Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ‘ಬರ’ಡು ವರ್ತಮಾನ, ಕರಕಲು ಭವಿಷ್ಯ?

‘ಬರ’ಡು ವರ್ತಮಾನ, ಕರಕಲು ಭವಿಷ್ಯ?

ನೀರಿನ ಕ್ಷಾಮವು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಭುತ್ವವು ನೀರು ನಿರ್ವಹಣೆಯಲ್ಲಿ ಹೆಚ್ಚಿನ ದೂರದರ್ಶಿತ್ವವನ್ನು ತೋರುವ ಅಗತ್ಯವಿದೆ.

ಕೃಪೆ: Economic and Political Weeklyಕೃಪೆ: Economic and Political Weekly11 July 2019 12:02 AM IST
share
‘ಬರ’ಡು ವರ್ತಮಾನ, ಕರಕಲು ಭವಿಷ್ಯ?

ಭಾರತವು ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದಷ್ಟು ತೀವ್ರವಾಗಿ ಅಂತರ್ಜಲವನ್ನು ಬಸಿಯುತ್ತಿರುವ ದೇಶವಾಗಿದೆ. ಇಲ್ಲಿ ಅಂತರ್ಜಲವನ್ನು ಸಾರ್ವಜನಿಕ ಸರಕೆಂದು ಪರಿಗಣಿಸಲಾಗುವುದಿಲ್ಲ. ಜಗತ್ತಿನ ಬಹುಪಾಲು ದೇಶಗಳು ತಮ್ಮಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚು ನೀರನ್ನು ಬಳಸುತ್ತಿವೆಯೆಂಬುದು ನಿಜವಾದರೂ, ಕರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಇತ್ತೀಚೆಗೆ ಮಾಡಿರುವ ಸಂಶೋಧನೆಯ ಪ್ರಕಾರ ಅಧಿಕ ನೀರು ಸಂಪತ್ತುಳ್ಳ ಭಾಗಗಳಾಗಿದ್ದ ಪೂರ್ವ ಭಾರತವೂ ಸಹ ತೀವ್ರವಾದ ‘ಅಂತರ್ಜಲ ಬರ’ವನ್ನು ಎದುರಿಸುತ್ತಿವೆ.

ತಡವಾಗಿಯಾದರೂ ಭಾರತದ ಹಲವಾರು ಭಾಗಗಳಲ್ಲಿ ಮಳೆ ಸುರಿದಿದೆ. ಅದು ನೂರಾರು ಜನರನ್ನು ಕೊಂದ ಬಿಸಿಗಾಳಿಯನ್ನೂ ಮತ್ತು ಅದರ ಜೊತೆಗೆ ಈಗಾಗಲೇ ಇದ್ದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಇನ್ನಷ್ಟು ದಾರುಣಗೊಳಿಸುತ್ತಿದ್ದ ನೀರಿನ ಬಿಕ್ಕಟ್ಟನ್ನೂ ಸ್ವಲ್ಪ ಮಟ್ಟಿಗೆ ಶಮನಗೊಳಿಸಿದೆ. ಚೆನ್ನೈ ಮತ್ತು ರಾಂಚಿಯಂಥ ನಗರಗಳಲ್ಲಿ ಇದ್ದ ಕೆರೆಕುಂಟೆ, ಹೊಂಡ, ಸರೋವರಗಳು ಬತ್ತಿ ಹೋಗಿರುವುದರಿಂದ ಉಂಟಾಗಿರುವ ನೀರಿನ ಕೊರತೆಯು ಅಪಾರ ಒತ್ತಡವನ್ನುಂಟುಮಾಡಿದೆ. ಇದರಿಂದಾಗಿ ಜನರು ತಮ್ಮ ದಿನನಿತ್ಯದ ಅಗತ್ಯಗಳಿಗಾಗಿಯೂ ಬೀದಿಯಲ್ಲಿ ಹೊಡೆದಾಟ ಮಾಡಿಕೊಳ್ಳುವಂಥ ಹಿಂಸಾತ್ಮಕ ಪರಿಸ್ಥಿಗಳಿಗೂ, ಹತಾಷೆ ಮತ್ತು ಬಿಕ್ಕಟ್ಟುಗಳಿಗೂ ದಾರಿಮಾಡಿಕೊಟ್ಟಿದೆ. ಆದರೆ ಇದು ಈ ಎರಡೂ ನಗರಗಳಿಗೆ ಮಾತ್ರ ಸೀಮಿತವಾದ ಬೆಳವಣಿಗೆಯೇನೂ ಅಲ್ಲ. ದೇಶದ ಬಹುಪಾಲು ನಗರಗಳು ನೀರಿನ ತೀವ್ರ ಕೊರತೆಯಿಂದ ಕಂಗೆಟ್ಟಿವೆ.
ಅದಕ್ಕೆ ಮುಂಗಾರು ತಡವಾಗಿರುವುದೋ ಅಥವಾ ಮಳೆ ಕಡಿಮೆಯಾಗಿರುವುದೋ ಮಾತ್ರ ಕಾರಣವಲ್ಲ. ಭೂಮಿಯನ್ನು ಎಷ್ಟೇ ಆಳಕ್ಕೆ ಅಗೆದರೂ ನೀರಿನ ಪಸೆಯೂ ದಕ್ಕವುದು ಕಷ್ಟವಾಗಿರುವುದೂ ಸಹ ಬರದ ಪರಿಣಾಮ ತೀವ್ರವಾಗಲು ಕಾರಣವಾಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾರ್ಡೆ ವಾಡಿಯ ಮಹಿಳೆಯರು 60 ಅಡಿಯಷ್ಟು ಆಳದ ಭಾವಿಯೊಳಕ್ಕಿಳಿದು ಕುಡಿಯುವ ನೀರನ್ನು ಸಂಗ್ರಹಿಸುತ್ತಿದ್ದಾರೆ. ಭಾರತವು ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದಷ್ಟು ತೀವ್ರವಾಗಿ ಅಂತರ್ಜಲವನ್ನು ಬಸಿಯುತ್ತಿರುವ ದೇಶವಾಗಿದೆ. ಇಲ್ಲಿ ಅಂತರ್ಜಲವನ್ನು ಸಾರ್ವಜನಿಕ ಸರಕೆಂದು ಪರಿಗಣಿಸಲಾಗುವುದಿಲ್ಲ. ಜಗತ್ತಿನ ಬಹುಪಾಲು ದೇಶಗಳು ತಮ್ಮಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚು ನೀರನ್ನು ಬಳಸುತ್ತಿವೆಯೆಂಬುದು ನಿಜವಾದರೂ, ಕರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಇತ್ತೀಚೆಗೆ ಮಾಡಿರುವ ಸಂಶೋಧನೆಯ ಪ್ರಕಾರ ಅಧಿಕ ನೀರು ಸಂಪತ್ತುಳ್ಳ ಭಾಗಗಳಾಗಿದ್ದ ಪೂರ್ವ ಭಾರತವೂ ಸಹ ತೀವ್ರವಾದ ‘ಅಂತರ್ಜಲ ಬರ’ವನ್ನು ಎದುರಿಸುತ್ತಿವೆ. ಹೀಗಾಗಿ ನೀರಿನ ಕೊರತೆಯೊಂದನ್ನೇ ಉಳಿದವುಗಳಿಗಿಂತ ಭಿನ್ನವಾದ ಸಮಸ್ಯೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಜಲಸಂಪನ್ಮೂಲದ ಮೇಲಿನ ಒತ್ತಡಗಳನ್ನು ತಡೆಗಟ್ಟುವ ಯಾವ ಕ್ರಮಗಳನ್ನೂ ತೆಗೆದುಕೊಳ್ಳದಿದ್ದರಿಂದ ಅದು ಒಂದು ಪ್ರಕ್ರಿಯೆಯಲ್ಲಿ ನಿಧಾನವಾಗಿ ವಿಷಮಿಸುತ್ತಾ ಹೋಗಿ ಈಗ ಬೃಹತ್ ಪ್ರಮಾಣವನ್ನು ಪಡೆದುಕೊಂಡಿದೆ.
ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ಸಂಗ್ರಹಿಸುವ ಜವಾಬ್ದಾರಿ ಮಹಿಳೆಯರ ಮೇಲೆ ಬೀಳುತ್ತಿದ್ದು ಬಿಕ್ಕಟ್ಟಿನ ಸಮಯದಲ್ಲಿ ಅದು ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಡೆಂಗಾನ್‌ಮಲ್ ಹಳ್ಳಿಯಲ್ಲಿ ಆಚರಣೆಗೆ ಬಂದಿರುವ ಪದ್ಧತಿಯ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಇಲ್ಲಿನ ಪುರುಷರು ಹಗಲು ಹೊತ್ತಿನಲ್ಲಿ ದೂರದಿಂದ ನೀರನ್ನು ಹೊತ್ತು ತರುವ ಸಲುವಾಗಿಯೇ ಎರಡನೇ ಅಥವಾ ಮೂರನೇ ಮದುವೆಯಾಗುತ್ತಾರೆ. ಅಂಥವರನ್ನು ‘ಜಲಪತ್ನಿ’ ಅಥವಾ ‘ಪಾನಿವಾಲಿ ಬಾಯಿ’ ಎಂದು ಕರೆಯುತ್ತಾರೆ. ಅಂತಹ ಹಳ್ಳಿಗಳು ನದಿ ಅಥವಾ ಜಲಾಶಯಗಳ ಪಕ್ಕದಲ್ಲೇ ಇದ್ದರೂ ಅಲ್ಲಿಂದ ಸಂಗ್ರಹವಾಗುವ ನೀರನ್ನು ಮಾತ್ರ ದೂರದ ಮುಂಬೈಗೆ ಸಾಗಹಾಕಲಾಗುತ್ತದೆ. ದೂರದೂರದಿಂದ ನೀರನ್ನು ದಿನವಿಡೀ ಹೊತ್ತು ತರುವ ಮಹಿಳೆಯರು ಮಾತ್ರ ಅದನ್ನು ತಮ್ಮ ತಮ್ಮ ಮನೆಗಳಲ್ಲಿ ಬಳಸುವುದು ಮಾತ್ರ ಎಲ್ಲರೂ ಬಳಸಿದ ಕೊನೆಯಲ್ಲೇ.


ನೀರಿನ ಲಭ್ಯತೆ ಕ್ಷೀಣಿಸುತ್ತಾ ಹೋದಂತೆ ಅದರ ಬೆಲೆಯನ್ನು ಮತ್ತು ಫಲಾನುಭವಿಗಳನ್ನು ಮಾರುಕಟ್ಟೆಯೇ ನಿಯಂತ್ರಿಸುವುದರಿಂದ ಉಳ್ಳವರು ನೀರಿನ ಲಭ್ಯತೆಯ ಮೇಲೆ ಹೆಚ್ಚೆಚ್ಚು ನಿಯಂತ್ರಣ ಸಾಧಿಸುತ್ತಾ ಹೋಗುತ್ತಾರೆ. ನೀರಿನ ವಿತರಣೆಯಲ್ಲಿ ಮತ್ತು ಅದನ್ನು ನ್ಯಾಯೋಚಿತವಾಗಿ ಹಂಚಿಕೊಳ್ಳುವಲ್ಲಿ ಅಂತರ್ಗತವಾದ ಅಸಮಾನತೆಯಿದೆ. ದಿಲ್ಲಿ ಮತ್ತು ಮುಂಬೈನಂತಹ ಮಹಾನಗರಿಗಳಲ್ಲಿ ನೀರಿನ ಲಭ್ಯತೆಯು ಆದಾಯ ಮತ್ತು ಅಂತಸ್ತುಗಳನ್ನು ಆಧರಿಸಿರುವುದು ಸುಸ್ಪಷ್ಟವಾಗಿ ಗೋಚರಿಸುತ್ತದೆ. ಬಿಕ್ಕಟ್ಟಿನ ಸಮಯಗಳಲ್ಲಿ ಅಪಾರ್ಟ್ ಮೆಂಟುಗಳು ದಿನಕ್ಕೆ ಮೂರು-ನಾಲ್ಕು ಟ್ಯಾಂಕರುಗಳಷ್ಟು ನೀರನ್ನು ದುಡ್ಡುಕೊಟ್ಟು ಪಡೆದುಕೊಳ್ಳುತ್ತಾರೆ. ಆದರೆ ಕಡಿಮೆ ಆದಾಯದ ಮನೆಗಳಿಗೆ ನೀರು ಸಿಕ್ಕುವುದೇ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇ.18ರಷ್ಟು ಮನೆಗಳು ಮಾತ್ರ ಕೊಳಾಯಿ ನೀರು ಸರಬರಾಜನ್ನು ಪಡೆದಿವೆ. ಸಣ್ಣ ರೈತರ ಪರಿಸ್ಥಿತಿ ದಾರುಣವಾಗಿದ್ದು ಕ್ಷಾಮವು ತಲೆದೋರಿದಾಗ ಒಂದೋ ಅವರು ಗುಳೆ ಹೋಗಬೇಕು ಅಥವಾ ಪ್ರಾಣ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದ ಮರಾಠವಾಡ, ಉತ್ತರಖಂಡದ ಬುಂದೇಲ್‌ಖಂಡ್ ಮತ್ತು ಮಧ್ಯಪ್ರದೇಶಗಳ ಬರಪೀಡಿತ ಪ್ರದೇಶಗಳು ನಿರ್ವಸಿತವಾಗುತ್ತಿವೆ.
ಭಾರತದ ನಗರಗಳು ದೂರದೂರದಿಂದ ದುಬಾರಿ ಬೆಲೆಗೆ ಸಾಗಾಣಿಕೆಯಾಗಿ ಬರುವ ನೀರನ್ನು ಆಧರಿಸಿ ಬೆಳೆಯುತ್ತವೆ. ಸಾಕಷ್ಟು ನೀರು ಸಾಗಾಣಿಕೆಯಲ್ಲೇ ಪೋಲಾಗುತ್ತದೆ. ಸರಕಾರಗಳು ನೀರು ಸಂಗ್ರಹ ಮಾಡುವ ಕೆರೆ-ಕಟ್ಟೆಗಳ ದುರಸ್ಥಿಯನ್ನೇ ಮರೆತು ಕೂತಿವೆ. ಚೆನ್ನೈ ನಗರವೊಂದೇ 350 ಕೆರೆಗಳನ್ನು ಕಳೆದುಕೊಂಡಿದೆ. ನಗರಗಳ ವಿಸ್ತರಣೆಯ ಯೋಜನೆಗಳು ನೀರಿನ ಲಭ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಮಳೆ ಮೀರಿನ ಕೊಯ್ಲನ್ನು, ಬಳಸಿದ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವುದನ್ನು ಕಡ್ಡಾಯ ಮಾಡುವುದಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರದ ತೇಜಿ ಬೆಳವಣಿಗೆಯು ಟ್ಯಾಂಕರ್ ಲಾಬಿಯನ್ನು ಉತ್ತೇಜಿಸುತ್ತಿದೆಯಲ್ಲದೆ ಹಸಿರು ವಲಯವನ್ನು ನಿರ್ನಾಮ ಮಾಡುವುದರ ಜೊತೆಜೊತೆಗೆ ಪ್ರವಾಹಕ್ಕೀಡಾಗುವ ಮುಖಜ ಪ್ರದೇಶಗಳನ್ನು ಕಬಳಿಸುತ್ತಾ ಹೆಚ್ಚೆಚ್ಚು ನೀರನ್ನು ಕಬಳಿಸುತ್ತಾ ಹೋಗುತ್ತಿದೆ. ಜಲಸಂಗ್ರಹಾಗಾರಗಳನ್ನು ಮಟ್ಟಸಗೊಳಿಸಿ ಒತ್ತುವರಿ ಮಾಡಿಕೊಂಡಿರುವುದರಿಂದ ನೀರು ಸಂಗ್ರಹ ಕಡಿಮೆಯಾಗುತ್ತಿದೆ, ಭೂಮಿಯೊಳಗೆ ನೀರಿನ ಇಳಿತ ಕುಸಿಯುತ್ತಿದೆ ಮತ್ತು ಪ್ರವಾಹದಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತಿದೆ.
ನಗರಗಳು ಮತ್ತು ಕೈಗಾರಿಕೆಗಳು ಹೊರಗುಗುಳುವ ನೀರಿನ ಗುಣಮಟ್ಟದ ಬಗ್ಗೆ ಅವರು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಈ ಧೋರಣೆಯಿಂದಾಗಿ ದೇಶದ ಶೇ.70ರಷ್ಟು ನೀರು ಸರಬರಾಜು ಕಲುಷಿತವಾಗಿದೆ ಹಾಗೂ ಇದರಿಂದಾಗಿ ನೀತಿ ಆಯೋಗದ ಪ್ರಕಾರವೇ ವರ್ಷಕ್ಕೆ ಎರಡು ಲಕ್ಷ ಸಾವುಗಳು ಸಂಭವಿಸುತ್ತಿವೆ. ನಗರದ ಸಮೀಪದಲ್ಲಿ ನಡೆಯುವ ಬಹುಪಾಲು ಕೃಷಿಯು ನಗರವು ಹೊರಗುಗುಳುವ ಲೋಹ ಮತ್ತು ವಿಷಕಾರಿ ರಾಸಾಯನಿಕಗಳಿಂದ ಕೂಡಿದ ನೀರನ್ನೇ ಬಳಸುವುದರಿಂದ ಸಾರ್ವಜನಿಕ ಆರೋಗ್ಯವು ಮತ್ತಷ್ಟು ಗಂಭೀರ ಪರಿಣಾಮವನ್ನು ಎದುರಿಸುವಂತಾಗುತ್ತಿದೆ.
ದೇಶವು ಹಾಲಿ ಎದುರಿಸುತ್ತಿರುವ ನೀರಿನ ಬಿಕ್ಕಟ್ಟನ್ನು ನೀತಿ ಆಯೋಗವನ್ನೂ ಒಳಗೊಂಡಂತೆ ಹಲವರು ದ. ಆಫ್ರಿಕದ ಕೇಪ್ ಟೌನ್ ನಗರವು ಎದುರಿಸುತ್ತಿರುವ ‘ಶೂನ್ಯ ನೀರಿನ ದಿನ’ ಮತ್ತಿತರ ವಿನಾಶದ ಸ್ಥಿತಿಗಳೊಂದಿಗೆ ಹೋಲಿಸುತ್ತಿದ್ದಾರೆ. ಆದರೆ ಅಂತಹ ಉತ್ಪ್ರೇಕ್ಷಿತ ಹೋಲಿಕೆಗಳು ಸಹ ಗಾಬರಿಗ್ರಸ್ಥ ಪರಿಸ್ಥಿತಿಯನ್ನು ಸೃಷ್ಟಿ ಮಾಡುವುದಲ್ಲದೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತಹ ‘ಪರಿಹಾರ’ಗಳಿಗೆ ದಾರಿ ಮಾಡಿಕೊಡುತ್ತದೆ. ಅಸ್ಥಿತ್ವದಲ್ಲಿರುವ ಜಲಯೋಜನೆಗಳ ಕಳಪೆ ಕಾರ್ಯನಿರ್ವಹಣೆಗಳು ಕಣ್ಣೆದುರಿಗಿದ್ದರೂ ನದಿ ಜೋಡಣೆಯಂಥ ಯೋಜನೆಗಳಿಗೆ ಮುಂದಾಗುವುದು ವಿನಾಶವನ್ನು ಮಾತ್ರವಲ್ಲದೆ ಸಂಘರ್ಷವನ್ನೂ ಹುಟ್ಟುಹಾಕುತ್ತದೆ. ಹೆಚ್ಚಾಗುತ್ತಿರುವ ಜಲ ಬಿಕ್ಕಟ್ಟು ಮತ್ತು ಅದರ ಜೊತೆಗೆ ಬೆಸೆದುಕೊಂಡಿರುವ ಆರೋಗ್ಯ ಮತ್ತು ಆಹಾರದ ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡರೆ ಸಮರ್ಥ ನೀರು ಬಳಕೆ ನಿರ್ವಹಣೆಯಲ್ಲಿ ದೂರದರ್ಶಿತ್ವವನ್ನು ಹೊಂದಿರಬೇಕಿರುವುದು ಎಷ್ಟು ಮುಖ್ಯವೆಂಬುದು ಅರ್ಥವಾಗುತ್ತದೆ.
 ಆದರೆ ಭವಿಷ್ಯದ ಮಾರ್ಗವನ್ನು ಬದಲಿಸುವುದು ನಮ್ಮ ಕೈಯಲ್ಲೇ ಇದೆ. ಅದಾಗಬೇಕೆಂದರೆ ಮಿತನೀರು ಬಳಕೆಯ ಬೆಳೆಗಳು ಮತ್ತು ಜೀವನ ಶೈಲಿಗಳು, ನೀರಿನ ಸಂಗ್ರಹ ಮತ್ತು ಬಳಕೆಯ ನಿಯಂತ್ರಣ ಮತ್ತು ನೀರಿನ ಲಭ್ಯತೆಯಲ್ಲಿರುವ ಅಸಮಾನತೆಗಳನ್ನು ಗಣನೆಗೆ ತೆಗೆದುಕೊಳ್ಳುವ ನೀತಿಗಳು ಮತ್ತು ನೀರಿನ ಬಳಕೆಯ ಅಂದಂದಿನ ದತ್ತಾಂಶ ಸಂಗ್ರಹಗಳಂತಹ ವ್ಯವಸ್ಥೆಯನ್ನು ಜಾರಿ ಮಾಡುವ ಕಡೆ ಸಾಗಬೇಕಿರುತ್ತದೆ. ಇದು ಕೇವಲ ತಾಂತ್ರಿಕ ಮತ್ತು ಜಲತಂತ್ರಜ್ಞಾನವನ್ನು ಆಧರಿಸಿದ ಪರಿಹಾರಗಳಿಗೆ ಮಾತ್ರ ಸೀಮಿತವಾಗಲಾಗದು. ಅದರ ಜೊತೆಜೊತೆಗೆ ಆರೋಗ್ಯಕರವಾದ ಮತ್ತು ನಿಸರ್ಗ ಸಹಜ ಸ್ಥಿತಿಯಲ್ಲಿರುವ ಜಲಾಗಾರಗಳು ತಮಗೆ ತಾವೇ ಮರುಪೂರಣ ಮಾಡಿಕೊಳ್ಳುವ ಮತ್ತು ಹವಾಮಾನ ಬಿಕ್ಕಟ್ಟನ್ನು ಸಹ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವ ಅಗತ್ಯವೂ ಇದೆ.

share
ಕೃಪೆ: Economic and Political Weekly
ಕೃಪೆ: Economic and Political Weekly
Next Story
X