Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಹಿಂದಿ ಹೇರಿಕೆಯ ಹೊತ್ತಲ್ಲಿ ಪೆರಿಯಾರ್...

ಹಿಂದಿ ಹೇರಿಕೆಯ ಹೊತ್ತಲ್ಲಿ ಪೆರಿಯಾರ್ ಪ್ರಸ್ತುತತೆ

ಬಸು ಮೇಗಲಕೇರಿಬಸು ಮೇಗಲಕೇರಿ17 Sept 2019 12:01 AM IST
share
ಹಿಂದಿ ಹೇರಿಕೆಯ ಹೊತ್ತಲ್ಲಿ   ಪೆರಿಯಾರ್ ಪ್ರಸ್ತುತತೆ

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಸಮಾಜ ಸುಧಾರಕರಾಗಿದ್ದ ಪೆರಿಯಾರ್, ಆ ಕಾಲದಲ್ಲಿಯೇ ಹಿಂದಿ ಹೇರಿಕೆ ವಿರುದ್ಧ ಗುಡುಗಿದ್ದರು. ಜನರನ್ನು ಜಾಗೃತಗೊಳಿಸಿ ಬೀದಿಗಿಳಿಸಿದ್ದರು. ಉತ್ತರ ಭಾರತದವರಿಗೆ ತಕ್ಕ ಉತ್ತರ ಕೊಟ್ಟಿದ್ದರು.

‘’ಹಿಂದಿ ದೇಶದ ಜನತೆಯನ್ನು ಬೆಸೆಯುವ ಭಾಷೆಯಾಗಬೇಕು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು’’ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ದೇಶದಲ್ಲಿರುವ ಸದ್ಯದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿಯೇ ಕೇಂದ್ರ ಸರಕಾರ ಈ ವಿವಾದವನ್ನು ಅತ್ಯಂತ ಯೋಜಿತವಾಗಿ ಸೃಷ್ಟಿಸಿದೆ ಎನ್ನುವುದು ಚಿಂತಕರ ಅಭಿಪ್ರಾಯವಾಗಿದೆ. ಅದಕ್ಕೆ ಪೂರಕವಾಗಿಯೇ ಇಡೀ ದಕ್ಷಿಣ ಭಾರತವೇ ಅಮಿತ್ ಶಾ ಹೇಳಿಕೆಯ ವಿರುದ್ಧ ಎದ್ದು ನಿಂತಿದೆ. ಮಹಾರಾಷ್ಟ್ರದಿಂದ ಕೇರಳದವರೆಗೆ, ಕರ್ನಾಟಕದಿಂದ ಪಶ್ಚಿಮ ಬಂಗಾಲದವರೆಗೆ- ಬೆಂಗಾಳಿ, ಮರಾಠಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷಿಕರು- ಇದು ತಮ್ಮ ಅಸ್ಮಿತೆಗಾದ ಆಘಾತವೆಂದೇ ಪರಿಗಣಿಸಿದ್ದಾರೆ. ಬಿಜೆಪಿ ಮತ್ತು ಅಮಿತ್ ಶಾ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ದಕ್ಷಿಣ ಭಾರತದ ಜನತೆ, ಅದರಲ್ಲೂ ತಮಿಳುನಾಡಿನ ಜನತೆ ಹಿಂದಿ ಹೇರಿಕೆ ಎಂದಾಕ್ಷಣ ಕೆರಳಿ ಕೆಂಡವಾಗುತ್ತಾರೆ. ಅದಕ್ಕೆ ಕಾರಣ ಪೆರಿಯಾರ್ ರಾಮಸ್ವಾಮಿ.

ವರ್ತಮಾನದ ರಾಜಕಾರಣ ಎಲ್ಲದಕ್ಕೂ ಧರ್ಮ, ದೇಶಪ್ರೇಮ, ರಾಷ್ಟ್ರೀಯತೆಯನ್ನು ಎಳೆದು ತರುತ್ತಿದೆ. ಹಿಂದೂ ಧರ್ಮದೊಂದಿಗೆ ಹಿಂದಿ ಭಾಷೆಯನ್ನು ಬೆರೆಸುತ್ತಿದೆ, ದೇಶದ ಜನತೆಯನ್ನು ದಿಕ್ಕುತಪ್ಪಿಸುತ್ತಿದೆ. ಜನಾಂಗ ದ್ವೇಷವನ್ನು ಹುಟ್ಟುಹಾಕುತ್ತಿದೆ. ಇಂತಹ ಹೊತ್ತಲ್ಲಿ ಸ್ವಂತಿಕೆ, ಸ್ವಾಭಿಮಾನ, ಹೋರಾಟ, ವಿಚಾರಕ್ರಾಂತಿ ಎನ್ನುವಂತಹ ಬಂಡಾಯದ ಗುಣಗಳು ಸಮಾಧಿಯಾಗುವ ಸಂದರ್ಭದಲ್ಲಿ ಪೆರಿಯಾರ್ ಮತ್ತೆ ಮತ್ತೆ ನೆನಪಾಗುತ್ತಾರೆ. ಪ್ರಸ್ತುತರಾಗುತ್ತಾರೆ. ಕಾಕತಾಳೀಯವೋ ಏನೋ, ಇಂದಿಗೆ (ಸೆಪ್ಟಂಬರ್ 17) ಪೆರಿಯಾರ್ ಜನ್ಮತಾಳಿ 140 ವರ್ಷಗಳು ಉರುಳಿಹೋದವು. ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗೆ ಬಂಡಾಯದ ಬೆರಗನ್ನು, ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಪೆರಿಯಾರ್, ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಸ್ವಾಭಿಮಾನಿ ಸಂತನಾಗಿ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ದ್ರಾವಿಡ ಚಳವಳಿಯ ರೂಪದಲ್ಲಿ ಶೋಷಿತ ಸಮುದಾಯಗಳ ಅಸ್ಮಿತೆಯನ್ನು ಜಾಗೃತಗೊಳಿಸಿದ ಜನನಾಯಕರಾಗಿದ್ದಾರೆ. ಧರ್ಮ, ದೇವರು, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ರಚನಾತ್ಮಕ ಹೋರಾಟ ಹುಟ್ಟುಹಾಕಿದ ಮಹಾನಾಯಕನಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ. ಅದರಲ್ಲೂ ಉತ್ತರ ಭಾರತದವರ ಯಾಜಮಾನ್ಯ ಸಂಸ್ಕೃತಿಯನ್ನು ವಿರೋಧಿಸಿ, ಹಿಂದಿ ಹೇರಿಕೆ ಎಂಬ ಭಂಡತನವನ್ನು ಧೈರ್ಯವಾಗಿ ಧಿಕ್ಕರಿಸಿ ದಕ್ಷಿಣ ಭಾರತದವರ ಅಸ್ಮಿತೆಯ ಆರಾಧ್ಯದೈವವಾಗಿದ್ದಾರೆ.

ತಮಿಳುನಾಡಿನ ಈರೋಡಿನಲ್ಲಿ, ಬಲಿಜ ಸಮುದಾಯಕ್ಕೆ ಸೇರಿದ ವ್ಯಾಪಾರಿ ಕನ್ನಡಿಗ ಕುಟುಂಬದಲ್ಲಿ ಜನಿಸಿದ ಪೆರಿಯಾರ್ ಕಾಲಮಾನ- 1879ರಿಂದ 1974ರವರೆಗೆ. ಅಂದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಸಮಾಜ ಸುಧಾರಕರಾಗಿದ್ದ ಪೆರಿಯಾರ್, ಆ ಕಾಲದಲ್ಲಿಯೇ ಹಿಂದಿ ಹೇರಿಕೆ ವಿರುದ್ಧ ಗುಡುಗಿದ್ದರು. ಜನರನ್ನು ಜಾಗೃತಗೊಳಿಸಿ ಬೀದಿಗಿಳಿಸಿದ್ದರು. ಉತ್ತರ ಭಾರತದವರಿಗೆ ತಕ್ಕ ಉತ್ತರ ಕೊಟ್ಟಿದ್ದರು.

ಆದರೆ ಪೆರಿಯಾರ್ ಇಲ್ಲವಾಗಿ 55 ವರ್ಷಗಳು ಕಳೆದರೂ, ಇಂದಿಗೂ ಉತ್ತರ ಭಾರತದವರ ಹಿಂದಿ ಹೇರಿಕೆಯ ಉಪಟಳ ನಿಂತಿಲ್ಲ. 2011ರ ಜನಗಣತಿಯ ಪ್ರಕಾರ ದೇಶದಾದ್ಯಂತ ಹಿಂದಿಯನ್ನು ಪ್ರಥಮ ಭಾಷೆಯಾಗಿ ಬಳಸುವವರ ಪ್ರಮಾಣ ಕೇವಲ ಶೇ. 26ರಷ್ಟಿದ್ದರೂ, ಗುಜರಾತ್ ಮೂಲದ ಅಮಿತ್ ಶಾರಂತಹವರ ಕೀಟಲೆಯ ಹೇಳಿಕೆಗಳು ನಿಂತಿಲ್ಲ. ಆರೆಸ್ಸೆಸ್ ಮತ್ತು ಭಾರತೀಯ ಜನತಾ ಪಕ್ಷದವರು ಇಂಡಿಯಾವನ್ನು ‘ಹಿಂದಿಯಾ’ ಮಾಡಲು ಹೊರಟಿರುವ ಕಿಡಿಗೇಡಿ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ. ಈಗಲಾದರೂ ದಕ್ಷಿಣ ಭಾರತದವರು ಒಗ್ಗಟ್ಟಾಗಿ, ಸಮರ್ಥವಾಗಿ ಪ್ರತಿರೋಧ ಒಡ್ಡದಿದ್ದರೆ, ಬಹುತ್ವ ಭಾರತ ಮರೆಯಾಗಿ, ಅವಿವೇಕಿಗಳ ಆಟ ಅತಿಯಾಗುವುದರಲ್ಲಿ ಅನುಮಾನವಿಲ್ಲ.

ಏಕೆಂದರೆ, ಈ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳಬಹುದಾದ ತಾಕತ್ತು ಇರುವುದು ಇಲ್ಲಿನ ಕೋಮುವಾದಿಗಳಿಗೆ ಹಾಗೂ ಜಾತಿವಾದಿಗಳಿಗೆ. ಇದು ಈ ದೇಶದ ವಕ್ರ ವರ್ಣಾಶ್ರಮದ ಫಲ. ಇದನ್ನು ನೂರು ವರ್ಷಗಳ ಹಿಂದೆಯೇ ಗ್ರಹಿಸಿ, ಪ್ರಶ್ನಿಸಿ, ಪ್ರತಿಭಟಿಸಿದ್ದರು ಪೆರಿಯಾರ್. ಈಗ ಚಂದ್ರಲೋಕದಲ್ಲಿ ಕಾಲಿಡುತ್ತಿರುವ ಕಾಲದಲ್ಲಿ, ತಂತ್ರಜ್ಞಾನ ಬೆರಳ ತುದಿಯಲ್ಲಿರುವ ಸಂದರ್ಭದಲ್ಲಿ, ಮತ್ತೆ ಮೂಢರಾಗುವುದು, ಉತ್ತರದವರ ಮರ್ಜಿಗೊಳಗಾಗಿ ಗುಲಾಮರಂತೆ ಬದುಕುವುದು- ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರಿಗೆ ಮಾಡುವ ಅಪಮಾನವಲ್ಲವೇ?

share
ಬಸು ಮೇಗಲಕೇರಿ
ಬಸು ಮೇಗಲಕೇರಿ
Next Story
X