ಸ್ಪೈ ಕ್ಯಾಮೆರಾ ಬಳಸಿ ಅಶ್ಲೀಲ ಚಿತ್ರ ಸೆರೆ: ಆರೋಪಿಯ ಬಂಧನ

ಬೆಂಗಳೂರು, ಆ.20: ಸ್ಪೈ ಕ್ಯಾಮೆರಾ (spy camera) ಬಳಸಿ ಮಹಿಳೆಯರ ನಗ್ನಚಿತ್ರ ಸೆರೆ ಹಿಡಿದು ಬೆದರಿಕೆವೊಡ್ಡುತ್ತಿದ್ದ ಆರೋಪದಡಿ ಓರ್ವನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮಹೇಶ ಬಂಧಿತ ಆರೋಪಿಯಾಗಿದ್ದು, ಈತ ಯುವತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ನಿನ್ನ ನಗ್ನ ವಿಡಿಯೊ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಎನ್ನಲಾಗಿದೆ.
ಈ ಸಂಬಂಧ ದಾಖಲಾದ ದೂರಿನನ್ವಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿಯೊಂದಿಗೆ BJP ಶಾಸಕ: ಫೋಟೊ ವೈರಲ್
Next Story





