2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

ಸಾಂದರ್ಭಿಕ ಚಿತ್ರ -(PTI)
ಬೆಂಗಳೂರು: 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ (Best Teacher Award) 20 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತ್ತು 11 ಮಂದಿ ಪ್ರೌಢಶಾಲಾ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ಹತ್ತು ಸಾವಿರ ರೂಗಳನ್ನು ಒಳಗೊಂಡಿದೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಪ್ರಶಸ್ತಿಯ ವೆಚ್ಚವನ್ನು ಭರಿಸಲಾಗುವುದು ಎಂದು ರಾಜ್ಯ ಸರಕಾರ ಪ್ರಕಟನೆೆಯಲ್ಲಿ ತಿಳಿಸಿದೆ.
ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದನ್ನೂ ಓದಿ>>> ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಬಸವಶ್ರೀ ಪ್ರಶಸ್ತಿ ಹಿಂದಿರುಗಿಸಿದ ಪತ್ರಕರ್ತ ಪಿ. ಸಾಯಿನಾಥ್
ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಇಂತಿದೆ...
► ಪ್ರಾಥಮಿಕ ಶಾಲಾ ವಿಭಾಗ
-ಮಂಜುನಾಥ ಶಂಕರಪ್ಪ ಮುಂಗೂಣಿ – ಧಾರವಾಡ
-ಅಮಿತಾನಂದ ಹೆಗ್ಡೆ – ದಕ್ಷಿಣ ಕನ್ನಡ
-ಹೆಚ್.ಎಲ್.ಚಂದ್ರಶೇಖರ – ಚಿಕ್ಕಬಳ್ಳಾಪುರ
-ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ – ಚಿಕ್ಕೋಡಿ
-ಶಿವಾನಂಪ್ಪ ಬಿ. – ಶಿವಮೊಗ್ಗ
-ಹುಸೇನಸಾಬ್ – ಕಲಬುರಗಿ
-ಕೆ.ವಿ.ಸುದರ್ಶನ – ಬೆಂಗಳೂರು ಉತ್ತರ
-ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಹಾವೇರಿ
-ಸಂಜೀವ ದೇವಾಡಿಗ – ಉಡುಪಿ
-ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ – ಬಾಗಲಕೋಟೆ
-ಚಂದ್ರಕಲಾ – ಯಾದಗಿರಿ
-ನಿರಂಜನ ಪಿ.ಜೆ – ವಿಜಯನಗರ
-ಸುಶೀಲಬಾಯಿ – ಬೆಳಗಾವಿ
-ವಿದ್ಯಾ ಕಂಪಾಪೂರ ಮಠ – ಕೊಪ್ಪಳ
-ಬಸವರಾಜ ಜಾಡರ – ರಾಯಚೂರು
-ಗಂಗಾಧರಪ್ಪ ಬಿ.ಆರ್. – ಚಿಕ್ಕಮಗಳೂರು
-ಚಂದ್ರಶೇಖರ ರೆಡ್ಡಿ – ಮಧುಗಿರಿ ಶೈಕ್ಷಣಿಕ ಜಿಲ್ಲೆ
-ಸುಧಾಕರ ಗಣಪತಿ – ಶಿರಸಿ
-ಈಶ್ವರಪ್ಪ ಅಂದಾನಪ್ಪ ರೇವಡಿ – ಗದಗ
-ಕವಿತಾ ಈ. – ಚಿತ್ರದುರ್ಗ
► ಪ್ರೌಢಶಾಲಾ ವಿಭಾಗ
-ಮಹೇಶ್.ಕೆ.ಎನ್-ಚಿತ್ರದುರ್ಗ
-ಇಬ್ರಾಹಿಂ- ಕೊಡಗು
-ರಘು-ಶಿವಮೊಗ್ಗ
-ಭೀಮಪ್ಪ- ರಾಯಚೂರು
-ರಾಧಾಕೃಷ್ಣ- ದಕ್ಷಿಣ ಕನ್ನಡ
-ನಾರಾಯಣ ಪರಮೇಶ್ವರ- ಶಿರಸಿ
-ಅರುಣಾ ಜೂಡಿ- ಕೊಪ್ಪಳ
-ಸುನೀಲ ಪರೀಟ-ಬೆಳಗಾವಿ
-ಬಾಲಸುಬ್ರಹ್ಮಣ್ಯ- ಮಂಡ್ಯ
-ಡಾ.ಚೇತನ್ ಬಣಕಾರ್- ವಿಜಯನಗರ
-ಕೀರ್ತಿ ಬಸಪ್ಪ- ಚಿಕ್ಕಬಳ್ಳಾಪುರ







