Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮರ ಕಡಿಯುವುದೆಂದರೆ...

ಮರ ಕಡಿಯುವುದೆಂದರೆ...

ಡಾ. ಬಿ. ಭಾಸ್ಕರ ರಾವ್ಡಾ. ಬಿ. ಭಾಸ್ಕರ ರಾವ್11 Dec 2019 11:58 PM IST
share
ಮರ ಕಡಿಯುವುದೆಂದರೆ...

ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾದ ವರದಿಯೊಂದು ಹೇಳುವಂತೆ ಈ ರೀತಿಯ ವೃಕ್ಷನಾಶ ಅಂತಿಮವಾಗಿ ವಿಶ್ವದ ಜೀವ ವೈವಿಧ್ಯವನ್ನೇ ನಾಶ ಮಾಡಿಬಿಡಬಹುದು. ಈಗಾಗಲೇ ಭೂಮಿಗೆ ಇಷ್ಟೊಂದು ಹಾನಿಯಾಗಿದೆ ಎಂದರೆ ಭೂಮಿಯ ಮೇಲಿರುವ ಸಹಸ್ರಾರು ಜೀವರಾಶಿಗಳನ್ನು ಉಳಿಸಿಕೊಳ್ಳಬೇಕಾದರೆ ವಾರ್ಷಿಕ ನೂರು ಬಿಲಿಯನ್ ಡಾಲರ್ (ಒಂದು ಲಕ್ಷ ಮಿಲಿಯ ಡಾಲರ್) ಬೇಕಾಗಬಹುದು. ಭೂಮಿಯ ಮೇಲಿರುವ ಸಮಸ್ತ ಜೀವ ಸಂಕುಲ ಇನ್ನೊಮ್ಮೆ ಸಾಮೂಹಿಕವಾಗಿ ನಾಶ ಹೊಂದುವುದನ್ನು ತಡೆಯಬೇಕಾದರೆ ವಿಶ್ವದ ಸರಕಾರಗಳು ಇಷ್ಟೊಂದು ದುಬಾರಿ ಬೆಲೆ ತೆರಬೇಕಾಗುತ್ತದೆ.

‘‘ಪ್ರತಿ ಬಾರಿ ನಾವು ಒಂದು ಮರ ಕಡಿದಾಗಲೂ ಜಗತ್ತಿಗೆ ಸ್ವಲ್ಪಹಾನಿಯಾಗುತ್ತದೆ. ಒಂದು ಮರವನ್ನು ಕಡಿಯುವುದು ಒಂದು ಮರವನ್ನು ಬೆಳೆಸುವುದಕ್ಕಿಂತ ತುಂಬಾ ಸುಲಭ. ಆದ್ದರಿಂದ ಪ್ರತಿ ಬಾರಿ ನಾವು ಒಂದು ಮರವನ್ನು ಕಡಿಯುವಾಗಲೂ ಯಾಕಾಗಿ ಅದನ್ನು ಕಡಿಯುತ್ತಿದ್ದೇವೆ ಎಂದು ಪ್ರಶ್ನಿಸುವುದು ಅತ್ಯಗತ್ಯ’’

-ಆ್ಯನ್ ಹೋಪ್ ಜಾಹ್ರನ್, ಅಮೆರಿಕನ್ ಭೂ ಜೀವಶಾಸ್ತ್ರಜ್ಞೆ

ಪ್ರತಿ ನೂರೈವತ್ತು ಮೀಟರಿಗೆ ಒಂದರಂತೆ ಒಂದು ಕಿಲೋಮೀಟರ್‌ಗೆ 156 ಮರಗಳನ್ನು ಕಡಿದರೆ ನಿಮ್ಮ ಊರಿನ ಏಳು ಕಿಲೋಮೀಟರ್ ರಸ್ತೆಯ ಅಗಲೀಕರಣಕ್ಕೆ ಎಷ್ಟು ಮರಗಳನ್ನು ಕಡಿಯಬೇಕಾಗಬಹುದೆಂದು ಊಹಿಸಿಕೊಳ್ಳಿ. ಇತ್ತೀಚಿನ ವರದಿಯಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಹೆಬ್ರಿಯವರೆಗೆ ಏಳು ಕಿಲೋಮೀಟರ್ ರಸ್ತೆ ಅಗಲೀಕರಣ ಯೋಜನೆಗಾಗಿ 1,092 ಮರಗಳು ಧರೆಗುರುಳಲಿವೆ. ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೆರೆ ಹಾವಳಿ, ಭೂಕುಸಿತಗಳಿಂದಾಗಿ ಜನರು ಪಡಬಾರದ ಪಾಡು ಪಟ್ಟಿದ್ದು, ನೆರೆ ಹಾಗೂ ಭೂಕುಸಿತ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರಕ್ಕಾಗಿ ವಿವಿಧ ರೀತಿಯ ಸರಕಾರಿ ಸರ್ಕಸ್ಸು ನಡೆದದ್ದು, ದುಃಖಿತರ ಗೋಳು ಕೇಳುವವರೇ ಇಲ್ಲವಾದದ್ದು ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ರಸ್ತೆಯ ಅಭಿವೃದ್ಧಿಗಾಗಿ ಅಲ್ಲಲ್ಲಿ ಹೀಗೆ ಸಾವಿರ ಸಾವಿರ ಮರಗಳನ್ನು ಕಡಿಯುವ ಸುದ್ದಿಗಳು ಬರುತ್ತಿವೆ.

ಸ್ವಲ್ಪಸಮಯದ ಹಿಂದೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಗಾಗಿ 1.09 ಕೋಟಿ ಮರಗಳನ್ನು ಕಡಿಯಲಾಗಿದೆ ಎಂದು ಕೇಂದ್ರ ಪರಿಸರ ಇಲಾಖೆ ಹೇಳಿದೆ. ಸರಕಾರ ಬಿಡುಗಡೆಗೊಳಿಸಿದ ಹೇಳಿಕೆಯ ಪ್ರಕಾರ 1,09,75,844 ಮರಗಳನ್ನು ಕಡಿಯಲಾಗಿದೆ ಮತ್ತು ಇದಕ್ಕೆ ಪರಿಹಾರ ರೂಪವಾಗಿ 12,60,00,000 ಗಿಡಗಳನ್ನು ನೆಡಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಾ ಹೋದಲ್ಲಿ ಏನಾಗಬಹುದು?

ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾದ ವರದಿಯೊಂದು ಹೇಳುವಂತೆ ಈ ರೀತಿಯ ವೃಕ್ಷನಾಶ ಅಂತಿಮವಾಗಿ ವಿಶ್ವದ ಜೀವ ವೈವಿಧ್ಯವನ್ನೇ ನಾಶ ಮಾಡಿಬಿಡಬಹುದು. ಈಗಾಗಲೇ ಭೂಮಿಗೆ ಇಷ್ಟೊಂದು ಹಾನಿಯಾಗಿದೆ ಎಂದರೆ ಭೂಮಿಯ ಮೇಲಿರುವ ಸಹಸ್ರಾರು ಜೀವರಾಶಿಗಳನ್ನು ಉಳಿಸಿಕೊಳ್ಳಬೇಕಾದರೆ ವಾರ್ಷಿಕ ನೂರು ಬಿಲಿಯನ್ ಡಾಲರ್ (ಒಂದು ಲಕ್ಷ ಮಿಲಿಯ ಡಾಲರ್) ಬೇಕಾಗಬಹುದು. ಭೂಮಿಯ ಮೇಲಿರುವ ಸಮಸ್ತ ಜೀವ ಸಂಕುಲ ಇನ್ನೊಮ್ಮೆ ಸಾಮೂಹಿಕವಾಗಿ ನಾಶ ಹೊಂದುವುದನ್ನು ತಡೆಯಬೇಕಾದರೆ ವಿಶ್ವದ ಸರಕಾರಗಳು ಇಷ್ಟೊಂದು ದುಬಾರಿ ಬೆಲೆ ತೆರಬೇಕಾಗುತ್ತದೆ.

ವಿಜ್ಞಾನಿಗಳು ಹೇಳುವಂತೆ ಭೂಮಿಯ ಇತಿಹಾಸದಲ್ಲಿ ಇಷ್ಟರವರೆಗೆ ಐದು ಬಾರಿ ಸಮಸ್ತ ಜೀವರಾಶಿಗಳ ಸಂಪೂರ್ಣ ವಿನಾಶ ಸಂಭವಿಸಿದೆ. ಇನ್ನೊಂದು ಬಾರಿ ಮೊತ್ತ ಮೊದಲ ಮಾನವ ನಿರ್ಮಿತ ಜೀವ ವೈವಿಧ್ಯ ಸರ್ವನಾಶ ಸಂಭವಿಸಬಾರದೆಂದಾದಲ್ಲಿ ಮುಂದಿನ ದಶಕಗಳಲ್ಲಿ ಜಾಗತಿಕ ಸಮುದಾಯ, ಸರಕಾರಗಳು ಎಚ್ಚರಗೊಂಡು ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ.

 ಅಮೆರಿಕದ ಅರಿಜೋನಾ ಸ್ಟೇಟ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಗ್ರೆಗ್ ಆಸ್ನರ್ ಕಳೆದ ಭೂ ದಿನಾಚರಣೆಯಂದು ನೀಡಿದ ಹೇಳಿಕೆಯೊಂದರಲ್ಲಿ ‘‘ಆರನೆಯ ವಿನಾಶ ನಮ್ಮ ಭುಜದ ಮೇಲಿದೆ; ನಿಜವಾಗಿಯೂ ಇದೆ’’ ಎಂದಿದ್ದಾರೆ. ಆರನೆಯ ಬಾರಿಗೆ ವಿಶ್ವದ ಸಮಸ್ತ ಜೀವರಾಶಿಯ ವಿನಾಶವನ್ನು ತಡೆಯಲು ವಿಶ್ವದ ಹತ್ತೊಂಬತ್ತು ಮಂದಿ ಅಂತರ್‌ರಾಷ್ಟ್ರೀಯ ತಜ್ಞರು ‘ಎ ಗ್ಲೋಬಲ್ ಡೀಲ್ ಫಾರ್ ನೇಚರ್’ (ಪ್ರಕೃತಿಯ ರಕ್ಷಣೆಗೆ ಒಂದು ಜಾಗತಿಕ ಯೋಜನೆ) ಎಂಬ ಒಂದು ಹೊಸ ವಿಜ್ಞಾನ ನೀತಿಯನ್ನು ವಿಶ್ವದ ಸರಕಾರಗಳ ಮುಂದೆ ಇಟ್ಟಿದ್ದಾರೆ. ಈ ಯೋಜನೆಯ ಪ್ರಕಾರ ವಿಶ್ವದ ಜೀವವೈವಿಧ್ಯ ವಿನಾಶವನ್ನು ತಡೆದು ಭೂಮಿಯ ಮೇಲೆ ಮನುಕುಲದ ಸಂತತಿಯನ್ನು ಉಳಿಸಿಕೊಳ್ಳಬೇಕಾದರೆ ವಾರ್ಷಿಕ ನೂರು ಬಿಲಿಯನ್ ಡಾಲರ್ ನಷ್ಟು ದುಬಾರಿ ವೆಚ್ಚ ತಗಲುತ್ತದೆ. ಈ ಯೋಜನೆಯು ಮೊತ್ತ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಮತ್ತು ಪರಿಸರ ಒಪ್ಪಂದಗಳನ್ನು ಏಕತ್ರಗೊಳಿಸಿ ಅನುಷ್ಠಾನಿಸುವ ಗುರಿ ಹೊಂದಿದೆ. ಜಗತ್ತಿನ ವಿವಿಧ ಸರಕಾರಗಳ ಹವಾಮಾನ ಬದಲಾವಣೆ ಯೋಜನೆಗಳಿಗೆ ಸಂಬಂಧಿಸಿ ಜಾಗತಿಕ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ನಡೆದ ಮೊದಲ ಒಂದು ದೊಡ್ಡ ಒಪ್ಪಂದ 2015ರ ಪ್ಯಾರಿಸ್ ಹವಾಮಾನ ಒಪ್ಪಂದ. ಅಂತರ್‌ರಾಷ್ಟ್ರೀಯ ತಜ್ಞರ ತಂಡದ ಪ್ರಕಾರ ಇಂತಹುದೇ ಒಂದು ಒಪ್ಪಂದ ಈಗ ಅನಿವಾರ್ಯವಾಗಿದೆ. ಇದರ ಹೊರತಾಗಿ ಭೂಮಿಯನ್ನು ಅದರ ಜೀವರಾಶಿಗಳೊಂದಿಗೆ ಉಳಿಸಿಕೊಳ್ಳುವುದೇ ಕಷ್ಟವಾಗಬಹುದು.

ಗ್ಲೋಬಲ್ ಡೀಲ್ ಫಾರ್ ನೇಚರ್ ಎಂಬುದು ನಿರ್ದಿಷ್ಟ ಅವಧಿಯಲ್ಲಿ ಕಾರ್ಯಗತಗೊಳಿಸಬೇಕಾದ ವಿಜ್ಞಾನ ಆಧಾರಿತವಾದ ಒಂದು ಯೋಜನೆ. ಯೋಜನೆಯ ಗುರಿಗಳನ್ನು ಸಾಧಿಸುವುದೇ ವಿಶ್ವದ ಮುಂದಿನ ಜನಾಂಗಗಳಿಗೆ ನಾವು ನೀಡಬಹುದಾದ ಅತ್ಯುತ್ತಮವಾದ ಉಡುಗೊರೆ ಎಂದಿದ್ದಾರೆ ಅಮೆರಿಕದಲ್ಲಿ ಮೂಲ ನೆಲೆ ಹೊಂದಿರುವ ಸರಕಾರೇತರ ಸಂಘಟನೆ ‘ಸಾಲ್ವ್’ನ ಎರಿಕ್ ಡಿನರ್‌ಸ್ಟೀನ್.

ಭೂಮಿಯ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದಲ್ಲಿ ಸಂಭವಿಸಲಿರುವ ಜೀವಸಂಕುಲದ ನಾಶವನ್ನು ದೂರ ಮಾಡಬೇಕಾದರೆ ಯಾವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು ಹಾಗೂ ಯಾವ ಗುರಿಗಳನ್ನು ಹಾಕಿಕೊಳ್ಳಬೇಕೆಂಬ ವಿವರಗಳನ್ನು ತಜ್ಞರ ತಂಡ ಸಿದ್ಧಪಡಿಸಿರುವ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 2030ರ ವೇಳೆಗೆ ಭೂಮಿಯ ಮೇಲ್ಮೈ ಕನಿಷ್ಠ ಶೇ. 30ರಷ್ಟನ್ನು ಸಂರಕ್ಷಿಸುವುದು, ಭೂಮಿಯ ನೈಸರ್ಗಿಕ ಕಾರ್ಬನ್ ದಾಸ್ತಾನುಗಳನ್ನು ರಕ್ಷಿಸುವ ಮೂಲಕ ಹವಾಮಾನ ಬದಲಾವಣೆಯ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಭೂಮಿಯ ಅಸ್ತಿತ್ವಕ್ಕೆ ಎದುರಾಗುವ ಮುಖ್ಯ ಬೆದರಿಕೆಗಳನ್ನು ಕಡಿಮೆ ಮಾಡುವುದು ಜೀವ ವೈವಿಧ್ಯ ಸಂರಕ್ಷಣೆಯ ಮೂರು ಮುಖ್ಯ ಅಂಶಗಳನ್ನು ಗುರುತಿಸಲಾಗಿದೆ.

ಇಂತಹ ಅಧ್ಯಯನಗಳು ಪ್ರಕಟವಾದಾಗಲೆಲ್ಲ ಸರಕಾರಗಳು ಅವುಗಳನ್ನು ಗಂಭೀರವಾಗಿ ಪರಿಗಣಿಸುವುದು ತೀರ ಅಪರೂಪ. ಭೂಮಿಯ ತಾಪಮಾನ ಏರಿಕೆಯ ಬಹುದೊಡ್ಡ ಪಾಲು ವಿಶ್ವದ ಕೆಲವೇ ಕೆಲವು ಶ್ರೀಮಂತ ರಾಷ್ಟ್ರಗಳ ಆರ್ಥಿಕ ಯೋಜನೆಗಳ ಫಲ, ಅವುಗಳು ಉಂಟುಮಾಡುವ ಪರಿಸರ ಮಾಲಿನ್ಯದ ಪರಿಣಾಮ ಎಂಬುದು ಈಗಾಗಲೇ ಬಹಿರಂಗವಾಗಿ.ೆ ಆದರೆ ಈ ‘ದೊಡ್ಡಣ್ಣ’ಗಳು ಜಾಗತಿಕ ಮಾರುಕಟ್ಟೆ ಹಾಗೂ ಶಸ್ತ್ರಾಸ್ತ್ರ ಪೂರೈಕೆಯ ಮೇಲೆ ಹೊಂದಿರುವ ಹಿಡಿತದಿಂದಾಗಿ ಪರಿಸರ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅಲ್ಲದೆ, ‘ಪರಿಸರ ಸಂರಕ್ಷಣೆ’ ಎಂಬುದು ಹಲವು ನಾಯಕರಿ,ೆ ಸಂಘಟನೆಗಳಿಗೆ ಮಾಧ್ಯಮಗಳಲ್ಲಿ ಪ್ರಚಾರ ಪಡೆದು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ನೆರವಾಗುವ ಒಂದು ಸಲಕರಣೆಯಷ್ಟೇ ಆಗಿಬಿಟ್ಟಿದೆ. ಹೀಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮರಗಳನ್ನು ಕಡಿದಾಗ ‘‘ಹಾಗಾದರೆ ನಮಗೆ ರಸ್ತೆಗಳು ರೈಲು ಮಾರ್ಗಗಳು ಬೇಡವೇ? ಅಭಿವೃದ್ಧಿ ಬೇಡವೇ? ವಿದ್ಯುತ್ ಬೇಡವೇ’’ ಎಂಬ ಪ್ರಶ್ನೆಗಳನ್ನೆತ್ತಿ ಜನರ ಬಾಯಿ ಮುಚ್ಚಿಸಲಾಗುತ್ತದೆ. ಪ್ರತಿಯೊಂದು ರಸ್ತೆ ಅಗಲೀಕರಣ ಅಭಿವೃದ್ಧಿ ಯೋಜನೆಯ ಹಿಂದೆ ಲಾಭ ಮಾಡಿಕೊಳ್ಳುವ ಸ್ವಹಿತಾಸಕ್ತರ ಲಾಬಿ ನಡೆಯುವುದರಿಂದ ಈ ದೇಶದಲ್ಲಿ ಮರಗಳನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ.

 ಮರ ಕಡಿಯುವುದೆಂದರೆ ಭವಿಷ್ಯದ ಮನುಷ್ಯರನ್ನೇ, ವಿಶ್ವದ ಜೀವ ವೃಕ್ಷವನ್ನೇ ಕಡಿದಂತೆ ಎಂಬ ತಿಳಿವಳಿಕೆ ಮೂಡುವವರೆಗೆ ಏಳು ಕಿಲೋಮೀಟರ್ ರಸ್ತೆ ಅಗಲೀಕರಣವೆಂಬ ಅಭಿವೃದ್ಧಿ ಕಾರ್ಯಕ್ಕೆ ಒಂದು ಸಾವಿರವಲ್ಲ; ಮೂರು ಸಾವಿರ ಮರಗಳನ್ನು ಕಡಿದು ಉರುಳಿಸಿದರೂ ಜನರು ತಮ್ಮ ದಿವ್ಯ ಮೌನ ಮುರಿಯುವುದಿಲ್ಲ.

bhaskarrao599@gmail. Com

share
ಡಾ. ಬಿ. ಭಾಸ್ಕರ ರಾವ್
ಡಾ. ಬಿ. ಭಾಸ್ಕರ ರಾವ್
Next Story
X