ಹಾಸನ: ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕಗಳೊಂದಿಗೆ ಮಿಂಚಿದ ಹಿಜಾಬ್ ಧಾರಿ ವಿದ್ಯಾರ್ಥಿನಿಯರು

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ವಿಜ್ಞಾನ (ಸ್ವಾಯತ್ತ) ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದನೇ ಪದವಿ ಪ್ರದಾನ ಸಮಾರಂಭದಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಚಿನ್ನದ ಪದಕಗಳೊಂದಿಗೆ ಪದವಿ ಸ್ವೀಕರಿಸಿ ಮಿಂಚಿದ್ದಾರೆ.
ಇಂದು ನಡೆದ ಒಂದನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪದವಿ ಹಾಗೂ ಗೋಲ್ಡ್ ಮೆಡಲ್ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಸ್ರೋ ವಿಶ್ರಾಂತ ಅಧ್ಯಕ್ಷರಾದ ಡಾ.ಕಿರಣ್ ಕುಮಾರ್ ಎ.ಎಸ್ ಅವರು ಪದವಿ ಪ್ರದಾನ ಮಾಡಿದ್ದಾರೆ.
ವಿಜ್ಞಾನ-ತಂತ್ರಜ್ಞಾನ ಮುಂದುವರೆಯುತ್ತಿದ್ದು, ಅದನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕೆ ಹೊರತು ಅದರ ದುರುಪಯೋಗವಾಗಬಾರದು ಎಂದು ಇಸ್ರೋ ಬೆಂಗಳೂರು ವಿಶ್ರಾಂತ ಅಧ್ಯಕ್ಷರು ಡಾ. ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು. ಅತ್ಯುನ್ನತ ಶ್ರೇಣಿಯೊಂದಿಗೆ ಕೋರ್ಸುವಾರು ಹಾಗೂ ವಿಷಯವಾರು ಗರಿಷ್ಠ ಅಂಕ ಪಡೆದ ಸುಮಾರು 25 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕದೊಂದಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರಕಾರಿ ವಿಜ್ಞಾನ (ಸ್ನಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೋ. ಎಸ್.ಹೆಚ್. ಗಂಗೇಗೌಡ, ಹೆಚ್.ವಿ. ಲಕ್ಷ್ಮೀನಾರಾಯಣ್, ಕಾಲೇಜಿನ ಪರೀಕ್ಷಾಂಗ ನಿಯಂತ್ರಕರಾದ ಡಾ. ಕೆ. ಹರ್ಷೇಂದ್ರ, ಶೈಕ್ಷಣಿಕ ಡೀನ್ ಡಾ. ಎಂ. ಅಬ್ದೂಲ್ ರೆಹಿಮಾನ್, ಕನ್ನಡ ವಿಭಾಗದ ಮುಖ್ಯಸ್ಥರು ಸಿ.ಎಸ್. ಮೋಹನ್, ತಾರನಾಥ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸೌದಿ ಕಾರ್ಯಕರ್ತೆಯ ಐಫೋನ್‌ನಲ್ಲಿದ್ದ ʼಪೆಗಾಸಸ್ʼನ ನಿಗೂಢ ಜಾಲವನ್ನು ಬಯಲುಗೊಳಿಸಿದ್ದು ಹೇಗೆ?








