Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಗತ್ಯವಿಲ್ಲದ ಬ್ಯಾಂಕ್ ಖಾತೆಗಳನ್ನು...

ಅಗತ್ಯವಿಲ್ಲದ ಬ್ಯಾಂಕ್ ಖಾತೆಗಳನ್ನು ಮುಚ್ಚಿಬಿಡಿ

ಜಾಗೃತಿ

ವಾರ್ತಾಭಾರತಿವಾರ್ತಾಭಾರತಿ25 Dec 2019 12:01 AM IST
share
ಅಗತ್ಯವಿಲ್ಲದ ಬ್ಯಾಂಕ್ ಖಾತೆಗಳನ್ನು ಮುಚ್ಚಿಬಿಡಿ

ಹೆಚ್ಚಿನವರು ಬ್ಯಾಂಕುಗಳಲ್ಲಿ ಎಸ್‌ಬಿ ಅಥವಾ ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಈ ಖಾತೆಗಳಲ್ಲಿ ಇರುವುದು ನಮ್ಮದೇ ದುಡ್ಡು, ಆದರೂ ಬ್ಯಾಂಕಿನವರು ಆಗಾಗ್ಗೆ....ವಿಶೇಷವಾಗಿ ಖಾತೆಯಲ್ಲಿ ಕನಿಷ್ಠ ಶಿಲ್ಕು ಕಾಯ್ದುಕೊಳ್ಳದ್ದಕ್ಕಾಗಿ ದಂಡದ ರೂಪದಲ್ಲಿ ಹೆಚ್ಚುವರಿ ಶುಲ್ಕಗಳನ್ನು ನಮ್ಮ ಮೇಲೆ ಹೇರುತ್ತಲೇ ಇರುತ್ತಾರೆ. ಹೀಗೆ ಶುಲ್ಕ ವಿಧಿಸುವಾಗ ಗ್ರಾಹಕರಿಗೆ ಪೂರ್ವ ಸೂಚನೆಯನ್ನು ನೀಡುವ ಕನಿಷ್ಠ ಸೌಜನ್ಯವೂ ಬ್ಯಾಂಕುಗಳಿಗೆ ಇರುವುದಿಲ್ಲ. ತಮಗೆ ಮನಬಂದಂತೆ ಶುಲ್ಕಗಳನ್ನು ನಮ್ಮ ಖಾತೆಗಳಿಂದ ಕಡಿತಗೊಳಿಸುತ್ತಲೇ ಇರುತ್ತವೆ. ಈ ಎಟಿಎಂ ಜಮಾನಾದಲ್ಲಿ ಬ್ಯಾಂಕ್ ಶಾಖೆಗಳಿಗೆ ಹೋಗುವವರು ಕಡಿಮೆ ಮತ್ತು ತಮ್ಮ ಉಳಿತಾಯ ಖಾತೆ ಪಾಸ್‌ಬುಕ್‌ಗಳನ್ನು ಆಗಾಗ್ಗೆ ಅಪ್‌ಡೇಟ್ ಮಾಡಿಸುವವರೂ ಕಡಿಮೆ. ಹೀಗಾಗಿ ಬ್ಯಾಂಕುಗಳು ನಮ್ಮ ಖಾತೆಗಳಿಂದ ಹಣ ಕಡಿತಗೊಳಿಸಿದ್ದು ನಮಗೆ ಗೊತ್ತಾಗುವುದೂ ಕಷ್ಟ. ಇವನ್ನೆಲ್ಲ ಹೆಚ್ಚಿನ ಬ್ಯಾಂಕುಗಳು ಎಸ್‌ಎಂಎಸ್ ಮೂಲಕ ತಿಳಿಸುವ ಗೋಜಿಗೆ ಹೋಗುವುದಿಲ್ಲ.

 ಕಳೆದ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿ ಕನಿಷ್ಠ ಸರಾಸರಿ ಶಿಲ್ಕು (ಎಂಎಬಿ) ಅನ್ನು ಕಾಯ್ದುಕೊಳ್ಳದ್ದದಕ್ಕಾಗಿ ಗ್ರಾಹಕರಿಂದ ದಂಡದ ರೂಪದಲ್ಲಿ 9,271 ಕೋ.ರೂ. ಆದಾಯವನ್ನು ಗಳಿಸಿವೆ.

ಈ ರಗಳೆಯಿಂದ ಪಾರಾಗಲು ಅತ್ಯಗತ್ಯವಲ್ಲದ ಬ್ಯಾಂಕ್ ಖಾತೆಗಳನ್ನು ಮುಚ್ಚುವುದು ಒಳ್ಳೆಯ ಮಾರ್ಗವಾಗಿದೆ. ನೀವು ಖಾತೆಯನ್ನು ಮುಚ್ಚಲು ಬಯಸಿದ್ದರೆ ನಿಮ್ಮ ಖಾತೆಯಲ್ಲಿ ಎಂಎಬಿ ಇಲ್ಲವೆಂದು ಬ್ಯಾಂಕುಗಳು ವಿಧಿಸಿದ ದಂಡಶುಲ್ಕಗಳು ಇದ್ದಬದ್ದ ಶಿಲ್ಕನ್ನು ತಿಂದು ಹಾಕಿ ಖಾತೆಯಲ್ಲಿ ಡೆಬಿಟ್ ಬ್ಯಾಲನ್ಸ್ ತೋರಿಸುತ್ತಿದ್ದರೆ ಖಾತೆಯನ್ನು ಮುಚ್ಚಲು ಬ್ಯಾಂಕುಗಳು ಅವಕಾಶ ನೀಡುವುದಿಲ್ಲ. ಅವರು ನಿಮ್ಮ ಖಾತೆಗೆ ಖರ್ಚು ಹಾಕಿರುವ ಮೊತ್ತವನ್ನು ಪಾವತಿಸಿದ ಬಳಿಕವೇ ಖಾತೆಯನ್ನು ಮುಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ಉಳಿತಾಯ ಖಾತೆಯನ್ನು ಮುಚ್ಚಲು ಬಯಸುವವರು ತಮ್ಮ ಖಾತೆಯಲ್ಲಿ ಕನಿಷ್ಠ ಸರಾಸರಿ ಶಿಲ್ಕನ್ನು ಕಾಯ್ದುಕೊಳ್ಳಬೇಕು. ಇದರಿಂದ ಹೆಚ್ಚುವರಿ ಶುಲ್ಕಗಳ ಹೊರೆಯಿಂದ ಪಾರಾಗಬಹುದು.

ಅಲ್ಲದೆ, ನೀವು ಖಾತೆ ಆರಂಭಿಸಿದ ಒಂದು ವರ್ಷದೊಳಗೆ ಅದನ್ನು ಮುಚ್ಚಲು ಬಯಸಿದರೆ ಅದಕ್ಕೂ ಬ್ಯಾಂಕುಗಳು ಸಮಾಪನ ಶುಲ್ಕವನ್ನು ವಿಧಿಸುತ್ತವೆ. ಖಾತೆ ಆರಂಭಿಸಿದ 14 ದಿನಗಳಲ್ಲಿ ಅಥವಾ ಒಂದು ವರ್ಷದ ನಂತರ ಅದನ್ನು ಮುಚ್ಚಿದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. 14 ದಿನಗಳ ನಂತರ ಆದರೆ ಒಂದು ವರ್ಷದೊಳಗೆ ಖಾತೆಯನ್ನು ಮುಚ್ಚಿದರೆ ಈ ಶುಲ್ಕವನ್ನು ಪಾವತಿಸಲೇಬೇಕು.

ಬ್ಯಾಂಕುಗಳು ತಮ್ಮ ಗ್ರಾಹಕರಿಂದ ವಸೂಲು ಮಾಡುವ ಹೆಚ್ಚುವರಿ ಶುಲ್ಕಗಳು ಕೇವಲ ಎಂಎಬಿಗೆ ಸೀಮಿತವಾಗಿಲ್ಲ. ಇನ್ನೂ ಹಲವಾರು ಶುಲ್ಕಗಳನ್ನು ನಮ್ಮ ಖಾತೆಗಳಿಂದ ಕಡಿತಗೊಳಿಸಲಾಗುತ್ತದೆ. ನಗದು ವಹಿವಾಟುಗಳು, ಡಿಜಿಟಲ್ ವಹಿವಾಟುಗಳು, ಉಚಿತ ಮಿತಿಯ ನಂತರ ಎಟಿಎಂ ಹಿಂದೆಗೆತಗಳು, ಎಸ್‌ಎಂಎಸ್ ಶುಲ್ಕಗಳು ಇತ್ಯಾದಿ ಎಂದು ಬ್ಯಾಂಕುಗಳು ಶುಲ್ಕಗಳನ್ನು ವಿಧಿಸುತ್ತಲೇ ಇರುತ್ತವೆ.

ಗ್ರಾಹಕ ಸೇವೆಗಳು ಮತ್ತು ಚಟುವಟಿಕೆಗಳ ಮೇಲೆ ವಿವಿಧ ಶುಲ್ಕಗಳನ್ನು ಹೇರುವುದರಿಂದ ಶಾಖೆಗಳಲ್ಲಿಯ ದೈನಂದಿನ ನಿರ್ವಹಣೆಯ ಖರ್ಚುವೆಚ್ಚಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬ್ಯಾಂಕುಗಳು ಹೇಳುತ್ತವೆ. ಇದು ಸ್ವಲ್ಪ ಮಟ್ಟಿಗೆ ನಿಜ, ಆದರೆ ಬ್ಯಾಂಕುಗಳು, ವಿಶೇಷವಾಗಿ ಖಾಸಗಿ ಬ್ಯಾಂಕುಗಳು ಗ್ರಾಹಕರಿಗೆ ಗೊತ್ತಿಲ್ಲದೆ ಅವರ ಖಾತೆಗಳಿಂದ ವಿವಿಧ ಶುಲ್ಕಗಳನ್ನು ಕಡಿತಗೊಳಿಸುತ್ತವೆ.

ಹೀಗಾಗಿ ಗ್ರಾಹಕರಿಗೆ ಈ ಎಲ್ಲ ಶುಲ್ಕಗಳ ಬಗ್ಗೆ ಗೊತ್ತಿರಬೇಕು. ಬ್ಯಾಂಕಿನ ಸೇವೆ ಇಷ್ಟವಾಗದಿದ್ದರೆ ಅವರು ಕಡಿಮೆ ಮತ್ತು ಸಕಾರಣ ಶುಲ್ಕಗಳನ್ನು ವಿಧಿಸುವ ಬ್ಯಾಂಕುಗಳು ಅಥವಾ ಶೂನ್ಯ ಶಿಲ್ಕು ಖಾತೆಗಳಿಗೆ ಬದಲಾಗಬಹುದು

ಉಳಿತಾಯ ಖಾತೆಯಲ್ಲಿ ಎಂಎಬಿ ಇಲ್ಲದಿದ್ದಾಗ ಬ್ಯಾಂಕುಗಳು ಸಾಮಾನ್ಯವಾಗಿ ಮಾಸಿಕ 200 ರೂ.ನಿಂದ 800 ರೂ.ವರೆಗೂ ಶುಲ್ಕ ವಿಧಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಸ್ವಲ್ಪ ಕಡಿಮೆ ಶುಲ್ಕ ವಿಧಿಸುತ್ತವೆ. ನಗದು ವಹಿವಾಟುಗಳಿಗೆ ಉಚಿತ ಮಿತಿಯ ಬಳಿಕ ಪ್ರತಿ ವಹಿವಾಟಿಗೆ 5 ರೂ.ನಿಂದ 150 ರೂ.ವರೆಗೆ ಶುಲ್ಕ ಹೇರಲಾಗುತ್ತದೆ. ಎಟಿಎಂ ವಹಿವಾಟುಗಳು ಉಚಿತ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ಖಾಸಗಿ ಬ್ಯಾಂಕುಗಳು 20 ರೂ.ನಿಂದ 40 ರೂ.ವರೆಗೆ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 5 ರೂ.ನಿಂದ 10 ರೂ.ಶುಲ್ಕ ವಿಧಿಸುತ್ತವೆ. ಇವು ಸೇರಿದಂತೆ ವಿವಿಧ ಬ್ಯಾಂಕುಗಳು ವಿಧಿಸುವ ಶುಲ್ಕಗಳ ಬಗ್ಗೆ ಮಾಹಿತಿಯಿದ್ದರೆ ಹಾಲಿ ಖಾತೆಯನ್ನು ಮುಚ್ಚಿ ಕಡಿಮೆ ಶುಲ್ಕ ಮತ್ತು ಉತ್ತಮ ಸೇವೆಯ ಬ್ಯಾಂಕಿನಲ್ಲಿ ಹೊಸದಾಗಿ ಖಾತೆಯನ್ನು ಆರಂಭಿಸಬಹುದು.

ಖಾತೆ ಸಮಾಪನ ಶುಲ್ಕಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಹೊಂದಿಲ್ಲ. ಹಿಗಾಗಿ ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಶುಲ್ಕಗಳನ್ನು ವಿಧಿಸುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X