬಂದಾಗ ಅವರು ತಮ್ಮ ಸಂಘ ಜೀವನದ ಪೂರ್ವಾಶ್ರಮವನ್ನು ತೊರೆದರೆಂದಲ್ಲ! ಅವರು ಪಕ್ಷದಲ್ಲಿದ್ದು ಸಂಘದ ನಿರ್ದೇಶನದಂತೆ ಕೆಲಸ ಮಾಡುವ ಆಜ್ಞಾರಾಧಕರು, ರಾಜಕೀಯ ಕ್ಷೇತ್ರದಲ್ಲಿ ಏನು ಮಾಡಬೇಕೆಂಬುದನ್ನು ಸಂಘ ಸರಸಂಚಾಲಕರೇ ‘ಹಕುಂ’ ಮಾಡುವವರು. ಅವರ ಈ ಕಾರ್ಯತಂತ್ರ ಗಾಂಧಿ ಹತ್ಯೆ ಮಾಡಿದ ಕೊಲೆಗಾರರನ್ನು ನ್ಯಾಯಾಲಯದಲ್ಲಿ ರಕ್ಷಣೆ ಮಾಡುವುದಕ್ಕಾಗಿ ಅಖಿಲ ಭಾರತ ರಕ್ಷಣಾ ಸಮಿತಿಯಲ್ಲಿ ಕಾಣುತ್ತದೆ. ಆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಧನಸಂಗ್ರಹಕಾರರೂ ಸಂಘಪರಿವಾರದ ನಿಕಟವರ್ತಿಗಳು. ಅಂಥ ನಿಕಟ ಸಂಪರ್ಕವಿದ್ದರೂ ಗಾಂಧಿ ಹತ್ಯೆ ಸಂಘದಿಂದಾದ ಕೃತ್ಯವಲ್ಲ!! ಸಂಘಪರಿವಾರದ ಈ ‘ರಾಜನೀತಿ’ ಇಂದಿಗೂ ಹಿಂದೂ ಮಹಾಸಭೆಯ ಔರಸ ಸಂತಾನವಾದ ಜನಸಂಘ, ತರುವಾಯ ಭಾರತೀಯ ಜನತಾ ಪಕ್ಷದ ರಾಜಕಾರಣಿಗಳಲ್ಲೂ ಕಾಣುತ್ತದೆ. 1979(ಜೂನ್ 6, 1979)ರಲ್ಲಿ ಗುರೂಜಿ ಗೋಳ್ವಾಲ್ಕರ್ ನಿಧನರಾದ ಮೇಲೆ ಹಿಂದಿನ ಹಿಂದೂ ಮಹಾಸಭೆ ಈಗಿನ ಭಾಜಪದಲ್ಲಿ ಪ್ರತ್ಯಕ್ಷವಾಗಿ ಸಕ್ರಿಯ ರಾಜಕಾರಣದಲ್ಲಿ ಕುತ್ತಿಗೆ ಮಟ್ಟ, ಅದರಲ್ಲಿಯೆ ಮುಳುಗಿದ್ದಾರೆಯೋ ಅವರೆಲ್ಲ ಸಂಘಪರಿವಾರದ ಪ್ರಸಿದ್ಧ ಸ್ವಯಂ ಸೇವಕರೇ ಆಗಿದ್ದಾರೆ. ಅದರ ಅತ್ಯಂತ ನಿಃಸಂದಿಗ್ಧ ನಿರಾಕರಿಸಲಾಗದ ಉದಾಹರಣೆಗಳೆಂದರೆ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಅಮೆರಿಕಕ್ಕೆ ಹೋಗಿದ್ದಾಗ ನ್ಯೂಯಾರ್ಕಿನಲ್ಲಿ ‘‘ನಾನು ಆರೆಸ್ಸೆಸ್ ಸಂಘದ ನಿಷ್ಠಾವಂತ ಕಾರ್ಯಕರ್ತ’’ ಎಂದು ಘೋಷಿಸಿದ್ದರು. ಆದರೆ ಹಿಂದಿರುಗಿ ಬಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ‘‘ನಾನು ಹೇಳಿದ್ದನ್ನು ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿವೆ’’ ಎಂದರು. ಉಪ ಪ್ರಧಾನಿಯಾಗಿದ್ದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಮುಂತಾದ ಮಂತ್ರಿ ಮಹೋದಯರೆಲ್ಲ ಆರೆಸ್ಸೆಸ್‌ಸದಸ್ಯರಾಗಿದ್ದರೆಂದು ಹೆಮ್ಮೆಪಟ್ಟುಕೊಳ್ಳುತ್ತಾರೆ! ಬಾಬರಿ ಮಸೀದಿ ಧ್ವಂಸದ ಪೂರ್ವೋತ್ತರ ಕಾಲದಲ್ಲಿ ರಥಯಾತ್ರೆ ಮುಂತಾದ ಯಾತ್ರೆಗಳನ್ನು ಹಮ್ಮಿಕೊಂಡು ರಾಮಮಂದಿರ ನಿರ್ಮಾಣಕ್ಕಾಗಿ ಕನ್ಯಾಕುಮಾರಿಯಿಂದ ಅಯೋಧ್ಯೆಯವರೆಗೆ ಇಟ್ಟಿಗೆ ಸಂಗ್ರಹಣೆ ಮಾಡಿದವರೆಲ್ಲ ಸಂಘಪರಿವಾರದ ಪ್ರಮುಖ ಪಾತ್ರಧಾರಿಗಳೇ! ಆದರೂ ಸಂಘಿಗಳು ಸಕ್ರಿಯ ರಾಜಕಾರಣದಲ್ಲಿ ಇಲ್ಲ! ಏನಿದ್ದರೂ ಅದು ‘ಗುರುಗಳ’ ಮಾರ್ಗದರ್ಶನ ಮಾತ್ರ! ಇದು ಹೇಗೆ? ಅದಕ್ಕೆ ರಾಜಕೀಯದಲ್ಲಿರುವ ಸಂಘಿಗಳ ನೇರ ಉತ್ತರ: ‘‘ಅದು ರಾಜಧರ್ಮ’’ ರಾಜಕೀಯ ಅಧಿಕಾರ ಗ್ರಹಣಕ್ಕೆ ಕೈಗೆ ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಕುಟಿಲ, ವಂಚನೆ, ಮೋಸ, ಹುಸಿ ಎಲ್ಲವೂ ಸರಿ, ಹಾಗೆಂದು ಕೌಟಿಲ್ಯನೇ ತನ್ನ ‘ಅರ್ಥಶಾಸ್ತ್ರ’ದಲ್ಲಿ ಅನುಮೋದಿಸಿದ್ದಾನೆ! ಅಂದಮೇಲೆ ಅದಕ್ಕೆ ಮನುಧರ್ಮದ ಶಾಸ್ತ್ರದ ಒಪ್ಪಿಗೆಯ ಮುದ್ರೆ ಬಿದ್ದಂತೆಯೆ ಆಯಿತು. ಅದನ್ನು ಪ್ರಶ್ನಿಸುವಂತಿಲ್ಲ.

   ಆರೆಸ್ಸೆಸ್ ರಾಜಕೀಯ ಪಕ್ಷ ಹೌದೋ, ಅಲ್ಲವೋ ಎಂಬ ಈ ಸೂಕ್ಷ್ಮ ಸಾಧಾರಣ ಜನರಿಗೆ ಅರ್ಥವಾಗುವುದು ಕಷ್ಟ. ಬೆಳಗ್ಗೆ ಮೈದಾನದಲ್ಲಿ ದಂಡಧಾರಿಗಳಾಗಿ ಕವಾಯತು ಮಾಡಿ, ಭಗವಾ ಝಂಡಾದ ಮುಂದೆ ‘ನಮಸ್ತೇ ಸದಾ ವತ್ಸಲೆ ಮಾತೃಭೂಮಿ’ ಎಂದು ಧ್ವಜ ವಂದನೆ ಮಾಡುವ ಕಪ್ಪು ಟೋಪಿ ಚಡ್ಡಿ ಧರಿಸಿದವರೇ ಚುನಾವಣೆ ಕಾಲದಲ್ಲಿ ಕಮಲದ ಚಿಹ್ನೆಯ ಬಾವುಟ ಬೀಸುತ್ತ ಮತ ಯಾಚನೆ ಮಾಡುವುದನ್ನು ಕಣ್ಣಾರೆ ಕಾಣುವ ಜನರಿಗೆ ಸಂಘ ಮತ್ತು ಬಿಜೆಪಿ ಒಂದೇ ಎಂದು ಅನ್ನಿಸುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಹಿಂದೂರಾಷ್ಟ್ರ ಸ್ಥಾಪನೆಯಾಗಬೇಕೆಂಬ ಆರೆಸ್ಸೆಸ್ ಮತ್ತು ಅದೇ ಹೆಸರಿನ ಪತ್ರಿಕೆ ಹೊರಡಿಸುತ್ತಿದ್ದ ನಾಥೂರಾಮ್, ಅದರ ಮಹಾಪೋಷಕ ಸಾವರ್ಕರ್ ಒಂದೇ ಪಕ್ಷಕ್ಕೆ ಸೇರಿದವರು ಎಂದು ನಂಬುವುದರಲ್ಲಿ ಅಸಾಂಗತ್ಯವಿಲ್ಲ. ಗಾಂಧಿ ಹತ್ಯೆಯ ಅಪರಾಧಕ್ಕಾಗಿ ನೇಣುಗಂಬ ಹತ್ತುವಾಗ ‘‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’’ ಎಂದು ಘೋಷಿಸಿದ ನಾಥೂರಾಮ್ ಆರೆಸ್ಸೆಸ್ ಸದಸ್ಯನಾಗಿದ್ದ ಎಂದು ನಂಬುವುದರಲ್ಲಿ ಅಸಹಜವಾದದ್ದು ಏನಿದೆ? ಹಾಗೆಯೆ ಅಖಂಡ ಭಾರತ, ಹಿಂದೂ ರಾಷ್ಟ್ರ ಸ್ಥಾಪನೆಯ ಕೊನೆಯ ಆಸೆಯಿದ್ದ ನಾಥೂರಾಮನ ಆಶೆಯನ್ನು ಪೂರೈಸುವ ಧ್ಯೇಯದ ಸಂಘಪರಿವಾರ ಅವನ ಮಾತೃಸಂಸ್ಥೆ ಎಂದು ಭಾವಿಸುವುದು ಸಹಜ. ಅದು ನಿಜ ಎಂಬುದನ್ನು ನಾಥೂರಾಮ್‌ಗೋಡ್ಸೆಯ ತಮ್ಮ ಗೋಪಾಲ ಗೋಡ್ಸೆ: ‘‘ನಾಥೂರಾಮ್ ಸಂಘವನ್ನು ಎಂದೂ ಬಿಟ್ಟಿರಲಿಲ್ಲ.ಹಾಗೆ ಅವನು ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟದ್ದು ಸಂಘದ ಮೇಲೆ ಅಪರಾಧದ ಹೊಣೆಯನ್ನು ಹಗುರಮಾಡಲು’’ ಎಂದು ಬರೆದಿದ್ದಾನೆ. ಅಂದಮೇಲೆ ಆರೆಸ್ಸೆಸ್ ಅಂದರೆ ಬಿಜೆಪಿ; ಬಿಜೆಪಿ ಅಂದರೆ ಆರೆಸ್ಸೆಸ್ ಎಂದು ಭಾವಿಸುವುದರಲ್ಲಿ ತಪ್ಪಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯ ಆರೆಸ್ಸೆಸ್ ಗುರಿಯೇ ಬಿಜೆಪಿ ಗುರಿ ಎಂಬುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಅದನ್ನು ಈಡೇರಿಸುವುದು ಹೇಗೆ?

ಒಂದು ರಾಜ್ಯ/ರಾಷ್ಟ್ರ ಸ್ಥಾಪನೆ ರಾಜಕೀಯ ಪಕ್ಷವು ರಚಿಸಿದ ಸರಕಾರದ ಮೂಲಕವಾಗಿಯೇ ಎಂಬುದು ನಿರ್ವಿವಾದ. ಆದ್ದರಿಂದಲೇ ಅಧಿಕಾರ ಗ್ರಹಣ ಮಾಡುವುದಕ್ಕಾಗಿಯೇ ಹಿಂದೂ ಮಹಾಸಭೆ ಅಸ್ತಿತ್ವದಲ್ಲಿ ಬಂದದ್ದು. ಸ್ವಾತಂತ್ರ ಪೂರ್ವಕಾಲದಿಂದಲೂ ಹಿಂದೂ ಮಹಾಸಭೆ, ಜನಸಂಘ ಯಾವುದಾದರೂ ರೂಪದಿಂದಲಾದರೂ ಅಧಿಕಾರ ಗ್ರಹಣ ಮಾಡಬೇಕೆಂದು ಪ್ರಯತ್ನಿಸುತ್ತಿತ್ತು. ‘ಚಲೇಜಾವ್’ ಚಳವಳಿಯ ಕಾಲದಲ್ಲಿ ಕೇಂದ್ರ ಸರಕಾರದ ಕಾರ್ಯಕಾರಿ ಸಮಿತಿ (Executive council) ಯಲ್ಲಿ ಹಿಂದೂ ಮಹಾಸಭೆಯ ಪ್ರಮುಖ ಮುಂದಾಳು ಡಾ.ಮುಂಜೆ ಸದಸ್ಯರಾಗಿದ್ದರು. ಪೂರ್ಣ ಸ್ವಾತಂತ್ರಕ್ಕೆ ಮುಂಚೆ ರಚನೆಯಾಗಿದ್ದ ಮಧ್ಯಂತರ ತಾತ್ಕಾಲಿಕ ಸರಕಾರದಲ್ಲಿ ಶಾಮಪ್ರಸಾದ ಮುಖರ್ಜಿ ಕೇಂದ್ರ ಮಂತ್ರಿಮಂಡಲದಲ್ಲಿದ್ದರು.ಸಂವಿಧಾನವನ್ನು ರಚಿಸಿದ ಮೇಲೆ ನಡೆದ ಚುನಾವಣೆಗಳಲ್ಲಿ ಯಾವ ರಾಜ್ಯದಲ್ಲೂ ಹಿಂದೂ ಮಹಾಸಭೆ/ಜನಸಂಘ ಸರಕಾರವನ್ನು ರಚಿಸಲು ಸಮರ್ಥವಾಗಿರಲಿಲ್ಲ. ಸಾವರ್ಕರ್‌ರು ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಮುಕ್ತರಾಗಿ ಹೊರಬಂದರೂ ಕೊಲೆ ಮೊಕದ್ದಮೆಯಲ್ಲಿ ಆರೋಪಿ ಆಗಿದ್ದ ಅಳಿಸಲಾಗದ ಕಳಂಕದಿಂದ ಮುಕ್ತರಾಗುವುದು ಸಾಧ್ಯವಾಗಲಿಲ್ಲ! ಹಿಂದೂ ಮಹಾಸಭೆ, ಜನಸಂಘ ತಲೆಯೆತ್ತಲು ಸಾಧ್ಯವಾಗಲಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಈಡೇರದ ಗುರಿಯಾಗಿಯೇ ಉಳಿಯಿತು. ಹೀಗೆ ಮೂಲೆಗುಂಪಾಗಿ ಕಸದ ತೊಟ್ಟಿಯಲ್ಲಿ ಎಸೆದಿದ್ದ ಹಿಂದೂ ರಾಷ್ಟ್ರ ಸಂಸ್ಥಾಪನೆ ಆಗಲೇ ಮರೆತು ಹೋದ ಅಧ್ಯಾಯವಾಗುತ್ತ ಬಂದಿತ್ತು.

(ಬುಧವಾರ ಸಂಚಿಕೆಗೆ ಮುಂದುವರಿಯುವುದು)

share
ಕೋ. ಚೆನ್ನಬಸಪ್ಪ
ಕೋ. ಚೆನ್ನಬಸಪ್ಪ
Next Story
X