Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಹವಾಮಾನ ಬದಲಾವಣೆಗೆ ಸಂಪತ್ತಿನ ಅಸಮಾನತೆಯೇ...

ಹವಾಮಾನ ಬದಲಾವಣೆಗೆ ಸಂಪತ್ತಿನ ಅಸಮಾನತೆಯೇ ಕಾರಣ ಹೊರತು ಜನಸಂಖ್ಯಾ ಹೆಚ್ಚಳವಲ್ಲ

ಹೀಥರ್ ಅಲ್ಬೆರೊಹೀಥರ್ ಅಲ್ಬೆರೊ9 Feb 2020 12:13 AM IST
share
ಹವಾಮಾನ ಬದಲಾವಣೆಗೆ ಸಂಪತ್ತಿನ ಅಸಮಾನತೆಯೇ ಕಾರಣ ಹೊರತು ಜನಸಂಖ್ಯಾ ಹೆಚ್ಚಳವಲ್ಲ

 ದಾವೋಸ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯ ವಾರ್ಷಿಕ ಶೃಂಗಸಭೆಯಲ್ಲಿ ಸೇರಿದ್ದ ವಿವಿಧ ದೇಶಗಳ ಸರಕಾರಗಳು ಮತ್ತು ಉದ್ಯಮ ರಂಗದ ಪ್ರತಿನಿಧಿಗಳು ಹದಗೆಡುತ್ತಿರುವ ಹವಾಮಾನ ಮತ್ತು ಪರಿಸರ ಬಿಕ್ಕಟ್ಟನ್ನು ಹೇಗೆ ಬಗೆಹರಿಸುವುದು ಎನ್ನುವುದನ್ನು ಚರ್ಚಿಸಿದ್ದರು. ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ತನ್ನ ರೌದ್ರಾವತಾರವನ್ನು ಪ್ರದರ್ಶಿಸುತ್ತಿದ್ದಾಗಲೇ ಈ ಸಭೆಯು ನಡೆದಿತ್ತು. ಈ ಕಾಡ್ಗಿಚ್ಚು ಸುಮಾರು ಒಂದು ಶತಕೋಟಿ ಪ್ರಾಣಿಗಳನ್ನು ಬಲಿ ತೆಗೆದುಕೊಂಡಿದ್ದು, ಹವಾಮಾನ ನಿರಾಶ್ರಿತರ ಹೊಸ ಅಲೆಯನ್ನೇ ಸೃಷ್ಟಿಸಿದೆ. ಆದರೂ ಮ್ಯಾಡ್ರಿಡ್‌ನಲ್ಲಿ ನಡೆದಿದ್ದ ಸಿಒಪಿ25 ಹವಾಮಾನ ಮಾತುಕತೆಗಳಲ್ಲಿ ಆಗಿದ್ದಂತೆ ದಾವೋಸ್ ಸಭೆಯಲ್ಲಿಯೂ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅವಸರ, ಆಕಾಂಕ್ಷೆ ಮತ್ತು ಒಮ್ಮತ ಅಷ್ಟಾಗಿ ಕಂಡುಬಂದಿರಲಿಲ್ಲ.

ಆದರೆ ಈ ಚರ್ಚೆಯು ಬಿಕ್ಕಟ್ಟಿಗಾಗಿ ಯಾರನ್ನು ಅಥವಾ ಏನನ್ನು ದೂರಬೇಕು ಎಂಬ ಪ್ರಮುಖ ಪ್ರಶ್ನೆಯನ್ನು ಹುಟ್ಟಿಸಿತ್ತು. ಜನಸಂಖ್ಯಾ ಬೆಳವಣಿಗೆಯು ಈ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಬೆಟ್ಟು ಮಾಡಿದ್ದ ಖ್ಯಾತ ಪ್ರಾಣಿಶಾಸ್ತ್ರಜ್ಞೆ ಡಾ.ಜೇನ್ ಗುಡ್‌ಆಲ್ ಅವರು, ವಿಶ್ವದ ಜನಸಂಖ್ಯೆಯು 500 ವರ್ಷಗಳ ಹಿಂದಿನ ಮಟ್ಟದಲ್ಲಿದ್ದಿದ್ದರೆ ಬಹಳಷ್ಟು ಪರಿಸರ ಸಮಸ್ಯೆಗಳು ಉದ್ಭವಿಸುತ್ತಲೇ ಇರಲಿಲ್ಲ ಎಂದು ಹೇಳಿದ್ದರು.

ಡಾ.ಜೇನ್ ಅವರ ಈ ಹೇಳಿಕೆಯು ತಕ್ಕಮಟ್ಟಿಗೆ ನಿರಪಾಯಕಾರಿ ಎಂದು ಕಂಡು ಬರಬಹುದು, ಆದರೆ ಇದು ಕಠೋರ ಪರಿಣಾಮಗಳನ್ನು ಹೊಂದಿರುವ ಮತ್ತು ಪ್ರಚಲಿತ ಬಿಕ್ಕಟ್ಟಿನ ಅಂತರ್ನಿಹಿತ ಕಾರಣಗಳ ತಪ್ಪುಗ್ರಹಿಕೆಯನ್ನು ಆಧರಿಸಿರುವ ವಾದವಾಗಿದೆ ಮತ್ತು ತಿರಸ್ಕಾರಯೋಗ್ಯವಾಗಿದೆ.

1968ರಲ್ಲಿ ಬಿಡುಗಡೆಗೊಂಡಿದ್ದ ಪಾಲ್ ಎರ್ಲಿಚ್ ಅವರ ‘ದಿ ಪಾಪ್ಯುಲೇಷನ್ ಬಾಂಬ್’ ಮತ್ತು 1972ರ ಡೊನೆಲ್ಲಾ ಮೀಡೋಸ್ ಅವರ ‘ದಿ ಲಿಮಿಟ್ಸ್ ಟು ಗ್ರೋಥ್’ ಕೃತಿಗಳು ಹೆಚ್ಚುತ್ತಿರುವ ಜಾಗತಿಕ ಜನಸಂಖ್ಯೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅದರ ಪರಿಣಾಮಗಳ ಕುರಿತು ಕಳವಳಗಳನ್ನು ಹುಟ್ಟು ಹಾಕಿದ್ದವು.

ಜನನ ಪ್ರಮಾಣವು ಹೆಚ್ಚುತ್ತಿದೆ ಮತ್ತು ಈ ಪೈಕಿ ಹೆಚ್ಚಿನ ಜನನಗಳು ಜನಸಂಖ್ಯಾ ಬೆಳವಣಿಗೆ ದರ ಹೆಚ್ಚತೊಡಗಿರುವ ವಿಕಾಸಶೀಲ ದೇಶಗಳಲ್ಲಿ ಆಗುತ್ತಿವೆ ಎಂಬ ವಿಷಯವು ‘ಅರ್ಥ್ ಫಸ್ಟ್’ನಂತಹ ಕಟ್ಟರ್ ಪರಿಸರ ಗುಂಪುಗಳ ಚರ್ಚೆಗಳಲ್ಲಿ ನುಸುಳಿತ್ತು. ಜನಸಂಖ್ಯಾ ಹೆಚ್ಚಳ ಅಧಿಕವಾಗಿದ್ದ ಆಫ್ರಿಕಾದಂತಹ ಪ್ರದೇಶಗಳಲ್ಲಿಯ ಹಸಿವಿನ ಹಾಹಾಕಾರದ ಕುರಿತು ಹೇಳಿಕೆಗಳಿಗಾಗಿ ಈ ಗುಂಪುಗಳಲ್ಲಿಯ ಕೆಲವು ಬಣಗಳು ಅಪಖ್ಯಾತಿಗೀಡಾಗಿದ್ದವು. ಈ ಹೇಳಿಕೆಗಳು ವಿಷಾದನೀಯವಾಗಿದ್ದರೂ ಜನಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲಕ ಪರಿಸರ ಲಾಭಗಳನ್ನೆತ್ತಬಹುದಾಗಿತ್ತು ಎನ್ನುವುದನ್ನು ಅವು ಬೆಟ್ಟು ಮಾಡಿದ್ದವು.

ವಾಸ್ತವದಲ್ಲಿ ಜಾಗತಿಕ ಜನಸಂಖ್ಯೆ ಅತಿಯಾಗಿ ಹೆಚ್ಚುತ್ತಿಲ್ಲ,ಅದರ ಬೆಳವಣಿಗೆ ನಿಧಾನಗೊಳ್ಳುತ್ತಿದೆ ಮತ್ತು 2100ರ ವೇಳೆಗೆ ಸುಮಾರು 11 ಶತಕೋಟಿಗೆ ಸ್ಥಿರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚು ಮಹತ್ವಪೂರ್ಣವಾದ ಅಂಶವೆಂದರೆ, ಜನಸಂಖ್ಯೆಯ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದು ನಮ್ಮ ಹಲವಾರು ಪರಿಸರ ಸಂಕಷ್ಟಗಳಿಗೆ ನಿಜವಾದ ಕಾರಣಗಳನ್ನು ಮರೆಮಾಚುತ್ತದೆ. ಆಧುನಿಕ ಬಂಡವಾಳವಾದವು ಸೃಷ್ಟಿಸಿರುವ ತ್ಯಾಜ್ಯ ಮತ್ತು ಅಸಮಾನತೆ ಹಾಗೂ ಅಂತ್ಯವಿಲ್ಲದ ಬೆಳವಣಿಗೆ ಮತ್ತು ಸಂಪತ್ತು ಶೇಖರಣೆಯ ಮೇಲೆ ಅದು ಗಮನವನ್ನು ಕೇಂದ್ರೀಕರಿಸಿರುವುದು ಈ ಕಾರಣಗಳಾಗಿವೆ.

ಪಳೆಯುಳಿಕೆ ಇಂಧನಗಳ ಬಳಕೆಯೊಂದಿಗೆ ಮೊದಲು ಆರ್ಥಿಕ ಬೆಳವಣಿಗೆಯೊಂದಿಗೆ ಗುರುತಿಸಿಕೊಂಡಿದ್ದ ಕೈಗಾರಿಕಾ ಕ್ರಾಂತಿಯು 18ನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಸಂಭವಿಸಿತ್ತು. ಯುದ್ಧೋತ್ತರ ಅವಧಿಯಲ್ಲಿನ, ‘ಗ್ರೇಟ್ ಎಕ್ಸಲರೇಷನ್’ ಎಂದೇ ಹೆಸರಾಗಿದ್ದ ಆರ್ಥಿಕ ಚಟುವಟಿಕೆಗಳ ವಿಸ್ಫೋಟವು ವಾಯುಮಾಲಿನ್ಯ ಹೆಚ್ಚಲು ಕಾರಣವಾಗಿತ್ತು ಮತ್ತು ಇದು ಹೆಚ್ಚಾಗಿ ಯುರೋಪ್ ಮತ್ತು ಉತ್ತರ ಅಮೆರಿಕದ ದೇಶಗಳಲ್ಲಿ ನಡೆದಿತ್ತು. ಇದೇ ಕಾರಣದಿಂದ ಮೊದಲು ಕೈಗಾರೀಕರಣಗೊಂಡಿದ್ದ ಅಮೆರಿಕ ಮತ್ತು ಬ್ರಿಟನ್‌ಗಳಂತಹ ಶ್ರೀಮಂತ ರಾಷ್ಟ್ರಗಳು ಐತಿಹಾಸಿಕ ವಾಯು ಮಾಲಿನ್ಯಗಳ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿವೆ.

 2018ರಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಹೊರಸೂಸುತ್ತಿರುವ ಉತ್ತರ ಅಮೆರಿಕ ಮತ್ತು ಚೀನಾ ಜಾಗತಿಕ ಇಂಗಾಲಾಮ್ಲ ವಾಯು ಹೊರಸೂಸುವಿಕೆಯಲ್ಲಿ ಸುಮಾರು ಶೇ.50ರಷ್ಟು ಪಾಲನ್ನು ಹೊಂದಿದ್ದವು. ವಾಸ್ತವದಲ್ಲಿ ಈ ಪ್ರದೇಶಗಳು ಕಡಿಮೆ ಆದಾಯದ ರಾಷ್ಟ್ರಗಳಿಗೆ ತುಲನಾತ್ಮಕವಾಗಿ ಎಷ್ಟೊಂದು ಅಧಿಕ ಪ್ರಮಾಣದಲ್ಲಿ ಇಂಗಾಲಾಮ್ಲ ವಾಯುವನ್ನು ಹೊರಸೂಸುತ್ತಿವೆ ಎಂದರೆ ಈ ಬಡರಾಷ್ಟ್ರಗಳ ಜನಸಂಖ್ಯೆ ಇನ್ನೂ ಮೂರರಿಂದ ನಾಲ್ಕು ಶತಕೋಟಿಗಳಷ್ಟು ಹೆಚ್ಚಾದರೂ ಅದು ವಿಶ್ವ ಇಂಗಾಲ ಹೊರಸೂಸುವಿಕೆಯ ಮೇಲೆ ಯಾವುದೇ ಪರಿಣಾಮವನ್ನು ಹೊಂದಿರುವುದಿಲ್ಲ.

ಕಾರ್ಪೊರೇಟ್ ರಂಗದ ವಿಷಮ ಪರಿಣಾಮವನ್ನೂ ನಾವು ಪರಿಗಣಿಸಬೇಕಿದೆ. ಕೈಗಾರಿಕಾ ರಂಗದ ನಾಯಕರಿಗೆ ಹವಾಮಾನ ಬದಲಾವಣೆ ವಿಜ್ಞಾನದ ಬಗ್ಗೆ 1977ರಷ್ಟು ಹಿಂದೆಯೇ ಗೊತ್ತಿದ್ದರೂ ಕೇವಲ 20 ಪಳೆಯುಳಿಕೆ ಇಂಧನ ಕಂಪೆನಿಗಳು ಇಂದಿನ ಒಟ್ಟು ಇಂಗಾಲ ಹೊರಸೂಸುವಿಕೆಯಲ್ಲಿ ಮೂರನೇ ಒಂದರಷ್ಟು ಪಾಲನ್ನು ತಮ್ಮ ಕೊಡುಗೆಯಾಗಿ ನೀಡಿವೆ.

 ಅಧಿಕಾರ, ಸಂಪತ್ತು ಮತ್ತು ಸಂಪನ್ಮೂಲಗಳ ಲಭ್ಯತೆ ಇವುಗಳಲ್ಲಿನ ಅಸಮಾನತೆಗಳು ಕೇವಲ ಸಂಖ್ಯೆಗಳಲ್ಲ, ಅವು ಪರಿಸರ ನಾಶಕ್ಕೆ ಮುಖ್ಯ ಕಾರಣಗಳಾಗಿವೆ. ಜನಸಂಖ್ಯೆಯ ಶೇ.10ರಷ್ಟಿರುವ ಅತ್ಯಂತ ಶ್ರೀಮಂತ ವರ್ಗದ ಬಳಕೆಯು ವಿಶ್ವದ ಶೇ.50ರಷ್ಟು ಬಳಕೆ ಆಧಾರಿತ ಇಂಗಾಲಾಮ್ಲ ವಾಯು ಹೊರಸೂಸುವಿಕೆಗೆ ಕಾರಣವಾಗಿದ್ದರೆ ಶೇ.50ರಷ್ಟು ಅತ್ಯಂತ ಬಡವರ್ಗದ ಪಾಲು ಕೇವಲ ಶೇ.10ರಷ್ಟಿದೆ. ವಿಶ್ವದ ಒಟ್ಟು ಸಂಪತ್ತಿನ ಅರ್ಧಕ್ಕೂ ಹೆಚ್ಚಿನ ಭಾಗವು ಈಗ ಕೇವಲ 26 ಬಿಲಿಯಾಧೀಶರ ಬಳಿಯಲ್ಲಿದೆ ಮತ್ತು ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ.

ಪರಿಸರ ಮತ್ತು ಸಾಮಾಜಿಕ ನ್ಯಾಯ ವಿಷಯಗಳನ್ನು ಪರಸ್ಪರರಿಂದ ಪ್ರತ್ಯೇಕಿಸುವಂತಿಲ್ಲ. ಹವಾಮಾನ ಬದಲಾವಣೆಗಾಗಿ ಹೆಚ್ಚಾಗಿ ಬಡರಾಷ್ಟ್ರಗಳಲ್ಲಿಯ ಜನಸಂಖ್ಯಾ ಹೆಚ್ಚಳವನ್ನು ದೂರುವುದು ಜನಾಂಗೀಯ ಹಿನ್ನಡೆಯನ್ನು ಹೆಚ್ಚಿಸುವ ಅಪಾಯವನ್ನುಂಟು ಮಾಡುತ್ತದೆ ಮತ್ತು ಪರಿಸರ ಮಾಲಿನ್ಯವನ್ನು ಮುಂದುವರಿಸುತ್ತಲೇ ಇರುವ ಶಕ್ತಿಶಾಲಿ ಕೈಗಾರಿಕಾ ರಂಗವು ತನ್ನ ಹೊಣೆಗಾರಿಕೆಯನ್ನು ಕಳಚಿಕೊಳ್ಳುವಂತೆ ಮಾಡುತ್ತದೆ. ಹವಾಮಾನ ಬದಲಾವಣೆಗೆ ತಮ್ಮ ಕೊಡುಗೆ ಕನಿಷ್ಠವಾಗಿದ್ದರೂ ಅದರಿಂದ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಗೆ ಆಫ್ರಿಕಾ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕದಲ್ಲಿಯ ವಿಕಾಸಶೀಲ ರಾಷ್ಟ್ರಗಳು ಹೆಚ್ಚಾಗಿ ಗುರಿಯಾಗುತ್ತಿರುವುದು ಒಂದು ದುರಂತವೇ ಸೈ.

ತೀವ್ರ ಅಸಮಾನತೆ, ವಿಶ್ವದ ಅತ್ಯಂತ ಶ್ರೀಮಂತ ವರ್ಗದ ಬಳಕೆ ಹಾಗೂ ಸಾಮಾಜಿಕ ಮತ್ತು ಪರಿಸರ ಹಿತಕ್ಕಿಂತ ಲಾಭಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ವ್ಯವಸ್ಥೆ ಇವು ನಿಜವಾದ ಸಮಸ್ಯೆಗಳಾಗಿವೆ ಮತ್ತು ಈ ಬಗ್ಗೆ ನಾವು ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ.

ಕೃಪೆ: conversation

share
ಹೀಥರ್ ಅಲ್ಬೆರೊ
ಹೀಥರ್ ಅಲ್ಬೆರೊ
Next Story
X