Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸುಸ್ಥಿರ ಅಡುಗೆಯ ಸ್ತ್ರೀವಾದಿ ಸಂಕಥನ

ಸುಸ್ಥಿರ ಅಡುಗೆಯ ಸ್ತ್ರೀವಾದಿ ಸಂಕಥನ

ವಾರ್ತಾಭಾರತಿವಾರ್ತಾಭಾರತಿ11 Feb 2020 12:17 AM IST
share
ಸುಸ್ಥಿರ ಅಡುಗೆಯ ಸ್ತ್ರೀವಾದಿ ಸಂಕಥನ

ಮನೆಯಲ್ಲಿ ಯಾವೊಂದೂ ಕಸ ಎಂದು ಆಚೆಗೆ ಎಸೆಯಬೇಕಾದ್ದು ಇರಲಿಲ್ಲ. ಏನೇ ಉಳಿದರೂ ಅದು ತಿಪ್ಪೆಗೆ ಸೇರಿ ಕೊಳೆತು ಗೊಬ್ಬರ ಮತ್ತೆ ಹೊಲ ಗದ್ದೆ ತೋಟ, ಮಡಿಗೆ ಸೇರಿ ಬೆಳೆಯಾಗಿ ವಾಪಸು ಬರುತ್ತಿತ್ತು. ಇದೊಂದು ಮುಗಿಯದ ಸುಸ್ಥಿರತೆಯ ಚಕ್ರವಾಗಿ ಮಾರ್ಪಟ್ಟಿತ್ತು. ಇಡೀ ಚಕ್ರ ತಿರುಗಿಸುತ್ತಿದ್ದುದು ಮನೆಯ ಹೆಣ್ಣು ಮಕ್ಕಳು. ಇದೆಲ್ಲವನ್ನೂ ಗಮನಿಸಿದ್ದು ಕಲಿತಿದ್ದು ತೋಟ/ ಮಡಿಯಿಂದ, ಮನೆಯ ಅಂಗಳದಿಂದ.. ಇದು ಎಲ್ಲ ಗಂಡುಮಕ್ಕಳಿಗೆ ಸಾಧ್ಯವಾದೆ ಬದುಕಿನ ಹೊಸ ಸಂಕಥನ ಸಾಧ್ಯ.

‘‘ಗಂಡು ಮಕ್ಕಳು ಅಡುಗೆ ಮನೆಗೆ ಬರಬಾರದು. ಹೊರಗೆ ಹೋಗು ಆಟವಾಡು’’ - ಅನ್ನುವುದು ಬಹುತೇಕ ನಮ್ಮ ಮನೆಗಳಲ್ಲಿ ಅಮ್ಮಂದಿರು, ಅಜ್ಜಿಯರು ಹೇಳುತ್ತಿದ್ದ ಮಾತು. ಆದರೆ ಇದು ಅವರ ಅಂತರಂಗದ ಮಾತು ಆಗಿರಲಿಲ್ಲ, ಇಂತಹ ಮಾತುಗಳ ಹಿಂದೆ ಮನೆಯ, ಸಮಾಜದ ಗಂಡಸರ ಒತ್ತಡಗಳಿದ್ದುವು. ಗಂಡು ಮಾಡುವ ಕೆಲಸಗಳು ಇವು, ಹೆಣ್ಣು ಮಾಡುವ ಕೆಲಸಗಳು ಇವು ಎಂಬ ವರ್ಗೀಕರಣ ಈ ನಡೆಗಳನ್ನು ನಿರ್ದೇಶಿಸುತ್ತಿದ್ದವು. ಅಸಲಿಗೆ ಗಂಡು ಅಹಂ ನಡೆಗೆ ನಮ್ಮನ್ನು ದೂಡುತ್ತಿದ್ದವು. ಆದರೆ ಅಡುಗೆಯನ್ನು ವೃತ್ತಿಯಾಗಿಸಿಕೊಂಡು ಹೊರಗೆ ಕೆಲಸ ಮಾಡುವ ಗಂಡಸರಿದ್ದರೂ ವೈಯಕ್ತಿಕವಾಗಿ ಮನೆಯ ಒಳಗೆ ಅವರ ಆಲೋಚನೆಗಳು ಕೂಡ ಕರ್ಮಠವಾಗಿದ್ದವು. ಈಗಲೂ ಅಂತಹ ಮಹತ್ತರವಾದ ಬದಲಾವಣೆಗಳು ಈ ವಿಚಾರಗಳಲ್ಲಿ ಸಾಧ್ಯವಾಗಿಲ್ಲ. ಆದಾಗ್ಯೂ ಕಲೆಯ ಆಸಕ್ತಿಗೆ ಗಂಡು -ಹೆಣ್ಣು ಎಂಬ ಲಿಂಗಭೇದವಿಲ್ಲ. ಅದರದ್ದು ಸೃಷ್ಟಿಸಮಾನದ ನೋಟ. ಹಾಗಾಗಿಯೇ ಅಡುಗೆಯ ಆಸಕ್ತಿಯಲ್ಲಿರುವ ಹುಡುಗರು ಮಾಡಿದ ಅಡುಗೆಯ ಕೈ ರುಚಿಯು ನಮ್ಮ ನೆತ್ತಿಗೇರುವುದು. ಒಂದು ಸಮ್ಮೋಹನವನ್ನುಂಟು ಮಾಡುವುದು. ಆದರೆ ಗಮನಿಸಿ ಈ ಸಮ್ಮೋಹನದ ಹಿಂದೆ ಒಂದು ಸ್ತ್ರೀವಾದಿ ಸಂಕಥನವಿದೆ. ಅದೊಂದು ರೂಪಕಗಳ ನಡುವೆ ಮುಚ್ಚಿಕೊಂಡು ಕೂತಿದೆ. ನಾವು ಬಿಡಿಸಿ ನೋಡಬೇಕು. ಇಷ್ಟೆಲ್ಲಾ ಮಾತಾಡುವ ನಾನು ಈ ಅಡುಗೆಯೆಂಬ ಕಲೆಯ ಬಲೆಗೆ ಮಾರು ಹೋದದ್ದನ್ನು ಪ್ರಾಸಂಗಿಕವಾಗಿ ಹೇಳಬೇಕೆಂದು ಬಯಸುವೆ. ಇದು ಬಹುತೇಕ 90 ದಶಕದ ಗ್ರಾಮೀಣ ಮಕ್ಕಳ ಅನುಭವ.. ಅದನ್ನ ತೀವ್ರವಾಗಿ ಅನುಭವಿಸಿದ್ದರೆ ಅದೊಂದು ಮಹತ್ತರ ಕಲೆಯಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ.

 ನಾನು ಹುಟ್ಟಿ ಬೆಳೆದುದು ಕೊಡವತ್ತಿ ಎಂಬ ಕುಗ್ರಾಮದಲ್ಲಿ. ಆ ಊರಿಗೆ ನೆಟ್ಟಗೆ ಒಂದು ಬಸ್ಸು ಕೂಡ ಬರುತ್ತಿರಲಿಲ್ಲ. ಮೂವತ್ತು ವರುಷಗಳ ಹಿಂದೆ ಮನೆಯ ಗಂಡಸರೆಲ್ಲಾ ಗದ್ದೆ ಹೊಲದ ಕಡೆಗೆ ಕೆಲಸಕ್ಕೆ ಹೊರಟರೆ ಅವರ ಹಿಂದೆಯೆ ಹೆಂಗಸರು ಕುರಿ, ಎಮ್ಮೆಗಳನ್ನು ಅಟ್ಟಿಕೊಂಡು ತಿಟ್ಟುತೆವರು, ಹೊಲ-ಮಡಿಗಳ ಬಳಿಗೆ ಸೇರಿಬಿಡುತ್ತಿದ್ದರು. ಊರಿಗೆ ಊರೇ ಬಿಕೋ ಎನಿಸುವಷ್ಟು ಖಾಲಿ ಇರುತ್ತಿತ್ತು. ಸುಮಾರು ಜನಕ್ಕೆ ಮಧ್ಯಾಹ್ನ ಊಟದ ಅಭ್ಯಾಸವೇ ಇದ್ದಿರಲಿಲ್ಲ. ಕೆಲವರು ಮಾತ್ರ ಬುತ್ತಿ ತಂದಿರುತ್ತಿದ್ದರು. ನೀರಿಗಾಗಿ ಹತ್ತಿರದ ಬಾವಿಗಳ ಪರಿಚಯವಿರುತ್ತಿತ್ತು. ಈಗಿನಂತೆ ಬಾಟಲಿಗಳ ಕಾಟ ಆಗ ಇರಲಿಲ್ಲ. ಮನೆಗೆಲಸ ಮುಗಿಸಿ ಹನ್ನೆರಡಕ್ಕೆಲ್ಲಾ ಅಜ್ಜಿ, ಅತ್ತೆ, ಚಿಕ್ಕಮ್ಮಂದಿರು ಗದ್ದೆಯ ಬಳಿಗೆ ಊಟ ಹೊತ್ತು ಸಾಗುತ್ತಿದ್ದರು.. ರಾಗಿ ಮುದ್ದೆ, ಸೊಪ್ಪುಅಥವಾ ತರಕಾರಿ ಸಾರು, ಅಕ್ಕಿಯ ಹಪ್ಪಳ, ಮಜ್ಜಿಗೆ, ಅನ್ನ ಇವು ಕಡ್ಡಾಯದ ಪದಾರ್ಥಗಳು. ಮಾಂಸ ಮಾಡುವುದು ಬಹಳ ದುಬಾರಿ ಮತ್ತು ವಿಶೇಷದ ದಿನಗಳಲ್ಲಿ ಮಾತ್ರ. ಒಂದು ತಾಮ್ರದ ಕೊಡದಲ್ಲಿ ಕುಡಿಯುವ ನೀರು ಹೊತ್ತು ನಡೆದರೆ ಹಿಂದೆ ಕುರಿ, ಆಡು, ಎಮ್ಮೆಗಳೂ ಕೂಡ ಬರುತ್ತಿದ್ದವು. ಗದ್ದೆ ತಲುಪುವುದರೊಳಗೆ ಎಲ್ಲರೂ ಅವರವರ ಕೆಲಸಕ್ಕೆ ಕವಲಾಗಿಬಿಡುತ್ತಿದ್ದರು. ಊಟ ಬಡಿಸಿಕೊಡುವವರು ಒಬ್ಬರು, ಎತ್ತು-ಎಮ್ಮೆಗಳಿಗೆ ಹುಲ್ಲು ಕೊಯ್ದು ಕಟ್ಟುವವರು ಒಬ್ಬರು, ನಾಳೆಗೆ ಬೇಕಾದ ತರಕಾರಿ ಸೊಪ್ಪುಬಿಡಿಸುವವರು ಒಬ್ಬರು. ಮತ್ತೆ ಸಂಜೆ ನಾಲ್ಕರ ವೇಳೆಗೆ ಮನೆಗೆ ಮರಳಬೇಕಾಗಿತ್ತು. ಆ ವೇಳೆಗೆ ಎಮ್ಮೆ, ಹಸುಗಳಲ್ಲಿ ಹಾಲು ಕರೆಯುತ್ತಿದ್ದರು. ಇನ್ನು ಸಂಜೆಯ ಮನೆಗೆಲಸ, ಅಡುಗೆ, ಊಟ, ಕೊಟ್ಟಿಗೆ ಕೆಲಸ ಮುಗಿಸಿ ಎಂಟು ಒಂಬತ್ತು ಗಂಟೆಗೆಲ್ಲಾ ಮನೆಯಷ್ಟೇ ಅಲ್ಲ ಇಡೀ ಹಳ್ಳಿಯೇ ಮಲಗಿಬಿಡ್ತಿತ್ತು. ಟಿ.ವಿ. ಒಂದೆರಡು ಮನೆಯಲ್ಲಿದ್ದರೂ ಅವು ಈ ವೇಳೆಗೆ ಸ್ತಬ್ಧವಾಗಿರುತ್ತಿದ್ದವು.

ಈ ಬದುಕಿನಲ್ಲಿ ಅಡಗಿದ್ದ ಅಡುಗೆಯ ಸ್ತ್ರೀವಾದಿ ಸಂಕಥನಗಳು ಅಂದರೆ ಮಡಿ/ಹಿತ್ತಲು ಮತ್ತು ಮನೆ

 ತೆಂಗಿನ, ಹಣ್ಣಿನ ತೋಟ-ಗದ್ದೆಗಳಲ್ಲದೇ ದಕ್ಷಿಣ ಕರ್ನಾಟಕದ ಹಳ್ಳಿಗಳಲ್ಲಿ ‘ಮಡಿ’ ಎಂದ ಸಣ್ಣ ಸಣ್ಣ ಸೊಪ್ಪು, ತರಕಾರಿ ತೋಟಗಳು ಬಹುತೇಕ ಮನೆಗಳ ಹಿತ್ತಲು, ಕೆರೆ, ಹೊಳೆ ಬದಿಯಲ್ಲಿ ಇರುತ್ತವೆ. ಇಂತಹ ಮಡಿಯಲ್ಲಿ ಮನೆಗೆ ಬೇಕಾದ ಈರುಳ್ಳಿ, ಬೆಳ್ಳುಳ್ಳಿ, ಕುಂಬಳ, ಮೆಣಸಿನಕಾಯಿ, ಬದನೆಕಾಯಿ, ಮೂಲಂಗಿ, ಟೊಮ್ಯಾಟೊ, ಹೀರೆಕಾಯಿ, ಸೋರೆಕಾಯಿ, ಕೀರೆ ಸೊಪ್ಪು, ದಂಟಿನಸೊಪ್ಪು, ಸಬ್ಬಸಿಗೆ ಮುಂತಾದವನ್ನು ಕಡ್ಡಾಯವಾಗಿ ಋತುಮಾನಕ್ಕೆ ತಕ್ಕಾಗಿ ಬೆಳೆಯುವುದನ್ನು ಅಜ್ಜಿ ರೂಢಿಸಿಕೊಂಡಿದ್ದಳು. ಅದನ್ನು ನನಗೂ ಆಗಾಗ ಹೇಳುತ್ತಿದ್ದಳು. ಯಾವ ಯಾವ ಕಾಲಕ್ಕೆ ಬಿತ್ತನೆ ಮಾಡಬೇಕು, ಯಾವಾಗ ತರಕಾರಿ, ಹಣ್ಣು ಕೀಳಬೇಕು, ಆಮೇಲೆ ಅವುಗಳಲ್ಲಿ ಯಾವ ಹಣ್ಣನ್ನು ಬೀಜಕ್ಕಾಗಿ ಬಿಡಬೇಕು, ಅದನ್ನು ಬಟ್ಟೆ ಕಟ್ಟಿ ಸಂರಕ್ಷಿಸಬೇಕು ಅಂತ ಕೂಡ. ಗಿಡಗಳಿಗೆ ಹುಳ ಬಿದ್ದರೆ ಒಲೆಯ ಬೂದಿ ಎರಚುವುದು, ಕೊಟ್ಟಿಗೆ ಗಂಜಲ ಚೆಲ್ಲುವುದು ಮಾಡುತ್ತಿದ್ದಳು. ಈರುಳ್ಳಿ ಬೆಳ್ಳುಳ್ಳಿ ಬೆಳೆದು ಕೀಳುವಾಗ ಪೈರು ಸಮೇತ ಕಿತ್ತು ಗಂಟು ಹಾಕಿ ಮನೆಯ ಮುಂದಿನ ಜಂತಿಗೆ ನೇತು ಹಾಕುವುದು, ತೋಟದಲ್ಲಿ ಮಾವು ಬಿಟ್ಟಾಗ ಹುಳಿ ಕಾಯಿ ತಂದು ಕತ್ತರಿಸಿ ಉಪ್ಪಿನಲ್ಲಿ ನೆನೆಸಿ ಮತ್ತೆ ಒಣಗಿಸಿ ನಂತರ ಒಗ್ಗರಣೆ ಕೊಟ್ಟು ಉಪ್ಪಿನಕಾಯಿ ಹಾಕುವುದು, ಎಳೆಯ ರಾಗಿ ತೆನೆ ತಂದು ಒಲೆಯಲ್ಲಿ ಸುಟ್ಟು ಸಕ್ಕರೆ ಬೆರೆಸಿ ಮಕ್ಕಳಿಗೆ ಕೊಡುವುದು. ಇದೆಲ್ಲಾ ಅಜ್ಜಿಯು ತನ್ನಷ್ಟಕ್ಕೆ ಮಾಡುತ್ತಾ ಇರುತ್ತಿದ್ದಳು. ನಾನು ಹೆಚ್ಚಿಗೆ ಗಮನ ಕೊಡುವುದು ಅರಿವಿಗೆ ಬಂದಾಗ ಅದೇನು, ಅದನ್ನು ಏನ್ ಮಾಡ್ತಾ ಇದ್ದೀನಿ, ಯಾಕ್ ಮಾಡ್ತಾ ಇದ್ದೀನಿ ಅನ್ನೋದನ್ನು ವಿವರಿಸುತ್ತಾ ಇದ್ದಳು. ನನ್ನ ಕೈ ಗುಣ ಚೆನ್ನಾಗಿದೆ ಎಂದು ನಂಬಿದ್ದ ಆಕೆ ನಾನು ಮಡಿಗೆ ಹೋದಾಗೆಲ್ಲಾ ಹೊಸ ಹೊಸ ಗಿಡಗಳನ್ನು, ಬೀಜಗಳನ್ನು ನೆಡಿಸುತ್ತಾ ಇದ್ದಳು. ಎಳೆಯಬೆಂಡೆ, ಟೊಮ್ಯಾಟೊಗಳನ್ನು ತೊಳೆದು ತಿನ್ನಲು ಕೊಡುತ್ತಿದ್ದಳು. ಈ ಮಡಿಯ ಲೋಕ ಎಷ್ಟು ಪ್ರಭಾವಿಸಿಬಿಟ್ಟಿತು ಅಂದರೆ ತರಕಾರಿ, ಹಣ್ಣು, ಸೊಪ್ಪು ಬೆಳೆಯುವುದು, ಅಕ್ಕ ನೀರು-ಗೊಬ್ಬರ ಹಾಕುವುದಷ್ಟೇ ಅಲ್ಲ, ಅವುಗಳ ಬೀಜಗಳನ್ನು ಸಂಗ್ರಹಿಸಿ ಮುಂದೆ ಮತ್ತೆ ಬಿತ್ತನೆ ಮಾಡುವ ಆಲೋಚನೆಗಳು ವೇದಾಕ್ಯದಂತೆ ತಲೆಯಲ್ಲಿ ಉಳಿದುಬಿಟ್ಟವು.

ಮನೆ, ಅಂಗಳ, ಕೊಟ್ಟಿಗೆಗಳು ಗ್ರಾಮೀಣ ಬದುಕಿನ ಮತ್ತೊಂದು ಮಗ್ಗಲು. ಹೆಣ್ಣುಮಕ್ಕಳು ಹೊರಗೆ ಬಿಸಿಲು ಮಳೆಗಳಲ್ಲಿ ದುಡಿದು ವಾಪಸು ಇಲ್ಲಿಗೆ ಬಂದು ಮತ್ತೆ ದುಡಿಯಲು ಆರಂಭಿಸಬೇಕು. ಬೆಳಗ್ಗೆ ಹಾಲು ಕರೆದು ಇಡೀ ಮನೆ ಓರಣ ಮಾಡಿ ಅಡುಗೆ ಮುಗಿಸಿ.. ಮಧ್ಯಾಹ್ನದ ವೇಳೆಗೆ ಹೊಲಕ್ಕೆ ಊಟ ಹೊತ್ತು ಅಥವಾ ಬೆಳಗ್ಗೆಯೇ ಕೂಲಿಗೆ ಹೊರಟು ಮತ್ತೆ ಸಂಜೆ ಮನೆಗೆ ದಾಪುಗಾಲಿಟ್ಟು ಬಂದು ಎಮ್ಮೆ, ಹಸು, ಕರು ನೋಡಿಕೊಂಡು ಸಂಜೆಗೆ ಅಡುಗೆಗೆ ಒಲೆ ಹಚ್ಚಬೇಕಿತ್ತು. ಎಷ್ಟೋ ಸಲ ಬಡತನದ ಕಾರಣಗಳು ಒಲೆಯನ್ನೇ ಹಚ್ಚಲು ಬಿಡುತ್ತಿರಲಿಲ್ಲ. ಆವಾಗ ಗಂಜಿಗೋ, ತಂಗಳು ರಾಗಿಮುದ್ದೆಗೋ, ಅನ್ನಕ್ಕೋ ಉಪ್ಪುಹುಳಿ ಕಲಸುತ್ತಿದ್ದರು. (ಉಪ್ಪು, ನೀರು, ಮೆಣಸಿನಕಾಯಿ ಬೆಳ್ಳುಳ್ಳಿ, ಹುಣಸೇ ಹಣ್ಣು ಹಾಕಿ ಚೆನ್ನಾಗಿ ಚಿವುಚಿದ ರಸ) ಮುದ್ದೆಯ ಮಡಕೆಯ ಸೀಕಲು ನಮಗೆ ಸಿಗುತ್ತಿದ್ದ ಅವತ್ತಿನ ತಿಂಡಿ. ಈ ಅಂಗಳವೇ ಅಕ್ಕಿ ನೆನೆಸುವುದು, ಕುಟ್ಟುವುದು, ಪುಡಿಮಾಡುವುದು ಅದರಿಂದ ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ ಮಾಡುವುದು, ಅಕ್ಕಿತರಿಯ ಉಪ್ಪಿಟ್ಟು ಮಾಡುವುದು. ಉಪ್ಪಿನಕಾಯಿ ಹಾಕುವುದು, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವುದು, ತರಕಾರಿಗಳನ್ನು ಕತ್ತರಿಸುವುದು, ತೆಂಗಿನ ಕಾಯಿ ತುರಿಯುವುದು, ಹಣ್ಣುಗಳನ್ನು ಬಿಡಿಸುವುದು, ಹೂಗಳನ್ನು ಕಟ್ಟುವುದನ್ನು ಕಲಿಸುತ್ತಿತ್ತು.. ಆದರೆ ಕಲಿತವರು ಮಾತ್ರ ಬಹಳ ಕಡಿಮೆ ಮಂದಿ. ಬಹುತೇಕ ಇವೆಲ್ಲಾ ಪಾಠ ನಮಗಲ್ಲ ಎಂದು ಬೆನ್ನು ತೋರಿ ಮತ್ತೆಲ್ಲೋ ಮುಳುಗಿರುತ್ತಿದ್ದರು. ಅಂಗಳ, ಕೊಟ್ಟಿಗೆಯ ಪ್ರವೇಶದ ಜಾಗವಂತೂ ಒಂದು ಕಡೆ ದನಗಳಿಗೆ ಮೇವು ನೀರು ಸುರಿವ ‘ಕಲಗಚ್ಚು’ ಇನ್ನೊಂದೆಡೆ ಸ್ನಾನಕ್ಕೆ ನೀರು ಕಾಯಿಸುವ ಹಂಡೆ, ಮತ್ತೊಂದಡೆ ವಿಶಾಲವಾದ ತೆರೆದ ಬಚ್ಚಲು ಮನೆ. ಇಲ್ಲಿಯೇ ಕೂತು ಮೀನುಗಳನ್ನು ಸ್ವಚ್ಚ ಮಾಡುವುದು, ಕೋಳಿಯನ್ನು ಕತ್ತರಿಸಿ ಪುಕ್ಕಗಳನ್ನು ತೆಗೆದು ಬೆಂಕಿಯಲ್ಲಿ ಸುಟ್ಟು ಹದವಾಗಿ ಕತ್ತರಿಸುವುದು ಅವಕ್ಕೆ ಉಪ್ಪುಅರಿಸಿನ ಹಾಕಿನೆನೆಸುವುದು. ದೊಡ್ಡ ಹಬ್ಬಗಳಲ್ಲಿ ಕುರಿ ಕುಯ್ದುದ ಚರ್ಮ ಸುಲಿಯುವುದು, ಅಂಗಾಂಗಗಳನ್ನು ಅಡುಗೆಗೆ ಬೇಯಿಸಲು, ಜನರಿಗೆ ಬಡಿಸಲು ಸರಾಗ ಆಗುವಂತೆ ಕತ್ತರಿಸುವುದು ಇತ್ಯಾದಿ ಪಾಠಗಳು ನಡೆಯುತ್ತಲೇ ಇರುತ್ತಿದ್ದವು. ಬಟ್ಟಲನ್ನೋ ಚೂರಿಯನ್ನೋ ಅಥವಾ ಕೈ ಒರೆಸಲು ಬಟ್ಟೆಯನ್ನೋ ಹಿಡಿದು ನಿಲ್ಲುತ್ತಿದ್ದ ನನಗೆ ಇವೆಲ್ಲಾ ಆಸಕ್ತಿಯ ಕಲಿಕೆಗಳು. ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕತ್ತರಿಸುತ್ತಿದ್ದ ಅಪ್ಪನನ್ನು ಬಿಟ್ಟು ವಿಂಗಡಿಸುತ್ತಿದ್ದ ಅಮ್ಮ ಅಥವಾ ಅಜ್ಜಿಯನ್ನು ಇದೇನು ಇದೇನು ಎಂದು ತಲೆ ತಿನ್ನುತ್ತಿದ್ದೆ. ಅಡುಗೆ ಒಗ್ಗರಣೆ ಆದ ಮೇಲೆ ನೀರು ಬಂದ ಮೇಲೆ ಮಾಂಸದ ತುಂಡುಗಳನ್ನು ಅಜ್ಜಿ ತಿನ್ನಲು ಕೊಡುತ್ತಿದ್ದಳು. ಅದೇ ಮೊದಲ ಅಡುಗೆ ರುಚಿಯ ಪಾಠ. ಯಾವುದಕ್ಕೆ ಹುಳಿ ಸೇರಿಸಬೇಕು, ಯಾವುದಕ್ಕೆ ಮಸಾಲೆ ಎಷ್ಟಿರಬೇಕು, ಖಾರ ಪ್ರಮಾಣ, ಉಪ್ಪಿನ ರುಚಿ, ನೀರಿನ ಪ್ರಮಾಣ.. ಒಲೆಯ ಉರಿ ಎಷ್ಟಿರಬೇಕು ಇತ್ಯಾದಿಗಳು ಮಾತಿನ ನಡುವೆ ಯಥೇಚ್ಛವಾದ ಸಂಭಾಷಣೆಗಳಲ್ಲಿ, ಜಗಳಗಳಲ್ಲಿ ಜಾಹೀರಾಗುತ್ತಿದ್ದವು.

ಈ ಸುಸ್ಥಿರದ ಬಳಕೆಗಳು ಬರೀಯ ಊಟಕ್ಕೆ ಸೀಮಿತವಾಗಿರಲಿಲ್ಲ. ಸೀಗೆಕಾಯಿ ಬಿಡಿಸಿ ತಂದು ಒಣಗಿಸಿ ನಂತರ ಮಿಲ್ ಮಾಡಿಸಿ ಸ್ನಾನಕ್ಕೆ ಬಳಸುತ್ತಿದ್ದೆವು, ಹೊಲದಲ್ಲಿ ಉದುರುತ್ತಿದ್ದ ಹೊಂಗೆ ಕಾಯಿಗಳ ಒಡೆದು ಬೀಜ ಸಂಗ್ರಹಿಸಿ ‘ಹೊಂಗೆ ಎಣ್ಣೆ’ ತಂದು ಮನೆಯಲ್ಲಿ ದೀಪ ಹಚ್ಚಲು ಬಳಸುತ್ತಿದ್ದವು. ಮನೆಯಲ್ಲಿ ಯಾವೊಂದೂ ಕಸ ಎಂದು ಆಚೆಗೆ ಎಸೆಯಬೇಕಾದ್ದು ಇರಲಿಲ್ಲ. ಏನೇ ಉಳಿದರೂ ಅದು ತಿಪ್ಪೆಗೆ ಸೇರಿ ಕೊಳೆತು ಗೊಬ್ಬರ ಮತ್ತೆ ಹೊಲ ಗದ್ದೆ ತೋಟ, ಮಡಿಗೆ ಸೇರಿ ಬೆಳೆಯಾಗಿ ವಾಪಸು ಬರುತ್ತಿತ್ತು. ಇದೊಂದು ಮುಗಿಯದ ಸುಸ್ಥಿರತೆಯ ಚಕ್ರವಾಗಿ ಮಾರ್ಪಟ್ಟಿತ್ತು. ಇಡೀ ಚಕ್ರ ತಿರುಗುತ್ತಿದ್ದುದು ಮನೆಯ ಹೆಣ್ಣು ಮಕ್ಕಳು. ಇದೆಲ್ಲವನ್ನೂ ಗಮನಿಸಿದ್ದು ಕಲಿತಿದ್ದು ತೋಟ/ ಮಡಿಯಿಂದ, ಮನೆಯ ಅಂಗಳದಿಂದ.. ಇದು ಎಲ್ಲ ಗಂಡುಮಕ್ಕಳಿಗೆ ಸಾಧ್ಯವಾದರೆ ಬದುಕಿನ ಹೊಸ ಸಂಕಥನ ಸಾಧ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X