Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ವರ್ಷ ಕಳೆದರೂ ಮಾನವ ಹಕ್ಕು ಹೋರಾಟಗಾರರಿಗೆ...

ವರ್ಷ ಕಳೆದರೂ ಮಾನವ ಹಕ್ಕು ಹೋರಾಟಗಾರರಿಗೆ ನ್ಯಾಯ ಮರೀಚಿಕೆ

ಭೀಮಾ ಕೋರೆಗಾಂವ್ ಪ್ರಕರಣ

ಸುಕನ್ಯಾ ಶಾಂತಾಸುಕನ್ಯಾ ಶಾಂತಾ9 Jun 2019 6:31 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ವರ್ಷ ಕಳೆದರೂ ಮಾನವ ಹಕ್ಕು ಹೋರಾಟಗಾರರಿಗೆ ನ್ಯಾಯ ಮರೀಚಿಕೆ

ಕಳೆದ ವರ್ಷದ ಜೂನ್ 6ರಂದು ಪುಣೆ ಪೊಲೀಸರು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಸಮನ್ವಯ ಕಾರ್ಯಾಚರಣೆಯಲ್ಲಿ, ನಕ್ಸಲ್ ಚಟುವಟಿಕೆಗಳ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಐವರು ಮಾನವಹಕ್ಕು ಹೋರಾಟಗಾರರು ಹಾಗೂ ನ್ಯಾಯವಾದಿಗಳನ್ನು ಬಂಧಿಸಿದರು. ಆನಂತರದ ತಿಂಗಳು ಗಳಲ್ಲಿ ಇದೇ ಆರೋಪದಲ್ಲಿ ಇನ್ನೂ ಹೆಚ್ಚಿನ ಬಂಧನಗಳಾದವು.
 ಕಳೆದ ವರ್ಷದ ಜನವರಿ 1ರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿದ ದಲಿತರನ್ನು ಗುಂಪು ಹಿಂಸಾಚಾರವೆಸಗಲು ಈ ಮಾನವಹಕ್ಕು ಕಾರ್ಯಕರ್ತರು ಪ್ರಚೋದಿಸಿದರೆನ್ನಲಾದ ಬಗ್ಗೆ ತಮ್ಮಲ್ಲಿ ಸ್ಪಷ್ಟವಾದ ಪುರಾವೆಗಳಿವೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಈ ಪುರಾವೆಗಳಲ್ಲಿ ಹೆಚ್ಚಿನವು ಎಲೆಕ್ಟ್ರಾನಿಕ್ ರೂಪದಲ್ಲಿವೆ ಎಂದವರು ತಿಳಿಸಿದ್ದರು. ಪೊಲೀಸರು ನಡೆಸಿದ ಈ ತುರ್ತು ಕಾರ್ಯಾಚರಣೆಯು, ಒಂದು ವರ್ಷದ ಬಳಿಕ ಅರ್ಥವನ್ನೇ ಕಳೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ 62 ಆಲಿಕೆಗಳು ನಡೆದ ಆನಂತರವೂ, ಆರೋಪಿಗಳು ತಮ್ಮ ಜಾಮೀನು ಅರ್ಜಿಯ ಕುರಿತು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಲೇ ಇದ್ದಾರೆ.
ಮೊದಲ ಸುತ್ತಿನ ಬಂಧನಗಳು ನಡೆದ ಕೂಡಲೇ, ಆರೋಪಿಗಳು ಸೆಶನ್ಸ್ ನ್ಯಾಯಾಲಯದ ಮೆಟ್ಟಲೇರಿ ಜಾಮೀನು ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವುದಕ್ಕಿಂತ ಮೊದಲೇ ಜಾಮೀನು ಅರ್ಜಿಗಳನ್ನು, ಪೊಲೀಸರು ಮಾಡಿದ್ದ ಆರೋಪಗಳ ಆಧಾರದಲ್ಲಿ ಸಲ್ಲಿಸಲಾಗಿತ್ತು. ತದನಂತರ ಕನಿಷ್ಠ 60 ಬಾರಿ, ಜಾಮೀನು ಅರ್ಜಿಗಳು ನ್ಯಾಯಾಲಯದ ಮುಂದೆ ಆಲಿಕೆಗೆ ಬಂದಿದ್ದವು. ಆದರೂ ಇನ್ನು ಕೂಡಾ ಅವುಗಳ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಆರೋಪಿಗಳ ಪರ ವಕೀಲರಾದ ನಿಹಾಲ್‌ಸಿಂಗ್ ರಾಥೋಡ್ ಹೇಳುತ್ತಾರೆ.
 ಬಂಧನಗಳು: ಕಳೆದ ವರ್ಷ ಮಹಾರಾಷ್ಟ್ರ ಪೊಲೀಸರು ದೇಶಾದ್ಯಂತ ಮಾನವಹಕ್ಕು ಕಾರ್ಯಕರ್ತರು ಹಾಗೂ ನ್ಯಾಯವಾದಿಗಳನ್ನು ದೇಶಾದ್ಯಂತ ಬೆಂಬತ್ತಿ ಗಂಭೀರವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಬಂಧಿಸಿದ್ದರು.
ಬಂಧಿತರಲ್ಲಿ ಸುಧೀರ್ ಧಾವಳೆ, ಬರಹಗಾರ ಹಾಗೂ ಮುಂಬೈ ಮೂಲದ ದಲಿತ ಹಕ್ಕುಗಳ ಕಾರ್ಯಕರ್ತ ಸುರೇಂದ್ರ ಗಾಡ್ಲಿಂಗ್, ಯುಎಪಿಎ ತಜ್ಞ ಹಾಗೂ ನಾಗಪುರದ ನ್ಯಾಯವಾದಿ, ಗಡ್ಚಿರೋಲಿಯ ನಿರ್ವಸತಿ ಸಮಸ್ಯೆಗಳ ಕುರಿತಾದ ಯುವ ಹೋರಾಟಗಾರ ಮಹೇಶ್ ರಾವತ್, ನಾಗಪುರ ವಿವಿಯ ಇಂಗ್ಲಿಷ್ ಸಾಹಿತ್ಯ ವಿಭಾಗದ ಮುಖ್ಯಸ್ಥ ಹಾಗೂ ವಿವಿ ಪ್ರೊಫೆಸರ್ ಶೋಮಾ ಸೇನ್, ಕೈದಿಗಳ ಹಕ್ಕುಗಳ ಹೋರಾಟಗಾರ್ತಿ ರೋನಾ ವಿಲ್ಸನ್, ನ್ಯಾಯವಾದಿಗಳಾದ ಅರುಣ್ ಫೆರೇರಾ, ಸುಧಾ ಭಾರದ್ವಾಜ್, ಸಾಹಿತಿ ವರವರರಾವ್ ಹಾಗೂ ವೆರ್ನನ್ ಗೊನ್ಸಾಲ್ವಿಸ್ ಸೇರಿದ್ದಾರೆ. ಇವರಲ್ಲಿ ಮೊದಲ ಐವರನ್ನು ಜೂನ್ 6ರಂದು ಬಂಧಿಸಲಾಗಿದ್ದು, ಆನಂತರ ಇತರರ ಬಂಧನವಾಗಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ಪೊಲೀಸರು 5 ಸಾವಿರ ಪುಟಗಳನ್ನೂ ಮೀರಿದ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದರು. ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ಜೊತೆ ಸಕ್ರಿಯವಾದ ನಂಟು ಹೊಂದಿರುವ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಅವರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದರು ಹಾಗೂ 2017ರ ಡಿಸೆಂಬರ್ 31ರಂದು ಪುಣೆಯಲ್ಲಿ ಭೀಮಾಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನದ ಬ್ಯಾನರ್‌ನಡಿಯಲ್ಲಿ ‘ಎಲ್ಗಾರ್ ಪರಿಷದ್’ ಸಭೆಯನ್ನು ಆಯೋಜಿಸಲು ನೆರವಾಗಿದ್ದರು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಆಪಾದಿಸಿದ್ದರು.
ಬ್ರಾಹ್ಮಣ ಸಮುದಾಯದ ಬಾಹುಳ್ಯದ ಪುಣೆಯ ಶನಿವಾರ್‌ವಾಡ ಪ್ರದೇಶದಲ್ಲಿ ನಡೆದ ಈ ಸಾಂಸ್ಕೃತಿಕ ಸಭೆಯಲ್ಲಿ ಮಹಾರಾಷ್ಟ್ರಾದ್ಯಂತ ಬಿಜೆಪಿ ಹಾಗೂ ಬ್ರಾಹ್ಮಣ ಕೇಂದ್ರಿತ ಆರೆಸ್ಸೆಸ್‌ನ ವಿರುದ್ಧ ದಲಿತ ಯುವಜನರನ್ನು ಪ್ರಚೋದಿಸಿದ್ದುದು ರಾಜ್ಯದೆಲ್ಲೆಡೆ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತು. ಎಲ್ಗಾರ್‌ಪರಿಷದ್ ಸಭೆಯಲ್ಲಿನ ಭಾಷಣಗಳು ಪ್ರಚೋದನಕಾರಿಯಾಗಿದ್ದು, ದೇಶದ ಪ್ರಜಾತಾಂತ್ರಿಕ ಸಂರಚನೆಯನ್ನು ಹಾನಿಗೀಡು ಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ದೋಷಾರೋಪಪಟ್ಟಿಯಲ್ಲಿ ಆಪಾದಿಸಿತ್ತು. ಈ ವರ್ಷದ ಆರಂಭದಲ್ಲಿ ಸಲ್ಲಿಸಲಾದ ಪೂರಕ ದೋಷಾರೋಪಪಟ್ಟಿಯಲ್ಲಿ, ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರೆನ್ನಲಾದ ಇತರ ಆರೋಪಿಗಳನ್ನು ಕೂಡಾ ಹೆಸರಿಸಲಾಗಿತ್ತು ಹಾಗೂ ತಲೆಮರೆಸಿಕೊಂಡ ಮಾವೊವಾದಿ ನಾಯಕ ಗಣಪತಿ ಎಲ್ಗಾರ್ ಪರಿಷದ್ ಹಿಂಸಾಚಾರದ ಸೂತ್ರಧಾರಿಯೆಂದು ಆಪಾದಿಸಲಾಗಿತ್ತು.
ಆರೋಪಿಗಳ ಲ್ಯಾಪ್‌ಟಾಪ್‌ಗಳು ಹಾಗೂ ಮೊಬೈಲ್ ಫೋನ್‌ಗಳಿಂದ ಪ್ರಬಲ ಪುರಾವೆಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.
‘‘ಆರೋಪಿಗಳು ನಿಷೇಧಿತ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆಂಬುದನ್ನು ಸಾಬೀತುಪಡಿಸುವಂತಹ ಪುರಾವೆಗಳನ್ನು ಇವು ಒಳಗೊಂಡಿವೆ. ಆದರೆ ನ್ಯಾಯಾಲಯದಲ್ಲಿ ಹಲವಾರು ಮನವಿಗಳನ್ನು ಹಾಗೂ ಅರ್ಜಿಗಳನ್ನು ಸಲ್ಲಿಸಿದ ಹೊರತಾಗಿಯೂ ಆರೋಪಿಗಳಿಗೆ ಈ ಪುರಾವೆಗಳನ್ನು ಒದಗಿಸಲು ಪೊಲೀಸರು ನಿರಾಕರಿಸಿದ್ದರು. ಕೊನೆಗೂ ನ್ಯಾಯಾಲಯವು ಎಲ್ಲಾ ಇಲೆಕ್ಟ್ರಾನಿಕ್ ಪುರಾವೆಗಳ ಯಥಾನಕಲು ಪ್ರತಿಯು ಆರೋಪಿಗಳಿಗೆ ಒದಗಿಸಬೇಕೆಂದು ಮೇ 27ರಂದು ಆದೇಶಿಸಿತ್ತು.
 ವಿಳಂಬಗಳ ಸೃಷ್ಟಿ: ಪ್ರಕರಣದಲ್ಲಿ ಈ ಹೋರಾಟಗಾರರನ್ನು ಬಂಧಿಸುವ ಮೂಲಕ ನಗರಪ್ರದೇಶಗಳಲ್ಲಿ ಕಾರ್ಯಾ ಚರಿಸುತ್ತಿರುವ ನಕ್ಸಲರ ಬೃಹತ್ ಜಾಲವೊಂದನ್ನು ಭೇದಿಸಿರುವುದಾಗಿಯೂ ಪ್ರಾಸಿಕ್ಯೂಶನ್ ಹೇಳಿಕೊಂಡಿತ್ತು. ಆದರೆ ಈ ಬಂಧನಗಳು ಆಧಾರರಹಿತವಾದವು ಹಾಗೂ ಸೇಡಿನಿಂದ ಕೂಡಿದೆಯೆಂದು ಆರೋಪಿ ಪರ ವಕೀಲರು ಆರೋಪಿಸಿದ್ದರು.
ಈ ಬಂಧನಗಳು ನಡೆದಾಗಿನಿಂದ ಪೊಲೀಸರು ಉದ್ದೇಶಪೂರ್ವಕವಾಗಿ ತನಿಖೆಯಲ್ಲಿ ವಿಳಂಬ ತಂತ್ರವನ್ನು ಅನುಸರಿಸಿದರು. ವೃತ್ತಿಪರ ನ್ಯಾಯವಾದಿಗಳೂ ಆಗಿರುವ ಗಾಡ್ಲಿಂಗ್ ಹಾಗೂ ಫೆರೇರಾ ಅವರು ಪ್ರಕರಣದಲ್ಲಿ ಖುದ್ದಾಗಿ ವಾದಿಸಿದರು. ಆದರೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದಲ್ಲಿ ವಿರಳವಾಗಿ ಹಾಜರುಪಡಿಸುತ್ತಿದ್ದ ಪರಿಣಾಮವಾಗಿ ಅವರಿಗೆ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವುದು ತುಂಬಾ ಕಷ್ಟಕರವೆನಿಸಿತು.

ಕನಿಷ್ಠ ಪಕ್ಷ 40 ಸಂದರ್ಭಗಳಲ್ಲಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ. ಕೆಲವೊಮ್ಮೆ ಬೆಂಗಾವಲು ತಂಡದ ಕೊರತೆಯ ಅಥವಾ ಇನ್ನಾವುದೇ ಭದ್ರತಾ ನೆಪಹೇಳಿ ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸುತ್ತಿರಲಿಲ್ಲ. ಗಾಡ್ಲಿಂಗ್ ಹಾಗೂ ಫೆರೇರಾ ಅವರನ್ನು ಹಾಜರುಪಡಿಸದೆ ಇರುವ ಉದ್ದೇಶವೇನೆಂದರೆ, ಅವರು ಪ್ರಕರಣದಲ್ಲಿ ವಾದಮಂಡನೆಯನ್ನು ಮುಂದು ವರಿಸದಂತೆ ತಡೆಯುವುದಾಗಿತ್ತು ಎಂದು ರಾಥೋಡ್ ಗಮನಸೆಳೆಯುತ್ತಾರೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ವಿಫಲವಾಗಿರುವುದಕ್ಕಾಗಿ ವಿಚಾರಣಾ ನ್ಯಾಯಾಲಯವು ಜೈಲು ಅಧಿಕಾರಿಗಳ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು. ಆದಾಗ್ಯೂ, ಆ ಸಮಸ್ಯೆ ಈಗಲೂ ಉಳಿದುಕೊಂಡಿದೆ. ವಿಚಾರಣಾಧೀನ ಕೈದಿಗಳಿಗೆೆ ಮುಕ್ತವಿಶ್ವವಿದ್ಯಾನಿಲಯಗಳ ಮೂಲಕ ಲಭ್ಯವಿರುವ ಶೈಕ್ಷಣಿಕ ಕೋರ್ಸ್‌ಗಳಿಗೆ ನೋಂದಾ ಯಿಸಿಕೊಳ್ಳಲು ಅವಕಾಶ ನೀಡುವುದು ಪ್ರಚಲಿತದಲ್ಲಿರುವ ಪದ್ಧತಿಯಾಗಿದೆ. ಗಾಡ್ಲಿಂಗ್ ಹಾಗೂ ರಾವತ್ ಅವರು ಇಂದಿರಾಗಾಂಧಿ ಮುಕ್ತ ವಿವಿಯ ‘ಮಾನವಹಕ್ಕುಗಳ ಡಿಪ್ಲೊಮಾ ಕೋರ್ಸ್’ಗೆ ತಮ್ಮನ್ನು ನೋಂದಾಯಿಸಿಕೊಳ್ಳಲು ಯತ್ನಿಸಿದ್ದರು. ‘‘ ಆದರೆ ಈ ಕೋರ್ಸ್‌ನಲ್ಲಿ ಯಾವುದೇ ದೇಶದ್ರೋಹಕ್ಕೆ ಸಂಬಂಧಿಸಿದ ಅಂಶಗಳಿವೆಯೇ ಎಂಬುದನ್ನು ಸರಕಾರವು ಮೊದಲು ಪರಿಶೀಲಿಸಬೇಕಾಗಿದೆಯೆಂಬ ನೆಪ ಹೇಳಿ, ಅದನ್ನು ಅವರಿಗೆ ನಿರಾಕರಿ ಸಲಾಗಿತ್ತು’’ ಎಂದು ಆರೋಪಿಗಳ ಪರ ವಕೀಲರೊಬ್ಬರು ಆರೋಪಿಸಿದ್ದಾರೆ.
ಅಂತಿಮವಾಗಿ ಪ್ರಕರಣದ ಆಲಿಕೆಯು ಮುಕ್ತಾಯದ ಹಂತಕ್ಕೆ ಬಂದಾಗ, ವಿಚಾರಣಾ ನಾಯಾಧೀಶ ಕಿಶೋರ್ ವಾದಾನೆ ಅವರನ್ನು ವರ್ಗಾವಣೆಗೊಳಿಸಲಾಯಿತು. ಅವರ ಸ್ಥಾನದಲ್ಲಿ ಹೊಸ ನ್ಯಾಯಾಧೀಶರು ಕಳೆದ ತಿಂಗಳಷ್ಟೇ ಅಧಿಕಾರವಹಿಸಿಕೊಂಡರು. ಇದರಿಂದಾಗಿ ಈಗಾಗಲೇ ತಡವಾಗಿದ್ದ ಆರೋಪಿಗಳ ಜಾಮೀನು ಬಿಡುಗಡೆ ಕಲಾಪಗಳು ಇನ್ನಷ್ಟು ವಿಳಂಬಗೊಂಡವೆಂದು ಈ ನ್ಯಾಯವಾದಿಗಳು ದೂರಿದ್ದಾರೆ.
ಜಾಮೀನು ಬಿಡುಗಡೆ ಕುರಿತ ನ್ಯಾಯಾಲಯ ಕಲಾಪಗಳು ಆಮೆಗತಿಯಲ್ಲಿ ಸಾಗುವಂತೆ ಮಾಡುವುದನ್ನು ಪ್ರಾಸಿಕ್ಯೂಶನ್ ಮುಂದುವರಿಸಿತ್ತು ಹಾಗೂ ಆರೋಪಿಗಳ ಸಂಭಾವ್ಯ ಬಿಡುಗಡೆಯನ್ನು ವಿಳಂಬಿಸಲು ಹೊಸ ಹೊಸ ದಾರಿಗಳನ್ನು ಹುಡುಕತೊಡಗಿತು. ಆದಾಗ್ಯೂ ಆರೋಪಿಗಳು ತಮ್ಮ ಜೈಲುವಾಸದ ಸಮಯವನ್ನು ಹೆಚ್ಚು ರಚನಾತ್ಮಕವಾಗಿ ಬಳಸಲು ಆರಂಭಿಸಿದರು. ಗಾಡ್ಲಿಂಗ್ ಅವರು ತನ್ನನ್ನು ಇರಿಸಲಾಗಿದ್ದ ಯರವಾಡ ಜೈಲಿನಲ್ಲಿ ಕಾನೂನು ನೆರವಿನ ಘಟಕವನ್ನು ಆರಂಭಿಸಿದ್ದರು.
‘‘ಕಳೆದ ಒಂದು ವರ್ಷದಲ್ಲಿ ಕನಿಷ್ಠ ಒಂದು ಡಜನ್‌ನಷ್ಟು ಆರೋಪಿಗಳು ಜೈಲಿನಿಂದ ಬಿಡುಗಡೆಗೊಳ್ಳುವುದಕ್ಕೆ ಗಾಡ್ಲಿಂಗ್ ಕಾರಣರಾಗಿದ್ದರು ತಮ್ಮ ಪ್ರಕರಣದಲ್ಲಿ ಹೋರಾಡು ವಂತಹ ಸಾಮರ್ಥ್ಯ ಹಾಗೂ ಆರ್ಥಿಕ ಸಂಪನ್ಮೂಲ ಇಲ್ಲದ ವಿಚಾರಣಾಧೀನ ಕೈದಿಗಳು ಕಾನೂನು ಸಲಹೆಗಾಗಿ ಗಾಡ್ಲಿಂಗ್‌ರನ್ನು ಸಂಪರ್ಕಿಸುತ್ತಿದ್ದರು. ಅವರಿಗೆ ಅರ್ಜಿಗಳನ್ನು ಬರೆಯಲು ಹಾಗೂ ವಾದಗಳನ್ನು ರೂಪಿಸಲು ಗಾಡ್ಲಿಂಗ್ ಮನಪೂರ್ವಕವಾಗಿ ನೆರವಾಗುತ್ತಿದ್ದರು’’ ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೃಪೆ: thewire.in

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಸುಕನ್ಯಾ ಶಾಂತಾ
ಸುಕನ್ಯಾ ಶಾಂತಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X