Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ವಿಜ್ಞಾಲೋಕಕ್ಕೆ ಸವಾಲಾಗಿರುವ ಡಾರ್ಕ್...

ವಿಜ್ಞಾಲೋಕಕ್ಕೆ ಸವಾಲಾಗಿರುವ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿಗಳು

ಸದಾನಂದ ಆರ್.ಸದಾನಂದ ಆರ್.9 March 2020 12:14 AM IST
share
ವಿಜ್ಞಾಲೋಕಕ್ಕೆ ಸವಾಲಾಗಿರುವ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿಗಳು

ಡಾರ್ಕ್ ಮ್ಯಾಟರ್ ಮತ್ತು ಎನರ್ಜಿಯ ಕುರಿತು ಚರ್ಚಿಸುತ್ತಿರುವ ವಿಜ್ಞಾನಿಗಳಿಗೆ ಇದುವರೆಗೆ ಭೌತಶಾಸ್ತ್ರ ಹೇಳಿರುವ ಮತ್ತು ನಂಬಿರುವ ಸತ್ಯಗಳು ತಪ್ಪಾಗಿರಬಹುದೇ ಎನ್ನುವ ಸಂಶಯ ಮೂಡಿದೆ. ವಿಶ್ವದ ಶೇ.96 ರಷ್ಟು ಭಾಗ ಇರುವುದನ್ನು ನೇರವಾಗಿ ಗುರುತಿಸಲು ಆಗುತ್ತಿಲ್ಲವೆಂದರೆ, ಚಿಂತನೆಯ ಕ್ರಮದಲ್ಲೇ ತಪ್ಪಿದೆ ಎಂದರ್ಥವಾಗುತ್ತದೆ. ನ್ಯೂಟನ್ ಹೊಸ ಚಿಂತನೆಯನ್ನು ನೀಡಿದ ಮೇಲೆಯೇ ಅರಿಸ್ಟಾಟಲ್ ಚಿಂತನೆಯಲ್ಲಿರುವ ದೋಷಗಳು ಅರಿವಾಗಿದ್ದು. ನ್ಯೂಟನ್, ಐನ್‌ಸ್ಟೀನ್, ಫ್ಯಾರಡೆ ಇವರೆಲ್ಲಾ ತಪ್ಪಿರಲು ಸಾಧ್ಯವಿದೆ; ಇಲ್ಲದಿದ್ದರೆ ಇವರು ತೋರಿದ ಚಿಂತನಾಕ್ರಮದ ಸಹಾಯದೊಂದಿಗೆ ಶೇ.96ರಷ್ಟು ವಿಶ್ವವನ್ನು ಆಕ್ರಮಿಸಿರುವ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿ ನಮಗೆ ಅರ್ಥವಾಗಬೇಕಿತ್ತು. ಅರ್ಥವಾಗುತ್ತಿಲ್ಲವೆಂದರೆ...

ತತ್ವಜ್ಞಾನಿ ಅರಿಸ್ಟಾಟಲ್ ಹೀಗೊಂದು ಪ್ರಶ್ನೆಯನ್ನು ಕೇಳಿಕೊಂಡಿದ್ದ: ಮೇಲಕ್ಕೆ ಎಸೆದ ವಸ್ತುಗಳು ಮತ್ತೆ ಕೆಳಕ್ಕೆ ಏಕೆ ಬೀಳುತ್ತವೆ? ಈ ಪ್ರಶ್ನೆಗೆ ಆತನ ಉತ್ತರ ಹೀಗಿತ್ತು: ಈ ಎಲ್ಲಾ ವಸ್ತುಗಳಿಗೂ ಭೂಮಿಯ ಮೇಲೆ ಅಪಾರ ಪ್ರೀತಿ ಇರುವುದರಿಂದ, ಅವುಗಳಿಗೆ ಮತ್ತೆ ಭೂಮಿಯೊಂದಿಗೆ ಒಂದಾಗುವ ತುಡಿತ ಇರುತ್ತದೆ. ಹಾಗಾಗಿ ಅವು ಎಷ್ಟೇ ಮೇಲೆ ಎಸೆದರೂ ಪುನಃ ಕೆಳಗೆ ಬೀಳುತ್ತವೆ. ಆತನ ಇನ್ನೊಂದು ಪ್ರಶ್ನೆ ವಸ್ತುಗಳು ತಮ್ಮ ಚಲನೆಯನ್ನು ನಿಲ್ಲಿಸುವುದು ಏಕೆ? ಎಂದಾಗಿತ್ತು. ಇದಕ್ಕೆ ಅವನ ಉತ್ತರ: ಅವುಗಳಿಗೆ ಸುಸ್ತಾದಾಗ ನಿಂತು ಬಿಡುತ್ತವೆ. ಅರೆ! ಇದೇನಿದು? ಇವು ಎಂತಹ ಉತ್ತರಗಳು ಎಂದಿರಾ? ಸುಮಾರು ಎರಡು ಸಾವಿರ ವರ್ಷದವರೆಗೆ ಈ ಉತ್ತರಗಳನ್ನು ಸರಿಯೆಂದೇ ಸ್ವೀಕರಿಸಲಾಗಿತ್ತು! ನಾನೂರು ವರ್ಷಗಳ ಹಿಂದೆ ಮತ್ತೋರ್ವ ವಿಜ್ಞಾನಿ ನ್ಯೂಟನ್ ಈ ಉತ್ತರಗಳು ಸರಿಯಿಲ್ಲವೆಂದು ಸಾಬೀತುಪಡಿಸಿ ಹೊಸದೊಂದು ಸಿದ್ಧಾಂತವನ್ನು ಮಂಡಿಸಿದ. ತಮ್ಮ ಅಕ್ಷದ ಮೇಲೆ ತಾವೇ ಚಲಿಸುವ ವಸ್ತುಗಳಿಗೆ ಗುರುತ್ವಾಕರ್ಷಣೆ ಬಲ ಇರುತ್ತದೆ. ಭೂಮಿಯೂ ಹೀಗೆ ಚಲಿಸುವುದರಿಂದ, ಅದು ಗುರುತ್ವಾಕರ್ಷಣ ಬಲವನ್ನು ಹೊಂದಿದೆ, ಹಾಗಾಗಿ ಮೇಲೆ ಎಸೆಯಲ್ಪಟ್ಟ ವಸ್ತುಗಳು ಭೂಮಿಯತ್ತಲೇ ಬೀಳುತ್ತವೆಂದು ಪ್ರತಿಪಾದಿಸಿ, ಅರಿಸ್ಟಾಟಲ್‌ನ ಗ್ರಹಿಕೆ ತಪ್ಪು ಎನ್ನುವುದನ್ನು ಆಧಾರಸಹಿತ ಈತ ಸ್ಪಷ್ಟಪಡಿಸಿದ್ದ.

ಮತ್ತೆ ಇಂತಹದೊಂದು ಸ್ಥಿತಿಯನ್ನು ಕಲ್ಪಿಸಿಕೊಳ್ಳಿರಿ. ಈಗ ಚಾಲ್ತಿಯಲ್ಲಿರುವ ಭೌತಶಾಸ್ತ್ರದ ಪರಿಕಲ್ಪನೆಗಳು ತಪ್ಪಾಗಿದ್ದರೆ? ನಾವು ನೀವು ಶಾಲೆಗಳಲ್ಲಿ ಕಲಿಸುತ್ತಿರುವ ಕಲಿಯುತ್ತಿರುವ ಭೌತಶಾಸ್ತ್ರದ ಪಠ್ಯಪುಸ್ತಕಗಳು ಹೇಳುವುದೆಲ್ಲಾ ಸುಳ್ಳೆಂದು ಸಾಬೀತಾದರೆ? ಖಂಡಿತ ಸಾಧ್ಯವಿಲ್ಲ. ಇದು ಅರಿಸ್ಟಾಟಲ್‌ನ ಯುಗ ಅಲ್ಲ. 21ನೇ ಶತಮಾನದಲ್ಲಿ ಇಂತಹ ಪರಿಸ್ಥಿತಿ ಇಲ್ಲ ಎಂದಿರಾ? ವಿಜ್ಞಾನ ಸಾಕಷ್ಟು ಬೆಳೆದಿದೆ. ಸಾಕಷ್ಟು ಪ್ರಯೋಗಗಳು ಆಗಿವೆ. ವಿಜ್ಞಾನಿಗಳು ಶ್ರಮಿಸಿದ್ದಾರೆ. ಕೇವಲ ಭೂಮಿಯ ಮೇಲೆ ನಿಂತು ಅಧ್ಯಯನ ಮಾಡದೆ, ಆಕಾಶಕ್ಕೂ ಏರಿ, ಮಂಗಳ ಗ್ರಹದ ಮೇಲೆ ಇಳಿದು, ಸೂರ್ಯನ ಸಮೀಪಕ್ಕೂ ಹೋಗಿ ಪ್ರಯೋಗಗಳನ್ನು ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ಭೌತಶಾಸ್ತ್ರದ ಸಿದ್ಧಾಂತಗಳು ಮತ್ತು ಪರಿಕಲ್ಪನೆಗಳು ಸತ್ಯವನ್ನು ಹೇಳುತ್ತಿವೆ ಎಂದು ನಿಮಗೆ ಅನ್ನಿಸುವುದು ಸರಿಯಾಗಿಯೇ ಇದೆ. ಆದರೆ, ಇದುವರೆಗೆ ಭೌತಶಾಸ್ತ್ರ ನಂಬಿಕೊಂಡು ಬಂದಿದ್ದ ಬಹುತೇಕ ವಿಚಾರಗಳೀಗ ತೀವ್ರ ಸಂಶಯಕ್ಕೆ ಒಳಗಾಗುತ್ತಿವೆ. ಕೆಲವು ವಿಶ್ವಾಸಕ್ಕೆ ಅರ್ಹವೇ ಅಲ್ಲ ಎಂದಾಗಿವೆ!

ಇಂತಹ ನಿಲುವಿಗೆ ಕಾರಣ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿ ಎಂಬ ಎರಡು ಪರಿಕಲ್ಪನೆಗಳು. ಇತ್ತೀಚಿನ ಸಂಶೋಧನೆಗಳ ಪ್ರಕಾರ, ವಿಶ್ವದ ಶೇ.73ರಷ್ಟು ಅಂಶ ಡಾರ್ಕ್‌ಮ್ಯಾಟರ್‌ನಿಂದ ಕೂಡಿದೆ; ಮತ್ತು ವಿಶ್ವದ ಶೇ.23 ಭಾಗ ಡಾರ್ಕ್ ಎನರ್ಜಿಯಿಂದ ಕೂಡಿದೆ. ನಕ್ಷತ್ರಗಳನ್ನು ರೂಪಿಸಿರುವ ಹೈಡ್ರೋಜನ್ ಮತ್ತು ಹೀಲಿಯಂನಂತಹ ವಸ್ತುಗಳು ವಿಶ್ವದ ಶೇ.4 ಮಾತ್ರ ಆಗಿರುತ್ತವೆ. ಮನುಷ್ಯರಾದ ನಮ್ಮಲ್ಲಿ ಇರುವ ಆಮ್ಲಜನಕ ಇತ್ಯಾದಿ ಅಂಶಗಳ ಭಾಗ ಕೇವಲ 0.03ಶೇ. ಮಾತ್ರ! ಆದರೆ ಈ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿಗಳು ಎಂದರೆ ಏನು ಎಂದು ನಿಖರವಾಗಿ ಹೇಳಲು ವಿಜ್ಞಾನಿಗಳಿಗೆ ಆಗುತ್ತಿಲ್ಲ. ಹೌದು! ವಿಶ್ವದ ಶೇ.96ರಷ್ಟು ಭಾಗದಲ್ಲಿ ಏನಿದೆ ಎನ್ನುವುದು ಮನುಷ್ಯನಿಗೆ ಇನ್ನೂ ತಿಳಿದಿಲ್ಲ. ಇಷ್ಟು ಭಾಗ ಅಜ್ಞಾನವಿದೆ ಅನ್ನೋದು ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿರೋದೇ ಕಳೆದ ಇಪತ್ತು ವರ್ಷಗಳಿಂದ. ಅದಕ್ಕೆ ಮೊದಲು, ಅರ್ಥ ಮಾಡಿಕೊಳ್ಳಬೇಕಾದ ಎಲ್ಲವನ್ನೂ ಅರಿಯಲಾಗಿದೆ ಎನ್ನುವ ಧೈರ್ಯ ಇತ್ತು. ಆದರೂ ವಿಜ್ಞಾನಿಗಳು ಇಂತಹದೊಂದು ಸಾಧ್ಯತೆಯ ಊಹೆಯನ್ನು ಖಂಡಿತ ಮಾಡಿದ್ದರು.

ಇಂತಹ ಊಹೆಯನ್ನು ಮಾಡಿಕೊಳ್ಳಲು ಸಾಧ್ಯವಾಗಿದ್ದು ವಿಜ್ಞಾನದ ಒರೆಹಚ್ಚಿ ನೋಡುವ ಸ್ವಸಾಮರ್ಥ್ಯದಿಂದಾಗಿ. ಅದು ಎಂದಿಗೂ ಎಲ್ಲವೂ ಸರಿಯಿದೆ ಎಂದು ಅಂದುಕೊಳ್ಳುವುದಿಲ್ಲ. ಪ್ರತೀ ಹಂತದಲ್ಲೂ ಪ್ರಯೋಗಗಳಿಗೆ ಮುಂದಾಗುತ್ತದೆ. ಅನೇಕ ಆಯಾಮಗಳಿಂದ ತಿಳಿದಿರುವ ವಿಚಾರವನ್ನು ಪರಿಶೀಲನೆಗೆ ಒಳಪಡಿಸುತ್ತದೆ. ಸತ್ಯವನ್ನು ಹುಡುಕುತ್ತಲೇ ಇರುತ್ತದೆ. ದೊರೆತ ಸತ್ಯ ನಿಜಕ್ಕೂ ಸತ್ಯವೇ ಎಂದು ಮರು ಪರೀಕ್ಷೆಗೆ ಒಳಪಡಿಸುತ್ತಲೇ ಇರುತ್ತದೆ. ಏಕೆಂದರೆ ಸತ್ಯವೆಂದು ನಿರ್ಧರಿಸಲು ಬಳಸಿದ ಮಾನದಂಡಗಳಲ್ಲೇ ದೋಷವಿರಲು ಸಾಧ್ಯವಿದೆ ಎಂದು ಅದಕ್ಕೆ ತಿಳಿದಿದೆ. ಜ್ಞಾನವನ್ನು ಯಾರು ಬೇಕಾದರೂ ಸೃಷ್ಟಿಸಬಲ್ಲರು ಎನ್ನುವ ಎಚ್ಚರ ಅದಕ್ಕೆ ಇದೆ. ಹಾಗಾಗಿ ಯಾರೇ ಆಗಲಿ ಆಧಾರ ಸಹಿತ ಹೇಳಿದರೆ, ಅದನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತದೆ; ಎಷ್ಟೇ ದೊಡ್ಡವರು ಆಗಿದ್ದರೂ, ಅವರು ದೊಡ್ಡವರು ಎನ್ನುವ ಕಾರಣಕ್ಕಾಗಿ ಅವರ ಮಾತುಗಳನ್ನು ನಂಬುವುದಿಲ್ಲ. ಇಂತಹ ಸ್ವಭಾವವನ್ನು ಹೊಂದಿರುವ ಕಾರಣದಿಂದಲೇ ವಿಜ್ಞಾನ ಮತ್ತು ವಿಜ್ಞಾನಿಗಳು ಇಷ್ಟೆಲ್ಲಾ ಪ್ರಗತಿ ಸಾಧಿಸಲು ಅವಕಾಶವಾಗಿರುವುದು.

E=mc2 ಓರ್ವ ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವ ರೀತಿಯಲ್ಲಿ ತರ್ಕಬದ್ಧವಾಗಿ ಆದರೆ ಸರಳವಾಗಿ ಸಿದ್ಧಾಂತವೊಂದನ್ನು ಮಂಡಿಸಲು ಆಗಲಿಲ್ಲ ಎಂದರೆ, ಆ ಸಿದ್ಧಾಂತದಲ್ಲೇ ತಪ್ಪಿದೆ ಎನ್ನುವುದು ಐನ್‌ಸ್ಟೀನ್ ಅವರ ಸಿದ್ಧಾಂತವಾಗಿತ್ತು. ಐನ್‌ಸ್ಟೀನ್ ಎಂದಾಕ್ಷಣ ಅವರ ಬಹಳ ಬೇಗ ಎಲ್ಲರಿಗೂ ನೆನಪಾಗುತ್ತದೆ. ಮಾನವ ಸಮಾಜದ ಇತಿಹಾಸವನ್ನೇ ಬದಲಾಯಿಸಿದ ಸೂತ್ರವಿದು. ಇದುವರೆಗೆ ಸುತ್ತಲಿನ ಭೌತಜಗತ್ತನ್ನು ಅರ್ಥ ಮಾಡಿಕೊಂಡಿದ್ದ ರೀತಿಯಲ್ಲೇ ದೋಷವಿದೆ ಎಂದು ವಿಜ್ಞಾನಿಗಳಿಗೆ ಅನ್ನಿಸಲು ಮೇಲೆ ಹೇಳಿದ ಐನ್‌ಸ್ಟೀನ್‌ರ ಸೂತ್ರವೇ ಕಾರಣವಾಗಿದೆ. ಬಿಗ್ ಬ್ಯಾಂಗ್(ಮಹಾಸ್ಫೋಟ)ನಿಂದ ಜಗತ್ತು ನಿರ್ಮಾಣಗೊಂಡಿತು ಎನ್ನುವುದನ್ನು ಒಪ್ಪುತ್ತಲೇ, ಅದಕ್ಕೆ ಮೊದಲು ಏನಿತ್ತು ಎನ್ನುವ ಪ್ರಶ್ನೆ ಐನ್‌ಸ್ಟೀನರಿಗಿತ್ತು. ಈ ಪ್ರಶ್ನೆಗೊಂದು ಉತ್ತರ ಪಡೆಯುವ ಹಾದಿಯಲ್ಲಿ ಅವರ ಕೊನೆಯ ದಿನಗಳು ಕಳೆದುಹೋಗಿದ್ದವು. ಮಹಾಸ್ಫೋಟದ ನಂತರ ಏನಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಲೇ ಎಲ್ಲಾ ವಿಜ್ಞಾನಿಗಳನ್ನು ಕಾಡಿದ ಮತ್ತು ಕಾಡುತ್ತಿರುವ ಪ್ರಶ್ನೆಯೊಂದು ಇತ್ತು: ವಿಶ್ವ ವಿಸ್ತಾರಗೊಳ್ಳುತ್ತಾ ಸಾಗುತ್ತಿರುವುದು ಏಕೆ? ಪರಸ್ಪರ ಇರುವ ಗುರುತ್ವ ಶಕ್ತಿಯ ಆಕರ್ಷಣೆಗೆ ಒಳಗಾಗಿ, ಆಕಾಶಕಾಯಗಳು ಒಂದೆಡೆ ತಟಸ್ಥವಾಗಿ ಇರಬೇಕಿತ್ತಲ್ಲ? (ಭೂಮಿ/ಚಂದ್ರ ಸೂರ್ಯನ ಸುತ್ತ ಇರುವಂತೆ?) ಆದರೆ, ವಿಶ್ವ ಹಿಗ್ಗುತ್ತಿದೆ. ನಿರಂತರವಾಗಿ ಹೊರ ಚಾಚಿಕೊಳ್ಳುತ್ತಿದೆ. ಏಕೆ ಹೀಗೆ? ಇದಕ್ಕೆ ಕಾರಣ ಗೊತ್ತಿದೆ ಮತ್ತು ಗೊತ್ತಿಲ್ಲ ಎಂದು ಉತ್ತರಿಸುವ ಸ್ಥಿತಿಯಲ್ಲಿ ಇಂದಿನ ಭೌತವಿಜ್ಞಾನವಿದೆ!

ವಿಶ್ವವೂ ಹೀಗೆಯೇ ಹಿಗ್ಗುತ್ತಾ ಸಾಗಿದಲ್ಲಿ, ಮುಂದೊಂದು ದಿನ ಇಡೀ ವಿಶ್ವ ಶೀತಲಮಯವಾಗುತ್ತದೆ; ಚಲನೆಯೇ ಇಲ್ಲದೆ ಸ್ತಬ್ಧವಾಗಿ ಹೋಗುತ್ತದೆ. ಒಂದು ಅಣುವಿನ ಮಿಸುಕಾಟ ಸಂಭವಿಸಲು ಮಿಲಿಯನ್ ವರ್ಷ ಬೇಕಾಗಬಹುದೆಂಬ ಅಂದಾಜು ಇದೆ. ಮೇಲೆ ಚರ್ಚಿಸಿದ ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿಗಳೇ ವಿಶ್ವ ಹಿಗ್ಗುತ್ತಲೇ ಸಾಗಲು ಮುಖ್ಯ ಕಾರಣ ಎನ್ನುವುದನ್ನು ವಿಜ್ಞಾನಿಗಳು ಒಪ್ಪಿದ್ದಾರೆ. ಇಷ್ಟೆಲ್ಲಾ ತಾಂತ್ರಿಕ ಪ್ರಗತಿಯನ್ನು ಸಾಧಿಸಿದ್ದರೂ, ಈ ಡಾರ್ಕ್ ಮ್ಯಾಟರ್ ಅನ್ನುವುದು ಏನು ಅಂತ ಇನ್ನೂ ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ. ಅದೇ ರೀತಿಯಲ್ಲಿ ಡಾರ್ಕ್ ಎನರ್ಜಿ ಎಂದರೇನು ಅನ್ನೋದು ಪೂರ್ಣವಾಗಿ ಅರ್ಥವಾಗಿಲ್ಲ. ಇವೆರಡು ಹೇಗಿವೆ ಅಂತ ನೋಡಲು ಸಾಧ್ಯವಾಗಿಲ್ಲ! ಪರೋಕ್ಷವಾಗಿ ಇವುಗಳ ಇರುವಿಕೆ ತಿಳಿಯುತ್ತಿದೆಯೇ ಹೊರತು, ನೇರವಾಗಿ ಇವುಗಳ ಇರುವಿಕೆಯನ್ನು ಸಾಬೀತು ಮಾಡಲು ಆಗುತ್ತಿಲ್ಲ. ಏಕೆಂದರೆ, ವಸ್ತು ಇಲ್ಲವೇ ಶಕ್ತಿ ಅಂದರೆ ಏನು ಎಂದು ಭೌತವಿಜ್ಞಾನ ಅಂದುಕೊಂಡಿತ್ತೋ ಅದಕ್ಕಿಂತ ಭಿನ್ನವಾದ ಸ್ವಭಾವವನ್ನು ಇವು ಹೊಂದಿವೆೆ.

ಅಣುವಿನ ಕೇಂದ್ರ ಭಾಗದಲ್ಲಿರುವ ಇಲಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಿಗಿಂತ ಕಡಿಮೆಯಿರುವ ಯಾವುದೇ ಕಣ ಇರಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ಕಾಲವೊಂದು ಇತ್ತು. ಆದರೆ ಈಗ ತಿಳಿದಿರುವ ಪ್ರಕಾರ, ಮೇಲೆ ಹೇಳಿದವುಗಳ ಒಡಲಲ್ಲಿ ಸಾವಿರಾರು ಉಪಕಣಗಳಿವೆ! ಇವುಗಳ ಇರುವಿಕೆಯನ್ನು ಪುರಾವೆ ಸಹಿತ ಸಾಬೀತು ಮಾಡಲು ವಿಜ್ಞಾನಿಗಳ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ನೂರಾರು ಕಿಲೋಮೀಟರ್ ಉದ್ದದ ಕೊಳವೆಯಲ್ಲಿ ವೇಗವಾಗಿ ಅಣುಗಳನ್ನು ಚಲಿಸುವಂತೆ ಮಾಡಿ ಪರಸ್ಪರ ಘರ್ಷಣೆಗೆ ಒಳಗಾಗುವಂತೆ ಮಾಡಿ ಅವುಗಳನ್ನು ಸ್ಫೋಟಿಸುತ್ತಾರೆ. ಹೀಗೆ ಸ್ಫೋಟಗೊಂಡಾಗ ಅಣುಗಳ ಒಡಲಿನಿಂದ ಬಿಡುಗಡೆಯಾಗುವ ಕಣಗಳನ್ನು ಗುರುತಿಸುವ, ಅವುಗಳ ಲಕ್ಷಣಗಳನ್ನು ದಾಖಲಿಸುವ, ಅವುಗಳ ಕಾರ್ಯವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಅಂದಾಜು ಮಾಡುವ ಕಾರ್ಯ ಕಳೆದ ಒಂದು ದಶಕದಿಂದ ನಡೆಯುತ್ತಲೇ ಇದೆ. ಇಂತಹ ಕಣಗಳ ಪಟ್ಟಿ ಸಾವಿರದ ಗಡಿಯನ್ನು ದಾಟಿದೆ, ಆದರೆ ಇನ್ನೂ ಪಟ್ಟಿ ಮಾಡಬೇಕಾದ ಕಣಗಳ ಸಂಖ್ಯೆ ಸಾಕಷ್ಟಿದೆಯಂತೆ! ಈ ಹಂತದ ಭೌತಶಾಸ್ತ್ರಕ್ಕೆ ಕ್ವಾಂಟಂ ಫಿಜಿಕ್ಸ್ ಎಂದು ಹೆಸರು.

ಈ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿಯ ಕುರಿತು ಚರ್ಚಿಸುತ್ತಿರುವ ವಿಜ್ಞಾನಿಗಳಿಗೆ ಇದುವರೆಗೆ ಭೌತಶಾಸ್ತ್ರ ಹೇಳಿರುವ ಮತ್ತು ನಂಬಿರುವ ಸತ್ಯಗಳು ತಪ್ಪಾಗಿರಬಹುದೇ ಎನ್ನುವ ಸಂಶಯ ಮೂಡಿದೆ. ವಿಶ್ವದ ಶೇಕಡ 96 ಭಾಗ ಇರುವುದನ್ನು ನೇರವಾಗಿ ಗುರುತಿಸಲು ಆಗುತ್ತಿಲ್ಲವೆಂದರೆ, ಚಿಂತನೆಯ ಕ್ರಮದಲ್ಲೇ ತಪ್ಪಿದೆ ಎಂದರ್ಥವಾಗುತ್ತದೆ. ನ್ಯೂಟನ್ ಹೊಸ ಚಿಂತನೆಯನ್ನು ನೀಡಿದ ಮೇಲೆಯೇ ಅರಿಸ್ಟಾಟಲ್ ಚಿಂತನೆಯಲ್ಲಿರುವ ದೋಷಗಳು ಅರಿವಾಗಿದ್ದು. ನ್ಯೂಟನ್, ಐನ್‌ಸ್ಟೀನ್, ಫ್ಯಾರಡೆ ಇವರೆಲ್ಲಾ ತಪ್ಪಿರಲು ಸಾಧ್ಯವಿದೆ; ಇಲ್ಲದಿದ್ದರೆ ಇವರು ತೋರಿದ ಚಿಂತನಾಕ್ರಮದ ಸಹಾಯದೊಂದಿಗೆ ಶೇಕಡ 96ರಷ್ಟು ವಿಶ್ವವನ್ನು ಆಕ್ರಮಿಸಿರುವ ಡಾರ್ಕ್ ಮ್ಯಾಟರ್ ಮತ್ತು ಎನರ್ಜಿ ನಮಗೆ ಅರ್ಥವಾಗಬೇಕಿತ್ತು. ಅರ್ಥವಾಗುತ್ತಿಲ್ಲವೆಂದರೆ, ಹೊಸ ಚಿಂತನಾಕ್ರಮದ ಅಗತ್ಯವಿದೆ ಎಂದರ್ಥ ಅಲ್ಲವೆ?

share
ಸದಾನಂದ ಆರ್.
ಸದಾನಂದ ಆರ್.
Next Story
X