ಉಕ್ರೇನ್ ಸೇನೆ ಶಸ್ತ್ರ ಕೆಳಗಿಟ್ಟರೆ ಮಾತ್ರ ಮಾತುಕತೆಗೆ ಸಿದ್ಧ: ರಶ್ಯಾ

Photo: PTI
ಹೊಸದಿಲ್ಲಿ: ಉಕ್ರೇನ್ ದೇಶದ ಮಿಲಿಟರಿ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರೆ ಮಾತ್ರ ರಶ್ಯಾ ಆ ದೇಶದ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ರಶ್ಯಾದ ವಿದೇಶಾಂಗ ಸಚಿವ ಸರ್ಗೇಯಿ ಲವ್ರೋವ್ ಶುಕ್ರವಾರ ಹೇಳಿದ್ದಾರೆ. ಉಕ್ರೇನ್ ಅನ್ನು ನಿಯೋ-ನಾಝಿಗಳು ಆಡಳಿತ ನಡೆಸುವುದೂ ರಶ್ಯಾಗೆ ಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಉಕ್ರೇನ್ನಲ್ಲಿನ ರಶ್ಯಾ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕೈಗೊಳ್ಳುವಾಗ ತಾನು ಭಾರತದ ಬೆಂಬಲ ನಿರೀಕ್ಷಿಸುವುದಾಗಿ ರಶ್ಯಾ ಇಂದು ಹೇಳಿದೆ.
ರಶ್ಯಾದ ಮಿಲಿಟರಿ ಕಾರ್ಯಾಚರಣೆ ಸತತ ಎರಡನೇ ದಿನ ಉಕ್ರೇನ್ನಲ್ಲಿ ಮುಂದುವರಿದಿದೆ. ರಾಜಧಾನಿ ಕ್ಯೀವ್ನ ವಾಯುವ್ಯ ಪ್ರದೇಶದಲ್ಲಿ ಉಕ್ರೇನ್ ಸೇನೆ ರಶ್ಯಾ ಸೇನೆ ಜತೆ ಕಾದಾಟ ನಡೆಸುತ್ತಿದೆ ಎಂದು ಉಕ್ರೇನ್ ಸೇನೆ ತನ್ನ ಫೇಸ್ಬುಕ್ ಪುಟದಲ್ಲಿ ಹೇಳಿಕೊಂಡಿದೆ.
ರಶ್ಯಾ ಸೇನಾ ಪಡೆಗಳ ಚಲನವಲಗಳ ಬಗ್ಗೆ ಮಾಹಿತಿ ನೀಡುವಂತೆ ಉಕ್ರೇನ್ ರಕ್ಷಣಾ ಸಚಿವಾಲಯ ತನ್ನ ನಾಗರಿಕರಿಗೆ ಮನವಿ ಮಾಡಿದೆ. ಮೊಲೊಟೊವ್ ಕಾಕ್ಟೇಲ್ಗಳನ್ನು ಮಾಡಿ ಹಾಗೂ ಶತ್ರುವನ್ನು ನಾಶಪಡಿಸಿ ಎಂದು ಸಚಿವಾಲಯ ಕರೆ ನೀಡಿದೆ.
ಇದನ್ನೂ ಓದಿ: ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣ: ನಟ ಚೇತನ್ ಗೆ ಜಾಮೀನು







