Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮೋದಿ ‘ಎಲ್ಲರ ವಿಶ್ವಾಸ’ ಗಳಿಸಬಲ್ಲರೇ?

ಮೋದಿ ‘ಎಲ್ಲರ ವಿಶ್ವಾಸ’ ಗಳಿಸಬಲ್ಲರೇ?

ರಾಮ್ ಪುನಿಯಾನಿರಾಮ್ ಪುನಿಯಾನಿ12 Jun 2019 12:03 AM IST
share
ಮೋದಿ ‘ಎಲ್ಲರ ವಿಶ್ವಾಸ’ ಗಳಿಸಬಲ್ಲರೇ?

ಆಶಾವಾದಿಗಳಾಗಿದ್ದು ಭರವಸೆ ಕಳೆದುಕೊಳ್ಳದೆ ಇರುವುದು ಯಾವಾಗಲೂ ಒಳ್ಳೆಯದೇ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಎಲ್ಲರ ವಿಕಾಸ’ದ ಕಾಡುವ ಅನುಭವ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಮೋದಿಯವರು ಯಾವ ಹಿಂದೂ ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ಸೇರಿದ್ದಾರೋ, ಆ ಸಿದ್ಧಾಂತ ಕೂಡ ಅಂತಹ ಒಂದು ಆಶ್ವಾಸನೆಯ ಕುರಿತು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.

 2014ರ ಗೆಲುವಿನ ಬಳಿಕ ಪ್ರಧಾನಿ ಮೋದಿಯವರು ತಾನು ಎಲ್ಲರನ್ನೂ ಜತೆಗೆ ಒಯ್ದು ಎಲ್ಲರ ಅಭಿವೃದ್ಧಿಯನ್ನೂ ಮಾಡುವುದಾಗಿ (ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್) ಆಶ್ವಾಸನೆ ನೀಡಿದ್ದರು. ಈ ಘೋಷಣೆಗೆ ಅವರು ಈಗ ‘ಸಬ್‌ಕಾ ವಿಶ್ವಾಸ್’ ಎಂಬುದನ್ನು ಸೇರಿಸಿದ್ದಾರೆ. ಅವರು ತಾನು ನೀಡಿರುವ ಆಶ್ವಾಸನೆಯನ್ನು ಉಳಿಸಿಕೊಳ್ಳುತ್ತಾರೆ, ಕಾರ್ಯಗತಗೊಳಿಸುತ್ತಾರೆ; ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನರನ್ನು ಅವರು ಬೆದರಿಸುವುದಿಲ್ಲ, ದಮನಿಸುವುದಿಲ್ಲವೆಂದು ವಿಶೇಷವಾಗಿ ಮುಸ್ಲಿಂ ಸಮುದಾಯದ ಹಲವಾರು ಪ್ರಮುಖ ಲೇಖಕರು ಮತ್ತು ಕಾರ್ಯಕರ್ತರು, ತಮಗೆ ತಾವೇ ಸಂತೈಸುವಿಕೆಯ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಆಶಾವಾದಿಗಳಾಗಿದ್ದು ಭರವಸೆ ಕಳೆದುಕೊಳ್ಳದೆ ಇರುವುದು ಯಾವಾಗಲೂ ಒಳ್ಳೆಯದೇ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಎಲ್ಲರ ವಿಕಾಸ’ದ ಕಾಡುವ ಅನುಭವ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಮೋದಿಯವರು ಯಾವ ಹಿಂದೂ ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ಸೇರಿದ್ದಾರೋ, ಆ ಸಿದ್ಧಾಂತ ಕೂಡ ಅಂತಹ ಒಂದು ಆಶ್ವಾಸನೆಯ ಕುರಿತು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
ಮೋದಿಯವರ ಆಳ್ವಿಕೆಯ ಕಳೆದ ಐದು ವರ್ಷಗಳಲ್ಲಿ ಅಲ್ಪ ಸಂಖ್ಯಾತರನ್ನು ಕಾಡುವ ಅಭದ್ರತೆಯ ಭಯ ಹೆಚ್ಚುತ್ತಾ ಹೋಯಿತು. ರಾಮಮಂದಿರ, ಘರ್ ವಾಪಸಿ ಮತ್ತು ಲವ್‌ಜಿಹಾದ್‌ನಂತಹ ವಿಭಾಜಕ ಅಭಿಯಾನಗಳಿಗೆ ಶಿಖರ ಪ್ರಾಯವಾಗಿ ಗೋಮಾಂಸ ಭಕ್ಷಣೆಯ ವಿವಾದ ಸಮೂಹ ಸನ್ನಿ ಮುಗಿಲುಮುಟ್ಟಿತು. ಇದು ಮುಸ್ಲಿಮರಿಗೆ ಗುಂಪು ಥಳಿತ ಮತ್ತು ದಲಿತರಿಗೆ ಥಳಿತದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು. ಈ ಎರಡು ಸಮುದಾಯಗಳ ಮೇಲೆ ನಡೆದ ದೌರ್ಜನ್ಯಗಳು ಭಯಾನಕವಾಗಿದ್ದವು. ಹಿಂದೂ ರಾಷ್ಟ್ರೀಯವಾದ ರಾಜಕಾರಣದ ಅಂಚಿನ ಶಕ್ತಿಗಳು ಈ ಅವಧಿಯಲ್ಲಿ ಇನ್ನಷ್ಟು ಹೆಚ್ಚು ಆಕ್ರಮಣಕಾರಿಯಾದವು.ಅಧಿಕಾರ ಸೂತ್ರ ಹಿಡಿದವರು ಈ ಶಕ್ತಿಗಳ ಕೃತ್ಯಗಳೆಡೆಗೆ ಕುರುಡಾದದ್ದಷ್ಟೇ ಅಲ್ಲ, ಜೈ ಶ್ರೀರಾಮ್ ಎಂದು ಕೂಗುತ್ತ ಬಂದ ಕೇಸರಿ ಗುಂಪುಗಳಿಗೆ ಹುರಿದುಂಬಿಸುವ ಸೂಚನೆ, ಸಂಜ್ಞೆ ನೀಡಿದರು. ಅಂತಹ ಬರ್ಬರ ಕೃತ್ಯಗಳನ್ನೆಸಗಿದವರಿಗೆ ಪ್ರಮಾಣ ಪತ್ರ, ಶಾಶ್ವತ ಅಂಗೀಕಾರ ನೀಡುವಂತೆ ಇಬ್ಬರು ಸಚಿವರು ನಡೆದುಕೊಂಡರು: ಕೇಂದ್ರ ಸಚಿವ ಮಹೇಶ್ ಶರ್ಮ ಗುಂಪು ಥಳಿತದ ಆಪಾದಿತನಿಗೆ ತ್ರಿವರ್ಣ ಧ್ವಜ ಶಾಲು ಹೊದಿಸಿದ್ದರೆ, ಇನ್ನೊಬ್ಬ ಸಚಿವ ಜಯಂತ್ ಸಿನ್ಹ ಜಾಮೀನು ಪಡೆದ ವಿಂಚಿಂಗ್ ಆಪಾದಿತನನ್ನು ಸನ್ಮಾನಿಸಿದರು. ಈ ಕೃತ್ಯಗಳು ಎಗ್ಗಿಲ್ಲದಂತೆ ಮುಸ್ಲಿಮರನ್ನು ಬೆದರಿಸಿ ಅವರನ್ನು ಪ್ರತ್ಯೇಕಿಸಿ ಅಂಚಿಗೆ ತಳ್ಳಿದವು. ಈ ಹಂತದವರೆಗೆ ಅಲ್ಲವಾದರೂ ಕ್ರಿಶ್ಚಿಯನ್ನರು ಕೂಡ ಕಿರುಕುಳಕ್ಕೆ ಒಳಗಾದರು. ಮತಾಂತರಕ್ಕೆ ಪ್ರಯತ್ನ ಎಂಬ ನೆಪದಲ್ಲಿ ಅವರ ಪ್ರಾರ್ಥನಾ ಸಭೆಗಳ ಮೇಲೆ, ಧಾರ್ಮಿಕ ಗಾಯಕರ (ಕ್ಯಾರೊಲ್) ತಂಡಗಳ ಮೇಲೆ ದಾಳಿಗಳನ್ನು ನಡೆಸಲಾಯಿತು.
ಈ ಹಿನ್ನೆಲೆಯಲ್ಲಿ ‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್’ ಎಂಬ ಆಶ್ವಾಸನೆಯ ನೆಲೆಯಲ್ಲಿ ಮೋದಿಯವರು ಈಗ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಬಿಜೆಪಿ ವಿಜಯದ ಕಳೆದ ಕೆಲವು ದಿನಗಳಲ್ಲಿ ನಡೆದಿರುವ ಘಟನೆಗಳು ತುಂಬ ಭಯ ಹುಟ್ಟಿಸುತ್ತವೆ. ಬಿಹಾರದ ಬೆಗುಸರಾಯ್‌ಯಲ್ಲಿ ಮುಹಮ್ಮದ್ ಖಾಸಿಂ ಎಂಬ ಯುವಕನ ಮೇಲೆ ಗುಂಡು ಹಾರಿಸಲಾಯಿತು. ಹಿಂದಿನ ದಿನ ಬೆಳಗ್ಗೆ ಅವನ ಹೆಸರೇನು ಎಂದು ಕೇಳಲಾಗಿತ್ತು. ಸಾಂಪ್ರಾದಾಯಿಕ ಟೋಪಿ ಧರಿಸಿದ್ದ ಯುವಕನೊಬ್ಬನ ಮೇಲೆ ನಾಲ್ವರು ಅಪರಿಚಿತ ಯುವಕರು ಮೇ 26 ರಂದು ದಾಳಿ ನಡೆಸಿದರು. ಮೇ 25ರಂದು ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿ ಆದಿವಾಸಿ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಲಾಯಿತು. ಆ ಪೋಸ್ಟ್‌ನಲ್ಲಿ ಅವರು ಗೋಮಾಂಸ ಭಕ್ಷಣೆಯ ಹಕ್ಕನ್ನು ಉಲ್ಲೇಖಿಸಿದ್ದರು.
 ಛತ್ತೀಸ್‌ಗಡದ ರಾಯ್‌ಪುರದಲ್ಲಿ ಸ್ವಘೋಷಿತ ಗೋರಕ್ಷಕರ ತಂಡವೊಂದು ಮೇ 26ರಂದು ಹಾಲಿನ ಡೈರಿಯೊಂದಕ್ಕೆ ನುಗ್ಗಿ ಡೈರಿಯಲ್ಲಿರುವವರ ಮೇಲೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟದ ಆರೋಪ ಹೊರಿಸಿ ಅವರನ್ನು ಥಳಿಸಿತು. ಡೈರಿ ಅಂಗಡಿಯನ್ನು ಪುಡಿಗಟ್ಟಿದರು.


ಗುಜರಾತಿನ ವಡೋದರಾದ ಮಹುವಾದ್ ಎಂಬ ಹಳ್ಳಿಯಲ್ಲಿ 200-300 ಮಂದಿ ಇದ್ದ ಮೇಲ್ಜಾತಿ ಜನರ ಗುಂಪೊಂದು ದಲಿತ ದಂಪತಿಯ ಮನೆಯೊಂದರ ಮೇಲೆ ದಾಳಿ ನಡೆಸಿತು. ಆಕೆಯ ಪತಿ ದಲಿತ ವಿವಾಹ ಸಮಾರಂಭಗಳಿಗೆ ಹಳ್ಳಿಯ ದೇವಸ್ಥಾನವನ್ನು ಬಳಸಲು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದ.
‘ಜನತಾ ಕಾ ರಿಪೋರ್ಟರ್’ ನಲ್ಲಿ ವರದಿಯಾಗಿರುವಂತೆ ಅಸ್ಸಾಂನಲ್ಲಿ ಅಶ್ರಫ್ ಅಲಿ ಎಂಬ 90ರ ಹರೆಯದ ಒಬ್ಬ ವೃದ್ಧ ಆತ್ಮಹತ್ಯೆ ಮಾಡಿಕೊಂಡರು. ತನ್ನನ್ನು ಓರ್ವ ವಿದೇಶೀಯನೆಂದು ಘೋಷಿಸಿ ಡಿಟೆನ್ಶನ್ ಕೇಂದ್ರಕ್ಕೆ ಕಳುಹಿಸಿ ಬಿಡುತ್ತಾರೆ ಎಂಬ ಭಯ ಆತನನ್ನು ಕಾಡುತ್ತಿತ್ತು. ಶಾಲೆಯೊಂದರ ಆವರಣಗಳಲ್ಲಿ ಅವನ ಮೃತದೇಹ ಪತ್ತೆಯಾಯಿತು.
ಇಷ್ಟೊಂದು ಚಿಕ್ಕ ಅವಧಿಯಲ್ಲಿ ಅಷ್ಟೊಂದು ಘಟನೆಗಳು ನಡೆದಿರುವುದು ಮೋದಿ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದಾಗಿ ವಾತಾವರಣ ಹೇಗೆ ವಿಷಮಯವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಬಿಜೆಪಿ ಅಧ್ಯಕ್ಷರು ಮುಸ್ಲಿಂ ನಿರಾಶ್ರಿತರನ್ನು ಗೆದ್ದಲು ಹುಳಗಳೆಂದು ಕರೆದರು. ಆಳುವ ಸರಕಾರವು ಮುಸ್ಲಿಮರು ಎಂದರೆ ಏನೆಂದು ಪರಿಗಣಿಸುತ್ತದೆಂಬುದನ್ನು ಇದು ಸಂಕ್ಷೇಪಿಸಿ ಹೇಳುತ್ತದೆ.
ಬಿಜೆಪಿ ಟಿಕೆಟ್‌ನಲ್ಲಿ ಆಯ್ಕೆಯಾಗಿರುವ 303 ಮಂದಿ ಸಂಸತ್ ಸದಸ್ಯರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ಕೂಡ ಇಲ್ಲ. ಈ ಹಿಂದೆ ಮುಸ್ಲಿಂ ಸಮುದಾಯ ಸಾಕಷ್ಟು ಸಂಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸಿದೆ. ರಂಗನಾಥ ಮಿಶ್ರಾ ಮತ್ತು ಸಾಚಾರ್ ಸಮಿತಿ ವರದಿಗಳು ಇದನ್ನು ಸ್ಪಷ್ಟಪಡಿಸಿವೆ. ಹಲವಾರು ಮಂದಿ ಬದ್ಧತೆಯುಳ್ಳ ಮುಸ್ಲಿಂ ಸಮುದಾಯದ ನಾಯಕರಿಗೆ ತಮ್ಮನ್ನು ಸಂಸದೀಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ ಅಂತ ಅನ್ನಿಸುತ್ತಿದೆ.
 ಈಗ ಕಂಡು ಬರುತ್ತಿರುವ ಹಿಂಸೆಗೆ ಮುಖ್ಯ ಕಾರಣ ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ, ಹಿಂದುತ್ವದ ಭಯ ಹುಟ್ಟಿಸುವ ಉದಯ. ಬಿಜೆಪಿ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಆರೆಸ್ಸೆಸ್ ಶಾಖೆಗಳ ಬೃಹತ್ ಮಟ್ಟದ ವಿಸ್ತರಣೆ ನಡೆದಿದೆ. ಇದು ಆರೆಸ್ಸೆಸ್‌ನ ಹಲವಾರು ಸಂಘಟನೆಗಳನ್ನು ಇನ್ನಷ್ಟು ಬಲಪಡಿಸುತ್ತಿದೆ.
ಅಲ್ಪಸಂಖ್ಯಾತರ ಭದ್ರತೆ ಪ್ರಜಾಪ್ರಭುತ್ವದ ಶಕ್ತಿಯ ಪ್ರತಿಫಲನ. ಈ ದೃಷ್ಟಿಯಿಂದ ಕೂಡ ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ವೌಲ್ಯಗಳ ಸೂಚ್ಯಂಕ ಆತಂಕಕಾರಿಯಾಗಿದೆ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X