Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ
  4. ಸಿರಿಬಾರಿ ಲೋಕದ ಸಿರಿ ಸತ್ಯೊಲು ಶಕ್ತಿಗಳು

ಸಿರಿಬಾರಿ ಲೋಕದ ಸಿರಿ ಸತ್ಯೊಲು ಶಕ್ತಿಗಳು

ಡಾ. ಇಂದಿರಾ ಹೆಗ್ಗಡೆಡಾ. ಇಂದಿರಾ ಹೆಗ್ಗಡೆ3 Jan 2021 4:45 PM IST
share
ಸಿರಿಬಾರಿ ಲೋಕದ ಸಿರಿ ಸತ್ಯೊಲು ಶಕ್ತಿಗಳು

ಯಾರು ಈ ಸಿರಿ? ಸಿರಿ ಪಾಡ್ದನದಲ್ಲಿ ಪುರುಷ ಪ್ರಧಾನತೆಯನ್ನು ಪ್ರತಿಭಟಿಸಿ ಮಹಿಳಾ ಹಕ್ಕುಗಳ ಮರು ಸ್ಥಾಪನೆಗಾಗಿ ಹೋರಾಡಿ ಸೋತ ಸಿರಿಯೇ? ಅಥವಾ ತುಳುನಾಡಿನ ಎಲ್ಲಾ ದೈವ ಶಕ್ತಿಗಳಿಗೆ ತನ್ನ ಕೊಡೆಯಡಿಯ ಆಸರೆ ನೀಡಿದ, ನೀಡುವ, ತುಳುನಾಡಿನಲ್ಲಿ ಭತ್ತದ ಬೇಸಾಯದ ಆರಂಭಕಾಲಕ್ಕೆ ಘಟ್ಟದ ಮೇಲಿನಿಂದ ‘ಅತಿಕಾರೆ’ ಭತ್ತದ ತಳಿಯನ್ನು ಪ್ರತಿನಿಧೀಕರಿಸಿ ಕುಂಭ/ಕಡ್ಯರೂಪದಲ್ಲಿ ಉಪಾಸನೆ ಪಡೆಯುತ್ತಿರುವ ನಿರಾಕಾರ ಸಿರಿಯೇ?

ಏನಿದು ಸಿರಿಬಾರಿ ಲೋಕ ಅಂದರೆ. ಯಾಕೆ ಭೂತಾರಾಧನೆಯಲ್ಲಿ ಮತ್ತು ಭೂತಗಳ ಪಾಡ್ದನಗಳಲ್ಲಿ ಮತ್ತೆ ಮತ್ತೆ ಸಿರಿಬಾರಿ ಲೋಕದ ಪ್ರಸ್ತಾಪ ಬರುತ್ತದೆ. ಯಾಕೆ ಭೂತಗಳು ಮಾಯಾಜಗತ್ತಿನಿಂದ ಜೋಗದ ಜಗತ್ತಿಗೆ ಬರಲು ಸಿರಿಗಳ ಅಪ್ಪಣೆ ಕೇಳುತ್ತವೆ?

ಯಾರು ಈ ಸಿರಿ? ಸಿರಿ ಪಾಡ್ದನದಲ್ಲಿ ಪುರುಷ ಪ್ರಧಾನತೆಯನ್ನು ಪ್ರತಿಭಟಿಸಿ ಮಹಿಳಾ ಹಕ್ಕುಗಳ ಮರು ಸ್ಥಾಪನೆಗಾಗಿ ಹೋರಾಡಿ ಸೋತ ಸಿರಿಯೇ? ಅಥವಾ ತುಳುನಾಡಿನ ಎಲ್ಲಾ ದೈವ ಶಕ್ತಿಗಳಿಗೆ ತನ್ನ ಕೊಡೆಯಡಿಯ ಆಸರೆ ನೀಡಿದ, ನೀಡುವ, ತುಳುನಾಡಿನಲ್ಲಿ ಭತ್ತದ ಬೇಸಾಯದ ಆರಂಭಕಾಲಕ್ಕೆ ಘಟ್ಟದ ಮೇಲಿನಿಂದ ‘ಅತಿಕಾರೆ’ ಭತ್ತದ ತಳಿಯನ್ನು ಪ್ರತಿನಿಧೀಕರಿಸಿ ಕುಂಭ/ಕಡ್ಯರೂಪದಲ್ಲಿ ಉಪಾಸನೆ ಪಡೆಯುತ್ತಿರುವ ನಿರಾಕಾರ ಸಿರಿಯೇ? 1 ಅತಿಕಾರೆ ಎಂಬ ಸತ್ಯದ ತಳಿಯನ್ನು ಘಟ್ಟದಿಂದ ಕೆಳಗೆ ತಂದಾಗ ಆ ಸಿರಿಯ ಜೊತೆ ಗದ್ದೆ ಉಳಲು ಬೇಕಾಗುವ ಕಾಡಿನ ಕೋಣಗಳೂ ಬಂದುವು, 1,001 ಭೂತಗಳೂ ಬಂದುವು, 101 ಗಂಡ ಗಣಗಳೂ ಬಂದುವು ಎನ್ನುತ್ತದೆ ಪಾಡ್ದನ. ಈ ಸಿರಿಗಳನ್ನು ಅತಿಕಾರೆ ಭತ್ತದ ರೂಪದಲ್ಲಿ ಮತ್ತು ಕುಂಭರೂಪದಲ್ಲಿ ಕಾಣಲಾಗುತ್ತದೆ. ಅವುಗಳಿಗೆ ಪೂಪೂಜನ ನಡೆಯುತ್ತದೆ. ಇಲ್ಲಿ ಜಾತಿ ಪ್ರಸ್ತಾಪ ಇಲ್ಲ. ಧರ್ಮದ ಪ್ರಸ್ತಾಪ ಇಲ್ಲ. ತುಳುನಾಡಿಗೆ ವಲಸೆ ಬಂದವರ ಪ್ರಸ್ತಾಪವೂ ಇಲ್ಲ. ಭೂತಾರಾಧಕರಾದ ತುಳುವರು ಮಾತ್ರ ಇಲ್ಲಿ ಕಾಣುತ್ತಾರೆ. ಸಾಮಾನ್ಯವಾಗಿ ತುಳುನಾಡಿನ ಹೆಚ್ಚಿನ ಪಾಡ್ದನಗಳಲ್ಲಿ ಕಾಣುವಂತೆ ಬ್ರಾಹ್ಮಣರೂ ಪಾಡ್ದನದಲ್ಲಿ ಇಲ್ಲ. ಈಕೆ ಮಾನವ ರೂಪಿಯೂ ಅಲ್ಲ. 2 ಇನ್ನೊಬ್ಬಾಕೆ ಕುಟುಂಬ ಸಿರಿ. ಅಂದರೆ ತಾಯಿ ಮಕ್ಕಳು, ಮೊಮ್ಮಕ್ಕಳು, ಸೋದರಮಾವ, ಅಜ್ಜ-ಹಾಗೂ ಬಂಧುಗಳು ಇರುವ ಸಿರಿ. ಈಕೆಯೂ ತಂದೆ ತಾಯಿಗೆ ಜನಿಸುವುದಿಲ್ಲ. ಪ್ರಕಟ ಆಗುತ್ತಾಳೆ. ಆದರೆ ಈ ಸಿರಿ ಉದಿಸುವುದು ಬ್ರಾಹ್ಮಣ ಅರ್ಚಕ ನೀಡುವ ಪ್ರಸಾದದಲ್ಲಿ. ಈ ಸಿರಿ ಪಾಡ್ದನದ ಬೆಳವಣಿಗೆಯಲ್ಲಿ ಕೂಡಾ ಬ್ರಾಹ್ಮಣನ ಪ್ರಮುಖ ಪಾತ್ರ ಇದೆ. ಅಂದರೆ ಈ ಕುಟುಂಬ ಸಿರಿಯ ಕಾಲಕ್ಕೆ ತುಳುನಾಡಿಗೆ ಬ್ರಾಹ್ಮಣರು ವಲಸೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಬೆರ್ಮೆರೆ ಗುಂಡದ ಅರ್ಚನೆಗೂ ಅವರೇ ನೇಮಕವಾಗಿದ್ದಾರೆ. ಈ ಪಾಡ್ದನದಲ್ಲಿ ಒಕ್ಕೆತೆರಿ ಜಾತಿ, ಬ್ರಾಹ್ಮಣ ಜಾತಿ-ಹೀಗೆ ಹಲವಾರು ಜಾತಿಗಳನ್ನು ತರಲಾಗಿದೆ. ಸೂಳೆಯ ಪಾತ್ರವೇ ಕಥೆಯನ್ನು ಬೆಳೆಸುತ್ತದೆ. ತುಂಡರಸರ ಪ್ರಸ್ತಾಪವೂ ಇದೆ. ಪಾಡ್ದನದ ಉತ್ತರಾರ್ಧದಲ್ಲಿ ಕ್ರೈಸ್ತ ಮಹಿಳೆಯ ಪ್ರವೇಶವೂ ಆಗುತ್ತದೆ.

 ಆದರೆ ಈ ಸಿರಿ ಪ್ರಕಟ ಆಗುವಾಗಲೂ ಮಯಿಸಂದಾಯ (ಕಾಡ್ ದೆರ್ಲು), ಸಾವಿರದೊಂದು ಭೂತಗಳು, 101 ಗಂಡ ಗಣಗಳು ಬರುತ್ತವೆ. ಸಿರಿಯ ಉಪಾಸನೆಯ ಮೂಲ ಆಶಯವನ್ನು ಹೀಗೆ ತೋರಿಸಲಾಗಿದೆ.

ಹೀಗಾಗಿ ತುಳುನಾಡಿನಲ್ಲಿ ಮಹಿಳಾ ಸಂಸ್ಕೃತಿಗೆ, ಮಾತೃ ಪ್ರಧಾನ ವ್ಯವಸ್ಥೆಗೆ ಕಂಟಕ ಬಂದ ಕಾಲಘಟ್ಟದಲ್ಲಿ ಮೇಲ್ಜಾತಿ ಹೆಣ್ಣನ್ನು ಕಥಾನಾಯಕಿಯನ್ನಾಗಿ ರೂಪಿಸಿ ಪುರುಷ ಪ್ರಧಾನ ಸಮಾಜದ ದೌರ್ಜನ್ಯವನ್ನು ಖಂಡಿಸಲಾಗಿದೆ ಎಂಬ ನಿರ್ಣಯಕ್ಕೆ ಬರಲು ಅವಕಾಶ ಇದೆ. ಈ ಪಾಡ್ದನಗಳಲ್ಲಿ ‘ಅಯೋನಿಜೆ’ ಸಿರಿ ಎದುರಿಸುವ ಬೈ ನುಡಿಗಳು ಇಂದಿನ ಸ್ತ್ರೀಯರು ಕೂಡಾ ಒಪ್ಪುವಂತಹುದಲ್ಲ. ಎಷ್ಟರ ಮಟ್ಟಿಗೆ ಎಂದರೆ ಸಿರಿ ಸೂಕೆಯ ಸಂದರ್ಭದಲ್ಲಿಯೂ ತಾಯಿ ಸಿರಿಯ ಮೇಲೆ ಅವಳ ಪರಿವಾರ ಆಕ್ಷೇಪ ಎತ್ತಿ ಕುಮಾರನಿಗೆ ದೂರುಕೊಡುವುದನ್ನು ಗಮನಿಸಿದ್ದೇನೆ.

ತುಳುನಾಡಿನಲ್ಲಿ ಮಹಿಳಾ ಸಂಸ್ಕೃತಿಗೆ, ಮಾತೃ ಪ್ರಧಾನ ವ್ಯವಸ್ಥೆಗೆ ಕಂಟಕ ಬಂದ ಕಾಲಘಟ್ಟದಲ್ಲಿ ಮೇಲ್ಜಾತಿ ಹೆಣ್ಣನ್ನು ಕಥಾನಾಯಕಿಯನ್ನಾಗಿ ರೂಪಿಸಿ ಪುರುಷ ಪ್ರಧಾನ ಸಮಾಜದ ದೌರ್ಜನ್ಯವನ್ನು ಖಂಡಿಸಲಾಗಿದೆ ಎಂಬ ನಿರ್ಣಯಕ್ಕೆ ಬರಲು ಅವಕಾಶ ಇದೆ. ಈ ಪಾಡ್ದನಗಳಲ್ಲಿ ‘ಅಯೋನಿಜೆ’ ಸಿರಿ ಎದುರಿಸುವ ಬೈ ನುಡಿಗಳು ಇಂದಿನ ಸ್ತ್ರೀಯರು ಕೂಡಾ ಒಪ್ಪುವಂತಹುದಲ್ಲ. ಎಷ್ಟರ ಮಟ್ಟಿಗೆ ಎಂದರೆ ಸಿರಿ ಸೂಕೆಯ ಸಂದರ್ಭದಲ್ಲಿಯೂ ತಾಯಿ ಸಿರಿಯ ಮೇಲೆ ಅವಳ ಪರಿವಾರ ಆಕ್ಷೇಪ ಎತ್ತಿ ಕುಮಾರನಿಗೆ ದೂರುಕೊಡುವುದನ್ನು ಗಮನಿಸಿದ್ದೇನೆ.

ಹೀಗೆ ಭತ್ತದ ಬೀಜದೊಂದಿಗೆ ಬಂದ ಸಿರಿಯ ಕಾಲ ‘ಜಾತಿ ರಹಿತ’ ಕಾಲ ಆಗಿದ್ದಿರಬಹುದು. ಈ ಮಾತಿಗೆ ಪೂರಕವಾಗಿ ಕಂಬುಲ ಗದ್ದೆಯ ಉಳುಮೆಯಲ್ಲಿ ಆ ಪಾಳೆಯ ಪಟ್ಟಿನ ಒಟ್ಟು ಸಮುದಾಯ ಭಾಗಿಯಾಗುವುದನ್ನು ಕಾಣಬಹುದು. ಪರಂಪರೆಯ ಕಂಬುಲ ರೈತರ ಊರ ಹಬ್ಬ ಆಗಿತ್ತು. ಆ ಪಾಳೆಯ ಪಟ್ಟಿನ ಎಲ್ಲರ ಕೋಣಗಳು ಕಂಬುಲ ಗದ್ದೆಗೆ ಇಳಿಯುತ್ತವೆ, ಸಾಮೂಹಿಕ ಶ್ರಮ ಮತ್ತು ಸಾಮೂಹಿಕ ಸೊತೆ್ತೂಡೆತನದ ಆದಿಮ ಕಾಲದ ಕಂಬುಲ.

ಇಲ್ಲಿ ‘ಸಿರಿ’ ಎಂಬುದು ಅತಿಕಾರೆ ಭತ್ತ. ಹೀಗಾಗಿ ‘ಅತಿಕಾರೆ’ ತಳಿಯ ಮೂಲಕವೂ ಸಿರಿಯನ್ನು ಸಂಕೇತಿಸಲಾಗುತ್ತದೆ. ನೀರು ತುಂಬಿದ ಕಡ್ಯ/ಘಟದ ಮೂಲವೂ ಸಂಕೇತಿಸಲಾಗುತ್ತದೆ. ನೀರು ತುಂಬಿದ ಕಡ್ಯ/ಮುರ್ಲಿಯ ಮೈಮೇಲೆ ನಾಗ ಹೆಡೆ ಬಿಡಿಸಿ ಒಳಗೆ ನೀರು ಸುರಿದು ಪೂಜಿಸುತ್ತಿದ್ದರು. ಇದಕ್ಕೆ ಪ್ರತಿ ತಿಂಗಳ ಸಂಕ್ರಾಂತಿ ಸೇವೆ ಇದೆ. ಆಯಾ ಕುಟುಂಬದ ಆಯ್ದ ವ್ಯಕ್ತಿ ‘ಪೂಪೂಜನ’ ದ ಸೇವೆ ಮಾಡುತ್ತಾನೆ. ಇಲ್ಲಿ ಬಾಹ್ಮಣ ಅರ್ಚಕ ಇಲ್ಲ. ಇಂದಿಗೂ ಇಲ್ಲ.

ನಾಗ ಫಲವಂತಿಕೆಯ ಸಂಕೇತ! ಕುಂಭವೂ ಫಲವಂತಿಕೆಯ ಸಂಕೇತ!

ಇಲ್ಲಿ ‘ಸಿರಿ’ ಎನ್ನುವುದು ಸಾಂಕೇತಿಕತೆ. ಫಲವಂತಿಕೆಯ ಸಾಂಕೇತಿಕತೆ. ಕುಂಭ ರೂಪದಲ್ಲಿ ಹೆಣ್ಣಿನ (ಕ್ಷೇತ್ರದ) ಗರ್ಭದ ಚಿಗುರಿಗೆ ಸಾಂಕೇತಿಕತೆ. ಅತಿಕಾರೆ ಭತ್ತದ ರೂದಲ್ಲಿ ಮಣ್ಣಿನ (ಕ್ಷೇತ್ರದ)ಗರ್ಭದ ಚಿಗುರಿಗೆ ಸಾಂಕೇತಿಕತೆ. ಆದಿ ಕಾಲದ ಮಾನವನಿಗೆ ಮಣ್ಣಿನ ಫಲವೂ ಮುಖ್ಯವಾಗಿತ್ತು, ಹೆಣ್ಣಿನ ಫಲವೂ ಮುಖ್ಯವಾಗಿತ್ತು. ವಿಶ್ವದೆಲ್ಲೆಡೆಯ ಆದಿ ಮಾನವರು ಮಾತೃದೇವತೆಗಳನ್ನು ಪೂಜಿಸುತ್ತಿದ್ದುದು ತಿಳಿದ ವಿಷಯ. ಈ ಪೂಜನೆಯಲ್ಲಿ ಪ್ರಕೃತಿಯ ಪೂಜನೆ ಸಮ್ಮಿಳಿತವಾಗಿತ್ತು. ನಮ್ಮ ಹಿಂದೂ ದೇಶದ ಸಿಂಧೂ ಕಣಿವೆಯಲ್ಲೂ ಅಂದರೆ ಮೊಹೆಂಜೋದಾರೋ ನೆಲೆಗಳಲ್ಲಿ ಮಾತೃದೇವತೆಗಳ ಶಿಲ್ಪಗಳು ದೊರಕಿವೆ. ಆ ಭಾಗದಲ್ಲಿ ಮಾತೃಸಂಸ್ಕೃತಿ ಅಳಿದು ಮಾತೃದೇವತಾ ಪೂಜಾ ಸಂಸ್ಕೃತಿ ನಾಶವಾಗಿದೆ (ಇದ್ದರೂ ಇರಬಹುದು). ಆದರೆ ಅಲ್ಲಿ ಅಳಿದರೂ ಇಲ್ಲಿ ತುಳು ನೆಲದಲ್ಲಿ ಮಾತೃಶಕ್ತಿಗಳ ಉಪಾಸನೆ ಉಳಿದು ಬಂದಿದೆ. ಇಡಿಯ ವಿಶ್ವದ, ಭಾರತದ ಅನೇಕ ಕಡೆ ಮಾತೃದೇವತಾರಾಧನೆ, ಮಾತೃಪ್ರಧಾನತೆ ಮತ್ತು ಮಾತೃವಂಶೀಯತೆ ಉಳಿದು ಬಂದಿದೆ.

 ವಿಶ್ವದ ಇತರೆಡೆಯಂತೆ ತುಳುನಾಡಿನಲ್ಲೂ ಬುಡಕಟ್ಟು ಮೂಲದ ಮಾನವರು ಪೂಜಿಸುತ್ತಿದ್ದುದು, ಒಂದು ಆಯ್ದ ಸ್ಥಳದಲ್ಲಿ ಅವರಿಟ್ಟ ಗುಂಡು ಕಲ್ಲು, ಒಂದು ಆಯ್ದ ಮರ, ಒಂದು ಆಯ್ದ ಸಸ್ಯ, ಹರಿಯುವ ನೀರು -ಹೀಗೆ ಪ್ರಾಕೃತಿಕ ವಸ್ತುಗಳಲ್ಲಿ ಅತೀತ ಶಕ್ತಿಯನ್ನು ನಂಬಿ (ಆವಾಹಿಸಿ) ಪೂಜಿಸಿ ಬೇಡುತ್ತಿದ್ದರು. ಶಿಲ್ಪರಚನಾ ಕೌಶಲ ಕರಗತವಾಗುವ ಕಾಲಕ್ಕೂ ಹಿಂದೆ ನಾಗ ಶಿಲ್ಪಗಳನ್ನು ರಚಿಸದೆ ಕಲ್ಲನ್ನು ಸಂಕೇತಿಸಿ ಪೂಜಿಸುತ್ತಿದ್ದರು. ಅಂತಹ ಕೆಲವು ಕಲ್ಲುಗಳನ್ನು ಈಗಲೂ ತುಳುನಾಡಿನ ಕೆಲವು ಆಲಡೆ, ನಾಗಬನಗಳಲ್ಲಿ ಕಾಣಬಹುದು. ತಾವು ಉಣ್ಣುವ ತಿನ್ನುವ ಆಹಾರವನ್ನು ಅದಕ್ಕೆ ನೀಡುತ್ತಿದ್ದರು. ಅದರ ಮುಂದೆ ನರ್ತಿಸಿ, ಹಾಡಿ ಸಂತೋಷಪಟ್ಟು ತಾವು ‘ನಂಬಿದ ದೈವಕ್ಕೆ ಸೇವೆ’ ಎಂದು ಬಗೆಯುತ್ತಿದ್ದರು. ಈ ಆದಿ ಮಾನವರ ಉಪಾಸನಾ ಕ್ರಮ ಕಾಲದ ಹರಿವಿನಲ್ಲಿ ಅನೇಕ ತಿರುವುಗಳನ್ನು ಪಡೆಯಿತು. ಕೆಲವು ಕಳೆಯಿತು. ಕೆಲವು ಉಳಿಯಿತು. ಧರ್ಮಗಳು ಹುಟ್ಟಿದ ಮೇಲೆ ಬುಡಕಟ್ಟು ಮುಖಂಡನಲ್ಲಿ ಇದ್ದ ಉಪಾಸನೆಯ ನಿಯಂತ್ರಣ ಧರ್ಮ ಸಂಸ್ಥಾಪಕರ ತೆಕ್ಕೆಗೋ ಅಥವಾ ಧರ್ಮಗಳ ನಿಯಂತ್ರಕರ ಕೈಗೋ ಹೋಯಿತು. ಧರ್ಮಪ್ರಚಾರ ಆಗುತ್ತಾ ಹೋದಂತೆ ಮೂಲ ಉಪಾಸನಾ ಪದ್ಧತಿ ಮರೆಯಾಗುತ್ತಾ ಹೋಯಿತು. ಹಿಂದೂ ಧರ್ಮದ ಉಪಾಸನೆಯಲ್ಲೂ ಸನಾತನ ಧರ್ಮದ ದೇವರ ಪ್ರವೇಶ ಆಗಿ ‘ಶಿಷ್ಠ ದೇವರು’’ (ಶಿವ, ವಿಷ್ಣು ಇತ್ಯಾದಿ) ಎಂಬ ವ್ಯಾಖ್ಯಾನ ಬಂತು. ಆದಿ ಮೂಲಜನಾಂಗದ ಉಪಾಸನೆಗೆ ಜಾನಪದ ದೇವರು ಜಾನಪದ ಸಂಸ್ಕೃತಿ ಎಂಬ ಹೆಸರಾಯಿತು.

 ಹಿಂದೂ ಸಮಾಜದಲ್ಲಿ ಮೂವತ್ತಮೂರು ಕೋಟಿ ದೇವತೆಗಳನ್ನು ಭಾರತದ ಅರಸರು ಯಜ್ಞದ ಮೂಲಕ ಸ್ತುತಿಸುವುದನ್ನು ನಮಗೆ ವೇದಗಳು, ರಾಮಾಯಣ, ಮಹಾಭಾರತ ಕಥೆಗಳು ಕಾಣಿಸಿಕೊಡುತ್ತವೆ. ಇಂದ್ರ, ವರುಣ, ಸೂರ್ಯ, ಅಗ್ನಿ, ವಾಯು-ಹೀಗೆ ಈ ದೇವತೆಗಳನ್ನು ಪೂಜಿಸುತ್ತಿದ್ದರು. ಪಶುಬಲಿ ಮತ್ತು ಬ್ರಾಹ್ಮಣ ದಾನಕ್ಕಾಗಿ ಯಥೇಚ್ಛ ಖರ್ಚು ಆಗುತ್ತಿದ್ದ ಈ ಉಪಾಸನೆ ಜನಪದರ ಕೈಗೆ ಎಟುಕಲು ಸಾಧ್ಯ ಇರಲಿಲ್ಲ. ಗುಂಡು ಕಲ್ಲು, ನೀರು, ಗಿಡ-ಇವುಗಳಲ್ಲಿ ದೇವರನ್ನು ನಂಬಿ ಪೂಜಿಸುವುದು ಅವರಿಗೆ ಸುಲಭದ ವಿಧಾನ ಆಗಿತ್ತು.

ಯಜ್ಞದ ಮೂಲಕ ದೇವತೆಗಳನ್ನು ಪೂಜಿಸುತ್ತಿದ್ದ ಅರಸರು ಮುಂದೆ ಶಿವ, ಗಣಪತಿ, ವಿಷ್ಣು, ದೇವರುಗಳನ್ನು ಪೂಜಿಸಿದ್ದು ದೇವಸ್ಥಾನಗಳ ಕೊಡೆಯಡಿಯಲ್ಲಿ. ನನ್ನ ಗಮನಕ್ಕೆ ಬಂದಂತೆ ತುಳುನಾಡಿಗೆ ಶೈವ ದೇವಸ್ಥಾನಗಳನ್ನು ಮೊದಲು ತಂದವರು ಆಳುಪರಸರು. ಇವರು ಶೈವ ಸಂಸ್ಕೃತಿಯನ್ನು ಹರಡಲು ಕಾರಣರಾದರು. 7ನೆಯ ಶತಮಾನದ ಶಾಸನದಲ್ಲಿ ದಾಖಲಾಗಿರುವ ಈಗಲೂ ಇರುವ ಉದ್ಯಾವರದ ಶಂಬುಕಲ್ಲು ಆಳುಪರ ಕಾಲದ್ದು. ಪೊಳಲಿಯ ದುರ್ಗಾ ದೇವಸ್ಥಾನದ (ರಾಜರಾಜೇಶ್ವರಿ) ಲ್ಲಿಯ 8ನೆಯ ಶತಮಾನದ ಶಾಸನವೂ ಆಳುಪರ ಕಾಲದ್ದು. ಆಳುಪರು ಮೂಲತಃ ನಾಗವಂಶಸುಬ್ರಹ್ಮಣ್ಯನ ಆರಾಧಕರಾಗಿರಬೇಕೆಂದು ಅವರು ಹಾಕಿದ ಡೊಂಗರ ಕೇರಿಯ ಶಿಲಾ ಶಾಸನ ಹಾಗೂ ಇನ್ನೂ ಕೆಲವು ಶಾಸನ ಮಾಹಿತಿಗಳಿಂದ ಇತಿಹಾಸಕಾರರು ದಾಖಲಿಸುತ್ತಾರೆ. ಪೊಳಲಿಯ ಕೊಡಿಮರದ ನಾಗಸುಬ್ರಹ್ಮಣ್ಯ ಎನ್ನುವುದು  ಗಮನಿಸಬೇಕಾದ ವಿಷಯ.

ತುಳುನಾಡಿನ ನೆಲಮೂಲದ ಉಪಾಸನೆಯಲ್ಲಿ ಎದ್ದು ಕಾಣುವುದು ಮೊಹೆಂಜೋದಾರೋ ಹಾಗೂ ಆ ಕಾಲದಲ್ಲಿ ಲೋಕೊರ್ಮೆ ಇದ್ದ ‘‘ಅಪ್ಯ-ಮಾತೃ ಶಕ್ತಿಲೆನ ಪೂಪೂಜನ’’-ಮಾತೃ ಶಕ್ತಿಗಳ ಆರಾಧನೆ, ಉಪಾಸನೆ. ಮುಂದೆ ಆಳರಸರ ಕಾಲಕ್ಕೆ ಇಲ್ಲಿಗೆ ತರಲಾದ ಅಥವಾ ತರಿಸಲಾದ ಪುರುಷ ಪ್ರಧಾನ ಸಂಸ್ಕೃತಿಯ ಸನಾತನ ದೇವರ ಗುಡಿ ಗೋಪುರಗಳ ಸಂಸ್ಕೃತಿ, ಆಳುಪರಸರ ಕಾಲದಲ್ಲಿ ಬೌದ್ಧ, ನಾಥ ಶೈವ ಶಕ್ತಿಗೆ ಪೋಷಣೆ ನೀಡಿತು; ಕೃಷ್ಣದೇವರಾಯನ ಕಾಲದಲ್ಲಿ ವೈಷ್ಣವ ಶಕ್ತಿಗೆ ಪೋಷಣೆ ನೀಡಿತು. ಆದರೂ ನೆಲ ಮೂಲದ ಮಾತೃಶಕ್ತಿಗಳ ಆರಾಧನ ಪರಂಪರೆ, ಸಂಸ್ಕೃತಿ ನಾಶವಾಗಲಿಲ್ಲ. ಯಾಕೆಂದರೆ ನೆಲಮೂಲದ ಶಕ್ತಿಗಳಿಗೆ ದೇವಸ್ಥಾನಗಳ ಅಗತ್ಯ ಇರಲಿಲ್ಲ. ಅದು ನಂಬುಗೆ. ಒಂದು ಒರಟು ಕಲ್ಲಾದರೂ ಸರಿ. ಅದನ್ನು ಒಂದಡೆ ಇಟ್ಟು ‘ದೈವ’ ಎಂದು ಪೂಜಿಸುತ್ತಾರೆ. ಹೀಗೆ ಜಾನಪದವು ಶಿಷ್ಟಸಂಸ್ಕೃತಿಯೊಂದಿಗೆ ಮುಖಾಮುಖಿಯಾಗಿ ಮುಂದುವರಿಯಿತು.

ವಿಜಯನಗರದ ಅರಸ ಕೃಷ್ಣದೇವರಾಯ ತುಳುನಾಡಿಗೂ ವೈಷ್ಣವ ಧರ್ಮ ಪ್ರಚಾರಕ್ಕೆ ಬೆಂಬಲ ನೀಡಿದ ಎನ್ನುತ್ತದೆ ಇತಿಹಾಸ. ಕೃಷ್ಣ ದೇವರಾಯರಸನ ಕಾಲದಲ್ಲಿ ತುಳುನಾಡಿನ ಮನೆ ಮನೆಗಳಿಂದಲೂ ‘ಪಣವು’ ಕಟ್ಟುನ ಸಂಪ್ರದಾಯ ಆರಂಭವಾಗಿ ತಿರುಪತಿಗೆ ಹಣ ಕಳಿಸುವ ವ್ಯವಸ್ಥೆ ಆಯಿತು. ಮನೆಯ ಪ್ರವೇಶ ದ್ವಾರದಲ್ಲಿ ಆಳುಪರ ಕಾಲದಿಂದ ಇದ್ದ ‘ಭುಕುತ ಮರಾಯಿ’ (ವಿಭೂತಿ ಮರಿಗೆ) ಇದ್ದಂತೆಯೇ ಮನೆಯ ಮುಂದೆ ತುಳಸಿ ಕಟ್ಟೆ (ವೃಂದಾವನ) ಬಂತು. ತುಳು ಜನಪದರು ತಮ್ಮ ನೆಲಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೊಸತನ್ನು ಸ್ವೀಕರಿಸಿದರು.

ತುಳುವರು ಪೂಜಿಸುವ ಶಕ್ತಿಲು/ಸತ್ಯೊಲು

ಈ ತುಳುನಾಡು ಸಿರಿಗಳ ನಾಡು. ಮಾತೃಶಕ್ತಿಗಳ ನಾಡು. ಶಕ್ತಿಗಳು ತುಳು ಭಾಷೆಯಲ್ಲಿ ಸತೆ್ಯೂಲು ಆಗಿವೆ.

ಪುರಾಣ, ಜಾನಪದ, ಇತಿಹಾಸ ಮೂಲಗಳಿಂದ ಇಲ್ಲಿಯ ಉಪಾಸನೆಯ ಹಿನ್ನೆಲೆಯನ್ನು ಗುನಿಸಿನೋಡುವುದು ಕೂಡಾ ಅಗತ್ಯ.

1 ಪುರಾಣ ಲೋಕ: ಪುರಾಣದ ಪ್ರಭಾವ ತುಳು ಜನಪದರ ಉಪಾಸನೆಯ ಮೇಲೂ ಆಗಿದೆ. ಹೀಗಾಗಿ ‘‘ತುಳುನಾಡು ಪರಶುರಾಮ ಸೃಷ್ಟಿ’’ ಎಂಬ ಮಾತು ಈ ನೆಲದಲ್ಲಿ ನಡೆಯುವ ಯಕ್ಷಗಾನ ಬಯಲಾಟದಲ್ಲಿ, ಬ್ರಾಹ್ಮಣ ಅರ್ಚಕರು ನಡೆಸುವ ನಾಗಾಮಂಡಲ, ಬ್ರಹ್ಮಮಂಡಲಗಳಲ್ಲಿ ಹಾಗೂ ಅದನ್ನು ಎತ್ತಿ ಪದಜಾಲ ನಿರ್ಮಿಸುವುದನ್ನು ವೇದಿಕೆಗಳಲ್ಲಿಯ ನಿರೂಪಣೆ ಅನುರಣಿಸುತ್ತಿದೆ. ಈ ಪುರಾಣದ ಪ್ರಕಾರ ‘‘ಪರಶುರಾಮ ಕೊಡಲಿ ಬಿಸಾಕಿ ಕಡಲಿನಿಂದ ಪಡೆದ ಕಡಲ ಕರಾವಳಿ ತುಳುನಾಡು’’ ಎಂದು. ಆದರೆ ಪುರಾಣದಲ್ಲಿ ಇರುವ ಮಾಹಿತಿಯಂತೆ ‘‘ಬಡಗು ಕನ್ಯಾಕುಮಾರಿಯಿಂದ ತೆಂಕು ಗುಜರಾತ್‌ವರೆಗೆ’’ ಪರಶುರಾಮ ಕಡಲಿನಿಂದ ಭೂಮಿ ಪಡೆದಿದ್ದಾನೆ. ಪರಶುರಾಮನ ನೆಲ ತುಳುನಾಡು ಆಗಿದ್ದರೆ ಈ ಪರಶುರಾಮ ಈ ನೆಲದ ಜನಪದರ ಆರಾಧ್ಯ ದೈವ ಆಗಬೇಕಿತ್ತು. ಭೂಮಿ ಉಂಟು ಮಾಡಿದ ಪರಶುರಾಮ ಇತರ ದೈವಗಳಿಗಿಂತ ಹೆಚ್ಚಿನ ಕೃತಜ್ಞತಾಭಾವದಿಂದ ಉಪಾಸನೆ ಗೊಳ್ಳಬೇಕಿತ್ತು. ಆದರೆ ಅಚ್ಚರಿ ಎಂದರೆ ವೈಷ್ಣವ ಆರಾಧನೆ ಬಂದ ಮೇಲೂ ಪರಶುರಾಮ ಶಿ, ವಿಷ್ಣುವಿನ ಸಾಲಲ್ಲಿ ಕೂಡಾ ನಿಲ್ಲಲಿಲ್ಲ.

 2 ಐತಿಹಾಸಿಕ ತುಳುನಾಡು ಪರಶುರಾಮನ ಮಾಹಿತಿಯನ್ನು ಎಲ್ಲೂ ದಾಖಲಿಸಲಿಲ್ಲ. ಪುರಾತತ್ವಕಾರರ ಪ್ರಕಾರ ಪಶ್ಚಿಮ ಘಟ್ಟ ಸಾಲಿನ ಕೆಳಭಾಗದ ಭೂಮಿ ಸಹಸ್ರಾರು ವರ್ಷಗಳಲ್ಲಿ ಅನೇಕ ಬಾರಿ ಹಿಂದಕ್ಕೂ ಮುಂದಕ್ಕೂ ಚಲಿಸಿದೆ. ಈ ಮಾಹಿತಿಯನ್ನು ಅವರು ಪುರಾವೆ ಸಮೇತ ದಾಖಲಿಸುತ್ತಾರೆ.

3 ಜಾನಪದ ಲೋಕದ ಮಾಹಿತಿಯ ಪ್ರಕಾರ ಘಟ್ಟದ ಕೆಳಗಿನ ಈ ಭಾಗ ‘ಸಿರಿಬಾರಿ ಲೋಕ’. ಯಾವುದೇ ಒಂದು ಜಾತಿ ಧರ್ುಕ್ಕೆ ಸಂಬಂಧಿಸಿದ್ದಲ್ಲ.

 ‘‘ತಿರ್ತ್ ಇತ್ತಿ ಸಿರಿಬಾರಿ ಲೋಕೊಗು ಸಿರಿಕುಲೆ ಪಾದ ಪತ್ತ್‌ದ್ ಒಪ್ಪಿಗೆ ಪಡೆತೊಂದು ಬತ್ತ’’ (ಘಟ್ಟದ ಕೆಳಗೆ ಇರುವ ಸಿರಿಬಾರಿ ಲೋಕಕ್ಕೆ ಬರಲು ಸಿರಿಬಾರಿ ಲೋಕದ ಸಿರಿಗಳ ಅಪ್ಪಣೆ ಪಡೆದು ಬಂದೆ’’ ಎನ್ನುತ್ತವೆ. ಈ ನುಡಿಯಂತೆ ಈಗಲೂ ಸಿರಿ ಬಾರಿ ಲೋಕದ ಸಿರಿಗಳ ಉಪಾಸನೆ ನಡೆಯುತ್ತಿದೆ. ‘‘ಪರಶುರಾಮನ ಅಪ್ಪಣೆ ಪಡೆದು ಬಂದೆ’’ ಎಂದು ಭೂತಗಳು ಹೇಳುವುದಿಲ್ಲ. ಮತ್ತೆ ಮತ್ತೆ ಪಾಡ್ದನಗಳು, ಭೂತ ಪಾತ್ರಿಗಳು ಸಿರಿಾರಿಲೋಕವನ್ನು ಪ್ರಸ್ತಾಪಿಸುತ್ತವೆ.

ಈ ತುಳುನಾಡಿಲ್ಲಿ ಭತ್ತದ ಬೇಸಾಯ ಆರಂಭವಾದ ಕಾಲಕ್ಕೆ ಬಂದಿವೆ ಸತ್ಯದ ಬೆಳೆ ಅತಿಕಾರೆ ಬೀಜದ ಪ್ರಾತಿನಿಧಿಕ ಸಿರಿಗಳು. ಹೀಗಾಗಿ ಅತಿಕಾರೆ ಭತ್ತವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಅದಕ್ಕೆ ವೈದ್ಯಕೀಯ ಗುಣವೂ ಇದೆ. ಆರೋಗ್ಯಕ್ಕೂ ಪರಿಣಾಮಕಾರಿ ಬೆಳೆ. ಅತಿಕಾರೆ ಭತ್ತವೇ ‘ಸಿರಿ.’ ಈ ಭತ್ತಕ್ಕೆ ಮಡಿ ಮೈಲಿಗೆ ಆಚರಿಸಲಾಗುತ್ತದೆ. ಹಾಗೆ ಅದು ಬೆಳೆವ ಕಂಬುಲಕ್ಕೆ, ಕಂಬುಲ ಉಳುವ ಕೋಣಗಳಿಗೆ.

ತುಳುನಾಡಿನ ನೆಲಮೂಲದ ಉಪಾಸನೆಯಲ್ಲಿ ಎದ್ದು ಕಾಣುವುದು ಮೊಹೆಂಜೋದಾರೋ ಹಾಗೂ ಆ ಕಾಲದಲ್ಲಿ ಲೋಕೊರ್ಮೆ ಇದ್ದ ‘‘ಅಪ್ಯ-ಮಾತೃ ಶಕ್ತಿಲೆನ ಪೂಪೂಜನ’’-ಮಾತೃ ಶಕ್ತಿಗಳ ಆರಾಧನೆ, ಉಪಾಸನೆ. ಮುಂದೆ ಆಳರಸರ ಕಾಲಕ್ಕೆ ಇಲ್ಲಿಗೆ ತರಲಾದ ಅಥವಾ ತರಿಸಲಾದ ಪುರುಷ ಪ್ರಧಾನ ಸಂಸ್ಕೃತಿಯ ಸನಾತನ ದೇವರ ಗುಡಿ ಗೋಪುರಗಳ ಸಂಸ್ಕೃತಿ, ಆಳುಪರಸರ ಕಾಲದಲ್ಲಿ ಬೌದ್ಧ, ನಾಥ ಶೈವ ಶಕ್ತಿಗೆ ಪೋಷಣೆ ನೀಡಿತು; ಕೃಷ್ಣದೇವರಾಯನ ಕಾಲದಲ್ಲಿ ವೈಷ್ಣವ ಶಕ್ತಿಗೆ ಪೋಷಣೆ ನೀಡಿತು. ಆದರೂ ನೆಲ ಮೂಲದ ಮಾತೃಶಕ್ತಿಗಳ ಆರಾಧನ ಪರಂಪರೆ, ಸಂಸ್ಕೃತಿ ನಾಶವಾಗಲಿಲ್ಲ. ಯಾಕೆಂದರೆ ನೆಲಮೂಲದ ಶಕ್ತಿಗಳಿಗೆ ದೇವಸ್ಥಾನಗಳ ಅಗತ್ಯ ಇರಲಿಲ್ಲ. ಅದು ನಂಬುಗೆ. ಒಂದು ಒರಟು ಕಲ್ಲಾದರೂ ಸರಿ. ಅದನ್ನು ಒಂದಡೆ ಇಟ್ಟು ‘ದೈವ’ ಎಂದು ಪೂಜಿಸುತ್ತಾರೆ. ಹೀಗೆ ಜಾನಪದವು ಶಿಷ್ಠಸಂಸ್ಕೃತಿಯೊಂದಿಗೆ ಮುಖಾಮುಖಿಯಾಗಿ ಮುಂದವರಿಯಿತು.

ಬೇಟೆ ಜೀವನದಲ್ಲಿ ಹೊಟ್ಟೆಯ ಹಸಿವಿಗಾಗಿ ಕಾಡು ಗುಡ್ಡ ಅಲೆದು ಹುಲಿಕರಡಿಗಳಿಂದ ತಪ್ಪಿಸಿಕೊಂಡು ಹಸಿವು ತಣಿಸಲು ಬೇಟೆಯಾಡಿ ಬದುಕುವ ಕಷ್ಟಕಾಲ ಅದು. ಆಗ ಅವರ ಕಾಡ ಗುಡಿಸಲಂಗಳದಲ್ಲಿ ಬಿದ್ದ ಧಾನ್ಯದ ಫಸಲನ್ನು ಬೆಳೆದು ತೋರಿಸಿದವಳು ಮನೆಯಲ್ಲಿದ್ದ ಮಾತೆ. ಕಾಡು ತರಕಾರಿಗಳನ್ನೇ ಮನೆಯ ಬಳಿ ಬೆಳೆಸಿ ಕೃಷಿ ಸಂಸ್ಕೃತಿಗೆ ಮುಹೂರ್ತ ಇಟ್ಟವಳು ಮಾತೆ. ಬೇಟೆಯಲ್ಲದ ಈ ತಿನಿಸು ಮಾನವನಿಗೆ ಸುಲಭದ ಆಪತ್ತಿಲ್ಲದ ಕಾಯಕ ಅನಿಸಿತು. ಕೃಷಿಯ ಈ ಆವಿಷ್ಕಾರ ಕಂಡ ಕಾಡಿನ ಮಾನವ ಘಟ್ಟದ ತಳಭಾಗದ ನೀರಿನಾಶ್ರಯ ಇರುವ ಜಾಗದಲ್ಲಿ ಭತ್ತದ ಬೇಸಾಯ ಮಾಡಲು ಘಟ್ಟ ಇಳಿಯುತ್ತಾನೆ.

ಇದು ತುಳುವ ನೆಲ. ಬೆಟ್ಟ ಗುಡ್ಡಗಳ ನಡುವೆ ಇರುವ ಕೆಸರು ಮಿಶ್ರಿತ ನೆಲ. ಹೀಗಾಗಿ ಆತ ಘಟ್ಟದ ಕೆಳಗೆ ಬಂದು ಸೂಕ್ತ ನೆಲವನ್ನು ಗುರುತಿಸಿ ಭತ್ತದ ಬೇಸಾಯಕ್ಕೆ ಮನಸ್ಸು ಮಾಡುತ್ತಾನೆ. ಹೀಗೆ ಆತ ತಂದ ಮೊದಲ ಭತ್ತದ ತಳಿಯೇ ಅತಿಕಾರೆ ಭತ್ತ, ಸತ್ಯದ ಬೆಳೆ, ಸಿರಿ ಬೆಳೆ, ವರ್ಷದಲ್ಲಿ ಒಮ್ಮೆ ಮಾತ್ರ ಬಿತ್ತಿ ತೆಗೆಯುವ ಸತ್ಯದ ಪವಿತ್ರ ಬೆಳೆ.

 ಈತ ಅತಿಕಾರೆ ಎಂಬ ಭತ್ತದ ತಳಿಯನ್ನು ಬೇಸಾಯಕ್ಕೆಂದು ತರುವಾಗ ನೀರ ಗದ್ದೆಯ ಉಳುಮೆಗಾಗಿ ಕಾಡಿನ ಕೋಣಗಳೂ ಬರುತ್ತವೆ. ಸಿರಿಯ ಪರಿವಾರವಾಗಿ ಸಾರಮಾನ್ಯ ಭೂತಗಳು ಬರುತ್ತವೆ. ನೂರೊಂದು ಗಂಡ ಗಣಗಳು ಬರುತ್ತವೆ.

ಘಟ್ಟದ ಮೇಲಿನಿಂದ ಭೂತಗಳು ತುಳುನಾಡಿಗೆ ಇಳಿದು ಬಂದವುಗಳು ಎಂಬ ಪಾರಂಪರಿಕ ಮಾತಿನ ಹಿನ್ನೆಲೆ ಇದೇ ಆಗಿದೆ. ಸಿರಿಗಳ ಉಪಾಸನೆಯಲ್ಲಿ ನಡೆಯುವ ‘ದೆಯ್ಯೆಲೆ ನಲಿೆ’ ಯಲ್ಲಿ ಈ ಅಂಶ ಎದ್ದು ಕಾಣುತ್ತದೆ.

ಮಣ್ಣಿನ ಫಲ ಮತ್ತು ಹೆಣ್ಣಿನ ಫಲ-ಸಿರಿ

 ಅತಿಕಾರೆ ಭತ್ತದ ಸತ್ಯದ ಬೆಳೆಯನ್ನು ಬೆಳೆಯಲು ವಿಶಾಲ ಕಂಬುಲ ಗದ್ದೆಗಳು ಇವೆ. ಈ ಗದ್ದೆಗಳಲ್ಲಿ ಉಳುಮೆ ಮಾಡಿ ಅತಿಕಾರೆ ತಳಿಯನ್ನು ಬಿತ್ತಿ ಬೆಳೆ ತೆಗೆಯುತ್ತಿದ್ದರು. ಅತಿಕಾರೆ ಭತ್ತ, ಕಂಬುಲದ ಗದ್ದೆ ಮತ್ತು ಕಂಬುಲದ ಕೋಣಗಳು ಪಾವಿತ್ರ್ಯ ಹೊಂದಿವೆ. ತುಳುವರ ಮಹಿಷ ರಾಕ್ಷಸನಲ್ಲ. ಕೃಷಿ ಪೋಷಕ. ಕಂಬುಲ ಗದ್ದೆಯ ಉಳುಮೆಯ ದಿನ ಕೆಲವೆಡೆ ಕುಟುಂಬ ಸಿರಿ ಬಳಗದ ‘ದೆಯ್ಯಿಲೆ ನಲಿಕೆ’ ಕಂಡು ಬಂದಿದೆ. ಆದರೆ ಹೆಚ್ಚಾಗಿ ಕೊಯ್ಲು ಮುಗಿದು ಅತಿಕಾರೆ ಭತ್ತ ಮನೆಯೊಳಗೆ ತುಂಬುವ ಮೊದಲು ‘ದೆಯ್ಯಾಲೆ ನಲಿಕೆ’ ಎನ್ನುವ ಉಪಾಸನೆ ನಡೆಯಬೇಕಿತ್ತು. ಕಂಬುಲದ ಬೆಳೆ ತೆಗೆದ ಅತಿಕಾರೆ ಭತ್ತವನ್ನು ಸಿರಿಗಳೆಂದು ಬಗೆದು ಜೋಡು ಹೆಡಿಗೆಯಲ್ಲಿ ಸಂಕೇತಿಸಿ ಮಣ್ಣಿನ ಫಲಕ್ಕೆ ‘ಪೂಪೂಜನ’ ನಡೆಸುತ್ತಾರೆ. ಜೊತೆಗೆ ಹೆಣ್ಣಿನ ಫಲಕ್ಕೂ ಪೂಜೆ ನಡೆಯುತ್ತದೆ.

 ಸಿರಿ ಉಪಾಸನೆ ಮಾಡುವ ಕುಟುಂಬದ ಅವಳಿ ಕನ್ನೆಯರನ್ನು ದೆಯ್ಯೆಲೆ ನಲಿಕೆಯಲ್ಲಿ ನಡೆಮುಡಿ ಹಾಸಿ ಕುಂಭಕ್ಕೆ ನೀರು ತುಂಬಿಸುವ ಕೆಲಸ ಮಾಡಿಸಲಾಗುತ್ತದೆ. ಆ ಕುಂಭವನ್ನು ಮತ್ತೆ ಗುಡಿಯಲ್ಲಿ ಇಡಲಾಗುತ್ತದೆ. ಅದುವೆ ‘ಜೋಡಿ ಸಿರಿ’ಗಳು. ಈ ಕುಂಭದ ಮೇೆ ನಾಗ ಹೆಡೆಯ ಆಕೃತಿಗಳಿರುತ್ತವೆ.

ಸಿರಿ ಪಾಡ್ದನದ ಸಿರಿ ಕುಟುಂಬದ ಬಳಗದಲ್ಲಿ ಆಲಡೆ ದರ್ಶನದಲ್ಲಿ ಕಾಣುವವರು ಐವರು ಸಿರಿಗಳು ಒಬ್ಬ ಕುಮಾರ. ಈ ಕುಮಾರ ಹೆಣ್ಣಿನ ರಕ್ಷಕನಾಗಿ ತಮೆರಿಯಾಗಿ ಕಾಣಬರುತ್ತಾನೆ. ಆದರೆ ಅತಿಕಾರೆ ಭತ್ತದ ಪ್ರಾತಿನಿಧಿಕ ಸಿರಿಗೆ ತಮೆರಿ �

share
ಡಾ. ಇಂದಿರಾ ಹೆಗ್ಗಡೆ
ಡಾ. ಇಂದಿರಾ ಹೆಗ್ಗಡೆ
Next Story
X