Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ದೂರದರ್ಶಕದಲ್ಲಿ ಬಿದಿಗೆ ಚಂದ್ರನಂತಹ...

ದೂರದರ್ಶಕದಲ್ಲಿ ಬಿದಿಗೆ ಚಂದ್ರನಂತಹ ಬೆಳ್ಳಿ ಶುಕ್ರ

ವಿಜ್ಞಾನ ಕೌತುಕ

ಡಾ. ಎ.ಪಿ. ಭಟ್, ಉಡುಪಿಡಾ. ಎ.ಪಿ. ಭಟ್, ಉಡುಪಿ24 Dec 2021 9:34 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ದೂರದರ್ಶಕದಲ್ಲಿ ಬಿದಿಗೆ ಚಂದ್ರನಂತಹ ಬೆಳ್ಳಿ ಶುಕ್ರ

ಶುಕ್ರ ಗ್ರಹ ದೂರದರ್ಶಕದಲ್ಲಿ ಈಗ ಬಲು ಚೆಂದ. ಅದೊಂದು ಗ್ರಹ, ನಕ್ಷತ್ರವಲ್ಲ ಎಂದು ಸ್ಪಷ್ಟವಾಗುವುದೇ ಈಗ. ದೂರದರ್ಶಕದಲ್ಲಿ ಈಗ ಶುಕ್ರಗ್ರಹ (crescent venus) ಬಿದಿಗೆ ಚಂದ್ರನಂತೆ ತೋರುತ್ತದೆ. ಯಾವಾಗಲೂ ಹೀಗೆ ಕಾಣುವುದಿಲ್ಲ. 19 ತಿಂಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಈ ರೀತಿ ಗೋಚರಿಸುತ್ತದೆ. ಇದು ಕೆಲವೇ ದಿನ. ಡಿಸೆಂಬರ್ ಕೊನೆಯ ವಾರದ ವರೆಗೆ ಮಾತ್ರ. ಆನಂತರ ಪುನಃ ಸಂಜೆ ಆಕಾಶದಲ್ಲಿ ನೋಡಬೇಕಾದರೆ 19 ತಿಂಗಳು ಕಾಯಬೇಕು. ಶುಕ್ರ ಗ್ರಹ, ಗುರು ಹಾಗೂ ಶನಿ ಗ್ರಹಗಳಂತೆ ರಾತ್ರಿ ಇಡೀ ಕಾಣುವುದಿಲ್ಲ. ಸುಮಾರು 8 ತಿಂಗಳು ಸಂಜೆಯ ಆಕಾಶದಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆ. ಆಗ ದಿಗಂತದಿಂದ ಪ್ರತಿದಿನ ಮೇಲೇರುತ್ತಾ ಹೆಚ್ಚೆಂದರೆ 47 ಡಿಗ್ರಿ ಎತ್ತರದಲ್ಲಿ ಕಂಡು ನಂತರ ಪ್ರತಿದಿನ ಅವಸರ ಅವಸರದಲ್ಲಿ ಕೆಳಗಿಳಿದು ಮರೆಯಾಗುವುದು. ಅದಕ್ಕೆ ಶುಕ್ರ ಅಸ್ತ ಎನ್ನುತ್ತೇವೆ. ಆಗ ಈ ಗ್ರಹ ಭೂಮಿಗೆ ಅತೀ ಸಮೀಪ ಸುಮಾರು 4.1 ಕೋಟಿ ಕಿಮೀ (ಇನ್ಫೀರಿಯರ್ ಕಂಜ್ಞಂಕ್ಷನ್). ಆನಂತರ 8 ತಿಂಗಳು ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಸೂರ್ಯೋದಯಕ್ಕೆ ಮೊದಲು ಕಾಣುತ್ತದೆ. ಪುನ: ಶುಕ್ರ ಅಸ್ತ ಆಗ ಭೂಮಿಯಿಂದ 26 ಕೋಟಿ ಕಿ.ಮೀ. ದೂರದಲ್ಲಿದ್ದು ಚಿಕ್ಕದಾಗಿ ಕಾಣುತ್ತದೆ. (ಸುಪೀರಿಯರ್ ಕಂಜ್ಞಂಕ್ಷನ್).

ಜನವರಿ 9, 2022ಕ್ಕೆ ಇನ್ಫೀರಿಯರ್ ಕಂಜ್ಞಂಕ್ಷನ್. 2021 ಮಾರ್ಚ್ 26ರಂದು ಸುಪೀರಿಯರ್ ಕಂಜ್ಞಂಕ್ಷನ್ ಆಗಿದೆ.

ದೂರದರ್ಶಕದಲ್ಲಿ ಗ್ರಹಗಳು ನೋಡಲು ಬಲು ಚಂದ. ಗುರುಗ್ರಹದ ನಾಲ್ಕು ಚಂದ್ರರು ಗೆಲೀಲಿಯನ್ ಮೂನ್ಸ್, ಶನಿಗ್ರಹದ ಬಳೆ, ಚಂದ್ರನ ಗುಳಿಗಳು, ಪರ್ವತಗಳು ಹಾಗೂ ಶುಕ್ರ ಗ್ರಹದ (phases of Venus) ಕೃಷ್ಣ ಪಕ್ಷದ ಚಂದ್ರನಂತೆ ಕ್ಷೀಣಿಸುತ್ತಾ, ಗಾತ್ರದಲ್ಲಿ ದೊಡ್ಡದಾಗುತ್ತಾ ಕಾಣುವುದು ನೋಡಲು ಸೋಜಿಗ. ಸೌರವ್ಯೆಹದಲ್ಲೇ ಶುಕ್ರ ಗ್ರಹ ವಿಭಿನ್ನ. ಉಳಿದೆಲ್ಲವೂ (ಯುರೇನಸ್ ಬಿಟ್ಟು) ತಮ್ಮ ಅಕ್ಷದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಪ್ರತೀ ದಿನ ತಿರುಗುತ್ತಿದ್ದರೆ ಶುಕ್ರಗ್ರಹ ಉಲ್ಟಾ. ಪೂರ್ವದಿಂದ ಪಶ್ಚಿಮಕ್ಕೆ. ಹಾಗಾಗಿ ಶುಕ್ರನಲ್ಲಿ ಸೂರ್ಯೋದಯ ಪಶ್ಚಿಮದಲ್ಲಿ, ಪೂರ್ವ ದಲ್ಲಲ್ಲ. ಯುರೇನಸ್ ಸುತ್ತುವುದು ಉತ್ತರದಿಂದ ದಕ್ಷಿಣಕ್ಕೆ. ಬುಧ ಗ್ರಹ ಸೂರ್ಯನಿಗೆ ಅತೀ ಸಮೀಪವಿದ್ದರೂ(6 ಕೋಟಿ ಕಿ.ಮೀ.) ಸೂರ್ಯನಿಂದ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿರುವ ಶುಕ್ರನಲ್ಲಿ ಅತೀ ಹೆಚ್ಚು ಉಷ್ಣತೆ. (ಸರಾಸರಿ 464 ಡಿಗ್ರಿ ಸೆಲ್ಸಿಯಸ್) ಶುಕ್ರ, ಭೂ ಗ್ರಹದ ಅವಳಿಯೋ ಎನ್ನುವಂತೆ ಗಾತ್ರದಲ್ಲಿದ್ದರೂ, ಸೂರ್ಯನಿಗೆ ಒಂದು ಸುತ್ತು ಬರಲು 225 ದಿನಗಳು ಬೇಕಾದರೆ ತನ್ನ ಅಕ್ಷದಲ್ಲಿ ಸುತ್ತಲು 243 ದಿನಗಳು ಬೇಕು. ಶುಕ್ರನ ಒಂದು ವರ್ಷ ಅದರ ಒಂದು ದಿನಕ್ಕಿಂತ ಚಿಕ್ಕದು. ವಿಚಿತ್ರ ವಾತಾವರಣ ಶುಕ್ರನದು. ದಟ್ಟ ಇಂಗಾಲದ ಡೈಆಕ್ಸೈಡ್‌ನ ಮೋಡ ಕವಚ (ಶೇ.95) ಅತೀ ಹೆಚ್ಚು ವಾತಾವರಣದ ಒತ್ತಡ. ಭೂ ವಾತಾವರಣ ಒತ್ತಡಕ್ಕಿಂತ 90ಪಟ್ಟು ಹೆಚ್ಚು.

ಈಗ ಸಂಜೆ ಆಕಾಶದಲ್ಲಿ ದೂರದರ್ಶಕದಿಂದ ಗ್ರಹಗಳನ್ನು ನೋಡಲು ಸದವಕಾಶ. ಆಕಾಶ ವೀಕ್ಷಣೆಗೆ ಅತ್ಯುತ್ತಮ ಸಮಯ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಡಾ. ಎ.ಪಿ. ಭಟ್, ಉಡುಪಿ
ಡಾ. ಎ.ಪಿ. ಭಟ್, ಉಡುಪಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X